"ಹಾಗೆಂದು ಪುತ್ತೂರಿನಲ್ಲಿ ನಾಯಕರಿಗಿಂತ ಮೂಲೆ ಗುಂಪು ನಾಯಕರೇ ಜಾಸ್ತಿ. ಇದರಲ್ಲಿ ಬಿಜೆಪಿಯವರ ಕತೆ ಬಿಡಿ, ಅದರಲ್ಲಿ ನಾಯಕನಾಗೋದೇ ಮೂಲೆಗುಂಪು ನಾಯಕನಾಗಲು. ಇನ್ನು ಕಾಂಗ್ರೆಸಿನವರ ಕತೆಯೂ ಇದಕ್ಕೆ ಹೊರತಾಗಿಲ್ಲ. ಆದರೆ ಪುತ್ತೂರು ಕಾಂಗ್ರೆಸ್ಸಿನಲ್ಲಿ ಬೆಳೆದು ಹೆಮ್ಮರವಾಗಿರುವ "ಅಣ್ಣಾ ಸಂಸ್ಕೃತಿ" ಮಾತ್ರ ಬಾಕಿ ಯಾವ ನಾಯಕರನ್ನೂ ಬೆಳೆಯಲು ಬಿಡುತ್ತಿಲ್ಲ. ಅದರಲ್ಲೂ ವಿನಯ್ ಕುಮಾರ್ ಸೊರಕೆ ಎಂಬ ಬಿಲ್ಲವ ನಾಯಕನನ್ನು ಹೇಗೆ ಸೋಲಿಸಲಾಯಿತೆಂದರೆ ಆ ನಾಯಕ ಪುತ್ತೂರನ್ನೇ ಬಿಡಬೇಕಾಯಿತು. ಸಿ.ಪಿ ಜಯರಾಮ ಗೌಡ ಎಂಬ ಒಕ್ಕಲಿಗ ಗೌಡ ನಾಯಕನನ್ನು ಹೇಗೆ ತುಳಿಯಲಾಯಿತೆಂದರೆ ಜಯರಾಮ ಗೌಡರು ಕಡೇ ಪಕ್ಷ ಜಿಲ್ಲಾ ಪಂಚಾಯಿತಿ ಸೀಟಲ್ಲೂ ಗೆಲ್ಲದ ಹಾಗೆ ನೋಡಿಕೊಳ್ಳಲಾಯಿತು. ಇನ್ನೊಬ್ಬ ಪ್ರಬಲ ಮುಸ್ಲಿಂ ನಾಯಕ ಕೆ.ಪಿ ಅಬ್ದುಲ್ಲ ರನ್ನು ವಿಟ್ಲಕ್ಕೆ ಶಿಫ್ಟ್ ಮಾಡಿ ಅಲ್ಲಿ ದಯಾನೀಯವಾಗಿ ಸೋಲಿಸಲಾಯಿತು. ಈ ಅಣ್ಣಾ ಸಂಸ್ಕೃತಿಯನ್ನು ಕ್ಯಾರೇ ಮಾಡದ, ಅಣ್ಣಾಗಳಿಗೆ "ದೊಡ್ಡಣ್ಣ ನಾನು" ಎಂದು ಘರ್ಜಿಸಿದ ಜೀವನ್ ಭಂಡಾರಿಯನ್ನೂ ವ್ಯವಸ್ಥಿತವಾಗಿ ಮೂಲೆಗುಂಪು ನಾಯಕನನ್ನಾಗಿ ಮಾಡಲಾಯಿತು. ಆ ಎಲ್ಲಾ ಕಾಲಘಟ್ಟದಲ್ಲೂ ಕಾಂಗ್ರೆಸ್ಸ್ ಟೀಮಲ್ಲಿ ಭದ್ರವಾಗಿ ನಿಂತು, ಪ್ರತೀ ಚುನಾವಣೆಗಳಲ್ಲೂ ಕಾಂಗ್ರೆಸ್ ಪರ ಸಿಕ್ಸರ್, ಬೌಂಡರಿ ಬಾರಿಸಿ ಕಾಂಗ್ರೆಸಿಗೆ ಒಂದು stand ಕೊಟ್ಟ ಮೊಹಮ್ಮದ್ ಆಲಿಯನ್ನೂ ಕಾಲ ಕಾಲಕ್ಕೆ ತುಳಿಯುತ್ತಾ ಬಂದ ಅಣ್ಣಾ ಸಂಸ್ಕೃತಿ ಯಾವ ಕಾರಣಕ್ಕೂ ಆಲಿಯನ್ನು ಬೆಳೆಯಲು ಬಿಡಬಾರದು ಎಂಬ ಹಠಕ್ಕೆ ಬಿದ್ದಂತಿದೆ. ಯಾಕೆಂದರೆ ಆಲಿ ಯಾವುದೇ ಸೀಟಲ್ಲಿ ಕುಂತರೂ ತಮ್ಮ ಜಾತಕ ಬಿಡಿಸುತ್ತಾರೆ ಎಂಬ ಹೆದರಿಕೆ ಕಾಂಗ್ರೆಸಿಗರಿಗೆ. ಹಾಗಾಗಿ ಬಲಿಗೆ ವಾಮನ ತುಳಿದ ಹಾಗೆ ತುಳಿಯುವುದು. ಆಲಿಯನ್ನೂ ಮೂಲೆ ಗುಂಪು ನಾಯಕ ಮಾಡಿ ಬಿಟ್ಟರೆ ಎಲ್ಲಾ ಕುರ್ಚಿಗಳಲ್ಲೂ ತಮ್ಮದೇ ಜನ ಕೂರಬಹುದು ಎಂಬುದು ಪೊಕ್ಕಡೆ ಕಾಂಗ್ರೆಸಿಗರ ಹಗಲು ಕನಸು.
ಮೊಹಮ್ಮದ್ ಆಲಿ! ಪುತ್ತೂರು ಕಂಡ ಏಬಲ್,ಎ ವನ್ ಕಾಂಗ್ರೆಸ್ ನಾಯಕ. ಫರ್ಫೆಕ್ಟ್ ಲೀಡರ್ ಶಿಪ್, ನಾನ್ ಕರಫ್ಟ್, ಜನಪರ, ಹಂಡ್ರೆಡ್ ಪರ್ಸೆಂಟ್ ಸೆಕ್ಯುಲರ್, ದೂರಗಾಮಿ ಚಿಂತನೆ, ಎಲ್ಲಾ ಜಾತಿಗಳನ್ನು ಒಗ್ಗೂಡಿಸಿ ಮುನ್ನಡೆಸುವ ಚಾತಿ, ಬಡವರ ದೀನ ದಲಿತರ, ಶೋಷನೆಗೊಳಗಾದವರ ಸಮಾನ ಮನಸ್ಕ, ಅನುಭವಿ ರಾಜಕಾರಣಿ, ರಾಜಕೀಯದ ಮದಗಜಗಳೊಂದಿಗೆ ಹೋರಾಡಿದ, ಹೋರಾಡುವ ಧೈರ್ಯ, ಛಲ ಇರುವ ಆಲಿಯನ್ನು ಕೂಡ ಅಣ್ಣಾ ಸಂಸ್ಕೃತಿ ಮೂಲೆ ಗುಂಪು ನಾಯಕ ಮಾಡಲು ಕಳೆದ ಹಲವು ದಶಕಗಳಿಂದ ಪ್ರಯತ್ನಿಸಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. ಯಾಕೆಂದರೆ ಯೂ.ಟಿ ಖಾದರ್ ವಾಟರ್ ಬ್ಯಾಗ್ ಹಿಡ್ಕೊಂಡು ಶಾಲೆ ಕಡೆ ಹೋಗುವಾಗಲೇ ಆಲಿ ಸಕ್ರೀಯ ರಾಜಕಾರಣದಲ್ಲಿ ಇದ್ದರು. ಆದರೆ ಈಗ ಯೂ.ಟಿ ಎಲ್ಲಿದ್ದಾರೆ, ಆಲಿ ಎಲ್ಲಿದ್ದಾರೆ. ರಾಜಕಾರಣದಲ್ಲಿ ಆಲಿ ಇಷ್ಟೆಲ್ಲಾ ಪರದಾಡಲು ಕಾರಣ ಪುತ್ತೂರಿನ ಅಣ್ಣಾ ಸಂಸ್ಕೃತಿ.
ಹಾಗೆಂದು ಆಲಿ ಹತ್ತು ವರ್ಷಗಳ ಚಿಕ್ಕ ಹುಡುಗನಿರುವಾಗಲೇ ಚರ್ಚ್ ಬಿಲ್ಡಿಂಗ್ ನಲ್ಲಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದವರು. ಎಂಟನೇ ಕ್ಲಾಸಿಗೇ ಚಡ್ಡಿ ಸಿಕ್ಕಿಸಿಕೊಂಡು ಜನಾರ್ದನ ಪೂಜಾರಿಯ ಫಸ್ಟ್ ಎಲೆಕ್ಷನ್ ಗೆ ಮಂಜಲ್ಪಡ್ಪುನ ಬೂತ್ ಜವಾಬ್ದಾರಿ ಹೊತ್ತ ಆಲಿ ಒಂಭತ್ತನೇ ತರಗತಿಯಲ್ಲಿ ಪುತ್ತೂರು ನಗರ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ. ನಂತರ ವಿನಯ್ ಕುಮಾರ್ ಸೊರಕೆ ಟೈಮಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಕೆ.ಪಿ ಅಬ್ದುಲ್ಲಾ ಕಾಲದಲ್ಲಿ ಆಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. 86-87ರಲ್ಲಿ ಆರ್ಯಾಪು, ಕೆಮ್ಮಿಂಜೆ,ಕುರಿಯ ಮೂರು ದೊಡ್ಡ ದೊಡ್ಡ ಗ್ರಾಮಗಳ ಒಗ್ಗೂಡಿಸಿ ಸಂಪ್ಯ ಮಂಡಲ ಪಂಚಾಯ್ತಿ ರಚನೆ ಆದಾಗ ಆಲಿ ಅದರ ಮೊದಲ ಮಂಡಲ ಪ್ರಧಾನ ಮತ್ತು ಆಗ ಆಲಿಗೆ 21ವರ್ಷ. ಕರ್ನಾಟಕ ರಾಜ್ಯದ ಯಂಗೆಸ್ಟ್ ಮಂಡಲ ಪ್ರಧಾನ ಎಂಬ ಹೆಗ್ಗಳಿಕೆ ಆಲಿದ್ದು. ಆಮೇಲೆ ಕೆಮ್ಮಿಂಜೆ ಪಂಚಾಯ್ತಿ ಆದಾಗಲೂ ಹದಿನೇಳು ಸೀಟುಗಳಲ್ಲಿ ಹದಿನೇಳನ್ನೂ ಬಿಜೆಪಿಗೆ ಒಂದು ಪೀಸನ್ನೂ ಬಿಡದೆ ಕಾಂಗ್ರೆಸ್ ಅಕೌಂಟಿಗೆ ಹಾಕಿಸಿದ ಯುವ ನಾಯಕ ಆಲಿ. ನಂತರ ಕೆಮ್ಮಿಂಜೆ ಗ್ರಾಮ ಮುನ್ಸಿಪಾಲಿಟಿಗೆ ಸೇರಿದ ನಂತರವೂ ಆಲಿ ನಿರಂತರವಾಗಿ ಪುರಸಭಾ ಸದಸ್ಯರಾಗಿ ಆರಿಸಿ ಬಂದಿದ್ದಾರೆ. ನಾಲ್ಕು ಬಾರಿ ಪುರಸಭಾ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಪುರಸಭಾ ವಿರೋಧ ಪಕ್ಷದ ನಾಯಕ ಹೀಗೆ ಪುರಸಭೆಯಲ್ಲಿ ಆಲಿ ಅಲಂಕರಿಸದ ಕುರ್ಚಿಗಳೇ ಇಲ್ಲ. ಪುರಸಭೆಯಲ್ಲಿ ಇಷ್ಟು ಕೆಲಸ ಮಾಡಿಯೂ ಆಲಿಯವರಿಗೆ ಸಿಗದ ಕುರ್ಚಿ ಅಂದರೆ ಅದು ಪುರಸಭಾ ಅಧ್ಯಕ್ಷರ ಕುರ್ಚಿ. ಪುತ್ತೂರು ಪುರಸಭೆಯಲ್ಲಿ ಕಾಂಗ್ರೆಸ್ ಎರಡೆರಡು ಬಾರಿ ಅಧಿಕಾರಕ್ಕೆ ಬಂದರೂ ಮತ್ತು ಆ ಗೆದ್ದ ಎಲ್ಲಾ ಸೀಟುಗಳೂ ಆಲಿ ಕೇರ್ ಆಫ್ ನಲ್ಲಿ ಬಂದಿದ್ದರೂ ಆಲಿಯವರನ್ನು ಅಧ್ಯಕ್ಷಗಾದಿಯಿಂದ ದೂರ ಇಡಲಾಯಿತು ಮತ್ತು ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ಅಣ್ಣಾ ಸಂಸ್ಕೃತಿ ಸಕ್ರೀಯವಾಗಿತ್ತು.
ಹಾಗೆಂದು ಸುಧಾಕರ ಶೆಟ್ಟಿ ಕಾಲದಿಂದಲೂ ಆಲಿಯವರನ್ನು ವ್ಯವಸ್ಥಿತವಾಗಿ ತುಳಿಯಲಾಯಿತು. ಆಲಿಯ ನಾನ್ ಕರಫ್ಟ್, ನೇರ ಮಾತು, ಭ್ರಷ್ಟಾಚಾರಿಗಳೊಂದಿಗೆ ನೋ ಕಾಂಪ್ರಮೈಸ್, ಡ್ಯಾಶಿಂಗ್ ನೇಚರ್ ಹಲವು ಕಾಂಗ್ರೆಸಿಗರ ನಿದ್ದೆಗೆಡಿಸಿತ್ತು.ಕಾಂಗ್ರೇಸಿನಲ್ಲಿದ್ದ ಬ್ರೋಕರ್ ಗಳು, ವಂಚಕರು, ಕಮಿಷನ್ ಏಜೆಂಟ್ ಗಳು, ಭೂಗಳ್ಳರು, ಮರಗಳ್ಳರು ಹೀಗೆ ಬೇರೆ ಬೇರೆ ಸೈಜಿನ ಕಳ್ಳಕಾಕರೆಲ್ಲ ಹೋಗಿ ಆಲಿ ಬಗ್ಗೆ ಸುಧಾಕರ ಶೆಟ್ಟಿಯ ಕಿವಿ ತುಂಬಿಸಿ ಬಿಡುತ್ತಿದ್ದರು ಮತ್ತು ಆಲಿಗೆ ಪರ್ಯಾಯವಾಗಿ ಮೊಹಮ್ಮದ್ ಹಟ್ಟಾ ಎಂಬ ಸೌಮ್ಯವಾದಿ ನಾಯಕನನ್ನು ರೀಪ್ಲೇಸ್ಮೆಂಟ್ ಮಾಡಲಾಯಿತು. ಅನಂತರ ಹಟ್ಟಾರಿಗೆ ಪೂಡಾ ಅಧ್ಯಕ್ಷ ಪಟ್ಟ ಕೂಡ ಕಟ್ಟಲಾಯಿತು. ನಂತರ ಕಾಂಗ್ರೆಸ್ ಸರ್ಕಾರ ಬಂದಾಗಲೂ, ಪಕ್ಷದಲ್ಲೂ ಆಲಿಗೆ ಯಾವುದೇ ಸ್ಥಾನಮಾನಗಳನ್ನು ನಿರಾಕರಿಸುತ್ತಾ ಬರಲಾಯಿತು. ಆಲಿಯವರಿಗೆ ರಾಜ್ಯ ,ಜಿಲ್ಲಾ ಕಾಂಗ್ರೆಸ್ ನಾಯಕರ ಬೆಂಬಲ ಇದ್ದರೂ ಬ್ಲಾಕ್ ಕಾಂಗ್ರೆಸ್ ಮಾತ್ರ ಅಣ್ಣಾ ಸಂಸ್ಕೃತಿಯ ಹಿಡಿತದಲ್ಲಿ ಇದ್ದ ಕಾರಣ ಆಲಿ ಬಗ್ಗೆ ಕಾಲ ಕಾಲಕ್ಕೆ ನೆಗೆಟಿವ್ ಮಾಹಿತಿಗಳನ್ನು ನೀಡಿ ಜಿಲ್ಲಾ, ರಾಜ್ಯ ನಾಯಕರ ದಾರಿ ತಪ್ಪಿಸುವ ಮೂಲಕ ಆಲಿಯವರ ರೆಕ್ಕೆ ಪುಕ್ಕ ಕಟ್ ಮಾಡಲಾಗುತ್ತಿತ್ತು.
ಆವತ್ತು ಪುತ್ತೂರು ಪುರಸಭೆಯಲ್ಲಿ ಎರಡೆರಡು ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ನಿರ್ದಾಕ್ಷಿಣ್ಯವಾಗಿ ಆಲಿಯವರಿಗೆ ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. 2014 ರಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ವಾಣಿ ಶ್ರೀಧರ್ ಎಂಬ ಕಾಂಗ್ರೆಸ್ ಸದಸ್ಯೆಯನ್ನು ಪಕ್ಷಾಂತರ ಮಾಡಿಸಿ ದೇಶಭಕ್ತರು ಅಧಿಕಾರಕ್ಕೆ ಬರುವಂತೆ ಸ್ಕೆಚ್ ಮಾಡಿ ಆಲಿ ಕೈಗೆ ಅಧಿಕಾರ ಸಿಗದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನವಾಗಿ ಜಂಟಿ ಕಾರ್ಯಾಚರಣೆ ಮಾಡಿದ್ದವು. ಅಣ್ಣಾ ಸಂಸ್ಕೃತಿಯ ಕಾಂಗ್ರೆಸ್ ಮೆಂಟಾಲಿಟಿ ಹೇಗೆ ಅಂದರೆ ಬಿಜೆಪಿ ಆದರೂ ಅಧಿಕಾರಕ್ಕೆ ಬರಲಿ ಆದರೆ ಆಲಿ ಸಿಗಬಾರದು ಅಂದರೆ ಮಗ ಸತ್ತರೂ ಪರವಾಗಿಲ್ಲ ಸೊಸೆ ವಿಧವೆ ಆಗಲೇ ಬೇಕು ಎಂಬಂತೆ. ನಂತರ ಈ ಬಗ್ಗೆ ಆಲಿಯವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಕೋರ್ಟಿಗೆ ಹೋಗಿ ಜಯಶಾಲಿಯಾಗಿ ಮತ್ತೇ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಬಂದರೆ ಒಮ್ಮೆಗೇ ಸ್ವಪಕ್ಷದ ಆರು ಸದಸ್ಯರು ರೆಬೆಲ್ ಆಗಿ ದೇಶಭಕ್ತರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರುತ್ತಾರೆ. ಒಬ್ಬ ಜನ ನಾಯಕನಿಗೆ ಮಾಡಿದ ಈ ವಿಶ್ವಾಸ ದ್ರೋಹ ಮಾತ್ರ ಪುತ್ತೂರಿನ ರಾಜಕೀಯ ಇತಿಹಾಸದಲ್ಲಿ ಬರೆದಿಡಬೇಕಂತಹ ಒಂದು ಪ್ರಮುಖ ಘಟ್ಟ. ನಂತರದ ಪುರಸಭಾ ಎಲೆಕ್ಷನ್ ಗಳಲ್ಲಿ ಕಾಂಗ್ರೆಸ್ ಮೆಜಾರಿಟಿ ಬಂದರೂ ಆಲಿಗೆ ಪ್ರತಿಕೂಲ ಆಗುವಂತಹ ಮೀಸಲಾತಿ ತಂದು ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. ಕಳೆದ ನಗರ ಸಭೆಯ ಎಲೆಕ್ಷನ್ ಟೈಮಲ್ಲಿ ಸಿಟ್ಟಿಂಗ್ ಕೌನ್ಸಿಲರ್ಸ್ ಗಳಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ಆದೇಶ ಇದ್ದರೂ ಆಲಿಯವರಿಗೆ ಇದೇ ಅಣ್ಣಾ ಸಂಸ್ಕೃತಿ ಕುಂಟು ನೆಪ ಹೇಳಿ ಟಿಕೆಟ್ ತಪ್ಪಿಸಿತು. ಅಣ್ಣಾ ಸಂಸ್ಕೃತಿಗೆ ಸೆಡ್ಡು ಹೊಡೆಯುವ, ಸೈಡ್ ಹೊಡೆಯುವ, ಸರೆಂಡರ್ ಆಗದ ಯಾವುದೇ ನಾಯಕನನ್ನು ಸೈಲೆಂಟಾಗಿ ಸೈಡಿಗೆ ಹಾಕಿ ಬಿಡಲಾಗುತ್ತಿದೆ. ಇದಕ್ಕೆ ದಿನ ಬೆಸ್ಟ್ ಉದಾಹರಣೆ ಮೊಹಮ್ಮದ್ ಆಲಿ.
....................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
...................................................
ಹಾಗೆಂದು ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತಾ ಬಂದಿದ್ದೇ ಈ ಅಣ್ಣಾ ಸಂಸ್ಕೃತಿಯ ಕರಾಳ ಛಾಯೆಯಿಂದ. ಅಣ್ಣಾ ಸಂಸ್ಕೃತಿಯಿಂದ ರೋಸಿ ರೋಸಿ ಹೋದವರೆಲ್ಲ ಹೋಗಿ ಬಿಜೆಪಿಗೆ ಓಟು ಹಾಕಿ ಗೆಲ್ಲಿಸಿ ಬಿಟ್ಟರು. ಈ ಖತರ್ನಾಕ್ ಅಣ್ಣಾ ಸಂಸ್ಕೃತಿ ಇದ್ದ ಕಾರಣದಿಂದಲೇ ಸಂಕಪ್ಪ ರೈ ರಾಮಭಟ್ ರಂತಹ ವೀಕ್ ಕ್ಯಾಂಡಿಡೇಟ್ ಮುಂದೆ ಸೋಲಬೇಕಾಯಿತು. ಇದೇ ಅಣ್ಣಾ ಸಂಸ್ಕೃತಿ ವಿನಯ್ ಕುಮಾರ್ ಸೊರಕೆಗೆ ಮೀರ್ ಜಾಫರ್ ನಂತೆ ಬೆನ್ನಿಗೆ ಇರಿಯಿತು. ಇದೇ ಅಣ್ಣಾ ಸಂಸ್ಕೃತಿ ಸುಧಾಕರ ಶೆಟ್ಟಿಯನ್ನು ಎರಡೆರಡು ಸಲ ಸೋಲಿಸಿ ಸುಣ್ಣ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಆವತ್ತು ಬಿಜೆಪಿಯಲ್ಲಿ ಶಕ್ವಕ್ಕೆಯ ದೊಡ್ಡ ಬಂಡಾಯ ಇದ್ದರೂ ಬೊಂಡಾಲ ಜಗನ್ನಾಥ ಶೆಟ್ಟಿ ಎಂಬ ಯುವ ನಾಯಕನನ್ನು ಸೋಲಿಸಿ ದೇಶ ಭಕ್ತರ ಮಲ್ಲಿಕಕ್ಕೆ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿತು. ಇದೇ ಅಣ್ಣಾ ಸಂಸ್ಕೃತಿ ಸಿಟ್ಟಿಂಗ್ ಎಂಎಲ್ಎ ಶಕ್ವಕ್ಕೆ ವಿನಾಕಾರಣ ಸೋಲುವಂತೆ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಹೇಮನಾಥ ಶೆಟ್ಟಿಯನ್ನು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಬಿಟ್ಟಿತು. ಇದೀಗ ಪೂಡಾ ಅಧ್ಯಕ್ಷ ಪಟ್ಟಕ್ಕೆ ಫೈಟ್. ಆಲಿ ಹೆಸರಿನ ಜೊತೆಗೆ ಚಿಕ್ಕ ಚಿಕ್ಕ ಹೆಸರುಗಳ ದೊಡ್ಡ ಪಟ್ಟಿ. ಆಲಿಯನ್ನು ಮುಗಿಸಲು ಇನ್ನಿಲ್ಲದ ಪ್ರಯತ್ನ. ಇಡೀ ಅಣ್ಣಾ ಲೋಕಕ್ಕೆ ನೈಟ್ ನಿದ್ದೆ ಇಲ್ಲ. ಅಣ್ಣಾ ಸಂಸ್ಕೃತಿಯ ವಿಕಿರಣದಿಂದ ಹೊರಗಿರುವ ಜನನಾಯಕ ಶಾಸಕರ ನಿರ್ಧಾರ ಯಾವ ರೀತಿ ಇದೆ ಎಂದು ಕಾದು ನೋಡಬೇಕಿದೆ.
ಯುವರ್ ಆನರ್,
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳ ಗ್ಲೂಕೋಸ್ ನಿಂದ ಐಸಿಯೂನಲ್ಲಿರುವ ಪುತ್ತೂರು ಕಾಂಗ್ರೆಸ್ ಅಣ್ಣಾ ಸಂಸ್ಕೃತಿ ಎಂಬ ಭೀಕರ ಕಾಯಿಲೆಯಿಂದ ಬಳಲಿ ಬೆಂಡಾಗಿದೆ. ಇಷ್ಟು ವರ್ಷಗಳ ಕಾಲವೂ ಮುಸ್ಲಿಂ ಮತಗಳಿಂದಲೇ ಉಸಿರಾಡಿದ ಕಾಂಗ್ರೆಸ್ ಪಕ್ಷದ ಅಣ್ಣಾ ಸಂಸ್ಕೃತಿ ಇಲ್ಲಿ ತನಕ ಯಾವುದೇ ಮುಸ್ಲಿಂ ನಾಯಕನ ಬೆಳೆಯಲು ಬಿಡಲಿಲ್ಲ ಇನ್ನು ಬಿಡುವುದೂ ಇಲ್ಲ. ಅಣ್ಣಾ ಸಂಸ್ಕೃತಿಯ ಅಷ್ಟೂ ಬೆದರಿಕೆಗಳನ್ನು ಮೆಟ್ಟಿ ನಿಂತ ಮೊಹಮ್ಮದ್ ಆಲಿಯಂತಹ ಡ್ಯಾಶಿಂಗ್ ಲೀಡರ್ ಪರವಾಗಿ ಪುತ್ತೂರಿನ ಅಷ್ಟೂ ಮುಸ್ಲಿಂ ಸಮುದಾಯ ನಿಲ್ಲಬೇಕಾಗಿದೆ. ಓಟ್ ಮಾಡಲು ಮುಸ್ಲಿಮರು ಬೇಕು ಆದರೆ ಅವರ ನಾಯಕನನ್ನು ಪಾತಾಳಕ್ಕೆ ತುಳಿಯುವುದು ಯಾವ ನ್ಯಾಯ ಎಂದು ಸಮಸ್ತ ಮುಸ್ಲಿಂ ಸಮುದಾಯವೂ ಆಲೋಚಿಸುವ ಸಮಯ ಬಂದಿದೆ. ವಿನಯ್ ಕುಮಾರ್ ಸೊರಕೆ ನಂತರ ಆಗ ಪವರ್ ಫುಲ್ ಆಗಿದ್ದ ಆಲಿಯವರನ್ನು ಬಿಟ್ಟು ಸುಧಾಕರ ಶೆಟ್ಟಿಗೆ ಪಟ್ಟ ಕಟ್ಟಲಾಯಿತು. ಶೆಟ್ರು ಎರಡೆರಡು ಸಲ ಸೋತರು. ಮುಸ್ಲಿಂ ಸಮುದಾಯದ ಮತ್ತು ಸರ್ವ ಸಮ್ಮತದ ಲೋಕಲ್ ಅಭ್ಯರ್ಥಿ ಆಲಿ ಇದ್ದರೂ ಮಲ್ಲಿಕಾ ಪ್ರಸಾದ್ ಮುಂದೆ ನಿಲ್ಲಲು ಬಂಟವಾಳದಿಂದ ಬೊಂಡಾಲ ಜಗನ್ನಾಥ ಶೆಟ್ಟಿಯನ್ನು ಬ್ಯಾಂಡ್ ವಾಲಗದಲ್ಲಿ ತರಲಾಯಿತು. ಸಮರ್ಥ ಅಭ್ಯರ್ಥಿ ಆಲಿಚ್ಚ ಇದ್ದರೂ ಶಕ್ವಕ್ಕೆಗೆ ಎರಡು ಸಲ ಟಿಕೆಟ್ ಕೊಡಲಾಯಿತು. ಇದೀಗ ಜನನಾಯಕ ಅಶೋಕ್ ರೈ ಎಂಎಲ್ಎ. ಹಾಗಾದರೆ ಅಣ್ಣಾ ಸಂಸ್ಕೃತಿಯ ಬಿಗಿ ಹಿಡಿತದಲ್ಲಿರುವ ಪುತ್ತೂರು ಕಾಂಗ್ರೆಸ್ಸಿಗೆ ಮುಸ್ಲಿಂ ಸಮುದಾಯದ ಓಟು ಮಾತ್ರ ಬೇಕಾಗಿತ್ತಾ? ಅದಿಲ್ಲದಿದ್ದರೆ ಪುತ್ತೂರು ಕಾಂಗ್ರೆಸ್ ಯಾಕೆ ಆಲಿ ವಿಷಯದಲ್ಲಿ ಹೀಗೆಲ್ಲ ವರ್ತಿಸುತ್ತಿದೆ? ಅವರನ್ನು ಯಾಕೆ ತುಳಿಯುತ್ತಿದೆ? ಅಣ್ಣಾ ಸಂಸ್ಕೃತಿ ಯ ಎರಡು ಟೀಂಗಳು ಯಾಕೆ ಆಲಿಯವರನ್ನು ಪುಟ್ಬಾಲ್ ಮಾಡುತ್ತಿದೆ? ಹಾಗಾದರೆ ಕಳೆದ ನಾಲ್ಕು ದಶಕಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಹಗಲಿರುಳು ಪಕ್ಷಕ್ಕಾಗಿ ದುಡಿದ ಒಬ್ಬ ಮುಸ್ಲಿಂ ಸಮುದಾಯದ ನಾಯಕನಿಗೆ ಕಡೇ ಪಕ್ಷ ಪುರಸಭೆಯ ಅಧ್ಯಕ್ಷನಾಗುವ ಅರ್ಹತೆಯೂ ಇಲ್ವಾ? ನಾಲ್ಕು ದಶಕಗಳ ನಾಯಕನಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟದಿದ್ದರೆ ಆ ಪಟ್ಟವನ್ನು ಯಾರಿಗೆ ಮೀಸಲಿಡುತ್ತಾರೆ? ಎಂಟನೇ ಕ್ಲಾಸಿನಿಂದ ಕಾಂಗ್ರೆಸ್ ಜೊತೆ ಬಂದಿರುವ ಸರ್ವಧರ್ಮೀಯ, ಜಾತ್ಯತೀತ ನಾಯಕನಿಗೆ ಕೊಡದ ಕಾಂಗ್ರೆಸ್ ಟಿಕೆಟ್ ಪಡೆಯಲು ಬೇರೆ ಯಾರಿಗೆ ಅರ್ಹತೆ ಇದೆ. ಅಣ್ಣಾ ಸಂಸ್ಕೃತಿಯ ಪ್ರಕಾರ ಆಲಿ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪಾ? ಇದನ್ನೆಲ್ಲ ಕೇಳಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು. ಅವರು ಸುಮ್ಮನೆ ಕುಂತರೆ ಇವತ್ತು ಆಲಿ ಮುಂದೆ ಎಲ್ಲರೂ ಮೂಲೆ ಗುಂಪು ನಾಯಕರಾಗುವ ಅಪಾಯಗಳಿವೆ.
...................................................
ಒಮ್ಮೆ ಹೊಸತೂ ಆಗದೆ, ಮತ್ತೊಮ್ಮೆ ಹಳತೂ ಆಗದೆ ಸದಾ ಉರಿವ ವಿಷಯವೆಂದರೆ ಅದೇ ಜ್ಯೋತಿ.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
.....................................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment