ಇಂಟರ್ ಸ್ಟೇಟ್ ಡೋಂಗಿ ರಾಣಿಯೊಬ್ಬಳನ್ನು ಕಾಸರಗೋಡು ವಿದ್ಯಾನಗರ ಪೋಲಿಸರು ಒದ್ದು ಒಳಗೆ ಹಾಕಿದ್ದಾರೆ. ನಿರುದ್ಯೋಗಿಗಳನ್ನು ತನ್ನ ATM ಮಾಡಿಕೊಂಡ ಈ ವಂಚಕಿ ಶಿಖಾಮಣಿ ಕೇರಳ-ಕರ್ನಾಟಕ ಸ್ಟೇಟ್ ಗಳಲ್ಲಿ ದುಡಿದದ್ದು ಬರೋಬ್ಬರಿ ಕೋಟಿ ಕೋಟಿ ಆಸುಪಾಸು. ಇದೀಗ ಪೋಲಿಸರು ಸಚ್ಚಿಯನ್ನು ಸನ್ಮಾನ ಮಾಡಿ ಆಟಿ ಕೂರಲು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ.
MEDIA ONE ಕೃಪೆ
ಇವಳು ಸಚಿತಾ ರೈ. ಕಾಸರಗೋಡು ಜಿಲ್ಲೆಯ ಪೆರ್ಲ ಶೇಣಿ ಬಳ್ತಕಲ್ ನಿವಾಸಿ. ಬಾಡೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಟೀಚರ್ ಮಾರಾಯ್ರೆ ಇವಳು. ಆದರೆ ಕಾಸರಗೋಡು ಜಿಲ್ಲಾ DYFI ನಾಯಕಿಯಾಗಿ ಈಕೆ ಮೊನ್ನೆ ತನಕ ಬಿಜೆಪಿ, ಸಂಘ ಪರಿವಾರ, ನರೇಂದ್ರ ಮೋದಿ ಮತ್ತು ದೇಶಭಕ್ತರ ವಿರುದ್ಧ ನಾಲಿಗೆ ಬೀಸಿದ್ದೇ ಬೀಸಿದ್ದು. ಈಗ ಕರ್ಮ ರಿಟರ್ನ್ಸ್ ಆಗಿದೆ. ಸಿಪಿಸಿಆರ್ ಐ, ಕೇಂದ್ರೀಯ ವಿದ್ಯಾಲಯ, ಕರ್ನಾಟಕ ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎಸ್ ಬಿಐ ಮುಂತಾದ ವಿವಿಧ ಇಲಾಖೆಗಳಲ್ಲಿ ಕೆಲಸ ತೆಗೆಸಿ ಕೊಡುತ್ತೇನೆ ಎಂದು ರೈಲು ಬಿಟ್ಟು ನಿರುದ್ಯೋಗಿಗಳಿಂದ ಕೋಟಿ ತನಕ ಕಲೆಕ್ಷನ್ ಮಾಡಿ ಇದೀಗ ಕೆಲಸವೂ ಇಲ್ಲ, ಕೊಟ್ಟ ದುಡ್ಡೂ ಇಲ್ಲದೆ ವಂಚನೆಗೊಳಗಾದ ಜನ ಪೋಲಿಸ್ ಕಂಪ್ಲೈಂಟ್ ಕೊಟ್ಟ ಕಾರಣ ಸಚಿತಾ ರೈಯನ್ನು ಒಳಗೆ ಇಡಲಾಗಿದೆ.
ಒಳಗೆ ಹೋಗಿರುವ ಸಚಿತಾ ಅಕ್ಕೆ ಮೇಲೆ ಹದಿಮೂರಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು ಉಪ್ಪಿನಂಗಡಿ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡು,ಆದೂರು,ಮೇಲ್ಪರಂಬ ಪೋಲಿಸರು ಅಕ್ಕೆಯನ್ನು ಕಾಣಲು, ಕಂಡು ಹಿಡಿಯಲು, ಹಿಡಿದು ಒಳಗೆ ಹಾಕಲು ಭಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದರು. ಆದರೆ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಹದಿಮೂರು ಕೇಸುಗಳು ಬೀಳುತ್ತಿದ್ದಂತೆ ಅಟ್ಟ ಹತ್ತಿ ಕುಳಿತ್ತಿದ್ದ ಅಕ್ಕೆ ಮೊನ್ನೆ ಮೆಲ್ಲ ಅಟ್ಟ ಇಳಿದು ಕಾಸರಗೋಡು ಜಿಲ್ಲಾ ನ್ಯಾಯಾಲಯಕ್ಕೆ ಸರೆಂಡರ್ ಆಗಲು ಬರುತ್ತಿದ್ದಾಗಲೇ ವಿದ್ಯಾನಗರದ ಹತ್ತಿರ ಡಿವೈಎಸ್ಪಿ C.K ಸುನಿಲ್ ಕುಮಾರ್ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಮತ್ತೆಂಥ ಮಾಡೋದು ಸುನಿಲ್ ಕುಮಾರ್ ಅಕ್ಕೆಗೆ ಸನ್ಮಾನ ಮಾಡಿ ಕುಂಬಳೆ ಪೋಲಿಸರಿಗೆ ತಟ್ಟೆಯಲ್ಲಿ ಇಟ್ಟು ಹಸ್ತಾಂತರ ಮಾಡಿದ್ದಾರೆ. ನಂತರ ಅವರು ಅವರ ಕೆಲಸ ಮುಗಿಸಿ ಅಕ್ಕೆಯನ್ನು ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದು ಅವರು ಆರೋಪಿಗೆ ರಿಮಾಂಡ್ ವಿಧಿಸಿ ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲು ಆದೇಶಿಸಿದ್ದರು. ಇದೀಗ ಅಕ್ಕೆ ಜೈಲು ಪಾಲಾಗಿದ್ದು ಒಂದು ದುಃಖಕರ ವಿಷಯ ಏನೆಂದರೆ ಅಕ್ಕೆ ಜೊತೆಗೆ ಕೆಲವೇ ತಿಂಗಳುಗಳ ಅವಳ ಮಗು ಕೂಡ ಜೊತೆಗಿರುವುದು.
ಹಾಗೆಂದು ಇದೊಂದು ಇಂಟರ್ ಸ್ಟೇಟ್ ವಂಚನೆ. ನಮ್ಮ ಉಪ್ಪಿನಂಗಡಿಯಲ್ಲೂ ಅಕ್ಕೆ ಮೇಲೆ ಕೇಸ್ ಬಿದ್ದಿದ್ದು ಇದರ ಆಳಕ್ಕೆ ಹೋದರೆ ಇನ್ನೂ ದೊಡ್ಡ ದೊಡ್ಡ ಕತೆಗಳು ರಿಲೀಸ್ ಆಗುವ ಅಪಾಯಗಳಿವೆ. ಟೋಪಿ ಹಾಕಿದ ದುಡ್ಡು ಎಲ್ಲಿದೆ ಮಾರಾಯ್ತಿ ಎಂದು ಸಚಿತಾ ರೈಗೆ ಸನ್ಮಾನ ಮಾಡುವಾಗ ಪೋಲಿಸರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿತಾ, ಕಲೆಕ್ಷನ್ ಆದ ದುಡ್ಡನ್ನು ಸೀದಾ ಕೊಂಡೋಗಿ ಕುಂಜಾರು ನಿವಾಸಿ ಚಂಡ್ರಶೇಖರನಿಗೆ ಹಸ್ತಾಂತರ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಹಾಗಾದರೆ ಈ ಚಂಡ್ರಶೇಖರ ಯಾರು? ಅವನಿಗೂ ಸಚಿತಾ ರೈಗೂ ಏನು ಸಂಬಂಧ? ಚಂಡ್ರಶೇಖರ ಎಲ್ಲಿ ಅಟ್ಟದಲ್ಲಿ ಅಡಗಿದ್ದಾನೆ? ಅದು ಪಾರ್ಟ್ ಟೂ ನಲ್ಲಿ ಬರಬಹುದು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
ಸುಳ್ಯದ ನೂತನ ತಹಸೀಲ್ದಾರ್ ರಾದ ಮಂಜುಳ ರವರು ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿದ್ದರು
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
.....................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment