ಸುಳ್ಯ: ಕಲ್ಲುಗುಂಡಿ ಲಬ್ಬರ್ ಇಲಾಖೆಯಲ್ಲೂ ಗೋಲುಮಾಲು?

                                               


     ಇವರ ಕತೆ ಕೂಡ ಒಂದು ಸಿನಿಮಾದಲ್ಲಿ ಮುಗಿಯಲಿಕ್ಕಿಲ್ಲ ಮಾರಾಯ್ರೆ. ಅಷ್ಟುಂಟು. ರಾಜಮೌಳಿಗೆ ಇವರೇನಾದರೂ ಸಿಕ್ಕಿದರೆ ರಬ್ಬರ್ ಬಲಿ ವನ್, ಟೂ, ತ್ರೀ ಎಲ್ಲಾ ತೆಗೆದು ಬಿಟ್ಟಾನು. ಇದು ಕಲ್ಲುಗುಂಡಿಯ ಲಬ್ಬರ್ ಇಲಾಖೆಯ ಕತೆ. ಇವರು ಟ್ಯಾಪರ್ ಗಳ ಬೆವರನ್ನು ಬೂಸ್ಟ್, ಹಾರ್ಲಿಕ್ಸ್ ಮಾಡಿ ಕುಡಿಯುವವರು.


ಹಾಗೆಂದು ಕಲ್ಲುಗುಂಡಿ,ತೊಡಿಕಾನ,ಗೂನಡ್ಕಗಳಲ್ಲಿ ದೊಡ್ಡ ದೊಡ್ಡ ಲಬ್ಬರ್ ಪ್ಲಾಂಟೇಶನ್ ಇದೆ. ಅದರ ಉಸ್ತುವಾರಿಗೆಂದೇ ಒಂದು ಅಂಡಿಗುಂಡಿ ಇಲಾಖೆ ಕೂಡ ಇದೆ. ಬಹುಶಃ ಟೋಟಲ್ ಲಾಸಿನಲ್ಲೇ ನಡೆಯುವ ಈ ಇಲಾಖೆ ಇದ್ದರೂ ಒಂದೇ, ಇಜ್ಜಂಡಲ ಆವು ಎನ್ನುವಂತಹ ಪರಿಸ್ಥಿತಿ ಇದೆ. ಕಲ್ಲುಗುಂಡಿಯಲ್ಲಿರುವ ಸದ್ರಿ ಲಬ್ಬರ್ ಇಲಾಖೆಯ ಕಛೇರಿಯಲ್ಲಿ ರಬ್ಬರ್ ಟ್ಯಾಪರ್ ಗಳಿಗೆ ಭಾರೀ ಕಿರುಕುಳ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸದ್ರಿ ಕಛೇರಿಯಲ್ಲಿ ಗುತ್ತಿಗೆ ಕ್ಲರ್ಕ್ ಒಬ್ಬಳು ಲಬ್ಬರ್ ಇಲಾಖೆಯನ್ನು ತನ್ನ ಡ್ಯಾಡಿ ಪ್ರಾಪರ್ಟಿ ಎಂಬಂತೆ ವರ್ತಿಸುತ್ತಿದ್ದಾಳೆ. ಕಲ್ಲುಗುಂಡಿಯಲ್ಲಿ ಇವಳ ಸ್ಥಾಪನೆ ಆಗಿ ದಶಕಗಳೇ ಕಳೆದಿವೆ.
ಹಾಗೆಂದು ದಶಕಗಳಿಂದ ಇಲ್ಲಿ ಗಟ್ಟಿಯಾಗಿ ಪೆವಿಕಾಲ್ ಹಚ್ಚಿ ಕುಳಿತಿರುವ ಲೇಡಿ ಲಬ್ಬರ್ ಚಿಲ್ಲರೆ ಚಿಲ್ಲರೆ ಮಾಡಿಕ್ಕೊಂಡು ಮೂರು ವಿವಿಧ ಬ್ಯಾಂಕುಗಳಲ್ಲಿ ಎಸ್ಬಿ ಅಕೌಂಟ್ ಮಾಡಿಕ್ಕೊಂಡು ಉಳಿತಾಯ ಮಾಡಿದೆ, ಮಾಡುತ್ತಿದೆ. ಲಬ್ಬರ್ ಟ್ಯಾಪರ್ ಗಳಿಗೆ ಬರುವ ಬೋನಸ್ ಕೊಡಲು ಕಿರುಕುಳ, ಬಂದಿಲ್ಲ ಎಂದು ಸತಾಯಿಸುವುದು, ಬಂದರೂ ಬಂದಿಲ್ಲ ಎಂದು ವಂಚಿಸಿ ತನ್ನ ಅಕೌಂಟಿಗೆ ಜಮೆ ಮಾಡುವುದು, ಯಾಕೆ ಬಂದಿಲ್ಲ ಎಂದು ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿ ನಂಬಿಸುವುದು, ಟ್ಯಾಪರ್ ಗಳ ಸಂಬಳಕ್ಕೆ ಭರತನಾಟ್ಯ ಮಾಡಿಸುವುದು, ಸಂಬಳ ಲೇಟ್ ಎಂದು ಅದನ್ನು ಟರ್ನ್ಓವರ್ ಮಾಡುವುದು, ಅರ್ಧ ಸಂಬಳ ದಯಪಾಲಿಸುವುದು ಇತ್ಯಾದಿ ಇತ್ಯಾದಿ ಕೆಲಸಗಳನ್ನು ಈ ಲೇಡಿ ಲಬ್ಬರ್ ಸಿಂಗ್ ಮಾಡುತ್ತದೆ ಎಂದು ಟ್ಯಾಪರ್ ಗಳು ಹೇಳಿಕೊಂಡಿದ್ದಾರೆ. ಹಾಗೆಂದು ಈ ಲೇಡಿ ಲಬ್ಬರ್ ಸಿಂಗ್ ಇಲ್ಲಿ ಪರ್ಮನೆಂಟ್ ಅಲ್ಲದಿದ್ದರೂ, ಗುತ್ತಿಗೆ ಆಧಾರದಲ್ಲಿ ನೇತಾಡುತ್ತಿದ್ದರೂ ಒಬ್ಬ ರೇಂಜರ್ ಲೆವೆಲ್ಲಿಗೆ ಇವಳು ಬೆಳೆದಿದ್ದು ವಿಪರ್ಯಾಸವೇ ಸರಿ. ಇದೀಗ ಈ ಜನ ಡೇಂಜರ್ ರೇಂಜರ್ ಗಳನ್ನೂ ಕ್ಯಾರೇ ಮಾಡುತ್ತಿಲ್ಲ ಎಂಬ ವಿಷಯ ಬಂದಿದ್ದು ಹಿಂದೆ ಒಬ್ಬ ಡೇಂಜರ್ ರೇಂಜರ್ ಮತ್ತು ಈ ಜನದ ಜಗಳ ಪೋಲಿಸ್ ಠಾಣೆಯ ಮೆಟ್ಟಿಲೇರಿ ಅಲ್ಲಿ ಜಗಳಕ್ಕೆ ಶಾಂತಿ ಸಿಕ್ಕಿತ್ತು.


ಹಾಗೆಂದು ಈ ಲಬ್ಬರ್ ಸಿಂಗ್ ಈ ಕಚೇರಿಗೆ ಬೇರೆ ಯಾವುದೇ ಸ್ಟಾಫನ್ನು ಬರಲು ಬಿಡುತ್ತಿಲ್ಲ ಎಂದು ತಿಳಿದುಬಂದಿದೆ. ಈ ಕುರ್ಚಿಗಾಗಿ ಈಕೆ ಭಾರೀ ಲಾಬಿ ನಡೆಸಿ ಅದರಲ್ಲೇ ಅಂಟಿಕೊಂಡಿದ್ದಾಳೆ. ಒಂದು ಮೂಲದ ಪ್ರಕಾರ ಈಕೆ ಮೇಲಿನವರಿಗೆ ತಿಂಗಳ ತಿಂಗಳು ಅಗೆಲು ಬಡಿಸುತ್ತಾಳೆ ಎಂದು ಕೂಡ ಸುದ್ದಿ ಇದೆ. ಹಾಗೆಲ್ಲ ದೊಡ್ಡ ದೊಡ್ಡ ಭೂತಗಳಿಗೆ ಅಗೆಲು ಬಡಿಸಲು ಇವಳತ್ರ ದುಡ್ಡು ಎಲ್ಲಿಂದ ಬಂತು ಎಂದು ಕೇಳಿದರೆ ಇವತ್ತು ನೂರು ಜನ ಟ್ಯಾಪರ್ ಗಳು ಕೆಲಸಕಿದ್ದರೆ ನೂರ ಇಪ್ಪತ್ತೈದು ಜನ ಎಂದು ಇಪ್ಪತ್ತೈದು ಜನರನ್ನು ಕಿಸೆಯಿಂದ ಹಾಕಿ ಲೆಕ್ಕ ತೋರಿಸುತ್ತಾಳೆ. ಆಯ್ತಲ್ಲ ದುಡ್ಡು!


...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಈ ನಡುವೆ ಇಲ್ಲಿನ ಇನ್ನೊಂದು ಪವಾಡ ಏನೆಂದರೆ ಇಲ್ಲಿ ಲಬ್ಬರ್ ಗಿಡಗಳಿಗೆ ಡಿನ್ನರ್ ಕೊಡಲು ಬರುವ ರಸ ಗೊಬ್ಬರ ಇಲಾಖೆಗೆ ಟೈಟಾದಾಗ ಬೇರೆ ಬೇರೆ ತೋಟಗಾರಿಕೆಗೆ ಹೋಗುತ್ತದೆ ಎಂಬ ಖಚಿತ ಮಾಹಿತಿ ಇದೆ. ಆದರೆ ಈ ರಸಗೊಬ್ಬರ ತಿನ್ನುವ ಕೇಸಿನಲ್ಲಿ ಆ ಹುಡುಗಿದ್ದು ಯಾವ ಪಾತ್ರವೂ ಇಲ್ಲ ಎಂದು ಮಾಹಿತಿದಾರ ದೇವರ ಪಟ ಮುಟ್ಟಿ ಹೇಳಿದ್ದಾನೆ. ಆದರೆ ಇಲಾಖೆಯ ಬಾಕಿ ಎಲ್ಲಾ ಫ್ರೇಂನಲ್ಲಿ ಇವಳು ಬರುತ್ತಾಳೆ.


ಯುವರ್ ಆನರ್, 
ಅಮಾಯಕ, ಬಡ ರಬ್ಬರ್ ಟ್ಯಾಪರ್ ಗಳ ಬೆವರಿನ ಬೋನಸ್ ತಿಂದು ತೇಗುವ, ಅವರ ಆಯಾಸದ ಸಂಬಳ ತಿಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ, ಹಾಜರಾತಿಯಲ್ಲಿ ವಂಚಿಸುವ, ಇಲಾಖೆಗೆ ಬಂದ ರಸಗೊಬ್ಬರಗಳನ್ನು ಖಾಸಗೀ ತೋಟಗಳಿಗೆ ಕದ್ದು ಮಾರಾಟ ಮಾಡುವ ಒಂದು ಇಲಾಖೆಯ ನೌಕರರಿಗೆ ಯಾವುದೇ ಕ್ರಮ ಇಲ್ವಾ? ಒಂದು ಇಲಾಖೆಯನ್ನು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಏರಿಸಿಕೊಳ್ಳಲು ಉಪಯೋಗಿಸಿಕೊಳ್ಳುವ ಕರಫ್ಟ್ ನೌಕರರ ಸೇವೆ ಇಲಾಖೆಗೆ ಬೇಕಾ? ತಮ್ಮದೇ ಇಲಾಖೆಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರಗಳು ನಡೆದರೂ ರೇಂಜರ್ ಯಾಕೆ ಡೇಂಜರ್ ಆಗುತ್ತಿಲ್ಲ? DM ಏನು ಮಾಡುತ್ತಿದ್ದಾರೆ? MD ಯಾರು ಈಗ ಈ ಇಲಾಖೆಗೆ? ಇದನ್ನೆಲ್ಲ ಮಾಹಿತಿ ಹಕ್ಕಲ್ಲಿ ಕೇಳಬೇಕಾ?


ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.






Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget