ಹಾಗೆಂದು ಪುತ್ತೂರಿನಲ್ಲಿ ಇಲ್ಲಿ ತನಕ ಮದವೇರಿದ ಅಧಿಕಾರಿಗಳನ್ನು ಮೇಲೆ ಕೆಳಗೆ ಮಾಡುವ ಶಾಸಕರು ಬಂದಿರಲಿಲ್ಲ. ಗುಮಾಸ್ತನನ್ನೂ ಸರ್ ಎಂದು ಕರೆಯುವ ಶಾಸಕರೇ ಇಲ್ಲಿ ಆಗಿ ಹೋದದ್ದು. ಆದರೆ ಇದೀಗ ಶಾಸಕ ಅಶೋಕ್ ರೈ ಮದವೇರಿದ ಮದ್ದಾನೆಗಳಿಗೆ ಇಂಜೆಕ್ಷನ್ ಕೊಡುವ ಕೆಲಸ ಆರಂಭಿಸಿದ್ದಾರೆ. ಆದರೆ ಅವರೆಷ್ಟೇ ಇಂಜೆಕ್ಷನ್ ಕೊಟ್ಟರೂ ಪುತ್ತೂರು ಕಾಂಗ್ರೆಸಿನ ಕೆಲವು ಹಳೆ ತಲೆಮಾರುಗಳು ತಮ್ಮ ಹುಟ್ಟುಗುಣ ಬಿಟ್ಟಂತೆ ಕಾಣುತ್ತಿಲ್ಲ. ಬಕಾಸುರ ಲಂಚಬಾಕರಿಂದ ಅಗೆಲು ಸ್ವೀಕರಿಸಿ ಅವರನ್ನು ಪುತ್ತೂರಿನಲ್ಲೇ ಗೂಟ ಹಾಕಿಸಿ ಮೇಯಲು ಬಿಡುವ ಕೆಲಸ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಇಡೀ ಪುತ್ತೂರಿನ ಎಲ್ಲಾ ಕಚೇರಿಗಳಲ್ಲೂ ಬಕಾಸುರ ಲಂಚಬಾಕರ ಜಾತ್ರೆಯೇ ನಡೆಯಲಿದೆ.
ಹಾಗೆಂದು ಆ ಶಿಶು ಇಲಾಖೆಯಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿದ ಕಾಂಗ್ರೆಸ್ ನಾಯಕರು ಪ್ರಸಾದ ಸ್ವೀಕರಿಸಿ ತಮಗೆ ಬೇಕಾದ ಭೂತವನ್ನು ತಂದು ಸ್ಥಾಪನೆ ಮಾಡಿದ್ದಾರೆ. ಸಹಕಾರ ಇಲಾಖೆಯ ನಾನ್ ಕರಫ್ಟ್ ನಿಬಂಧಕರನ್ನು ಕಳಿಸಿ ಸೊಸೈಟಿ ನೇಮಕಾತಿಗಳಲ್ಲಿ ಲಕ್ಷ ಲಕ್ಷ ಲೂಟುವ ಜನವನ್ನು ತಂದು ಕಾಂಗ್ರೆಸಿಗರು ಸಹಕಾರ ಇಲಾಖೆಯಲ್ಲಿ ಇಟ್ಟು ಅಗೆಲು ಸ್ವೀಕರಿಸಿದ್ದಾರೆ. ಇನ್ನು ಪೋಲಿಸ್ ಇಲಾಖೆಯಲ್ಲೂ ಕೈಯಾಡಿಸಿರುವ ಕಾಂಗ್ರೇಸಿಗರು ಪರತ್ ಇನ್ಸ್ ಪೆಕ್ಟರನ್ನು ಅಷ್ಟು ತರಾತುರಿಯಲ್ಲಿ ಯಾಕೆ ಸೆಂಡ್ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತೆ ಆ ಡಿಪೋ ಮ್ಯಾನೇಜರ್ ಕೂಡ ಹೋದದ್ದು ದುಡ್ಡು ಕೊಟ್ಟವರು ಬಂದ ಮೇಲೆಯೇ.
ಪುತ್ತೂರಿನಲ್ಲಿ ಈಗ ಇರುವ ಅಲಿಖಿತ ನಿಯಮ ಏನೆಂದರೆ ಇಲ್ಲಿ ಮೇಯಲು ಅವಕಾಶ ಬೇಕಾದರೆ ಕಾಂಗ್ರೆಸಿನ ಪರತ್ ಮಂಡೆಗಳಿಗೆ ಬುಳೆ ಕಾಣಿಕೆ ಕೊಡಲೇ ಬೇಕಾದ ಅನಿವಾರ್ಯತೆ ಇದೆ. ತಾಲೂಕು ಪಂಚಾಯಿತಿಯ ಪೋಲಿಸ್ ಗೆಟಪ್ಪಿನ ಅಧಿಕಾರಿ ಪುತ್ತೂರಿಗೆ ಬಂದು ನೂರೈವತ್ತು ವರ್ಷ ಪೂರೈಸಿದಂತ ಅನುಭವ ಜನರಿಗಾದರೂ ಅವರನ್ನು ಟಚ್ ಮಾಡಲೂ ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ ಅಭಯ ಹಸ್ತ ಇವರ ಮೇಲಿದೆ. ಇನ್ನು ಆ ನಗರ ಸಭೆಯ ಪೊಣ್ಣು ಮರ್ಲ ಅಧಿಕಾರಿಯನ್ನು ಹೂವಿನ ಹಾಗೆ ನೋಡಿಕೊಳ್ಳಲಾಗುತ್ತಿದೆ. ಮತ್ತೆ ಆ ನರಕ ಸಭೆಯ ಅಯೋಗ್ಯ ಇನ್ಸ್ ಪೆಕ್ಟರ್ ಪುತ್ತೂರಿಗೆ ಬಂದು ಶತಮಾನಗಳೇ ಕಳೆದಿದೆ.
ಪುತ್ತೂರಿನಲ್ಲಿ ಈಗ ಇರುವ ಅಷ್ಟೂ ಇಲಾಖೆಗಳಲ್ಲಿ ಕರೆಂಟ್ ಇಲಾಖೆ ನಾತ ಎದ್ದು ಹೋಗಿದೆ. ದೊಡ್ಡ ಇಂಜಿನನ್ನು ಟ್ರಾನ್ಸ್ ಫರ್ ಮಾಡಿಸಿ ಆ ಪೋಸ್ಟಿಗೆ ಹಂಗಾಮಿಯಾಗಿ ಬಂದು ಹಂಗಾಮ ಎಬ್ಬಿಸಿರುವ ಚಿಕ್ಕ ಇಂಜಿನ್ ಕತೆ ರಾಮಾಯಣಕ್ಕಿಂತ ಸ್ವಲ್ಪ ಸಣ್ಣದು ಮಹಾಭಾರತಕ್ಕಿಂತ ಸ್ವಲ್ಪ ದೊಡ್ಡದು ಎಂಬಂತಿದೆ. ಹಲವು ಶತಮಾನಗಳಿಂದ ಪುತ್ತೂರು ಮೆಸ್ಕಾಂನಲ್ಲೇ ಕಂಬ ಪೆರೆಸಿ ಪೆರೆಸಿ ಕೊಬ್ಬಿರುವ ಚಿಕ್ಕ ಇಂಜಿನ್ ಕಾಂಗ್ರೆಸ್ ಸರ್ಕಾರ ಇರುವಷ್ಟು ಸಮಯ ಪುತ್ತೂರಿನಲ್ಲೇ ನೆಲೆಯಾಗುವಷ್ಟು ಕಾಂಗ್ರೆಸ್ ನಾಯಕರಿಗೆ ರಿಚಾರ್ಜ್ ಮಾಡಿದೆ ಎಂದು ತಿಳಿದುಬಂದಿದೆ.
ಹಾಗೆಂದು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಎಂಎಲ್ಎ ಬಂದ ಮೇಲೆ ಪುತ್ತೂರಿನಲ್ಲಿ ಟ್ರಾನ್ಸ್ ಫರ್ ದಂಧೆಯೊಂದರಲ್ಲೇ ಕಾಂಗ್ರೆಸ್ ಬಿಸಿನೆಸ್ ಮನ್ ಗಳು, ಕಾಂಗ್ರೆಸ್ ಬ್ರೋಕರ್ ಗಳು, ಕಾಂಗ್ರೆಸ್ ಬಡ್ಡಿ ವೀರರು ಗ್ಯಾಸ್ಟ್ರಿಕ್ ಶುರುವಾಗುವಷ್ಟು ದುಡ್ಡು ಮಾಡಿದ್ದಾರೆ. ಟ್ರಾನ್ಸ್ ಫರ್ ದಂಧೆಗೆಂದೇ ಕಾಂಗ್ರೆಸ್ಸಿನಲ್ಲಿ ಅವರದ್ದೇ ಆದ ಒಂದು ಟೀಮಿದೆ. ಈ ಟೀಮ್ ಶಾಸಕರ ಗಮನಕ್ಕೆ ಗೊತ್ತಾಗದಂತೆ ಅಪಗಪಗ ಬೆಂಗಳೂರು ಬಸ್ಸು ಹತ್ತಿ ಬೆಳಗಾಗುವಷ್ಟರಲ್ಲಿ ಕೆಲಸ ಮುಗಿಸಿ ಬರುತ್ತಾರೆ. ಈ ಕತೆ ಹೀಗೆ ಮುಂದುವರೆದರೆ ಐದು ವರ್ಷಗಳಲ್ಲಿ ಪುತ್ತೂರಿನ ಕಾಂಗ್ರೆಸ್ ಟ್ರಾನ್ಸ್ ಫರ್ ಟೀಮ್ ಮತ್ತು ಅವರು ಸ್ಥಾಪಿಸಿದ ಬಕಾಸುರ ಲಂಚಬಾಕರು ಪುತ್ತೂರನ್ನು ಗುಡಿಸಿ, ಸೆಗಣಿ ಸಾರಿಸಿ ಬಿಡುತ್ತಾರೆ. ಶಾಸಕರು ಟ್ರಾನ್ಸ್ ಫರ್ ಟೀಮನ್ನು ಸ್ವಲ್ಪ "ನೋಡಿಕೊಳ್ಳುವುದು" ಒಳ್ಳೆಯದು.
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment