ಈಗ ಸಾಲ ತೆಗೆಯೋದು ಭಾರೀ ಕಷ್ಟ ಮಾರಾಯ್ರೆ. ಸಾಲಗಾರರಿಗೆಲ್ಲ ಸಿಬಿಲ್ ಬಡಿದು ಬ್ಯಾಂಕ್ ಕಡೆ ತಲೆ ಹಾಕಿ ಮಲಗ್ಲಿಕ್ಕೂ ಆಗದ ಪರಿಸ್ಥಿತಿ. ಸಾಲಗಾರರ ಸಿಬಿಲ್ ರೇಟು ತೋರಿಸುವ ಮುಳ್ಳು ಲೆಫ್ಟಿಗೆ ಕೆಳಗೆ ಬಂದು ಬೀಳುವ ಪರಿಸ್ಥಿತಿ ಇದೆ. ಹಾಗಾಗಿ ಈಗ ಹೆಚ್ಚಿನ ಸಾಲಗಾರರು ಹೆಂಡತಿಗೆ ದಮ್ಮಯ್ಯ ದಕ್ಕಯ್ಯ ಹಾಕಿ, ಅವಳ ಕೈಕಾಲು ಹಿಡಿದು ಅವಳ ಕುತ್ತಿಗೆದ್ದು, ಕೈಯಿದ್ದು, ಕೆಬಿತ್ತವು, ಮೂಂಕುದ ಟಿಕ್ಕಿ, ಮಾಟಿ, ಉಲಿಂಗಿಲ ಹೀಗೆ ಎಲ್ಲವನ್ನೂ ತಂದು ತಿಂದಾಗಿದೆ.
.........................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
.........................................
ಬ್ಯಾಂಕುಗಳು, ಸೊಸೈಟಿಗಳು ಸಾಲಗಾರರ ಅಡಗುದಾಣಗಳ ಮೇಲೆ ನಿರಂತರ ಧಾಳಿ ನಡೆಸಿದರೂ ಸಾಲ ವಸೂಲಾತಿ ಆಗುತ್ತಿಲ್ಲ. ಇದೀಗ ಈ ಸಾಲಗಾರರ ಕಷ್ಟಕ್ಕೆ ಕರ ಕರ ಕರಗಿರುವ ಬಿಳಿನೆಲೆಯ ಸೊಸೈಟಿಯೊಂದು ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆ, ಯೋಚನೆಯಲ್ಲಿದೆ. ಈ ಯೋಜನೆ ಪ್ರಾಯೋಗಿಕವಾಗಿ ಈಗಾಗಲೇ ನಡೆದಿದ್ದು ಸೊಸೈಟಿ ಅದರಲ್ಲಿ ಯಶಸ್ವಿಯೂ ಆಗಿದೆ ಎಂದು ತಿಳಿದುಬಂದಿದೆ.
ಹಾಗೆಂದು ಬಿಳಿನೆಲೆ ಊರಿನಲ್ಲಿ ಒಂದು ಚಿಕ್ಕ ಸೊಸೈಟಿ ಇದೆ. ಈ ಸೊಸೈಟಿ ಇದೀಗ ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಿದೆ. ಸದ್ರಿ ಸೊಸೈಟಿಯ ದೇಶಭಕ್ತರ ಡೈರೆಕ್ಟರ್ ದೇವರ ಪಾಲಿನ ಚಿದಣ್ಣ ಅಂದಾಜು ಎಪ್ಪತ್ತು ಸಾವ್ರ ರೂಪಾಯಿಗಳ ವನ್ ಗ್ರಾಂ ಚಿನ್ನ ತಂದು ವರ್ಷದ ಹಿಂದೆ ಅಡವಿಟ್ಟು ದುಡ್ಡು ಕ್ಯಾಶ್ ಮಾಡಿ ಕಿಸೆಗೆ ಹಾಕಿದ್ದರು. ಯಾರದ್ದೂ ಸುದ್ದಿ ಇಲ್ಲ. ವರ್ಷ ನಂತರ ಮೂರು ತಿಂಗಳ ಹಿಂದೆ ಲೋನ್ ರಿನಿವಲ್ ಗೆ ಬಂದಾಗ ಚಿದಣ್ಣನ ಪಿತ್ತಳೆ ಪಿದಾಯಿ ಬಿದ್ದಿದೆ. Inspection ಗೆ ಬಂದ್ದಿದ್ದ ಮೇಲಿನವರು ಚಿದಣ್ಣನ ಚಿನ್ನವನ್ನು ತಿಕ್ಕಿ ತಿಕ್ಕಿ ನೋಡಿದರೆ ಚಿನ್ನ ಸಿಕ್ಕಿಬಿದ್ದಿದೆ. ಕೂಡಲೇ ಬೋರ್ಡ್ ಮೀಟಿಂಗ್ ನಡೆಸಿದ ದೇಶಭಕ್ತರು ಕೇಸನ್ನು ಸಿಂಗಲ್ ಟೀ ಮತ್ತು ಬಿಸ್ಕತ್ತಿನಲ್ಲಿ ಮುಗಿಸಿ ಸುದ್ದಿ ಪಿದಾಯಿ ಹೋಗದ ಹಾಗೆ ತಡೆ ಕಟ್ಟಿ ತಗಡಲ್ಲಿ ಬರೆಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ಈ ಬಗ್ಗೆ ಚಿದಣ್ಣನಲ್ಲಿ ಪ್ರಶ್ನೆ ಇಟ್ಟರೆ " ನನಗೇನೂ ಗೊತ್ತಿಲ್ಲದ ಬಾಲೆ ನಾನು. ಪಾ...ಪ. ನಾನು.ಕೊಂಬ ಬೆರಳು ಚೀಪುವ ನನಗೆ ಈ ಚಿನ್ನವನ್ನು ನನ್ನ ಹೆಂಡತಿ ಕಡೆಯವರು ಕೊಟ್ಟಿದ್ದು, ಅದನ್ನು ನಾನು ಹಾಗೆ ತಂದು ಸೊಸೈಟಿಯಲ್ಲಿ ಇಟ್ಟಿದ್ದೇನೆ". ಎಂದು ಆಕಾಶವಾಣಿಯಲ್ಲಿ ಬಿಟ್ಟಿದ್ದಾರೆ. ಹಾಗಾದರೆ ತಪ್ಪು ಯಾರದ್ದು ಮಾರಾಯ್ರೆ? ರಾಂಪಣ್ಣದ್ದಾ?
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
....................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
Post a Comment