November 2024

   ಹಾಗೆಂದು ಕಳಸ ತಾಲೂಕಿನ ಕುದುರೆಮುಖ ಟೌನನ್ನು ಹುಲಿಗಳಿಗೆ ಬೇಕಾಗಿ ಮುಚ್ಚಿ ದಶಕಗಳೇ ಕಳೆದಿದೆ. ಕುದುರೆಮುಖ ದೊಡ್ಡ ಟೌನು ಮಾರಾಯ್ರೆ. ಒಂದು ಟೌನಲ್ಲಿ ಏನೆಲ್ಲಾ ಬೇಕೋ ಅದೆಲ್ಲಾ ಅಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕುದುರೆಮುಖ ಕಬ್ಬಿಣದ ಅದಿರಿನ ಕಂಪೆನಿ ಇತ್ತು. ಜನಸಂಖ್ಯೆಯೂ ಬೇಕಾದಷ್ಟು ಇತ್ತು. ಆದರೆ ಸರಕಾರಕ್ಕೆ ಅದೇನು ಅನ್ನಿಸಿತೋ ಗೊತ್ತಿಲ್ಲ. ಒಂದು ಶುಭ್ರ ಮುಂಜಾನೆ ಸರ್ಕಾರ ಕುದುರೆಮುಖ ಕಬ್ಬಿಣದ ಅದಿರಿನ ಕಂಪೆನಿಯನ್ನು ಮುಚ್ಚಿ ಇಡೀ ಕುದುರೆಮುಖವನ್ನು ಹುಲಿಗಳಿಗೆ ವಾಸಿಸಲು ಯೋಗ್ಯ ಎಂದು   ಹುಲಿ ನ್ಯಾಶನಲ್ ಪಾರ್ಕ್ ಎಂದು ಘೋಷಿಸಿ ಬಿಟ್ಟಿತು. ಆಯ್ತಲ್ಲ, ಕಂಪೆನಿ ಮುಚ್ಚಿದ ಮೇಲೆ ಜನರಿಗೇನು ಕೆಲಸ ಕುದುರೆಮುಖದಲ್ಲಿ. ಹುಲಿ ಬರುತ್ತದೆ ಎಂದು ಅವರೂ ಜಾಗ ಖಾಲಿ ಮಾಡಿ ಬಿಟ್ಟರು. ಇಡೀ ಸಿಟಿಗೆ ಸಿಟಿಯೇ ಖಾಲಿ ಆಯ್ತು.

ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್

 ಉಳಿದದ್ದು ಕುದುರೆಮುಖ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಮತ್ತು ಕುದುರೆಮುಖ ಪಿಎಸೈ ಆಫೀಸ್ ಹಾಗೂ ಅವರಿಗೆ ಸಂಬಂಧಪಟ್ಟ ಪೋಲಿಸರು. ನಟ್ಟ ನಡು ಭಯಂಕರ ಕಾಡು, ಅದರೊಳಗೊಂದು ಘೋಸ್ಟ್ ಟೌನು ಮತ್ತು ಟೌನ್ ಒಳಗಡೆ ಒಬ್ಬ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್. ಪಾಪ ಪೋಲಿಸರು.

ಹಾಗೆ ಕುದುರೆಮುಖ ಘೋಸ್ಟ್ ಟೌನ್ ಆಗಿ ತುಂಬಾ ವರ್ಷಗಳೇ ಕಳೆದರೂ ಈ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಕುದುರೆಮುಖದಲ್ಲೇ ಆ ದಟ್ಟ ಕಾಡಿನ ಮಧ್ಯೆಯೇ ಇತ್ತು. ಆಮೇಲೆ ಮೂಡಿಗೆರೆ ತಾಲೂಕಿನಲ್ಲಿದ್ದ ಕಳಸ ಸ್ವಂತ ತಾಲೂಕಾಯ್ತು. ಹಾಗೆಂದು ಕಳಸದಲ್ಲಿ ಮಾಳಿಗೆಯ ಪೋಲಿಸ್ ಠಾಣೆ ಇದೆ. ಆದರೆ ಕಳಸ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಸರಹದ್ದಿನಲ್ಲಿ ಬರುತ್ತದೆ. ಹಾಗೆಂದು ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಆಫೀಸ್ ಗೆ ಕೂಡ ಮಾಳಿಗೆ ಇದೆ. ದೊಡ್ಡ ಆಫೀಸ್. ಒಂದು ನೂರು ಪೋಲಿಸ್ ಇಡಬಹುದು. ಆದರೆ  ಏನು ಪ್ರಯೋಜನ? ಕೇಸುಗಳೇ ಇಲ್ಲ.

ಇತ್ತೀಚೆಗೆ ಪತ್ರಿಕೆಗಳು ಬರೆದು ಬರೆದು, ನಾವೂ ಬರೆದು ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನಿಗೆ ಕಳಸ ಪೋಲಿಸ್ ಠಾಣೆಯ ಮಹಡಿ ಮೇಲೆ ಒಂದು ಆಫೀಸ್ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಸರ್ಕಲ್ ಇನ್ಸ್ ಪೆಕ್ಟರನ ಕಂಪ್ಯೂಟರ್, ಲ್ಯಾಪ್ ಟಾಪ್, ಒಂದಿಬ್ಬರು ಸಿಬ್ಬಂದಿಗೆ ಕಳಸ ಠಾಣೆಯ ಮಹಡಿ ಮೇಲೆ ವ್ಯವಸ್ಥೆ ಮಾಡಲಾಗಿದೆ. ಇಷ್ಟೂ ಮಾಡಿದ್ದು ಯಾಕೆಂದರೆ ಯಾವಾಗ ನೋಡಿದರೂ ಇಡೀ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಸಮೇತ ಅವನ ಆಫೀಸ್ ನಾಟ್ ರೀಚೆಬಲ್ ಆಗಿರುತ್ತಿತ್ತು. ಕಾರಣ ಕುದುರೆಮುಖದಲ್ಲಿ ಯಾವುದೇ ಮೊಬೈಲ್ ಕಂಪೆನಿಯ ಟವರ್ ಇಲ್ಲ. ಜನರೇ ಇಲ್ಲ ಅಂದ ಮೇಲೆ ಟವರ್ ಯಾಕೆ?

ಹಾಗೆ ಕುದುರೆಮುಖದಿಂದ ಸರ್ಕಲ್ ಇನ್ಸ್ ಪೆಕ್ಟರ್ ಹೋದ ಮೇಲೆ ಇದೀಗ ಪಿಎಸೈ ಗತಿ ಏನು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಕಳಸಕ್ಕೆ ಪಿಎಸೈ ಬೇಡ ಯಾಕೆಂದರೆ ಕಳಸ ತಾಲೂಕು ಹೆಡ್ ಕ್ವಾರ್ಟರ್ಸ್ ಆದ ಕಾರಣ ಈಗಾಗಲೇ ಅಲ್ಲಿ ಗಟ್ಟಿ ಗಟ್ಟಿ, ಜಗಜಟ್ಟಿ ಪೋಲಿಸರು ಇದ್ದಾರೆ ಮತ್ತು ಪಿಎಸೈ ಕೂಡ ಇದ್ದಾರೆ. ಹಾಗಾದರೆ ಕುದುರೆಮುಖ ಪಿಎಸೈಯನ್ನು ಎಲ್ಲಿ ಸ್ಥಾಪನೆ ಮಾಡುವುದು ಎಂದು ಯೋಚಿಸಲಾಗಿ ಕುದುರೆಮುಖ ಸಮೀಪದ ಸಂಸೆ ಎಂಬಲ್ಲಿ ಹೊಸ ಠಾಣೆ ನಿರ್ಮಿಸುವುದು ಎಂದು ಒಂದು ರೌಂಡು ಎಸ್.ಪಿ ಬಂದು ಮೀಟಿಂಗ್ ಆಗಿದೆ. ಆದರೆ ಸಂಸೆಯಲ್ಲಿ ಪೋಲಿಸ್ ಇಡುವುದಕ್ಕೆ ಒಂದೆರಡು ಗ್ರಾಮಗಳ ಜನರ ವಿರೋಧ ವ್ಯಕ್ತವಾದ ಕಾರಣ ಕುದುರೆಮುಖ ಪಿಎಸೈ ಶಿಫ್ಟಿಂಗ್ ಕೆಲಸ ಪೆಂಡಿಂಗ್ ಆಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಕಾಡು ಮಾರಾಯ್ರೆ. ಕಾಡು ಅಂದರೆ ಭಯಂಕರ ಕಾಡು. ಆ ಕಾಡಿನ ಮಧ್ಯೆ ಒಂದು ಘೋಸ್ಟ್ ಟೌನ್. ಆ ಟೌನಿನಲ್ಲಿ ಒಂದು ಪೋಲಿಸ್ ಸ್ಟೇಷನ್. ಪಾಪ ಪೋಲಿಸರು ಹಗಲು ಬಿಡಿ, ನೈಟ್ ಶಿಫ್ಟ್ ಹೇಗೆ ಡ್ಯೂಟಿ ಮಾಡುತ್ತಾರೆ ಎಂಬುದನ್ನು ನೆನೆಸಿಕೊಳ್ಳಲೂ ಭಯ ಆಗುತ್ತಿದೆ. 

 ರೈಲಿನಷ್ಟು ದೊಡ್ಡ ಕಾಳಿಂಗ ಸರ್ಪಗಳು, ಆನೆಯಂತ ಕಾಡು ಪಂಜಿಗಳು, ಹುಲಿಯಂತ ಚಿರತೆಗಳು, ಜುರಾಸಿಕ್ ಪಾರ್ಕಿನ ಡೈನೋಸಾರ್ ಸೈಜಿನ ಆನೆಗಳು, ಲಕ್ಷಗಟ್ಟಲೆ ಮಂಗಗಳು, ನರಿಗಳು, ತೋಳಗಳು, ಕ್ರಿಮಿಕೀಟಗಳು, ನಕ್ಸಲರು ಹಾಗೂ ಇತರೇ ಕಳ್ಳಕಾಕರು. ಇವರ ಮಧ್ಯೆ ಪೋಲಿಸರು. ಇನ್ನೂ ಇಲ್ಲಿಗೆ ಹುಲಿರಾಯ ಬಂದಿಲ್ಲ ಮಾರಾಯ್ರೆ. ಬಂದ್ರೆ ಪಾಪ ಪೋಲಿಸರು ಮಾಳಿಗೆ ಇಳಿಲಿಕ್ಕೆ ಕಷ್ಟ. ಅಡವಿಯಲ್ಲೊಂದು ಸ್ಟೇಷನ್ ಮಾಡಿ ಮೃಗಗಳಿಗೆ ಅಂಜಿದೆಡೆ ಎಂತಯ್ಯ ಸಾಂಗು ಹಾಡಬೇಕಷ್ಟೆ ಆ ಪೋಲಿಸರಿಗೆ ಒಂದು ವ್ಯವಸ್ಥೆ ಮಾಡಿ ಮಾರಾಯ್ರೆ. ಸುಮ್ಮನೆ ಉಂಬುರು ಕಚ್ಚಿಸಿಕೊಂಡು ಇನ್ನು ಪೋಲಿಸರ ನೆತ್ತೆರ್ ಕಡಿಮೆ ಆದರೆ ಕಳ್ಳರನ್ನು ಹೇಗೆ ಹಿಡಿಯೋದು?

     ಹಾಗೆಂದು ಪುತ್ತೂರಿನಲ್ಲಿ ಇಲ್ಲಿ ತನಕ ಮದವೇರಿದ ಅಧಿಕಾರಿಗಳನ್ನು ಮೇಲೆ ಕೆಳಗೆ ಮಾಡುವ ಶಾಸಕರು ಬಂದಿರಲಿಲ್ಲ. ಗುಮಾಸ್ತನನ್ನೂ ಸರ್ ಎಂದು ಕರೆಯುವ ಶಾಸಕರೇ ಇಲ್ಲಿ ಆಗಿ ಹೋದದ್ದು. ಆದರೆ ಇದೀಗ ಶಾಸಕ ಅಶೋಕ್ ರೈ ಮದವೇರಿದ ಮದ್ದಾನೆಗಳಿಗೆ ಇಂಜೆಕ್ಷನ್ ಕೊಡುವ ಕೆಲಸ‌ ಆರಂಭಿಸಿದ್ದಾರೆ. ಆದರೆ ಅವರೆಷ್ಟೇ ಇಂಜೆಕ್ಷನ್ ಕೊಟ್ಟರೂ ಪುತ್ತೂರು ಕಾಂಗ್ರೆಸಿನ ಕೆಲವು ಹಳೆ ತಲೆಮಾರುಗಳು ತಮ್ಮ ಹುಟ್ಟುಗುಣ ಬಿಟ್ಟಂತೆ ಕಾಣುತ್ತಿಲ್ಲ. ಬಕಾಸುರ ಲಂಚಬಾಕರಿಂದ ಅಗೆಲು ಸ್ವೀಕರಿಸಿ ಅವರನ್ನು ಪುತ್ತೂರಿನಲ್ಲೇ ಗೂಟ ಹಾಕಿಸಿ ಮೇಯಲು ಬಿಡುವ ಕೆಲಸ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಇಡೀ ಪುತ್ತೂರಿನ ಎಲ್ಲಾ ಕಚೇರಿಗಳಲ್ಲೂ ಬಕಾಸುರ ಲಂಚಬಾಕರ ಜಾತ್ರೆಯೇ ನಡೆಯಲಿದೆ.

ಹಾಗೆಂದು ಆ ಶಿಶು ಇಲಾಖೆಯಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿದ ಕಾಂಗ್ರೆಸ್ ನಾಯಕರು ಪ್ರಸಾದ ಸ್ವೀಕರಿಸಿ ತಮಗೆ ಬೇಕಾದ ಭೂತವನ್ನು ತಂದು ಸ್ಥಾಪನೆ ಮಾಡಿದ್ದಾರೆ. ಸಹಕಾರ ಇಲಾಖೆಯ ನಾನ್ ಕರಫ್ಟ್ ನಿಬಂಧಕರನ್ನು ಕಳಿಸಿ ಸೊಸೈಟಿ ನೇಮಕಾತಿಗಳಲ್ಲಿ ಲಕ್ಷ ಲಕ್ಷ ಲೂಟುವ ಜನವನ್ನು ತಂದು ಕಾಂಗ್ರೆಸಿಗರು ಸಹಕಾರ ಇಲಾಖೆಯಲ್ಲಿ ಇಟ್ಟು ಅಗೆಲು ಸ್ವೀಕರಿಸಿದ್ದಾರೆ. ಇನ್ನು ಪೋಲಿಸ್ ಇಲಾಖೆಯಲ್ಲೂ ಕೈಯಾಡಿಸಿರುವ ಕಾಂಗ್ರೇಸಿಗರು ಪರತ್ ಇನ್ಸ್ ಪೆಕ್ಟರನ್ನು ಅಷ್ಟು ತರಾತುರಿಯಲ್ಲಿ ಯಾಕೆ ಸೆಂಡ್ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತೆ ಆ ಡಿಪೋ ಮ್ಯಾನೇಜರ್ ಕೂಡ ಹೋದದ್ದು ದುಡ್ಡು ಕೊಟ್ಟವರು ಬಂದ ಮೇಲೆಯೇ.

ಪುತ್ತೂರಿನಲ್ಲಿ ಈಗ ಇರುವ ಅಲಿಖಿತ ನಿಯಮ ಏನೆಂದರೆ ಇಲ್ಲಿ ಮೇಯಲು ಅವಕಾಶ ಬೇಕಾದರೆ ಕಾಂಗ್ರೆಸಿನ ಪರತ್  ಮಂಡೆಗಳಿಗೆ ಬುಳೆ ಕಾಣಿಕೆ ಕೊಡಲೇ ಬೇಕಾದ ಅನಿವಾರ್ಯತೆ ಇದೆ. ತಾಲೂಕು ಪಂಚಾಯಿತಿಯ ಪೋಲಿಸ್ ಗೆಟಪ್ಪಿನ ಅಧಿಕಾರಿ ಪುತ್ತೂರಿಗೆ ಬಂದು ನೂರೈವತ್ತು ವರ್ಷ ಪೂರೈಸಿದಂತ ಅನುಭವ ಜನರಿಗಾದರೂ ಅವರನ್ನು ಟಚ್ ಮಾಡಲೂ ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ ಅಭಯ ಹಸ್ತ ಇವರ ಮೇಲಿದೆ. ಇನ್ನು ಆ ನಗರ ಸಭೆಯ ಪೊಣ್ಣು ಮರ್ಲ ಅಧಿಕಾರಿಯನ್ನು ಹೂವಿನ ಹಾಗೆ ನೋಡಿಕೊಳ್ಳಲಾಗುತ್ತಿದೆ. ಮತ್ತೆ ಆ ನರಕ ಸಭೆಯ ಅಯೋಗ್ಯ ಇನ್ಸ್ ಪೆಕ್ಟರ್  ಪುತ್ತೂರಿಗೆ ಬಂದು ಶತಮಾನಗಳೇ ಕಳೆದಿದೆ.

ಪುತ್ತೂರಿನಲ್ಲಿ ಈಗ ಇರುವ ಅಷ್ಟೂ ಇಲಾಖೆಗಳಲ್ಲಿ ಕರೆಂಟ್ ಇಲಾಖೆ ನಾತ ಎದ್ದು ಹೋಗಿದೆ. ದೊಡ್ಡ ಇಂಜಿನನ್ನು ಟ್ರಾನ್ಸ್ ಫರ್ ಮಾಡಿಸಿ ಆ ಪೋಸ್ಟಿಗೆ ಹಂಗಾಮಿಯಾಗಿ ಬಂದು ಹಂಗಾಮ ಎಬ್ಬಿಸಿರುವ ಚಿಕ್ಕ ಇಂಜಿನ್ ಕತೆ ರಾಮಾಯಣಕ್ಕಿಂತ ಸ್ವಲ್ಪ ಸಣ್ಣದು ಮಹಾಭಾರತಕ್ಕಿಂತ ಸ್ವಲ್ಪ ದೊಡ್ಡದು ಎಂಬಂತಿದೆ. ಹಲವು ಶತಮಾನಗಳಿಂದ ಪುತ್ತೂರು ಮೆಸ್ಕಾಂನಲ್ಲೇ ಕಂಬ ಪೆರೆಸಿ ಪೆರೆಸಿ ಕೊಬ್ಬಿರುವ ಚಿಕ್ಕ ಇಂಜಿನ್ ಕಾಂಗ್ರೆಸ್ ಸರ್ಕಾರ ಇರುವಷ್ಟು ಸಮಯ ಪುತ್ತೂರಿನಲ್ಲೇ ನೆಲೆಯಾಗುವಷ್ಟು ಕಾಂಗ್ರೆಸ್ ನಾಯಕರಿಗೆ ರಿಚಾರ್ಜ್ ಮಾಡಿದೆ ಎಂದು ತಿಳಿದುಬಂದಿದೆ.
ಹಾಗೆಂದು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಎಂಎಲ್ಎ ಬಂದ ಮೇಲೆ ಪುತ್ತೂರಿನಲ್ಲಿ ಟ್ರಾನ್ಸ್ ಫರ್ ದಂಧೆಯೊಂದರಲ್ಲೇ ಕಾಂಗ್ರೆಸ್ ಬಿಸಿನೆಸ್ ಮನ್ ಗಳು, ಕಾಂಗ್ರೆಸ್ ಬ್ರೋಕರ್ ಗಳು, ಕಾಂಗ್ರೆಸ್ ಬಡ್ಡಿ ವೀರರು ಗ್ಯಾಸ್ಟ್ರಿಕ್ ಶುರುವಾಗುವಷ್ಟು ದುಡ್ಡು ಮಾಡಿದ್ದಾರೆ. ಟ್ರಾನ್ಸ್ ಫರ್ ದಂಧೆಗೆಂದೇ ಕಾಂಗ್ರೆಸ್ಸಿನಲ್ಲಿ ಅವರದ್ದೇ ಆದ ಒಂದು ಟೀಮಿದೆ. ಈ ಟೀಮ್ ಶಾಸಕರ ಗಮನಕ್ಕೆ ಗೊತ್ತಾಗದಂತೆ ಅಪಗಪಗ ಬೆಂಗಳೂರು ಬಸ್ಸು ಹತ್ತಿ ಬೆಳಗಾಗುವಷ್ಟರಲ್ಲಿ ಕೆಲಸ ಮುಗಿಸಿ ಬರುತ್ತಾರೆ. ಈ ಕತೆ ಹೀಗೆ ಮುಂದುವರೆದರೆ ಐದು ವರ್ಷಗಳಲ್ಲಿ ಪುತ್ತೂರಿನ ಕಾಂಗ್ರೆಸ್ ಟ್ರಾನ್ಸ್ ಫರ್ ಟೀಮ್ ಮತ್ತು ಅವರು ಸ್ಥಾಪಿಸಿದ ಬಕಾಸುರ ಲಂಚಬಾಕರು ಪುತ್ತೂರನ್ನು ಗುಡಿಸಿ, ಸೆಗಣಿ ಸಾರಿಸಿ ಬಿಡುತ್ತಾರೆ. ಶಾಸಕರು ಟ್ರಾನ್ಸ್ ಫರ್ ಟೀಮನ್ನು ಸ್ವಲ್ಪ "ನೋಡಿಕೊಳ್ಳುವುದು" ಒಳ್ಳೆಯದು.

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

     ಹಾಗೆಂದು ಈ ಕಾಂಕ್ರೀಟೀಕರಣ, ಡಾಮಾರೀಕರಣ, ಪ್ಯಾಚ್ ವರ್ಕ್ ಅದು,ಇದು ಎಂದೆಲ್ಲ ಮಾಡೋದು ಜನರಿಗೆ ಉಪಯೋಗ ಆಗಲಿ ಎಂದು. ನಮ್ಮ ರಸ್ತೆಗಳು ನೈಸ್ ನೈಸ್, ಏಮಾ ಮಾಲಿನಿಯ ಕೆನ್ನೆಯ ಹಾಗೆ ಇರಲಿ ಎಂಬುದು ಪ್ರತಿಯೊಬ್ಬ ಪ್ರಜೆಯ ಆಶಯ. ಅದಕ್ಕೆ ಸರಿಯಾಗಿ ಈಗೀಗ ಸರಕಾರಗಳೂ ರಸ್ತೆಗಳಿಗೆ ಲೋಡ್ ಲೋಡ್ ದುಡ್ಡು ಅನ್ ಲೋಡ್ ಮಾಡುತ್ತಿದೆ. ಆದರೆ ಆ ದುಡ್ಡು  ಕೆಲವು ಕಡೆಗಳಲ್ಲಿ ಸರಿಯಾಗಿ ಯೂಸ್ ಆಗುತ್ತಿಲ್ಲ. ಯೂಸ್ ಲೆಸ್ ಆಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ, ಗುತ್ತಿಗೆದಾರರ ಸ್ವಾರ್ಥ, ಮೇಲಾಟ, ಲಂಚಗೂಳಿತನಗಳು ಸರ್ಕಾರದ ಅನುದಾನಗಳನ್ನು ಲಗಾಡಿ ತೆಗೆಯುತ್ತಿದೆ. ದ್ಯಾವರು ಕೊಟ್ಟರೂ ಪೂಜಾರಿ ಬಿಡಲ್ಲ ಎಂಬಲ್ಲಿ ತನಕ ಕೆಲವು  ಕಡೆಗಳಲ್ಲಿ ಅನುದಾನ ಚರಂಡಿ ಪಾಲಾಗುತ್ತಿದೆ. ಉದಾಹರಣೆಗೆ ನರಮಾನಿ ಸಂಚಾರ ಇಲ್ಲದ ಕಡೆ ರಸ್ತೆ ಮಾಡೋದು, ಕಾಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಡ್ಡದ ಕೊಡಿಯಲ್ಲಿ ಬಸವ ವಸತಿ, ಸ್ಮಶಾನದ ಬಳಿ ಅಂಗನವಾಡಿ ಇತ್ಯಾದಿ ಇತ್ಯಾದಿ. ಇದೀಗ ಪುತ್ತೂರು ತಾಲೂಕಿನ ಶಾಂತಿಗೋಡು ಎಂಬಲ್ಲಿ ಅದೇನೋ ಮನುಷ್ಯನಿಗೆ ಉಪಯೋಗ ಇಲ್ಲದ ಅಂಡಿಗುಂಡಿ ಕೆಲಸ ಒಂದು ಆಗುತ್ತಿದೆ. ಇದನ್ನು ಯಾರು, ಯಾಕೆ ಮಾಡಿಸುತ್ತಿದ್ದಾರೆ, ಯಾವ ಪುರುಷಾರ್ಥಕ್ಕೆ ಎಂಬುದು ಇನ್ನೂ ಯಾರಿಗೂ ಅರ್ಥವಾಗುತ್ತಿಲ್ಲ.

ಇದು ಶಾಂತಿಗೋಡು-ಪಜಿರೋಡಿ-ಪಾಣಂಬು ರಸ್ತೆ. ಈ ರಸ್ತೆಗೆ ಕಜ್ಜಿ ಬಿದ್ದು, ಬಿದ್ದು, ಹುಷಾರಿಲ್ಲದೆ ಇನ್ನೇನು ಬಂದ್ ಆಗುವ ಪರಿಸ್ಥಿತಿಯಲ್ಲಿ ಇತ್ತು. ಈ ರೋಡಿನಲ್ಲಿ ಸಂಚರಿಸಲು ಜೆಸಿಬಿ ಮತ್ತು ಕೊಂಬಚೇಳು ಹಿಟಾಚಿ ಬಿಟ್ಟರೆ ಬೇರೆ ಯಾವುದೇ ವಾಹನ ಬಳಸಿದರೂ ಅವುಗಳು ಗ್ಯಾರೇಜಿಗೆ ಡೈರೆಕ್ಟ್ ಅಡ್ಮಿಟ್ ಆಗುವ ಪರಿಸ್ಥಿತಿ ಇತ್ತು. ಇನ್ನು ಈ ರಸ್ತೆಯಲ್ಲಿ ಸ್ಕೂಲ್ ಬಸ್ಸುಗಳೂ ಕಾಂಡೆ ಮತ್ತು ಬಯ್ಯಗ್ ಬರುತ್ತಿದ್ದು ಮಕ್ಕಳ ಪರಿಸ್ಥಿತಿಯೂ ಕೇಳುವವರೇ ಇಲ್ಲದಾಗಿತ್ತು. ಮತ್ತೆ ಎರಡು ಚಕ್ರದವರ ಕತೆ, ಮೂರು ಚಕ್ರದವರ ವ್ಯಥೆ ಹೇಳಿ ಸುಖವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅದ್ಯಾರೋ ಪುಣ್ಯಾತ್ಮ ಈ ರೋಡಿನ ಮುನ್ನೂರು ಮೀಟರ್ ಕಾಂಕ್ರೀಟೀಕರಣಕ್ಕೆ ಅನುದಾನ ಬಿಡುಗಡೆ ಮಾಡಿಬಿಟ್ಟ. ನಿಜವಾಗಿಯೂ ನೋಡುವುದಾದರೆ ಈ ಅನುದಾನ ರಸ್ತೆ ಪರಿಸ್ಥಿತಿ ಎಲ್ಲಿ ಗಂಭೀರವಾಗಿದೆಯೋ ಅಲ್ಲಿ ಕೊಂಡುಹೋಗಿ ಹಾಕಬೇಕಾದ್ದು ಧರ್ಮ. ಅದರಿಂದ ಕಡೇ ಪಕ್ಷ ಶಾಲೆ ಮಕ್ಕಳಿಗಾದರೂ ಪ್ರಯೋಜನ ಆಗುವಂತೆ ಇರಬೇಕಿತ್ತು. ಆದರೆ ಇಲ್ಲಿ ರಸ್ತೆ ಸರಿ ಇದ್ದಲ್ಲಿ ಕಾಂಕ್ರೀಟ್ ಹಾಕಲಾಗುತ್ತಿದೆ. ಸಾಮಾನ್ ತಪ್ಪಿಸಿ ಕೋಮಣ ಕಟ್ಟಿದ ಹಾಗೆ.

ಅಲ್ಲ ಮಾರಾಯ್ರೆ ಆ ಸ್ಕೂಲ್ ಬಸ್ಸುಗಳು ತೆವಳಿಕೊಂಡು, ಪರಡ್ಡಿಕೊಂಡು ಫಸ್ಟ್ ಗೇರಲ್ಲಿ ಹೋಗುವ ಕಡೆ ಕಾಂಕ್ರೀಟ್ ಹಾಕದೆ ಟಾಪ್ ಗೇರಲ್ಲಿ ಹೋಗುವ ಕಡೆ ಕಾಂಕ್ರೀಟ್ ಹಾಕುತ್ತಿದ್ದೀರಲ್ಲ ಇದು ಯಾರ ಮಂಡೆ? ಯಾಕೆ ಈ ಮಂಡೆ? ಇದರಿಂದ ಈ ಮಂಡೆಗೆ ಏನು ಪ್ರಯೋಜನ? ಕೊತ್ತಲಿಂಗೆಯಲ್ಲಿ ಒಂದು ಕೊಡಬೇಕು ಇಂಥ ಮಂಡೆಗಳಿಗೆ. ಕೆಟ್ಟು ಹೋದ ಕಡೆ ರಸ್ತೆ ಸರಿ ಮಾಡೋದು ಬಿಟ್ಟು ಸರಿ ಇದ್ದ ಕಡೆ ಎಂಥ ರಿಪೇರಿ. ಒಂಚೂರು ಪೋಡಿಗೆಯೇ ಇಲ್ಲ ಮಾರಾಯ್ರೆ ಇವ್ರಿಗೆ.  ಇಲ್ಲಿ ಯಾರೂ ಜನ ಪ್ರತಿನಿಧಿಗಳು ಇಲ್ವಾ? ನಿದ್ರೆಯಲ್ಲಿ ಇದ್ದಾರಾ?

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

     ಅಲ್ಲಿ ಸುಳ್ಯ ತಾಲೂಕಿನ ಕೇರ್ಪಳದಲ್ಲಿ ಅಕ್ರಮವಾಗಿ ಪಯಸ್ವಿನಿ ನದಿಯಿಂದ ಪೊಯ್ಯೆ ತೆಗೆಯಲು ಶುರು ಮಾಡಿದ್ದಾರೆ. ರಾತ್ರಿ, ಹಗಲು ರಾಜಾರೋಷವಾಗಿ ಜೆಸಿಬಿ ತಂದು ಪೊಯ್ಯೆ ತೆಗೆಯಲಾಗುತ್ತಿದೆ. ಕ್ಯಾರೇ ಇಲ್ಲ. ನದಿ ದಡದ ತನಕ ರೋಡ್ ಮಾಡಿ ಲಾರಿಗಳಲ್ಲಿ ನಟ್ಟ ನಡು ರಾತ್ರಿ, ಹಗಲು ಪೊಯ್ಯೆ ತೆಗೆಯಲಾಗುತ್ತಿದೆ. ಸುಳ್ಯ ಪೋಲಿಸರಿಗೆ ಪಾಪ ವಿಷಯವೇ ಗೊತ್ತಿಲ್ಲ. 

ಸುಳ್ಯ ಸೊಸೈಟಿಗೆ ಏನಾದರೂ ಪೊಯ್ಯೆ ಬೇಕಾ? ಗೊತ್ತಿಲ್ಲ. ಅಂತೂ ಇಂತೂ ಕೇರ್ಪಳದಲ್ಲಿ ಪೊಯ್ಯೆ ಖಾಲಿಯಾಗುತ್ತಿದೆ. ಆ ನಾರಾಯಣಣ್ಣ ಯಾಕೆ ಮಾರಾಯ್ರೆ ವಿಷ ಕುಡಿದದ್ದು. ಟ್ರಾನ್ಸ್ ಫಾರ್ಮರ್ ಗೆ ಬೇಲಿ ಹಾಕಿದವರೇ ಪೊಯ್ಯೆ ತೆಗೆಯುತ್ತಿದ್ದಾರ?   ಗೊತ್ತಿಲ್ಲ!

.....................................

 ಶ್ರೀ ಸತ್ಯಾತ್ಮ ಭಟ್ ಕುಂಟಿನಿ ಇವರು ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಇತ್ತೀಚೆಗೆ ಪದಗ್ರಹಣ ಮಾಡಿದರು. ಇವರು ಖ್ಯಾತ ಕವಯಿತ್ರಿ, ಸಾಹಿತಿ, ಗಾಯಕಿ ಶ್ರೀಮತಿ ಶಾಂತಾ ಕುಂಟಿನಿ ಇವರ ಪುತ್ರರಾಗಿದ್ದಾರೆ.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................

....................................................
ಹೆಣ್ಮಕ್ಕಳಿಗಾಗಿಯೇ ಸೃಷ್ಟಿಸಿದ ನಿಯಮವೇನೋ ಇದು, ಇರುವುದರಲ್ಲಿಯೇ ತೃಪ್ತಿಪಡಬೇಕು ಎಂಬುದು :-

   ಪ್ರತಿಯೊಬ್ಬ ಹೆಣ್ಮಗಳು ಇರುವುದರಲ್ಲಿಯೇ ತೃಪ್ತಿಪಡಬೇಕೆಂಬ ನಿಯಮಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಬದ್ಧಳಾಗಿಬಿಟ್ಟಿರುತ್ತಾಳೆ. ಅಲ್ವಾ? ಕೆಲವು ಸಂದರ್ಭಗಳಲ್ಲಿ ಆಕೆಯನ್ನು ಅದರಲ್ಲೂ ವಿವಾಹಿತ ಮಹಿಳೆಯನ್ನು ಈ ನಿಯಮ ತನ್ನೆಡೆಗೆ ಬರಸೆಳೆದು ಅಪ್ಪಿಕೊಳ್ಳುತ್ತದೆ. ನನಗೂ ಇದೇ ರೀತಿಯ ಅನುಭವಗಳಾಗಿವೆ. ಆ ಅನುಭವಗಳನ್ನೇ ಸ್ವಲ್ಪ ಮಸಾಲೆ ಬೆರೆಸಿ ಗೀಚಿಬಿಟ್ಟಿದ್ದೇನೆ. ನನಗೆ ಜೀವನದಲ್ಲಿ ಬಹುದೊಡ್ಡ ಆಸೆಯೊಂದಿತ್ತು. ಐಷಾರಾಮಿ ಮನೆಯಲ್ಲಿ ಬದುಕಬೇಕು, ವೈಭೋಗದ ಜೀವನ ನಡೆಸಬೇಕೆಂಬ ಆಸೆಯಂತೂ ಇರಲಿಲ್ಲ. ಆದರೆ, ಚಿಕ್ಕಂದಿನಿಂದಲೇ ಹೆತ್ತವರ ಪ್ರೀತಿ - ಆರೈಕೆಯಿಂದ ವಂಚಿತಳಾಗಿ ಬೇರೊಂದು ಕೈಯಾಸರೆಯಲ್ಲಿ ಬೆಳೆಯುತ್ತಿದ್ದಾಗ ಹುಟ್ಟಿದ ಅದಮ್ಯ ಬಯಕೆಯದು; ಮದುವೆಯಾಗಿ ಹೋಗುವುದಾದರೆ ಕೂಡುಕುಟುಂಬವನ್ನೇ ಸೇರಬೇಕೆಂದು. ಆದರೆ ಎಡವಟ್ಟಾಗಿದ್ದು ಅಲ್ಲೇ...!
ಅನಿರೀಕ್ಷಿತವಾಗಿ ವೈವಾಹಿಕ ಜೀವನಕ್ಕೆ ಕೊರಳೊಡ್ಡಿದೆ. ಪತಿಯ ಮನೆಯಲ್ಲಿ ಕೇವಲ ಅವರ ಅಮ್ಮ ಅಂದರೆ ನನ್ನ ಅತ್ತೆ, ಹಾಗೂ ಪತಿಯ ಸಹೋದರ ಮಾತ್ರ ಇದ್ದದ್ದು. ನನ್ನ ಕನಸಿನ ಒಂದು ಪಕಳೆ ಇಲ್ಲೇ ಉದುರಿತಲ್ಲಾ? ಹಾಗಾಗಿ ಮುಂದಿನದು ಇರುವುದರಲ್ಲಿ ತೃಪ್ತಿ ಪಡಬೇಕೆಂಬ ನಿಯಮ ಮಾತ್ರ. ಮತ್ತೆ ಒಂದು ಬಯಕೆ ಮನದಲ್ಲಿ ಮನೆಮಾಡಿತ್ತು. ಹೆತ್ತವರ ಪ್ರೀತಿ ಸಿಗದವಳಿಗೆ ಅತ್ತೆಯೇ ಅಮ್ಮನಾಗಬೇಕೆಂದು., ಪತಿಯ ಪ್ರೀತಿ ಕಾಳಜಿಗೇನೂ ಕೊರತೆಯಿರಲಿಲ್ಲ. ಹಾಗೆಂದು ಎಲ್ಲಾ ಪರಿಸ್ಥಿತಿಗಳಲ್ಲಿ ಅತ್ತೆ ಅಮ್ಮನಾಗಲು ಸಾಧ್ಯವೇ? ಕೆಲವೊಮ್ಮೆ ನನ್ನ ಭಾವನೆಗಳಿಗೆ, ಮನಸ್ಸನ್ನು ದಾಟಿ ತುಟಿಯಂಚಿಗೆ ಬಂದ ಮಾತುಗಳಿಗೆ ಅತ್ತೆ ಪ್ರತಿಕ್ರಿಯಿಸುವ ರೀತಿ ಬದಲಾಗುತ್ತಿತ್ತು.ನಾನಿಲ್ಲಿ ಅತ್ತೆಯನ್ನು ದೂರುತ್ತಿಲ್ಲ, ಸಂದರ್ಭಗಳನ್ನು ವಿವರಿಸುತ್ತಿರುವುದಷ್ಟೇ. ಇಲ್ಲಿಯೂ ನನ್ನ ಪಾಲಿಗುಳಿದದ್ದು ಅದೇ ಮೊದಲು ತಿಳಿಸಿದ ನಿಯಮ. ಈಗೀಗ ನಾನು ಈ ನಿಯಮಕ್ಕೆ ಹೊಂದಿಕೊಂಡುಬಿಟ್ಟಿದ್ದೇನೆ. ಹಾಗೆಯೇ ಪ್ರತೀ ವಿವಾಹಿತ ಮಹಿಳೆಗೂ, ಅವಿವಾಹಿತ ಹೆಣ್ಮಗಳಿಗೂ ನನ್ನ ಅಭಿಪ್ರಾಯದ ಮಾತು; ಸಮಯ - ಸಂದರ್ಭ ನಾವೆಷ್ಟೇ ಒಳ್ಳೆಯವರಗಿದ್ದರೂ ಕೆಲವೊಮ್ಮೆ ನಮ್ಮನ್ನು ಕೆಟ್ಟವರನ್ನಾಗಿಸಿಬಿಡುತ್ತದೆ. ಕಾಲದ ಬರಹಕ್ಕೆ ನಮ್ಮನ್ನು ಸಾಕ್ಷಿಯಾಗಿಸುತ್ತದೆ. ಅನಿವಾರ್ಯತೆಯ ಬದುಕಿಗೆ ನಮ್ಮನ್ನು ಹೊಸೆದುಬಿಡುತ್ತದೆ. ಆ ಸಂದರ್ಭದಲ್ಲಿ ನಾವು ಈ ನಿಯಮಗಳನ್ನು ಪಾಲಿಸಲು ಅಭ್ಯಸಿಸಬೇಕು. ಹಾಗೆಂದು ನಿಮಗೆ ನಾನು ಹೀಗೇ ಇರಬೇಕೆಂದು ಉಪದೇಶಿಸುತ್ತಿಲ್ಲ. ಬದಲಾಗಿ ಈ ನಿಯಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಎಂಥದೇ ಸಂದರ್ಭ ಬಂದರೂ ನಾವು ನೆಮ್ಮದಿಯಿಂದಿರಬಹುದು., ಕುಟುಂಬ ಸದಸ್ಯರ ನೆಮ್ಮದಿಗೂ ನಾವು ಕಾರಣಕರ್ತರಾಗಬಹುದು...
-ಶ್ರೀಮತಿ ಜನಶ್ರೀ ಹರೀಶ್, ಸುಳ್ಯ
................................
ಅಡಿಕೆ ಗುಂಡಿ,  ಪಿಲ್ಲರ್ ಹೊಂಡ, 
ಪೈಪ್ ಲೈನ್, ಇಂಗು ಗುಂಡಿ, 
ಮನೆಯ ಪಾಯ, 
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ 
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ 
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

     ಓ ಮೊನ್ನೆ ಕಡಬದಿಂದ ಬರುವಾಗ ಯಾಕೋ ಬಾಯೆಲ್ಲ ಚಪ್ಪೆ ಚಪ್ಪೆ ಮಾರಾಯ್ರೆ. ದೊಂಡೆ ಪಸೆ ಆಜಿ ಹೋದಂತೆ, ಕೈಕಾಲಲ್ಲಿ ಗುಳಿಗ್ಗ ಹಿಡಿದವನಂತೆ ವೈಬ್ರೆಸನ್, ಕಣ್ಣು ಕತ್ತಲೆ ಹೋದಂತೆ ಆಯಿತು. ನೈಂಟಿ ಹಾಕದೆ ಸಾಧ್ಯವೇ ಇಲ್ಲ ಅಂತ ಎಡಮಂಗಲ ಗಡಂಗಿಗೆ ಹೋಗಿ ಒಂದು ಕ್ವಾಟ್ರು ಬಗ್ಗಿಸಿದೆ. ವೈಬ್ರೆಸನ್ ಗುಳಿಗ್ಗನಿಂದ ಕುಲೆಗೆ ಇಳಿಯಿತು. ಮತ್ತೆ ಒಂದು ಕ್ವಾಟ್ರು ಇಳಿಸಿ ಬಿಲ್ ನೋಡಿದರೆ ಇನ್ನೂರು ರೂಪಾಯಿ. ಎಂಚ ಎಂದು ಕೇಳಿದರೆ ಅಂಚನೆ ಎಂಬ ಉತ್ತರ. ಹೆದರಿಕೆ ಆಯಿತು. ಜಾಗ ಖಾಲಿ ಮಾಡಿದೆ.

  ಅಲ್ಲಿ ಎಡಮಂಗಲ ಎಂಬ ಊರಿನಲ್ಲಿ ಕುಡುಕರ ಕಿಸೆಯಿಂದ ನೈಂಟಿಗೆ ಐದು, ಕ್ವಾಟ್ರಿಗೆ ಹತ್ತು ಎಂದು ಜಾಸ್ತಿ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಗಡಂಗಿನಲ್ಲಿ MRP ಗಿಂತ ವಿಥೌಟ್ ಕಡ್ಲೆ, ಚಕ್ಕುಲಿ ಜಾಸ್ತಿ ವಸೂಲಿ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ದೊಡ್ಡ ಕೇಸ್. ಆದರೆ ಎಡಮಂಗಲ ಗಡಂಗಿನಲ್ಲಿ ಅಮಾಯಕ ಕುಡುಕರಿಂದ ಐದತ್ತು ಜಾಸ್ತಿ ಕೀಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಕುಡುಕರಿಗೆ ಆರ್ಥಿಕ ಭಾರ ಜಾಸ್ತಿಯಾಗುತ್ತಿದ್ದು ಇದು ಎಡಮಂಗಲದ GDP ಮೇಲೆ ದೊಡ್ಡ ಪರಿಣಾಮ ಬೀರುವ ಅಪಾಯಗಳಿವೆ. ಈ ಬಗ್ಗೆ ಎಡಮಂಗಲ ಕುಡುಕರ ಒಕ್ಕೂಟ ನಿರ್ಣಯ ಅಂಗೀಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದು ಗಡಂಗಿನವರ ಪಿತ್ತಳೆ ಪಿದಾಯಿ ಬೀಳುವ ಸಾಧ್ಯತೆ ಇದೆ. ಅದರಲ್ಲೂ ಎಡಮಂಗಲ ಗಡಂಗಿನವರ ಇನ್ನೂ ಒಂದು ಸಿನಿಮಾ ಇದ್ದು ಶೂಟಿಂಗ್ ನಡೆಯುತ್ತಿದೆ. ಅದರ ರಿಲೀಸ್ ಡೇಟ್ ಕೂಡ ಶೀಘ್ರದಲ್ಲೇ ಇದೆ.

ಹಾಗೆಂದು ಬಾರ್ ಗಳಲ್ಲಿ ನೈಂಟಿ ಎಂಎಲ್ ಗೆ ಐದು ಜಾಸ್ತಿ ವಸೂಲಿ ಮಾಡಿದರೂ ಕುಡುಕರ ಅಭ್ಯಂತರವಿಲ್ಲ. ಯಾಕೆಂದರೆ ಅದು ಬಾರು, ಅವರಿಗೆ ಕರೆಂಟ್ ಬಿಲ್ಲು, ನೀರಿನ ಬಿಲ್ಲು, ಆ ಬಿಲ್ಲು, ಯಮನ ಚೀಟಿ ಅಂತೆಲ್ಲ ಇರುತ್ತದೆ. ಆದರೆ ಗಡಂಗಿನವರಿಗೆ ಅದು ಎಂಥದ್ದೂ ಇಲ್ಲ. ಆದರೂ ಎಡಮಂಗಲದಲ್ಲಿ ಕುಲೆಗಳ ಬಾಬ್ತು ಎಂದು ಜಾಸ್ತಿ ವಸೂಲಿ ಮಾಡುವುದು ಕುಡುಕರಿಗೆ ಮಾಡುವ ದೊಡ್ಡ ಅನ್ಯಾಯ. ಅದರಲ್ಲೂ ಈ ಕಮ್ಮಿದ ಕ್ವಾಟ್ರು ಕುಡಿದರೆ ಮುಗೀತು, ಲಿವರ್ ಕಲ್ಲಡ್ಕ ಹೈವೇಯಾಗಿ ಬಿಡುತ್ತದೆ. ಅದರಲ್ಲೂ ಈ ಕಮ್ಮಿದ ಒಂದು ಕ್ವಾಟ್ರು ಮಾಡಲು ತಗಲುವ ವೆಚ್ಚ ಅಬ್ಬಬ್ಬಾ ಅಂದರೂ ಮ್ಯಾಕ್ಸಿಮಮ್ ಹತ್ತು ರೂಪಾಯಿ ಮಾರಾಯ್ರೆ. ಮೂವತ್ತೈದು ಲೀಟರಿನ  ಎರಡು ಕ್ಯಾನ್ N.S ತಂದು ಅದನ್ನು ಇನ್ನೂರು ಲೀಟರಿನ ತೋಟಕ್ಕೆ ಮುದ್ದು ಬಿಡುವ ನೀಲಿ ಡ್ರಮ್ಮಿನಲ್ಲಿ ಹಾಕಿ ಅದಕ್ಕೆ ವಾಟರ್ ತುಂಬಿಸಿದರೆ ಆಯ್ತು.ರುಚಿ ರುಚಿಯಾದ, ಹೆಲ್ದಿ ಹೆಲ್ದಿ, ಟೇಸ್ಟೀ ಟೇಸ್ಟೀ, ಕೂಲ್ ಕೂಲ್ ಕ್ವಾಟ್ರು ರೆಡಿ ಮಾರಾಯ್ರೆ. ಆದರೆ ಅದಕ್ಕೇ ನೈಂಟಿಗೆ ನಲವತ್ತೈದು ವಸೂಲಿ ಮಾಡಲಾಗುತ್ತಿದೆ. ವರ್ಕ್ ಫ್ರಮ್ ಹೋಮೂ ಮಾಡಬಹುದು. ಒಳಗೆ ಹೋಗಲು ಡ್ರೆಸ್ ರೆಡಿ ಇದ್ದರೆ ಸಾಕು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................

....................................................

ಜೀವನ ಚಕ್ರ 
   ತಾಯಿಯ ಗರ್ಭದಿಂದ ಹೊರಗೆ ಬಂದಿದ್ದೇವೆ ಎಂದು ಅಂದುಕೊಂಡರೂ ಪುನಃ ಬಂದುದೆಲ್ಲಿಗೆ ಜಗತ್ತಿನ ಭೂಗರ್ಭದೊಳಗೆ.ನಮ್ಮನ್ನು ಹೆತ್ತ ತಾಯಿ 9 ತಿಂಗಳಷ್ಟೇ ಹಿಡಿದಿಟ್ಟು ಕೊಂಡಿರುತ್ತಾಳೆ.ಆದರೆ ನಂತರ ನಮ್ಮನ್ನು ಜಗತ್ತೇ ಹಿಡಿದಿಟ್ಟು ಕೊಂಡಿರುತ್ತದೆ..ಇದರ ಬಾಹು ಬಂಧನದಿಂದ ಹೊರಗೆ ಬಂದಾಗ ಬರುವುದೇ ಸಾವು.. ಆದರೆ ಪ್ರಪಂಚದ ಗರ್ಭದೊಳಗೆ ಮಾನವ ಎಷ್ಟೇ ದೊಡ್ಡವನಾಗಿ ಹೋದರೂ, ಪುನಃ ತಾಯಿ ಗರ್ಭದೊಳಗೆ ಸೇರಬೇಕಾದರೆ ಸಣ್ಣವರಾಗಿಯೇ ಬರಬೇಕು.. ಇಲ್ಲ ನಾನು ದೊಡ್ಡವನೇ ಆಗಿ ಹೀಗೇ ಇರುತ್ತೇನೆ ಸಣ್ಣ ಆಗಲಾರೆ ಎಂದರೆ ತಾಯಿ ಗರ್ಭದೊಳಗೆ ಜನ್ನಿಸದೆ ಹಾಗೆಯೇ ಇರಬೇಕಷ್ಟೆ.. ನಾವೆಷ್ಟು ಬಾರಿ ನಮ್ಮನ್ನು ನಾವು ಈ ಪ್ರಪಂಚದ ಬಂಧನದಿಂದ ಬಿಡಿಸಿಕೊಂಡಿದ್ದೇವೆ ಅಂದು ಕೊಂಡರೂ, ಪುನಃ ನಮಗೇ ಗೊತ್ತಿಲ್ಲದಂತೆ ಸಿಲುಕಿಕೊಂಡಿರುತ್ತೇವೆ..ಅದಕ್ಕೇ ಆಯಸ್ಸು ಎನ್ನುವುದು..ಕರ್ಮ ಬೇಡ ಎಂದರೆ ಹೋಗುವರು.. ಆಯಸ್ಸು ದಾನ ಮಾಡಿದಾಗ ದಾನದ ಜೊತೆಗೆ ಕರ್ಮವನ್ನೂ ಪಡೆದುಕೊಳ್ಳಬೇಕಾಗುತ್ತದೆ.. ಕರ್ಮ ಖಾಲಿಯಾದಾಗ ಮಾನವ ಇಲ್ಲಿಂದ ಖಾಲಿ ಆಗಬೇಕಾಗುತ್ತದೆ..ಅದಕ್ಕೇ ಯಾರದ್ದಾದರೂ, ವಯಸ್ಸಾದವರ  ಕೂರಿಸಿ ಆಯಸ್ಸು ಅದರ ಜೊತೆಗೆ ಕರ್ಮವನ್ನೂ ಕೂಡಾ ದಾನ ಮಾಡುವಂತೆ ಕ್ರಿಯೆಯನ್ನು ಮಾಡಲಾಗುತ್ತದೆ... ಆಯಸ್ಸು ದಾನ, ದತ್ತು ಪಡೆವ ಕರ್ಮ ಇದಾವುದನ್ನೂ ನಂಬದವರು ಕರ್ಮ ಖಾಲಿ ಆಗಿದ್ದರೆ, ಹೋಗಿ ಬಿಡುತ್ತಾರೆ...ನಾವು ಇಲ್ಲಿ ಉಳಿದು ಕೆಲಸ ಮಾಡಬೇಕಿದ್ದರೆ, ಇನ್ನಾರದ್ದೋ ಕರ್ಮವ ಪಡೆದಾದರೂ ಉಳಿದುಕೊಳ್ಳಬೇಕಾಗುತ್ತದೆ... ನನಗೆ ಕರ್ಮ ಬೇಡ.. ಆಯಸ್ಸು ಮಾತ್ರ ಬೇಕು ಅನ್ನುವಂತಿದ್ದರೆ, ದಾನವಾಗಿ ಕರ್ಮ ಕೆಲಸ ಮಾಡದು.. ಅದಕ್ಕೆ ಪಡೆಯುವ, ಅಥವಾ ಕೊಡುವ ದಾನದ ಬಗೆಗೂ ನಂಬಿಕೆ ಬೇಕಾಗುತ್ತದೆ.. ಕರ್ಮವನ್ನೂ ಕೂಡಾ ಕೊಂಡಕೊಳ್ಳಲು ಆಗುತ್ತದೆ..ಈ ಪ್ರಕ್ರಿಯೆಗಳು ಇರುವ ಕಾರಣವೇ ಮನುಷ್ಯ ಸಂಬಂಧಗಳು ಕರ್ಮದ ಮುಖಾಂತರ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ..
 ಮಾನವನ ಆಯಸ್ಸು ಕಡಿಮೆ ಇದ್ದರೆ ಕರ್ಮಗಳು ಬಲವಾಗಿ ಮಾಡಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ... ಹಾಗಾಗಿ ನಾವು ಕೆಲವೊಂದು ಕರ್ಮವನ್ನು ಮಾಡಲೇ ಬೇಕಾಗುತ್ತದೆ.. ಯಾಕೆಂದರೆ ಪ್ರತಿಫಲದ ಕೊಡವೇ ನಮ್ಮ ಕರ್ಮ..

-ಶ್ರೀಮತಿ ಶಾಂತಾ ಕುಂಟಿನಿ

................................
ಅಡಿಕೆ ಗುಂಡಿ,  ಪಿಲ್ಲರ್ ಹೊಂಡ, 
ಪೈಪ್ ಲೈನ್, ಇಂಗು ಗುಂಡಿ, 
ಮನೆಯ ಪಾಯ, 
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ 
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ 
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

    ಇದೊಂದು ರಸ್ತೆ ಅನಾದಿ ಕಾಲದಿಂದಲೂ ಶಾಪಗ್ರಸ್ತ ರಸ್ತೆ. ಹಾರಾಡಿ -ರೇಲ್ವೇ ಸಂಕದ ಬದಿಯಿಂದ ಬಂದು ರೇಲ್ವೆ ಸ್ಟೇಷನ್ ಹತ್ತಿರ ಸಾಗಿ, ಮಡ್ಯೊಲ ಕಟ್ಟೆ ದಾಟಿ, ನೆಲ್ಲಿಕಟ್ಟೆ ಹತ್ತಿ ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಬಸ್ ನಿಲ್ದಾಣಕ್ಕೆ ಬಂದು ಈ ರೋಡ್ ಜಾಯಿನ್ ಆಗುತ್ತದೆ. ಎಷ್ಟೋ ವರ್ಷ ಈ ರಸ್ತೆ‌ ಕುಷ್ಠರೋಗದಿಂದ ಬಳಲಿ ಬಳಲಿ ಬೆಂಡೆಕಾಯಿ ಆಗಿತ್ತು. ಆ ರೋಡ್ ರೈಲಿಗೆ ಸಂಬಂಧ ಪಟ್ಟ ಜಾಗೆ ಎಂಬ ಕಾರಣಕ್ಕೆ ಸೆಂಟ್ರಲ್ ಗೆ ಯಾರು ಹೋಗೋದು ಎಂದು ಅನಾದಿ ಕಾಲದಿಂದಲೂ ಲೋಕಲ್ ಲೀಡರ್ ಗಳು ಆ ರೋಡಿನ ಸುದ್ದಿಯನ್ನೇ ಬಿಟ್ಟಿದ್ದರು. 

  ಪುತ್ತೂರಿನ ಎಂಎಲ್ಎ ಡಿ.ವಿ ಎಂಪಿ ಆದರು ನೋಡಿ. ಡಿ.ವಿ ಸೆಂಟ್ರಲಲ್ಲಿ ಮಾತಾಡಿ ಈ ರಸ್ತೆಗೆ ಡಾಂಬರು ಕಾಯಿಸ ಬಹುದು ಎಂಬ ಆಶೆ ಇತ್ತು. ಕಾಯಿಸಲಿಲ್ಲ ಅವರು. ಆಮೇಲೆ ಅವರೇ ಮುಖ್ಯಮಂತ್ರಿ ಆದರು. ಒಂದು ಪೋನ್ ಕಾಲ್ ಸಾಕಿತ್ತು ಈ ರಸ್ತೆಗೆ. ಪೋನ್ ಮಾಡಲೇ ಇಲ್ಲ. ಆಮೇಲೆ ಶನಿ ಶನಿ ಅಂತ ಈ ದೇಶದ ರೇಲ್ವೆ ಮಂತ್ರಿಯೂ ಆದರು. ಇವರ ಪಿಎಯ, ಪಿಎಯ, ಪಿಎಯ,ಪಿಎಯ ಪಿಎಗೆ ಹೇಳಿದ್ರೂ ಸಾಕಿತ್ತು. ಹೇಳಲೇ ಇಲ್ಲ ಮಾರಾಯ್ರೆ ಅವರು. ಆಮೇಲೆ ಪಾಪ ಯಾರೋ ಊರವರೇ ಹೋರಾಟ ಮಾಡಿ ರೇಲ್ವೆ ಇಲಾಖೆಯ ಗಮನಕ್ಕೆ ತಂದು ಕಾಂಕ್ರೀಟ್ ಹಾಕಿಸಲಾಯಿತು. ಈಗ ರೋಡ್ ಲಾಯಿಕ್ ಆಗಿದೆ. ನೂರರಲ್ಲಿ ಹೋಗಿ ಸಾಯ್ಲಿಕ್ಕೆ ತೊಂದರೆ ಇಲ್ಲ. ಈಗ ಸಮಸ್ಯೆ ಆ ಶೋರೂಂ ಜನಗಳದ್ದು ಮಾರಾಯ್ರೆ. ಭಾರತ್ ಶೋರೂಂ!

ಈಗ ಈ ಹಾರಾಡಿ ರಸ್ತೆಯಲ್ಲಿ ಹಾರಾಡಿಕೊಂಡು ಹೋಗಬಹುದು. ಆದರೆ ಆ ಶೋರೂಂ ಅಡ್ಡ ಮಾರಾಯ್ರೆ. ಹಾಗೆಂದು ಭಾರತ್ ಶೋರೂಂ ಪುತ್ತೂರಿನ ಹೆಮ್ಮೆ. ಅಲ್ಲಿ ದಿನಾ ಕಾರು ಜಾತ್ರೆ. ಈ ಶೋರೂಂ ಕೂಡ ಹಾರಾಡಿ - ರೇಲ್ವೆ ಸ್ಟೇಷನ್ ಮಧ್ಯೆ ಇದೆ. ಮೊದಲೇ ಅದು ಸಿಂಗಲ್ ರೋಡ್ ಮತ್ತು ಆ ರೋಡಿನಲ್ಲೇ ಶೋರೂಂನವರ ಕಾರು ಜಾತ್ರೆ. ರಸ್ತೆಯ ಇಕ್ಕೆಲಗಳಲ್ಲಿ ಇವರ ಕಾರುಗಳು, ಸರ್ವೀಸ್ ಗೆ ಬಂದ ಕಾರುಗಳು, ಅಡ್ಮಿಟ್ ಆಗಲು ಬಂದ ಕಾರುಗಳು, ಡಿಸ್ಚಾರ್ಜ್ ಆದ ಕಾರುಗಳು, ಪೊಸ ಕಾರುಗಳು,ಪರತ್ತ್ ಕಾರುಗಳು ,ಗುಜಿರಿ ಕಾರುಗಳು, ಕಾರಿನ ಪುಣಗಳು ದಿನಗಟ್ಟಲೆ, ವಾರಗಟ್ಟಲೆ ರಸ್ತೆ ಬದಿಯಲ್ಲಿಯೇ ಬಂದು ಜಮಾವಣೆಯಾಗುವ ಕಾರಣ ನಿತ್ಯ ಈ ರೋಡಲ್ಲಿ ಜಾಮ್ ಆಗುತ್ತಾ ಇರುತ್ತದೆ. ಸದ್ಯಕ್ಕೆ ಈ ಒಂದು ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಇವರ ಕಾರು ಜಾತ್ರೆ ಯಿಂದಾಗಿ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಭಾರೀ ತೊಂದರೆಗಳಾಗುತ್ತಿದೆ. ಎಲ್ಲಿಯಾದರೂ ಜೀವ ಎಳೆಯುವವನು ಈ ರಸ್ತೆಯಲ್ಲಿ ಬಂದರೆ ಶೋರೂಂ ಎದುರೇ ಪಡ್ಚ ಆಗುವ ಅಪಾಯಗಳಿವೆ. ಆದ್ದರಿಂದ ಇನ್ನಾದರೂ ಶೋರೂಂ ಮ್ಯಾನೇಜರ್ ಆನಂದಣ್ಣ ಅವರಿಂದಾಗುವ ಈ ಸಮಸ್ಯೆಯ ಬಗ್ಗೆ ಗಮನ ಹರಿಸಲೇ ಬೇಕಾಗಿದೆ. ಇಲ್ಲದಿದ್ದರೆ ಓವರ್ ಟೂ ಉದಯ ರವಿ TRAFFIC SUB INSPECTOR.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................

....................................................

ಜೀವನ ಚಕ್ರ 
   ತಾಯಿಯ ಗರ್ಭದಿಂದ ಹೊರಗೆ ಬಂದಿದ್ದೇವೆ ಎಂದು ಅಂದುಕೊಂಡರೂ ಪುನಃ ಬಂದುದೆಲ್ಲಿಗೆ ಜಗತ್ತಿನ ಭೂಗರ್ಭದೊಳಗೆ.ನಮ್ಮನ್ನು ಹೆತ್ತ ತಾಯಿ 9 ತಿಂಗಳಷ್ಟೇ ಹಿಡಿದಿಟ್ಟು ಕೊಂಡಿರುತ್ತಾಳೆ.ಆದರೆ ನಂತರ ನಮ್ಮನ್ನು ಜಗತ್ತೇ ಹಿಡಿದಿಟ್ಟು ಕೊಂಡಿರುತ್ತದೆ..ಇದರ ಬಾಹು ಬಂಧನದಿಂದ ಹೊರಗೆ ಬಂದಾಗ ಬರುವುದೇ ಸಾವು.. ಆದರೆ ಪ್ರಪಂಚದ ಗರ್ಭದೊಳಗೆ ಮಾನವ ಎಷ್ಟೇ ದೊಡ್ಡವನಾಗಿ ಹೋದರೂ, ಪುನಃ ತಾಯಿ ಗರ್ಭದೊಳಗೆ ಸೇರಬೇಕಾದರೆ ಸಣ್ಣವರಾಗಿಯೇ ಬರಬೇಕು.. ಇಲ್ಲ ನಾನು ದೊಡ್ಡವನೇ ಆಗಿ ಹೀಗೇ ಇರುತ್ತೇನೆ ಸಣ್ಣ ಆಗಲಾರೆ ಎಂದರೆ ತಾಯಿ ಗರ್ಭದೊಳಗೆ ಜನ್ನಿಸದೆ ಹಾಗೆಯೇ ಇರಬೇಕಷ್ಟೆ.. ನಾವೆಷ್ಟು ಬಾರಿ ನಮ್ಮನ್ನು ನಾವು ಈ ಪ್ರಪಂಚದ ಬಂಧನದಿಂದ ಬಿಡಿಸಿಕೊಂಡಿದ್ದೇವೆ ಅಂದು ಕೊಂಡರೂ, ಪುನಃ ನಮಗೇ ಗೊತ್ತಿಲ್ಲದಂತೆ ಸಿಲುಕಿಕೊಂಡಿರುತ್ತೇವೆ..ಅದಕ್ಕೇ ಆಯಸ್ಸು ಎನ್ನುವುದು..ಕರ್ಮ ಬೇಡ ಎಂದರೆ ಹೋಗುವರು.. ಆಯಸ್ಸು ದಾನ ಮಾಡಿದಾಗ ದಾನದ ಜೊತೆಗೆ ಕರ್ಮವನ್ನೂ ಪಡೆದುಕೊಳ್ಳಬೇಕಾಗುತ್ತದೆ.. ಕರ್ಮ ಖಾಲಿಯಾದಾಗ ಮಾನವ ಇಲ್ಲಿಂದ ಖಾಲಿ ಆಗಬೇಕಾಗುತ್ತದೆ..ಅದಕ್ಕೇ ಯಾರದ್ದಾದರೂ, ವಯಸ್ಸಾದವರ  ಕೂರಿಸಿ ಆಯಸ್ಸು ಅದರ ಜೊತೆಗೆ ಕರ್ಮವನ್ನೂ ಕೂಡಾ ದಾನ ಮಾಡುವಂತೆ ಕ್ರಿಯೆಯನ್ನು ಮಾಡಲಾಗುತ್ತದೆ... ಆಯಸ್ಸು ದಾನ, ದತ್ತು ಪಡೆವ ಕರ್ಮ ಇದಾವುದನ್ನೂ ನಂಬದವರು ಕರ್ಮ ಖಾಲಿ ಆಗಿದ್ದರೆ, ಹೋಗಿ ಬಿಡುತ್ತಾರೆ...ನಾವು ಇಲ್ಲಿ ಉಳಿದು ಕೆಲಸ ಮಾಡಬೇಕಿದ್ದರೆ, ಇನ್ನಾರದ್ದೋ ಕರ್ಮವ ಪಡೆದಾದರೂ ಉಳಿದುಕೊಳ್ಳಬೇಕಾಗುತ್ತದೆ... ನನಗೆ ಕರ್ಮ ಬೇಡ.. ಆಯಸ್ಸು ಮಾತ್ರ ಬೇಕು ಅನ್ನುವಂತಿದ್ದರೆ, ದಾನವಾಗಿ ಕರ್ಮ ಕೆಲಸ ಮಾಡದು.. ಅದಕ್ಕೆ ಪಡೆಯುವ, ಅಥವಾ ಕೊಡುವ ದಾನದ ಬಗೆಗೂ ನಂಬಿಕೆ ಬೇಕಾಗುತ್ತದೆ.. ಕರ್ಮವನ್ನೂ ಕೂಡಾ ಕೊಂಡಕೊಳ್ಳಲು ಆಗುತ್ತದೆ..ಈ ಪ್ರಕ್ರಿಯೆಗಳು ಇರುವ ಕಾರಣವೇ ಮನುಷ್ಯ ಸಂಬಂಧಗಳು ಕರ್ಮದ ಮುಖಾಂತರ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ..
 ಮಾನವನ ಆಯಸ್ಸು ಕಡಿಮೆ ಇದ್ದರೆ ಕರ್ಮಗಳು ಬಲವಾಗಿ ಮಾಡಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ... ಹಾಗಾಗಿ ನಾವು ಕೆಲವೊಂದು ಕರ್ಮವನ್ನು ಮಾಡಲೇ ಬೇಕಾಗುತ್ತದೆ.. ಯಾಕೆಂದರೆ ಪ್ರತಿಫಲದ ಕೊಡವೇ ನಮ್ಮ ಕರ್ಮ..

-ಶ್ರೀಮತಿ ಶಾಂತಾ ಕುಂಟಿನಿ

................................
ಅಡಿಕೆ ಗುಂಡಿ,  ಪಿಲ್ಲರ್ ಹೊಂಡ, 
ಪೈಪ್ ಲೈನ್, ಇಂಗು ಗುಂಡಿ, 
ಮನೆಯ ಪಾಯ, 
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ 
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ 
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

    ಮೊನ್ನೆ ಅಲ್ಲಿ ಕಡಬದಲ್ಲಿ ಎಲ್ಲೋ ರಾಜಾರೋಷವಾಗಿ ಕೊರ್ದ ಕಟ್ಟ ನಡೆದಿದೆಯಂತೆ ಮತ್ತು ದಿನಾ ಬೇರೆ ಬೇರೆ ಊರುಗಳಲ್ಲಿ, ಬೇರೆ ಬೇರೆ ಭೂತ ಗಳಿಗೆ ದೂರು ಹಾಕಿ ಕೋಳಿ ಕಟ್ಟ ನಡೆಯುತ್ತಲೇ ಇದೆಯಂತೆ. ಈ ಬಗ್ಗೆ ಕಡಬದ NEWS UPDATES ವೆಬ್ ಸೈಟ್ ವರದಿ ಪ್ರಕಟಿಸಿ ಕಡಬ ಪೋಲಿಸರು ಕಾಸು ತಗೊಂಡು ಕೋಳಿ ಕಟ್ಟಕ್ಕೆ ಪರ್ಮಿಶನ್ ಕೊಡುತ್ತಿದ್ದಾರೆ ಎಂದೂ ಅಂಡರ್ ಲೈನ್ ಹಾಕಿ ವೈರಲ್ ಮಾಡಿತ್ತು. ಕಡಬ ಪೋಲಿಸರಿಗೆ ಕೋಪವೋ ಕೋಪ! ಇಡೀ ವೆಬ್ ಸೈಟನ್ನು ಅದರ ಸಂಪಾದಕರ ಸಮೇತ ತಿಂದು ಬಿಡುವಷ್ಟು ಕೋಪ. ಎಂಥ ಮಾಡುವುದು, ಎಂಥ ಮಾಡುವುದು ಎಂದು ಶತಪಥ ಹಾಕಿದ ಕಾ.ಸು ಪೋಲಿಸರು ಕಡೇಗೇ ವೆಬ್ ಸೈಟ್ ಸಂಪಾದಕ ಗಣೇಶ್ ಇಡಾಲರಿಗೆ ಒಂದು ಕೆಂಪು ಕೆಂಪು ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್ ತಲುಪಿದ ಇಂತಿಷ್ಟು ದಿನಗಳಲ್ಲಿ ಪೋಲಿಸರು ಕಾಸು  ತಗೊಂಡು ಕೋಳಿ ಕಟ್ಟಕ್ಕೆ ಪರ್ಮಿಶನ್ ಕೊಡುತ್ತಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳನ್ನು ಕಾ.ಸು ಉಪನಿರೀಕ್ಷಕರ ಮುಂದೆ ಪ್ರೊಡ್ಯೂಸ್ ಮಾಡಬೇಕು ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸಲ್ಲಿ ಎಚ್ಚರಿಕೆ ಕೊಡಲಾಗಿತ್ತು.

  ಅಲ್ಲ ಮಾರಾಯ್ರೆ, ಗ್ರೌಂಡ್ ತುಂಬಾ ಶಾಮಿಯಾನ, ಅದರ ಮೇಲೆ ತಗಡ್ ಶೀಟ್, ಕೂರಲು ಪ್ಲಾಸ್ಟಿಕ್ ಚೇರ್ ಗಳು, ಹೋದವರಿಗೆಲ್ಲ ನೂರು ರೂಪಾಯಿ, ಇನ್ನೂರು ರೂಪಾಯಿಗಳ ಪ್ರಿಂಟೆಡ್ ಟಿಕೆಟ್, ಅಲ್ಲೇ ಮಟನ್, ಚಿಕನ್ ಹೋಟೆಲ್, ಬೀಡಾ ಬೀಡಿ, ಮಾರುತಿ. ಕುಟು ಕುಟು, ಮೈಕದಲ್ಲಿ ವೀಕ್ಷಕ ವಿವರಣೆ, ಕಿಲೋ ಮೀಟರ್ ದೂರದ ತನಕ ಟ್ರಾಫಿಕ್, ಕೋಳಿ ಕಟ್ಟ ಗ್ರೂಪಿನಲ್ಲಿ ಅಬ್ಬರದ ಪ್ರಚಾರ, ಲಕ್ಷಾಂತರ ಕಾಸಿನ ವ್ಯವಹಾರ. ಕಾನೂನು, ಸುವ್ಯವಸ್ಥೆ ಅಲ್ಲೇ ಮೇಲೆ ಗಾಳಿಯಲ್ಲಿ ಹಾರಾಡುವುದು, ಜಾತ್ರೆಯಂತೆ, ದೊಡ್ಡ ತಲೆ ಪಟ್ಟದ ಭೂತದ ನೇಮದಂತೆ, ಮಂತ್ರಿ ಸತ್ತಂತೆ. ಇದು ಈ ಕಾಲದ, ಈಗ ನಡೆಯುತ್ತಿರುವ ಹೈಟೆಕ್ ಕೋಳಿಕಟ್ಟಗಳ ವ್ಯವಸ್ಥೆ. ಇಂತ ಗೌಜಿ ತಮ್ಮ ಸರಹದ್ದಿನಲ್ಲಿ ನಡೆದರೆ ಪೋಲಿಸರಿಗೆ ಗೊತ್ತಾಗಲ್ವಾ? ಒಬ್ಬ ಕಳ್ಳ ಸೈಲೆಂಟಾಗಿ ಸೈಡಲ್ಲಿ ಊಸು ಬಿಟ್ಟರೂ ಅದು ಗೊತ್ತಾಗಿ ರಪಕ್ಕನೆ ಅಲರ್ಟ್ ಆಗುವ ಪೋಲಿಸರಿಗೆ ಇಷ್ಟೆಲ್ಲಾ ಗಾಂಡ್ ಗೌಜಿಯಲ್ಲಿ ಕೋಳಿ ಕಟ್ಟ ನಡೆದರೆ ಅದು ಯಾಕೆ ಗೊತ್ತಾಗಲ್ಲ? ಯಾಕೆ ಕಟ್ಟದ ಮೇಲೆ ರೈಡ್ ಬೀಳಲ್ಲ? ಕಟ್ಟ ನಡೆಯದಂತೆ ಯಾಕೆ ತಡೆಯಲ್ಲ? ಬೀಟ್ ಪೋಲಿಸರಿಗೆ ಯಾಕೆ ಲೋಕಲ್ ಮಾಹಿತಿದಾರ ಮಾಹಿತಿ ಕೊಡಲ್ಲ? ಇದನ್ನೇ NEWS UPDATES ಗಣೇಶ್ ಬರೆದಿದ್ದು. ಅದಕ್ಕೆ ನೋಟಿಸ್.

  ಹಾಗೆಂದು ಪೋಲಿಸರು ಕಾಸು ಮುಟ್ಟಲ್ಲ ಎಂದು ಬರೆದರೆ ಅದು ಈ ಜಗತ್ತಿನ ಅತೀ ದೊಡ್ಡ ಸುಳ್ಳಾಗುತ್ತದೆ. ಪೋಲಿಸರೂ ತಗೊಳ್ತಾರೆ, ಎಲ್ಲರೂ ತಗೊಳ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಹೀಗೆ ಯಾವ ಅಂಗವೂ ಇವತ್ತು ಶುದ್ಧ ಹಸ್ತದಲ್ಲಿ ಇಲ್ಲ. ಯಾರೂ ಕ್ಲೀನ್ ಇಲ್ಲ ಅಂದ ಮೇಲೆ ಪೋಲಿಸರು ಮಾತ್ರ ಕ್ಲೀನ್ ಇರಬೇಕು ಅನ್ನೋದು ಸರಿ ಅಲ್ಲ. ಪಾಪ ಪೋಲಿಸರೂ ಕಾಸು ತಗೊಂಡ್ರೆ ಇರ್ಲಿ. ಸಾಮಾನಿಗೆ,ಇಡೆಪುಡೆ ಖರ್ಚಿಗೆ, ಕಂತು ಕಟ್ಲಿಕ್ಕೆ, ಅದಕ್ಕೆ ಇದಕ್ಕೆ ಅಂತ ಅವರಿಗೂ ಕಾಸು ಬೇಕಾಗುತ್ತದೆ. ಆದರೆ ತಾವು ಮಾಡಿದ ವ್ಯವಹಾರಗಳ ಬಗ್ಗೆ ಬೇರೆ ಯಾರೂ ಸಾ..ಸೂ.. ಅನ್ನಬಾರದು ಎಂಬ ಮನಸ್ಥಿತಿ ಮಾತ್ರ ಅವರಲ್ಲಿ ಇರಬಾರದು.

ಈಗ ಕಡಬದಲ್ಲಿ ಕೋಳಿಕಟ್ಟದವರಿಂದ‌ ಕಾ.ಸು ಪೋಲಿಸರು ಕಾಸು ತಗೊಂಡು ಪರ್ಮಿಶನ್ ಕೊಟ್ಟಿದ್ದಾರೆ ಎಂದು NEWS UPDATES ಗಣೇಶ್ ತನ್ನ ಸೈಟಲ್ಲಿ ಬರೆದರೆ ಅದಕ್ಕೆ ಯಾವ ಪುರುಷಾರ್ಥಕ್ಕೆ ಕಾ.ಸು ಎಸ್ಸೈ ನೋಟಿಸ್ ಕೊಟ್ಟಿದ್ದಾರೆಂದೇ ಅರ್ಥವಾಗುತ್ತಿಲ್ಲ. ಕಾ.ಸು ಪೋಲಿಸರಿಗೆ ಕಾಸು ಬಾರದೆ ಅಷ್ಟು ಗೌಜಿಯಲ್ಲಿ ಕೋಳಿ ಕಟ್ಟ ನಡೆಸಲು ಅದೇನು ಹುಚ್ಚು ಮುಂಡೆ ಮದುವೆಯಲ್ಲ. ಇಷ್ಟಕ್ಕೂ ಕಾ.ಸು ಪೋಲಿಸರು ಕಾಸು ತಗೊಂಡ ಬಗ್ಗೆ ಗಣೇಶ್ ನಲ್ಲಿ ಸಾಕ್ಷಾಧಾರಗಳನ್ನು ಕೇಳಲಾಗಿದೆ. ಕಾಸು ತಗೊಳ್ಳುವಾಗ ಯಾರೇ ಆಗಲಿ ಫೋನ್ ಪೇ, ಗೂಗಲ್ ಪೇ, ವಿಡಿಯೋ ಶೂಟಿಂಗ್, ಸಿ.ಸಿ ಶೂಟಿಂಗ್, ಚೆಕ್, ಡಿ.ಡಿ, ಅಫಿದಾವಿತ್, ಪ್ರೂನೋಟ್, ಸ್ಟೇಂಪ್ ಪೇಪರ್ ಮುಂತಾದ ಅಪಾಯಕಾರಿ ಸಿವಿಲ್ ಕಿಲ್ಲರ್ ಗಳ ಮೂಲಕ ಕಿಸೆಗೆ ಹಾಕಿ ಕೊಳ್ಳಲ್ಲ. ಎಲ್ಲೋ ಸಿ.ಸಿ ಇಲ್ಲದ ಕಡೆಗಳಲ್ಲಿ, ಮರದಡ್ಡದಲ್ಲಿ, ಟಾಯ್ಲೆಟ್ ಬರಿಗಳಲ್ಲಿ, ಯಾರದೋ ಅಂಗಡಿ ಮೂಲಕ ಕಾಸು ಬರುತ್ತದೆ. ಸಾಕ್ಷಾಧಾರ ಕೊಡಿ ಅಂದ್ರೆ ಅದನ್ನು ಕಾ.ಸು ಪೋಲಿಸರಿಗೆ ಒಪ್ಪಿಸಲೇ ಬೇಕೆಂದಿಲ್ಲ. ನೋಟಿಸ್ ಕೊಟ್ಟು ಬರದಿದ್ದರೆ ಮುಂದಿನ ಕ್ರಮ ಅಂತ ಎಚ್ಚರಿಕೆ ನೀಡಿದ್ದಾರೆ. ಅದು ಏನು ಕ್ರಮ ಅಂತ ಅವರಿಗೇ ಗೊತ್ತು. ಕಡಬ ಪೋಲಿಸರು ಅಷ್ಟೆಲ್ಲ ಜೋರಿದ್ದಾರ?
ಹಾಗೆಂದು ಪತ್ರಿಕೆಗಳು, ಚಾನೆಲ್ ಗಳು, ವೆಬ್ ಸೈಟ್ ಗಳು ಅವುಗಳ ಕೆಲಸ ಅವು ಮಾಡುತ್ತಾ ಇರುತ್ತವೆ. ಪೋಲಿಸರೂ ಅವರ ಕೆಲಸ ಅವರು ಮಾಡಿದ್ರೆ ಒಳ್ಳೆದು. ಈಗ ನೋಟಿಸ್ ಕೊಟ್ಟು ಒಬ್ಬರನ್ನು ಹೆದರಿಸಿದರೆ (ಹೆದರಲ್ಲ) ಇನ್ನೊಬ್ಬ ಇನ್ನೊಂದು ಕತೆ ಬರೆಯುತ್ತಾನೆ. ಮತ್ತೆ ಎಲ್ಲರೂ ಸಾಲಾಗಿ ಕುಂತು ಕತೆ,ಕವನ ಬರೆಯುತ್ತಾರೆ. ಆಮೇಲೆ ಚಾನೆಲ್ ನವರು ಧಾರಾವಾಹಿ ಶುರು ಮಾಡುತ್ತಾರೆ. ಕತೆ ಕೈಲಾಸ ಆಗುತ್ತದೆ. ಹಾಗೆ ಎಲ್ಲರಿಗೂ ನೋಟಿಸ್ ಕೊಡಲು ಆಗಲ್ಲ. ಪತ್ರಕರ್ತರನ್ನು ಮತ್ತು ಕೋಳಿ ಕಟ್ಟದವರನ್ನು ಒಂದೇ ತಟ್ಟೆಯಲ್ಲಿ ಇಟ್ಟು ತೂಗಕ್ಕಾಗಲ್ಲ. ಇಲ್ಲಿ ಏನಾಗಿದೆ ಅಂದರೆ ಕೋಳಿ ಕಟ್ಟದ ಬಗ್ಗೆ ಬರೆದ ಪತ್ರಕರ್ತರಿಗೆ ನೋಟಿಸ್ ಕೊಡಲಾಗಿದೆ, ಕಾನೂನು ಬಾಹಿರವಾಗಿ ಕೋಳಿ ಕಟ್ಟ ನಡೆಸಿದವರಿಗೆ ಯಾವುದೇ ನೋಟಿಸ್ ಹೋಗಿಲ್ಲ. ನೋಟು ಬಂದ ಕಾರಣ ನೋಟಿಸ್ ಹೋಗಿಲ್ವಾ ಅಥವಾ ಅಡ್ರೆಸ್ ಬರೆದಿದ್ದು ಮಿಸ್ಟೇಕ್ ಆಗಿದ್ಯಾ? ಪರಾಂಬರಿಸಿ ನೋಡುವುದು ಒಳ್ಳೆಯದು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................

....................................................

ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ :-

  ಹೌದು... ಈಗಿನ ದಿನಗಳಲ್ಲಿ ಪತ್ರಿಕೆಯ ಪುಟ ತೆರೆದರೆ ಸಾಕು, ಯುವ ಸಮುದಾಯದವರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸುದ್ದಿಗಳು ಬಿತ್ತರಗೊಂಡಿರುತ್ತವೆ. ಆಟ -ಪಾಠಗಳಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಬೇಕಾಗಿರುವ ದೇಶದ ನಾಳಿನ ಪ್ರಜೆಗಳೇ ಇಂದು ಕಂಬಿ ಹಿಂದೆ ಬಂಧಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಇಲ್ಲಿ ನಾವು ಚಿಂತಿಸಬೇಕಾಗಿರುವುದೊಂದೇ, ಯಾಕಿನ್ನೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು.... ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ.ಎಳವೆಯಲ್ಲೇ ಮಕ್ಕಳನ್ನು ಅತಿಯಾಗಿ ಮುದ್ದಿಸಿರುವ ಕಾರಣದಿಂದಲೋ ಅಥವಾ ಸರಿಯಾದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ದಂಡಿಸದಿರುವುದರಿಂದಲೋ ಮುಂದೊಂದು ದಿನ ದುರಂತವೊಂದಕ್ಕೆ ಸಾಕ್ಷಿಯಾಗುತ್ತದೆ.ಇಂದಿನ ಕೆಲ ಪೋಷಕರು ತಮ್ಮ - ತಮ್ಮ ಕೆಲಸಗಳಲ್ಲಿ ಕಳೆದುಹೋಗುತ್ತಿದ್ದಾರೆ, ಮಕ್ಕಳ ಕುರಿತಾಗಿ ಸೂಕ್ಷ್ಮ ಗಮನಹರಿಸುವಲ್ಲಿ ಸೋತುಹೋಗುತ್ತಿದ್ದಾರೆ.ಇಂದು ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳಿಂದಾಗಿ ನಮಗಾಗೇ ಸಮಯ ಮೀಸಲಿಡಲಾಗದ ಪರಿಸ್ಥಿತಿಗೆ ಬಂದುಬಿಟ್ಟಿರುವ ನಾವು, ಇನ್ನಾದರೂ ಮಕ್ಕಳ ಕುರಿತಾಗಿ ಮುತುವರ್ಜಿವಹಿಸಬೇಕಿದೆ. ತಮ್ಮ ಮಕ್ಕಳಿಗೆ ದೇಶಭಕ್ತಿ, ದೇಶಪ್ರೇಮ ಮೂಡಿಸಲು ಶ್ರಮಿಸಬೇಕು; ಅನಾದಿ ಕಾಲದಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿಯನ್ನು ಅವರಿಗೆ ಅರ್ಥ ಮಾಡಿಸಬೇಕು. ಪವಿತ್ರ ಗ್ರಂಥಗಳನ್ನು ಓದಿ ಅದರ ಮಾರ್ಗದಂತೆ ಮುನ್ನಡೆಯಲು ಪ್ರೇರೇಪಿಸಬೇಕು.ಇಂದಿನ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕಕ್ಕಿಂತ, ಮೊಬೈಲ್ ಕಲಿಕಾ ಸಾಧನವಾದಂತಾಗಿದೆ. ಅವರ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಅವರ ಜೊತೆಯಲ್ಲಿ ಕುಳಿತು ಓದಲು ಬರೆಯಲು ಸಹಕರಿಸುತ್ತಾ, ಅವರ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಇತರ ಅನಗತ್ಯ ವಿಷಯಗಳತ್ತ ವಾಲದಂತೆ, ಮುಂದೊಂದು ದಿನ ಅಪಾಯಕ್ಕೆ ಆಸ್ಪದ ನೀಡದಂತೆ ಪೋಷಕರಾದ ನಾವೇ ಜಾಗ್ರತೆವಹಿಸಬೇಕು. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ನಾಳೆಯ ದಿನ ದೇಶಕ್ಕೆ ನಾವು ಸಂಸ್ಕಾರಯುತ ಪ್ರಜೆಯನ್ನು ಪರಿಚಯಿಸಬೇಕಿದೆ.
ಪೋಷಕರಾದ ನಾವುಗಳು; ಮಕ್ಕಳ ವಯಸ್ಸಿಗೆ,ಅವರ ಅಭಿರುಚಿಗೆ ತಕ್ಕಂತೆ ನೀತಿಕಥೆಗಳನ್ನೂ ನಮ್ಮ ನೆಲದ ಸಂಸ್ಕೃತಿಯನ್ನೂ ಅವರಿಗೆ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡೋಣ., ಜೀವನವೆಂಬ ಮಹಾನ್ ಸಾಗರದಲ್ಲಿ ಸಂಸ್ಕಾರವಂತರಾಗಿ ಬಾಳ್ವೆ ನಡೆಸಲು ನಾವು ಅಡಿಪಾಯಗಳಾಗೋಣ...
-ಶ್ರೀಮತಿ ಜನಶ್ರೀ ಹರೀಶ್, ಸುಳ್ಯ

................................
ಅಡಿಕೆ ಗುಂಡಿ,  ಪಿಲ್ಲರ್ ಹೊಂಡ, 
ಪೈಪ್ ಲೈನ್, ಇಂಗು ಗುಂಡಿ, 
ಮನೆಯ ಪಾಯ, 
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ 
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ 
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

    ಮೊನ್ನೆ ತಾನೇ ಕಡಬ-ಪಂಜ ರೋಡಿನ ಪುಳಿಕುಕ್ಕು ಎಂಬಲ್ಲಿ ಪರ್ಬದ ಪ್ರಯುಕ್ತ ಭೂತಗಳ ಅಗೆಲಿಗೆ  ಸ್ಕೂಟರ್ ನಲ್ಲಿ ಕೋಳಿ ತರುತ್ತಿದ್ದ ಎಡಮಂಗಲ C.A Bank ಪಿಗ್ಮಿ ಕಲೆಕ್ಟರ್ ಶ್ರೀ ಸೀತಾರಾಮ ಗೌಡ ಎಂಬವರ ಮೇಲೆ ರೋಡ್ ಸೈಡಿನ ದೂಪದ ಮರ ಬಿದ್ದು ಅವರು ಸ್ಪಾಟ್ ಡೆತ್ ಆಗಿದ್ದರು. ಈ ಅಮಾಯಕನ ಸಾವಿಗೆ ಯಾರನ್ನು ಹೊಣೆ ಮಾಡಲಿ ಮಾರಾಯ್ರೆ? ಗೌಡರು ಕೋಳಿ ತರಲು ಹೋದದ್ದೇ ತಪ್ಪಾ? ಆ ರೋಡಲ್ಲಿ ಹೋದದ್ದು ತಪ್ಪಾ? ಸ್ಕೂಟರಲ್ಲಿ ಹೋದದ್ದು ತಪ್ಪಾ? ಭೂತಗಳು ಅಗೆಲು ಕೇಳಿದ್ದು ತಪ್ಪಾ? ಸ್ಕೂಟರಲ್ಲಿ ಕೋಳಿ ತಂದಿದ್ದು ತಪ್ಪಾ? ಮರ ಬೀಳುವ ಟೈಮಿಗೆ ಗೌಡರು ಅದರ ಅಡಿಯಲ್ಲಿ ಪಾಸಾದದ್ದು ತಪ್ಪಾ? ಈ ಒಂದು ಘಟನೆಗೆ ನಮ್ಮನ್ನು ನಾವೇ ಹೊಣೆಗಾರರನ್ನಾಗಿ ಮಾಡಬೇಕಷ್ಟೆ. ಬೇರೆ ಯಾರೂ ಒಪ್ಪಿಕೊಳ್ಳುವುದಿಲ್ಲ, ಒಪ್ಪಿಕೊಂಡು ತಿದ್ದಿಕೊಳ್ಳುವುದೂ ಇಲ್ಲ.

  ಹಾಗೆಂದು ಆ ಅರಣ್ಯ ಇಲಾಖೆ ಮತ್ತು ಕರೆಂಟ್ ಇಲಾಖೆಗಳಿಗೆ ರೋಡ್ ಸೈಡಲ್ಲೇ ಕೆಲಸ ಮಾರಾಯ್ರೆ. ಅವರು ಕಿಲ್ಲರ್ ಮರ ನೆಡುವುದು, ಇವರು ಶಾಕಿಂಗ್ ಕಂಬ ಹಾಕೋದು. ಎರಡೂ ನರಮಾನಿಗೆ ಟಿಕೆಟ್ ಕೊಡುವಂತದ್ದೆ. ಸಾಮ್ರಾಟ ಅಸೋಕ ರೋಡ್ ಸೈಡಲ್ಲಿ ಮರ ನೆಟ್ಟ ಅಂತ ನಾವೂ ಅವನ ಕಾಪಿಕ್ಯಾಟ್ ಆದರೆ ಇದೇ ಕತೆ ಆಗೋದು. ಇಲ್ಲದಿದ್ದರೆ ಆ ದೂಪದ ಮರಗಳನ್ನು ತಂದು ಯಾಕೆ ಮಾರಾಯ್ರೆ ರೋಡ್ ಸೈಡಲ್ಲಿ ತಂದು ನೆಟ್ಟಿದ್ದು? ಅಲ್ಲಿ ಬಂಟ ಮಲೆಯಲ್ಲೋ, ಕಳೆಂಜಿ ಮಲೆಯಲ್ಲೋ ಕೊಂಡೋಗಿ ನೆಟ್ಟು ಬರಲಿ. ಹಾಲು ಮಡ್ಡಿ ಕಳ್ಳರು ಎಲ್ಲಿಗೆ ಬೇಕಾದರೂ ಹೋಗುತ್ತಾರೆ.

ಹಾಗೆ ರೋಡ್ ಸೈಡಿನ ಮರಗಳು ಬೀಳಲು ಪ್ರಮುಖ ಕಾರಣ ಹಾಲು ಮಡ್ಡಿ ಕಳ್ಳರು ಮತ್ತು ಅರಣ್ಯ ಇಲಾಖೆ. ಅರಣ್ಯ ಇಲಾಖೆಯ ದಾಕ್ಷಿಣ್ಯವನ್ನು ದುರುಪಯೋಗ ಪಡಿಸಿಕೊಂಡು ಹಾಲು ಮಡ್ಡಿ ಕಳ್ಳರು ವರ್ಷವಿಡೀ ಮಡ್ಡಿ ತೆಗೆಯುವ ಕಾರಣ ಮರಗಳು ವೀಕ್ ಆಗಿ, ನಿಲ್ಲಲು ತ್ರಾಣವಿಲ್ಲದೆ ಯಾವನೋ ನತದೃಷ್ಟನ ಮೇಲೆ ಬಿದ್ದು ಬಿಡುತ್ತದೆ. ಮಾಮೂಲಿಯಾಗಿ ಅರಣ್ಯ ಇಲಾಖೆ ಡಿಸೆಂಬರ್ ತಿಂಗಳಲ್ಲಿ ಮಡ್ಡಿ ತೆಗೆಯಲು ಏಲಂ ಕೂಗುತ್ತದೆ. ಆರು ತಿಂಗಳು ಟೈಮ್. ಜೂನ್ ಒಳಗೆ ಏಲಂ ನಿಂತವನು ಮಡ್ಡಿ ತೆಗೆದು ಕಾಡು ಖಾಲಿ ಮಾಡಬೇಕು ಮತ್ತು ಕಾಡಿನಿಂದ ಜಾಗ ಖಾಲಿ ಮಾಡಬೇಕು. ಇದು ಅರಣ್ಯ ಇಲಾಖೆ ಕಂಡೀಷನ್. ಆದರೆ ಏಲಂ ನಿಂತವನು ಏನು ಮಾಡುತ್ತಾನೆಂದರೆ ಜೂನ್ ತನಕ ಭಾರೀ ಸೊಬಗನಂತೆ ಮಡ್ಡಿ ತೆಗೆದರೆ ಮರ್ಯಲ ಶುರುವಾಗಿ ಏಲಂ ಅವಧಿ ಮುಗಿದ ನಂತರ ಮೆಲ್ಲಗೆ ಮೆಲ್ಲಗೆ, ಮಸ್ಕ್ ಮಸ್ಕ್ ಆಗಿ ಮರ ಕೆತ್ತನೆ ಶುರು ಮಾಡುತ್ತಾನೆ. ಇದು ಇಡೀ ವರ್ಷ ನಡೆಯುತ್ತದೆ. ಹಾಗೆಂದು ದೂಪದ ಮರ ಕೆತ್ತಲು ಕೂಡ ಹೀಗೆ ಅಂತ ಒಂದು ಕಂಡೀಷನ್ ಇದೆ. ಆದರೆ ಈ ಕಳ್ಳಕಾಕರು ಒಟ್ಟಾರೆ ಕೆತ್ತಿ ಮರಗಳ ಸಾವಿಗೆ ಕಾರಣಕರ್ತರಾಗುತ್ತಿದ್ದಾರೆ. ಆ ರಕ್ಷಿತಾರಣ್ಯಗಳಲ್ಲಿ ಮಡ್ಡಿ ಕೆತ್ತಿ ಕೆತ್ತಿ ದೂಪದ ಮರಗಳು ಖಾಲಿಯಾಗುತ್ತಿದೆ.  ಯಾಕೆ ಆ ಕಳ್ಳಕಾಕರ ಜೊತೆ ಕೈಜೋಡಿಸುತ್ತೀರಿ ಎಂದು ಬರೆದರೆ ಅರಣ್ಯ ಇಲಾಖೆಯ "ದೊಡ್ಡವರಿಗೆ" ನನ್ನ ಮೇಲೆ ಕೆಂಡದಂತಹ ಕೋಪ ಬಂದು ಬಿಡುತ್ತದೆ. ಅವರದ್ದೊಂದು ಕ್ಷಮೆ ನನ್ನ ಮೇಲಿರಲಿ.
ವಿಶೇಷ ಆಕರ್ಷಣೆ: ಅಲ್ಲಿ ಪಂಜದ ಮಾಜೀ ರೇಂಜೆರ್ ಗಿರೀಶೆರ್ ಪಂಜರದಿಂದ ವರ್ಗಾವಣೆ ಆಗಿ ನಾಲಕ್ಕು ತಿಂಗಳಾದರೂ ಇನ್ನೂ ಈಗೀನ  ರೇಂಜೆರ್ ಸಂಧ್ಯಾ ಮ್ಯಾಮ್ ಗೆ ಕ್ವಾರ್ಟರ್ಸ್ ಬಿಟ್ಟು ಕೊಟ್ಟಿಲ್ಲವಂತೆ. ಅವರು ಪಾಪ ಡೈಲಿ ಉಪ್ಪಿನಂಗಡಿಯಿಂದ ಪಂಜಕ್ಕೆ ಅಪ್ಪ್ & ಡೌನ್. ಪಂಜ ಕ್ವಾರ್ಟರ್ಸ್ ಎಂತ ಗಿರೀಶ್ ರೇಂಜೆರ್ ಆದಿ ಮನೆಯಾ?
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................

....................................................

ಸವಿಜೇನು ಬಾಳು ನೀನು 
   ನಾ ಎಲ್ಲೇ ಹೊರಹೋದರೂ ಬಂದು ಸೇರುವುದು ಮಾತ್ರ ನಿನ್ನ ಪ್ರೀತಿಯ ಗೂಡನ್ನು.

ಇದನ್ನರಿತರೂ ನೀ ಹಾರಲು ಬಿಡದಿದ್ದರೆನ್ನ ಏನಾಗುವುದು 
ಒಳಿತು ಕೆಡುಕುಗಳ ಅರಿಯುವುದು ಹೇಗಿನ್ನು ?

ಹಕ್ಕಿ ಹಾರಿದರೂ ಅದು ಕಾಳಿಗಷ್ಟೇ ಅನ್ನುವ ತಾತ್ಪರ್ಯ ಕಾಣು ನೀ ತೊರೆಯಬೇಡ ನನ್ನನ್ನು.

ಸವಿಯಲೇ ಇಹುದು ಈ ಸೃಷ್ಟಿ ಸೌಂದರ್ಯ,ಕುರುಡಾಗದಿರು
ಅಂತ್ಯ ಹಾಡದೆಂದೆಂದು ಒಳಿತಲ್ಲವಿದು ನಮಗಿನ್ನು.

ಇದ್ದಾಗಲಷ್ಟೇ ಮೋಹ ಬಾಂಧವ್ಯವಲ್ಲವದು ತಿರಸ್ಕಾರವೇಕೆ 
ನನ್ನ ನಿನ್ನೊಳು,ಒಲಿದು ಬಂದರೆ ಜಗವು ಸುಂದರವು ಇನ್ನು 

ಕಾಣುವ ಕಣ್ಣಿದ್ದರೆ ಸಾಕು, ಬೇರು ಬಿಡು ಎಲ್ಲರೊಳು ನಗೆ ತೋರಿ ಹಬ್ಬವಾಗು ನೀ ಮಂದಹಾಸವೆ ಬರಲಿಯಿನ್ನು.

ಸಂಶಯದ ಪಿಶಾಚಿಯನ್ನು ಮರೆ ಮಾಚು ನೀನಿನ್ನು ಕಂಡರೂ ಕಾಣದಂತಿರುವೆಲ್ಲ ಮೌನ ಏಕಿನ್ನೂ..

ಸೌರಭವ ಸೂಸುವುದು  ಮನಕೆ ಹರುಷವ ತರಲು 
ಸುಮ ಬೀರಿ ಕಂಪ ಹರಡಲು ಎಂಬುವುದ ತಿಳಿ ನೀನು.

ಪರಾಗಸ್ಪರ್ಶಕ್ಕೆ ಅರಳೀತು ಹೂವು ಅರಳದೆಯೆ ನಿಂತೀತೇ
ಭೂ ಸ್ಪರ್ಶವಾದ ನಿನ್ನ ಮನದ ಬಯಕೆಗಳ ಜೇನು.

ಸಾಕು ಸಾಕು ನೀನು ಹಾರುವುದರ ಬಿಡು ಇನ್ನು ಎಂದರದು 
ಹಾರದಿದ್ದರೆ, ಸುಮ್ಮನುಳಿಯುವುದೇ ಸಂಸಾರದ ಕಣ್ಣು.

-ಶ್ರೀಮತಿ ಶಾಂತಾ ಕುಂಟಿನಿ

................................
ಅಡಿಕೆ ಗುಂಡಿ,  ಪಿಲ್ಲರ್ ಹೊಂಡ, 
ಪೈಪ್ ಲೈನ್, ಇಂಗು ಗುಂಡಿ, 
ಮನೆಯ ಪಾಯ, 
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ 
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ 
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................

ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಚಿಂತನೆಯ ಹಿನ್ನಲೆಯಲ್ಲಿ
ದೈವಜ್ಞರಾದ ಶ್ರೀ ನಾರಾಯಣ ರಂಗಾ ಭಟ್ಮಧೂರು ಇವರಿಂದ ನ.13ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆ ನಡೆಯಲಿದೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರ ನೇತೃತ್ವದಲ್ಲಿ ದೈವಜ್ಞರಿಗೆ ತಾಂಬೂಲ ಪ್ರಶ್ನೆಯ ಹೇಳಿಕೆ ನೀಡಲಾಯಿತು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಸಂತೋಷ್ಕು ಮಾ‌ರ್ ರೈ ಬಳ್ಳಮಾಯಿಲಪ್ಪ ಗೌಡ ಎಣ್ಣೂರು ಹಾಗೂ ಕೇಶವ ಗೌಡ ಕುದ್ವ ಅವರು ಉಪಸ್ಥಿತರಿದ್ದರು.
................................................

ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget