ಮೊನ್ನೆ ಓಪನ್ ಆಗಿ ಇನ್ನೂ ಪೊಸ ಪೊಸ ಪರಿಮಳ ಹೋಗಿಲ್ಲ. ಆಗಲೇ ಶುರುವಾಗಿದೆ ಸ್ಟಾರ್ಟಿಂಗ್ ಪ್ರಾಬ್ಲಂ. ಇನ್ನು ಜೋರಾಗದಿದ್ದರೆ ಅಷ್ಟೇ ಸಾಕು.
ಇದು ಕಡಬದ ಪೊಸ ಆಸ್ಪತ್ರೆಯ ಕತೆ. ಮೊನ್ನೆ ಯಾರೋ ಪಂಜರದಿಂದ ಕಾಲಿಗೆ ಕಟ್ಟಿಂಗ್ ಮಿಸನ್ ತಾಗಿತೆಂದು ನೆತ್ತೆರ್ ಇಳಿಸಿಕೊಂಡು ಬಂದಿದ್ದಾರೆ. ಎಲ್ಲಾ ಆಸ್ಪತ್ರೆಯಂತೆ ಡಾಕ್ಟ್ರು ಬತ್ತೆರ್, ಚಂದ ಚಂದದ ನರ್ಸ್ ಬಂದು ಕಾಲನ್ನು ಮರ್ದ್ ಸವರಿ,ಬ್ಯಾಂಡೇಜ್ ಮಾಡಿ ಸರಿ ಮಾಡಿ ಬಿಟ್ಟರು. ಬಿಲ್ ಎಷ್ಟು ಎಂದು ಕೇಳಿದರೆ ಸಾವಿರದ ಎಂಟು ನೂರ ಎಂಟು ಎಂದು ಕಂಪ್ಯೂಟರ್ ಹೇಳಿತು. ಸರಿ ಎಂದು ಬಿಲ್ ಪೋನ್ ಪೇ ಮಾಡಲಾಯಿತು.
ಪೇ ಮಾಡಿದ ದುಡ್ಡು ಟಿನ್ ಎಂದು ಹೋಗಿ ಆಸ್ಪತ್ರೆಯ ಅಕೌಂಟಿಗೆ ಬಿದ್ದ ಶಬ್ದ ಕೇಳಿಸಿದ ನಂತರ ಪಾರ್ಟಿ ಕಟ್ಟಿದ ದುಡ್ಡಿಗೆ ಬಿಲ್ ಕೇಳಿದೆ. ಕಂಪ್ಯೂಟರ್ ನಾಲ್ಕು ನೂರ ಎರಡು ರೂಪಾಯಿಗೆ ಬಿಲ್ ಕೊಟ್ಟಿದೆ. ನಾನು ಪೇ ಮಾಡಿದ್ದು ಸಾವಿರದ ಎಂಟುನೂರ ಎಂಟು ಆದರೆ ನೀವು ಬಿಲ್ ಕೊಟ್ಟಿದ್ದು ನಾಲ್ಕು ನೂರ ಎರಡು ರೂಪಾಯಿಗೆ ಎಂದು ಪಾರ್ಟಿ ಹೇಳಿದರೆ ಕಂಪ್ಯೂಟರ್ ವಾಪಾಸ್ ಮಾತಾಡಲಿಲ್ಲ.
ನನಗೆ ಬಿಲ್ ಆಡಿಟರ್ ಗೆ ಕೊಡಬೇಕು, ನನಗೂ ಬೇರೆ ಬೇರೆ ಕಾರಣಗಳಿಗೆ ಬಿಲ್ ಬೇಕು ಎಂದು ಪಾರ್ಟಿ ತಕರಾರು ತೆಗೆದರೆ, ಇನ್ನು ಕಿರಿಕಿರಿ ಆಗೋದು ಬೇಡ ಎಂದು ಆಸ್ಪತ್ರೆ ಮತ್ತೇ ಎಂಟು ನೂರು ರೂಪಾಯಿ ಬಿಲ್ ಒತ್ತಾಯದಲ್ಲಿ ಕೊಟ್ಟಿದೆ. ಹಾಗೆ ಒಟ್ಟಿಗೆ ಸಾವಿರದ ಇನ್ನೂರ ಎರಡು ರೂಪಾಯಿಗೆ ಬಿಲ್ ಕೊಟ್ಟು ಆಸ್ಪತ್ರೆ ಕೈಕಾಲು, ಮುಖ ತೊಳೆದು ಕೊಂಡಿದೆ. ಹಾಗಾದರೆ ಉಳಿದ ಆರು ನೂರು ರೂಪಾಯಿ ಎಲ್ಲಿಗೆ ಹೋಗುತ್ತದೆ? ಆ ದುಡ್ಡಿಗೆ ಆಸ್ಪತ್ರೆ ಯಾಕೆ ಬಿಲ್ ಕೊಡಲಿಲ್ಲ? ಆ ದುಡ್ಡನ್ನು ತಿನ್ನುವವರು ಯಾರು?
ಈಗ ಒಂದು ಗೂಡಂಗಡಿಗೆ ಹೋದರೂ ಒಂದು ಕಟ್ಟು ಬೀಡಿಗೆ ಇಷ್ಟು, ಸೂತ ಪೆಟ್ಟಿಗೆಗೆ ಇಷ್ಟು, ಮಾರುತಿಗೆ ಅಷ್ಟು ಎಂದು ಗೂಡಂಗಡಿ ಎಂ.ಡಿ ಬಿಲ್ ಹೇಳುತ್ತಾನೆ. ಇವರು ಕಡಬದಲ್ಲಿ ಇಷ್ಟು ದೊಡ್ಡ ಆಸ್ಪತ್ರೆ ಕಟ್ಟಿದ್ದಾರೆ ಮಾರಾಯ್ರೆ ಕಾಲಿಗೆ ಬ್ಯಾಂಡೇಜ್ ಹಾಕಲು ಬಂದವನ ಆರುನೂರು ತಿನ್ನೋದಾ? ಡಾಕ್ಟರ್ ಚಾರ್ಜ್ ಶುರುಕ್ಕು ಇನ್ನೂರು ಅಂತ ಹೇಳ್ತಾರೆ, ಬಿಲ್ ಕೇಳಿದಾಗ ನಾಲ್ಕುನೂರು ಅಂತ ಕಂಪ್ಯೂಟರ್ ಹೇಳ್ತದೆ. ಹಾಗಾದರೆ ಪೇ ಮಾಡಿದ ಸಾವಿರದ ಎಂಟು ನೂರ ಎಂಟರ ಪ್ಯಾಕೇಜ್ ನಲ್ಲಿ ಯಾವುದೆಲ್ಲ ಬರುತ್ತದೆ ಮಾರಾಯ್ರೆ.
ಬ್ಯಾಂಡೇಜಿಗೆ ಎಷ್ಟು? ಬೊಳ್ಳಿದ ಬ್ಯಾಂಡೇಜ್ ಹಾಕಿದ್ರಾ? ಪರ್ತಿಗೆ ಎಷ್ಟು? ಮುಲಾಯಂ ಎಷ್ಟು? ಲೋಷನು, ಗುಳಿಗೆಗಳಿಗೆ ಎತ್ರೆ? ದೂಜಿ ಕೊಟ್ಟಿದ್ದಾರಾ? ನರ್ಸಮ್ಮ ಬಿಲ್ ಕೂಡ ಕಾಲಿಗೆ ಕಟ್ಟಿಂಗ್ ಮಿಸನ್ ತಾಗಿಸಿ ಕೊಂಡವನೇ ಕೊಡಬೇಕಾ? ಒಂದೂ ಅರ್ಥವಾಗುತ್ತಿಲ್ಲ. ಎಲ್ಲಾ ಲೆಕ್ಕ ಹಾಕಿದರೆ ಕಂಕನಾಡಿಯಲ್ಲಿ ಜನರಲ್ ಬೆಡ್ ಗ್ಯಾರಂಟಿ. ಬಿಲ್ ಕೊಡಿ ಮಾರಾಯ್ರೆ. ಪೆನ್ಸಿಲಲ್ಲಿ ಬರೆದಾದರೂ ಕೊಡಿ.
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment