ಕಂದ್ರಪ್ಪಾಡಿ ಶಾಲೆಗೆ ಕಳೆದ ವರ್ಷ ನೂರು ವರ್ಷ. ದೊಡ್ಡ ಫಂಕ್ಷನ್ ಇತ್ತು. ಗೌಜಿಯೋ ಗೌಜಿ. ಈಗ ನೂರ ಒಂದನೇ ವರ್ಷದಲ್ಲಿ ಶಾಲೆ ನಡೆಯುತ್ತಾ ಇದೆ. ಆದರೆ ಶತಮಾನೋತ್ಸವದ ಸವಿ ನೆನಪಿಗಾಗಿ ಪಬ್ಲಿಷ್ ಆಗ ಬೇಕಾಗಿದ್ದ ಸ್ಮರಣ ಸಂಚಿಕೆ ಮಾತ್ರ ಇನ್ನೂ ಹೊರಗೆ ಬಂದಿಲ್ಲ. ಸ್ಮರಣ ಸಂಚಿಕೆಯನ್ನು ಜನ ಕಾಯುತ್ತಾ ಇದ್ದಾರೆ ಮಾರಾಯ್ರೆ. ಪ್ರಿಂಟ್ ಮಾಡ್ಲಿಕ್ಕೆ ಎಂಥ ಕಾಕಜಿ ಇಲ್ವಾ?
ಹಾಗೆಂದು ಕಂದ್ರಪ್ಪಾಡಿ ಶಾಲೆಯ ಬಗ್ಗೆ ಮತ್ತು ಶತಮಾನೋತ್ಸವ ಸಂಭ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಈ ಸಂಚಿಕೆ ಕೊಡಬೇಕಿತ್ತು. ಶಾಲೆಯ ಇತಿಹಾಸವನ್ನು ನೆನಪಿನ ಕಪಾಟಿನಲ್ಲಿ ಇಡಲು ಈ ಸಂಚಿಕೆ ಕಂದ್ರಪ್ಪಾಡಿ ಜನರಿಗೆ ಬೇಕೆ ಬೇಕಿತ್ತು. ಶಾಲೆಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮತ್ತು ಇತಿಹಾಸವನ್ನು ಇತಿಹಾಸವಾಗಿಸಲು ಈ ಸ್ಮರಣ ಸಂಚಿಕೆ ಪಬ್ಲಿಷ್ ಆಗಲೇ ಬೇಕಿತ್ತು. ಕಂದ್ರಪ್ಪಾಡಿ ಶಾಲೆಯ ಸ್ಮರಣ ಸಂಚಿಕೆ ಇತಿಹಾಸ ಆಗಲೇ ಬೇಕೇಂದೇ ಅದರ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು.
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಆದರೆ ಎಲ್ಲಿದೆ ಸ್ಮರಣ ಸಂಚಿಕೆ? ಹಾಗೆಂದು ಸ್ಮರಣ ಸಂಚಿಕೆಗೆ ಲೇಖನಗಳನ್ನು ಬರೆಸಲಾಗಿತ್ತು, ಕವನಗಳನ್ನು, ಕತೆಗಳನ್ನು ಬರೆಸಲಾಗಿತ್ತು, ಶಾಲೆಯ ಶಿಲ್ಪಿಗಳ ಬಗ್ಗೆ, ದಾನಿಗಳ ಬಗ್ಗೆ, ಒಂದನೇ ಕ್ಲಾಸಿನಲ್ಲಿ ಹೊಕ್ಕು ಏಳನೇ ಕ್ಲಾಸಿಂದ ಹೊರಗೆ ಬಂದು ದೊಡ್ಡ ದೊಡ್ಡ ಇತಿಹಾಸ ನಿರ್ಮಾಣ ಮಾಡಿದ ಹಳೇ ವಿದ್ಯಾರ್ಥಿಗಳ ಪರಿಚಯ ಹೀಗೆ ಎಲ್ಲವನ್ನೂ ಸ್ಮರಣ ಸಂಚಿಕೆಗಾಗಿ ರೆಡಿ ಮಾಡಲಾಗಿತ್ತು.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಜಾಹೀರಾತುದಾರರು, ಶುಭಾಶಯ ಕೋರಿದವರು ಹೀಗೆ ಎಲ್ಲರೂ ಸ್ಮರಣ ಸಂಚಿಕೆಗೆ ದುಡ್ಡು ಕೊಟ್ಟು ಇನಿ ಬರ್ಪುಂಡು, ಎಲ್ಲೆ ಬರ್ಪುಂಡು, ಇತ್ತೆ ಬತ್ತ್ಂಡ್ ಎಂದು ಶಬರಿ ರಾಮನನ್ನು ಕಾದ ಹಾಗೆ ಕಾದು ಕಾದು ಕಾದು ಹೋಗಿದ್ದಾರೆ.
ಆದರೆ ಇನಿ ಮುಟ್ಟ ಸ್ಮರಣ ಸಂಚಿಕೆಯ ಒಂದು ತುಂಡು ಬಟರ್ ಶೀಟ್ ಕೂಡ ಹೊರಗೆ ಬಂದಿಲ್ಲ. ಸ್ಮರಣ ಸಂಚಿಕೆ ಪ್ರಿಂಟಿಗೆ ಬಿಡ್ಲಿಕ್ಕೆ ದುಡ್ಡಿಲ್ವಾ ಹೇಗೆ? ಸಂಪಾದ-ಕರು ಯಾರು? ಅವರು ಎಲ್ಲಿದ್ದಾರೆ?ಪ್ರೆಸ್ ಸಿಕ್ಕಿಲ್ವಾ? ಪ್ರಿಂಟಿಗೆ ಕಾಕಜಿ ಇಲ್ವಾ? ಎಂತ ಕತೆ ಅಂತಲೇ ಗೊತ್ತಾಗ್ತಾ ಇಲ್ಲ. ಒಂದು ಸಂಸ್ಥೆಯ ಸವಿ ನೆನಪಿನ ಸ್ಮರಣ ಸಂಚಿಕೆ ಯಾವತ್ತೂ ಮರಣ ಸಂಚಿಕೆ ಆಗಬಾರದು. ಹಾಗಾದರೆ ನಮ್ಮ ಇತಿಹಾಸವನ್ನು ನಾವೇ ಚಿವುಟಿದಂತೆ.
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
....................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
Post a Comment