ಅಲ್ಲ ಸ್ವಾಮಿ ಈ ಮಂತ್ರಿಗಳಿಗೆ ಕೇಳುವವರು ಹೇಳುವವರು ಯಾರೂ ಇಲ್ಲವೇ...!? ಅಲ್ಲಿ ಬೆಂಗಳೂರಿನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂತು ನಿಯಮ ರೂಪಿಸುವಾಗ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ ಪುರುಸೊತ್ತು ಇಲ್ಲವೇ..!?
ಇನ್ನು ಮುಂದೆ ಕುಮಾರ ಪರ್ವತಕ್ಕೆ ಹೋಗುವವರು ಬೆಳಿಗ್ಗೆ 6 ಗಂಟೆಗೆ ಹೋಗಿ ಸಂಜೆ 6 ಗಂಟೆಯ ಒಳಗೆ ಹಿಂತಿರುಗಿ ಸುಬ್ರಹ್ಮಣ್ಯ ತಲುಪಬೇಕು. ಎಂಬ ಕಾನೂನು ಅರಣ್ಯ ಸಚಿವರು ತಂದಿದ್ದಾರೆ. ಅವರಿಗೆ ಕುಮಾರ ಪರ್ವತ ಯಾವ ದಿಕ್ಕಿನಲ್ಲಿ ಇದೆ.,? ಎಷ್ಟು ದೂರ ಇದೆ..? ಹೋಗುವ ದಾರಿ ಎಷ್ಟು ಕಷ್ಟಕರವಾಗಿದೆ ಎಂಬ ಸಣ್ಣ ಅರಿವು ಕೂಡ ಇಲ್ಲ ಎಂಬುದು ಅವರು ಜಾರಿಗೆ ತಂದ ನಿಯಮಗಳಿಂದ ಸ್ಪಷ್ಟವಾಗುತ್ತದೆ.
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಮಂಡೆ ಸಮ ಉಂಟಾ..,? ಚಾರಣಕ್ಕೆ ಹೋಗುವುದು ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ. ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಪರ್ವತಕ್ಕೆ ಹೋಗಿ ಎಂತ ಸೌಂದರ್ಯ ವೀಕ್ಷಣೆ ಮಾಡುವುದು..? ನಂಗೊಂದು ಡೌಟು. ಫಲಾಪೇಕ್ಷೆ ಇಲ್ಲದೆ ಅಸಂಖ್ಯಾತ ಚಾರಣಿಗರ ಹಸಿವು-ಬಾಯಾರಿಕೆ ನೀಗಿಸಿದ ಗಿರಿಗದ್ದೆ ಭಟ್ರಿಗೆ ಚಿಲ್ಲರೆ ದುಡ್ಡು ಆಗುತ್ತದೆ ಎಂದು ಭಟ್ರಿಗೆ ಆಗದವರು ಯಾರಾದ್ರೂ ಸಚಿವರ ಕಿವಿ ಊದಿದದರ..!?
ದಿನಂಪ್ರತಿ ಕಾಡಿಗೆ ಕನಕ್ಕ್ ಗೆ ಹೋಗುವ ಮೋನಪ್ಪಣ್ಣ ನನ್ನು ಬೆಳಿಗ್ಗೆ ಕಳುಹಿಸಿದರೆ. ಅವರು ಕುಮಾರ ಪರ್ವತಕ್ಕೆ ಹೋಗಿ ಅಲ್ಲಿ ಒಂದು ಬೀಡಿ ಸೇದಿ. ಎಲೆ ಅಡಿಕೆ ತಿಂದು ಹಿಂತಿರುಗಿದರೂ ಅವರು ಸುಬ್ರಹ್ಮಣ್ಯ ತಲುಪುವಾಗ ಬಯ್ಯ ಆಗುತ್ತದೆ. ಅಂತದ್ರಲ್ಲಿ ಟೈಟ್ ಜೀನ್ಸ್ ಹಾಕಿಕೊಂಡು ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಒಂದು ಕೈಯಲ್ಲಿ ನೀರಿನ ಬಾಟಲಿ ಇನ್ನೊಂದು ಕೈಯಲ್ಲಿ ಸ್ಟಿಕ್ ಹಿಡಿದು ಕಾಡಿನ ಗಂಧ-ಗಾಳಿ ಗೊತ್ತಿಲ್ಲದ ಪ್ಯಾಟೆ ಮಂದಿ. ಬೆಳಿಗ್ಗೆ ಹೊರಟು ಕುಮಾರ ಪರ್ವತ ಆಸ್ವಾದಿಸಿ. 6 ಗಂಟೆಯ ಒಳಗೆ ಹಿಂತಿರುಗುವುದು ಸಾಧ್ಯವೇ..!?
ಈ ಹಿಂದೆ ಇದ್ದ ನಿಯಮಗಳನ್ನು ಬದಲಾಯಿಸುವಾಗ. ಸ್ಥಳಿಯರನ್ನು ಹಾಗು ಈ ಹಿಂದೆ ಚಾರಣ ಮಾಡಿದ ನಾಲ್ಕೈದು ಜನರನ್ನು ಕೇಳಿದರೂ ಸಾಕಿತ್ತು ಅದರಲ್ಲಿ 90% ಜನ. ಒಂದೇ ದಿನದಲ್ಲಿ ಹೋಗಿ ಬರುವುದು ಕಷ್ಟ ಎಂಬ ಅಭಿಪ್ರಾಯ ಪಡುತ್ತಿದ್ದರು. ಕನಿಷ್ಠ ಪಕ್ಷ ಅಲ್ಲಿ ಕಾವಲು ಇರುವ ವಾಚರಿಯನ್ನು ಕೇಳಿದ್ರು ಸಾಕಾಗುತ್ತಿತ್ತು.
ಪ್ರಾಧಿಕಾರದ ವಿಷಯದಲ್ಲಿ ತುರ್ತು ಗ್ರಾಮ ಸಭೆ ಕೈಗೊಂಡು. ಸಹಿ ಸಂಗ್ರಹಿಸಿ ಬೆಂಗಳೂರಿಗೆ ನಿಯೋಗ ಕೊಂಡು ಹೋಗಿ. ಮತ್ತೆ ವ್ಯವಸ್ಥಾಪನಾ ಸಮಿತಿ ಆಗುವಂತೆ ನೋಡಿಕೊಂಡ ಊರಿನ ಘಟಾನುಘಟಿ ರಾಜಕೀಯ ನಾಯಕರು. ಒಂದು ಸಣ್ಣ ನಿಯೋಗ ಕಟ್ಟಿಕೊಂಡು ಅರಣ್ಯ ಸಚಿವರಿಗೆ ನಿಜಾಂಶ ತಿಳಿಸಿ. ಈ ಹಿಂದೆ ಇದ್ದಂತಹ ನಿಯಮಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಬೇಕಾಗಿ ಚಾರಣ ಪ್ರಿಯರ ವಿನಂತಿ.
..........................................
........................................................
ಲಾಸ್ಟ್ ಬಾಲ್
ಅಲ್ಲಿ ಪುತ್ತೂರು ತಾಲೂಕಿನ ಆನಾಜೆ, ವೀರಮಂಗಲ ಕಾಡಿನಲ್ಲಿ ಎರಡು ದಿನಕ್ಕೊಮ್ಮೆ ಜುಗಾರಿ ಇದೆ. ಮುಕ್ವೆ ಕಂಡದಲ್ಲಿ ಕೋಳಿ ಕಟ್ಟ. ಇದೂ ಎರಡು ದಿನಕ್ಕೊಮ್ಮೆ. ಸರ್ವರೂ ಸಹಕರಿಸಬೇಕಾಗಿ ವಿನಂತಿ. (ಪುತ್ತೂರು ಟೌನ್ ಪೋಲಿಸರು ಸಹ)
.........................................
ಗುಪ್ತಗಾಮಿನಿ
ಶಿವ ಅನ್ನುತ್ತಾನೆ ಪಾರ್ವತಿ ನನಗೇ ಬೇಕು..
ಅವಳು ನನ್ನವಳು ಎಂದು ...
ನನ್ನ ಪತ್ನಿ ನನ್ನ ಜೊತೆ ಬಿಟ್ಟು ಇನ್ನು ಬೇರೆ ಯಾರ ಜೊತೆಗೂ ಹೋಗಲೂ ಬಾರದು..ಇರಲೂ ಕೂಡದು ಎಂದು ..
ಹಾಗೆಂದು ಅವನು ಹೊರ ಹೋದುದು ಪಾರ್ವತಿಗೆ ತಿಳಿಯಲೇ ಇಲ್ಲ...ಇವಳು ಮಾತ್ರ ಅವ ನನ್ನ ಪತಿ ಎಂದು ಇದ್ದಲ್ಲಿಯೇ ಕುಳಿತಳು ಏನನ್ನೂ ಮಾಡದೆ...
ಅದೇ ಸಮಯಕ್ಕೆ ಮಹಾವಿಷ್ಣು ಅಂದ...ಅವಳು ನನ್ನ ತಂಗಿ.ಅಕ್ಕ..ಮದುವೆಗೂ ಮೊದಲು ಅವಳು ನನ್ನ ಜೊತೆಗೇ ಇದ್ದಳು...ಈಗ ಮಾತ್ರ ಶಿವನ ಧ್ಯಾನದಲ್ಲಿ ಮುಳುಗಿದ್ದಾಳೆ...
ಅವಳು ನನಗೂ ಬೇಕೆಂದು... ನನ್ನ ಜೊತೆಗೂ ಇರಬೇಕು.
ಈಗ ಮರೆತಿರುವಳೇನೋ ನನ್ನ ಅವಳು... ತನ್ನ ಸಂಸಾರದಲ್ಲಿ ಮುಳುಗಿ ತೇಲಿರಬಹುದೇನೋ ? ಆದರವಳು ನನ್ನ ಜೊತೆ ಮಾತನಾಡಿ ಇರಲು ಬರಲೇ ಬೇಕು ಒಮ್ಮೊಮ್ಮೆ ಆದರೂ ಎಂದು..
ಅದೇ ಸಮಯಕ್ಕೆ ಅವಳ ತಾಯಿಯಂದಳು...ಅವಳು ನನ್ನ
ಮಗಳು..ಇನ್ಯಾರ ಮಗಳೂ ಅಲ್ಲ, ಹೊತ್ತು ಹೆತ್ತವಳು
ನಾನು ..ನನ್ನ ಬಿಟ್ಟು ಇನ್ಯಾರಿಗೂ ನಾನವಳ ಕೊಡಲಾರೆ
ಎಂದು... ನನ್ನ ಕರುಳ ಬಳ್ಳಿ ಹೇಗೆ ಕತ್ತರಿಸಿ ಹೋದೀತೇ ?
ನನ್ನನ್ನು ಅವಳು ಬಂದು ನೋಡಬೇಕೆಂದು..
ಅದೇ ಸಮಯಕ್ಕೆ ಸರಿಯಾಗಿ ಪಾರ್ವತಿ ದೇವಿಯ ತಂದೆ ಅಂದನು..ನಾನೇ ಅವಳ ಸರ್ವ ಶ್ರೇಷ್ಠತೆಗೆ ಕಾರಣ... ನನ್ನ ಬಿಟ್ಟು ಅವಳು ಪತಿಯ ಮನೆಗೆ ಹೋಗಿದ್ದರೂ ನನ್ನಲ್ಲಿಗೆ
ಪುನಃ ಬರಲೇಬೇಕು..ಅವಳ ಸೃಷ್ಟಿಸಿದವನೇ ನಾನು..
ನಾನೇ ಅವಳ ಸೃಷ್ಟಿ ಕರ್ತ ಎಂದು..
ಅದೇ ಸಮಯಕ್ಕೆ ಸರಿಯಾಗಿ ಅವಳ ಪತಿಯ
ತಾಯಿಯಂದರು..ಸೊಸೆಯು ಬಂದಿದ್ದಾಳೆ.. ಇನ್ನು
ನಾನ್ಯಾವುದಕ್ಕೂ ಇಲ್ಲ... ಎಲ್ಲಾ ಒಳ್ಳೆಯದು ಕೆಟ್ಟದ್ದಕ್ಕೂ ಅವಳೇ ಕಾರಣ... ನೀನು ಏನು ಬೇಕಾದರೂ ಮಾಡಿಕೋ.. ಆದರೆ ನನ್ನ ಮಗನನ್ನು ಮಾತ್ರ ನಾನ್ಯಾವುದಕ್ಕೂ ಕೊಡಲಾರೆ
ಎಂದು...ಎಲ್ಲಾ ನೀನೇ ಕೆಲಸ ನಿರ್ವಹಿಸಿ ಪತಿಗೇ ಅದನ್ನು
ಸಮರ್ಪಿಸಬೇಕೆಂದು...
ಅದೇ ಸಮಯಕ್ಕೆ ಸೋದರ ಮಾವನಂದ...ಇಷ್ಟೆಲ್ಲಕ್ಕೂ
ಕಾರಣವೇ ನಾನು..ಪ್ರತೀಯೊಬ್ಬರ ಹೊತ್ತವ ನಾನು...ಏನು ಕಾರ್ಯ ಮಾಡುವುದಿದ್ದರೂ ನೀವು ನನ್ನ ಅನುಮತಿ
ಪಡೆಯದಿದ್ದರೆ ನಾನೊಂದಿಂಚೂ ಮುಂದೆ ಬರಲಾರೆ
ಎಂದು... ಹಾಗಾಗಿ ನನ್ನ ಸೊಸೆ ನಾನಂದಂತೆ ನನ್ನ ಘನಸ್ತಿಕೆಗೆ ತಕ್ಕಂತೆ, ಶಾಸ್ತ್ರ ಸಂಪ್ರದಾಯ ಎಂದು ಆ ಆವರಣ ಬಿಟ್ಟು
ಹೊರಬರಬಾರದು..ಅದರ ಮೀರಿ ನಡೆಯಬಾರದು ಘನತೆ,
ಗೌರವ ಇರಬೇಕೆಂದು.. ನನ್ನ ಘನಸ್ತಿಕೆಗೆ ಕುಂದುಬಾರದಂತೆ ನೀನಿರಬೇಕೆಂದು..
ಅದೇ ಸಮಯಕ್ಕೆ ಸರಿಯಾಗಿ ಹುಟ್ಟಿದ ಮಕ್ಕಳಂದರು..
ನಮಗೇನು ಕೆಲಸ ? ನಮ್ಮನ್ನು ಹುಟ್ಟಿಸಿದ್ದೇಕೆ ಮತ್ತೆ ?
ನೀವು ನೀವುಗಳೇ ಮಾತನಾಡಿ ಕೊಳ್ಳುವುದಾದರೆ ಎಲ್ಲವನ್ನೂ ನೀವೇ ಮಾಡಿ ಕೊಳ್ಳಿ..
ತಾಯಿ ಮಾತ್ರ ನಮಗೇ ಬೇಕು ಅವಳೆಲ್ಲೂ ಹೋಗುವುದು ಬೇಡ.. ನಮ್ಮ ನೋಡಿಕೊಳ್ಳುವವರ್ಯಾರು ? ಎಂದು..
ಅದೇ ಸಮಯಕ್ಕೆ ಬಂದ ಅತಿಥಿ ಅಭ್ಯಾಗತರು,
ಆಗಂತುಕರು, ಸ್ನೇಹಿತರು ಎಲ್ಲರೂ ಸೇರಿ ಎಲ್ಲ ಒಳ್ಳೆಯ
ದಾಗಿದೆ..ಇನ್ನೇನು ಇಲ್ಲ ..ಎಲ್ಲ ಮುಗಿಯಿತು... ಮದುವೆ,
ಮಕ್ಕಳು, ಕಾರ್ಯಕ್ರಮ ಎಲ್ಲ ನೋಡಿದೆವು...ಇನ್ನು ನಾವು
ಹೊರಡಬಹುದಲ್ಲವೇ ? ಇನ್ನು ನಾವು ನೀವು ಏತಕ್ಕೆ ? ನೀವಾಯಿತು ನಿಮ್ಮ ಮಕ್ಕಳಾಯಿತು.. ಮನೆ ಆಯಿತು..ಇನ್ನು ನಮಗೇನು ಕೆಲಸ ಇಲ್ಲಿ ನಮಗೂ ಮನೆ ಇದೆ..
ನೀವೂ ಕೂಡಾ ನಮ್ಮಂತೆ ಎಲ್ಲಾ ಕಡೆಗೂ ಬನ್ನಿ..ಅವಳು ಹೊರ ಬರುವುದೇ ಇಲ್ಲ...ಅವಳು ನಮ್ಮಲ್ಲಿಗೆ ಬಂದರೆ ಮಾತ್ರ ನಾವೂ ಮತ್ತೊಮ್ಮೆ ತಿರುಗಿ
ಬರುವೆವು ಎಂದು..
ಹಾಗಾಗಿ ಅವಳು ಕೊನೆಗೆ ನದಿಯಾಗಿ ಎಲ್ಲೆಡೆ ಹರಿದು ಗುಪ್ತಗಾಮಿನಿಯಂತಾದಳು..ಮೌನ ತಾಳುತಲಿ..
ತನ್ನೊಳಗೇ ತಾನು ನೋವ ನುಂಗುತಲಿ... ಕಷ್ಟ ಸುಖವ ಹೇಳಿ ಕೊಳ್ಳದೆ...ಲೋಕಕ್ಕೇ ಬೆಳಕಾದಳು.. ಸುಗಂಧ ಪುಷ್ಪ
ಬೀರಿದಳು...ಎಲ್ಲರೂ ಅವಳನ್ನೇ ನಂಬಿ ಕೈ ಮುಗಿಯುವಂತಾಗಿ ತನ್ನ ಸುಖವ ಮರೆತು, ಲೋಕವೇ
ತಾನಾಗಿ ತನ್ನ ತಾನೇ ಮರೆತು ಎಲ್ಲರೊಡನೆ ಲೀನವಾದಳು...
ಅವಳೇ ಸತಿಯಾಗಿ ವಾರ್ವತಿಯಾದಳು..
ನೀವೂ ಮಾಹಿತಿ ಕಳಿಸಿ:
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment