ಓ ಮೊನ್ನೆ ಕಡಬದಿಂದ ಬರುವಾಗ ಯಾಕೋ ಬಾಯೆಲ್ಲ ಚಪ್ಪೆ ಚಪ್ಪೆ ಮಾರಾಯ್ರೆ. ದೊಂಡೆ ಪಸೆ ಆಜಿ ಹೋದಂತೆ, ಕೈಕಾಲಲ್ಲಿ ಗುಳಿಗ್ಗ ಹಿಡಿದವನಂತೆ ವೈಬ್ರೆಸನ್, ಕಣ್ಣು ಕತ್ತಲೆ ಹೋದಂತೆ ಆಯಿತು. ನೈಂಟಿ ಹಾಕದೆ ಸಾಧ್ಯವೇ ಇಲ್ಲ ಅಂತ ಎಡಮಂಗಲ ಗಡಂಗಿಗೆ ಹೋಗಿ ಒಂದು ಕ್ವಾಟ್ರು ಬಗ್ಗಿಸಿದೆ. ವೈಬ್ರೆಸನ್ ಗುಳಿಗ್ಗನಿಂದ ಕುಲೆಗೆ ಇಳಿಯಿತು. ಮತ್ತೆ ಒಂದು ಕ್ವಾಟ್ರು ಇಳಿಸಿ ಬಿಲ್ ನೋಡಿದರೆ ಇನ್ನೂರು ರೂಪಾಯಿ. ಎಂಚ ಎಂದು ಕೇಳಿದರೆ ಅಂಚನೆ ಎಂಬ ಉತ್ತರ. ಹೆದರಿಕೆ ಆಯಿತು. ಜಾಗ ಖಾಲಿ ಮಾಡಿದೆ.
ಅಲ್ಲಿ ಎಡಮಂಗಲ ಎಂಬ ಊರಿನಲ್ಲಿ ಕುಡುಕರ ಕಿಸೆಯಿಂದ ನೈಂಟಿಗೆ ಐದು, ಕ್ವಾಟ್ರಿಗೆ ಹತ್ತು ಎಂದು ಜಾಸ್ತಿ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಗಡಂಗಿನಲ್ಲಿ MRP ಗಿಂತ ವಿಥೌಟ್ ಕಡ್ಲೆ, ಚಕ್ಕುಲಿ ಜಾಸ್ತಿ ವಸೂಲಿ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ದೊಡ್ಡ ಕೇಸ್. ಆದರೆ ಎಡಮಂಗಲ ಗಡಂಗಿನಲ್ಲಿ ಅಮಾಯಕ ಕುಡುಕರಿಂದ ಐದತ್ತು ಜಾಸ್ತಿ ಕೀಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಕುಡುಕರಿಗೆ ಆರ್ಥಿಕ ಭಾರ ಜಾಸ್ತಿಯಾಗುತ್ತಿದ್ದು ಇದು ಎಡಮಂಗಲದ GDP ಮೇಲೆ ದೊಡ್ಡ ಪರಿಣಾಮ ಬೀರುವ ಅಪಾಯಗಳಿವೆ. ಈ ಬಗ್ಗೆ ಎಡಮಂಗಲ ಕುಡುಕರ ಒಕ್ಕೂಟ ನಿರ್ಣಯ ಅಂಗೀಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದು ಗಡಂಗಿನವರ ಪಿತ್ತಳೆ ಪಿದಾಯಿ ಬೀಳುವ ಸಾಧ್ಯತೆ ಇದೆ. ಅದರಲ್ಲೂ ಎಡಮಂಗಲ ಗಡಂಗಿನವರ ಇನ್ನೂ ಒಂದು ಸಿನಿಮಾ ಇದ್ದು ಶೂಟಿಂಗ್ ನಡೆಯುತ್ತಿದೆ. ಅದರ ರಿಲೀಸ್ ಡೇಟ್ ಕೂಡ ಶೀಘ್ರದಲ್ಲೇ ಇದೆ.
ಹಾಗೆಂದು ಬಾರ್ ಗಳಲ್ಲಿ ನೈಂಟಿ ಎಂಎಲ್ ಗೆ ಐದು ಜಾಸ್ತಿ ವಸೂಲಿ ಮಾಡಿದರೂ ಕುಡುಕರ ಅಭ್ಯಂತರವಿಲ್ಲ. ಯಾಕೆಂದರೆ ಅದು ಬಾರು, ಅವರಿಗೆ ಕರೆಂಟ್ ಬಿಲ್ಲು, ನೀರಿನ ಬಿಲ್ಲು, ಆ ಬಿಲ್ಲು, ಯಮನ ಚೀಟಿ ಅಂತೆಲ್ಲ ಇರುತ್ತದೆ. ಆದರೆ ಗಡಂಗಿನವರಿಗೆ ಅದು ಎಂಥದ್ದೂ ಇಲ್ಲ. ಆದರೂ ಎಡಮಂಗಲದಲ್ಲಿ ಕುಲೆಗಳ ಬಾಬ್ತು ಎಂದು ಜಾಸ್ತಿ ವಸೂಲಿ ಮಾಡುವುದು ಕುಡುಕರಿಗೆ ಮಾಡುವ ದೊಡ್ಡ ಅನ್ಯಾಯ. ಅದರಲ್ಲೂ ಈ ಕಮ್ಮಿದ ಕ್ವಾಟ್ರು ಕುಡಿದರೆ ಮುಗೀತು, ಲಿವರ್ ಕಲ್ಲಡ್ಕ ಹೈವೇಯಾಗಿ ಬಿಡುತ್ತದೆ. ಅದರಲ್ಲೂ ಈ ಕಮ್ಮಿದ ಒಂದು ಕ್ವಾಟ್ರು ಮಾಡಲು ತಗಲುವ ವೆಚ್ಚ ಅಬ್ಬಬ್ಬಾ ಅಂದರೂ ಮ್ಯಾಕ್ಸಿಮಮ್ ಹತ್ತು ರೂಪಾಯಿ ಮಾರಾಯ್ರೆ. ಮೂವತ್ತೈದು ಲೀಟರಿನ ಎರಡು ಕ್ಯಾನ್ N.S ತಂದು ಅದನ್ನು ಇನ್ನೂರು ಲೀಟರಿನ ತೋಟಕ್ಕೆ ಮುದ್ದು ಬಿಡುವ ನೀಲಿ ಡ್ರಮ್ಮಿನಲ್ಲಿ ಹಾಕಿ ಅದಕ್ಕೆ ವಾಟರ್ ತುಂಬಿಸಿದರೆ ಆಯ್ತು.ರುಚಿ ರುಚಿಯಾದ, ಹೆಲ್ದಿ ಹೆಲ್ದಿ, ಟೇಸ್ಟೀ ಟೇಸ್ಟೀ, ಕೂಲ್ ಕೂಲ್ ಕ್ವಾಟ್ರು ರೆಡಿ ಮಾರಾಯ್ರೆ. ಆದರೆ ಅದಕ್ಕೇ ನೈಂಟಿಗೆ ನಲವತ್ತೈದು ವಸೂಲಿ ಮಾಡಲಾಗುತ್ತಿದೆ. ವರ್ಕ್ ಫ್ರಮ್ ಹೋಮೂ ಮಾಡಬಹುದು. ಒಳಗೆ ಹೋಗಲು ಡ್ರೆಸ್ ರೆಡಿ ಇದ್ದರೆ ಸಾಕು.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಜೀವನ ಚಕ್ರ
ತಾಯಿಯ ಗರ್ಭದಿಂದ ಹೊರಗೆ ಬಂದಿದ್ದೇವೆ ಎಂದು ಅಂದುಕೊಂಡರೂ ಪುನಃ ಬಂದುದೆಲ್ಲಿಗೆ ಜಗತ್ತಿನ ಭೂಗರ್ಭದೊಳಗೆ.ನಮ್ಮನ್ನು ಹೆತ್ತ ತಾಯಿ 9 ತಿಂಗಳಷ್ಟೇ ಹಿಡಿದಿಟ್ಟು ಕೊಂಡಿರುತ್ತಾಳೆ.ಆದರೆ ನಂತರ ನಮ್ಮನ್ನು ಜಗತ್ತೇ ಹಿಡಿದಿಟ್ಟು ಕೊಂಡಿರುತ್ತದೆ..ಇದರ ಬಾಹು ಬಂಧನದಿಂದ ಹೊರಗೆ ಬಂದಾಗ ಬರುವುದೇ ಸಾವು.. ಆದರೆ ಪ್ರಪಂಚದ ಗರ್ಭದೊಳಗೆ ಮಾನವ ಎಷ್ಟೇ ದೊಡ್ಡವನಾಗಿ ಹೋದರೂ, ಪುನಃ ತಾಯಿ ಗರ್ಭದೊಳಗೆ ಸೇರಬೇಕಾದರೆ ಸಣ್ಣವರಾಗಿಯೇ ಬರಬೇಕು.. ಇಲ್ಲ ನಾನು ದೊಡ್ಡವನೇ ಆಗಿ ಹೀಗೇ ಇರುತ್ತೇನೆ ಸಣ್ಣ ಆಗಲಾರೆ ಎಂದರೆ ತಾಯಿ ಗರ್ಭದೊಳಗೆ ಜನ್ನಿಸದೆ ಹಾಗೆಯೇ ಇರಬೇಕಷ್ಟೆ.. ನಾವೆಷ್ಟು ಬಾರಿ ನಮ್ಮನ್ನು ನಾವು ಈ ಪ್ರಪಂಚದ ಬಂಧನದಿಂದ ಬಿಡಿಸಿಕೊಂಡಿದ್ದೇವೆ ಅಂದು ಕೊಂಡರೂ, ಪುನಃ ನಮಗೇ ಗೊತ್ತಿಲ್ಲದಂತೆ ಸಿಲುಕಿಕೊಂಡಿರುತ್ತೇವೆ..ಅದಕ್ಕೇ ಆಯಸ್ಸು ಎನ್ನುವುದು..ಕರ್ಮ ಬೇಡ ಎಂದರೆ ಹೋಗುವರು.. ಆಯಸ್ಸು ದಾನ ಮಾಡಿದಾಗ ದಾನದ ಜೊತೆಗೆ ಕರ್ಮವನ್ನೂ ಪಡೆದುಕೊಳ್ಳಬೇಕಾಗುತ್ತದೆ.. ಕರ್ಮ ಖಾಲಿಯಾದಾಗ ಮಾನವ ಇಲ್ಲಿಂದ ಖಾಲಿ ಆಗಬೇಕಾಗುತ್ತದೆ..ಅದಕ್ಕೇ ಯಾರದ್ದಾದರೂ, ವಯಸ್ಸಾದವರ ಕೂರಿಸಿ ಆಯಸ್ಸು ಅದರ ಜೊತೆಗೆ ಕರ್ಮವನ್ನೂ ಕೂಡಾ ದಾನ ಮಾಡುವಂತೆ ಕ್ರಿಯೆಯನ್ನು ಮಾಡಲಾಗುತ್ತದೆ... ಆಯಸ್ಸು ದಾನ, ದತ್ತು ಪಡೆವ ಕರ್ಮ ಇದಾವುದನ್ನೂ ನಂಬದವರು ಕರ್ಮ ಖಾಲಿ ಆಗಿದ್ದರೆ, ಹೋಗಿ ಬಿಡುತ್ತಾರೆ...ನಾವು ಇಲ್ಲಿ ಉಳಿದು ಕೆಲಸ ಮಾಡಬೇಕಿದ್ದರೆ, ಇನ್ನಾರದ್ದೋ ಕರ್ಮವ ಪಡೆದಾದರೂ ಉಳಿದುಕೊಳ್ಳಬೇಕಾಗುತ್ತದೆ... ನನಗೆ ಕರ್ಮ ಬೇಡ.. ಆಯಸ್ಸು ಮಾತ್ರ ಬೇಕು ಅನ್ನುವಂತಿದ್ದರೆ, ದಾನವಾಗಿ ಕರ್ಮ ಕೆಲಸ ಮಾಡದು.. ಅದಕ್ಕೆ ಪಡೆಯುವ, ಅಥವಾ ಕೊಡುವ ದಾನದ ಬಗೆಗೂ ನಂಬಿಕೆ ಬೇಕಾಗುತ್ತದೆ.. ಕರ್ಮವನ್ನೂ ಕೂಡಾ ಕೊಂಡಕೊಳ್ಳಲು ಆಗುತ್ತದೆ..ಈ ಪ್ರಕ್ರಿಯೆಗಳು ಇರುವ ಕಾರಣವೇ ಮನುಷ್ಯ ಸಂಬಂಧಗಳು ಕರ್ಮದ ಮುಖಾಂತರ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ..
ಮಾನವನ ಆಯಸ್ಸು ಕಡಿಮೆ ಇದ್ದರೆ ಕರ್ಮಗಳು ಬಲವಾಗಿ ಮಾಡಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ... ಹಾಗಾಗಿ ನಾವು ಕೆಲವೊಂದು ಕರ್ಮವನ್ನು ಮಾಡಲೇ ಬೇಕಾಗುತ್ತದೆ.. ಯಾಕೆಂದರೆ ಪ್ರತಿಫಲದ ಕೊಡವೇ ನಮ್ಮ ಕರ್ಮ..
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment