September 2024

      ಕಂದ್ರಪ್ಪಾಡಿ ಶಾಲೆಗೆ ಕಳೆದ ವರ್ಷ ನೂರು ವರ್ಷ. ದೊಡ್ಡ ಫಂಕ್ಷನ್ ಇತ್ತು. ಗೌಜಿಯೋ ಗೌಜಿ. ಈಗ ನೂರ ಒಂದನೇ ವರ್ಷದಲ್ಲಿ ಶಾಲೆ ನಡೆಯುತ್ತಾ ಇದೆ. ಆದರೆ ಶತಮಾನೋತ್ಸವದ ಸವಿ ನೆನಪಿಗಾಗಿ ಪಬ್ಲಿಷ್ ಆಗ ಬೇಕಾಗಿದ್ದ ಸ್ಮರಣ ಸಂಚಿಕೆ ಮಾತ್ರ ಇನ್ನೂ ಹೊರಗೆ ಬಂದಿಲ್ಲ. ಸ್ಮರಣ ಸಂಚಿಕೆಯನ್ನು ಜನ ಕಾಯುತ್ತಾ ಇದ್ದಾರೆ ಮಾರಾಯ್ರೆ. ಪ್ರಿಂಟ್ ಮಾಡ್ಲಿಕ್ಕೆ ಎಂಥ ಕಾಕಜಿ ಇಲ್ವಾ?

ಹಾಗೆಂದು ಕಂದ್ರಪ್ಪಾಡಿ ಶಾಲೆಯ ಬಗ್ಗೆ ಮತ್ತು ಶತಮಾನೋತ್ಸವ ಸಂಭ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಈ ಸಂಚಿಕೆ ಕೊಡಬೇಕಿತ್ತು.  ಶಾಲೆಯ ಇತಿಹಾಸವನ್ನು  ನೆನಪಿನ ಕಪಾಟಿನಲ್ಲಿ ಇಡಲು ಈ ಸಂಚಿಕೆ ಕಂದ್ರಪ್ಪಾಡಿ ಜನರಿಗೆ ಬೇಕೆ ಬೇಕಿತ್ತು. ಶಾಲೆಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮತ್ತು ಇತಿಹಾಸವನ್ನು ಇತಿಹಾಸವಾಗಿಸಲು ಈ ಸ್ಮರಣ ಸಂಚಿಕೆ ಪಬ್ಲಿಷ್ ಆಗಲೇ ಬೇಕಿತ್ತು. ಕಂದ್ರಪ್ಪಾಡಿ ಶಾಲೆಯ ಸ್ಮರಣ ಸಂಚಿಕೆ ಇತಿಹಾಸ ಆಗಲೇ ಬೇಕೇಂದೇ ಅದರ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. 
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಆದರೆ ಎಲ್ಲಿದೆ ಸ್ಮರಣ ಸಂಚಿಕೆ? ಹಾಗೆಂದು ಸ್ಮರಣ ಸಂಚಿಕೆಗೆ ಲೇಖನಗಳನ್ನು ಬರೆಸಲಾಗಿತ್ತು, ಕವನಗಳನ್ನು, ಕತೆಗಳನ್ನು ಬರೆಸಲಾಗಿತ್ತು, ಶಾಲೆಯ ಶಿಲ್ಪಿಗಳ ಬಗ್ಗೆ, ದಾನಿಗಳ ಬಗ್ಗೆ, ಒಂದನೇ ಕ್ಲಾಸಿನಲ್ಲಿ ಹೊಕ್ಕು ಏಳನೇ ಕ್ಲಾಸಿಂದ ಹೊರಗೆ ಬಂದು ದೊಡ್ಡ ದೊಡ್ಡ ಇತಿಹಾಸ ನಿರ್ಮಾಣ ಮಾಡಿದ ಹಳೇ ವಿದ್ಯಾರ್ಥಿಗಳ ಪರಿಚಯ ಹೀಗೆ ಎಲ್ಲವನ್ನೂ ಸ್ಮರಣ ಸಂಚಿಕೆಗಾಗಿ ರೆಡಿ ಮಾಡಲಾಗಿತ್ತು.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಜಾ‌ಹೀರಾತುದಾರರು, ಶುಭಾಶಯ ಕೋರಿದವರು ಹೀಗೆ ಎಲ್ಲರೂ ಸ್ಮರಣ ಸಂಚಿಕೆಗೆ ದುಡ್ಡು ಕೊಟ್ಟು ಇನಿ ಬರ್ಪುಂಡು, ಎಲ್ಲೆ ಬರ್ಪುಂಡು, ಇತ್ತೆ ಬತ್ತ್ಂಡ್ ಎಂದು ಶಬರಿ ರಾಮನನ್ನು ಕಾದ ಹಾಗೆ ಕಾದು ಕಾದು ಕಾದು ಹೋಗಿದ್ದಾರೆ.
  ಆದರೆ ಇನಿ ಮುಟ್ಟ ಸ್ಮರಣ ಸಂಚಿಕೆಯ ಒಂದು ತುಂಡು ಬಟರ್ ಶೀಟ್ ಕೂಡ ಹೊರಗೆ ಬಂದಿಲ್ಲ. ಸ್ಮರಣ ಸಂಚಿಕೆ ಪ್ರಿಂಟಿಗೆ ಬಿಡ್ಲಿಕ್ಕೆ ದುಡ್ಡಿಲ್ವಾ ಹೇಗೆ? ಸಂಪಾದ-ಕರು  ಯಾರು? ಅವರು ಎಲ್ಲಿದ್ದಾರೆ?ಪ್ರೆಸ್ ಸಿಕ್ಕಿಲ್ವಾ? ಪ್ರಿಂಟಿಗೆ ಕಾಕಜಿ ಇಲ್ವಾ? ಎಂತ ಕತೆ ಅಂತಲೇ ಗೊತ್ತಾಗ್ತಾ ಇಲ್ಲ. ಒಂದು ಸಂಸ್ಥೆಯ ಸವಿ ನೆನಪಿನ‌ ಸ್ಮರಣ ಸಂಚಿಕೆ ಯಾವತ್ತೂ ಮರಣ ಸಂಚಿಕೆ ಆಗಬಾರದು. ಹಾಗಾದರೆ ನಮ್ಮ ಇತಿಹಾಸವನ್ನು ನಾವೇ ಚಿವುಟಿದಂತೆ.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................

...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    ಸಂಪಾಜೆಯಲ್ಲಿ ಎರಡು ಬಗೆ ಅಂತ ನಾನು ಮೊದಲೇ ನಿಮಗೆ ಹೇಳಿದ್ದೇನೆ. ಕೊಡಗು ಸಂಪಾಜೆ ಮತ್ತು ದಕ್ಷಿಣ ಕನ್ನಡ ಸಂಪಾಜೆ. ಈ ದಕ್ಷಿಣ ಕನ್ನಡ ಸಂಪಾಜೆಯ ರಾಜಧಾನಿ ಕಲ್ಲುಗುಂಡಿ. ಇಲ್ಲಿ ಸುಳ್ಯ ಪೋಲಿಸರು ಒಂದು ಚೆಕ್ ಪೋಸ್ಟ್ ಎಲ್ಲಾ ಕಟ್ಟಿಕೊಂಡಿದ್ದಾರೆ. ಚೆಕ್ ಪೋಸ್ಟ್ ಎದುರು ಅಂಚಿಂಚಿ ಹೋಗುವಾಗ ಕಳ್ಳರಿಗೆ ಅದೇನೋ ಒಂದು ಸಣ್ಣ ಢವ ಢವ. ಹಾಗೆಂದು ಕಲ್ಲುಗುಂಡಿ ಚೆಕ್ ಪೋಸ್ಟ್ ಪೋಲಿಸರು ಪೊಕ್ಕಡೆ ಪೊಕ್ಕಡೆ ಹಾರಿ ಬಿದ್ದು ರಕ್ಕಸರ ಹಾಗೆಲ್ಲ ವರ್ತಿಸಲ್ಲ. ಏನಾದರೂ ಅವರಷ್ಟಕ್ಕೆ ಅವರು ಬೆಕ್ಕಿನ ಬಿಡಾರ ಬೇತೆನೆ ಅಂತ ಇರುವವರು. ಒಳ್ಳೆಯವರು, ಸಾಧು ಸಜ್ಜನರು.
  ಹಾಗೆಂದು ಈಗೀಗ ಕಲ್ಲುಗುಂಡಿ ಸ್ವಲ್ಪ ಪಾಯಿಸನ್ ಏರ್ಯ ಆಗಿಬಿಟ್ಟಿದೆ. ಘಟ್ಟದಿಂದ ಇಳಿದ ಕಳ್ಳರು, ಊರಿನ ಕಳ್ಳಕಾಕರು ಮತ್ತು ಸಂಚಾರಿ ಕಳ್ಳರು ಹೀಗೆ ಎಲ್ಲರೂ ಸೇರಿ ಕಲ್ಲುಗುಂಡಿ ಹೆಸರಿಗೆ ಮಜ್ಜಿ ಬಳಿಯುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳ ರನ್ ರೇಟ್ ಜಾಸ್ತಿಯಾಗುತ್ತಿದೆ. ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಲು ಕಲ್ಲುಗುಂಡಿ ಪೋಲಿಸರಿಗೆ ಆಗುತ್ತಿಲ್ಲ. ಸೊ.. ಕಲ್ಲುಗುಂಡಿಯಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಮಹಾ ರಾಜಾರೋಷವಾಗಿ ಹೋಟೇಲೊಂದರಲ್ಲಿ ಕ್ವಾಟ್ರು ಸೇಲ್ ಮಾಡಲಾಗುತ್ತಿದೆ. ಕ್ಯಾರೇ ಇಲ್ಲ. ಬೇಳಿಗ್ಗೆ ಎದ್ದು ಬರೋದೇ ಹೋಟೆಲಿಗೆ. ತಿನ್ಲಿಕ್ಕೆ ಇಡ್ಲಿ ವಡಾ ಸಾಂಬಾರ್, ಸಜ್ಜಿಗೆ ಬಜಿಲ್, ಪುಂಡಿಗಸಿ, ಕಲ್ತಪ್ಪೊ ಮತ್ತು ಕುಡಿಲಿಕ್ಕೆ ಕ್ವಾಟ್ರು.

ಅಲ್ಲಿ ದಕ್ಷಿಣ ಕನ್ನಡ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯ ಹೃದಯ ಭಾಗದಲ್ಲಿರುವ ವೈನ್ ಶಾಪ್ ಬದಿಯ ಹೋಟೆಲಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಕ್ವಾಟ್ರು ಸೇಲ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ವೈನ್ ಶಾಪ್ ಏನಿದ್ದರೂ ಬೆಳಿಗ್ಗೆ ಹತ್ತು ಗಂಟೆಗೆ ಓಪನ್ ಆಗುವುದು ಮಾಮೂಲು ಪದ್ಧತಿ. ಅದಕ್ಕೆ ಅದರದ್ದೇ ಆದ ರೂಲ್ಸ್ ಗಳಿವೆ. ಹಾಗೆ ವೈನ್ ಶಾಪ್ ಓಪನ್ ಆಗುವ ಮೊದಲೇ ಅದರ ವೆರಿ next ಒಂದು ನಾನ್ ವೆಜ್ ಹೋಟೇಲಿದೆ. ಅವರು ಬೆಳಿಗ್ಗೆ ಆರು ಗಂಟೆಗೆ ಭಕ್ತಿ ಗೀತೆಗಳ ಮೂಲಕ ಶುರುಮಾಡಿ ಹತ್ತು ಗಂಟೆಗೆ ಚಿತ್ರ ಗೀತೆಯ ತನಕ ಹೋಟೆಲಿನಲ್ಲಿ ಕ್ವಾಟ್ರು ಮಾರುತ್ತಿದ್ದಾರೆ ಎಂದು ತಿಳಿದುಬಂದಿದೆ. ದಿನಗೂಲಿಗಳು, ರಬ್ಬರ್ ಕೆಲಸಗಾರರು, ಟೈಟ್ ಮಾಸ್ಟರ್ ಗಳು, ಕುಡಿಯದಿದ್ದರೆ ಈಗ ಬಿದ್ದು ಸಾಯುವವರು, ಕೈಕಾಲು ಗಡಗಡ ಆಗುವವರು, ಮಂಡೆ ಬೆಚ್ಚದವರು, ತಗಡ್ ಬೆಚ್ಚದವರು, ಶೀತ ಆದವರು, ಮೈಕೈ ಬೇನೆಯವರು ಹೀಗೆ ಕ್ವಾಟ್ರಿನ ಅರ್ಜೆಂಟಿಗೆ ಬಿದ್ದವರು ಬೆಳಿಗ್ಗೆ ಬೇಗ ಹೋಟೆಲಿಗೆ ಬಂದು ಕ್ವಾಟ್ರು ಕೊಂಡೋಗುತ್ತಿದ್ದಾರೆ. ಈ ಸೈಜಿನ ಗಿರಾಕಿಗಳ ಕಾರಣದಿಂದಾಗಿ ಹೋಟೆಲಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಕಡೇ ಪಕ್ಷ ಇನ್ನೂರು ಕ್ವಾಟ್ರು ಆದರೂ ಸೇಲ್ ಆಗುತ್ತಿದೆ. ಒಂದು ಕ್ವಾಟ್ರುನಲ್ಲಿ ಕನಿಷ್ಠ ಇಪ್ಪತ್ತರಿಂದ ಮೂವತ್ತು ರೂಪಾಯಿ ತನಕ ಮಾರ್ಜಿನ್ ಇಡಲಾಗುತ್ತಿದೆ. ಲೆಕ್ಕ ಹಾಕಿ ಇನ್ನೂರು ಗುಣಿಸು ಮೂವತ್ತು.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಚೆಕ್ ಪೋಸ್ಟ್ ಪೋಲಿಸರು ಬೆಳಿಗ್ಗೆ ಏಳುವ ಮೊದಲೇ ನಡೆಯುವ ಈ ಕ್ವಾಟ್ರು ಸೇಲ್ ಬಗ್ಗೆ ಪೋಲಿಸರಿಗೂ ಮಾಹಿತಿ ಹೋಗಿ ಅವರೂ ಎಲಾರಾಮ್  ಇಟ್ಟು ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜದೆ, ಸ್ನಾನ ಮಾಡದೆ ಹೋಟೆಲಿಗೆ ತುಂಬಾ ಸಲ ರೈಡು ಬಿದ್ದಿದ್ದರು. ರೈಡು ಬಿದ್ದು ಹೋಟೆಲ್ ಧನಿಯನ್ನು ಚೆಕ್ ಪೋಸ್ಟಿಗೆ ಕರಕ್ಕೊಂಡು ಹೋಗಿ ಸಮ್ಮನ ಕೂಡ ಮಾಡಿದ್ದರು. ಆದರೆ ಅವನಿಗೆ ಬುದ್ಧಿ ಬರಲೇ ಇಲ್ಲ. ಓ ಮೊನ್ನೆ ಕೂಡ ಚೆಕ್ ಪೋಸ್ಟ್ ಪೋಲಿಸರು ಬಂದಿದ್ದರು. ಮಾರ್ಗದಲ್ಲಿ ನಿಂತು ವೈನಿನವನಿಗೂ, ಹೋಟೆಲಿನವನಿಗೂ ನಾಯಿಗೆ ಬಯ್ದ ಹಾಗೆ ಬಯ್ದಿದ್ದರು. ಆದರೂ ಸುಧಾರಣೆ ಇಲ್ಲ. ನಾಚಿಕೆ,ಮಾನ ಮರ್ಯಾದೆ, ಲಜ್ಜೆ ಪುಲೆಜ್ಜಿ ಯಾವುದೂ ಇಲ್ಲ. ಯಾಕೆಂದರೆ  ಬೆಳಿಗ್ಗೆ ಆರರಿಂದ ಹತ್ತರ ಒಳಗೆ ಇನ್ನೂರು ಗುಣಿಸು ಮೂವತ್ತು. ಲೆಕ್ಕ ಹಾಕಿ. ಕಲ್ಲುಗುಂಡಿಗೆ ಸಾಕು.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಹಾಗೆಂದು ಈ ಹೋಟೆಲಿನ ಕತೆಯೇ ವಿಚಿತ್ರವಾಗಿದೆ. ಇದರ ಒರಿಜಿನಲ್ ಪಪ್ಪ  ಯಾರೂಂತ ಯಾರಿಗೂ ಗೊತ್ತಿಜ್ಜಿ. ಆದರೆ ಅದ್ಯಾರೋ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಒಬ್ಬ ಇದ್ದರೆ ನಂತರ ಮತ್ತೊಬ್ಬ. ವೈನ್ ಶಾಪ್ ಹತ್ತಿರ ಇದ್ದರೂ ಈ ಹೋಟೆಲ್ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ವೈನ್ ಶಾಪ್ ಅವತಾರದಲ್ಲಿಯೂ ನಂತರ ತಡ ರಾತ್ರಿ ತನಕ ಬಾರ್ & ರೆಸ್ಟೋರೆಂಟ್ ಅವತಾರದಲ್ಲಿಯೂ ಕಾರ್ಯಾಚರಿಸುತ್ತಿದೆ. ಈ ಹೋಟೆಲ್ ಯಾರಿಗೆ ಸೇಲ್ ಆದರೂ ಬೆಳಗಿನ ಪ್ರೋಗ್ರಾಂನ ಹಕ್ಕುಗಳನ್ನು ಒಬ್ಬ ಕಾಯ್ದಿರಿಸಿಟ್ಟುಕೊಳ್ಳುತ್ತಾನೆ ಎಂದು ತಿಳಿದುಬಂದಿದೆ. ಚೆಕ್ ಪೋಸ್ಟ್ ಪೋಲಿಸರು ಇನ್ನೊಮ್ಮೆ ಅಲಾರಂ ಇಡ ಬೇಕಷ್ಟೇ.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................

...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ ದಿನಾಂಕ 20.9.2924 ರಂದು ನಡೆಯಿತು. ಈ ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ ಹಾಗೂ ಕೋಶಾಧಿಕಾರಿಯಾಗಿ ಕಾರ್ತಿಕ್ ಪೈಕ ಇವರನ್ನು ಮತ್ತು ವಿವಿಧ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.. ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಜಯಪ್ರಕಾಶ್ ಬಾಕಿಲ ವಹಿಸಿದ್ದರು, ಕಾರ್ಯದರ್ಶಿ ದಿಗಂತ್ ಕಡ್ತಲ್ಕಜೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಾದ ಸತೀಶ್ ಮೂಕಮಲೆ ಹಾಗೂ ವಿಜೇಶ್ ಹಿರಿಯಡ್ಕ ಹಾಗೂ ಪದಾಧಿಕಾರಿಗಳು ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.

...................................................
ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    ಬಿಳಿನೆಲೆ ಎಂಬ ಊರಿನಲ್ಲಿ ಚಡ್ಡಿ ಜಾರಿಸುವ ಕೆಟ್ಟ ಚಟ ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ  ಕೂಡ ಯಾರೋ ಬೆಟ್ ಸೋತು ಸಾರ್ವಜನಿಕ ಸ್ಥಳಗಳಲ್ಲಿ ಚಡ್ಡಿ ಜಾರಿಸಿದ ನ್ಯೂಸ್ ಬರೆದಿದ್ದೆವು. ಈಗ ಮತ್ತೇ ಪುನಃ ಯಾರದ್ದೊ ಚಡ್ಡಿ ಕತೆ. ಬರೆಯದೇ ಅವರಿಗೆ ಬುದ್ಧಿ ಬರಲ್ಲ.

ಇದು ಬಿಳಿನೆಲೆ. ಇಲ್ಲಿನ ಜನತಾ ಕಾಲೋನಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಅದರಲ್ಲಿ ಒಂದು ಮನೆ ಉರ್ಬುಲಿ ಚಂದ್ರುವಿಗೆ ಸೇರಿದ್ದು. ಈ ಜನ ಸ್ವಲ್ಪ ಡಿಫರೆಂಟ್ ಜನ. ಈ ಜನದ ಮನೆಗೆ ಆಗಮಿಸಿದ ಅದ್ಯಾರೋ ಅನುಮಾನಾಸ್ಪದ ವ್ಯಕ್ತಿಯನ್ನು ನೆರೆಕರೆಯವರು ಪ್ರಶ್ನಿಸಿದ್ದಕ್ಕೆ ಚಂದ್ರು ಕುಡಿದು ಬಂದು ನೆರೆಕರೆಯ ಮನೆಯವರೊಂದಿಗೆ ಕಾಲು ಕೆರೆದು ಜಗಳಕ್ಕೆ ನಿಂತಿದ್ದಾನೆ. ಜಗಳ ಮಾಡುತ್ತಾ ಮಾಡುತ್ತಾ ಒಮ್ಮೆಗೇ ಎಲ್ಲರೆದುರು ಚಡ್ಡಿ ಜಾರಿಸಿ ದಿವ್ಯ ದರ್ಶನ ಮಾಡಿಸಿದ್ದಾನೆ. ನೋಡಿದವರು ಇವತ್ತಿಗೂ ಅಪಗಪಗ ಅಲ್ಕಿ ಅಲ್ಕಿ ಬೀಳುತ್ತಿದ್ದಾರೆ.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಚಡ್ಡಿ ಜಗಳ ಕೊನೆಗೆ ಪೋಲಿಸ್ ಠಾಣೆಗೂ ಎಂಟ್ರಿ ಹಾಕಿದೆ. ಪೋಲಿಸರು ಗುರ್ರ್ ಅಂದರೂ ಉರ್ಬುಲಿ ಕೇಳುತ್ತಿಲ್ಲ. ಇದೀಗ ಅವನೇ ಕುಡಿದು ಬಂದು ಗಲಾಟೆ ಮಾಡಿ ಓಡುವಾಗ ಬಲ್ಲೆಗೆ ಬಿದ್ದು, ಬಲ್ಲೆಯಲ್ಲಿದ್ದ ರಾಡ್ ತಾಗಿದ್ದು  ಅದನ್ನೂ ನೆರೆಕರೆಯವರ ತಲೆಗೆ ಕಟ್ಟಿ ನನಗೆ ರಾಡಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಪೋಲಿಸರ ಕಿವಿಗೆ ರೈಲು ಬಿಟ್ಟಿದ್ದಾನೆ. ಕುಡಿದು ಗಲಾಟೆ, ವಿನಾಕಾರಣ ಗಲಾಟೆ, ಕಾಲು ಕೆರೆದು ಗಲಾಟೆ ಮುಂತಾದ ಡಿಫರೆಂಟ್ ಸೈಜಿನ ಗಲಾಟೆಗಳನ್ನು ಉರ್ಬುಲಿ ಚಂದ್ರು ಮಾಡುತ್ತಿದ್ದು ನಂತರ ಪೋಲಿಸ್ ಕಂಪ್ಲೈಂಟ್ ಕೊಟ್ಟು ಪೋಲಿಸರನ್ನೂ ಯಾಮಾರಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಜನತಾ ಕಾಲೋನಿಯಲ್ಲಿ ಇವನ ಉರ್ಬುಲಿ ಕದನ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮಾತು ಮಾತಿಗೆ ಚಡ್ಡಿ ಜಾರಿಸಿ ಇಡೀ ಊರಿಗೆ ಮುಜುಗರ ತರುವ ಇವನ ವರ್ತನೆ ವಿಕೃತವಾದದ್ದು. ಪೋಲಿಸರೇ ಇವನ ಬೆಂಡ್ ತೆಗೆದು, ನಟ್ಟು ಬೋಲ್ಟ್ ಟೈಟ್ ಮಾಡಬೇಕಷ್ಟೆ.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಇಷ್ಟಕ್ಕೂ ಬಿಳಿನೆಲೆ ಜನತಾ ಕಾಲೋನಿಯಲ್ಲಿ ಇವನ ಮನೆಗೆ ಬರುವ ಅನುಮಾನಾಸ್ಪದ ವ್ಯಕ್ತಿ ಯಾರು? ಉರ್ಬುಲಿಗೂ ಅವನಿಗೂ ಏನು ಸಂಬಂಧ? ಅವನು ಯಾಕೆ ಕಾಲೋನಿಯಲ್ಲಿ ಅಪಗಪಗ ಕಾಣಿಸಿಕೊಳ್ಳುತ್ತಿದ್ದಾನೆ? ಅವನಿಗೆ ಉರ್ಬುಲಿ ಮನೆಯಲ್ಲಿ ಏನು ಕೆಲಸ? ಉರ್ಬುಲಿ ನೆಂಟನ? ಫ್ರೆಂಡ್? ಬಿಸಿನೆಸ್ ಪಾರ್ಟ್ನರ್? ಊರಿನವನ? ಗೊತ್ತಿಲ್ಲ. ಕಾಲೋನಿಗೆ ಬರುತ್ತಾನೆ, ಬೊಗಳಿದ 🐶 ನಾಯಿಗಳಿಗೆಲ್ಲ ಕಲ್ಲು ಬಿಸಾಡುತ್ತಾ ಹೋಗುತ್ತಾನೆ. ಇದನ್ನು ಪ್ರಶ್ನಿಸಿದರೆ ರಿಪೋರ್ಟ್ ಉರ್ಬುಲಿಗೆ ಹೋಗುತ್ತದೆ. ಅವನು ಟೈಟಾಗಿ ಬಂದು ಉರ್ಬುಲಿ ದರ್ಶನ ಕೊಡುತ್ತಾನೆ. ಇದು ದಿನ ನಿತ್ಯದ  ಕತೆ. (ಸಶೇಷ)
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................

...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಶಾಸ್ತ್ರವೂ ಶಸ್ತ್ರವೂ
   ಅನಿವಾರ್ಯ ಸಂದರ್ಭಗಳಲ್ಲಿ ಅತೀ ಶುದ್ಧ ನಮ್ಮನ್ನೇ ಹೆದರಿಸಿ ಬೇರೆ ಏನೊಂದೂ ಒಳ್ಳೆಯ ಕೆಲಸವ ಮಾಡಲು ಬಿಡುತ್ತಿಲ್ಲವೆಂದರೆ,ಹೆದರಿಸುವುದನ್ನು ಸ್ವಲ್ಪ ಪಕ್ಕಕ್ಕಿರಿಸಿ ಮುಂದುವರಿಯುವುದು ಒಳ್ಳೆಯದು.ಇಲ್ಲವೆಂದರೆ, ನಮ್ಮ ಎಷ್ಟೋ ಒಳ್ಳೆಯ ಕೆಲಸಗಳು ನಿಂತೇ ಹೋಗಬಹುದು.. ಕೆಲವೊಮ್ಮೆ ಚೌಕಟ್ಟು ಕೂಡಾ ನಮ್ಮನ್ನೇ ತಿಂದು ಹಾಕಬಹುದು.. ಶಾಸ್ತ್ರವೂ ಕೂಡಾ ನಾವು ಮಾಡುವ ಕೆಲಸಗಳಲ್ಲೇ ಅಳವಡಿಸುತ್ತಾ ಹೋಗಬೇಕೇ ಹೊರತು ಶಾಸ್ತ್ರ ಮಾಡುವುದೇ ಒಂದು ಕೆಲಸವಾಗಬಾರದು... ಶಾಸ್ತ್ರ ಕೂಡಾ ಶಸ್ತ್ರದಂತೆ... ಶಸ್ತ್ರವನ್ನಾದರೂ ಎಷ್ಟು ಬಳಸಬೇಕೋ ಅಷ್ಟೇ ಬಳಸಬೇಕು..ಇವೆರಡೂ ಆಯುಧಗಳೆ ...ಆದರಿದು ನಮ್ಮನ್ನೇ  ಹೆದರಿಸುವಂತಿರಬಾರದು...ಹೆದರಿ ಅನುಸರಿಸುವ 
ಶಾಸ್ತ್ರವು ದಿನಾ ನಮ್ಮ ಕುತ್ತಿಗೆಯ ಕೊಯ್ದಂತೆ.. ಶಾಸ್ತ್ರವು ಧೋರಣೆಯಾಗಬಾರದು..ಅಂತೆಯೇ ಶಾಸ್ತ್ರವು ಕೂಡಾ ಅತಿಯಾದಲ್ಲಿ ನಮ್ಮನ್ನೇ ಬಲಿತೆಗೆದು ಕೊಳ್ಳಬಹುದು...ಉದಾ... ಒಬ್ಬ ವ್ಯಕ್ತಿಗೆ ದೇವರ ಮೇಲೆ ಅತಿಯಾದ ಪ್ರೀತಿ, ನಂಬಿಕೆ, ವಿಶ್ವಾಸ ಇರುತ್ತದೆ ಅಂದುಕೊಳ್ಳೋಣ... ಒಮ್ಮೆ ಆ ವ್ಯಕ್ತಿಗೆ ತಾನುಣ್ಣುವ ಪದಾರ್ಥವನ್ನೇ ದೇವನಿಗಿಡಬೇಕೆನ್ನುವ ಮನಸ್ಸು ಬಂತೆಂದಾದರೆ, ಇನ್ನೊಬ್ಬ ಬಂದು, ಯೇ ಅದು ಶಾಸ್ತ್ರ ಹಾಗೆ ಹೀಗೆ...ಅದು ಭಯಂಕರ ಶುದ್ಧ ಎಂದು, ಶುದ್ಧ ಎಂಬುವುದನ್ನು ಭಯಂಕರ ಎಂದು ಮಾಡಿಟ್ಟು, ಈ ಮನುಷ್ಯ ಅತ್ತ ಕಡೆ ಶುದ್ಧ ಆಚರಣೆಯನ್ನೂ ಮಾಡಲು ಕೂಡದೆ, ಇತ್ತ ಕಡೆ ದೇವನಿಗೆ ಕೊಡುವುದನ್ನು ಕೊಡಲೂ ಕೂಡದೆ, ಕೊನೆಗೊಂದು ದಿನ ಅವನ ಮನಸ್ಸು ಅವನಿಗೆ ಬೇಕಾದ ಒಳ್ಳೆಯ ಕೆಲಸಗಳ ಮಾಡಲು ಕೂಡದೆ ರೋಸಿ ಹೋಗಿ  ಒಂದಾ ಕೆಟ್ಟವನಾಗಿ ಹೋಗಲೂ ಬಹುದು..
ಇಲ್ಲವೋ ಎಲ್ಲರನ್ನೂ ವಿರೋಧಿಸಬಹುದು.. ಅಂತೆಯೇ ಅತೀಯಾದ ಶಾಸ್ತ್ರವೂ ಕೂಡಾ ಒಂದು ಕತ್ತಿಯಿದ್ದಂತೆ..
ಇದೂ ಕೂಡಾ ಎಲ್ಲರನ್ನೂ ಹೆಸರಿಸಬಹುದು..ಈ ವಿಷಯವನ್ನು ಅತೀ ಶಾಸ್ತ್ರೀಯ ಗಮನಿಸಿದರೆ  ತನ್ನ ಬದುಕನ್ನು ಹಸನಾಗಿಸಬಹುದು...ಕತ್ತಿಯನ್ನಾದರೂ ಎಷ್ಟು ಬೇಕೋ? ಎಲ್ಲಿ ಎಷ್ಟಿರಬೇಕೋ ಅಷ್ಟೇ ಉಪಯೋಗಿಸುತ್ತೇವೆ...ಅದರ ಮಹತ್ವ ಯಾವಾಗ ?ಎಂತಹಾ ಸಂದರ್ಭದಲ್ಲಿ ಎಂದು ನಮಗೆ ಗೊತ್ತು.. ಅಂತೆಯೇ ಇದೂ ಕೂಡಾ ಅಲ್ಲವೇ ? ಇಷ್ಟಕ್ಕೂ ಅಂದಿನ ಕಾಲದಲ್ಲಿ ಎಲ್ಲಿತ್ತು  ಇಷ್ಟೊಂದು ಉಪಕರಣಗಳು ? ಮನೆಯೇ ಇರಲಿಲ್ಲ..ದೇವನ  ಇರುವಿಕೆ ಕೂಡಾ ತರಗೆಲೆಗಳ ಮಧ್ಯ ಕಾಡಿನಲ್ಲೋ ಎಲ್ಲಾದರೂ ಒಂದು ಕಡೆ ಇದ್ದುದು...
ಅವನೇನೂ ಹೇಳೇ ಇಲ್ಲ...ಇಂತದೇ ಹೀಗೇ ಮಾಡು ಎಂದು..
ಈ ಮನುಷ್ಯನ ಅನುಕೂಲಕ್ಕೆ ತಕ್ಕಂತೆ  ಮಾನವನ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಒಂದೊಂದೇ  ಮಾಡುತ್ತಾ ಬಂದ... ಪುಸ್ತಕದಲ್ಲಿ ಎಷ್ಟೂ ಬರೆದು ಇರಬಹುದು... ಅದರಲ್ಲಿ ಇದ್ದುದನ್ನು ಎಲ್ಲವನ್ನೂ  ಒಂದೇ ದಿನದಲ್ಲಿ ಮಾಡಲು ನಮ್ಮಿಂದ ಕೂಡೀತೇ ಎಂದು ನಾವೇ ಆಲೋಚಿಸಬೇಕು... ನಿಮ್ಮಿಂದ ಎಷ್ಟು ಕೂಡೀತು ಅದನ್ನಷ್ಟೇ ನಾವು ಮಾಡಲು ಹೊರಡುವುದೇ ಶಾಸ್ತ್ರ... ಅದು ಬಿಟ್ಟು ಅವರು ಮಾಡಿದರು..ಇವರು ಮಾಡಿದರು ಎಂದು ನಾವೂ ನೆಗೆಯಲು ಒಂದೇ ದಿನದಲ್ಲಿ ಹೊರಟರೆ, ಮರುದಿನ ಸೊಂಟ ನೆಗರಬಹುದು... ನಮ್ಮ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿ ಎಲ್ಲವೂ ಇರುವುದು... ಸಾಮರ್ಥ್ಯಕ್ಕನುಗುಣವಾಗಿ ಮಾಡುವುದೇ ಎಲ್ಲಾ ವಿಧಿ ವಿಧಾನಗಳು ಶಾಸ್ತ್ರೀಯ ಎನ್ನಬಹುದು...
ಹಾಗಾಗಿ ಶಸ್ತ್ರ ಹಾಗೂ ಶಾಸ್ತ್ರ ಇವೆರಡನ್ನೂ ಅರಿತು ಅದರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋದಲ್ಲಿ ನಮ್ಮ ಬದುಕು ಹಸನಾಗಬಹುದು ಎನ್ನುತ್ತಾ ನನ್ನ ಈ ಕಿರು ಲೇಖನ ನನಗಾಗಿ ಹಾಗೂ ನಿಮಗಾಗಿ...

-ಶ್ರೀಮತಿ ಶಾಂತಾ ಕುಂಟಿನಿ
...................................................
ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    ಮಂಗಳೂರು ಜಿಲ್ಲೆಯ ಗೌಡ್ರುಗಳಿಗೆ ಗಾಢ ನಿದ್ರೆ. ಸುಳ್ಯ, ಪುತ್ತೂರು, ಬೆಳ್ತಂಗಡಿಯ ಅಷ್ಟೂ ಗೌಡ್ರುಗಳು ಆಯುಧ ಕೆಳಗಿಟ್ಟು ಯುದ್ಧ ಗಿದ್ಧ ಇಲ್ಲ ಎಂದು ಘೋಷಿಸಿಯೇ ಬಿಟ್ಟಿದ್ದಾರೆ. ಜಿಲ್ಲೆಯ ಇಪ್ಪತ್ತು ಲಕ್ಷ ಜನ ಸಂಖ್ಯೆಯಲ್ಲಿ  ಗೌಡ್ರುಗಳ ಸಂಖ್ಯೆಯೇ ಕಾಲು ಭಾಗ ಅಂದರೆ ನಾಲ್ಕರಿಂದ ಐದು ಲಕ್ಷದ ತನಕ. ದೊಡ್ಡ ದೊಡ್ಡ ಫ್ಯಾಮಿಲಿಗಳು, ದೊಡ್ಡ ದುಡ್ಡಿನವರು, ದೊಡ್ಡ ತೋಟದವರು, ಭೂಮಾಲೀಕರು, ಜನನಾಯಕರು ಹೀಗೆ ಎಂಥ ಸೈಜಿನ ಗೌಡ್ರುಗಳಿದ್ದರೂ ಗಾಢ ನಿದ್ರೆ. ಈ ಲೋಕದ ಅರಿವೇ ಇಲ್ಲ. ತಾವೂ ಆಯಿತು, ತಮ್ಮ ತೋಟವೂ ಆಯಿತು ಎಂಬಂತಿರುವವರು. ತೋಟವೇ ಅವರಿಗೆ ಮಂಗಳೂರು, ಬೆಂಗಳೂರು. ಹೊರಗೆ ಬರಲ್ಲ ಅವರು.

ಹತ್ತು ಕುಟುಂಬ, ಹದಿನೆಂಟು ಗೋತ್ರದ ಜಪ ಮತ್ತು ಅನ್ ಲಿಮಿಟೆಡ್ ಶಾಸ್ತ್ರ ಇದು ಬಿಟ್ಟರೆ ಗೌಡ್ರುಗಳು ಜಿಲ್ಲೆಯ ತುಂಬಾ ಮೂಲೆ ಗುಂಪು ನಾಯಕರಾಗಿದ್ದಾರೆ.ಮುಂಡೋಡಿಯ ಅಮರ್ ಬೊಳ್ಳಿಲು, ಮದುವೆ ಗದ್ದೆಯ ಧಣಿಗಳು, ಕುರುಂಜಿಯ ಅಕ್ಷರ ದಾನಿಗಳು, ಸೂಂತೋಡಿನ educated ಗಳು, ದೇವರಗುಂಡ ಬೆಳ್ಳಿಪ್ಪಾಡಿಯ ಗಡಿ‌ ನಾಯಕರು,ಅಡ್ಪಂಗಾಯ, ಮಲ್ಲಾರ,ಮಾಣಿಬೆಟ್ಟುವಿನ ರೆಬೆಲ್ ಗಳು, ಕುಡೆಕಲ್, ನಾರ್ಕೊಡು,ಮೊಂಟಡ್ಕದ ಹೀರೋಗಳು, ಊರುಬೈಲಿನ ಡೀಸೆಂಟ್ dignified ಗಳು, ಉಳುವಾರು, ಮಡ್ತಿಲದ ಜಂಟಲ್ ಮೆನ್ ಗಳು ಮತ್ತು ಕೂಜುಗೋಡು ಕಟ್ಟೆ ಮನೆಯ ದೊಡ್ಡೇಜಮಾನ್ರುಗಳು. ಹೀಗೆ ಎಲ್ಲಾ ವೀರಾಧಿವೀರ ಗೌಡ್ರುಗಳಿದ್ದರೂ, ಜನಸಂಖ್ಯೆಯಲ್ಲಿ 5 ತನಕ ಇದ್ದರೂ, ಪುತ್ತೂರು, ಸುಳ್ಯ, ಬೆಳ್ತಂಗಡಿ ಗಳಲ್ಲಿ ಇಡೀ ವ್ಯವಸ್ಥೆಯನ್ನೇ ಗಡ ಗಡ ಮಾಡಬೇಕಾದ ಗೌಡ್ರುಗಳು ಅಣ್ಣೇರ್ ಮತ್ತು ಅಣ್ಣಾಗಳ ಮುಂದೆ ಗಡ ಗಡ ನಡುಗಿ ಅಳಿದ ಊರಿಗೆ ಉಳಿದವನೇ ಗೌಡ ಆದದ್ದು ವಿಪರ್ಯಾಸವೇ ಸರಿ. ಒಬ್ಬ ಗೌಡ್ರುಗಳ ಎಂಪಿ ಇಲ್ಲ, ಎಮ್ಮೆಲ್ಲೆ ಇಲ್ಲ, ಎಮ್ಮೆಲ್ಸಿ ಇಲ್ಲವೇ ಇಲ್ಲ, ನಿಗಮ ಮಂಡಳಿಗಳಲ್ಲಿ ಇಲ್ಲ, ಹಾಲು ಒಕ್ಕೂಟ, ಜಿಲ್ಲಾ ಬ್ಯಾಂಕ್, ಕ್ಯಾಂಪ್ಕೋ, ಜನತಾ ಬಜಾರ್, ಎಪಿಎಂಸಿಗಳು, ಟಿಎಪಿಸಿಎಂಎಸ್ ಗಳು ಹೀಗೆ ಯಾವುದೇ ಕುರ್ಚಿಗಳಲ್ಲಿ ಗೌಡ್ರುಗಳು ಕಾಣುತ್ತಿಲ್ಲ. ಗೌಡ್ರುಗಳನ್ನು ಈ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹಂತ ಹಂತವಾಗಿ ಮುಗಿಸಲಾಗುತ್ತಿದೆ, ಮುಗಿಸಿದ್ದಾರೆ. ಮಾತೆತ್ತಿದರೆ "ಪುತ್ತೂರಿನಲ್ಲಿ ಕೊಟ್ಟಿದ್ದೇವೆ" ಎಂದು ಬಿಜೆಪಿಯ ಅಣ್ಣೆರ್ ಗಳು ಬಾಯಿಪಾಠ, ಗಿಳಿಪಾಠ ಹೇಳುತ್ತಿದ್ದಾರೆ. ಗೌಡ್ರುಗಳನ್ನು  ರಾಜಕೀಯವಾಗಿ ಮುಗಿಸುವಲ್ಲಿ ಅದೂ ಒಂದು ಧಾಳ. ಮೊರಂಪು ಬೇನೆಯ ದೊಡ್ಡ ಪುತ್ತೂರಿಗೆ ಹೇಳಿದ ಒಂದು ಕ್ಯಾಂಡಿಡೇಟಾ?
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಪುತ್ತೂರಿನಲ್ಲಿ ಕೊಟ್ಟಿದ್ದೇವೆ ಎಂದು ಬಿಜೆಪಿಯ ಅಣ್ಣೆರ್ ಗಳು ಗೌಡ್ರುಗಳನ್ನು ಮಂಗ ಮಾಡಿದರೆ ಕಾಂಗ್ರೆಸ್ ಕತೆಯಲ್ಲಿ ಗೌಡ್ರುಗಳು ಗೆಸ್ಟ್ ಆರ್ಟಿಸ್ಟ್ ಗಳು. ಕಾಂಗ್ರೆಸ್ ಪಕ್ಷಕ್ಕೆ ಗೌಡ್ರುಗಳ ಅಗತ್ಯವೇ ಇಲ್ಲದಂತೆ ವರ್ತಿಸುತ್ತದೆ. ಕಾಂಗ್ರೆಸ್ ಅಣ್ಣಾಗಳ ಮುಂದೆ ಮಾತಾಡಲೂ ಗೌಡ್ರುಗಳಿಗೆ ಬೆಟ್ರಿ ಇಲ್ಲ. ಕಾಂಗ್ರೆಸ್ ಅಣ್ಣಾಗಳನ್ನು ಕ್ಯಾರೇ ಅನ್ನದ ಒಬ್ಬ ಗೌಡ ಲೀಡರ್ ಅಂತ ಇದ್ದದ್ದು ಅದು ಚಾರ್ವಾಕದ ಜಯರಾಮ ಗೌಡರು. ಅದಕ್ಕಾಗಿಯೇ ಅವರನ್ನು ಮೂಲೆಗುಂಪು ನಾಯಕನನ್ನಾಗಿ ಮಾಡಲಾಯಿತು. ಇನ್ನು ಮುಂಡೋಡಿ ಬ್ರದರ್ಸ್ ಗಳಲ್ಲಿ ದೊಡ್ಡ ಮುಂಡೋಡಿದ್ದು ಓವರ್ ಡೀಸೆಂಟ್ ಆಯಿತು, ಚಿಕ್ಕ ಮುಂಡೋಡಿಯದ್ದು ಕಾಂಗ್ರೆಸ್ ಅಣ್ಣಾಗಳ ಬಗ್ಗೆ over confidence ಜಾಸ್ತಿ ಆಯಿತು. ಇಲ್ಲದಿದ್ದರೆ ದೊಡ್ಡ ಮುಂಡೋಡಿಗೆ ದೇಶಭಕ್ತರ ಏರ್ಯಾದಲ್ಲಿ ಎಮ್ಮೆಲ್ಸಿ ಟಿಕೆಟ್ ಕೊಟ್ಟು ಗೆದ್ದು ಬಾ ಅಂದ್ರೆ ಮುಂಡೋಡಿ ಎಲ್ಲಿಗೆ ಗೆಲ್ಲೋದು. ಈಗ ಕೇಳಿದರೆ ಅಣ್ಣಾಗಳು " ಎಮ್ಮೆಲ್ಸಿ ಕೊರ್ತುಂಡತ್ತೆ" ಎಂದು ಟೋನ್ ಛೇಂಜ್ ಮಾಡಿ ಮಾತಾಡಿದರೆ ದೊಡ್ಡ ಮುಂಡೋಡಿ ಹೆದರಿ ಕೊಳ್ಳುತ್ತಾರೆ. ಇನ್ನು ಸುಳ್ಯ ಕಾಂಗ್ರೆಸಿಗರ ದೊಡ್ಡ ಸೈಜಿನ ಲೀಡರ್ ವೆಂಕಪ್ಪ ಗೌಡರಿಗೂ ಇಲ್ಲಿ ತನಕ ಯಾವುದೇ ಕುರ್ಚಿ ಕೊಟ್ಟಿಲ್ಲ. ವೆಂಕಪ್ಪ ವಕೀಲರು ಇಡೀ ಸುಳ್ಯವನ್ನು ಅಡಿಮೇಲು ಮಾಡಿದರೂ ಕಾಂಗ್ರೆಸ್ ಪಕ್ಷದ ಅಣ್ಣಾಗಳು ವೆಂಕಪ್ಪಗೌಡರಿಗೂ ಚಾರ್ಜ್ ಫುಲ್ ಮಾಡಿರಲಿಲ್ಲ.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಹಾಗೆಂದು  ಮಂಗಳೂರು ಜಿಲ್ಲೆಯ ಮೇಜರ್ ಜಾತಿಗಳು ಕುರ್ಚಿ ವಿಷಯ ಬಂದಾಗ ಮಾತ್ರ ಒಗ್ಗಟ್ಟು ಪ್ರದರ್ಶಿಸಿವೆ.ಕಾಡಿ ಬೇಡಿ, ಮುನಿಸಿಕೊಂಡು,ಜಗಳ ಮಾಡಿ,ಕೊಡದೆ ಉಪಾಯವೇ ಇಲ್ಲ ಅನ್ನುವಂತಹ ಸೀನ್ ಕ್ರಿಯೇಟ್ ಮಾಡಿ ಪ್ರತೀ ಮೇಜರ್ ಜಾತಿಗಳು ಸ್ಥಾನ ಪಡೆದಿದ್ದಾರೆ. ಇದರ ಪರಿಣಾಮವಾಗಿ ಬಂಟ ಸಮುದಾಯದ ನಾಲ್ಕು ಎಮ್ಮೆಲ್ಲೆ ಗಳು ಮತ್ತು ಎಂಪಿ ಇದ್ದರೆ ಬಿಲ್ಲವರು ಒಬ್ಬ ಎಮ್ಮೆಲ್ಲೆ ಮತ್ತು ಒಬ್ಬ ಎಮ್ಮೆಲ್ಸಿಯನ್ನು ಹೊಂದಿದ್ದಾರೆ. ಮಂಗಳೂರಿನ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯಕ್ಕೇ ಟಿಕೆಟ್ ಕೊಡಲೇ ಬೇಕಾದ ಅನಿವಾರ್ಯತೆ ಬಿಜೆಪಿಗಿದೆ ಮತ್ತು ಆ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಉಳ್ಳಾಲದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯ ಬಿಟ್ಟು ಬೇರೆಯವರಿಗೆ ಕನಸಿನಲ್ಲಿಯೂ ಟಿಕೆಟ್ ಕೊಡಲ್ಲ. ಯಾಕೆಂದರೆ ಕಾಂಗ್ರೆಸ್ ಗೆ ಅವರ ಬಗ್ಗೆ ಅಷ್ಟು ಹೆದರಿಕೆ ಇದೆ ಜೊತೆಗೆ ಬೆದರಿಕೆ ಇದೆ. ಇನ್ನು ಕ್ರಿಶ್ಚಿಯನ್ ಸಮುದಾಯದವರು ಎಮ್ಮೆಲ್ಲೆ ಎಲೆಕ್ಷನ್ ಗಳಲ್ಲಿ ಸೋತರೆ ಅವರಿಗೆ ಒಂದು ಎಮ್ಮೆಲ್ಸಿ ಸೀಟು ರೆಡಿಯಾಗಿರುತ್ತದೆ ಮತ್ತು ಕೊಡಲೇ ಬೇಕಾದ ಅನಿವಾರ್ಯತೆಯನ್ನು ಅವರು ಸೃಷ್ಟಿ ಮಾಡಿಬಿಡುತ್ತಾರೆ. ಇನ್ನು ಉಡುಪಿ ಜಿಲ್ಲೆಯ ರಾಜಕೀಯ ಕೂಡ ಹಾಗೇ. ಎರಡು ಸೀಟು ಶೆಟ್ರುಗಳಿಗೆ, ಎರಡು ಬಿಲ್ಲವರಿಗೆ, ಒಂದು ಸೀಟು ಭಟ್ರಿಗೆ ಇರಲಿ ಎಂದು ಹಂಚಲಾಗಿದೆ. ಇದೀಗ ಎಂಪಿ ಕೂಡ ಬಿಲ್ಲವ ಸಮುದಾಯದವರೇ ಆಗಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಎಲ್ಲಿದ್ದಾರೆ ಗೌಡ್ರುಗಳು? ಕಾಂಗ್ರೆಸ್ ಅಣ್ಣಾಗಳಿಗೆ ಹೆದರುತ್ತಾ, ಬಿಜೆಪಿ ಅಣ್ಣೆರ್ ಗಳಿಗೆ ಸಾಷ್ಟಾಂಗ ಬೀಳುತ್ತಾ, ಹಠ ಮಾಡದೆ, ಹೆದರಿಸದೆ, ಬೆದರಿಸದೆ, ಸೀನ್ ಕ್ರಿಯೇಟ್ ಮಾಡದೆ, ಒತ್ತಡ ಹಾಕದೆ ಗೌಡ್ರುಗಳು ರಾಜಕೀಯದಲ್ಲಿ ಇವತ್ತು ಅವಿಭಜಿತ ಜಿಲ್ಲೆಯಲ್ಲಿ ಈ ಸ್ಥಿತಿಗೆ ತಲುಪಿದ್ದಾರೆ. ಇವತ್ತು ಅವಿಭಜಿತ ಜಿಲ್ಲೆಯ ರಾಜಕೀಯದಲ್ಲಿ ಗೌಡ್ರುಗಳ ಅಡ್ರೆಸ್ಸೇ ಇಲ್ಲ. ಹೋದ ಮ್ಯಾಚನ್ನು ವಾಪಾಸ್ ತರಲು ಗೌಡ್ರುಗಳಲ್ಲಿ ಅಂತಹ ವಿಕೆಟೂ ಇಲ್ಲ. ಮುಂಡೋಡಿಗಳಿಗೆ ಏಜ್ ಆದರೆ ವೆಂಕಪ್ಪ ಗೌಡರು ಕೋರ್ಟಿನಲ್ಲಿ ಬ್ಯುಸಿ. ಅಡ್ಪಂಗಾಯರು ಬಿಸಿನೆಸ್ ಕಡೆ ಇದ್ದರೆ ಪಿ.ಸಿ ತೋಟ, ಸೊಸೈಟಿ ಅಂತ ಇದ್ದಾರೆ. ಇನ್ನು ಪುತ್ತೂರು ಕಾಂಗ್ರೆಸ್ ನಲ್ಲಿ ಗೌಡ್ರುಗಳ ಅಡ್ರೆಸ್ಸೇ ಇಲ್ಲ. ಇನ್ನು ದೇಶಭಕ್ತರ ಗ್ಯಾಂಗ್ ನಲ್ಲಿ ಭರವಸೆ ಅಂತ ಇರೋದು ದಂಬೆಕೋಡಿ ಮತ್ತು ಕಂಜಿಪಿಲಿ ಮೇಲೆ. ಇಬ್ಬರನ್ನೂ ಲಾಸ್ಟ್ ಒವರ್ ಗಳಲ್ಲಿ ಬ್ಯಾಟಿಂಗ್ ಗೆ ಕಳುಹಿಸಿದರೂ ಸಾಕು ಒವರ್ ಗೆ ಮೂವತ್ತಾರು ಹೊಡೆದು ಬಿಡುವ ಸಾಧ್ಯತೆ ಇದೆ. ಆದರೆ ದೇಶಭಕ್ತರ ಅಣ್ಣೇರ್ ಗಳು ಮನಸ್ಸು ಮಾಡುತ್ತಿಲ್ಲ. ಇನ್ನು ಆ ಮಡ್ತಿಲ ಕೂಡ ಓವರ್ ಇದ್ದರೆ ಹೊಡೆಯುವ ಮ್ಯಾನೇ. ಆದರೆ ಕುಕ್ಕೆ ಕೊಟ್ಟು ಹದಿನೈದರ ಟೀಮ್ ನಲ್ಲಿ ಕೂರಿಸಿ ಬಿಟ್ಟಿದ್ದಾರೆ. ಗೌಡ್ರುಗಳು ರಾಜಕೀಯ ಸ್ಥಾನಮಾನಕ್ಕಾಗಿ‌ ಬೊಬ್ಬೆ ಹೊಡೆಯಬೇಕು, ಹೈಕಮಾಂಡ್ ಗೆ ಪ್ರೆಷರ್ ಹಾಕಿ ಹೈ ಪ್ರೆಷರ್ ಮಾಡಿಸಬೇಕು, ಸೀನ್ ಕ್ರಿಯೇಟ್ ಮಾಡಬೇಕು, ಹೈಕಮಾಂಡ್ ಗೆ ಟೆನ್ಷನ್ ಕೊಡಬೇಕು, ಸೀಟು ಕೊಡದಿದ್ದರೆ ಐದು ಲಕ್ಷ ಗೌಡ್ರ ಓಟು ಬೇರೆ ಪಕ್ಷಕ್ಕೆ ಹೋಗುತ್ತದೆ ಎಂಬ ಹೆದರಿಕೆ ಹುಟ್ಟಿಸಿ ಅದನ್ನು ಕಾಲಕಾಲಕ್ಕೆ ಬೆಳೆಸುತ್ತಾ ಬರಬೇಕು. ಹಾಗೆ ಮಾಡಿದರೆ ಮಾತ್ರ ಅಣ್ಣೆರ್ ಗಳಿಗೆ ಮತ್ತು ಅಣ್ಣಾಗಳಿಗೆ ಚಳಿ ಹಿಡಿಸಲು ಸಾಧ್ಯ. ಇಲ್ಲದಿದ್ದರೆ ಅವರಿಬ್ಬರೂ ಸೇರಿ ಗೌಡ್ರುಗಳಿಗೆ ಮೂಲೆಗುಂಪು ನಾಯಕನ ಪಟ್ಟ ಕಟ್ಟಿ ಬಿಡುತ್ತಾರೆ. ಈಗ ಆದದ್ದೂ, ಆಗುತ್ತಿರುವುದೂ ಅದೇ.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಇದೀಗ ಆ ಕೋಟಾ ಶ್ರೀನಿವಾಸ ಪೂಜಾರಿ ಎಂಪಿ ಆದ ಮೇಲೆ ಅವರು ಕೂತಿದ್ದ ಆ ಹಳೇಯ ಎಮ್ಮೆಲ್ಸಿ ಸೀಟನ್ನಾದರೂ ಗೌಡ್ರುಗಳಿಗೆ ಕೊಡಲೇ ಬೇಕಾಗಿದೆ. ಯಾಕೆಂದರೆ ಐದು ಲಕ್ಷ ಜನ ಸಂಖ್ಯೆಯ ಒಂದು ಸಮುದಾಯಕ್ಕೆ ನ್ಯಾಯ ಕೊಡಬೇಕಾಗಿದೆ. ಆದರೆ ಈ ಬಗ್ಗೆ ಯಾವುದೇ ಗೌಡ್ರುಗಳು ಹಕ್ಕು ಮಂಡನೆ ಮಾಡಿರುವ ಸಾಧ್ಯತೆ ಕಡಿಮೆ. ಯಾಕೆಂದರೆ ಬಿಜೆಪಿಯ ಅಣ್ಣೆರ್ ಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿರುವ ದೇಶಭಕ್ತ ಗೌಡ್ರುಗಳು ಅತ್ಲಕಡೆ ಹೋಗಿರುವ ಛಾನ್ಸಸ್ ಭಾರೀ ಕಡಿಮೆ. ಹಾಗಾಗಿ ಆ ಎಮ್ಮೆಲ್ಸಿ ಸೀಟಿನ ಲಿಸ್ಟಿನಲ್ಲಿ ಬಂಟರು ಇದ್ದಾರೆ, ಬಿಲ್ಲವರು ಇದ್ದಾರೆ. ಮೊಗವೀರರೂ ಇದ್ದಾರೆ. ಕಡೆಗೆ ಭಟ್ರುಗಳ ಕೋಟಾದಡಿ ಅರುಣ್ ಪುತ್ತಿಲ ಹೆಸರು ಕೂಡ ಇದೆ. ಆದರೆ ಒಬ್ಬ ಗೌಡ ಲೀಡರ್ ಹೆಸರಿಲ್ಲ. ಹಾಗೆಂದು ಇಲ್ಲಿ ಒಂದು ವಿಶೇಷ ಏನೆಂದರೆ ಒಬಿಸಿ ಕೋಟಾದಡಿ ಕೊಡಿ, ಅವರು ಬೆಂಬಲ ನನಗಿದೆ ಎಂದು ಬಾಕಿ ಎಲ್ಲಾ ಜಾತಿ ಲೀಡರ್ ಗಳು ರೈಲು ಬಿಟ್ಟು ಸ್ಥಾನ ಪಡೆದರೆ ಅದೇ ಒಬಿಸಿಯಲ್ಲಿ ಗೌಡ್ರುಗಳೂ ಇದ್ದಾರೆ. ಆದರೆ ಒಬಿಸಿ ಹೆಸರೆತ್ತಲೂ ಅವರಿಗೆ ಗಡಗಡ. ಯಾಕೆಂದರೆ ಬಂಟರು, ಬಿಲ್ಲವರೂ ಒಬಿಸಿ ಅಡಿಯಲ್ಲಿ ಬರುತ್ತಾರೆ. ಗೌಡ್ರುಗಳು ರಾಜಕೀಯವಾಗಿ ಯಾಕೆ ಅಷ್ಟೊಂದು ಹೆದರಿಕೊಳ್ಳುತ್ತಾರೆ? ಕಾಂಗ್ರೆಸ್ ಅಣ್ಣಾಗಳಿಗೆ ಯಾಕೆ ಸಲಾಂ ಹೊಡೆಯುತ್ತಾರೆ, ಬಿಜೆಪಿ ಅಣ್ಣೆರ್ ಗಳಿಗೆ ಯಾಕೆ ಸಾಷ್ಟಾಂಗ ಮಾಡುತ್ತಾರೆ?    ಅವರಿಗೇನು ಕೊಂಬು ಇದೆಯಾ ಅಥವಾ ಕೈಕಾಲುಗಳು ಜಾಸ್ತಿ ಇದೆಯಾ?   ಟಿಕೆಟ್ ಕೊಡದಿದ್ದರೆ ಐದು ಲಕ್ಷ ಗೌಡ್ರ ಓಟೂ ನಿಮಗೆ ಸಿಗಲ್ಲ ಎಂದು ಒಂದು ಅವಾಜ್ ಹಾಕಿದರೂ ಸಾಕು ದಕ್ಷಿಣ ಕನ್ನಡದ ಅಷ್ಟೂ ಅಣ್ಣೇರ್ ಗಳಿಗೆ ಮತ್ತು ಅಣ್ಣಾಗಳಿಗೆ ಚಳಿ ಜ್ವರ ಶುರುವಾಗಿ ಬಿಡುತ್ತದೆ. ಆದರೆ ಹಾಗೆ ಆವಾಜ್ ಹಾಕುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಯುವರ್ ಆನರ್,
ಗೌಡ ಅಂದರೆ ದೇವೇಗೌಡರಂತೆ ಇರಬೇಕು, ಅವರ ಮಕ್ಕಳಂತೆ ಇರಬೇಕು. ಗೌಡ ಅಂದರೆ ಡಿ.ಕೆ ಶಿವಕುಮಾರನಂತೆ ಇರಬೇಕು ಅಥವಾ ಅವರ ತಮ್ಮನಂತೆ ಇರಬೇಕು. ಗೌಡ ಅಂದರೆ ರೆಬೆಲ್ ಸ್ಟಾರ್ ಅಂಬರೀಷನಂತಿರ ಬೇಕು. ಗೌಡ ಅಂದರೆ ಕೃಷ್ಣ ಭೈರೇಗೌಡ, ಅಶ್ವಥ್ ನಾರಾಯಣ, ಅಶೋಕ್, ಚೆಲುವ ನಾರಾಯಣನಂತಿರ ಬೇಕು. ಗೌಡ ಅಂದರೆ ಕಡೇ ಪಕ್ಷ ಸವಣೂರಿನ ಇಡ್ಯಾಡಿ ಶಿವಣ್ಣನಂತಾದರೂ ಬೇಕು. ಒಬ್ಬ ಗೌಡ ಅಂದರೆ ಅವನಿಗೆ ಗಟ್ಸ್ ಇರಬೇಕು, ಛಲ ಇರಬೇಕು, ಹೋರಾಟದ ಕಲೆ ಗೊತ್ತಿರಬೇಕು. ಮಾತಿನ ವಾಗ್ಬಾಣದಲ್ಲಿ ವಾಗ್ಧಾಳಿ ನಡೆಸಿ  ಎದುರಾಳಿಗಳನ್ನು ಧೂಳಿಪಟ ಮಾಡುವ ಚಾಕಚಕ್ಯತೆ ಇರಬೇಕು. ಗೌಡ ಅಂದರೆ ಎದುರಾಳಿಗಳಿಗೆ ಸೀರಿಯಸ್ ಟೆನ್ಷನ್ ಕೊಡುವವನಾಗಿರಬೇಕೇ ಹೊರತು ಟೆನ್ಷನ್ ಮಾಡಿಕ್ಕೊಂಡು ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡುವವನಾಗಿರ ಬಾರದು. ಗೌಡ ಅಂದರೆ ತನ್ನ ಸಮುದಾಯಕ್ಕೆ ನ್ಯಾಯ ಒದಗಿಸುವ ಮತ್ತು ಇಡೀ ಊರಿಗೆ ಲೀಡರ್ ಶಿಪ್ ಒದಗಿಸುವ ಚತುರನಾಗಿರಬೇಕು. ಆದರೆ ತುಳುನಾಡಿನ ಯಾವ ಗೌಡ್ರುಗಳೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡದ್ದು ವಿಪರ್ಯಾಸವೇ ಸರಿ. ತುಂಬಿ ತುಳುಕುವ ಮೆಜಾರಿಟಿ ಇದ್ದರೂ, ಮೂರು ತಾಲೂಕುಗಳಲ್ಲಿ ನಿರ್ಣಾಯಕರಾಗಿದ್ದರೂ, ವಿದ್ಯೆ, ಬುದ್ಧಿ ದೇವರು ಕೊಟ್ಟಿದ್ದರೂ, ಆಸ್ತಿ ಅಂತಸ್ತು ಮೂರು ತಲೆಮಾರಿಗೆ ಸಾಕಿದ್ದರೂ ಗೌಡ್ರ ಟೀಮಿನಲ್ಲಿ ಓಪನರ್ಸ್ ಇಲ್ಲದ್ದು ಸಮುದಾಯದ ಬ್ಯಾಡ್ ಲಕ್ ಅಂತಲೇ ಹೇಳಬೇಕಷ್ಟೆ. ಗೌಡ ಸಮುದಾಯ ಬೆಳದಿಂಗಳ ಬೆಳಕು ನೀಡುವ ಚಂದಿರ ಆಗಿದ್ದರೂ ತನ್ನನ್ನು ತಾನು ಮಿನುಗು ಹುಳ ಅಂತ ಅಂಡರ್ ಎಸ್ಟಿಮೇಟ್ ಮಾಡಿಕೊಂಡಿದ್ದು ಯಾರ ಗ್ರಹಚಾರ ಎಂದೇ ಅರ್ಥ ಆಗುತ್ತಿಲ್ಲ.

...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಗೌಪ್ಯ ದಾನ
   ಯಾರೂ ನೋಡದಂತೆ,ಯಾರಿಗೂ ತಿಳಿಯದಂತೆ ಮಾಡಿದ್ದು ದಾನವಾದರೂ ಕೂಡಾ ಅದರ ಫಲಿತಾಂಶ ಯಾರೂ ನೋಡದ,ಏನೂ ತಿಳಿಯದ ಜಾಗಕ್ಕೇ ಹೋಗಿ ಸೇರಬಹುದು.ದಾನವನ್ನಾದರೂ ಕೂಡಾ ಕದ್ದು ಮುಚ್ಚಿ ಮಾಡುವಂತಿಲ್ಲ.ಯಾಕೆಂದರೆ, ಅದು ನಮ್ಮ ದುಡಿತಕ್ಕಿರುವ ಸಾಕ್ಷಿ.. ಒಂದು ಕಾರ್ಯಕ್ರಮ ಮಾಡುವುದಿದ್ದರೂ ಅದನ್ನು ಯಾರೂ ನೋಡದಂತೆ, ಯಾರಿಗೂ ಹೇಳದಂತೆ ಮಾಡಿದರೆ, ಅದು ಕಾರ್ಯಕ್ರಮ ಆಗುತ್ತದೆಯೇ ? ನಾವುಗಳು ದುಡಿಯುವ ದುಡಿಮೆ ಕೂಡಾ ರಾಜಾರೋಷದಿಂದ ಕೂಡಿರಬೇಕು..ಇಲ್ಲವೆಂದಾದಲ್ಲಿ ನಮ್ಮ ದುಡಿಮೆ ಕೂಡಾ ನಿಷ್ಪ್ರಯೋಜಕವಾಗಬಹುದು... ನಮ್ಮ ದುಡಿಮೆಯ ನಾವೇ ಇದು ನಮ್ಮ ದುಡಿಮೆ ಇದು ನಾನು, ನನ್ನದೆಂದು ನೇರವಾಗಿ ಹೇಳಿಕೊಳ್ಳಲಾಗದೆ ಎಲ್ಲದಕ್ಕೂ ಹೆದರುತ್ತಿದ್ದೇವೆ ಎಂದರೆ ನಾವಿನ್ನೂ ಹೊರಬಂದಿಲ್ಲ ಎಂದು ಅರ್ಥ.. ನಮ್ಮ ದುಡಿಮೆಯನ್ನು ನಮಗೇ ಒಪ್ಪಿಕೊಳ್ಳಲಾಗುತ್ತಿಲ್ಲವೆಂದರೆ, ನಾವು ಮಾಡುವ ದುಡಿಮೆಯಲ್ಲಿ ಕುಂದು ಕೊರತೆಗಳಿರಬಹುದು...ದುಡಿಮೆ ಹಾಗೂ ದಾನ ಇವೆರಡಕ್ಕೂ ಒಬ್ಬ ವ್ಯಕ್ತಿ ಹೆದರುತ್ತಿದ್ದಾನೆಂದರೆ, ತಾನಿನ್ನೂ ಸಂಪೂರ್ಣನಲ್ಲ... ತಾನಿನ್ನೂ ತನ್ನನ್ನು ಉಪಯೋಗಿಸಲು ಬಾಕಿ ಇದೆ ಎಂದು ಅರ್ಥ... ತಾನಿನ್ನೂ ಯಾರ ಎದುರೂ ಕೂಡಾ ಪರಿಪೂರ್ಣವಾಗಿ ನೇರ ನಿಂತಿಲ್ಲವೆಂದು ಅರ್ಥ..ತಾನು ಮಾಡುವ ದುಡಿಮೆಯಲ್ಲಿ ಭಯ ಇರುವಂತಾಗಬಾರದು... ತನ್ನ ದುಡಿಮೆ ಯಾವತ್ತಿಗೂ ಇತರರಿಗೆ ಹೆದರಿ ದುಡಿಯುವಂತಾಗಬಾರದು... ಕದಿಯುವುದಕ್ಕೆ ಹೆದರಬೇಕೇ ಹೊರತು ದುಡಿಯುವುದಕ್ಕೂ, ಒಳ್ಳೆಯ ಕೆಲಸ ಮಾಡುವುದಕ್ಕೂ, ದಾನ ಧರ್ಮಕ್ಕೂ, ಧರ್ಮ ಕಾರ್ಯಕ್ಕೂ ಹೆದರುವಂತಿರಬಾರದು..
ಕೆಟ್ಟ ಕೆಲಸ ಮಾಡಲು ಕೆಲವರು ಹೆದರುವುದೇ ಇಲ್ಲ ಬಹು ಬೇಗ ಮಾಡಿ ಮುಗಿಸುತ್ತಾರೆ...ಅದೇ ಒಳ್ಳೆಯ ಕೆಲಸ ಮಾಡುವುದಾದರೆ, ಅನೇಕ ವಿಘ್ನಗಳು,ಕುಹಕಗಳು ಎದುರಾಗುತ್ತವೆ.ಇಂತಹದ್ದನ್ನೆಲ್ಲ ಮೆಟ್ಟಿ ನಿಲ್ಲಬೇಕಾದರೆ, ನಾವು. ಎಲ್ಲರ ಎದುರು ನಮ್ಮ ಸತ್ಯ, ನಾವು ಮಾಡುವ ಸತ್ಯವನ್ನು ನೇರಾ ನೇರ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬರಬೇಕೆಂದು ನಾವೆಲ್ಲರೂ ಆ ಭಗವಂತನಲ್ಲಿ ಪ್ರಾರ್ಥಿಸಬೇಕು.. ಇದರಿಂದ ಭಗವಂತನೂ ಸುಪ್ರಸನ್ನನಾಗಿ 
ಆರೋಗ್ಯ, ನೆಮ್ಮದಿ, ಸಂಪತ್ತುಗಳನ್ನು ನೀಡುತ್ತಾನೆ ಎಂಬ ಭರವಸೆಯ ಆತ್ಮ ವಿಶ್ವಾಸ ಹೊಂದಿ ಈ ಲೇಖನ ನಿಮಗಾಗಿ ಹಾಗೂ ನಮಗಾಗಿ...

-ಶ್ರೀಮತಿ ಶಾಂತಾ ಕುಂಟಿನಿ
...................................................
ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    ಈ ಅನ್ಯ ಮತೀಯ ಹುಡುಗರು ಸುಬ್ರಹ್ಮಣ್ಯಕ್ಕೆ ಯಾಕೆ ಬರುತ್ತಾರೋ ಗೊತ್ತಿಲ್ಲ. ಪೆಟ್ಟು ತಿನ್ನಲೆಂದೇ ಬಹುಷಃ ಬರುತ್ತಾರೆ ಕಾಣ್ಬೆಕು. ಈವತ್ತು ಕೂಡ ಒಬ್ಬ ಅನ್ಯ ಮತೀಯ ಹುಡುಗನಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪದಾನ ಹೊಡೆದ ಘಟನೆ ಸುಬ್ರಹ್ಮಣ್ಯ ಸುಳ್ಯ ಬಸ್ಸಿನಲ್ಲಿ ನಡೆದಿದೆ.

ಅವಳು ಒಬ್ಬಳು ಹಿಂದೂ ಹುಡುಗಿ. ಸುಳ್ಯಕ್ಕೆ ಅದೇನೋ ಕೆಲಸದ ಮೇಲೆ ಹೋಗುವವಳು. ಸುಬ್ರಹ್ಮಣ್ಯ -ಸುಳ್ಯ ಬಸ್ಸು. ಹುಡುಗಿ ಹತ್ತಿರ ಕುಂತ ಸಹಪ್ರಯಾಣಿಕನಿಗೆ ಅದೇನೋ ಆಸೆ. ಹುಡುಗಿಯರನ್ನು ಟಚ್ ಮಾಡಬೇಕೆಂಬ ವಿಕೃತ ಮನಸ್ಸು. ಅದಕ್ಕೆ ಕೂಡಲೇ ಆತ ಎತ್ತಿದ್ದು ಜಿರಳೆ ಅವತಾರ. ಜಿರಳೆ ಹುಡುಗಿಯ ಕರ್ಫ್ಯೂ ಹೇರಿತ ಜಾಗದಲ್ಲಿ ಹರಿದಾಡಿದ ಕೂಡಲೇ ಹುಡುಗಿ ಪ್ರತಿಭಟಿಸಿದ್ದಾಳೆ. ಆದರೂ ಇವನದ್ದು ಮತ್ತೆ ಮತ್ತೆ ಬಲತ್ಕಾರದ ಟಚ್ಚಿಂಗ್. ಬಸ್ಸು ಗುತ್ತಿಗಾರಿಗೆ ಮುಟ್ಟುವಾಗ ಅದೆಲ್ಲಿತ್ತೋ ಹಿಂದೂ ಸಂಘಟನೆಗಳ ಕಾರ್ಯಕರ್ತರು. ಬಸ್ಸಿಗೆ ನುಗ್ಗಿ ಹುಡುಗನನ್ನು ಎಳೆದಾಡಿ ಪದಾನ ಕೊಟ್ಟಿದ್ದಾರೆ.ಇನ್ನು ಇವನು ಪೆಟ್ಟು ತಿಂದು ಅಜೀರ್ಣ ಆಗಿ ಸಾಯೋದು ಬೇಡ ಎಂದು ಆಸ್ಪತ್ರೆಗೆ ಕೊಂಡೋಗಿ ಹಾಕಿದ್ದಾರೆ. ಆದರೆ ಆ ವಿಕೃತಕಾಮಿ ಆಸ್ಪತ್ರೆಯಿಂದ ಪದ್ರಾಡ್ ಆಗಿದ್ದಾನೆ ಎಂದು ನಮಗೆ ಬಂದ first information report ಹೇಳಿದೆ. ಹುಡುಗ ಕಾಸರಗೋಡು ಅಡೂರು ಕಡೆಯವನು ಎಂದು ತಿಳಿದುಬಂದಿದೆ. ಇದೀಗ ಈ ಬಗ್ಗೆ ಹುಡುಗಿ ಕಂಪ್ಲೈಂಟ್ ಕೊಡುವ ನಿರ್ಧಾರ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    ಈಗ ಸಾಲ ತೆಗೆಯೋದು ಭಾರೀ ಕಷ್ಟ ಮಾರಾಯ್ರೆ. ಸಾಲಗಾರರಿಗೆಲ್ಲ ಸಿಬಿಲ್ ಬಡಿದು ಬ್ಯಾಂಕ್ ಕಡೆ ತಲೆ ಹಾಕಿ ಮಲಗ್ಲಿಕ್ಕೂ ಆಗದ ಪರಿಸ್ಥಿತಿ. ಸಾಲಗಾರರ ಸಿಬಿಲ್ ರೇಟು ತೋರಿಸುವ ಮುಳ್ಳು ಲೆಫ್ಟಿಗೆ ಕೆಳಗೆ ಬಂದು ಬೀಳುವ ಪರಿಸ್ಥಿತಿ ಇದೆ. ಹಾಗಾಗಿ ಈಗ ಹೆಚ್ಚಿನ ಸಾಲಗಾರರು ಹೆಂಡತಿಗೆ ದಮ್ಮಯ್ಯ ದಕ್ಕಯ್ಯ ಹಾಕಿ, ಅವಳ ಕೈಕಾಲು ಹಿಡಿದು ಅವಳ ಕುತ್ತಿಗೆದ್ದು, ಕೈಯಿದ್ದು, ಕೆಬಿತ್ತವು, ಮೂಂಕುದ ಟಿಕ್ಕಿ, ಮಾಟಿ, ಉಲಿಂಗಿಲ ಹೀಗೆ ಎಲ್ಲವನ್ನೂ ತಂದು ತಿಂದಾಗಿದೆ.
.........................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
.........................................
  ಬ್ಯಾಂಕುಗಳು, ಸೊಸೈಟಿಗಳು ಸಾಲಗಾರರ ಅಡಗುದಾಣಗಳ ಮೇಲೆ ನಿರಂತರ ಧಾಳಿ ನಡೆಸಿದರೂ ಸಾಲ ವಸೂಲಾತಿ ಆಗುತ್ತಿಲ್ಲ. ಇದೀಗ ಈ ಸಾಲಗಾರರ ಕಷ್ಟಕ್ಕೆ ಕರ ಕರ ಕರಗಿರುವ ಬಿಳಿನೆಲೆಯ ಸೊಸೈಟಿಯೊಂದು ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆ, ಯೋಚನೆಯಲ್ಲಿದೆ. ಈ ಯೋಜನೆ ಪ್ರಾಯೋಗಿಕವಾಗಿ ಈಗಾಗಲೇ ನಡೆದಿದ್ದು ಸೊಸೈಟಿ ಅದರಲ್ಲಿ ಯಶಸ್ವಿಯೂ ಆಗಿದೆ ಎಂದು ತಿಳಿದುಬಂದಿದೆ.
  
ಹಾಗೆಂದು ಬಿಳಿನೆಲೆ ಊರಿನಲ್ಲಿ ಒಂದು ಚಿಕ್ಕ ಸೊಸೈಟಿ ಇದೆ. ಈ ಸೊಸೈಟಿ ಇದೀಗ ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಿದೆ. ಸದ್ರಿ ಸೊಸೈಟಿಯ ದೇಶಭಕ್ತರ ಡೈರೆಕ್ಟರ್ ದೇವರ ಪಾಲಿನ ಚಿದಣ್ಣ ಅಂದಾಜು ಎಪ್ಪತ್ತು ಸಾವ್ರ ರೂಪಾಯಿಗಳ ವನ್ ಗ್ರಾಂ ಚಿನ್ನ ತಂದು ವರ್ಷದ ಹಿಂದೆ ಅಡವಿಟ್ಟು ದುಡ್ಡು ಕ್ಯಾಶ್ ಮಾಡಿ ಕಿಸೆಗೆ ಹಾಕಿದ್ದರು. ಯಾರದ್ದೂ ಸುದ್ದಿ ಇಲ್ಲ. ವರ್ಷ ನಂತರ ಮೂರು ತಿಂಗಳ ಹಿಂದೆ ಲೋನ್ ರಿನಿವಲ್ ಗೆ ಬಂದಾಗ ಚಿದಣ್ಣನ ಪಿತ್ತಳೆ ಪಿದಾಯಿ ಬಿದ್ದಿದೆ. Inspection ಗೆ ಬಂದ್ದಿದ್ದ ಮೇಲಿನವರು ಚಿದಣ್ಣನ ಚಿನ್ನವನ್ನು ತಿಕ್ಕಿ ತಿಕ್ಕಿ ನೋಡಿದರೆ ಚಿನ್ನ ಸಿಕ್ಕಿಬಿದ್ದಿದೆ. ಕೂಡಲೇ ಬೋರ್ಡ್ ಮೀಟಿಂಗ್ ನಡೆಸಿದ ದೇಶಭಕ್ತರು ಕೇಸನ್ನು ಸಿಂಗಲ್ ಟೀ ಮತ್ತು ಬಿಸ್ಕತ್ತಿನಲ್ಲಿ ಮುಗಿಸಿ ಸುದ್ದಿ ಪಿದಾಯಿ ಹೋಗದ ಹಾಗೆ ತಡೆ ಕಟ್ಟಿ ತಗಡಲ್ಲಿ ಬರೆಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ಈ ಬಗ್ಗೆ ಚಿದಣ್ಣನಲ್ಲಿ ಪ್ರಶ್ನೆ ಇಟ್ಟರೆ " ನನಗೇನೂ ಗೊತ್ತಿಲ್ಲದ ಬಾಲೆ ನಾನು. ಪಾ...ಪ.  ನಾನು.ಕೊಂಬ ಬೆರಳು ಚೀಪುವ ನನಗೆ ಈ ಚಿನ್ನವನ್ನು ನನ್ನ ಹೆಂಡತಿ ಕಡೆಯವರು ಕೊಟ್ಟಿದ್ದು, ಅದನ್ನು ನಾನು ಹಾಗೆ ತಂದು ಸೊಸೈಟಿಯಲ್ಲಿ ಇಟ್ಟಿದ್ದೇನೆ". ಎಂದು ಆಕಾಶವಾಣಿಯಲ್ಲಿ ಬಿಟ್ಟಿದ್ದಾರೆ. ಹಾಗಾದರೆ ತಪ್ಪು ಯಾರದ್ದು ಮಾರಾಯ್ರೆ? ರಾಂಪಣ್ಣದ್ದಾ?
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

    "ಹಾಗೆಂದು ಪುತ್ತೂರಿನಲ್ಲಿ ನಾಯಕರಿಗಿಂತ ಮೂಲೆ ಗುಂಪು ನಾಯಕರೇ ಜಾಸ್ತಿ. ಇದರಲ್ಲಿ ಬಿಜೆಪಿಯವರ ಕತೆ ಬಿಡಿ,  ಅದರಲ್ಲಿ ನಾಯಕನಾಗೋದೇ ಮೂಲೆಗುಂಪು ನಾಯಕನಾಗಲು. ಇನ್ನು ಕಾಂಗ್ರೆಸಿನವರ ಕತೆಯೂ ಇದಕ್ಕೆ ಹೊರತಾಗಿಲ್ಲ. ಆದರೆ ಪುತ್ತೂರು ಕಾಂಗ್ರೆಸ್ಸಿನಲ್ಲಿ ಬೆಳೆದು ಹೆಮ್ಮರವಾಗಿರುವ "ಅಣ್ಣಾ ಸಂಸ್ಕೃತಿ" ಮಾತ್ರ ಬಾಕಿ ಯಾವ ನಾಯಕರನ್ನೂ ಬೆಳೆಯಲು ಬಿಡುತ್ತಿಲ್ಲ. ಅದರಲ್ಲೂ ವಿನಯ್ ಕುಮಾರ್ ಸೊರಕೆ ಎಂಬ ಬಿಲ್ಲವ ನಾಯಕನನ್ನು ಹೇಗೆ ಸೋಲಿಸಲಾಯಿತೆಂದರೆ ಆ ನಾಯಕ ಪುತ್ತೂರನ್ನೇ ಬಿಡಬೇಕಾಯಿತು. ಸಿ.ಪಿ ಜಯರಾಮ ಗೌಡ ಎಂಬ ಒಕ್ಕಲಿಗ ಗೌಡ ನಾಯಕನನ್ನು ಹೇಗೆ ತುಳಿಯಲಾಯಿತೆಂದರೆ ಜಯರಾಮ ಗೌಡರು ಕಡೇ ಪಕ್ಷ ಜಿಲ್ಲಾ ಪಂಚಾಯಿತಿ ಸೀಟಲ್ಲೂ ಗೆಲ್ಲದ ಹಾಗೆ ನೋಡಿಕೊಳ್ಳಲಾಯಿತು. ಇನ್ನೊಬ್ಬ ಪ್ರಬಲ ಮುಸ್ಲಿಂ ನಾಯಕ ಕೆ.ಪಿ ಅಬ್ದುಲ್ಲ ರನ್ನು ವಿಟ್ಲಕ್ಕೆ ಶಿಫ್ಟ್ ಮಾಡಿ ಅಲ್ಲಿ ದಯಾನೀಯವಾಗಿ ಸೋಲಿಸಲಾಯಿತು. ಈ ಅಣ್ಣಾ ಸಂಸ್ಕೃತಿಯನ್ನು ಕ್ಯಾರೇ ಮಾಡದ, ಅಣ್ಣಾಗಳಿಗೆ "ದೊಡ್ಡಣ್ಣ ನಾನು" ಎಂದು ಘರ್ಜಿಸಿದ ಜೀವನ್ ಭಂಡಾರಿಯನ್ನೂ ವ್ಯವಸ್ಥಿತವಾಗಿ ಮೂಲೆಗುಂಪು ನಾಯಕನನ್ನಾಗಿ ಮಾಡಲಾಯಿತು. ಆ ಎಲ್ಲಾ ಕಾಲಘಟ್ಟದಲ್ಲೂ ಕಾಂಗ್ರೆಸ್ಸ್ ಟೀಮಲ್ಲಿ ಭದ್ರವಾಗಿ ನಿಂತು, ಪ್ರತೀ ಚುನಾವಣೆಗಳಲ್ಲೂ ಕಾಂಗ್ರೆಸ್ ಪರ ಸಿಕ್ಸರ್, ಬೌಂಡರಿ ಬಾರಿಸಿ ಕಾಂಗ್ರೆಸಿಗೆ ಒಂದು stand ಕೊಟ್ಟ ಮೊಹಮ್ಮದ್ ಆಲಿಯನ್ನೂ ಕಾಲ ಕಾಲಕ್ಕೆ ತುಳಿಯುತ್ತಾ ಬಂದ ಅಣ್ಣಾ ಸಂಸ್ಕೃತಿ ಯಾವ ಕಾರಣಕ್ಕೂ ಆಲಿಯನ್ನು ಬೆಳೆಯಲು ಬಿಡಬಾರದು ಎಂಬ ಹಠಕ್ಕೆ ಬಿದ್ದಂತಿದೆ. ಯಾಕೆಂದರೆ ಆಲಿ ಯಾವುದೇ ಸೀಟಲ್ಲಿ ಕುಂತರೂ ತಮ್ಮ ಜಾತಕ ಬಿಡಿಸುತ್ತಾರೆ ಎಂಬ ಹೆದರಿಕೆ ಕಾಂಗ್ರೆಸಿಗರಿಗೆ. ಹಾಗಾಗಿ ಬಲಿಗೆ ವಾಮನ ತುಳಿದ ಹಾಗೆ ತುಳಿಯುವುದು. ಆಲಿಯನ್ನೂ ಮೂಲೆ ಗುಂಪು ನಾಯಕ ಮಾಡಿ ಬಿಟ್ಟರೆ ಎಲ್ಲಾ ಕುರ್ಚಿಗಳಲ್ಲೂ ತಮ್ಮದೇ ಜನ ಕೂರಬಹುದು ಎಂಬುದು ಪೊಕ್ಕಡೆ ಕಾಂಗ್ರೆಸಿಗರ ಹಗಲು ಕನಸು.

  ಮೊಹಮ್ಮದ್ ಆಲಿ! ಪುತ್ತೂರು ಕಂಡ ಏಬಲ್,ಎ ವನ್ ಕಾಂಗ್ರೆಸ್ ನಾಯಕ. ಫರ್ಫೆಕ್ಟ್ ಲೀಡರ್ ಶಿಪ್, ನಾನ್ ಕರಫ್ಟ್, ಜನಪರ, ಹಂಡ್ರೆಡ್ ಪರ್ಸೆಂಟ್ ಸೆಕ್ಯುಲರ್, ದೂರಗಾಮಿ ಚಿಂತನೆ, ಎಲ್ಲಾ ಜಾತಿಗಳನ್ನು ಒಗ್ಗೂಡಿಸಿ ಮುನ್ನಡೆಸುವ ಚಾತಿ, ಬಡವರ ದೀನ ದಲಿತರ, ಶೋಷನೆಗೊಳಗಾದವರ ಸಮಾನ ಮನಸ್ಕ, ಅನುಭವಿ ರಾಜಕಾರಣಿ, ರಾಜಕೀಯದ ಮದಗಜಗಳೊಂದಿಗೆ ಹೋರಾಡಿದ, ಹೋರಾಡುವ ಧೈರ್ಯ, ಛಲ ಇರುವ ಆಲಿಯನ್ನು ಕೂಡ ಅಣ್ಣಾ ಸಂಸ್ಕೃತಿ ಮೂಲೆ ಗುಂಪು ನಾಯಕ ಮಾಡಲು ಕಳೆದ ಹಲವು ದಶಕಗಳಿಂದ ಪ್ರಯತ್ನಿಸಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. ಯಾಕೆಂದರೆ ಯೂ.ಟಿ ಖಾದರ್ ವಾಟರ್ ಬ್ಯಾಗ್ ಹಿಡ್ಕೊಂಡು ಶಾಲೆ ಕಡೆ ಹೋಗುವಾಗಲೇ ಆಲಿ ಸಕ್ರೀಯ ರಾಜಕಾರಣದಲ್ಲಿ ಇದ್ದರು. ಆದರೆ ಈಗ ಯೂ.ಟಿ ಎಲ್ಲಿದ್ದಾರೆ, ಆಲಿ ಎಲ್ಲಿದ್ದಾರೆ. ರಾಜಕಾರಣದಲ್ಲಿ ಆಲಿ ಇಷ್ಟೆಲ್ಲಾ ಪರದಾಡಲು ಕಾರಣ ಪುತ್ತೂರಿನ ಅಣ್ಣಾ ಸಂಸ್ಕೃತಿ.
ಹಾಗೆಂದು ಆಲಿ ಹತ್ತು ವರ್ಷಗಳ ಚಿಕ್ಕ ಹುಡುಗನಿರುವಾಗಲೇ ಚರ್ಚ್ ಬಿಲ್ಡಿಂಗ್ ನಲ್ಲಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದವರು. ಎಂಟನೇ ಕ್ಲಾಸಿಗೇ ಚಡ್ಡಿ ಸಿಕ್ಕಿಸಿಕೊಂಡು ಜನಾರ್ದನ ಪೂಜಾರಿಯ ಫಸ್ಟ್ ಎಲೆಕ್ಷನ್ ಗೆ ಮಂಜಲ್ಪಡ್ಪುನ ಬೂತ್ ಜವಾಬ್ದಾರಿ ಹೊತ್ತ ಆಲಿ ಒಂಭತ್ತನೇ ತರಗತಿಯಲ್ಲಿ ಪುತ್ತೂರು ನಗರ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ. ನಂತರ ವಿನಯ್ ಕುಮಾರ್ ಸೊರಕೆ ಟೈಮಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಕೆ.ಪಿ ಅಬ್ದುಲ್ಲಾ ಕಾಲದಲ್ಲಿ ಆಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. 86-87ರಲ್ಲಿ ಆರ್ಯಾಪು, ಕೆಮ್ಮಿಂಜೆ,ಕುರಿಯ ಮೂರು ದೊಡ್ಡ ದೊಡ್ಡ ಗ್ರಾಮಗಳ ಒಗ್ಗೂಡಿಸಿ ಸಂಪ್ಯ ಮಂಡಲ ಪಂಚಾಯ್ತಿ ರಚನೆ ಆದಾಗ ಆಲಿ ಅದರ ಮೊದಲ ಮಂಡಲ ಪ್ರಧಾನ ಮತ್ತು ಆಗ ಆಲಿಗೆ 21ವರ್ಷ. ಕರ್ನಾಟಕ ರಾಜ್ಯದ ಯಂಗೆಸ್ಟ್ ಮಂಡಲ ಪ್ರಧಾನ ಎಂಬ ಹೆಗ್ಗಳಿಕೆ ಆಲಿದ್ದು. ಆಮೇಲೆ ಕೆಮ್ಮಿಂಜೆ ಪಂಚಾಯ್ತಿ ಆದಾಗಲೂ ಹದಿನೇಳು ಸೀಟುಗಳಲ್ಲಿ ಹದಿನೇಳನ್ನೂ ಬಿಜೆಪಿಗೆ ಒಂದು ಪೀಸನ್ನೂ ಬಿಡದೆ ಕಾಂಗ್ರೆಸ್ ಅಕೌಂಟಿಗೆ ಹಾಕಿಸಿದ ಯುವ ನಾಯಕ ಆಲಿ. ನಂತರ ಕೆಮ್ಮಿಂಜೆ ಗ್ರಾಮ ಮುನ್ಸಿಪಾಲಿಟಿಗೆ ಸೇರಿದ ನಂತರವೂ ಆಲಿ ನಿರಂತರವಾಗಿ ಪುರಸಭಾ ಸದಸ್ಯರಾಗಿ ಆರಿಸಿ ಬಂದಿದ್ದಾರೆ. ನಾಲ್ಕು ಬಾರಿ ಪುರಸಭಾ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಪುರಸಭಾ ವಿರೋಧ ಪಕ್ಷದ ನಾಯಕ ಹೀಗೆ ಪುರಸಭೆಯಲ್ಲಿ ಆಲಿ ಅಲಂಕರಿಸದ ಕುರ್ಚಿಗಳೇ ಇಲ್ಲ. ಪುರಸಭೆಯಲ್ಲಿ ಇಷ್ಟು ಕೆಲಸ ಮಾಡಿಯೂ ಆಲಿಯವರಿಗೆ ಸಿಗದ ಕುರ್ಚಿ ಅಂದರೆ ಅದು ಪುರಸಭಾ ಅಧ್ಯಕ್ಷರ ಕುರ್ಚಿ. ಪುತ್ತೂರು ಪುರಸಭೆಯಲ್ಲಿ ಕಾಂಗ್ರೆಸ್ ಎರಡೆರಡು ಬಾರಿ ಅಧಿಕಾರಕ್ಕೆ ಬಂದರೂ ಮತ್ತು ಆ ಗೆದ್ದ ಎಲ್ಲಾ ಸೀಟುಗಳೂ ಆಲಿ ಕೇರ್ ಆಫ್ ನಲ್ಲಿ ಬಂದಿದ್ದರೂ ಆಲಿಯವರನ್ನು ಅಧ್ಯಕ್ಷಗಾದಿಯಿಂದ ದೂರ ಇಡಲಾಯಿತು ಮತ್ತು ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ಅಣ್ಣಾ ಸಂಸ್ಕೃತಿ ಸಕ್ರೀಯವಾಗಿತ್ತು.
   
ಹಾಗೆಂದು ಸುಧಾಕರ ಶೆಟ್ಟಿ ಕಾಲದಿಂದಲೂ ಆಲಿಯವರನ್ನು ವ್ಯವಸ್ಥಿತವಾಗಿ ತುಳಿಯಲಾಯಿತು. ಆಲಿಯ ನಾನ್ ಕರಫ್ಟ್, ನೇರ ಮಾತು, ಭ್ರಷ್ಟಾಚಾರಿಗಳೊಂದಿಗೆ ನೋ ಕಾಂಪ್ರಮೈಸ್, ಡ್ಯಾಶಿಂಗ್ ನೇಚರ್ ಹಲವು ಕಾಂಗ್ರೆಸಿಗರ ನಿದ್ದೆಗೆಡಿಸಿತ್ತು.ಕಾಂಗ್ರೇಸಿನಲ್ಲಿದ್ದ ಬ್ರೋಕರ್ ಗಳು, ವಂಚಕರು, ಕಮಿಷನ್ ಏಜೆಂಟ್ ಗಳು, ಭೂಗಳ್ಳರು, ಮರಗಳ್ಳರು ಹೀಗೆ ಬೇರೆ ಬೇರೆ ಸೈಜಿನ ಕಳ್ಳಕಾಕರೆಲ್ಲ ಹೋಗಿ ಆಲಿ ಬಗ್ಗೆ ಸುಧಾಕರ ಶೆಟ್ಟಿಯ ಕಿವಿ ತುಂಬಿಸಿ ಬಿಡುತ್ತಿದ್ದರು ಮತ್ತು ಆಲಿಗೆ ಪರ್ಯಾಯವಾಗಿ ಮೊಹಮ್ಮದ್ ಹಟ್ಟಾ ಎಂಬ ಸೌಮ್ಯವಾದಿ ನಾಯಕನನ್ನು ರೀಪ್ಲೇಸ್ಮೆಂಟ್ ಮಾಡಲಾಯಿತು. ಅನಂತರ ಹಟ್ಟಾರಿಗೆ ಪೂಡಾ ಅಧ್ಯಕ್ಷ ಪಟ್ಟ ಕೂಡ ಕಟ್ಟಲಾಯಿತು. ನಂತರ ಕಾಂಗ್ರೆಸ್ ಸರ್ಕಾರ ಬಂದಾಗಲೂ, ಪಕ್ಷದಲ್ಲೂ ಆಲಿಗೆ ಯಾವುದೇ ಸ್ಥಾನಮಾನಗಳನ್ನು ನಿರಾಕರಿಸುತ್ತಾ ಬರಲಾಯಿತು. ಆಲಿಯವರಿಗೆ ರಾಜ್ಯ ,ಜಿಲ್ಲಾ ಕಾಂಗ್ರೆಸ್ ನಾಯಕರ ಬೆಂಬಲ ಇದ್ದರೂ ಬ್ಲಾಕ್ ಕಾಂಗ್ರೆಸ್ ಮಾತ್ರ ಅಣ್ಣಾ ಸಂಸ್ಕೃತಿಯ ಹಿಡಿತದಲ್ಲಿ ಇದ್ದ ಕಾರಣ ಆಲಿ ಬಗ್ಗೆ ಕಾಲ ಕಾಲಕ್ಕೆ ನೆಗೆಟಿವ್ ಮಾಹಿತಿಗಳನ್ನು ನೀಡಿ ಜಿಲ್ಲಾ, ರಾಜ್ಯ ನಾಯಕರ ದಾರಿ ತಪ್ಪಿಸುವ ಮೂಲಕ ಆಲಿಯವರ ರೆಕ್ಕೆ ಪುಕ್ಕ ಕಟ್ ಮಾಡಲಾಗುತ್ತಿತ್ತು.
ಆವತ್ತು ಪುತ್ತೂರು ಪುರಸಭೆಯಲ್ಲಿ ಎರಡೆರಡು ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ನಿರ್ದಾಕ್ಷಿಣ್ಯವಾಗಿ ಆಲಿಯವರಿಗೆ ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. 2014 ರಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ವಾಣಿ ಶ್ರೀಧರ್ ಎಂಬ ಕಾಂಗ್ರೆಸ್ ಸದಸ್ಯೆಯನ್ನು ಪಕ್ಷಾಂತರ ಮಾಡಿಸಿ ದೇಶಭಕ್ತರು ಅಧಿಕಾರಕ್ಕೆ ಬರುವಂತೆ ಸ್ಕೆಚ್ ಮಾಡಿ ಆಲಿ ಕೈಗೆ ಅಧಿಕಾರ ಸಿಗದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನವಾಗಿ ಜಂಟಿ ಕಾರ್ಯಾಚರಣೆ ಮಾಡಿದ್ದವು. ಅಣ್ಣಾ ಸಂಸ್ಕೃತಿಯ ಕಾಂಗ್ರೆಸ್ ಮೆಂಟಾಲಿಟಿ ಹೇಗೆ ಅಂದರೆ ಬಿಜೆಪಿ ಆದರೂ ಅಧಿಕಾರಕ್ಕೆ ಬರಲಿ ಆದರೆ ಆಲಿ ಸಿಗಬಾರದು ಅಂದರೆ ಮಗ ಸತ್ತರೂ ಪರವಾಗಿಲ್ಲ ಸೊಸೆ ವಿಧವೆ ಆಗಲೇ ಬೇಕು ಎಂಬಂತೆ. ನಂತರ ಈ ಬಗ್ಗೆ ಆಲಿಯವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಕೋರ್ಟಿಗೆ ಹೋಗಿ ಜಯಶಾಲಿಯಾಗಿ ಮತ್ತೇ ಪುರಸಭೆಯಲ್ಲಿ ಅಧಿಕಾರ ‌ಹಿಡಿಯಲು ಬಂದರೆ ಒಮ್ಮೆಗೇ ಸ್ವಪಕ್ಷದ ಆರು ಸದಸ್ಯರು ರೆಬೆಲ್ ಆಗಿ ದೇಶಭಕ್ತರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರುತ್ತಾರೆ. ಒಬ್ಬ ಜನ ನಾಯಕನಿಗೆ ಮಾಡಿದ ಈ ವಿಶ್ವಾಸ ದ್ರೋಹ ಮಾತ್ರ ಪುತ್ತೂರಿನ ರಾಜಕೀಯ ಇತಿಹಾಸದಲ್ಲಿ ಬರೆದಿಡಬೇಕಂತಹ ಒಂದು ಪ್ರಮುಖ ಘಟ್ಟ. ನಂತರದ ಪುರಸಭಾ ಎಲೆಕ್ಷನ್ ಗಳಲ್ಲಿ ಕಾಂಗ್ರೆಸ್ ಮೆಜಾರಿಟಿ ಬಂದರೂ ಆಲಿಗೆ ಪ್ರತಿಕೂಲ ಆಗುವಂತಹ ಮೀಸಲಾತಿ ತಂದು ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. ಕಳೆದ ನಗರ ಸಭೆಯ ಎಲೆಕ್ಷನ್ ಟೈಮಲ್ಲಿ ಸಿಟ್ಟಿಂಗ್ ಕೌನ್ಸಿಲರ್ಸ್ ಗಳಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ಆದೇಶ ಇದ್ದರೂ ಆಲಿಯವರಿಗೆ ಇದೇ ಅಣ್ಣಾ ಸಂಸ್ಕೃತಿ ಕುಂಟು ನೆಪ ಹೇಳಿ ಟಿಕೆಟ್ ತಪ್ಪಿಸಿತು. ಅಣ್ಣಾ ಸಂಸ್ಕೃತಿಗೆ ಸೆಡ್ಡು ಹೊಡೆಯುವ, ಸೈಡ್ ಹೊಡೆಯುವ, ಸರೆಂಡರ್ ಆಗದ ಯಾವುದೇ ನಾಯಕನನ್ನು ಸೈಲೆಂಟಾಗಿ ಸೈಡಿಗೆ ಹಾಕಿ ಬಿಡಲಾಗುತ್ತಿದೆ. ಇದಕ್ಕೆ ದಿನ ಬೆಸ್ಟ್ ಉದಾಹರಣೆ ಮೊ‌ಹಮ್ಮದ್ ಆಲಿ.
....................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
...................................................
ಹಾಗೆಂದು ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತಾ ಬಂದಿದ್ದೇ ಈ ಅಣ್ಣಾ ಸಂಸ್ಕೃತಿಯ ಕರಾಳ ಛಾಯೆಯಿಂದ. ಅಣ್ಣಾ ಸಂಸ್ಕೃತಿಯಿಂದ ರೋಸಿ ರೋಸಿ ಹೋದವರೆಲ್ಲ ಹೋಗಿ ಬಿಜೆಪಿಗೆ ಓಟು ಹಾಕಿ ಗೆಲ್ಲಿಸಿ ಬಿಟ್ಟರು. ಈ ಖತರ್ನಾಕ್ ಅಣ್ಣಾ ಸಂಸ್ಕೃತಿ ಇದ್ದ ಕಾರಣದಿಂದಲೇ ಸಂಕಪ್ಪ ರೈ ರಾಮಭಟ್ ರಂತಹ ವೀಕ್ ಕ್ಯಾಂಡಿಡೇಟ್ ಮುಂದೆ ಸೋಲಬೇಕಾಯಿತು. ಇದೇ ಅಣ್ಣಾ ಸಂಸ್ಕೃತಿ ವಿನಯ್ ಕುಮಾರ್ ಸೊರಕೆಗೆ  ಮೀರ್ ಜಾಫರ್ ನಂತೆ ಬೆನ್ನಿಗೆ ಇರಿಯಿತು. ಇದೇ ಅಣ್ಣಾ ಸಂಸ್ಕೃತಿ ಸುಧಾಕರ ಶೆಟ್ಟಿಯನ್ನು ಎರಡೆರಡು ಸಲ ಸೋಲಿಸಿ ಸುಣ್ಣ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಆವತ್ತು ಬಿಜೆಪಿಯಲ್ಲಿ ಶಕ್ವಕ್ಕೆಯ ದೊಡ್ಡ ಬಂಡಾಯ ಇದ್ದರೂ ಬೊಂಡಾಲ ಜಗನ್ನಾಥ ಶೆಟ್ಟಿ ಎಂಬ ಯುವ ನಾಯಕನನ್ನು ಸೋಲಿಸಿ ದೇಶ ಭಕ್ತರ ಮಲ್ಲಿಕಕ್ಕೆ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿತು. ಇದೇ ಅಣ್ಣಾ ಸಂಸ್ಕೃತಿ ಸಿಟ್ಟಿಂಗ್ ಎಂಎಲ್ಎ ಶಕ್ವಕ್ಕೆ ವಿನಾಕಾರಣ ಸೋಲುವಂತೆ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಹೇಮನಾಥ ಶೆಟ್ಟಿಯನ್ನು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಬಿಟ್ಟಿತು. ಇದೀಗ ಪೂಡಾ ಅಧ್ಯಕ್ಷ ಪಟ್ಟಕ್ಕೆ ಫೈಟ್. ಆಲಿ ಹೆಸರಿನ ಜೊತೆಗೆ ಚಿಕ್ಕ ಚಿಕ್ಕ ಹೆಸರುಗಳ ದೊಡ್ಡ ಪಟ್ಟಿ. ಆಲಿಯನ್ನು ಮುಗಿಸಲು ಇನ್ನಿಲ್ಲದ ಪ್ರಯತ್ನ. ಇಡೀ ಅಣ್ಣಾ ಲೋಕಕ್ಕೆ ನೈಟ್ ನಿದ್ದೆ ಇಲ್ಲ. ಅಣ್ಣಾ ಸಂಸ್ಕೃತಿಯ ವಿಕಿರಣದಿಂದ ಹೊರಗಿರುವ ಜನನಾಯಕ ಶಾಸಕರ ನಿರ್ಧಾರ ಯಾವ ರೀತಿ ಇದೆ ಎಂದು ಕಾದು ನೋಡಬೇಕಿದೆ.
ಯುವರ್ ಆನರ್,
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳ ಗ್ಲೂಕೋಸ್ ನಿಂದ ಐಸಿಯೂನಲ್ಲಿರುವ ಪುತ್ತೂರು ಕಾಂಗ್ರೆಸ್ ಅಣ್ಣಾ ಸಂಸ್ಕೃತಿ ಎಂಬ ಭೀಕರ ಕಾಯಿಲೆಯಿಂದ ಬಳಲಿ ಬೆಂಡಾಗಿದೆ. ಇಷ್ಟು ವರ್ಷಗಳ ಕಾಲವೂ ಮುಸ್ಲಿಂ ಮತಗಳಿಂದಲೇ ಉಸಿರಾಡಿದ ಕಾಂಗ್ರೆಸ್ ಪಕ್ಷದ ಅಣ್ಣಾ ಸಂಸ್ಕೃತಿ ಇಲ್ಲಿ ತನಕ ಯಾವುದೇ ಮುಸ್ಲಿಂ ನಾಯಕನ ಬೆಳೆಯಲು ಬಿಡಲಿಲ್ಲ ಇನ್ನು ಬಿಡುವುದೂ ಇಲ್ಲ. ಅಣ್ಣಾ ಸಂಸ್ಕೃತಿಯ  ಅಷ್ಟೂ ಬೆದರಿಕೆಗಳನ್ನು ಮೆಟ್ಟಿ ನಿಂತ ಮೊಹಮ್ಮದ್ ಆಲಿಯಂತಹ ಡ್ಯಾಶಿಂಗ್ ಲೀಡರ್ ಪರವಾಗಿ ಪುತ್ತೂರಿನ ಅಷ್ಟೂ ಮುಸ್ಲಿಂ ಸಮುದಾಯ ನಿಲ್ಲಬೇಕಾಗಿದೆ. ಓಟ್ ಮಾಡಲು ಮುಸ್ಲಿಮರು ಬೇಕು ಆದರೆ ಅವರ ನಾಯಕನನ್ನು ಪಾತಾಳಕ್ಕೆ ತುಳಿಯುವುದು ಯಾವ ನ್ಯಾಯ ಎಂದು ಸಮಸ್ತ ಮುಸ್ಲಿಂ ಸಮುದಾಯವೂ ಆಲೋಚಿಸುವ ಸಮಯ ಬಂದಿದೆ. ವಿನಯ್ ಕುಮಾರ್ ಸೊರಕೆ ನಂತರ ಆಗ ಪವರ್ ಫುಲ್ ಆಗಿದ್ದ ಆಲಿಯವರನ್ನು ಬಿಟ್ಟು ಸುಧಾಕರ ಶೆಟ್ಟಿಗೆ ಪಟ್ಟ ಕಟ್ಟಲಾಯಿತು. ಶೆಟ್ರು ಎರಡೆರಡು ಸಲ ಸೋತರು. ಮುಸ್ಲಿಂ ಸಮುದಾಯದ ಮತ್ತು ಸರ್ವ ಸಮ್ಮತದ ಲೋಕಲ್ ಅಭ್ಯರ್ಥಿ ಆಲಿ ಇದ್ದರೂ ಮಲ್ಲಿಕಾ ಪ್ರಸಾದ್ ಮುಂದೆ ನಿಲ್ಲಲು ಬಂಟವಾಳದಿಂದ ಬೊಂಡಾಲ ಜಗನ್ನಾಥ ಶೆಟ್ಟಿಯನ್ನು ಬ್ಯಾಂಡ್ ವಾಲಗದಲ್ಲಿ ತರಲಾಯಿತು. ಸಮರ್ಥ ಅಭ್ಯರ್ಥಿ ಆಲಿಚ್ಚ ಇದ್ದರೂ ಶಕ್ವಕ್ಕೆಗೆ ಎರಡು ಸಲ ಟಿಕೆಟ್ ಕೊಡಲಾಯಿತು. ಇದೀಗ ಜನನಾಯಕ ಅಶೋಕ್ ರೈ ಎಂಎಲ್ಎ. ಹಾಗಾದರೆ ಅಣ್ಣಾ ಸಂಸ್ಕೃತಿಯ ಬಿಗಿ ಹಿಡಿತದಲ್ಲಿರುವ ಪುತ್ತೂರು ಕಾಂಗ್ರೆಸ್ಸಿಗೆ ಮುಸ್ಲಿಂ ಸಮುದಾಯದ ಓಟು ಮಾತ್ರ ಬೇಕಾಗಿತ್ತಾ? ಅದಿಲ್ಲದಿದ್ದರೆ ಪುತ್ತೂರು ಕಾಂಗ್ರೆಸ್ ಯಾಕೆ ಆಲಿ ವಿಷಯದಲ್ಲಿ ಹೀಗೆಲ್ಲ ವರ್ತಿಸುತ್ತಿದೆ? ಅವರನ್ನು ಯಾಕೆ ತುಳಿಯುತ್ತಿದೆ? ಅಣ್ಣಾ ಸಂಸ್ಕೃತಿ ಯ ಎರಡು ಟೀಂಗಳು ಯಾಕೆ ಆಲಿಯವರನ್ನು ಪುಟ್ಬಾಲ್ ಮಾಡುತ್ತಿದೆ? ಹಾಗಾದರೆ  ಕಳೆದ ನಾಲ್ಕು ದಶಕಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಹಗಲಿರುಳು ಪಕ್ಷಕ್ಕಾಗಿ ದುಡಿದ ಒಬ್ಬ ಮುಸ್ಲಿಂ ಸಮುದಾಯದ ನಾಯಕನಿಗೆ ಕಡೇ ಪಕ್ಷ ಪುರಸಭೆಯ ಅಧ್ಯಕ್ಷನಾಗುವ ಅರ್ಹತೆಯೂ ಇಲ್ವಾ? ನಾಲ್ಕು ದಶಕಗಳ ನಾಯಕನಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟದಿದ್ದರೆ ಆ ಪಟ್ಟವನ್ನು ಯಾರಿಗೆ ಮೀಸಲಿಡುತ್ತಾರೆ? ಎಂಟನೇ ಕ್ಲಾಸಿನಿಂದ ಕಾಂಗ್ರೆಸ್ ಜೊತೆ ಬಂದಿರುವ ಸರ್ವಧರ್ಮೀಯ, ಜಾತ್ಯತೀತ ನಾಯಕನಿಗೆ ಕೊಡದ ಕಾಂಗ್ರೆಸ್ ಟಿಕೆಟ್ ಪಡೆಯಲು ಬೇರೆ ಯಾರಿಗೆ ಅರ್ಹತೆ ಇದೆ. ಅಣ್ಣಾ ಸಂಸ್ಕೃತಿಯ ಪ್ರಕಾರ ಆಲಿ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪಾ? ಇದನ್ನೆಲ್ಲ ಕೇಳಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು. ಅವರು ಸುಮ್ಮನೆ ಕುಂತರೆ ಇವತ್ತು ಆಲಿ ಮುಂದೆ ಎಲ್ಲರೂ ಮೂಲೆ ಗುಂಪು ನಾಯಕರಾಗುವ ಅಪಾಯಗಳಿವೆ.
...................................................
   ಒಮ್ಮೆ ಹೊಸತೂ ಆಗದೆ, ಮತ್ತೊಮ್ಮೆ ಹಳತೂ ಆಗದೆ ಸದಾ ಉರಿವ ವಿಷಯವೆಂದರೆ ಅದೇ ಜ್ಯೋತಿ.

-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

.....................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

    "ಹಾಗೆಂದು ಸುಬ್ರಹ್ಮಣ್ಯನ ಊರಿಗೆ ಸದ್ಯಕ್ಕೆ ಸುಬ್ರಹ್ಮಣ್ಯ ಪೋಲಿಸರು ಸಾಕು ಅಂತ ಸಾರ್ವಜನಿಕ ಅಭಿಪ್ರಾಯವಿದೆ. ಖಡಕ್ ಎಸ್ಸೈ ಕಾರ್ತಿ & ಟೀಂ ಸುಬ್ರಹ್ಮಣ್ಯದಲ್ಲಿ ಒಳ್ಳೆ ಕೆಲಸ ಮಾಡುತ್ತಿದೆ. ಆದರೂ ಆವತ್ತು ಬೊಳ್ಳಕ್ಕೆ ಬಂದ SNDRF ಮತ್ತು ನಕ್ಸಲರನ್ನು ಓಡಿಸಲು ಬಂದ ANF ಪಡೆಗಳನ್ನು ಇನ್ನೂ ಸುಬ್ರಹ್ಮಣ್ಯದಲ್ಲಿ ಇಟ್ಟುಕ್ಕೊಂಡು ಗಿಳಿ ಸಾಕಿದ ಹಾಗೆ ಯಾಕೆ ಸಾಕುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ANF ಅಲ್ಲಿ ಬಿಳಿನೆಲೆಯಲ್ಲಿ ಬರುತ್ತಿದೆ ಎಂದು ಗೊತ್ತಾಗುತ್ತಲೇ ನಕ್ಸಲರು ಪದ್ರಾಡ್ ಹಾಕಿದ ಜಾಗೆಗಳಲ್ಲಿ ಇನ್ನು ಎರಡು ಮರ್ಯಲ ಪಂತಿ ಕೂಡ ಬರಲ್ಲ. ಆದರೂ ಇನ್ನೂ ANF ಸುಬ್ರಹ್ಮಣ್ಯದಲ್ಲಿದೆ. ಅವರಿಗೆ ವಸತಿ, ಊಟ ಉಪಚಾರ ನಡೆಯುತ್ತಿದೆ. ಹಾಗೆಂದು ಅವರು ಇರಬಾರದು ಎಂದಲ್ಲ. ಆದರೂ ಯಾಕೆ ಅಂತ ಒಂದು ಕುರೆ ಮನಸ್ಸು.

  ಇನ್ನು SNDRF. ಬೊಳ್ಳಕ್ಕೆ ಬಂದವರು. ಬೇಸ ಆಯಿತು, ಕಾರ್ತೆಲ್ ಆಯಿತು, ಆಟಿ,ಸೋಣ ಹಂಡ್ರೆಡ್ ಮೀಟರ್ಸ್ ನಲ್ಲಿ ಓಡಿ ಬಂದು ಬೊಳ್ಳದ ಮೇಲೆ ಬೊಳ್ಳ, ಲೋಡ್, ಲೋಡ್ ಬೊಳ್ಳ ಕೊಟ್ಟು ಅದೂ ಅರಬ್ಬೀಯ ಸಮುದ್ರದಲ್ಲಿ ಹೋಗಿ ಸ್ಟಾಕ್ ಆಯಿತು. ಇನ್ನು ಮಳೆ ಬಂದರೆ ಬೊಳ್ಳ ಬರ್ಪಿ ವರ್ಷ. ಹಾಗೆ ಬೊಳ್ಳದಲ್ಲಿ ಯಾರೂ ಬೊಳ್ಳಕ್ಕೆ ಹೋಗುವುದು ಬೇಡ ಎಂದು SNDRFನ್ನು‌ ಓಡದ ಸಮೇತ ತಂದಿಡಲಾಗಿತ್ತು. ಈಗ ಸದ್ಯಕ್ಕೆ ನಿರ್ನಲ ನಡೆಯುತ್ತಿದೆ. 

ಇನ್ನು ಮಾರ್ನೆಮಿಗೆ ಒಂದು ರೌಂಡು ಮತ್ತು ಬಲಿ ಚಕ್ರವರ್ತಿ ಭೂಲೋಕಕ್ಕೆ ಬರುವ ಟೈಮಲ್ಲಿ ಢಂ..ಢೀಂ ಎಂದು ಒಂದು ರೌಂಡು ಮಳೆ ಬಂದರೆ ಈ ವರ್ಷದ ಆಟ ಮುಗಿಯುತ್ತದೆ. ಆದರೂ ಸುಬ್ರಹ್ಮಣ್ಯದಲ್ಲಿ ಇನ್ನೂ SNDRFನ್ನು ಉಳಿಸಿಕೊಳ್ಳಲಾಗಿದೆ. ಯಾಕೆಂತ ಗೊತ್ತಿಲ್ಲ. ಅವರಿಗೂ ವಸತಿ ವ್ಯವಸ್ಥೆ ಮಾಡಲಾಗಿದ್ದು ಅವರನ್ನು ಅವರ ಹೆಡ್ ಕ್ವಾರ್ಟರ್ಸ್ ಗೆ ಕಳಿಸೋದು ಒಳ್ಳೆದು ಎಂದು ಸಾರ್ವಜನಿಕ ಅಭಿಪ್ರಾಯ ಇದೆ.   
   
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ANF and SNDRF ಯೋಧರಿಗೆ ತಂಗಲು ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಇನ್ನು ಚಳಿಗಾಲ ಕೂಡ ಹಂಡ್ರೆಡ್ ಮೀಟರ್ಸ್ ನಲ್ಲಿ ಬರಲಿದ್ದು ವಸತಿ ವ್ಯವಸ್ಥೆ ಇಲ್ಲದೆ ಸುಬ್ರಹ್ಮಣ್ಯದ ಬೀದಿಗಳಲ್ಲಿ ಮಲಗುವ ಭಕ್ತಾದಿಗಳಿಗೆ ಈ ವ್ಯವಸ್ಥೆ ಕೊಟ್ಟರೆ ಅಜ್ಜಿ ಪುಣ್ಯ ಆದರೂ ಸಿಗಬಹುದು ಎಂಬುದು ಸಾರ್ವಜನಿಕ ಆಶಯ. ಬಹುಶಃ ಜಿಲ್ಲಾಡಳಿತಕ್ಕೆ ಇವರನ್ನು ಇಂಚಿ ಕಳಿಸಿದ ವಿಷಯವೇ ಮರೆತು ಹೋಗಿದೆಯಾ ಹೇಗೆ?

...................................................
   ನಮ್ಮಿಂದ  ಇತರರಿಗೆ  ಅನೇಕ ಉಪಯೋಗಗಳು  ಇವೆ ಎಂದು ಮಾಡಿಕೊಳ್ಳುವುದೂ ನಾವೇ... ನಿಮ್ಮಿಂದ  ಇತರರಿಗೆ  ಏನೂ ಉಪಯೋಗವೇ ಇಲ್ಲ ಎಂದು ಮಾಡಿಕೊಳ್ಳುವುದೂ ನಾವೇ... ಈ  ಎರಡೂ ಪ್ರಕ್ರಿಯೆಗಳು ಒಂದು  ಮನುಷ್ಯ ತನ್ನ ಹೆಸರಿಗಾಗಿ ಮಾಡುತ್ತಾನೆ... ಎರಡನೆಯದು  ತನ್ನನ್ನೇ ಎಲ್ಲರೂ ಓಲೈಸಿಕೊಂಡು ಬರಲೆಂದು ಮಾಡಿಕೊಳ್ಳುತ್ತಾನೆ. 

-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

.....................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget