ಹಾಗೆಂದು ತುಂಬಾ ಸಮಯಗಳ ನಂತರ ಪುತ್ತೂರು ಅರಣ್ಯ ಇಲಾಖೆಯವರು ಆಕಳಿಸಿ ಎದ್ದು ಕೂತಿದ್ದಾರೆ. ಇಲ್ಲದಿದ್ದರೆ ಅವರು ಬೆಕ್ಕಿನ ಬಿಡಾರ ಬೇರೆಯೇ ಎಂದು ಅವರಷ್ಟಕ್ಕೆ ಅವರೇ ಮರದ ವ್ಯಾಪಾರ ವಹಿವಾಟಿನಲ್ಲಿ ಬ್ಯುಸಿ ಆಗಿರುತ್ತಿದ್ದರು. ಹಾಗೆ ಅರಣ್ಯ ಇಲಾಖೆಯ ಕಾಡು ಖಾಕಿಗಳು ಎದ್ದು ಕೂರಲು ಕಾರಣ ರೇಂಜೆರ್ ಮಾರಾಯ್ರೆ. ಪುತ್ತೂರಿನ ದಕ್ಷ, ಪ್ರಾಮಾಣಿಕ ಅರಣ್ಯಾಧಿಕಾರಿ ಕಿರಣ್ ರೇಂಜೆರ್ ಇನ್ನು ಅಧಿಕಾರದಲ್ಲಿರುವಷ್ಟು ಸಮಯ ಮರ ಕಡಿಯಲಿಕ್ಕೆ ಮತ್ತು ಕದಿಯಲಿಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ. ಮರಗಳ್ಳರಿಗೆ ಸದ್ಯಕ್ಕೆ ಪಾಪ ಅಟ್ಟದಲ್ಲಿ ಉಪವಾಸ.
ಇದೀಗ ಮೊನ್ನೆ ರೇಂಜೆರ್ ಕಿರಣ್ ನೇತೃತ್ವದಲ್ಲಿ ಚಂದಳಿಕೆಯಲ್ಲಿ ರಕ್ಷಿತಾರಣ್ಯದಿಂದ ಹಾಲು ಮಡ್ಡಿ ಕದ್ದು ರಿಕ್ಷಾದಲ್ಲಿ ಸಾಗಿಸುತ್ತಿದ್ದ ಹಾಲು ಮಡ್ಡಿ ಕಳ್ಳರ ಕಂಪೆನಿಯ ನಾಲ್ಕು ಕಳ್ಳರನ್ನು ಒದ್ದು ಒಳಗೆ ಹಾಕಲಾಗಿದೆ. ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಬಹುಮಾನ ಪಟ್ಟ ಆಲಿ ಹೈದರಿಚ್ಚ, ಉಮ್ಮರ್ ಫಾರೂಕಿಚ್ಚ, ಅಸೈಚ್ಚ ಮತ್ತು ತಾಳಿಪಡ್ಪು ಉಮ್ಮರಿಚ್ಚ ಈ ನಾಲ್ಕು ಜನ ವಿಟ್ಲ ಸಮೀಪದ ಉಕ್ಕುಡ ರಿಸರ್ವ್ ಫಾರೆಸ್ಟ್ ನಿಂದ ಕಾಕಂಡೆ ಕಾಡು ಎಂಬಂತೆ ಹಾಲು ಮಡ್ಡಿ ಸಂಗ್ರಹಿಸಿ ಆಟೋದಲ್ಲಿ ಸಾಗಾಟ ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ತುಂಬಾ ದಿನಗಳಿಂದ ಇವರಿಗೆ ಇದೇ ಕಚ್ಚೊಡ. ಇವರು ಊರಿಗಿಂತ ಜಾಸ್ತಿ ಕಾಡಿನಲ್ಲಿಯೇ ಇದ್ದದ್ದು ಮಾರಾಯ್ರೆ. ಒಳ್ಳೇ ಬಿಸಿನೆಸ್ ಇದು. ಬಂಡವಾಳ, ಹೂಡಿಕೆ ಇಲ್ಲದೆ ಲಕ್ಷಾಂತರ ಅಕೌಂಟಿಗೆ ಹಾಕಬಹುದು. ಆದರೆ ರಿಸರ್ವ್ ಫಾರೆಸ್ಟ್ ಇವರ ಕಾಕಂಡೆ ಕಾಡು ಅಲ್ಲ ಅಲ್ವಾ. ಹಾಗೆ ಇವರ ವಹಿವಾಟಿನ ಕತೆಗೆ ಕೈಕಾಲು ಎಲ್ಲಾ ಹುಟ್ಟಿ ಪುತ್ತೂರು ರೇಂಜೆರ್ ತನಕ ಬಂತು. ರೇಂಜೇರ್ ಬಲಿಮ್ಮೆ ಕೇಳಿ ದಿನ ಫಿಕ್ಸ್ ಮಾಡಿ ಬಿಟ್ಟರು.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಹಾಗೆ ಮೊನ್ನೆ ಅಕ್ಟೋಬರ್ ಏಳರಂದು ಕಳ್ಳರ ಕಂಪೆನಿ ಕಾಡಿನಿಂದ ನಾಡಿಗೆ ಇಳಿಯಲಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿ ಕಿರಣ್ ಟೀಮಿಗೆ ಕಳ್ಳಸ್ ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ. ವಿಟ್ಲ ಸಮೀಪದ ಚಂದಳಿಕೆಯಲ್ಲಿ ಇವರ ರಿಕ್ಷಾವನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಅಂದಾಜು ಒಂದೂವರೆ ಲಕ್ಷ ಮೌಲ್ಯದ ಹಾಲು ಮಡ್ಡಿ, ಮೇಣ ಮತ್ತು ಅದನ್ನು ತೆಗೆಯಲು ಬಳಸಿದ ಉಪಕರಣಗಳು ಪತ್ತೆಯಾಗಿದೆ. ಮತ್ತೆಂಥ ಮಾಡೋದು ಕಳ್ಳರನ್ನು, ಬ್ಯಾಂಡು ವಾಲಗದಲ್ಲಿ ಪುತ್ತೂರು ರೇಂಜ್ ಆಫೀಸಿಗೆ ಕರೆ ತಂದು ಸೈತಾನ ಬಿಡಿಸಲಾಗಿದೆ ಅಷ್ಟೇ!
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment