ಪುರಾಣ ಪ್ರಸಿದ್ಧ. ಪ್ರಪಂಚದ ಏಕೈಕ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಹರಿಯುವ ಪರಮ ಪವಿತ್ರ ಪುಣ್ಯ ನದಿ ಕುಮಾರಧಾರ ನದಿ ತಟದಲ್ಲಿ ರೈನ್ ಡ್ಯಾನ್ಸ್ ಮಾಡಲು ಶ್ರೀ ದೇವಳದ ವತಿಯಿಂದ ವ್ಯವಸ್ಥೆ ಆಗಿದೆ.
ಹೌದು ಸ್ವಾಮಿ.., ಸರ್ಪ ದೋಷ ನಿವಾರಣೆಗೆ ಶ್ರೀ ಕ್ಷೇತ್ರ ಎಷ್ಟು ಪ್ರಾಮುಖ್ಯವೋ.., ಅಷ್ಟೇ ಪ್ರಾಮುಖ್ಯ ಚರ್ಮ ರೋಗ ನಿವಾರಣೆಗೆ ಈ ಪುಣ್ಯ ನದಿ ಕುಮಾರಧಾರ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ ಕುಮಾರಧಾರ ನದಿ. ಕುಮಾರ ಪರ್ವತದಲ್ಲಿ ಹುಟ್ಟಿ. ಪರ್ವತ ತಪ್ಪಲಿನಲ್ಲಿ ಇರುವ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿರುವ ಮರಗಳ ಬೇರನ್ನು ಮರ್ಧಿಸಿಕೊಂಡು ಬಂದು ಕುಕ್ಕೆ ಕ್ಷೇತ್ರಕ್ಕೆ ತಲುಪುವಾಗ ಸಂಪೂರ್ಣ ಔಷಧೀಯ ಗುಣಗಳ ನದಿಯಾಗಿ ಬದಲಾಗುತ್ತದೆ. ಈ ನದಿಯ ನೀರಿನಲ್ಲಿ ಮೂರು ಬಾರಿ ಮುಳುಗಿ ಎದ್ದರೆ. ಎಲ್ಲಾ ಚರ್ಮ ರೋಗಗಳ ಜೊತೆ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಸಿಗುತ್ತದೆ ಎಂಬುದು ಪುರಾಣ ಕಾಲದಿಂದಲೂ ನಂಬಿಕೊಂಡು ಬರುತ್ತಿರುವ ನಂಬಿಕೆ. ಪೌರಾಣಿಕ ಕಾಲದಲ್ಲಿ ಎಲ್ಲಿಯೂ ವಾಸಿ ಮಾಡಲಾಗದ ಕುಷ್ಠರೋಗ ನಿವಾರಣೆ ಮಾಡಿದ ಕಥೆ ನಮಗೆ ಸಿಗುತ್ತದೆ.
ನದಿ ಸ್ನಾನ ಎಂದರೆ, ನದಿ ತಟದಲ್ಲಿ ಹೋಗಿ ಕೃತಕ ಪೈಪ್ ಅಳವಡಿಸಿದ ಶವರ್ ಕೆಳಗೆ ನಿಂತು ಸ್ನಾನ ಮಾಡುವುದಲ್ಲ. ಪೂರ್ವಾಭಿಮುಖವಾಗಿ ನಿಂತು ದೇವರನ್ನು ಪ್ರಾರ್ಥಿಸಿ ಮೂರು ಬಾರಿ ಮುಳುಗೇಳುವುದು ಪವಿತ್ರ ನದಿ ಸ್ನಾನ. ಸೌಕರ್ಯದ ಹೆಸರಿನಲ್ಲಿ ನದಿ ತಟದಲ್ಲಿ ಈ ರೀತಿಯ ಶವರ್ ಸ್ನಾನಕ್ಕೆ ದೇವಳದ ವತಿಯಿಂದ ಅನುವು ಮಾಡಿಕೊಡುವುದು. ವಿಪರ್ಯಾಸವೇ ಸರಿ.
ಅಲ್ಲ ಸ್ವಾಮಿ ಭಕ್ತಾದಿಗಳು ಶವರ್ ಕೆಳಗೆ ಸ್ನಾನ ಮಾಡುವುದಾದರೆ ಕುಮಾರಧಾರ ನದಿ ತಟಕ್ಕೆ ಯಾಕೆ ಹೋಗಬೇಕು...!? ದೇವಳದ ಎಲ್ಲಾ ಲಾಡ್ಜ್ ಗಳ ಹಾಗು ಕೆಲವೊಂದು ಖಾಸಗಿ ಲಾಡ್ಜ್ ಗಳ. ಬಾತ್ ರೂಮ್ ನಲ್ಲಿ ಬರುವುದು ಇದೇ ಕುಮಾರಧಾರ ನದಿಯ ನೀರು. ಅವರಿಗೆ ರೂಂ ನಲ್ಲೆ ಸ್ನಾನ ಮಾಡಬಹುದಲ್ವ..!?
ಸೌಕರ್ಯದ ನೆಪದಲ್ಲಿ ಎ.ಸಿ. ರೂಂ ನಲ್ಲಿ ಕೂತು ಇಂತಹ ಅಂಡಿ-ಗುಂಡಿ. ನಿರ್ಣಯದಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಅಭಿವೃದ್ಧಿ ಆಗಬೇಕೇ...? ಒಂದು ವೇಳೆ ನಿಮಗೆ ಭಕ್ತಾದಿಗಳ ಸೌಕರ್ಯವೇ ಪ್ರಮುಖ ಧ್ಯೇಯ ಎಂದಾದರೆ.., ಶನಿವಾರ, ಭಾನುವಾರ ಸಮರ್ಪಕ ರೂಂ ನ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಮಲಗುವ ಭಕ್ತಾಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ಕುಮಾರಧಾರ ದಲ್ಲೇ ಅಭಿವೃದ್ಧಿ ಮಾಡಬೇಕು ಎಂಬ ಹರಕೆ ಇದ್ದರೆ. ಸ್ನಾನಘಟ್ಟದ ಮೆಟ್ಟಿಲುಗಳಿಗೆ ಸೂಕ್ತ ಗ್ರಿಲ್ ಅಳವಡಿಸಿ ಭಕ್ತಾದಿಗಳಿಗೆ ಪವಿತ್ರ ನದಿ ಸ್ನಾನಕ್ಕೆ ಅವಕಾಶ ಮಾಡಿಕೊಡಿ. ಸುಸಜ್ಜಿತ ಬಟ್ಟೆ ಬದಲಾಯಿಸುವ ಕೊಠಡಿ ಕಟ್ಟಿಸಿ. ಇದೆಲ್ಲ ಬಿಟ್ಟು ಪರಮ ಪವಿತ್ರ ಪುಣ್ಯ ನದಿ ತಟದಲ್ಲಿ ಶವರ್ ಬಾತ್ ನಿರ್ಮಿಸಿ ರೈನ್ ಡ್ಯಾನ್ಸ್ ಮಾಡಲು ಅವಕಾಶ ಮಾಡಿಕೊಡಬೇಡಿ. ಪುಣ್ಯ ಕ್ಷೇತ್ರ. ಪುಣ್ಯ ಕ್ಷೇತ್ರವಾಗಿಯೇ ಇರಲಿ ಪ್ರವಾಸ ತಾಣ ಆಗುವುದು ಬೇಡ ಎಂದು ಸುಬ್ರಹ್ಮಣ್ಯನ ಭಕ್ತರಾದ ನಮ್ಮೆಲ್ಲರ ಆಶಯ.
..........................................
ಕವನ
ಪಾರ್ವತಿನ ಮೈತ್ತ ಬೆಗರ್ಡ್ ದ್ ಪುಟ್ಟ್ ದ್ ಬತ್ತೆಗೆ ಗಣಪೆ..
ಅಂಚಾದ್ ಆಯೆಗೇ ದುಂಬಾಯಿನ
ಸುಗಿಪುನು ಕೊರ್ಪೆ
ಅಪ್ಪೆ ಅಮ್ಮೆನ ಮೋಕೆದ ಕೊಂಡಾಟದ ಬಾಲೆ
ಚೌತಿದಾಣಿದ ಮೂರ್ತಿ ರೂಪೊಗು ಮಾತೆರ್ಲಾ
ಕೈನ್ ಮುಗಿಯೊನ್ಲೆ
ವಿದ್ಯೆ, ಬುದ್ಧಿ,ತಿಳುವಳಿಕೆದ ಸಾರ ಬದುಕ್ ಗ್ ನಂಕ್ ಬೋಡು
ತರೆತಗ್ಗಾದ್ ನಟ್ಟೊಂದ್ ಕೇನ್ಲೇ
ದೇಬೆರೇ ಎಂಕ್ಲೆಗ್ ಅವೆನ್ ಕೊರೊಡು..
ಭಕ್ತಿ ದಿಂಜಿದ್ ಮಲ್ತೆರತ್ತೆ,ಮೋದಕ ಕಜ್ಜಾಯೊನು
ತಿನೊಡು ಅವೆನ್ ಪ್ರಸಾದ ಪಂಡ್ ದ್
ಸಾರ್ಥಕನ್ ಪಡೆಪಿನೊ..
ಭಾರಿ ಗೌಜಿ ಪರ್ಬ ಮಾತ್ರ ಊರುಗಿಡೀ ಸಡಗರೊ
ಸಂತೋಷದ ನಲಿಪು ನಮಕ್
ಬರ್ಪುಂಡಿಗೆ ವರ್ಷಡೊರೊ
ಆಂಡ ದಾನೆ ಗಣಪತಿನ್ ಬುಡ್ನಗೊರ ಬೇಜಾರು
ನೀತಿ ಉಂಡು ಇಂದೆಟೆ ತೆರಿಲೆ
ದೇರ್ತ್ನಕ್ಲೆ ತಿರ್ತ್ ಪಾಡ್ವೆರು
ರಚನೆ.. ಶ್ರೀಮತಿ ಶಾಂತಾ ಕುಂಟಿನಿ
..........................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment