ಹಾಗೆಂದು ಕಡಬ ಎಂಬ ತಾಲೂಕ್ ಹೆಡ್ ಕ್ವಾರ್ಟರ್ಸಿನ ಸಮಸ್ಯೆ ಇವತ್ತು ನಾಳೆ ಮುಗಿಯುವ ಕೇಸಲ್ಲ. ಕಂದಾಯ ಮತ್ತು ಪೋಲಿಸ್ ಇಲಾಖೆ ಬಿಟ್ರೆ ಇಲ್ಲಿ ಬಾಕಿ ಎಲ್ಲಾ ಇಲಾಖೆಗಳ ಕತೆ ಹೇಳಿ ಬರ್ಕತ್ ಇಲ್ಲ. ನ್ಯಾಯ ದೇವತೆಯ ಆಲಯ ಬರದ ಕಾರಣ ಕಡಬ ತಾಲೂಕಿನ ಆರೋಪಿಗಳನ್ನು ಪೋಲಿಸರು ಆಚೆ ಸುಳ್ಯಕ್ಕೂ ಈಚೆ ಪುತ್ತೂರಿಗೂ ಹೊತ್ತುಕೊಂಡು ಹೋಗುತ್ತಿದ್ದಾರೆ. ಪುತ್ತೂರಾದರೂ ತೊಂದರೆ ಇಲ್ಲ ಮಾರಾಯ್ರೆ, ಆ ಸುಳ್ಯಕ್ಕೆ ಯಾಕೆ ಮಾರಾಯ್ರೆ ಕಡಬ ತಾಲೂಕಿನ ಜನರನ್ನು ಹೊತ್ತುಕೊಂಡು ಹೋಗುತ್ತೀರಿ? ಕೇಳಿದರೆ ಬೆಳ್ಳಾರೆ ಸ್ಟೇಷನ್ ದೂರು. ಅಲ್ಲಿ ಕಡಬ ತಾಲೂಕಿನ ಸರ್ವೆ ಸುಧೆ ಬರಿಯಲ್ಲಿ ಒಂದು ಸಮಾರಂಭ ಮಾಡುವುದಿದ್ದರೂ ಮೈಕ್ ಪರ್ಮಿಶನ್ ಬೇಕಾದ್ರೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರನ ಆಫೀಸಿಗೆ ಹೋಗಬೇಕು. ಎಲ್ಲಿಯ ಸರ್ವೆ ಎಲ್ಲಿಯ ಸುಳ್ಯ. ಆದರೂ ಲಿಂಕ್ ಕೊಡಲಾಗಿದೆ.
ಇನ್ನು ಕಡಬಕ್ಕೆ ರಿಜಿಸ್ಟರ್ ಆಫೀಸ್ ತರುವ ವಿಷಯ ಯಾರ ಮಂಡೆಯಲ್ಲೂ ಇಲ್ಲ. ಪಟ್ಟಣ ಪಂಚಾಯ್ತಿ ಆಗಿದೆ ಅದಕ್ಕೆ ಬಾಡಿ ಇಲ್ಲ. ಸರ್ವೆ ಆಫೀಸ್ ಇದೆ ಅಷ್ಟೆ. ಅರಣ್ಯ ಇಲಾಖೆಗೆ ರೇಂಜರ್ ಆಗಲೇ ಬೇಕು. ಇನ್ನು ಶಿಕ್ಷಣ ಇಲಾಖೆ ಯಾವಾಗ ಬರ್ಲಿಕ್ಕೆ?
ಹಾಗೆಂದು ಕಡಬದ ಆರೋಗ್ಯ ಇಲಾಖೆಯ ಬಗ್ಗೆ ಬರೆಯಲೇ ಎರಡು ಪೆನ್ನು ಸಾಲದು. ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ, ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಸ್ಕ್ಯಾನಿಂಗ್ ಇದೆ, ಎಕ್ಸ್ ರೇ ಇದೆ, ನೆತ್ತೆರ್ ಟೆಸ್ಟ್, ಸೂಸು ಟೆಸ್ಟಿಗೆ ಲ್ಯಾಬ್ ಇದೆ, ಇಸಿಜಿ ಇದೆ, ಐಸಿಯೂ, ವೆಂಟಿ, ಡಯಾಲಿಸಿಸ್ ಎಲ್ಲಾ ಇದೆ. ಆದರೆ ಡಾಕ್ಟರೇ ಇಲ್ಲ ಮಾರಾಯ್ರೆ. ಕೇವಲ ಎರಡು ಪಿಚ್ಚರ್ ಡಾಕ್ಟರ್ ಗಳು ಮತ್ತು ಲತಾಕ್ಕ ,ಯಶೋಧಕ್ಕ ಇವರನ್ನೇ ನಂಬಿ ಆಸ್ಪತ್ರೆಗೆ ಬರಬೇಕಷ್ಟೆ. ಅದರಲ್ಲೂ ಪಿಚ್ಚರ್ ಡಾಕ್ಟರ್ ಹತ್ತಿರ ಜ್ವರಕ್ಕೆ ಹೋದರೂ ಅವರು ಮೊಬೈಲ್ ನೋಡಿ ಅದರಲ್ಲಿ ತೋರಿಸುವ ಗುಳಿಗೆಗಳನ್ನು ಕೊಡುತ್ತಾರೆ. ಅದರಲ್ಲಿ ಸುಮಾರಾದರೆ ಆತು, ಇಲ್ಲದಿದ್ದರೆ ಜ್ವರ ತಲೆಗೆ ಹತ್ತಿ ಉರ್ಚಿ ಬಿಡುತ್ತದೆ. ಇದ್ದದ್ದರಲ್ಲಿ ಆ ಲತಾಕ್ಕ ಮತ್ತು ಯಶೋಧಕ್ಕ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಕೀಪಿಂಗ್ ಮಾಡುವ ಕಾರಣ ಆಸ್ಪತ್ರೆಗೆ ಭಂಡ ಧೈರ್ಯದಿಂದ ಹೋಗಬಹುದು. ನೀವು ಏನಾದರೂ ದೊಡ್ಡ ದೊಡ್ಡ ಟಿಕೆಟ್ ತೆಗೆಯುವ ಸೀಕ್ ಹಿಡ್ಕೊಂಡು ಕಡಬ ಆಸ್ಪತ್ರೆಗೆ ಹೋದರೆ ನಿಮಗೆ ವೈಕುಂಠ ಸಮಾರಾಧನೆ ಗ್ಯಾರಂಟಿ.
ಅಲ್ಲ ಮಾರಾಯ್ರೆ ಒಂದು ತಾಲೂಕು ಹೆಡ್ ಕ್ವಾರ್ಟರ್ಸ್. ಒಂದು ಸರ್ಕಾರಿ ಆಸ್ಪತ್ರೆಗೆ ಗತಿ ಇಲ್ಲ ಅಂತ ಹೇಳಿದರೆ ಯಾರಾದರೂ ಕೊದಂಟಿ ತಗೊಂಡು ಮಂಡೆ ಶರ್ಬತ್ತ್ ಮಾಡಬಹುದು. ಒಬ್ಬ ಡಾಕ್ಟರನ್ನು ನೇಮಕ ಮಾಡಲು ಆಗಲ್ವಾ? ಸರ್ಕಾರದ ಹತ್ರ ಡಾಕ್ಟರ್ ಇಲ್ವಾ? ಕಡಬದಲ್ಲಿ ಈಗ ಯಾರಿಗೋ ಸೀರಿಯಸ್ ಆದರೆ ಗತಿ ಏನು? ಈ ಬಗ್ಗೆ ಒಂದು ವ್ಯವಸ್ಥೆ ಮಾಡಲು ಇಲ್ಲಿನ ರಾಜಕಾರಣಿಗಳಿಗೆ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ಈ ಬಗ್ಗೆ ಮಾತಾನಾಡುವ ಮಹಾನುಭಾವ ಯಾರು?
ತಿರುಮಲ ಹೋಂಡಾದಲ್ಲಿ SCORE more GET more!
ತಿರುಮಲ ಹೋಂಡಾ ಶೋರೂಂನಲ್ಲಿ ಎಲ್ಲಾ ಹೋಂಡಾ ಟೂವೀಲರ್ ಗಳಿಗೆ ಹಂಡ್ರೆಡ್ ಪರ್ಸೆಂಟ್ ಸಾಲ ಸೌಲಭ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. 6.99% ಬಡ್ಡಿ ಮತ್ತು ಸ್ಥಳದಲ್ಲೇ ಹದಿನಾಲ್ಕು ಸಾವಿರ ಕ್ಯಾಶ್ ಬ್ಯಾಕ್ ಕೂಡ ಇದೆ. ಒಟ್ಟು 60 ತಿಂಗಳ ಕಂತಿನ ವ್ಯವಸ್ಥೆ ಕೂಡ ಮಾಡಲಾಗಿದ್ದು ಈ ಎಲ್ಲಾ ಕೊಡುಗೆಗಳು ತಿರುಮಲ ಹೋಂಡಾದಲ್ಲಿ ಮಾತ್ರ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೀವು 700ಕ್ಕಿಂತ ಜಾಸ್ತಿ ಸಿಬಿಲ್ ಸ್ಕೋರ್ ಹೊಂದಿರ ಬೇಕು. ಈ ಬಗ್ಗೆ ಮಾಹಿತಿಗಾಗಿ contact 8296530306.
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment