ಸುಳ್ಯ: ಕುಟು ಕುಟು ಗ್ಯಾಂಗ್ ಕಪಿ ಮುಷ್ಟಿಯಲ್ಲಿ ಗ್ರಾಮೀಣ ಯುವ ಜನತೆ!

                      


   ಕಳೆದ ವರ್ಷವೇ ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಬಗ್ಗೆ ಬರೆದ್ದಿದ್ದೆವು. ಅದರಲ್ಲೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಮುಗ್ಧ ಯುವ ಜನರನ್ನು ಬೀದಿಪಾಲು ಮಾಡುವ ಈ ಆಟದ ಬಗ್ಗೆ ಯಾರೂ, ಯಾವ ಇಲಾಖೆಯೂ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವೇ ಸರಿ. ಇನ್ನು ಸುಳ್ಯದಲ್ಲಿ ಚಳಿ, ಬೇಸಿಗೆ ಸೀಸನ್ ಶುರುವಾಗಲಿದ್ದು ವಿವಿಧ ದೇವಸ್ಥಾನಗಳ ಜಾತ್ರೆ, ಬ್ರಹ್ಮ ರಥೋತ್ಸವ, ಬ್ರಹ್ಮ ಕಲಶ, ದೊಡ್ಡ ದೊಡ್ಡ ಭೂತ ಕೋಲಗಳು, ಬೈದರ್ಕಳ ನೇಮಗಳು, ಮೇಳಗಳು, ಉತ್ಸವಗಳಲ್ಲಿ ಕುಟು ಕುಟು ಗ್ಯಾಂಗ್ ಜನರನ್ನು ಲೂಟಲು ರೆಡಿಯಾಗಿ ನಿಂತಿದೆ. ಈ ಕುಟು ಕುಟು ಆಟಕ್ಕೆ ಸಂಬಂಧ ಪಟ್ಟ ದೇವಸ್ಥಾನಗಳ ಆಡಳಿತ ಮಂಡಳಿಗಳು, ದೈವಸ್ಥಾನಗಳ ಮೊಕ್ತೇಸರು, ವಿವಿಧ ಸಂಘಟನೆಗಳು ಮತ್ತು ಪೋಲಿಸರು ಪರ್ಮಿಶನ್ ಕೊಡುವುದೂ ವಿಪರ್ಯಾಸವೇ ಸರಿ.
  ಹಾಗೆಂದು ಈ ಮಳೆಗಾಲ ಇಡೀ ಸುಳ್ಯದಲ್ಲಿ ಕುಟು ಕುಟು ರಾಜಾರೋಷವಾಗಿ ನಡೆದಿದೆ. ಈ ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಕೋಳಿ ಕಟ್ಟದ ಪರ್ಮಿಶನ್ ನಲ್ಲಿ ನಡೆದಿದೆ. ಸುಳ್ಯ ತುಂಬಾ ಮಳೆಗಾಲದಲ್ಲಿ ನಡೆದ ಅಷ್ಟೂ ಕೋಳಿ ಅಂಕಗಳಲ್ಲಿ ಕುಟು ಕುಟು ಯಾವುದೇ ಹೆದರಿಕೆ ಇಲ್ಲದೆ ನಡೆದಿದೆ. ಕೋಳಿ ಕಟ್ಟದ ಸಂಘಟಕರು ಪೋಲಿಸರಲ್ಲಿ ಕೋಳಿ ಕಟ್ಟಕ್ಕೆ ಮಾತ್ರ ಪರ್ಮಿಶನ್ ಕೇಳುತ್ತಿದ್ದು ಪಾಪದ ಪೋಲಿಸರು ಕಟ್ಟಕ್ಕೆ ಮಾತ್ರ ಪರ್ಮಿಶನ್ ಕೊಟ್ಟು ಕೈ ತೊಳೆದು ಕೊಳ್ಳುತ್ತಿದ್ದರು. ಆದರೆ ನಂತರ ಕಟ್ಟ ಸಂಘಟಕರು ಕಟ್ಟದೊಳಗೆ ಕುಟು ಕುಟು ಆಟಕ್ಕೆ ಪರ್ಮಿಶನ್ ಕೊಟ್ಟು ತಮ್ಮ ಕಿಸೆ ಭರ್ತಿ ಮಾಡಿ ಕೊಳ್ಳುತ್ತಿದ್ದರು. ಇದು ಇಡೀ ಮಳೆಗಾಲದಲ್ಲಿ ಸುಳ್ಯದಲ್ಲಿ ನಡೆದಿದೆ. ಇವರ ಆಟದಲ್ಲಿ ಗ್ರಾಮೀಣ ಯುವ ಜನತೆ ಕೋಳಿ ಕಟ್ಟದೊಂದಿಗೆ ಕುಟು ಕುಟು ಆಡಿಯೂ ಬರ್ಬಾದ್ ಆಗುತ್ತಿದ್ದಾರೆ. ಕುಡಿತ, ಜುಗಾರಿ, ಕೋಳಿ ಕಟ್ಟ‌ ಅಂತ ಅಂಗಿ ಚಡ್ಡಿಯನ್ನೂ ಕಳೆದು ಕೊಳ್ಳುತ್ತಿದ್ದ ಯುವ ಜನತೆ ಇದೀಗ ಕುಟು ಕುಟು ಆಟದಲ್ಲಿ ಕೋಮಣವನ್ನೂ ಕಳೆದು ಕೊಳ್ಳುತ್ತಿದೆ. ಇನ್ನು ಸೀಸನ್ ಶುರುವಾದರಂತೂ ಕುಟು ಕುಟು ಗ್ಯಾಂಗ್ ಗೆ ಸುಗ್ಗಿ.
   

   ಹಾಗೆಂದು ಕೋಳಿ ಅಂಕದ ಸಂಘಟಕರ ಹಾಗೆ, ಜುಗಾರಿ ಸಂಘಟಕರ ಹಾಗೆ ಕುಟು ಕುಟು ಗ್ಯಾಂಗ್ ಪಾಪ ಪಾಂಡುಗಳಲ್ಲ, ಸಾಧು ಸನ್ಯಾಸಿಗಳಲ್ಲ. ಕುಟು ಕುಟು ಗ್ಯಾಂಗ್ ಹಂಡ್ರೆಡ್ ಪರ್ಸೆಂಟ್ ಕ್ರಿಮಿನಲ್ ಹಿನ್ನೆಲೆಯವರು ಮತ್ತು ಯಾವುದಕ್ಕೂ ಹೇಸದವರು. ಬರೀ ಚಪ್ಪಲಿಯಲ್ಲಿದ್ದ ಕುಟು ಕುಟು ಸಂಘಟಕರು ಇವತ್ತು ಇಡೀ ಸುಳ್ಯ ತಾಲೂಕಿನ ಕೋಳಿ ಅಂಕ, ಜುಗಾರಿ ಕಲ ಮತ್ತು ಕುಟು ಕುಟು ಟೇಬಲನ್ನು ಕಂಟ್ರೋಲಿಗೆ ತಗೊಂಡು ಕುಟು ಕುಟು ಸಾಮ್ರಾಜ್ಯ ಕಟ್ಟಲು ಸ್ಕೆಚ್ ರೂಪಿಸಿದ್ದಾರೆ. ಈ ಒಂದು ಸಾಮಾಜಿಕ ಪಿಡುಗಿನ ಬಗ್ಗೆ ಯುದ್ಧ ಸಾರ ಬೇಕಾಗಿದ್ದ ಪೋಲಿಸರನ್ನು ಕೋಳಿಕಟ್ಟದ ನೆಪದಲ್ಲಿ ಯಾಮಾರಿಸಲಾಗುತ್ತಿದೆ. ಅದರಲ್ಲೂ ಸುಳ್ಯ ಕುಟು ಕುಟು ಗ್ಯಾಂಗ್ ಥೇಟ್ ಲೋಕಲ್ ರೌಡಿಗಳಂತೆ ಅವರ ಆಟಕ್ಕೆ ಅಡ್ಡ ಬರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಮರ್ಕಂಜ‌ ಕಟ್ಟ ಬ್ಯಾನ್ ಆದಾಗ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚೌತಿ ಲೆಕ್ಕದಲ್ಲಿ ಬಾಳುಗೋಡು, ಉಬರಡ್ಕ ಮಿತ್ತೂರು ಕಡೆಗಳಲ್ಲಿ ಕೋಳಿ ಅಂಕ ನಡೆಸುವರೇ ತಯಾರಿಗಳು ನಡೆಯುತ್ತಿದ್ದು ಕುಟು ಕುಟು ಕೂಡ ಕೋಳಿ ಅಂಕದ ಪರ್ಮಿಶನ್ ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಸುಳ್ಯ ಪೋಲಿಸರು ಮತ್ತು ಸುಳ್ಯ ಸರ್ಕಲ್ ಗೆ ಸಂಬಂಧ ಪೋಲಿಸ್ ಠಾಣೆಗಳು ಕೋಳಿ  ಅಂಕಕ್ಕೆ ಗ್ರಾಮೀಣ ಕ್ರೀಡೆಯ ನೆಪದಲ್ಲಿ, ದೈವ ದೇವರುಗಳ ಜಾತ್ರೆ,ನೇಮ ನಡಾವಳಿಗಳ ಕಾರಣಕ್ಕೆ ಪರ್ಮಿಶನ್ ಕೊಡುವಾಗ ಕುಟು ಕುಟು ಕಂಡು ಬಂದರೆ ಒದ್ದು ಒಳಗೆ ಹಾಕುವ ಎಚ್ಚರಿಕೆ ಕೊಟ್ಟೇ ಕೋಳಿ ಅಂಕಕ್ಕೆ ಪರ್ಮಿಶನ್ ಕೊಡುವುದೂ ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ.
Copy to SP, DK,
copy to Inspector General of Police(IGP). west zone


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget