ಸಂಪಾಜೆಯಲ್ಲಿ ಎರಡು ಬಗೆ ಅಂತ ನಾನು ಮೊದಲೇ ನಿಮಗೆ ಹೇಳಿದ್ದೇನೆ. ಕೊಡಗು ಸಂಪಾಜೆ ಮತ್ತು ದಕ್ಷಿಣ ಕನ್ನಡ ಸಂಪಾಜೆ. ಈ ದಕ್ಷಿಣ ಕನ್ನಡ ಸಂಪಾಜೆಯ ರಾಜಧಾನಿ ಕಲ್ಲುಗುಂಡಿ. ಇಲ್ಲಿ ಸುಳ್ಯ ಪೋಲಿಸರು ಒಂದು ಚೆಕ್ ಪೋಸ್ಟ್ ಎಲ್ಲಾ ಕಟ್ಟಿಕೊಂಡಿದ್ದಾರೆ. ಚೆಕ್ ಪೋಸ್ಟ್ ಎದುರು ಅಂಚಿಂಚಿ ಹೋಗುವಾಗ ಕಳ್ಳರಿಗೆ ಅದೇನೋ ಒಂದು ಸಣ್ಣ ಢವ ಢವ. ಹಾಗೆಂದು ಕಲ್ಲುಗುಂಡಿ ಚೆಕ್ ಪೋಸ್ಟ್ ಪೋಲಿಸರು ಪೊಕ್ಕಡೆ ಪೊಕ್ಕಡೆ ಹಾರಿ ಬಿದ್ದು ರಕ್ಕಸರ ಹಾಗೆಲ್ಲ ವರ್ತಿಸಲ್ಲ. ಏನಾದರೂ ಅವರಷ್ಟಕ್ಕೆ ಅವರು ಬೆಕ್ಕಿನ ಬಿಡಾರ ಬೇತೆನೆ ಅಂತ ಇರುವವರು. ಒಳ್ಳೆಯವರು, ಸಾಧು ಸಜ್ಜನರು.
ಹಾಗೆಂದು ಈಗೀಗ ಕಲ್ಲುಗುಂಡಿ ಸ್ವಲ್ಪ ಪಾಯಿಸನ್ ಏರ್ಯ ಆಗಿಬಿಟ್ಟಿದೆ. ಘಟ್ಟದಿಂದ ಇಳಿದ ಕಳ್ಳರು, ಊರಿನ ಕಳ್ಳಕಾಕರು ಮತ್ತು ಸಂಚಾರಿ ಕಳ್ಳರು ಹೀಗೆ ಎಲ್ಲರೂ ಸೇರಿ ಕಲ್ಲುಗುಂಡಿ ಹೆಸರಿಗೆ ಮಜ್ಜಿ ಬಳಿಯುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳ ರನ್ ರೇಟ್ ಜಾಸ್ತಿಯಾಗುತ್ತಿದೆ. ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಲು ಕಲ್ಲುಗುಂಡಿ ಪೋಲಿಸರಿಗೆ ಆಗುತ್ತಿಲ್ಲ. ಸೊ.. ಕಲ್ಲುಗುಂಡಿಯಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಮಹಾ ರಾಜಾರೋಷವಾಗಿ ಹೋಟೇಲೊಂದರಲ್ಲಿ ಕ್ವಾಟ್ರು ಸೇಲ್ ಮಾಡಲಾಗುತ್ತಿದೆ. ಕ್ಯಾರೇ ಇಲ್ಲ. ಬೇಳಿಗ್ಗೆ ಎದ್ದು ಬರೋದೇ ಹೋಟೆಲಿಗೆ. ತಿನ್ಲಿಕ್ಕೆ ಇಡ್ಲಿ ವಡಾ ಸಾಂಬಾರ್, ಸಜ್ಜಿಗೆ ಬಜಿಲ್, ಪುಂಡಿಗಸಿ, ಕಲ್ತಪ್ಪೊ ಮತ್ತು ಕುಡಿಲಿಕ್ಕೆ ಕ್ವಾಟ್ರು.
ಅಲ್ಲಿ ದಕ್ಷಿಣ ಕನ್ನಡ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯ ಹೃದಯ ಭಾಗದಲ್ಲಿರುವ ವೈನ್ ಶಾಪ್ ಬದಿಯ ಹೋಟೆಲಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಕ್ವಾಟ್ರು ಸೇಲ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ವೈನ್ ಶಾಪ್ ಏನಿದ್ದರೂ ಬೆಳಿಗ್ಗೆ ಹತ್ತು ಗಂಟೆಗೆ ಓಪನ್ ಆಗುವುದು ಮಾಮೂಲು ಪದ್ಧತಿ. ಅದಕ್ಕೆ ಅದರದ್ದೇ ಆದ ರೂಲ್ಸ್ ಗಳಿವೆ. ಹಾಗೆ ವೈನ್ ಶಾಪ್ ಓಪನ್ ಆಗುವ ಮೊದಲೇ ಅದರ ವೆರಿ next ಒಂದು ನಾನ್ ವೆಜ್ ಹೋಟೇಲಿದೆ. ಅವರು ಬೆಳಿಗ್ಗೆ ಆರು ಗಂಟೆಗೆ ಭಕ್ತಿ ಗೀತೆಗಳ ಮೂಲಕ ಶುರುಮಾಡಿ ಹತ್ತು ಗಂಟೆಗೆ ಚಿತ್ರ ಗೀತೆಯ ತನಕ ಹೋಟೆಲಿನಲ್ಲಿ ಕ್ವಾಟ್ರು ಮಾರುತ್ತಿದ್ದಾರೆ ಎಂದು ತಿಳಿದುಬಂದಿದೆ. ದಿನಗೂಲಿಗಳು, ರಬ್ಬರ್ ಕೆಲಸಗಾರರು, ಟೈಟ್ ಮಾಸ್ಟರ್ ಗಳು, ಕುಡಿಯದಿದ್ದರೆ ಈಗ ಬಿದ್ದು ಸಾಯುವವರು, ಕೈಕಾಲು ಗಡಗಡ ಆಗುವವರು, ಮಂಡೆ ಬೆಚ್ಚದವರು, ತಗಡ್ ಬೆಚ್ಚದವರು, ಶೀತ ಆದವರು, ಮೈಕೈ ಬೇನೆಯವರು ಹೀಗೆ ಕ್ವಾಟ್ರಿನ ಅರ್ಜೆಂಟಿಗೆ ಬಿದ್ದವರು ಬೆಳಿಗ್ಗೆ ಬೇಗ ಹೋಟೆಲಿಗೆ ಬಂದು ಕ್ವಾಟ್ರು ಕೊಂಡೋಗುತ್ತಿದ್ದಾರೆ. ಈ ಸೈಜಿನ ಗಿರಾಕಿಗಳ ಕಾರಣದಿಂದಾಗಿ ಹೋಟೆಲಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಕಡೇ ಪಕ್ಷ ಇನ್ನೂರು ಕ್ವಾಟ್ರು ಆದರೂ ಸೇಲ್ ಆಗುತ್ತಿದೆ. ಒಂದು ಕ್ವಾಟ್ರುನಲ್ಲಿ ಕನಿಷ್ಠ ಇಪ್ಪತ್ತರಿಂದ ಮೂವತ್ತು ರೂಪಾಯಿ ತನಕ ಮಾರ್ಜಿನ್ ಇಡಲಾಗುತ್ತಿದೆ. ಲೆಕ್ಕ ಹಾಕಿ ಇನ್ನೂರು ಗುಣಿಸು ಮೂವತ್ತು.
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಚೆಕ್ ಪೋಸ್ಟ್ ಪೋಲಿಸರು ಬೆಳಿಗ್ಗೆ ಏಳುವ ಮೊದಲೇ ನಡೆಯುವ ಈ ಕ್ವಾಟ್ರು ಸೇಲ್ ಬಗ್ಗೆ ಪೋಲಿಸರಿಗೂ ಮಾಹಿತಿ ಹೋಗಿ ಅವರೂ ಎಲಾರಾಮ್ ಇಟ್ಟು ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜದೆ, ಸ್ನಾನ ಮಾಡದೆ ಹೋಟೆಲಿಗೆ ತುಂಬಾ ಸಲ ರೈಡು ಬಿದ್ದಿದ್ದರು. ರೈಡು ಬಿದ್ದು ಹೋಟೆಲ್ ಧನಿಯನ್ನು ಚೆಕ್ ಪೋಸ್ಟಿಗೆ ಕರಕ್ಕೊಂಡು ಹೋಗಿ ಸಮ್ಮನ ಕೂಡ ಮಾಡಿದ್ದರು. ಆದರೆ ಅವನಿಗೆ ಬುದ್ಧಿ ಬರಲೇ ಇಲ್ಲ. ಓ ಮೊನ್ನೆ ಕೂಡ ಚೆಕ್ ಪೋಸ್ಟ್ ಪೋಲಿಸರು ಬಂದಿದ್ದರು. ಮಾರ್ಗದಲ್ಲಿ ನಿಂತು ವೈನಿನವನಿಗೂ, ಹೋಟೆಲಿನವನಿಗೂ ನಾಯಿಗೆ ಬಯ್ದ ಹಾಗೆ ಬಯ್ದಿದ್ದರು. ಆದರೂ ಸುಧಾರಣೆ ಇಲ್ಲ. ನಾಚಿಕೆ,ಮಾನ ಮರ್ಯಾದೆ, ಲಜ್ಜೆ ಪುಲೆಜ್ಜಿ ಯಾವುದೂ ಇಲ್ಲ. ಯಾಕೆಂದರೆ ಬೆಳಿಗ್ಗೆ ಆರರಿಂದ ಹತ್ತರ ಒಳಗೆ ಇನ್ನೂರು ಗುಣಿಸು ಮೂವತ್ತು. ಲೆಕ್ಕ ಹಾಕಿ. ಕಲ್ಲುಗುಂಡಿಗೆ ಸಾಕು.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಹಾಗೆಂದು ಈ ಹೋಟೆಲಿನ ಕತೆಯೇ ವಿಚಿತ್ರವಾಗಿದೆ. ಇದರ ಒರಿಜಿನಲ್ ಪಪ್ಪ ಯಾರೂಂತ ಯಾರಿಗೂ ಗೊತ್ತಿಜ್ಜಿ. ಆದರೆ ಅದ್ಯಾರೋ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ಒಬ್ಬ ಇದ್ದರೆ ನಂತರ ಮತ್ತೊಬ್ಬ. ವೈನ್ ಶಾಪ್ ಹತ್ತಿರ ಇದ್ದರೂ ಈ ಹೋಟೆಲ್ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆ ತನಕ ವೈನ್ ಶಾಪ್ ಅವತಾರದಲ್ಲಿಯೂ ನಂತರ ತಡ ರಾತ್ರಿ ತನಕ ಬಾರ್ & ರೆಸ್ಟೋರೆಂಟ್ ಅವತಾರದಲ್ಲಿಯೂ ಕಾರ್ಯಾಚರಿಸುತ್ತಿದೆ. ಈ ಹೋಟೆಲ್ ಯಾರಿಗೆ ಸೇಲ್ ಆದರೂ ಬೆಳಗಿನ ಪ್ರೋಗ್ರಾಂನ ಹಕ್ಕುಗಳನ್ನು ಒಬ್ಬ ಕಾಯ್ದಿರಿಸಿಟ್ಟುಕೊಳ್ಳುತ್ತಾನೆ ಎಂದು ತಿಳಿದುಬಂದಿದೆ. ಚೆಕ್ ಪೋಸ್ಟ್ ಪೋಲಿಸರು ಇನ್ನೊಮ್ಮೆ ಅಲಾರಂ ಇಡ ಬೇಕಷ್ಟೇ.
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ ದಿನಾಂಕ 20.9.2924 ರಂದು ನಡೆಯಿತು. ಈ ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ ಹಾಗೂ ಕೋಶಾಧಿಕಾರಿಯಾಗಿ ಕಾರ್ತಿಕ್ ಪೈಕ ಇವರನ್ನು ಮತ್ತು ವಿವಿಧ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.. ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಜಯಪ್ರಕಾಶ್ ಬಾಕಿಲ ವಹಿಸಿದ್ದರು, ಕಾರ್ಯದರ್ಶಿ ದಿಗಂತ್ ಕಡ್ತಲ್ಕಜೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಾದ ಸತೀಶ್ ಮೂಕಮಲೆ ಹಾಗೂ ವಿಜೇಶ್ ಹಿರಿಯಡ್ಕ ಹಾಗೂ ಪದಾಧಿಕಾರಿಗಳು ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.
...................................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
....................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
Post a Comment