ಕಡಬ: ಮರ್ಧಾಳದಲ್ಲಿ ಇನ್ಸೂರೆನ್ಸ್ ದುಡ್ಡೂ ತಿಂದರು!
ಹಾಗೆಂದು ಕಡಬ ಸಮೀಪದ ಮರ್ಧಾಳದಲ್ಲಿ ಕೂಡ ಡಿಫರೆಂಟ್ ಸೈಜಿನ ವಂಚಕ ಶಿಖಾಮಣಿಗಳಿದ್ದಾರೆ. ಹೆಣದ ಬಟ್ಟೆ ಹಾಕೊಂಡು ಸಮಾಜ ಸೇವೆ, ಸಮುದಾಯ ಸೇವೆ, ಸ್ವಮಜಾ ಸೇವೆಯ ನೆಪದಲ್ಲಿ ಅಮಾಯಕರನ್ನು ಲೂಟುವ ಅನೇಕ ಲೀಡರ್ ಗಳು, ಲೀಕರ್ ಗಳು ಮರ್ಧಾಳದಲ್ಲಿ ಇದ್ದಾರೆ. ಇದೀಗ ಅಪಘಾತವೊಂದರಲ್ಲಿ ತೀರಿ ಹೋದವನ ಇನ್ಸೂರೆನ್ಸ್ ದುಡ್ಡನ್ನೂ ಬಿಡದೆ ತಿಂದಿರುವ ಒಬ್ಬ ಸಮುದಾಯ ಸೇವಕನ ಅಸಲೀ ಮುಖದ ಅನಾವರಣ ಆಗಿದೆ.
ಕೆಲವು ಸಮಯದ ಹಿಂದೆ ಮರ್ಧಾಳದ ಇಲ್ಯಾಸ್ ಎಂಬವರು ಬೈಕ್ ಬೈಕಿಗೆ ಗುದ್ದಿ ತೀರಿ ಹೋಗಿದ್ದರು. ಅವರ ಅಗಲುವಿಕೆ ಎರಡು ಫ್ಯಾಮಿಲಿಗಳನ್ನು ಲಗಾಡೀ ತೆಗೆದಿತ್ತು. ಇದೀಗ ಅವರ ಇನ್ಸೂರೆನ್ಸ್ ದುಡ್ಡು ಬಂದಿದೆ. ಮರ್ಧಾಳದ ಸಮುದಾಯ ಸೇವಕನೊಬ್ಬ ಆ ದುಡ್ಡಿನಲ್ಲಿ ಅನಾಮತ್ತು ಮೂರು ಲಕ್ಷ ಬಗ್ಗಿಸಿದ್ದಾನೆ ಮತ್ತು ಇನ್ನೂ ಕೆಲವು ಸಾವಿರಗಳ ಡಿಮ್ಯಾಂಡ್ ಇಟ್ಟಿದ್ದಾನೆ.
ಹಾಗೆಂದು ಇಲ್ಯಾಸ್ ಇನ್ಸೂರೆನ್ಸ್ ದುಡ್ಡು ಈ ರೀತಿ ಬಟವಾಡೆ ಆಗಿದೆ. ಇಲ್ಯಾಸ್ ಇಬ್ಬರು ಪತ್ನಿಯರಿಗೆ ತಲಾ ಆರಾರು ಲಕ್ಷ, ಅವರ ತಾಯಿಗೆ ಎರಡು ಲಕ್ಷ, ಕಾನೂನು ಪಂಡಿತರಿಗೆ ಮೂರು ಲಕ್ಷ ಮತ್ತು ಮರ್ಧಾಳದ ಸಮುದಾಯ ಸೇವಕನಿಗೆ ಮೂನು ಲಾಕ್.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮುದಾಯ ಸೇವಕನಿಗೆ ಸಂದಾಯವಾಗಿದೆ ಎನ್ನಲಾದ ಮೂರು ಲಕ್ಷದ ಕತೆ. ಕುಟುಂಬದ ಆಧಾರ ಸ್ತಂಭವನ್ನು ಕಳೆದುಕೊಂಡಿರುವ ಎರಡು ಕುಟುಂಬಗಳು ಒಂದು ಕಡೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಮತ್ತೊಂದು ಕಡೆ ಇಳಿ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡು ಪುತ್ರ ಶೋಕಂ ನಿರಂತರಂ ಎಂಬಂತೆ ಸದಾ ದುಃಖದಲ್ಲಿ ಕಾಲ ಕಳೆಯುತ್ತಿರುವ ತಾಯಿ, ತೀರಿಕೊಂಡವರ ಅಮಾಯಕ ಮಕ್ಕಳು. ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಇನ್ಸೂರೆನ್ಸ್ ದುಡ್ಡಲ್ಲಿ ಈ ಸಮುದಾಯ ಸೇವಕನಿಗೆ ಏನು ರೈಟಿದೆ? ಆ ಅಮಾಯಕರ ಕೈಯಿಂದ ಮೂರು ಲಕ್ಷ ಲೂಟಿ ಮಾಡಿ ಇದೀಗ ಇನ್ನೂ ಜಾಸ್ತಿ ದುಡ್ಡಿಗೆ ಬೇಡಿಕೆ ಇಟ್ಟಿರುವುದು ಅಕ್ಷಮ್ಯ. ಈ ಬಗ್ಗೆ ತೀರಿಕೊಂಡವನ ಸಂಬಂಧ ಪಟ್ಟವರು ಒಂದು ರೌಂಡು ಈ ಸಮುದಾಯ ಸೇವಕನನ್ನು ಕರೆದು, ವಿಚಾರಿಸಿ ಸನ್ಮಾನ ಮಾಡುವುದು ಒಳ್ಳೆಯದು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಪರಿಸರ ಸಂರಕ್ಷಣೆಯತ್ತ ಪುಟ್ಟದೊಂದು ಹೆಜ್ಜೆ...
ಮಳೆ -ಗಾಳಿ -ಗುಡುಗು -ಸಿಡಿಲಿನ ರುದ್ರನರ್ತನವಾಗುತ್ತಿರುವಾಗ ಬೆಚ್ಚಗೆ ಹೊಗೆಯಾಡುತ್ತಿದ್ದ ಕಾಫಿ ಕಪ್ ಹಿಡಿದು ಹೊರಬಂದವಳಿಗೆ ಗಾಳಿಗೆ ಓಲಾಡುತ್ತಿದ್ದ ಬೃಹದಾಕಾರದ ಮರಗಳು ಈಗಲೇ ಬಿದ್ದುಬಿಡುವುದೇನೋ ಎಂಬ ಭಯ ಹುಟ್ಟಿಸುತ್ತಿದ್ದವು. ಆಗಲೇ ಪ್ರಕೃತಿ ಸಂರಕ್ಷಣೆಯ ಕುರಿತಾಗಿ ಬರೆಯಬೇಕನ್ನಿಸಿದ್ದು.ನಾನೇನೋ ನನ್ನ ಅಭಿಪ್ರಾಯಗಳನ್ನು ಬರವಣಿಗೆಯ ಮೂಲಕ ಹಂಚಿಕೊಂಡಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನೂ ತಳುಕು ಹಾಕಿ ನೋಡಿ, ವ್ಯತ್ಯಾಸಗಳಿದ್ದರೂ ಇರಬಹುದು.
ಐದಾರು ವರ್ಷಗಳ ಹಿಂದೆ ಕೊಡಗಿನ ಜೋಡುಪಾಲದಲ್ಲಿ, 2024ರಲ್ಲಿ ಕೇರಳದ ವಯನಾಡಿನಲ್ಲಿ ಹಾಗೂ ಉತ್ತರ ಕನ್ನಡದ ಶಿರೂರಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿರುವುದು ತಮಗೆಲ್ಲಾ ತಿಳಿದೇ ಇದೆ. ಇಲ್ಲಿ ಮೂಲ ಕಾರಣ ಏನೆಂದು ಕೇಳಿದರೆ ಒಬ್ಬೊಬ್ಬರ ಅಭಿಪ್ರಾಯಗಳು ಒಂದೊಂದು. ನನ್ನ ಪ್ರಕಾರ, ಮನುಷ್ಯನ ದುರಾಸೆಯೇ ಮೂಲ ಕಾರಣ. ತನ್ನ ವ್ಯಾವಹಾರಿಕ ಬದುಕನ್ನು ವಿಸ್ತರಿಸಿ, ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದಮನುಷ್ಯ ಪ್ರಕೃತಿಯ ಒಡಲಿಗೆ ಕೈಹಾಕುತ್ತಿದ್ದಾನೆ.ಬೃಹತ್ ಮರಗಳನ್ನು ನೆಲಕ್ಕುರುಳಿಸಿ, ಗಗನಚುಂಬಿ ಕಟ್ಟಡಗಳನ್ನು ಕಟ್ಟಿಸುತ್ತಿದ್ದಾನೆ. ಮನುಷ್ಯನ ಮಿತಿಮೀರಿದ ಆಸೆಗಳಿಂದಾಗಿ ಪ್ರಕೃತಿ ಮಾತೆ ದಿನದಿನಕ್ಕೆ ಕುಸಿದು ಹೋಗುತ್ತಿದ್ದಾಳೆ. ಇದೀಗ ಅವಳ ಕೋಪಕ್ಕೆ ಗುರಿಯಾದ ಮಾನವನ ವಾಸಸ್ಥಾನವೇ ನೆಲಸಮವಾಗುತ್ತಿದೆ ಅಷ್ಟೇ. ಈ ಮೇಲೆ ಹೇಳಿದ ಮೂರೂ ಕಡೆಗಳಲ್ಲಿ ಆಗಿದ್ದು ಇದೇ. ಯಾರದೋ ಲಾಭದಾಸೆಯ ಅಟ್ಟಹಾಸಕ್ಕೆ ಇನ್ಯಾರದೋ ಕುಟುಂಬ ಸದಸ್ಯರು ಬಲಿಯಾಗಿದ್ದಂತೂ ಘೋರ ದುರಂತವೇ ಹೌದು.ಇನ್ನು ಮುಂದಾದರೂ ನಾವು -ನೀವೆಲ್ಲರೂ ಎಚ್ಚರಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಭೂಮಿ ಮತ್ತಷ್ಟು ಕುಸಿದು ಹೋಗುವ ಮೊದಲು ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಸರವನ್ನು ಬೆಳೆಸುವ ಮನಸ್ಸು ಮಾಡಬೇಕಿದೆ. ಮನೆಯ ಸದಸ್ಯರ ಹುಟ್ಟುಹಬ್ಬದ ನೆಪದಲ್ಲೋ ಅಥವಾ ಇನ್ಯಾವುದೋ ಆಚರಣೆಗಾಗಿಯೋ ದುಂದುವೆಚ್ಚ ಮಾಡುವ ಬದಲು ಆ ದಿನವನ್ನು ಒಂದಿಷ್ಟು ಗಿಡ ನೆಡುವ ಮೂಲಕ ಇನ್ನೂ ವಿಶೇಷವಾಗಿಸಬೇಕು.
ಈ ವರ್ಷ ಸನ್ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು "ಏಕ್ ಪೇಡ್, ಮಾ ಕೆ ನಾಮ್" ಎಂಬ ಯೋಜನೆಯನ್ನು ಜನರ ಮುಂದಿಟ್ಟಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಶಿಸುವಂತಾಗಲಿ, ಆ ಗಿಡ ಹೆಮ್ಮರವಾಗಿ ಬೆಳೆದು ನಾಳೆಯ ದಿನಗಳಲ್ಲಿ ನಮ್ಮ ಕಿರಿಯರಿಗೆ ಹಿರಿಯರು ನೀಡಿದ ಉಡುಗೊರೆಯಾಗಿ ಉಳಿಯುವಂತಾಗಲಿ. ಅಮೂಲ್ಯವಾದ ಪರಿಸರ ಸಂಪತ್ತು ಮತ್ತೆ ಹಸಿರಾಗಿ ಮೈತುಂಬಿಕೊಳ್ಳಲಿ...
-ಶ್ರೀಮತಿ ಜನಶ್ರೀ ಹರೀಶ್, ಸುಳ್ಯ
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
.....................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.