ಬಿಳಿನೆಲೆ ಎಂಬ ಊರಿನಲ್ಲಿ ಚಡ್ಡಿ ಜಾರಿಸುವ ಕೆಟ್ಟ ಚಟ ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ ಕೂಡ ಯಾರೋ ಬೆಟ್ ಸೋತು ಸಾರ್ವಜನಿಕ ಸ್ಥಳಗಳಲ್ಲಿ ಚಡ್ಡಿ ಜಾರಿಸಿದ ನ್ಯೂಸ್ ಬರೆದಿದ್ದೆವು. ಈಗ ಮತ್ತೇ ಪುನಃ ಯಾರದ್ದೊ ಚಡ್ಡಿ ಕತೆ. ಬರೆಯದೇ ಅವರಿಗೆ ಬುದ್ಧಿ ಬರಲ್ಲ.
ಇದು ಬಿಳಿನೆಲೆ. ಇಲ್ಲಿನ ಜನತಾ ಕಾಲೋನಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಅದರಲ್ಲಿ ಒಂದು ಮನೆ ಉರ್ಬುಲಿ ಚಂದ್ರುವಿಗೆ ಸೇರಿದ್ದು. ಈ ಜನ ಸ್ವಲ್ಪ ಡಿಫರೆಂಟ್ ಜನ. ಈ ಜನದ ಮನೆಗೆ ಆಗಮಿಸಿದ ಅದ್ಯಾರೋ ಅನುಮಾನಾಸ್ಪದ ವ್ಯಕ್ತಿಯನ್ನು ನೆರೆಕರೆಯವರು ಪ್ರಶ್ನಿಸಿದ್ದಕ್ಕೆ ಚಂದ್ರು ಕುಡಿದು ಬಂದು ನೆರೆಕರೆಯ ಮನೆಯವರೊಂದಿಗೆ ಕಾಲು ಕೆರೆದು ಜಗಳಕ್ಕೆ ನಿಂತಿದ್ದಾನೆ. ಜಗಳ ಮಾಡುತ್ತಾ ಮಾಡುತ್ತಾ ಒಮ್ಮೆಗೇ ಎಲ್ಲರೆದುರು ಚಡ್ಡಿ ಜಾರಿಸಿ ದಿವ್ಯ ದರ್ಶನ ಮಾಡಿಸಿದ್ದಾನೆ. ನೋಡಿದವರು ಇವತ್ತಿಗೂ ಅಪಗಪಗ ಅಲ್ಕಿ ಅಲ್ಕಿ ಬೀಳುತ್ತಿದ್ದಾರೆ.
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಹಾಗೆ ಚಡ್ಡಿ ಜಗಳ ಕೊನೆಗೆ ಪೋಲಿಸ್ ಠಾಣೆಗೂ ಎಂಟ್ರಿ ಹಾಕಿದೆ. ಪೋಲಿಸರು ಗುರ್ರ್ ಅಂದರೂ ಉರ್ಬುಲಿ ಕೇಳುತ್ತಿಲ್ಲ. ಇದೀಗ ಅವನೇ ಕುಡಿದು ಬಂದು ಗಲಾಟೆ ಮಾಡಿ ಓಡುವಾಗ ಬಲ್ಲೆಗೆ ಬಿದ್ದು, ಬಲ್ಲೆಯಲ್ಲಿದ್ದ ರಾಡ್ ತಾಗಿದ್ದು ಅದನ್ನೂ ನೆರೆಕರೆಯವರ ತಲೆಗೆ ಕಟ್ಟಿ ನನಗೆ ರಾಡಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಪೋಲಿಸರ ಕಿವಿಗೆ ರೈಲು ಬಿಟ್ಟಿದ್ದಾನೆ. ಕುಡಿದು ಗಲಾಟೆ, ವಿನಾಕಾರಣ ಗಲಾಟೆ, ಕಾಲು ಕೆರೆದು ಗಲಾಟೆ ಮುಂತಾದ ಡಿಫರೆಂಟ್ ಸೈಜಿನ ಗಲಾಟೆಗಳನ್ನು ಉರ್ಬುಲಿ ಚಂದ್ರು ಮಾಡುತ್ತಿದ್ದು ನಂತರ ಪೋಲಿಸ್ ಕಂಪ್ಲೈಂಟ್ ಕೊಟ್ಟು ಪೋಲಿಸರನ್ನೂ ಯಾಮಾರಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಜನತಾ ಕಾಲೋನಿಯಲ್ಲಿ ಇವನ ಉರ್ಬುಲಿ ಕದನ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮಾತು ಮಾತಿಗೆ ಚಡ್ಡಿ ಜಾರಿಸಿ ಇಡೀ ಊರಿಗೆ ಮುಜುಗರ ತರುವ ಇವನ ವರ್ತನೆ ವಿಕೃತವಾದದ್ದು. ಪೋಲಿಸರೇ ಇವನ ಬೆಂಡ್ ತೆಗೆದು, ನಟ್ಟು ಬೋಲ್ಟ್ ಟೈಟ್ ಮಾಡಬೇಕಷ್ಟೆ.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಇಷ್ಟಕ್ಕೂ ಬಿಳಿನೆಲೆ ಜನತಾ ಕಾಲೋನಿಯಲ್ಲಿ ಇವನ ಮನೆಗೆ ಬರುವ ಅನುಮಾನಾಸ್ಪದ ವ್ಯಕ್ತಿ ಯಾರು? ಉರ್ಬುಲಿಗೂ ಅವನಿಗೂ ಏನು ಸಂಬಂಧ? ಅವನು ಯಾಕೆ ಕಾಲೋನಿಯಲ್ಲಿ ಅಪಗಪಗ ಕಾಣಿಸಿಕೊಳ್ಳುತ್ತಿದ್ದಾನೆ? ಅವನಿಗೆ ಉರ್ಬುಲಿ ಮನೆಯಲ್ಲಿ ಏನು ಕೆಲಸ? ಉರ್ಬುಲಿ ನೆಂಟನ? ಫ್ರೆಂಡ್? ಬಿಸಿನೆಸ್ ಪಾರ್ಟ್ನರ್? ಊರಿನವನ? ಗೊತ್ತಿಲ್ಲ. ಕಾಲೋನಿಗೆ ಬರುತ್ತಾನೆ, ಬೊಗಳಿದ 🐶 ನಾಯಿಗಳಿಗೆಲ್ಲ ಕಲ್ಲು ಬಿಸಾಡುತ್ತಾ ಹೋಗುತ್ತಾನೆ. ಇದನ್ನು ಪ್ರಶ್ನಿಸಿದರೆ ರಿಪೋರ್ಟ್ ಉರ್ಬುಲಿಗೆ ಹೋಗುತ್ತದೆ. ಅವನು ಟೈಟಾಗಿ ಬಂದು ಉರ್ಬುಲಿ ದರ್ಶನ ಕೊಡುತ್ತಾನೆ. ಇದು ದಿನ ನಿತ್ಯದ ಕತೆ. (ಸಶೇಷ)
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
...................................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
..................................................
ಶಾಸ್ತ್ರವೂ ಶಸ್ತ್ರವೂ
ಅನಿವಾರ್ಯ ಸಂದರ್ಭಗಳಲ್ಲಿ ಅತೀ ಶುದ್ಧ ನಮ್ಮನ್ನೇ ಹೆದರಿಸಿ ಬೇರೆ ಏನೊಂದೂ ಒಳ್ಳೆಯ ಕೆಲಸವ ಮಾಡಲು ಬಿಡುತ್ತಿಲ್ಲವೆಂದರೆ,ಹೆದರಿಸುವುದನ್ನು ಸ್ವಲ್ಪ ಪಕ್ಕಕ್ಕಿರಿಸಿ ಮುಂದುವರಿಯುವುದು ಒಳ್ಳೆಯದು.ಇಲ್ಲವೆಂದರೆ, ನಮ್ಮ ಎಷ್ಟೋ ಒಳ್ಳೆಯ ಕೆಲಸಗಳು ನಿಂತೇ ಹೋಗಬಹುದು.. ಕೆಲವೊಮ್ಮೆ ಚೌಕಟ್ಟು ಕೂಡಾ ನಮ್ಮನ್ನೇ ತಿಂದು ಹಾಕಬಹುದು.. ಶಾಸ್ತ್ರವೂ ಕೂಡಾ ನಾವು ಮಾಡುವ ಕೆಲಸಗಳಲ್ಲೇ ಅಳವಡಿಸುತ್ತಾ ಹೋಗಬೇಕೇ ಹೊರತು ಶಾಸ್ತ್ರ ಮಾಡುವುದೇ ಒಂದು ಕೆಲಸವಾಗಬಾರದು... ಶಾಸ್ತ್ರ ಕೂಡಾ ಶಸ್ತ್ರದಂತೆ... ಶಸ್ತ್ರವನ್ನಾದರೂ ಎಷ್ಟು ಬಳಸಬೇಕೋ ಅಷ್ಟೇ ಬಳಸಬೇಕು..ಇವೆರಡೂ ಆಯುಧಗಳೆ ...ಆದರಿದು ನಮ್ಮನ್ನೇ ಹೆದರಿಸುವಂತಿರಬಾರದು...ಹೆದರಿ ಅನುಸರಿಸುವ
ಶಾಸ್ತ್ರವು ದಿನಾ ನಮ್ಮ ಕುತ್ತಿಗೆಯ ಕೊಯ್ದಂತೆ.. ಶಾಸ್ತ್ರವು ಧೋರಣೆಯಾಗಬಾರದು..ಅಂತೆಯೇ ಶಾಸ್ತ್ರವು ಕೂಡಾ ಅತಿಯಾದಲ್ಲಿ ನಮ್ಮನ್ನೇ ಬಲಿತೆಗೆದು ಕೊಳ್ಳಬಹುದು...ಉದಾ... ಒಬ್ಬ ವ್ಯಕ್ತಿಗೆ ದೇವರ ಮೇಲೆ ಅತಿಯಾದ ಪ್ರೀತಿ, ನಂಬಿಕೆ, ವಿಶ್ವಾಸ ಇರುತ್ತದೆ ಅಂದುಕೊಳ್ಳೋಣ... ಒಮ್ಮೆ ಆ ವ್ಯಕ್ತಿಗೆ ತಾನುಣ್ಣುವ ಪದಾರ್ಥವನ್ನೇ ದೇವನಿಗಿಡಬೇಕೆನ್ನುವ ಮನಸ್ಸು ಬಂತೆಂದಾದರೆ, ಇನ್ನೊಬ್ಬ ಬಂದು, ಯೇ ಅದು ಶಾಸ್ತ್ರ ಹಾಗೆ ಹೀಗೆ...ಅದು ಭಯಂಕರ ಶುದ್ಧ ಎಂದು, ಶುದ್ಧ ಎಂಬುವುದನ್ನು ಭಯಂಕರ ಎಂದು ಮಾಡಿಟ್ಟು, ಈ ಮನುಷ್ಯ ಅತ್ತ ಕಡೆ ಶುದ್ಧ ಆಚರಣೆಯನ್ನೂ ಮಾಡಲು ಕೂಡದೆ, ಇತ್ತ ಕಡೆ ದೇವನಿಗೆ ಕೊಡುವುದನ್ನು ಕೊಡಲೂ ಕೂಡದೆ, ಕೊನೆಗೊಂದು ದಿನ ಅವನ ಮನಸ್ಸು ಅವನಿಗೆ ಬೇಕಾದ ಒಳ್ಳೆಯ ಕೆಲಸಗಳ ಮಾಡಲು ಕೂಡದೆ ರೋಸಿ ಹೋಗಿ ಒಂದಾ ಕೆಟ್ಟವನಾಗಿ ಹೋಗಲೂ ಬಹುದು..
ಇಲ್ಲವೋ ಎಲ್ಲರನ್ನೂ ವಿರೋಧಿಸಬಹುದು.. ಅಂತೆಯೇ ಅತೀಯಾದ ಶಾಸ್ತ್ರವೂ ಕೂಡಾ ಒಂದು ಕತ್ತಿಯಿದ್ದಂತೆ..
ಇದೂ ಕೂಡಾ ಎಲ್ಲರನ್ನೂ ಹೆಸರಿಸಬಹುದು..ಈ ವಿಷಯವನ್ನು ಅತೀ ಶಾಸ್ತ್ರೀಯ ಗಮನಿಸಿದರೆ ತನ್ನ ಬದುಕನ್ನು ಹಸನಾಗಿಸಬಹುದು...ಕತ್ತಿಯನ್ನಾದರೂ ಎಷ್ಟು ಬೇಕೋ? ಎಲ್ಲಿ ಎಷ್ಟಿರಬೇಕೋ ಅಷ್ಟೇ ಉಪಯೋಗಿಸುತ್ತೇವೆ...ಅದರ ಮಹತ್ವ ಯಾವಾಗ ?ಎಂತಹಾ ಸಂದರ್ಭದಲ್ಲಿ ಎಂದು ನಮಗೆ ಗೊತ್ತು.. ಅಂತೆಯೇ ಇದೂ ಕೂಡಾ ಅಲ್ಲವೇ ? ಇಷ್ಟಕ್ಕೂ ಅಂದಿನ ಕಾಲದಲ್ಲಿ ಎಲ್ಲಿತ್ತು ಇಷ್ಟೊಂದು ಉಪಕರಣಗಳು ? ಮನೆಯೇ ಇರಲಿಲ್ಲ..ದೇವನ ಇರುವಿಕೆ ಕೂಡಾ ತರಗೆಲೆಗಳ ಮಧ್ಯ ಕಾಡಿನಲ್ಲೋ ಎಲ್ಲಾದರೂ ಒಂದು ಕಡೆ ಇದ್ದುದು...
ಅವನೇನೂ ಹೇಳೇ ಇಲ್ಲ...ಇಂತದೇ ಹೀಗೇ ಮಾಡು ಎಂದು..
ಈ ಮನುಷ್ಯನ ಅನುಕೂಲಕ್ಕೆ ತಕ್ಕಂತೆ ಮಾನವನ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಒಂದೊಂದೇ ಮಾಡುತ್ತಾ ಬಂದ... ಪುಸ್ತಕದಲ್ಲಿ ಎಷ್ಟೂ ಬರೆದು ಇರಬಹುದು... ಅದರಲ್ಲಿ ಇದ್ದುದನ್ನು ಎಲ್ಲವನ್ನೂ ಒಂದೇ ದಿನದಲ್ಲಿ ಮಾಡಲು ನಮ್ಮಿಂದ ಕೂಡೀತೇ ಎಂದು ನಾವೇ ಆಲೋಚಿಸಬೇಕು... ನಿಮ್ಮಿಂದ ಎಷ್ಟು ಕೂಡೀತು ಅದನ್ನಷ್ಟೇ ನಾವು ಮಾಡಲು ಹೊರಡುವುದೇ ಶಾಸ್ತ್ರ... ಅದು ಬಿಟ್ಟು ಅವರು ಮಾಡಿದರು..ಇವರು ಮಾಡಿದರು ಎಂದು ನಾವೂ ನೆಗೆಯಲು ಒಂದೇ ದಿನದಲ್ಲಿ ಹೊರಟರೆ, ಮರುದಿನ ಸೊಂಟ ನೆಗರಬಹುದು... ನಮ್ಮ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿ ಎಲ್ಲವೂ ಇರುವುದು... ಸಾಮರ್ಥ್ಯಕ್ಕನುಗುಣವಾಗಿ ಮಾಡುವುದೇ ಎಲ್ಲಾ ವಿಧಿ ವಿಧಾನಗಳು ಶಾಸ್ತ್ರೀಯ ಎನ್ನಬಹುದು...
ಹಾಗಾಗಿ ಶಸ್ತ್ರ ಹಾಗೂ ಶಾಸ್ತ್ರ ಇವೆರಡನ್ನೂ ಅರಿತು ಅದರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋದಲ್ಲಿ ನಮ್ಮ ಬದುಕು ಹಸನಾಗಬಹುದು ಎನ್ನುತ್ತಾ ನನ್ನ ಈ ಕಿರು ಲೇಖನ ನನಗಾಗಿ ಹಾಗೂ ನಿಮಗಾಗಿ...
...................................................
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
....................................
ಸ್ಪರ್ಧೆ ಸಂಖ್ಯೆ :೧೦, ಶ್ರೀಮತಿ ಅಕ್ಷತಾ ನಾಗನಕಜೆ ಇವರ ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
Post a Comment