ಪುತ್ತೂರು: ನಿದ್ದೆಯಲ್ಲಿ ಗೌಡ್ರುಗಳು

                                  


    ಮಂಗಳೂರು ಜಿಲ್ಲೆಯ ಗೌಡ್ರುಗಳಿಗೆ ಗಾಢ ನಿದ್ರೆ. ಸುಳ್ಯ, ಪುತ್ತೂರು, ಬೆಳ್ತಂಗಡಿಯ ಅಷ್ಟೂ ಗೌಡ್ರುಗಳು ಆಯುಧ ಕೆಳಗಿಟ್ಟು ಯುದ್ಧ ಗಿದ್ಧ ಇಲ್ಲ ಎಂದು ಘೋಷಿಸಿಯೇ ಬಿಟ್ಟಿದ್ದಾರೆ. ಜಿಲ್ಲೆಯ ಇಪ್ಪತ್ತು ಲಕ್ಷ ಜನ ಸಂಖ್ಯೆಯಲ್ಲಿ  ಗೌಡ್ರುಗಳ ಸಂಖ್ಯೆಯೇ ಕಾಲು ಭಾಗ ಅಂದರೆ ನಾಲ್ಕರಿಂದ ಐದು ಲಕ್ಷದ ತನಕ. ದೊಡ್ಡ ದೊಡ್ಡ ಫ್ಯಾಮಿಲಿಗಳು, ದೊಡ್ಡ ದುಡ್ಡಿನವರು, ದೊಡ್ಡ ತೋಟದವರು, ಭೂಮಾಲೀಕರು, ಜನನಾಯಕರು ಹೀಗೆ ಎಂಥ ಸೈಜಿನ ಗೌಡ್ರುಗಳಿದ್ದರೂ ಗಾಢ ನಿದ್ರೆ. ಈ ಲೋಕದ ಅರಿವೇ ಇಲ್ಲ. ತಾವೂ ಆಯಿತು, ತಮ್ಮ ತೋಟವೂ ಆಯಿತು ಎಂಬಂತಿರುವವರು. ತೋಟವೇ ಅವರಿಗೆ ಮಂಗಳೂರು, ಬೆಂಗಳೂರು. ಹೊರಗೆ ಬರಲ್ಲ ಅವರು.


ಹತ್ತು ಕುಟುಂಬ, ಹದಿನೆಂಟು ಗೋತ್ರದ ಜಪ ಮತ್ತು ಅನ್ ಲಿಮಿಟೆಡ್ ಶಾಸ್ತ್ರ ಇದು ಬಿಟ್ಟರೆ ಗೌಡ್ರುಗಳು ಜಿಲ್ಲೆಯ ತುಂಬಾ ಮೂಲೆ ಗುಂಪು ನಾಯಕರಾಗಿದ್ದಾರೆ.ಮುಂಡೋಡಿಯ ಅಮರ್ ಬೊಳ್ಳಿಲು, ಮದುವೆ ಗದ್ದೆಯ ಧಣಿಗಳು, ಕುರುಂಜಿಯ ಅಕ್ಷರ ದಾನಿಗಳು, ಸೂಂತೋಡಿನ educated ಗಳು, ದೇವರಗುಂಡ ಬೆಳ್ಳಿಪ್ಪಾಡಿಯ ಗಡಿ‌ ನಾಯಕರು,ಅಡ್ಪಂಗಾಯ, ಮಲ್ಲಾರ,ಮಾಣಿಬೆಟ್ಟುವಿನ ರೆಬೆಲ್ ಗಳು, ಕುಡೆಕಲ್, ನಾರ್ಕೊಡು,ಮೊಂಟಡ್ಕದ ಹೀರೋಗಳು, ಊರುಬೈಲಿನ ಡೀಸೆಂಟ್ dignified ಗಳು, ಉಳುವಾರು, ಮಡ್ತಿಲದ ಜಂಟಲ್ ಮೆನ್ ಗಳು ಮತ್ತು ಕೂಜುಗೋಡು ಕಟ್ಟೆ ಮನೆಯ ದೊಡ್ಡೇಜಮಾನ್ರುಗಳು. ಹೀಗೆ ಎಲ್ಲಾ ವೀರಾಧಿವೀರ ಗೌಡ್ರುಗಳಿದ್ದರೂ, ಜನಸಂಖ್ಯೆಯಲ್ಲಿ 5 ತನಕ ಇದ್ದರೂ, ಪುತ್ತೂರು, ಸುಳ್ಯ, ಬೆಳ್ತಂಗಡಿ ಗಳಲ್ಲಿ ಇಡೀ ವ್ಯವಸ್ಥೆಯನ್ನೇ ಗಡ ಗಡ ಮಾಡಬೇಕಾದ ಗೌಡ್ರುಗಳು ಅಣ್ಣೇರ್ ಮತ್ತು ಅಣ್ಣಾಗಳ ಮುಂದೆ ಗಡ ಗಡ ನಡುಗಿ ಅಳಿದ ಊರಿಗೆ ಉಳಿದವನೇ ಗೌಡ ಆದದ್ದು ವಿಪರ್ಯಾಸವೇ ಸರಿ. ಒಬ್ಬ ಗೌಡ್ರುಗಳ ಎಂಪಿ ಇಲ್ಲ, ಎಮ್ಮೆಲ್ಲೆ ಇಲ್ಲ, ಎಮ್ಮೆಲ್ಸಿ ಇಲ್ಲವೇ ಇಲ್ಲ, ನಿಗಮ ಮಂಡಳಿಗಳಲ್ಲಿ ಇಲ್ಲ, ಹಾಲು ಒಕ್ಕೂಟ, ಜಿಲ್ಲಾ ಬ್ಯಾಂಕ್, ಕ್ಯಾಂಪ್ಕೋ, ಜನತಾ ಬಜಾರ್, ಎಪಿಎಂಸಿಗಳು, ಟಿಎಪಿಸಿಎಂಎಸ್ ಗಳು ಹೀಗೆ ಯಾವುದೇ ಕುರ್ಚಿಗಳಲ್ಲಿ ಗೌಡ್ರುಗಳು ಕಾಣುತ್ತಿಲ್ಲ. ಗೌಡ್ರುಗಳನ್ನು ಈ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹಂತ ಹಂತವಾಗಿ ಮುಗಿಸಲಾಗುತ್ತಿದೆ, ಮುಗಿಸಿದ್ದಾರೆ. ಮಾತೆತ್ತಿದರೆ "ಪುತ್ತೂರಿನಲ್ಲಿ ಕೊಟ್ಟಿದ್ದೇವೆ" ಎಂದು ಬಿಜೆಪಿಯ ಅಣ್ಣೆರ್ ಗಳು ಬಾಯಿಪಾಠ, ಗಿಳಿಪಾಠ ಹೇಳುತ್ತಿದ್ದಾರೆ. ಗೌಡ್ರುಗಳನ್ನು  ರಾಜಕೀಯವಾಗಿ ಮುಗಿಸುವಲ್ಲಿ ಅದೂ ಒಂದು ಧಾಳ. ಮೊರಂಪು ಬೇನೆಯ ದೊಡ್ಡ ಪುತ್ತೂರಿಗೆ ಹೇಳಿದ ಒಂದು ಕ್ಯಾಂಡಿಡೇಟಾ?
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಪುತ್ತೂರಿನಲ್ಲಿ ಕೊಟ್ಟಿದ್ದೇವೆ ಎಂದು ಬಿಜೆಪಿಯ ಅಣ್ಣೆರ್ ಗಳು ಗೌಡ್ರುಗಳನ್ನು ಮಂಗ ಮಾಡಿದರೆ ಕಾಂಗ್ರೆಸ್ ಕತೆಯಲ್ಲಿ ಗೌಡ್ರುಗಳು ಗೆಸ್ಟ್ ಆರ್ಟಿಸ್ಟ್ ಗಳು. ಕಾಂಗ್ರೆಸ್ ಪಕ್ಷಕ್ಕೆ ಗೌಡ್ರುಗಳ ಅಗತ್ಯವೇ ಇಲ್ಲದಂತೆ ವರ್ತಿಸುತ್ತದೆ. ಕಾಂಗ್ರೆಸ್ ಅಣ್ಣಾಗಳ ಮುಂದೆ ಮಾತಾಡಲೂ ಗೌಡ್ರುಗಳಿಗೆ ಬೆಟ್ರಿ ಇಲ್ಲ. ಕಾಂಗ್ರೆಸ್ ಅಣ್ಣಾಗಳನ್ನು ಕ್ಯಾರೇ ಅನ್ನದ ಒಬ್ಬ ಗೌಡ ಲೀಡರ್ ಅಂತ ಇದ್ದದ್ದು ಅದು ಚಾರ್ವಾಕದ ಜಯರಾಮ ಗೌಡರು. ಅದಕ್ಕಾಗಿಯೇ ಅವರನ್ನು ಮೂಲೆಗುಂಪು ನಾಯಕನನ್ನಾಗಿ ಮಾಡಲಾಯಿತು. ಇನ್ನು ಮುಂಡೋಡಿ ಬ್ರದರ್ಸ್ ಗಳಲ್ಲಿ ದೊಡ್ಡ ಮುಂಡೋಡಿದ್ದು ಓವರ್ ಡೀಸೆಂಟ್ ಆಯಿತು, ಚಿಕ್ಕ ಮುಂಡೋಡಿಯದ್ದು ಕಾಂಗ್ರೆಸ್ ಅಣ್ಣಾಗಳ ಬಗ್ಗೆ over confidence ಜಾಸ್ತಿ ಆಯಿತು. ಇಲ್ಲದಿದ್ದರೆ ದೊಡ್ಡ ಮುಂಡೋಡಿಗೆ ದೇಶಭಕ್ತರ ಏರ್ಯಾದಲ್ಲಿ ಎಮ್ಮೆಲ್ಸಿ ಟಿಕೆಟ್ ಕೊಟ್ಟು ಗೆದ್ದು ಬಾ ಅಂದ್ರೆ ಮುಂಡೋಡಿ ಎಲ್ಲಿಗೆ ಗೆಲ್ಲೋದು. ಈಗ ಕೇಳಿದರೆ ಅಣ್ಣಾಗಳು " ಎಮ್ಮೆಲ್ಸಿ ಕೊರ್ತುಂಡತ್ತೆ" ಎಂದು ಟೋನ್ ಛೇಂಜ್ ಮಾಡಿ ಮಾತಾಡಿದರೆ ದೊಡ್ಡ ಮುಂಡೋಡಿ ಹೆದರಿ ಕೊಳ್ಳುತ್ತಾರೆ. ಇನ್ನು ಸುಳ್ಯ ಕಾಂಗ್ರೆಸಿಗರ ದೊಡ್ಡ ಸೈಜಿನ ಲೀಡರ್ ವೆಂಕಪ್ಪ ಗೌಡರಿಗೂ ಇಲ್ಲಿ ತನಕ ಯಾವುದೇ ಕುರ್ಚಿ ಕೊಟ್ಟಿಲ್ಲ. ವೆಂಕಪ್ಪ ವಕೀಲರು ಇಡೀ ಸುಳ್ಯವನ್ನು ಅಡಿಮೇಲು ಮಾಡಿದರೂ ಕಾಂಗ್ರೆಸ್ ಪಕ್ಷದ ಅಣ್ಣಾಗಳು ವೆಂಕಪ್ಪಗೌಡರಿಗೂ ಚಾರ್ಜ್ ಫುಲ್ ಮಾಡಿರಲಿಲ್ಲ.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಹಾಗೆಂದು  ಮಂಗಳೂರು ಜಿಲ್ಲೆಯ ಮೇಜರ್ ಜಾತಿಗಳು ಕುರ್ಚಿ ವಿಷಯ ಬಂದಾಗ ಮಾತ್ರ ಒಗ್ಗಟ್ಟು ಪ್ರದರ್ಶಿಸಿವೆ.ಕಾಡಿ ಬೇಡಿ, ಮುನಿಸಿಕೊಂಡು,ಜಗಳ ಮಾಡಿ,ಕೊಡದೆ ಉಪಾಯವೇ ಇಲ್ಲ ಅನ್ನುವಂತಹ ಸೀನ್ ಕ್ರಿಯೇಟ್ ಮಾಡಿ ಪ್ರತೀ ಮೇಜರ್ ಜಾತಿಗಳು ಸ್ಥಾನ ಪಡೆದಿದ್ದಾರೆ. ಇದರ ಪರಿಣಾಮವಾಗಿ ಬಂಟ ಸಮುದಾಯದ ನಾಲ್ಕು ಎಮ್ಮೆಲ್ಲೆ ಗಳು ಮತ್ತು ಎಂಪಿ ಇದ್ದರೆ ಬಿಲ್ಲವರು ಒಬ್ಬ ಎಮ್ಮೆಲ್ಲೆ ಮತ್ತು ಒಬ್ಬ ಎಮ್ಮೆಲ್ಸಿಯನ್ನು ಹೊಂದಿದ್ದಾರೆ. ಮಂಗಳೂರಿನ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯಕ್ಕೇ ಟಿಕೆಟ್ ಕೊಡಲೇ ಬೇಕಾದ ಅನಿವಾರ್ಯತೆ ಬಿಜೆಪಿಗಿದೆ ಮತ್ತು ಆ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಉಳ್ಳಾಲದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯ ಬಿಟ್ಟು ಬೇರೆಯವರಿಗೆ ಕನಸಿನಲ್ಲಿಯೂ ಟಿಕೆಟ್ ಕೊಡಲ್ಲ. ಯಾಕೆಂದರೆ ಕಾಂಗ್ರೆಸ್ ಗೆ ಅವರ ಬಗ್ಗೆ ಅಷ್ಟು ಹೆದರಿಕೆ ಇದೆ ಜೊತೆಗೆ ಬೆದರಿಕೆ ಇದೆ. ಇನ್ನು ಕ್ರಿಶ್ಚಿಯನ್ ಸಮುದಾಯದವರು ಎಮ್ಮೆಲ್ಲೆ ಎಲೆಕ್ಷನ್ ಗಳಲ್ಲಿ ಸೋತರೆ ಅವರಿಗೆ ಒಂದು ಎಮ್ಮೆಲ್ಸಿ ಸೀಟು ರೆಡಿಯಾಗಿರುತ್ತದೆ ಮತ್ತು ಕೊಡಲೇ ಬೇಕಾದ ಅನಿವಾರ್ಯತೆಯನ್ನು ಅವರು ಸೃಷ್ಟಿ ಮಾಡಿಬಿಡುತ್ತಾರೆ. ಇನ್ನು ಉಡುಪಿ ಜಿಲ್ಲೆಯ ರಾಜಕೀಯ ಕೂಡ ಹಾಗೇ. ಎರಡು ಸೀಟು ಶೆಟ್ರುಗಳಿಗೆ, ಎರಡು ಬಿಲ್ಲವರಿಗೆ, ಒಂದು ಸೀಟು ಭಟ್ರಿಗೆ ಇರಲಿ ಎಂದು ಹಂಚಲಾಗಿದೆ. ಇದೀಗ ಎಂಪಿ ಕೂಡ ಬಿಲ್ಲವ ಸಮುದಾಯದವರೇ ಆಗಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಎಲ್ಲಿದ್ದಾರೆ ಗೌಡ್ರುಗಳು? ಕಾಂಗ್ರೆಸ್ ಅಣ್ಣಾಗಳಿಗೆ ಹೆದರುತ್ತಾ, ಬಿಜೆಪಿ ಅಣ್ಣೆರ್ ಗಳಿಗೆ ಸಾಷ್ಟಾಂಗ ಬೀಳುತ್ತಾ, ಹಠ ಮಾಡದೆ, ಹೆದರಿಸದೆ, ಬೆದರಿಸದೆ, ಸೀನ್ ಕ್ರಿಯೇಟ್ ಮಾಡದೆ, ಒತ್ತಡ ಹಾಕದೆ ಗೌಡ್ರುಗಳು ರಾಜಕೀಯದಲ್ಲಿ ಇವತ್ತು ಅವಿಭಜಿತ ಜಿಲ್ಲೆಯಲ್ಲಿ ಈ ಸ್ಥಿತಿಗೆ ತಲುಪಿದ್ದಾರೆ. ಇವತ್ತು ಅವಿಭಜಿತ ಜಿಲ್ಲೆಯ ರಾಜಕೀಯದಲ್ಲಿ ಗೌಡ್ರುಗಳ ಅಡ್ರೆಸ್ಸೇ ಇಲ್ಲ. ಹೋದ ಮ್ಯಾಚನ್ನು ವಾಪಾಸ್ ತರಲು ಗೌಡ್ರುಗಳಲ್ಲಿ ಅಂತಹ ವಿಕೆಟೂ ಇಲ್ಲ. ಮುಂಡೋಡಿಗಳಿಗೆ ಏಜ್ ಆದರೆ ವೆಂಕಪ್ಪ ಗೌಡರು ಕೋರ್ಟಿನಲ್ಲಿ ಬ್ಯುಸಿ. ಅಡ್ಪಂಗಾಯರು ಬಿಸಿನೆಸ್ ಕಡೆ ಇದ್ದರೆ ಪಿ.ಸಿ ತೋಟ, ಸೊಸೈಟಿ ಅಂತ ಇದ್ದಾರೆ. ಇನ್ನು ಪುತ್ತೂರು ಕಾಂಗ್ರೆಸ್ ನಲ್ಲಿ ಗೌಡ್ರುಗಳ ಅಡ್ರೆಸ್ಸೇ ಇಲ್ಲ. ಇನ್ನು ದೇಶಭಕ್ತರ ಗ್ಯಾಂಗ್ ನಲ್ಲಿ ಭರವಸೆ ಅಂತ ಇರೋದು ದಂಬೆಕೋಡಿ ಮತ್ತು ಕಂಜಿಪಿಲಿ ಮೇಲೆ. ಇಬ್ಬರನ್ನೂ ಲಾಸ್ಟ್ ಒವರ್ ಗಳಲ್ಲಿ ಬ್ಯಾಟಿಂಗ್ ಗೆ ಕಳುಹಿಸಿದರೂ ಸಾಕು ಒವರ್ ಗೆ ಮೂವತ್ತಾರು ಹೊಡೆದು ಬಿಡುವ ಸಾಧ್ಯತೆ ಇದೆ. ಆದರೆ ದೇಶಭಕ್ತರ ಅಣ್ಣೇರ್ ಗಳು ಮನಸ್ಸು ಮಾಡುತ್ತಿಲ್ಲ. ಇನ್ನು ಆ ಮಡ್ತಿಲ ಕೂಡ ಓವರ್ ಇದ್ದರೆ ಹೊಡೆಯುವ ಮ್ಯಾನೇ. ಆದರೆ ಕುಕ್ಕೆ ಕೊಟ್ಟು ಹದಿನೈದರ ಟೀಮ್ ನಲ್ಲಿ ಕೂರಿಸಿ ಬಿಟ್ಟಿದ್ದಾರೆ. ಗೌಡ್ರುಗಳು ರಾಜಕೀಯ ಸ್ಥಾನಮಾನಕ್ಕಾಗಿ‌ ಬೊಬ್ಬೆ ಹೊಡೆಯಬೇಕು, ಹೈಕಮಾಂಡ್ ಗೆ ಪ್ರೆಷರ್ ಹಾಕಿ ಹೈ ಪ್ರೆಷರ್ ಮಾಡಿಸಬೇಕು, ಸೀನ್ ಕ್ರಿಯೇಟ್ ಮಾಡಬೇಕು, ಹೈಕಮಾಂಡ್ ಗೆ ಟೆನ್ಷನ್ ಕೊಡಬೇಕು, ಸೀಟು ಕೊಡದಿದ್ದರೆ ಐದು ಲಕ್ಷ ಗೌಡ್ರ ಓಟು ಬೇರೆ ಪಕ್ಷಕ್ಕೆ ಹೋಗುತ್ತದೆ ಎಂಬ ಹೆದರಿಕೆ ಹುಟ್ಟಿಸಿ ಅದನ್ನು ಕಾಲಕಾಲಕ್ಕೆ ಬೆಳೆಸುತ್ತಾ ಬರಬೇಕು. ಹಾಗೆ ಮಾಡಿದರೆ ಮಾತ್ರ ಅಣ್ಣೆರ್ ಗಳಿಗೆ ಮತ್ತು ಅಣ್ಣಾಗಳಿಗೆ ಚಳಿ ಹಿಡಿಸಲು ಸಾಧ್ಯ. ಇಲ್ಲದಿದ್ದರೆ ಅವರಿಬ್ಬರೂ ಸೇರಿ ಗೌಡ್ರುಗಳಿಗೆ ಮೂಲೆಗುಂಪು ನಾಯಕನ ಪಟ್ಟ ಕಟ್ಟಿ ಬಿಡುತ್ತಾರೆ. ಈಗ ಆದದ್ದೂ, ಆಗುತ್ತಿರುವುದೂ ಅದೇ.
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಇದೀಗ ಆ ಕೋಟಾ ಶ್ರೀನಿವಾಸ ಪೂಜಾರಿ ಎಂಪಿ ಆದ ಮೇಲೆ ಅವರು ಕೂತಿದ್ದ ಆ ಹಳೇಯ ಎಮ್ಮೆಲ್ಸಿ ಸೀಟನ್ನಾದರೂ ಗೌಡ್ರುಗಳಿಗೆ ಕೊಡಲೇ ಬೇಕಾಗಿದೆ. ಯಾಕೆಂದರೆ ಐದು ಲಕ್ಷ ಜನ ಸಂಖ್ಯೆಯ ಒಂದು ಸಮುದಾಯಕ್ಕೆ ನ್ಯಾಯ ಕೊಡಬೇಕಾಗಿದೆ. ಆದರೆ ಈ ಬಗ್ಗೆ ಯಾವುದೇ ಗೌಡ್ರುಗಳು ಹಕ್ಕು ಮಂಡನೆ ಮಾಡಿರುವ ಸಾಧ್ಯತೆ ಕಡಿಮೆ. ಯಾಕೆಂದರೆ ಬಿಜೆಪಿಯ ಅಣ್ಣೆರ್ ಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿರುವ ದೇಶಭಕ್ತ ಗೌಡ್ರುಗಳು ಅತ್ಲಕಡೆ ಹೋಗಿರುವ ಛಾನ್ಸಸ್ ಭಾರೀ ಕಡಿಮೆ. ಹಾಗಾಗಿ ಆ ಎಮ್ಮೆಲ್ಸಿ ಸೀಟಿನ ಲಿಸ್ಟಿನಲ್ಲಿ ಬಂಟರು ಇದ್ದಾರೆ, ಬಿಲ್ಲವರು ಇದ್ದಾರೆ. ಮೊಗವೀರರೂ ಇದ್ದಾರೆ. ಕಡೆಗೆ ಭಟ್ರುಗಳ ಕೋಟಾದಡಿ ಅರುಣ್ ಪುತ್ತಿಲ ಹೆಸರು ಕೂಡ ಇದೆ. ಆದರೆ ಒಬ್ಬ ಗೌಡ ಲೀಡರ್ ಹೆಸರಿಲ್ಲ. ಹಾಗೆಂದು ಇಲ್ಲಿ ಒಂದು ವಿಶೇಷ ಏನೆಂದರೆ ಒಬಿಸಿ ಕೋಟಾದಡಿ ಕೊಡಿ, ಅವರು ಬೆಂಬಲ ನನಗಿದೆ ಎಂದು ಬಾಕಿ ಎಲ್ಲಾ ಜಾತಿ ಲೀಡರ್ ಗಳು ರೈಲು ಬಿಟ್ಟು ಸ್ಥಾನ ಪಡೆದರೆ ಅದೇ ಒಬಿಸಿಯಲ್ಲಿ ಗೌಡ್ರುಗಳೂ ಇದ್ದಾರೆ. ಆದರೆ ಒಬಿಸಿ ಹೆಸರೆತ್ತಲೂ ಅವರಿಗೆ ಗಡಗಡ. ಯಾಕೆಂದರೆ ಬಂಟರು, ಬಿಲ್ಲವರೂ ಒಬಿಸಿ ಅಡಿಯಲ್ಲಿ ಬರುತ್ತಾರೆ. ಗೌಡ್ರುಗಳು ರಾಜಕೀಯವಾಗಿ ಯಾಕೆ ಅಷ್ಟೊಂದು ಹೆದರಿಕೊಳ್ಳುತ್ತಾರೆ? ಕಾಂಗ್ರೆಸ್ ಅಣ್ಣಾಗಳಿಗೆ ಯಾಕೆ ಸಲಾಂ ಹೊಡೆಯುತ್ತಾರೆ, ಬಿಜೆಪಿ ಅಣ್ಣೆರ್ ಗಳಿಗೆ ಯಾಕೆ ಸಾಷ್ಟಾಂಗ ಮಾಡುತ್ತಾರೆ?    ಅವರಿಗೇನು ಕೊಂಬು ಇದೆಯಾ ಅಥವಾ ಕೈಕಾಲುಗಳು ಜಾಸ್ತಿ ಇದೆಯಾ?   ಟಿಕೆಟ್ ಕೊಡದಿದ್ದರೆ ಐದು ಲಕ್ಷ ಗೌಡ್ರ ಓಟೂ ನಿಮಗೆ ಸಿಗಲ್ಲ ಎಂದು ಒಂದು ಅವಾಜ್ ಹಾಕಿದರೂ ಸಾಕು ದಕ್ಷಿಣ ಕನ್ನಡದ ಅಷ್ಟೂ ಅಣ್ಣೇರ್ ಗಳಿಗೆ ಮತ್ತು ಅಣ್ಣಾಗಳಿಗೆ ಚಳಿ ಜ್ವರ ಶುರುವಾಗಿ ಬಿಡುತ್ತದೆ. ಆದರೆ ಹಾಗೆ ಆವಾಜ್ ಹಾಕುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಯುವರ್ ಆನರ್,
ಗೌಡ ಅಂದರೆ ದೇವೇಗೌಡರಂತೆ ಇರಬೇಕು, ಅವರ ಮಕ್ಕಳಂತೆ ಇರಬೇಕು. ಗೌಡ ಅಂದರೆ ಡಿ.ಕೆ ಶಿವಕುಮಾರನಂತೆ ಇರಬೇಕು ಅಥವಾ ಅವರ ತಮ್ಮನಂತೆ ಇರಬೇಕು. ಗೌಡ ಅಂದರೆ ರೆಬೆಲ್ ಸ್ಟಾರ್ ಅಂಬರೀಷನಂತಿರ ಬೇಕು. ಗೌಡ ಅಂದರೆ ಕೃಷ್ಣ ಭೈರೇಗೌಡ, ಅಶ್ವಥ್ ನಾರಾಯಣ, ಅಶೋಕ್, ಚೆಲುವ ನಾರಾಯಣನಂತಿರ ಬೇಕು. ಗೌಡ ಅಂದರೆ ಕಡೇ ಪಕ್ಷ ಸವಣೂರಿನ ಇಡ್ಯಾಡಿ ಶಿವಣ್ಣನಂತಾದರೂ ಬೇಕು. ಒಬ್ಬ ಗೌಡ ಅಂದರೆ ಅವನಿಗೆ ಗಟ್ಸ್ ಇರಬೇಕು, ಛಲ ಇರಬೇಕು, ಹೋರಾಟದ ಕಲೆ ಗೊತ್ತಿರಬೇಕು. ಮಾತಿನ ವಾಗ್ಬಾಣದಲ್ಲಿ ವಾಗ್ಧಾಳಿ ನಡೆಸಿ  ಎದುರಾಳಿಗಳನ್ನು ಧೂಳಿಪಟ ಮಾಡುವ ಚಾಕಚಕ್ಯತೆ ಇರಬೇಕು. ಗೌಡ ಅಂದರೆ ಎದುರಾಳಿಗಳಿಗೆ ಸೀರಿಯಸ್ ಟೆನ್ಷನ್ ಕೊಡುವವನಾಗಿರಬೇಕೇ ಹೊರತು ಟೆನ್ಷನ್ ಮಾಡಿಕ್ಕೊಂಡು ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡುವವನಾಗಿರ ಬಾರದು. ಗೌಡ ಅಂದರೆ ತನ್ನ ಸಮುದಾಯಕ್ಕೆ ನ್ಯಾಯ ಒದಗಿಸುವ ಮತ್ತು ಇಡೀ ಊರಿಗೆ ಲೀಡರ್ ಶಿಪ್ ಒದಗಿಸುವ ಚತುರನಾಗಿರಬೇಕು. ಆದರೆ ತುಳುನಾಡಿನ ಯಾವ ಗೌಡ್ರುಗಳೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡದ್ದು ವಿಪರ್ಯಾಸವೇ ಸರಿ. ತುಂಬಿ ತುಳುಕುವ ಮೆಜಾರಿಟಿ ಇದ್ದರೂ, ಮೂರು ತಾಲೂಕುಗಳಲ್ಲಿ ನಿರ್ಣಾಯಕರಾಗಿದ್ದರೂ, ವಿದ್ಯೆ, ಬುದ್ಧಿ ದೇವರು ಕೊಟ್ಟಿದ್ದರೂ, ಆಸ್ತಿ ಅಂತಸ್ತು ಮೂರು ತಲೆಮಾರಿಗೆ ಸಾಕಿದ್ದರೂ ಗೌಡ್ರ ಟೀಮಿನಲ್ಲಿ ಓಪನರ್ಸ್ ಇಲ್ಲದ್ದು ಸಮುದಾಯದ ಬ್ಯಾಡ್ ಲಕ್ ಅಂತಲೇ ಹೇಳಬೇಕಷ್ಟೆ. ಗೌಡ ಸಮುದಾಯ ಬೆಳದಿಂಗಳ ಬೆಳಕು ನೀಡುವ ಚಂದಿರ ಆಗಿದ್ದರೂ ತನ್ನನ್ನು ತಾನು ಮಿನುಗು ಹುಳ ಅಂತ ಅಂಡರ್ ಎಸ್ಟಿಮೇಟ್ ಮಾಡಿಕೊಂಡಿದ್ದು ಯಾರ ಗ್ರಹಚಾರ ಎಂದೇ ಅರ್ಥ ಆಗುತ್ತಿಲ್ಲ.


...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಗೌಪ್ಯ ದಾನ
   ಯಾರೂ ನೋಡದಂತೆ,ಯಾರಿಗೂ ತಿಳಿಯದಂತೆ ಮಾಡಿದ್ದು ದಾನವಾದರೂ ಕೂಡಾ ಅದರ ಫಲಿತಾಂಶ ಯಾರೂ ನೋಡದ,ಏನೂ ತಿಳಿಯದ ಜಾಗಕ್ಕೇ ಹೋಗಿ ಸೇರಬಹುದು.ದಾನವನ್ನಾದರೂ ಕೂಡಾ ಕದ್ದು ಮುಚ್ಚಿ ಮಾಡುವಂತಿಲ್ಲ.ಯಾಕೆಂದರೆ, ಅದು ನಮ್ಮ ದುಡಿತಕ್ಕಿರುವ ಸಾಕ್ಷಿ.. ಒಂದು ಕಾರ್ಯಕ್ರಮ ಮಾಡುವುದಿದ್ದರೂ ಅದನ್ನು ಯಾರೂ ನೋಡದಂತೆ, ಯಾರಿಗೂ ಹೇಳದಂತೆ ಮಾಡಿದರೆ, ಅದು ಕಾರ್ಯಕ್ರಮ ಆಗುತ್ತದೆಯೇ ? ನಾವುಗಳು ದುಡಿಯುವ ದುಡಿಮೆ ಕೂಡಾ ರಾಜಾರೋಷದಿಂದ ಕೂಡಿರಬೇಕು..ಇಲ್ಲವೆಂದಾದಲ್ಲಿ ನಮ್ಮ ದುಡಿಮೆ ಕೂಡಾ ನಿಷ್ಪ್ರಯೋಜಕವಾಗಬಹುದು... ನಮ್ಮ ದುಡಿಮೆಯ ನಾವೇ ಇದು ನಮ್ಮ ದುಡಿಮೆ ಇದು ನಾನು, ನನ್ನದೆಂದು ನೇರವಾಗಿ ಹೇಳಿಕೊಳ್ಳಲಾಗದೆ ಎಲ್ಲದಕ್ಕೂ ಹೆದರುತ್ತಿದ್ದೇವೆ ಎಂದರೆ ನಾವಿನ್ನೂ ಹೊರಬಂದಿಲ್ಲ ಎಂದು ಅರ್ಥ.. ನಮ್ಮ ದುಡಿಮೆಯನ್ನು ನಮಗೇ ಒಪ್ಪಿಕೊಳ್ಳಲಾಗುತ್ತಿಲ್ಲವೆಂದರೆ, ನಾವು ಮಾಡುವ ದುಡಿಮೆಯಲ್ಲಿ ಕುಂದು ಕೊರತೆಗಳಿರಬಹುದು...ದುಡಿಮೆ ಹಾಗೂ ದಾನ ಇವೆರಡಕ್ಕೂ ಒಬ್ಬ ವ್ಯಕ್ತಿ ಹೆದರುತ್ತಿದ್ದಾನೆಂದರೆ, ತಾನಿನ್ನೂ ಸಂಪೂರ್ಣನಲ್ಲ... ತಾನಿನ್ನೂ ತನ್ನನ್ನು ಉಪಯೋಗಿಸಲು ಬಾಕಿ ಇದೆ ಎಂದು ಅರ್ಥ... ತಾನಿನ್ನೂ ಯಾರ ಎದುರೂ ಕೂಡಾ ಪರಿಪೂರ್ಣವಾಗಿ ನೇರ ನಿಂತಿಲ್ಲವೆಂದು ಅರ್ಥ..ತಾನು ಮಾಡುವ ದುಡಿಮೆಯಲ್ಲಿ ಭಯ ಇರುವಂತಾಗಬಾರದು... ತನ್ನ ದುಡಿಮೆ ಯಾವತ್ತಿಗೂ ಇತರರಿಗೆ ಹೆದರಿ ದುಡಿಯುವಂತಾಗಬಾರದು... ಕದಿಯುವುದಕ್ಕೆ ಹೆದರಬೇಕೇ ಹೊರತು ದುಡಿಯುವುದಕ್ಕೂ, ಒಳ್ಳೆಯ ಕೆಲಸ ಮಾಡುವುದಕ್ಕೂ, ದಾನ ಧರ್ಮಕ್ಕೂ, ಧರ್ಮ ಕಾರ್ಯಕ್ಕೂ ಹೆದರುವಂತಿರಬಾರದು..
ಕೆಟ್ಟ ಕೆಲಸ ಮಾಡಲು ಕೆಲವರು ಹೆದರುವುದೇ ಇಲ್ಲ ಬಹು ಬೇಗ ಮಾಡಿ ಮುಗಿಸುತ್ತಾರೆ...ಅದೇ ಒಳ್ಳೆಯ ಕೆಲಸ ಮಾಡುವುದಾದರೆ, ಅನೇಕ ವಿಘ್ನಗಳು,ಕುಹಕಗಳು ಎದುರಾಗುತ್ತವೆ.ಇಂತಹದ್ದನ್ನೆಲ್ಲ ಮೆಟ್ಟಿ ನಿಲ್ಲಬೇಕಾದರೆ, ನಾವು. ಎಲ್ಲರ ಎದುರು ನಮ್ಮ ಸತ್ಯ, ನಾವು ಮಾಡುವ ಸತ್ಯವನ್ನು ನೇರಾ ನೇರ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬರಬೇಕೆಂದು ನಾವೆಲ್ಲರೂ ಆ ಭಗವಂತನಲ್ಲಿ ಪ್ರಾರ್ಥಿಸಬೇಕು.. ಇದರಿಂದ ಭಗವಂತನೂ ಸುಪ್ರಸನ್ನನಾಗಿ 
ಆರೋಗ್ಯ, ನೆಮ್ಮದಿ, ಸಂಪತ್ತುಗಳನ್ನು ನೀಡುತ್ತಾನೆ ಎಂಬ ಭರವಸೆಯ ಆತ್ಮ ವಿಶ್ವಾಸ ಹೊಂದಿ ಈ ಲೇಖನ ನಿಮಗಾಗಿ ಹಾಗೂ ನಮಗಾಗಿ...


-ಶ್ರೀಮತಿ ಶಾಂತಾ ಕುಂಟಿನಿ
...................................................
ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget