ಹಾಗೆಂದು ಈಗ ಸಾಧಾರಣ ಎಲ್ಲಾ ರಸ್ತೆಗಳು ಡಾಂಬರ್, ಕಾಂಕ್ರೀಟ್ ಬಳಿದುಕೊಂಡು ವೆಂಟಿಲೇಟರಿನಿಂದ ವಾರ್ಡಿಗೆ ಶಿಫ್ಟ್ ಆಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಅಂಥ ರಸ್ತೆಗಳ ಜವಾಬ್ದಾರಿ ಹೊತ್ತ ಇಲಾಖೆಗಳು ಹಾಗೂ ಜನ ಪ್ರತಿನಿಧಿಗಳು. ಎಲ್ಲರೂ ಸೇರಿ ಗುಡ್ ಜಾಬ್ ಮಾಡುತ್ತಿದ್ದಾರೆ. ಆದರೆ ಆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏನೆಕಲ್ಲು ಗ್ರಾಮದ ಬಾನಡ್ಡ- ಬೊಲಡ್ಕ ರಸ್ತೆ ಮಾತ್ರ ಇನ್ನೂ ಓಬಿರಾಯನ ಕಾಲದಲ್ಲೇ ಇದೆ. ವೆಂಟಿಲೇಟರಿನಲ್ಲಿರುವ ಈ ರಸ್ತೆಗೆ ಯಾರೂ ಡ್ಯಾಡಿ ಇಲ್ವಾ?
ಹಾಗೆಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಶ್ರೀಮಂತ ಪಂಚಾಯ್ತಿ. ಏನೆಕಲ್ಲು, ಐನೆಕಿದು ಮತ್ತು ಸುಬ್ರಹ್ಮಣ್ಯ ಗ್ರಾಮಗಳನ್ನೊಳಗೊಂಡ ದೊಡ್ಡ ಪಂಚಾಯ್ತಿ. ಪಂಚಾಯ್ತಿ ಹತ್ರ ದುಡ್ಡಿದೆ. ಲೆಕ್ಕ ಮಾಡಲು ಎರಡು ಕೈ ಸಾಲದು ಅಷ್ಟು ದುಡ್ಡಿದೆ. ಆದರೆ ಏನೆಕಲ್ಲು ಗ್ರಾಮದ ಬಾನಡ್ಡ-ಬೊಲಡ್ಕ ರಸ್ತೆಯ ಕತೆ ಮಾತ್ರ ಕೈಲಾಸ ಆಗಿದೆ ಮಾರಾಯ್ರೆ. ಮರ್ಯಲದಲ್ಲಿ ಹೋಗಲೇ ಸಾಧ್ಯವಿಲ್ಲ. ಪುಂಡಿ ಮಾಡಲು ಬಂದ ಕಡೆದು ರಸ್ತೆಯಲ್ಲಿ ಚೆಲ್ಲಿದ ಹಾಗಿದೆ. ಈ ಭಾಗದ ಅಂದಾಜು ಎಪ್ಪತ್ತು ಮನೆಗಳಿಗೆ ಈ ರಸ್ತೆಯೇ ಸಂಪರ್ಕ ಸೇತು ಆಗಿದ್ದು ನರಮಾನಿ ಆದವನು ಮರ್ಯಲದಲ್ಲಿ ಈ ರಸ್ತೆಯಲ್ಲಿ ಪರತ್ತೊಂದು ಕೂಡ ಹೋಗಲಿಕ್ಕಿಲ್ಲ. ತುಂಬಾ ವರ್ಷಗಳಿಂದ ಈ ರಸ್ತೆಯ ಇದೇ ಕತೆ ಮುಂದುವರೆದಿದ್ದು ಸಂಬಂಧ ಪಟ್ಟ ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ಜನರ ನಾಭಿ ಆಜಿ ಹೋಗಿದೆಯಂತೆ.
ಮಳೆಕಾಲದಲ್ಲಿ ಜೆಸಿಬಿ, ಇಟಾಚಿ ಮುಂತಾದ ಕೊಂಬಚೇಳು ಜಾತಿಯ ವೆಹಿಕಲ್ ಗಳು ಮಾತ್ರ ಈ ರಸ್ತೆಯಲ್ಲಿ ಹೋಗಬಹುದು. ಎಲ್ಲಿಯಾದರೂ ನಿಮ್ಮ ಕಾರಲ್ಲಿ ಮಿನಿ ಹೋದರೆ ಕಾರಿನ ಮೋನೆ ಒಂದು ಕಡೆ ಹೋದರೆ ಪೀಂಕನ್ ಇನ್ನೊಂದು ಕಡೆ ತಿರ್ಗಿ ಕತೆ ಕೈಲಾಸ ಆಗ ಬಹುದು. ಇನ್ನು ಸೈಕುಲು, ಬೈಕು, ಸ್ಕೂಟರ್ ಮುಂತಾದ ಎರಡು ಚಕ್ರಗಳನ್ನು ಈ ರಸ್ತೆಯಲ್ಲಿ ದಾಟಿಸಲು ಮರಣಬಾವಿಯ ಸಾಯಿಬರಿಗೂ ಸಾಧ್ಯವಿಲ್ಲ. ಇನ್ನು ಈ ರಸ್ತೆಗೆ ಸಂಬಂಧ ಪಟ್ಟ ಜನಪ್ರತಿನಿಧಿಗಳ ಕತೆ ಕೇಳಲು ಎರಡು ಕೆಬಿ GB ಸಾಲದು.
ಆದ್ದರಿಂದ ಈ ರಸ್ತೆಗೆ ಸಂಬಂಧ ಪಟ್ಟ ಜನಪ್ರತಿನಿಧಿಗಳ ಕತೆ ಬಿಡಿ, ಬೇರೆ ಯಾರಾದರೂ ಮಹಾನುಭಾವರು ಒಂದು ಜವಾಬ್ದಾರಿ ತಗೊಂಡು ಸುಬ್ರಹ್ಮಣ್ಯ ಪಂಚಾಯ್ತಿಯ ಆಡಳಿತ ಮಂಡಳಿಯ ಗಮನ ಸೆಳೆದು, ಅಥವಾ ಶಾಸಕರಿಗೆ ಹೇಳಿ, ಅಥವಾ ಕ್ಯಾಪ್ಟನ್ ಗಮನಕ್ಕೆ ತಂದು ಬರುವ ಮಳೆಕಾಲಕ್ಕೆ ಮುಂದಾದರೂ ಈ ರಸ್ತೆಗೆ ಒಂದು ಡಾಂಬರ್ ಮುಖ ಕಾಣಿಸೋದು ಒಳ್ಳೆಯದು. ತುಂಬಾ ಮದುವೆಗಳು ಏಳಿಕ್ಕೆ ಉಂಟು ಮಾರಾಯ್ರೆ ಈ ಭಾಗದಲ್ಲಿ.
ತಿರುಮಲ ಹೋಂಡಾದಲ್ಲಿ SCORE more GET more!
ತಿರುಮಲ ಹೋಂಡಾ ಶೋರೂಂನಲ್ಲಿ ಎಲ್ಲಾ ಹೋಂಡಾ ಟೂವೀಲರ್ ಗಳಿಗೆ ಹಂಡ್ರೆಡ್ ಪರ್ಸೆಂಟ್ ಸಾಲ ಸೌಲಭ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. 6.99% ಬಡ್ಡಿ ಮತ್ತು ಸ್ಥಳದಲ್ಲೇ ಹದಿನಾಲ್ಕು ಸಾವಿರ ಕ್ಯಾಶ್ ಬ್ಯಾಕ್ ಕೂಡ ಇದೆ. ಒಟ್ಟು 60 ತಿಂಗಳ ಕಂತಿನ ವ್ಯವಸ್ಥೆ ಕೂಡ ಮಾಡಲಾಗಿದ್ದು ಈ ಎಲ್ಲಾ ಕೊಡುಗೆಗಳು ತಿರುಮಲ ಹೋಂಡಾದಲ್ಲಿ ಮಾತ್ರ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೀವು 700ಕ್ಕಿಂತ ಜಾಸ್ತಿ ಸಿಬಿಲ್ ಸ್ಕೋರ್ ಹೊಂದಿರ ಬೇಕು. ಈ ಬಗ್ಗೆ ಮಾಹಿತಿಗಾಗಿ contact 8296530306.
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment