"ಹಾಗೆಂದು ಈ ಸಹಕಾರ ಇಲಾಖೆಯಲ್ಲಿ ಇರುವಷ್ಟು ಕಂಡುಗಳು ಬಹುಶಃ ಬೇರೆ ಎಲ್ಲೂ ಕಾಣ ಸಿಗುವ ಛಾನ್ಸಸ್ ಕಡಿಮೆ. ಇಲ್ಲಿನ ಕಂಡುಗಳು ಸ್ಟ್ಯಾಂಡರ್ಡ್ ಕಂಡುಲು. ಎದುರೆದುರೇ ನುಂಗಿ ಬಿಡುತ್ತಾರೆ. ಇಲ್ಲಿ ಕದಿಯುವುದಕ್ಕೆ ಕೇಟ್ ಕೇಳಿಯೇ ಇಲ್ಲ. ಇದೀಗ ಮೂಡಾಯಿ ಭಾಗದ ಹಂಡ್ರೆಡ್ ಹೊಡೆದ ಸೊಸೈಟಿಯ ಕತೆ ಬಂದಿದೆ. ಇದು ದೊಡ್ಡ ಕತೆಯಲ್ಲ. ದೊಡ್ಡ ಕತೆಯ ಉಪಕತೆ ಅಷ್ಟೇ.
ಹಾಗೆಂದು ಕೊಲ್ಲಮೊಗ್ರ ಸೊಸೈಟಿಗೆ ಭರ್ತಿ ನೂರು ತುಂಬಿದೆ. ಭಾರೀ ಗಡದ್ದಾಗಿ ನೂರನೇ ಬರ್ತ್ ಡೇ ಕೂಡ ಆಚರಣೆ ಮಾಡಿಕೊಂಡಿತ್ತು. ಆ ಆಚರಣೆ ಬಗ್ಗೆ ಒಂದು ಪುಸ್ತಕವನ್ನೇ ಬರೆಯ ಬಹುದು, ಅಷ್ಟು ಗೌಜಿ ಮಾಡಿದ್ದಾರೆ. ಇಂಥ ಸೊಸೈಟಿಯಲ್ಲಿ ಕೆಲವು ಕಂಡುಗಳು ಸೇರಿಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಇದೀಗ ಸೊಸೈಟಿಯಲ್ಲಿ ಇಬ್ಬರು ಕಂಡುಗಳು ಸಿಕ್ಕಿ ಬಿದ್ದಿದ್ದು ಸೊಸೈಟಿಯ ಲಕ್ಷಾಂತರ ದುಡ್ಡನ್ನು ಇವರಿಬ್ಬರು ಬ್ರೇಕ್ ಫಾಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಿಂದದ್ದನ್ನು ಕಕ್ಕಿಸುವ ಕೆಲಸ ಆಗಬೇಕಾಗಿದೆ.
ಹಾಗೆಂದು ಸೊಸೈಟಿ ಲೋಕಲ್ ಹುಡುಗರಿಗೆ ಲೋಕಲಲ್ಲೇ ಒಂದು ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲೋಕಲ್ ಹುಡುಗರನ್ನೇ ಸೊಸೈಟಿ ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಈ ಕಳ್ಳರು ಉಂಡ ಎಲೆಗೆ ಕಕ್ಕ ಮಾಡುತ್ತಾರೆ ಎಂಬ ವಿಷಯ ಸೊಸೈಟಿಗೆ ಗೊತ್ತಿರಲಿಲ್ಲ. ಇದೀಗ ಅದು ಸತ್ಯವಾಗಿದೆ. ಸೊಸೈಟಿಯ ಸೇಲ್ಸ್ ಮ್ಯಾನ್ ಗಳಿಬ್ಬರು ಸೊಸೈಟಿಗೆ ಟೊಪ್ಪಿ ಹಾಕಿ ಈಗ "ನಂಗೆ ಗೊತ್ಲೆ" ಎಂದು ಹೇಳುತ್ತಿದ್ದಾರೆ. ಸೊಸೈಟಿ ದುಡ್ಡು ಮಾರಾಯ್ರೆ ಅದು. ಅವರು ಅಷ್ಟು ದೊಡ್ಡ ಮೊತ್ತ ಕದಿಯುವಾಗ ಆಡಳಿತ ಮಂಡಳಿ, ಸೊಸೈಟಿ ಸೆಕ್ರೆಟರಿಗಳು ಎಲ್ಲಿ ಕೂಜಿಮಲೆಗೆ ಹೋಗಿದ್ದರ?
ಅವನೊಬ್ಬ ದೇಶಭಕ್ತರ ಹುಡುಗ ಮತ್ತೊಬ್ಬ ಕೊಲ್ಲಮೊಗ್ರದ ಹುಡುಗ. ಇವರಿಬ್ಬರೂ ಸೊಸೈಟಿಯಲ್ಲಿ ಸೇಲ್ಸ್ ಮ್ಯಾನ್ ಗಳು. ಇವರಿಬ್ಬರೂ ಸೊಸೈಟಿಯ ಮಾರಾಟ ವಿಭಾಗದಲ್ಲಿ ಅದೇನು ಸೇಲ್ ಮಾಡಿದ್ದಾರೋ ಆ ದುಡ್ಡನ್ನೆಲ್ಲ ಕಿಸೆಗೆ ಹಾಕ್ಕೊಂಡು ಮನೆಗೆ ಹೋಗಿದ್ದಾರೆ ಅಷ್ಟೇ. ಇದೆಲ್ಲ ಗೊತ್ತಾಗುವಾಗ ಪೊರ್ತಾಗಿದೆ. ಅದಾಗಲೇ ಲಕ್ಷಾಂತರ ರೂಪಾಯಿ ಕಳ್ಳರ ಪಾಲಾಗಿತ್ತು. ಸೊಸೈಟಿಯಲ್ಲಿ ಇವರಿಬ್ಬರೂ ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆಂದರೆ ಆದಿತ್ಯವಾರವೂ ಪೊಕ್ಕಡೆ ಪೊಕ್ಕಡೆ ಬಿಲ್ ಮಾಡಿ ಕಿಸೆಗೆ ಇಳಿಸಿದ್ದಾರೆ. ಹಾಗೆ ಇವರು ಕದಿಯುವಾಗ ಇಬ್ಬರು CEO ಗಳಿದ್ದರೂ ಅವರಿಗೆ ಗೊತ್ತಾಗಿಲ್ವಾ ಎಂಬ ಪ್ರಶ್ನೆ ಬರುತ್ತದೆ. ಆವರ್ಯಾಕೆ ಈ ಕದಿಯುವ ಕಾರ್ಯಕ್ರಮವನ್ನು ನೋಡುತ್ತಾ ಬಕ ಧ್ಯಾನ ಮಾಡಿದರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಅವರಿಗೂ ಮಂಡೆ ಪಾಲು ಏನಾದರೂ ಇದೆಯಾ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಇದೀಗ ಕಳ್ಳರಿಗೆ ಬೆಳಗಾಗಿದ್ದು ಇಬ್ಬರನ್ನೂ ಮನೆಗೆ ಕಳಿಸಲಾಗಿತ್ತು. ಅದರಲ್ಲಿ ಕೊಲ್ಲಮೊಗ್ರದ ಹುಡುಗ ಕದ್ದ ನಾಲ್ಕು ಲಕ್ಷವನ್ನು ಮರ್ಯಾದೆಯಿಂದ ಕಟ್ಟುತ್ತೇನೆ ಎಂದು ತಪ್ಪೊಪ್ಪಿಕ್ಕೊಂಡ ಕಾರಣ ಅವನ ಎಲೆಯನ್ನು ಒಳಗೆ ಎಳೆಯಲಾಗಿದೆ. ಮತ್ತೆ ಆ ಕೊಲ್ಲಮೊಗ್ರದ ಹುಡುಗ ಕಾಂಗ್ರೆಸ್ ಹುಡುಗ ಆದ ಕಾರಣ ಆಡಳಿತ ಮಂಡಳಿಗೆ ಅವನ ಮೇಲೆ ಕರುಣೆ, ಪ್ರೀತಿ ಉರ್ಕಿ ಹರಿದು ಹರಿಹರ ತೋಡಿನಲ್ಲಿ ಹರಿದ ಕಾರಣ ಅವನಿಗೆ ಮತ್ತೇ ಕದಿಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅವನು ಮತ್ತೊಬ್ಬ ಕಂಡು ಖಟ್ಟರ್ ದೇಶಭಕ್ತರ ಟೀಮಿನ ಜನ ಆದ ಕಾರಣ ಅವನಿಗೆ ಎಂಟು ಕಟ್ಟು ಎಂದು ಹೇಳಿ ಅವನ ಎಳೆಯನ್ನು ಹೊರಗೆ ಇಡಲಾಗಿದೆ. ಇಬ್ಬರು CEOಗಳು, ಆಡಳಿತ ಮಂಡಳಿ ಇದ್ದರೂ ಕೇವಲ ಸೇಲ್ಸ್ ಮ್ಯಾನ್ ಗಳೇ ಇಷ್ಟೆಲ್ಲಾ ಗುಳುಂ ಕಾರ್ಯಕ್ರಮ ಮಾಡಿದ್ದಾರೆಂದರೆ ಇನ್ನು ದೊಡ್ಡ ದೊಡ್ಡ ತಿರ್ಗಿಸ್ ಕುರ್ಚಿಯಲ್ಲಿ ಕುಳಿತವರು ಸೊಸೈಟಿಯಲ್ಲಿ ಏನೆಲ್ಲ ತಿಂದಿರ ಬಹುದೆಂದು ನೆನಪಿಸಿ ಕೊಂಡರೇ ಜ್ವರ ಬರ್ತದೆ. ಇನ್ನು ಆ ಜನ್ನಣ್ಣ ಯಾಕೆ ಮಾರಾಯ್ರೆ ಪೊಕ್ಕಡೆ ಆಡಿಟರ್? ತಿಂಗಳಿಗೆ ಹದಿನೆಂಟು ಅವರಿಗೆ ಬೇರೆ ಕೊಡಬೇಕು. ಅವರಿಗೆ ಗೊತ್ತಾಗಿಲ್ವಾ ಹುಡುಗರು ಕದಿಯುವಾಗ?
ಇನ್ನು ಆ ಪೆಟ್ರೋಲ್ ಪಂಪಲ್ಲಿ ಎಷ್ಟೆಲ್ಲ, ಯಾರೆಲ್ಲ, ಎಲ್ಲೆಲ್ಲ ಬ್ರೇಕ್ ಫಾಸ್ಟ್, ಡಿನ್ನರ್, ಲಂಚ್ ಮಾಡ ಬಹುದು ಎಂಬ ಒಂದು ನೀಲಿ ನಕ್ಷೆ ನಮಗೆ ಲಭಿಸಿದೆ. ಪಂಪ್ ಮಾಡುವ ಜಾಗ ಪರ್ಚೆಸಿಂಗ್ ನಲ್ಲಿಯೇ ಕಮಿಷನ್ ತಿಂದವರ ಪಾಸ್ಪೋರ್ಟ್ ಸೈಜಿನ ಭಾವಚಿತ್ರಗಳು ಅಲ್ಲಲ್ಲಿ ಲೀಕ್ ಆಗುವ ಸಾಧ್ಯತೆ ಬೇಗದಲ್ಲೇ ಇದೆ. ಯಾಕೆಂದರೆ ಅಂಡಮಾನ್ ರೇಟಿನ ಜಾಗಕ್ಕೆ ಹಂಪನಕಟ್ಟೆ ರೇಟು ಕೊಡಲಾಗಿದೆ. ಇನ್ನು ಗುಡ್ಡೆ ಅಗೆಯಲು, ಸಮತಟ್ಟು ಮಾಡಲು, ಅದಕ್ಕೆ ಇದಕ್ಕೆ ಅಂತ ದೊಡ್ಡ ದೊಡ್ಡ ದೊಡ್ಡ ಬಿಲ್ಲುಗಳು ಪಾಸಾಗಿದೆ. ಎಲ್ಲಾ ಬರೆದರೆ ಕತೆ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ಸೊಸೈಟಿ ಟೈಟಾನಿಕ್ ಆಗದಿದ್ದರೆ ಅಷ್ಟೇ ಸಾಕು.
..........................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment