ಬೆಳ್ತಂಗಡಿ: TAPCMS ನಲ್ಲಿ ಗೋಲ್ ಮಾಲ್?

                                         


      "ಹಾಗೆಂದು ದೊಡ್ಡ ದೊಡ್ಡ ಬಿಸಿನೆಸ್ ಮನ್ ಗಳು ಮಾಲ್ ಗಳನ್ನು ಕಟ್ಟುವುದು ಈಗ ಕಾಮನ್. ಉದಾಹರಣೆಗೆ ಗರುಡ ಮಾಲ್, ಮಂತ್ರಿ ಮಾಲ್, ಸಿಟಿ ಸೆಂಟರ್ ಮಾಲ್, ಭಾರತ್ ಮಾಲ್ ಇತ್ಯಾದಿ ಇತ್ಯಾದಿ. ಇದೀಗ ಬೆಳ್ತಂಗಡಿ ಟಿಎಪಿಸಿಎಂಎಸ್ ನಲ್ಲಿ ಕೂಡ ಒಂದು ಮಾಲ್ ರೆಡಿಯಾಗಿದೆ. ಹೆಸರು ಗೋಲ್ ಮಾಲ್.


ಬೆಳ್ತಂಗಡಿಯ ಪ್ರತಿಷ್ಠಿತ ಟಿಎಪಿಸಿಎಂಎಸ್‌ ನಲ್ಲಿ ಒಂದು ದೊಡ್ಡ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಮಾಜಿ ಮುಖ್ಯಸ್ಥ ಮತ್ತು ಸೆಕ್ರೆಟ್ರಿ ಸೇರಿ ಜಂಟಿ ಕಾರ್ಯಾಚರಣೆ ಮಾಡಿ ಅಂದಾಜು ಕೋಟಿ ತನಕ ತಿಂದುಂಡು, ತೇಗಿ ಟಿಎಪಿಸಿಎಂಎಸ್ ಗೆ ನಮಸ್ಕಾರ ಹೇಳಿದ್ದಾರೆ. ಟಿಎಪಿಸಿಎಂಎಸ್ ಮಾಜೀ ಮುಖ್ಯಸ್ಥ ಟಿಎಪಿಸಿಎಂಎಸ್ ನ ಲಕ್ಷಗಟ್ಟಲೆ ದುಡ್ಡನ್ನು ಯಾವುದೇ ದಾಖಲೆ ಪತ್ರಗಳಿಲ್ಲದೆ ಸಾಲದ ರೂಪದಲ್ಲಿ ನುಂಗಿ  ಇದೀಗ ಆರೋಗ್ಯ ಸರಿ ಇಲ್ಲದೆ ಐಸಿಯುನಿಂದ ವಾರ್ಡಿಗೆ, ವಾರ್ಡಿಂದ ಮನೆಗೆ ಹೀಗೆ ರೌಂಡ್ಸಲ್ಲೇ ಬಿಜಿಯಾಗಿದ್ದು ಇನ್ನು ವೆಂಟಿಲೇಟರ್ ಅದು ಇದು ಎಂದು ಏನಾದರೂ ಹೆಚ್ಚು ಕಡಿಮೆಯಾದರೂ ಟಿಎಪಿಸಿಎಂಎಸ್ ನ ಅಷ್ಟೂ ದುಡ್ಡಿನ ಕತೆ ಮುಗಿಯಲಿದೆ.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಇನ್ನು ಟಿಎಪಿಸಿಎಂಎಸ್ ಮುಖ್ಯಸ್ಥ ಸಾಲದ ರೂಪದಲ್ಲಿ ನುಂಗಿದ್ದು ಸಾಲದು ಎಂಬಂತೆ ಸೆಕ್ರೆಟ್ರಿ ಕೂಡ ಮುಖ್ಯಸ್ಥನ ಅರ್ಧ ನುಂಗಿ ಟಿಎಪಿಸಿಎಂಎಸ್ ಗೆ ತನ್ನಿಂದಾದ ಅಳಿಲು ಸೇವೆ ಸಲ್ಲಿಸಿದ್ದಾರೆ. ಇದೀಗ ಸೆಕ್ರೆಟ್ರಿ ಕೂಡ ಟಿಎಪಿಸಿಎಂಎಸ್ ಬಿಟ್ಟು ಬೆಂಗಳೂರಿನಲ್ಲಿ ಹೋಗಿ ಅಟ್ಟದಲ್ಲಿ ಕೂತಿದ್ದು ಆ ದುಡ್ಡೂ ಹುಂಡಿ ಪಾಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಈ ಬಗ್ಗೆ AR, DR ಗಳಿಗೆ ಕಂಪ್ಲೈಂಟ್ ಆಗಿದ್ದು ಅವರೂ ಎಲ್ಲಿಯಾದರೂ ಅಗೆಲು ಸ್ವೀಕರಿಸಿ ಬಾಲ ಮಡಚಿ ಕೂತರೆ ಟಿಎಪಿಸಿಎಂಎಸ್ ದುಡ್ಡು ಕಸದ ಬುಟ್ಟಿ ಸೇರಲಿದೆ. ಇನ್ನು ಈ ಪ್ರಕರಣದಲ್ಲಿ ಪೋಲಿಸರಿಗೆ ಕೂಡ ಕಾಕಜಿ ಕೊಟ್ಟಿದ್ದು ಅವರು ಏನು ಮಾಡಿದ್ದಾರೆ ಎಂದು ಗೊತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಟಿಎಪಿಸಿಎಂಎಸ್ ಎಂಬುದು ರಾಜಕೀಯದ ಅತೃಪ್ತ ಆತ್ಮಗಳ ಅಡ್ಡೆಯಾಗಿದ್ದು ಇಲ್ಲಿ ಕುರ್ಚಿ ಬಿಸಿ ಮಾಡುವ ಪ್ರತೀ ಅತೃಪ್ತ ರಾಜಕಾರಣಿಯೂ ಸಿಕ್ಕಿದಷ್ಟೂ ದೋಚಲು ನೋಡುತ್ತಾನೆಯೇ ಹೊರತು ಟಿಎಪಿಸಿಎಂಎಸ್ ಎಂಬ ಟೈಟಾನಿಕಿಗೆ ಟಾನಿಕ್ ಆಗುವುದೇ ಇಲ್ಲ.

........................................................
ಲಾಸ್ಟ್ ಬಾಲ್

ಅಲ್ಲಿ ಕಡಬ ಪಾಲೋಲಿ ಪೊಸ ಸಂಕದ ಮೇಲೆ ಕಡಬ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಂದ ಹೋಂಡಾ ಡಿಯೋ ವೀಲಿಂಗ್ ನಡೆಯುತ್ತಿದೆ. ಸಾರ್ವಜನಿಕರಿಗೆ ಇದು ಫ್ರೀಷೋ. ತಾವೂ ಬನ್ನಿ, ಇತರರನ್ನೂ ಕರೆತನ್ನಿ.


ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget