ಹೀಗೆಯೇ ಪೋಲಿಸರು ಪೊಂಕ್ರನ ಫೋನಿಗೆ, ದೂಮನ ಫೋನಿಗೆ, ಚೋಮನ ಫೋನಿಗೆಲ್ಲ ಗಡಗಡ ಆದರೆ ಇನ್ನು ಕೆಲವೇ ದಿನಗಳಲ್ಲಿ ಪೋಲಿಸರಿಗೇ ಬೀಳುವುದರಲ್ಲಿ ಸಂಶಯವೇ ಇಲ್ಲ ಮಾರಾಯ್ರೆ. ಜನ ಈಗ ಅಷ್ಟು ಜೋರಾಗಿದ್ದಾರೆ. ಕಂಡ ಕಂಡಲ್ಲಿ ಪೋಲಿಸರ ಮೇಲೆ ದರ್ಪ ತೋರಿಸಲಾಗುತ್ತಿದೆ. ವಿನಾಕಾರಣ ಪೋಲಿಸರ ಮಾನ ಮರ್ಯಾದೆಗೆ ಮಂಗಳಾರತಿ ಮಾಡಲಾಗುತ್ತಿದೆ. ಆರು ಫೀಟು, ಲಾಕಪ್ಪು, ಪಿಸ್ತೂಲು, ಗನ್ನು, ಲಾಟಿ ಎಲ್ಲಾ ಯಾಕೆ ಕೊಟ್ಟಿದ್ದು ಮಾರಾಯ್ರೆ ಇವರಿಗೆ. ನಾಟಕ ಮಾಡಲಿಕ್ಕಾ ಅಥವಾ ಸಿನೆಮಾ ಮಾಡ್ಲಿಕ್ಕಾ? ಇದೀಗ ಕಡಬದಲ್ಲಿ ಬ್ಯಾಡ್ ಬಾಯ್ಸ್ ಗ್ಯಾಂಗೊಂದು ಅಪರಾತ್ರಿಯಲ್ಲಿ ರೌಂಡ್ಸ್ ಗೆ ಬಂದಿದ್ದ ಪೋಲಿಸರಿಗೇ ಆವಾಜ್ ಹಾಕಿದೆ. ಕೇಳುವವರೇ ಇಲ್ಲ. ಸೊಂಟದಲ್ಲಿದ್ದ ಪಿಸ್ತೂಲು ವೇಸ್ಟು.
ಇದು ಕಡಬ. ಅನಾದಿ ಕಾಲದಿಂದಲೂ ಇಲ್ಲಿ ಪೋಲಿಸ್ ಠಾಣೆ ಇದೆ. ಇಲ್ಲಿನ ಪೋಲಿಸರು ಮತ್ತು ಸಾರ್ವಜನಿಕರ ನಡುವೆ ಒಳ್ಳೆಯ ಸಂಬಂಧ ಇದೆ. ಅದರಲ್ಲೂ ಕಡಬದ ಅಷ್ಟೂ ಪೋಲಿಸರು ಜನಸ್ನೇಹಿ ಪೋಲಿಸರು. ಹಾಗೆಂದು ಕಡಬದ ಲೋಕಲ್ ರೌಡಿಗಳೂ ಜರ್ಸಿ ಪೆತ್ತದ ಗಂಡು ಕಂಜಿಯ ಹಾಗೆ ಪಾ...ಪ. ಅವರಷ್ಟಕ್ಕೆ ಅವರು ಏನಾದರೂ ಬೊಬ್ಬೆ ಹಾಕಿಕೊಂಡು ಇರುತ್ತಾರೆ. ಹಾಗಾಗಿ ಕಡಬದಲ್ಲಿ ಪೋಲಿಸರು ಸ್ವಲ್ಪ ಫ್ರೀಯಾಗಿ ಪೇಪರ್ ಓದಿಕೊಂಡು ಇರುವ ಪರಿಸ್ಥಿತಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಡಬದಲ್ಲಿ ಕೆಲವು ಪ್ರೊಬೇಷನರಿ ರೌಡಿಗಳು ಬಾಲ ಬಿಚ್ಚಲು ರೆಡಿಯಾಗುತ್ತಿದ್ದಾರೆ ಎಂಬ ಅಪಾಯಕಾರಿ ಬೆಳವಣಿಗೆಗಳು ನಡೆದಿವೆ. ಇದಕ್ಕೆ ಉತ್ತಮ ಉದಾಹರಣೆ ಕಡಬದಲ್ಲಿ ಮೊನ್ನೆ ನಡೆದ ಘಟನೆ.
ಓ ಮೊನ್ನೆ ಅಲ್ಲಿ ಕಡಬ ಪೇಂಟೆಯಲ್ಲಿ ಅಪರಾತ್ರಿಯಲ್ಲಿ ರೌಂಡ್ಸಿನಲ್ಲಿದ್ದ ಕಡಬ ಪೋಲಿಸರು ಆಮ್ಲೆಟ್ ಅಂಗಡಿ ಒಂದು ಓಪನ್ ಇರುವ ಬಗ್ಗೆ ವಿಚಾರಿಸಿದ್ದಾರೆ. ಆಗ ಅಲ್ಲಿ ಆಮ್ಲೆಟ್ ಗೆ ಆರ್ಡರ್ ಕೊಟ್ಟು ಕುಂತಿದ್ದ ಸಣ್ಣ ಸಣ್ಣ ಮರಿ ರೌಡಿಗಳು ಪೋಲಿಸರ ಮೇಲೆಯೇ ಏರಿ ಹೋಗಿದ್ದಾರೆ. ಪೋಲಿಸರ ಮೇಲೆಯೇ ದಾನೆಂಬೆ ಪ್ರಯೋಗ ಆಗಿದೆ. ರೌಡಿಗಳ ಬಾಯಲ್ಲಿ ಪೊಂಕ್ರನ ಹೆಸರು, ಚೊಂಕ್ರನ ಹೆಸರೆಲ್ಲಾ ಬಂದಿದೆ. ನಾವು ಅವರ ಜನಗಳು, ಇವರ ಲೆಫ್ಟ್ ಹ್ಯಾಂಡುಗಳು, ಮತ್ತೊಬ್ಬರ ರೈಟ್ ಹ್ಯಾಂಡುಗಳು, ಲೆಗ್ ಪೀಸ್ ಗಳು, ನಮ್ಮ ಸರ್ಕಾರ ಇದೆ ಎಂದೆಲ್ಲ ಬೌ..ಬೌ.. ಅಂದಿದ್ದಾರೆ. ಪೋಲಿಸರಿಗೆ ಇದನ್ನೆಲ್ಲ ಕೇಳಿ ಪೋಡಿಗೆ,ಪೋಡಿಗೆ ಆಗಿದೆ. ಮನಿಪ್ಪಂದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಮರುದಿನ ಮಾತ್ರ ಆಮ್ಲೆಟ್ ಅಂಗಡಿಯವನನ್ನು ಠಾಣೆಗೆ ಕರೆಸಿ ಗುರ್ರ್ ಅಂದಿದ್ದಾರೆಂದು ಸುದ್ದಿ. ಬೇತೆ ದಾಲ ಇಜ್ಜಿ.
ಹಾಗೆ ಕಡಬದ ಆಮ್ಲೆಟ್ ಅಂಗಡಿಯಲ್ಲಿ ಅಪರಾತ್ರಿಯಲ್ಲಿ ಪೋಲಿಸರನ್ನು ಹೆದರಿಸಿದ ಗ್ಯಾಂಗ್ ಯಾವುದೆಂದು ವಿಚಾರಿಸಲಾಗಿ ಅದು ಕಡಬದ ಕುಂಟುದಂಗಡಿ ಗ್ಯಾಂಗ್ ಎಂದು ತಿಳಿದುಬಂದಿದೆ. ಇವರನ್ನು ರಮ್ಮಿ ಬಾಯ್ಸ್, ರಮ್ಮಿ ಸರ್ಕಲ್ ಎಂದೂ ಕರೆಯುತ್ತಾರೆ. ಒಂದು ಏಳೆಂಟು ಜನ ಬ್ಯಾಡ್ ಬಾಯ್ಸ್ ಗಳ ಟೀಂ ಇದಾಗಿದ್ದು ಇವರಿಗೆ ಕೈ ಲೀಡರ್ ಗಳ ಅಭಯ ಹಸ್ತ ಇದೆ. ಕುಂಟುದಂಗಡಿಯೊಂದರ ಹಿಂದೆ ಇರುವ ಖಾಸಗೀ ರೂಮಿನಲ್ಲಿ ದಿನವೀಡೀ ರಮ್ಮಿ ಆಡುವುದು ಇವರ ಒಳ್ಳೆಯ ಗುಣಗಳಲ್ಲಿ ಒಂದು. ಪೋಲಿಸರಿಗೇ ದಾನೆಂಬೆ ಅಂದವರು ರಮ್ಮಿ ಮಾತ್ರವಲ್ಲದೆ ಇಸ್ಪಿಟಿನಲ್ಲಿ ಆಡಬಹುದಾದ ಬೇತೆ ಬೇತೆ ಆಟೋಟಗಳನ್ನೂ ಆಡುವ ಅಪಾಯಗಳಿವೆ.
ಇನ್ನು ಕಬಡ್ಡಿ, ಕ್ರಿಕೆಟ್ ಯಾವಾಗಲೂ ನಡೆಯುವ ಕಾರಣ ಅದಕ್ಕೆ ಸಂಬಂಧಪಟ್ಟ ಆಟಗಳೂ ನಡೆಯ ಬಹುದು. ಇವತ್ತು ಈ ಹುಡುಗರು ಪೋಲಿಸರಿಗೆ ಗುರ್ರ್ ಮಾಡಿದರು, ನಾಳೆ ದೊಡ್ಡ ದೊಡ್ಡ ಟೊಪ್ಪಿಯ ಪೋಲಿಸರಿಗೂ ಹೀಗೆ ಮಾಡಿದರೆ ಪೋಲಿಸರಿಗೆ ಗತಿ ಯಾರು ಮಾರಾಯ್ರೆ. ಇವರ ಪರವಾಗಿ ಮೇಲಿಂದ ಕಾಲ್ ಗಳ ಸುರಿಮಳೆ ಆದರೆ ಸಮಾಜವನ್ನು, ಪೋಲಿಸರನ್ನು ಈ ದುಷ್ಟಕೂಟಗಳಿಂದ ಬಚಾವ್ ಮಾಡುವುದು ಯಾರು?
ವಿ.ಸೂ: ಕಡಬದಲ್ಲಿ ಪೋಲಿಸರಿಗೆ ಜೋರು ಮಾಡಿದ ಪ್ರಕರಣದಲ್ಲಿ ಕುಂಟುದಂಗಡಿ ಗ್ಯಾಂಗಿಗೆ ಕಡಬ ಠಾಣೆಯ ಇಬ್ಬರು ಮತ್ತು ಬೆಳ್ಳಾರೆ ಠಾಣೆಯ ಒಬ್ಬರು ಪೋಲಿಸರು "ದಾಲ ಆಪುಜಿ" ಎಂದು ಆಶೀರ್ವದಿಸಿದ್ದಾರೆ ಎಂದು ತಿಳಿದುಬಂದಿದೆ.
Copy to : 1)superintendent of police D.K.
2) Amith Singh IPS. Inspector General of police. West zone.
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment