ಸುಬ್ರಹ್ಮಣ್ಯ: ಬೊಳ್ಳಕ್ಕೆ ಬಂದವರು ಇನ್ನೂ ಯಾಕೆ?

                              


    "ಹಾಗೆಂದು ಸುಬ್ರಹ್ಮಣ್ಯನ ಊರಿಗೆ ಸದ್ಯಕ್ಕೆ ಸುಬ್ರಹ್ಮಣ್ಯ ಪೋಲಿಸರು ಸಾಕು ಅಂತ ಸಾರ್ವಜನಿಕ ಅಭಿಪ್ರಾಯವಿದೆ. ಖಡಕ್ ಎಸ್ಸೈ ಕಾರ್ತಿ & ಟೀಂ ಸುಬ್ರಹ್ಮಣ್ಯದಲ್ಲಿ ಒಳ್ಳೆ ಕೆಲಸ ಮಾಡುತ್ತಿದೆ. ಆದರೂ ಆವತ್ತು ಬೊಳ್ಳಕ್ಕೆ ಬಂದ SNDRF ಮತ್ತು ನಕ್ಸಲರನ್ನು ಓಡಿಸಲು ಬಂದ ANF ಪಡೆಗಳನ್ನು ಇನ್ನೂ ಸುಬ್ರಹ್ಮಣ್ಯದಲ್ಲಿ ಇಟ್ಟುಕ್ಕೊಂಡು ಗಿಳಿ ಸಾಕಿದ ಹಾಗೆ ಯಾಕೆ ಸಾಕುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ANF ಅಲ್ಲಿ ಬಿಳಿನೆಲೆಯಲ್ಲಿ ಬರುತ್ತಿದೆ ಎಂದು ಗೊತ್ತಾಗುತ್ತಲೇ ನಕ್ಸಲರು ಪದ್ರಾಡ್ ಹಾಕಿದ ಜಾಗೆಗಳಲ್ಲಿ ಇನ್ನು ಎರಡು ಮರ್ಯಲ ಪಂತಿ ಕೂಡ ಬರಲ್ಲ. ಆದರೂ ಇನ್ನೂ ANF ಸುಬ್ರಹ್ಮಣ್ಯದಲ್ಲಿದೆ. ಅವರಿಗೆ ವಸತಿ, ಊಟ ಉಪಚಾರ ನಡೆಯುತ್ತಿದೆ. ಹಾಗೆಂದು ಅವರು ಇರಬಾರದು ಎಂದಲ್ಲ. ಆದರೂ ಯಾಕೆ ಅಂತ ಒಂದು ಕುರೆ ಮನಸ್ಸು.


  ಇನ್ನು SNDRF. ಬೊಳ್ಳಕ್ಕೆ ಬಂದವರು. ಬೇಸ ಆಯಿತು, ಕಾರ್ತೆಲ್ ಆಯಿತು, ಆಟಿ,ಸೋಣ ಹಂಡ್ರೆಡ್ ಮೀಟರ್ಸ್ ನಲ್ಲಿ ಓಡಿ ಬಂದು ಬೊಳ್ಳದ ಮೇಲೆ ಬೊಳ್ಳ, ಲೋಡ್, ಲೋಡ್ ಬೊಳ್ಳ ಕೊಟ್ಟು ಅದೂ ಅರಬ್ಬೀಯ ಸಮುದ್ರದಲ್ಲಿ ಹೋಗಿ ಸ್ಟಾಕ್ ಆಯಿತು. ಇನ್ನು ಮಳೆ ಬಂದರೆ ಬೊಳ್ಳ ಬರ್ಪಿ ವರ್ಷ. ಹಾಗೆ ಬೊಳ್ಳದಲ್ಲಿ ಯಾರೂ ಬೊಳ್ಳಕ್ಕೆ ಹೋಗುವುದು ಬೇಡ ಎಂದು SNDRFನ್ನು‌ ಓಡದ ಸಮೇತ ತಂದಿಡಲಾಗಿತ್ತು. ಈಗ ಸದ್ಯಕ್ಕೆ ನಿರ್ನಲ ನಡೆಯುತ್ತಿದೆ. 


ಇನ್ನು ಮಾರ್ನೆಮಿಗೆ ಒಂದು ರೌಂಡು ಮತ್ತು ಬಲಿ ಚಕ್ರವರ್ತಿ ಭೂಲೋಕಕ್ಕೆ ಬರುವ ಟೈಮಲ್ಲಿ ಢಂ..ಢೀಂ ಎಂದು ಒಂದು ರೌಂಡು ಮಳೆ ಬಂದರೆ ಈ ವರ್ಷದ ಆಟ ಮುಗಿಯುತ್ತದೆ. ಆದರೂ ಸುಬ್ರಹ್ಮಣ್ಯದಲ್ಲಿ ಇನ್ನೂ SNDRFನ್ನು ಉಳಿಸಿಕೊಳ್ಳಲಾಗಿದೆ. ಯಾಕೆಂತ ಗೊತ್ತಿಲ್ಲ. ಅವರಿಗೂ ವಸತಿ ವ್ಯವಸ್ಥೆ ಮಾಡಲಾಗಿದ್ದು ಅವರನ್ನು ಅವರ ಹೆಡ್ ಕ್ವಾರ್ಟರ್ಸ್ ಗೆ ಕಳಿಸೋದು ಒಳ್ಳೆದು ಎಂದು ಸಾರ್ವಜನಿಕ ಅಭಿಪ್ರಾಯ ಇದೆ.   
   

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ANF and SNDRF ಯೋಧರಿಗೆ ತಂಗಲು ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಇನ್ನು ಚಳಿಗಾಲ ಕೂಡ ಹಂಡ್ರೆಡ್ ಮೀಟರ್ಸ್ ನಲ್ಲಿ ಬರಲಿದ್ದು ವಸತಿ ವ್ಯವಸ್ಥೆ ಇಲ್ಲದೆ ಸುಬ್ರಹ್ಮಣ್ಯದ ಬೀದಿಗಳಲ್ಲಿ ಮಲಗುವ ಭಕ್ತಾದಿಗಳಿಗೆ ಈ ವ್ಯವಸ್ಥೆ ಕೊಟ್ಟರೆ ಅಜ್ಜಿ ಪುಣ್ಯ ಆದರೂ ಸಿಗಬಹುದು ಎಂಬುದು ಸಾರ್ವಜನಿಕ ಆಶಯ. ಬಹುಶಃ ಜಿಲ್ಲಾಡಳಿತಕ್ಕೆ ಇವರನ್ನು ಇಂಚಿ ಕಳಿಸಿದ ವಿಷಯವೇ ಮರೆತು ಹೋಗಿದೆಯಾ ಹೇಗೆ?

...................................................
   ನಮ್ಮಿಂದ  ಇತರರಿಗೆ  ಅನೇಕ ಉಪಯೋಗಗಳು  ಇವೆ ಎಂದು ಮಾಡಿಕೊಳ್ಳುವುದೂ ನಾವೇ... ನಿಮ್ಮಿಂದ  ಇತರರಿಗೆ  ಏನೂ ಉಪಯೋಗವೇ ಇಲ್ಲ ಎಂದು ಮಾಡಿಕೊಳ್ಳುವುದೂ ನಾವೇ... ಈ  ಎರಡೂ ಪ್ರಕ್ರಿಯೆಗಳು ಒಂದು  ಮನುಷ್ಯ ತನ್ನ ಹೆಸರಿಗಾಗಿ ಮಾಡುತ್ತಾನೆ... ಎರಡನೆಯದು  ತನ್ನನ್ನೇ ಎಲ್ಲರೂ ಓಲೈಸಿಕೊಂಡು ಬರಲೆಂದು ಮಾಡಿಕೊಳ್ಳುತ್ತಾನೆ. 


-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.


.....................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget