ಸಂಪಾಜೆ: ಹಾಸ್ಟೆಲಿನಲ್ಲಿ ಪೊಣ್ಣು ಪೆರ್ಗುಡೆ

                                       


      ಆ ಸಂಪಾಜೆ ಹಾಸ್ಟೆಲ್ ಸರ್ಕಾರಕ್ಕೆ ಸೇರಿದ್ದಾ ಅಥವಾ ಒಂದು ಪೊಣ್ಣು ಪೆರ್ಗುಡೆಯ ಅಪ್ಪ ಅಜ್ಜನ ಪ್ರಾಪರ್ಟಿಯ ಎಂಬ ಬಗ್ಗೆ ಸಂದೇಹಗಳಿವೆ. ಯಾಕೆಂದರೆ ಆ ಹಾಸ್ಟೆಲ್ ಓನರ್ ಶಿಪ್ ಬಗ್ಗೆ ಸಾರ್ವಜನಿಕರಿಗೂ ಸಂಶಯಗಳಿವೆ. ಅಕ್ರಮ ಚಟುವಟಿಕೆ, ಅನೈತಿಕ ಚಟುವಟಿಕೆ, ಕದಿಯುವ ಕಾರ್ಯಕ್ರಮ, ಹಲ್ಲೆ ಮಾಡುವುದು, Raging, ಕಳಪೆ ಆಹಾರ, ಭ್ರಷ್ಟಾಚಾರ ಮುಂತಾದ ಅನೇಕ ಕಾರ್ಯಕ್ರಮಗಳ ಅಡ್ಡೆಯಾಗಿರುವ ಈ ಹಾಸ್ಟೆಲನ್ನು ಸರ್ಕಾರ ಸಂಪಾಜೆಯಿಂದ ಶಿಫ್ಟ್ ಮಾಡೋದೇ ಒಳ್ಳೆಯದು. ಯಾಕೆಂದರೆ ಇಲ್ಲಿಗೆ ಬರುವ ಅಷ್ಟೂ ಸವಲತ್ತುಗಳೂ ಸಂಪಾಜೆಯ ಪೊಣ್ಣು ಪೆರ್ಗುಡೆಯೊಬ್ಬಳ ಮನೆ ಮತ್ತು ಸ್ಥಳೀಯ ಅಂಗಡಿಯೊಂದಕ್ಕೆ ನೇರವಾಗಿ ಹೋಗುತ್ತದೆ ಎಂದು ತಿಳಿದುಬಂದಿದೆ. ಇಲ್ಲಿ ಯಾಕೆ ಹಾಸ್ಟೆಲ್? ಯಾರಿಗೆ ಹಾಸ್ಟೆಲ್? ಪೊಣ್ಣು ಪೆರ್ಗುಡೆಗಾ?


ಹಾಗೆಂದು ಹಿಂದುಳಿದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿರಲಿ ಎಂದು ಸರಕಾರ ಸಂಪಾಜೆಯಲ್ಲೊಂದು  ಹಾಸ್ಟೆಲ್ ಮಾಡುತ್ತದೆ. ಆದರೆ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳೇ ಇಲ್ಲ. ಮಿನಿಮಮ್ ಹದಿನೇಳು ವಿದ್ಯಾರ್ಥಿಗಳಾದರೂ ಬೇಕು ಇಲ್ಲವಾದರೆ ಹಾಸ್ಟೆಲ್ ಕ್ಯಾನ್ಸಲ್ ಆಗುವಂತಹ ರೂಲ್ಸಿತ್ತು. ಆದರೆ ಇಲ್ಲಿ ಸೇರಿಕ್ಕೊಂಡ ಪೊಣ್ಣು ಪೆರ್ಗುಡೆಯೊಂದು ಹಾಸ್ಟೆಲನ್ನು ತನ್ನ ಆದಾಯದ ಮೂಲವನ್ನಾಗಿ ಮಾಡಿಕೊಂಡಿತು. ಹಾಸ್ಟೆಲಿನಲ್ಲಿ ಕುಕ್ಕಾಗಿ  ಸೇರಿಕ್ಕೊಂಡ ಈ ಪೆರ್ಗುಡೆ ನಂತರ ಈ ಹಾಸ್ಟೆಲಿನಲ್ಲಿ ಮಾಡಿದ ಅಕ್ರಮ, ನಡೆಸಿದ ಅನೈತಿಕ ಚಟುವಟಿಕೆ, ಬ್ರಷ್ಟಾಚಾರ, ದೌರ್ಜನ್ಯ, ಮಾಡಿದ ದುಡ್ಡು ಯಾವ ಚಾರ್ಟರ್ಡ್ ಅಕೌಂಟಿಗೂ ಗುಣಿಸು ಭಾಗಿಸು ಮಾಡಲಾಗದು. ಹಾಸ್ಟೆಲನ್ನು ತನ್ನ ಎಟಿಎಂ ಮಾಡಿಕ್ಕೊಂಡ ಕುಕ್ಕು ಆ ಮೂಲಕ ಎಷ್ಟೋ ವರ್ಷಗಳ ಕಾಲ ತನ್ನ  ಪರ್ಸ್ ತುಂಬಿ ತುಳುಕುವ ಹಾಗೆ ಮಾಡಿಕೊಂಡಿತು. ವಿದ್ಯಾರ್ಥಿಗಳೇ ಸೇರದ ಹಾಸ್ಟೆಲಿನಲ್ಲಿ ಪೊಕ್ಕಡೆ ಪೊಕ್ಕಡೆ ರಾಮ, ದೂಮ, ಚೋಮ ಎಂದು ಹದಿನೇಳು ವಿದ್ಯಾರ್ಥಿಗಳ ಲೆಕ್ಕ ತೋರಿಸಿ, ಆ ವಿದ್ಯಾರ್ಥಿಗಳಿಗೆ ಬರುವ ಅಷ್ಟೂ ದಿನಸಿ ಸಾಮಾನುಗಳನ್ನು ಸ್ಥಳೀಯ ಅಂಗಡಿಯೊಂದಕ್ಕೆ ಮಾರಿ, ವಿದ್ಯಾರ್ಥಿಗಳಿಗೆ ಬರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮನೆಗೆ ಹೊತ್ತುಕ್ಕೊಂಡು ಹೋಗಿ, ಮಾರಿ ಮಾಡಿದ ದುಡ್ಡು ಬೆಳೆದು ಬೆಳೆದು ಲಕ್ಷ ಲಕ್ಷಗಳ ಲೆಕ್ಕದಲ್ಲಿದೆ.

...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಮೇಲಿನ ಮಡಿಕೇರಿಯಿಂದ ಇಲಾಖೆಯವರು Inspection ಗೆ ಬರುವ ಮೊದಲೇ ಮಾಹಿತಿ ಪಡೆದುಕೊಂಡು ಆವತ್ತಿನ ಮಟ್ಟಿಗೆ ಹದಿನೇಳು ಸ್ಥಳೀಯ ವಿದ್ಯಾರ್ಥಿಗಳನ್ನು ಕೂರಿಸಿ ಹಾಸ್ಟೆಲನ್ನು ವೆಂಟಿಲೇಟರಿನಲ್ಲಿ ಇಡಲಾಗುತ್ತಿತ್ತು.ಕೆಲವು ವರ್ಷಗಳಲ್ಲಿ ಹದಿನೇಳು ವಿದ್ಯಾರ್ಥಿಗಳು ಇದ್ದರೂ ಇಪ್ಪತ್ತೈದು, ಮೂವತ್ತು ಮಂಡೆಗಳ ಲೆಕ್ಕ ಕೊಟ್ಟು ಬಂದ ಸರ್ವ ಸವಲತ್ತುಗಳನ್ನೂ ಮನೆಗೆ ಸಾಗಿಸಿದ ಉದಾಹರಣೆಗಳೂ ಇದೆ. ಪಿಕಪ್ ವಾಹನಗಳಲ್ಲಿ, ಮಿನಿ ಲಾರಿಗಳಲ್ಲಿ ಹಾಸ್ಟೆಲಿಗೆ ಬಂದ ಎಲ್ಲಾ ದಿನಸಿ ಸಾಮಾನುಗಳೂ ಕುಕ್ಕು ಮನೆ ಸೇರುತ್ತಿತ್ತು. ಹಾಸ್ಟೆಲಿಗೆ ತಿಂಗಳಿಗೆ ಎರಡು ಗ್ಯಾಸ್ ಸಿಲಿಂಡರ್ ಬೇಕಾದರೂ ‌ನಾಲಕ್ಕು ಸಿಲಿಂಡರಿನ ಲೆಕ್ಕ ತೋರಿಸಲಾಗುತ್ತಿತ್ತು. ಈ ಎಲ್ಲ ಕಳ್ಳ ವ್ಯವಹಾರ ಎಷ್ಟೋ ವರ್ಷಗಳ ಕಾಲ ನಡೆದರೂ ಇಲಾಖೆಯ ಮೇಲಿನ ಅಧಿಕಾರಿಗಳು ಸುಮ್ಮನೆ ಕುಂತದ್ದು ವಿಪರ್ಯಾಸವೇ ಸರಿ. ಪೊಣ್ಣು ಪೆರ್ಗುಡೆ ಇಲಾಖೆಯ ಮೇಲಿನ ಅಧಿಕಾರಿಗಳಿಗೂ ಹೊಟ್ಟೆ ತುಂಬಾ ಬಡಿಸುತ್ತಿದ್ದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯವಿದೆ.

ಇದೀಗ ಇದೇ ಹಾಸ್ಟೆಲ್ ಸುದ್ದಿಯಾಗಿದೆ. ನಾಲ್ಕನೇ ಕ್ಲಾಸಿನ ಹುಡುಗನೊಬ್ಬ ಹಾಸ್ಟೆಲಿನಲ್ಲಿ ತನ್ನ ಮರ್ಮಾಂಗಕ್ಕೆ ಬೇನೆ ಮಾಡಿಕ್ಕೊಂಡು ಆಸ್ಪತ್ರೆ ಸೇರಿದ್ದಾನೆ. ಈ ಮೊದಲೇ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ ಮಾಡಲಾಗುತ್ತಿತ್ತು. ಅದರಲ್ಲೂ ಪೊಣ್ಣು ಪೆರ್ಗುಡೆಯಂತೂ ವಿದ್ಯಾರ್ಥಿಗಳ ಮೇಲೆ ರಕ್ಕಸಿಯಂತೆ ಎರಗಿ ಹಲ್ಲೆ ಮಾಡುತ್ತಿದ್ದ ಬಗ್ಗೆ ಅನೇಕ ಕತೆಗಳಿವೆ. ಕುಕ್ಕಿನಿಂದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಮೇರೆ ಮೀರಿ ಹೋಗುತ್ತಿತ್ತು. ಇದೀಗ ಈ ಹಲ್ಲೆ ಬಗ್ಗೆ ಕೂಡ ಸಾರ್ವಜನಿಕರಲ್ಲಿ ಸಂಶಯಗಳಿವೆ. ಕುಕ್ಕಿಗೆ ಪಿತ್ತ ನೆತ್ತಿಗೇರಿ ಹುಡುಗನ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆಗಳೂ ಇದೆ.


ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget