"ಹಲೋ" ಅಂತ ಅತ್ಲಕಡೆಯಿಂದ ಇಂಪಾದ ಪೊಣ್ಣು ಸ್ವರ. ಆ ಇಂಪಿಗೆ ಎಂಬತ್ತರ ವಯಸ್ಸಿನ ಟಿಕೆಟ್ ರೆಡಿಯಾದವನೂ ಸರ್ತ ಆಗ ಬೇಕು. ಅಂಥ ಸ್ವರ. ಇತ್ಲಕಡೆಯಿಂದ ಯಾವುದೋ ಹುಡುಗ. ಅದೊಂದು ಮಿಸ್ಸಿಂಗ್ ಕಾಲ್. ಇಂಪಾದ ಸ್ವರ ಮಿಸ್ಸಾಗಿ ಬಂದ್ರೆ ಯಾವ ಹುಡುಗನೂ ಬಿಡಲ್ಲ. ಮರು ದಿನ ಪುನಃ ಅದೇ ಕೋಗಿಲೆ ಕಾಲ್. ಇತ್ಲಗಿನ ಹುಡುಗನಿಗೆ ಅನಾಯಾಸವಾಗಿ ಛಾನ್ಸ್ ಸಿಕ್ಕ ಸಂಭ್ರಮ. ಮೊದಲು ಪರಿಚಯ, ಆಮೇಲೆ ಯೋಗಕ್ಷೇಮ, ಅದರ ನಂತರ ಉಭಯಕುಶಲೋಪರಿ. ನಂತರ ಫ್ರೆಂಡ್ ಶಿಪ್, ಆಮೇಲೆ ಲವ್ವು ಕಡೇಗೆ ಜೀವ. ಇಷ್ಟು ಫೋನಲ್ಲಿ ಆದ ಮೇಲೆ ಹುಡುಗನ ಕೈಕಾಲು ನೆಲದಲ್ಲಿ ನಿಲ್ಲಲ್ಲ. ಹುಡುಗ ರೈಲು ಬೇಕಾದರೂ ಬಿಟ್ಟಾನು ಆದರೆ ಆ ಮಿಸ್ ಕಾಲ್ ಹುಡುಗಿಯನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಬಂದಾಗ ಹುಡುಗನನ್ನು "ಮುಂದಿನ ಕೆಲಸಗಳಿಗೆ ಬಾ" ಎಂದು ಕೋಗಿಲೆ ಕರೆಯುತ್ತದೆ. ಹುಡುಗ ಸಲಕರಣೆಗಳನ್ನು ಹಿಡಿದುಕೊಂಡು ಹುಡುಗಿ ಹೇಳಿದ ಸ್ಪಾಟಿಗೆ ಬರುತ್ತಾನೆ.
ಬೆಳ್ಳಾರೆ ಸಮೀಪದ ಪಂಜಿಗಾರು ಪರಿಸರದಲ್ಲಿ ಹನಿ ಟ್ರ್ಯಾಪ್ ಗ್ಯಾಂಗೊಂದು ಸಕ್ರೀಯವಾಗಿದೆ ಮತ್ತು ಕೆಲವು ಹುಡುಗರನ್ನು ಔಟ್ ಮಾಡಿದೆ ಎಂಬ ಸುದ್ದಿ ಇದೆ. ಬೆಳ್ಳಾರೆ ಪರಿಸರದ ಕೆಲವು ಪಡ್ಡೆಗಳನ್ನು ಅಥವಾ ಬೋರಿ ಕಂಜಿಗಳನ್ನು ಟಾರ್ಗೆಟ್ ಮಾಡಿ ಹುಡುಗಿ ಕೈಯಲ್ಲಿ ಕಾಲ್ ಮಾಡಿಸಲಾಗುತ್ತದೆ. ಹುಡುಗಿ ಕಾಲ್, ಅದರಲ್ಲೂ ಕೋಗಿಲೆ ಕಾಲ್ ಅಂದ ಕ್ಷಣ ಹುಡುಗ ಸರೆಂಡರ್ ಆಗಿ ಬಿಡುತ್ತಾನೆ. ಎರಡ್ಮೂರು ದಿವಸದಲ್ಲಿ ಅಥವಾ ವಾರದೊಳಗೆ ಕೋಗಿಲೆ ಹುಡುಗನನ್ನು ಪಂಜಿಗಾರಿಗೆ ಸ್ವಾಗತ ಸುಸ್ವಾಗತ ಮಾಡುತ್ತದೆ. "ನಾಳೆ ಪಂಜಿಗಾರಿಗೆ ಬಂದು ಕಾಲ್ ಮಾಡು" ಎಂಬ ಕೋಗಿಲೆಯ ಇಂಪಾದ ಆಹ್ವಾನಕ್ಕೆ ಹುಡುಗ ಸತ್ತೇ ಹೋಗುತ್ತಾನೆ. ಮರುದಿನ ಹುಡುಗ ಬಾಡಿಗೆ ಅಭ್ಯಂಜನ ಸ್ನಾನ ಮಾಡಿ, ಗಡ್ಡ ಟ್ರಿಂ ಮಾಡಿಸಿ, ಬಾಕ್ಸ್ ಕಟ್ ಮಾಡಿಸಿ, ಸೆಂಟು ಬಳಿದು, ಬಾಡಿ ಸ್ಪ್ರೇ ಮಾಡಿ, ಪೌಡರ್ ಹಾಕಿ ಜಾಮ್ ಜೂಮೆಂದು ಪಂಜಿಗಾರಿಗೆ ಚಿತ್ತೈಸಿ ಕೋಗಿಲೆಗೆ ಕಾಲ್ ಮಾಡುತ್ತಾನೆ. "ಗುಳಿಗ್ಗನ ಕಟ್ಟೆದಡೆ ಬಲೆ" ಎಂದು ಕೋಗಿಲೆ ರಾಗವಾಗಿ ಹೇಳುತ್ತದೆ. ಹುಡುಗ ಹಾರಿಕ್ಕೊಂಡು ಗುಳಿಗ್ಗನ ಕಟ್ಟೆಯತ್ರ ಬರುತ್ತಾನೆ. ಅಲ್ಲಿ ಬಲ್ಲೆ ಮಾರಾಯ್ರೆ, ಗುಳಿಗ್ಗ ಬೇರೆ ಇದ್ದಾನೆ. ಹುಡುಗನಿಗೆ ಧಸಕ್ಕೆಂದು ಆಗುವಷ್ಟರಲ್ಲಿ ಕೋಗಿಲೆ ಪ್ರತ್ಯಕ್ಷ. ಕಪುಡ ಕಾಳಿ, ಕಕ್ಕೆಯಷ್ಟು ಕಪ್ಪು ಹಲ್ಲು ಮಾತ್ರ ಬಿಳಿ, ಲೋಕಲ್ ಕಾಟು. ಆ ಕೋಗಿಲೆಯನ್ನು ನೋಡಿಯೇ ಹುಡುಗ ಧರೆಗಿಳಿದು ಹೋಗುತ್ತಾನೆ. ಮತ್ತೆಂಥ ಮಾಡೋದು, ಬಂದ ಕರ್ಮಕ್ಕೆ ಹುಳ ಬಿಟ್ಟು ಹೋಗುವ ಎಂದು ಹುಡುಗ ಕೋಗಿಲೆ ಹಿಡಕ್ಕೊಂಡು ಬಲ್ಲೆಯಲ್ಲಿ ಮಾಯವಾಗುತ್ತಾನೆ. ಅಷ್ಟೇ.
ಹಾಗೆ ಪಂಜಿಗಾರು ಗುಳಿಗ್ಗನ ಕಟ್ಟೆಯತ್ರ ಬಲ್ಲೆ ಅಲ್ಲಾಡಲು ರೆಡಿಯಾದಗ "ಏರ್ಯವು ಬಲ್ಲೆಡ್, ಪಿದಾಯಿ ಬಲೆ" ಎಂಬ ಕೂಗು ಬಲ್ಲೆ ಹೊರಗಿನಿಂದ. ಹುಡುಗನ ಸಲಕರಣೆಗಳನ್ನು ಮಡಚಿಟ್ಟು ಹೊರಗೆ ಬಂದು ನೋಡಿದರೆ ವೆಸ್ಟ್ ಇಂಡೀಸ್ ಟೀಮಿನಂಥ ಒಂದು ಟೀಮ್. ಎಲ್ಲರೂ ಕಪ್ಪು ಕಪ್ಪು, ಕರ್ರಗೆ. ನಂತರ ಹುಡುಗನ ವಿಚಾರಣೆ, ಕೆಬಿತ್ತಕಂಡೆಗೆ ಎರಡು, ಪೈಪ್ ಲೈನಿಗೆ ಒಂದು. ಒಂದೋ ಪೋಲಿಸ್ ಅಥವಾ ನಮಗೆ ಇಂತಿಷ್ಟು ಎಂದು ವೆಸ್ಟ್ ಇಂಡೀಸ್ ಟೀಂ ಬೆದರಿಕೆ ಹಾಕುತ್ತದೆ. ಪೋಲಿಸ್ ಗಿಂತ ಇವರೇ ಆಗಬಹುದು ಎಂದು ಹುಡುಗ ವೆಸ್ಟ್ ಇಂಡೀಸ್ ಟೀಂನೊಂದಿಗೆ ಸೆಟಲ್ ಮೆಂಟ್ ಮಾಡಿಕ್ಕೊಂಡು ಗುಳಿಗ್ಗನಿಗೆ ಒಂದು ನಮಸ್ಕಾರ ಮಾಡಿ ಪಂಜಿಗಾರು ಬಿಡುತ್ತಾನೆ.
ಬೆಳ್ಳಾರೆ ಸಮೀಪದ ಪಂಜಿಗಾರು ಪರಿಸರದಲ್ಲಿ ಈ ಟೈಪಿನ ಒಂದು ನಾಟಕ ಹಲವು ಪ್ರದರ್ಶನಗಳನ್ನು ಕಂಡಿದೆ ಎಂದು ತಿಳಿದುಬಂದಿದೆ. ಆದರೆ ಯಾವ ಹುಡುಗನೂ ಮಾನ ಮರ್ಯಾದೆಗೆ ಅಂಜಿ ಈ ಬಗ್ಗೆ ಬೆಳ್ಳಾರೆ ಪೋಲಿಸರಿಗೆ ಕಂಪ್ಲೈಂಟ್ ಕೊಡದ ಕಾರಣ ಕೋಗಿಲೆ ಮತ್ತು ವೆಸ್ಟ್ ಇಂಡೀಸ್ ಟೀಮ್ ಮತ್ತೇ ಮತ್ತೇ ಸಕ್ರೀಯವಾಗುತ್ತಿದೆ ಎಂದು ತಿಳಿದುಬಂದಿದೆ. ಗುಳಿಗ್ಗನ ಕಟ್ಟೆಯಿಂದ ಕಾಲ್ ಮಾಡುವ ಕೋಗಿಲೆಯನ್ನು ಮೀಟ್ ಮಾಡಲು ಹೋಗುವ ಹುಡುಗನಿಗೆ ಅಲ್ಲಿ ವೆಸ್ಟ್ ಇಂಡೀಸ್ ಟೀಮ್ ಇರುತ್ತದೆ ಎಂಬ ಮಾಹಿತಿ ಇರೋದಿಲ್ಲ. ಹಾಗಾಗಿ ಅಲ್ಲಿ ಮ್ಯಾಚ್ ಸೋತು ಬರುತ್ತಾನೆ. ಹಾಗಾಗಿ ಇನ್ನು ಮುಂದೆ ಯಾರಿಗಾದರೂ ಗುಳಿಗ್ಗನ ಕಟ್ಟೆ ಕೋಗಿಲೆ ಕಾಲ್ ಮಾಡಿ ಕಟ್ಟೆ ಹತ್ರ ಬರ್ಲಿಕ್ಕೆ ಹೇಳಿದರೆ ಹಾಗೆ ಹೋಗಬೇಡಿ. ಯಾಕೆಂದರೆ ಅಲ್ಲಿ ವೆಸ್ಟ್ ಇಂಡೀಸ್ ಟೀಮ್ ಇದೆ. ನೀವು ಈಚೆಯಿಂದ ಹೋಗುವಾಗಲೇ ಬೆಳ್ಳಾರೆ ಪೋಲಿಸರ ಆಸ್ಟ್ರೇಲಿಯಾ ಟೀಮನ್ನು ಕರಕ್ಕೊಂಡೇ ಹೋಗಿ. ಅಲ್ಲಿ ಅವರು ಸಿಕ್ಸರ್, ಬೌಂಡರಿ ಬಾರಿಸುವಾಗ ಬಲ್ಲೆ ಟೀಂಗೆ ಬುದ್ಧಿ ಬರುತ್ತದೆ. ಇಲ್ಲದಿದ್ದರೆ ಇನ್ನೂ ಅನೇಕ ಅಮಾಯಕ ಬೋರಿಕಂಜಿಗಳು ಬೀಫ್ ಆಗುವ ಅಪಾಯಗಳಿವೆ.
............................................
ಗಿಡ ನಾಟಿ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ ಟ್ರಸ್ಟ್, ಪಂಜ ವಲಯ, ಸಾಮಾಜಿಕ ಅರಣಿಕರಣ ಕಾರ್ಯಕ್ರಮದಡಿಯಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು...
ಪಂಜ ವಿಪತ್ತು ಘಟಕ ಹಾಗೂ ಕೂತ್ಕುಂಜ ಒಕ್ಕೂಟದ ವತಿಯಿಂದ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಇವರು ಗಿಡ ನೆಡುವ ಮುಖಾಂತರ ಚಾಲನೆ ನೀಡಿದರು. ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾದ ಶ್ರೀಮತಿ ಪವಿತ್ರ,,ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ಮೋನಪ್ಪ ಗೌಡ ಬೊಳ್ಳಜೆ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಿ, ಸುಳ್ಯ ತಾಲ್ಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡ, ತಾಲ್ಲೂಕು ಕೃಷಿ ಅಧಿಕಾರಿ ರಮೇಶ್,ಘಟಕ ಪ್ರತಿನಿಧಿ ವಿಶ್ವನಾಥ ಸಂಪ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಸೇವಾಪ್ರತಿನಿಧಿ ಕವಿತಾ, ಮೇಲ್ವಿಚಾರಕಕಿ ಕಲಾವತಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು..
..........................................
ನಿದ್ದೆ ಮಾಡುವವರ ಗಮನಕ್ಕೆ:
ನಿದ್ದೆ ಮಾಡುತ್ತಿರುವವರ ಎಬ್ಬಿಸಬಾರದು ಎಂದು ಅಂದು ಹಿರಿಯರು ಹೇಳುತ್ತಿದ್ದರು. ಆದರೀಗ ಹಾಗಾಗುತ್ತಿಲ್ಲ. ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ನಿದ್ದೆ ಮಾಡಲು ಬಿಡದೆ ಎಬ್ಬಿಸಿಯಾದರೂ ಕೆಲಸ ಮಾಡುತ್ತಾರೆ. ಮಾಡಿಸುತ್ತಾರೆ... ನಿದ್ದೆಯಿಂದ ಯಾಕೆ ಎಬ್ಬಿಸಬಾರದು ? ಎಬ್ಬಿಸಿದರೆ ಏನಾಗುತ್ತದೆ ? ಅಂದು ಹಿರಿಯರು ನುಡಿದ ಈ ಮಾತಿನ ಅರ್ಥ ಏನಾಗಿರಬಹುದು ?
ಯಾಕೆಂದರೆ ನಿದ್ದೆ ಎಂದರೆ, ಮಾನವನ ಬಾಳಿಗೆ ಮುತ್ತು, ರತ್ನ ವಜ್ರ ವೈಢೂರ್ಯಕ್ಕಿಂತಲೂ ಹಿರಿದು ಎನ್ನಬಹುದು.. ಆಯುರ್ವೇದ ಶಾಸ್ತ್ರದ ಪ್ರಕಾರ ನಿದ್ದೆ ಅಂದಾಜು 8 ಘಂಟೆ ಕಾಲ ಆದರೂ ಬೇಕೆಂದರೂ ಕೂಡಾ ಇಲ್ಲವೆಂದರೆ ಅನಾರೋಗ್ಯ ಕಾಡಬಹುದು ಎಂದು ಹೇಳುತ್ತಾರೆ.. ಇದು ಒಂದಾದರೆ ಇನ್ನೊಂದು ಏನೆಂದರೆ ಯಾರು ಯಾರನ್ನು ನಿದ್ದೆಯಿಂದ ಎಬ್ಬಿಸುತ್ತಾರೋ ಅವರೇ ನಿದ್ರಿಸುವವನ ಕರ್ಮಗಳನ್ನು ಹೊತ್ತು ಕೊಳ್ಳಬೇಕಾಗುತ್ತದೆ. ಹಾಗೆಯೇ ಅವನ ನಂತರದ ಮುಂದಿನ ಭವಿಷ್ಯವನ್ನೂ ಕೂಡಾ ನಿದ್ದೆಯಿಂದ ಎಬ್ಬಿಸಿದವರೇ ಪರೋಕ್ಷವಾಗಿ ಎದುರಿಸ ಬೇಕಾಗುತ್ತದೆ.. ಅದು ಕೆಲವರಿಗೆ ಪ್ಲಸ್ ಆಗಬಹುದು.. ಹೇಗೆಂದರೆ ನಿದ್ರಿಸುವವ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಕನಸು ಕಾಣುತ್ತಾ ನಿದ್ರಿಸುತ್ತಿದ್ದರೆ, ಎಬ್ಬಿಸಿದವ ಅದನ್ನು ಸಾಕ್ಷಾತ್ಕರಿಸಬಹುದು.. ಒಂದು ವೇಳೆ ನಿದ್ರಿಸುತ್ತಿರುವವ ಏನಾದರೂ ಕೆಟ್ಟ ಕೆಲಸಕ್ಕೆ ಯೋಚನೆ ಮಾಡುವವನಾಗಿದ್ದರೆ, ಎಬ್ಬಿಸಿದವ ಅವನ ಕೆಟ್ಟ ಕರ್ಮಗಳನ್ನು ಹೊತ್ತು ಕೊಳ್ಳಬೇಕಾಗುತ್ತದೆ.. ಇದರಿಂದ ತೊಂದರೆಗೊಳಪಡ ಬೇಕಾಗುತ್ತದೆ.. ಇದೇ ಕಾರಣಕ್ಕೆ ಹಿರಿಯರು ನಿದ್ರಿಸುವವನ ಮೈ ಮುಟ್ಟದಿರಿ.. ಎಚ್ಚರಿಸದಿರಿ ಎಂದರು..ಅದೇ ರೀತಿ ಅವರು ತಮ್ಮ ಸೂಕ್ಷ್ಮ ಶರೀರದಿಂದ ಇನ್ನಾವುದೋ ಲೋಕಕ್ಕೆ ಪಯಣಿಸುತ್ತಿರುತ್ತಾರೆ.. ಅದು ಅವರ ಕೆಲಸವಾಗಿರುತ್ತದೆ..ಆ ಸಮಯದಲ್ಲಿ ನಾವು ಎಚ್ಚರಿಸಿದಾಗ ಸಿಡಿದೇಳಬಹುದು.. ಸೂಕ್ಷ್ಮ ಶರೀರದಲ್ಲಿರುವ ನೆಗೆಟಿವ್ ನಮಗೇ ಉಪದ್ರ ಕೊಡುವ ಸಂದರ್ಭ ಇರುತ್ತದೆ.. ಹಾಗಾಗಿ ಇಂತಹಾ ಸಂದರ್ಭವನ್ನು ನಾವು ಯಾರ್ಯಾರದನ್ನೋ ಅನುಭವಿಸುತ್ತಿರುತ್ತೇವೆ.. ಕೊನೆಗೆ ಹಣೆಬರಹ ಅನ್ನುತ್ತೇವೆ..
..........................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment