ಇದೊಂದು ರಸ್ತೆ ಅನಾದಿ ಕಾಲದಿಂದಲೂ ಶಾಪಗ್ರಸ್ತ ರಸ್ತೆ. ಹಾರಾಡಿ -ರೇಲ್ವೇ ಸಂಕದ ಬದಿಯಿಂದ ಬಂದು ರೇಲ್ವೆ ಸ್ಟೇಷನ್ ಹತ್ತಿರ ಸಾಗಿ, ಮಡ್ಯೊಲ ಕಟ್ಟೆ ದಾಟಿ, ನೆಲ್ಲಿಕಟ್ಟೆ ಹತ್ತಿ ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಬಸ್ ನಿಲ್ದಾಣಕ್ಕೆ ಬಂದು ಈ ರೋಡ್ ಜಾಯಿನ್ ಆಗುತ್ತದೆ. ಎಷ್ಟೋ ವರ್ಷ ಈ ರಸ್ತೆ ಕುಷ್ಠರೋಗದಿಂದ ಬಳಲಿ ಬಳಲಿ ಬೆಂಡೆಕಾಯಿ ಆಗಿತ್ತು. ಆ ರೋಡ್ ರೈಲಿಗೆ ಸಂಬಂಧ ಪಟ್ಟ ಜಾಗೆ ಎಂಬ ಕಾರಣಕ್ಕೆ ಸೆಂಟ್ರಲ್ ಗೆ ಯಾರು ಹೋಗೋದು ಎಂದು ಅನಾದಿ ಕಾಲದಿಂದಲೂ ಲೋಕಲ್ ಲೀಡರ್ ಗಳು ಆ ರೋಡಿನ ಸುದ್ದಿಯನ್ನೇ ಬಿಟ್ಟಿದ್ದರು.
ಪುತ್ತೂರಿನ ಎಂಎಲ್ಎ ಡಿ.ವಿ ಎಂಪಿ ಆದರು ನೋಡಿ. ಡಿ.ವಿ ಸೆಂಟ್ರಲಲ್ಲಿ ಮಾತಾಡಿ ಈ ರಸ್ತೆಗೆ ಡಾಂಬರು ಕಾಯಿಸ ಬಹುದು ಎಂಬ ಆಶೆ ಇತ್ತು. ಕಾಯಿಸಲಿಲ್ಲ ಅವರು. ಆಮೇಲೆ ಅವರೇ ಮುಖ್ಯಮಂತ್ರಿ ಆದರು. ಒಂದು ಪೋನ್ ಕಾಲ್ ಸಾಕಿತ್ತು ಈ ರಸ್ತೆಗೆ. ಪೋನ್ ಮಾಡಲೇ ಇಲ್ಲ. ಆಮೇಲೆ ಶನಿ ಶನಿ ಅಂತ ಈ ದೇಶದ ರೇಲ್ವೆ ಮಂತ್ರಿಯೂ ಆದರು. ಇವರ ಪಿಎಯ, ಪಿಎಯ, ಪಿಎಯ,ಪಿಎಯ ಪಿಎಗೆ ಹೇಳಿದ್ರೂ ಸಾಕಿತ್ತು. ಹೇಳಲೇ ಇಲ್ಲ ಮಾರಾಯ್ರೆ ಅವರು. ಆಮೇಲೆ ಪಾಪ ಯಾರೋ ಊರವರೇ ಹೋರಾಟ ಮಾಡಿ ರೇಲ್ವೆ ಇಲಾಖೆಯ ಗಮನಕ್ಕೆ ತಂದು ಕಾಂಕ್ರೀಟ್ ಹಾಕಿಸಲಾಯಿತು. ಈಗ ರೋಡ್ ಲಾಯಿಕ್ ಆಗಿದೆ. ನೂರರಲ್ಲಿ ಹೋಗಿ ಸಾಯ್ಲಿಕ್ಕೆ ತೊಂದರೆ ಇಲ್ಲ. ಈಗ ಸಮಸ್ಯೆ ಆ ಶೋರೂಂ ಜನಗಳದ್ದು ಮಾರಾಯ್ರೆ. ಭಾರತ್ ಶೋರೂಂ!
ಈಗ ಈ ಹಾರಾಡಿ ರಸ್ತೆಯಲ್ಲಿ ಹಾರಾಡಿಕೊಂಡು ಹೋಗಬಹುದು. ಆದರೆ ಆ ಶೋರೂಂ ಅಡ್ಡ ಮಾರಾಯ್ರೆ. ಹಾಗೆಂದು ಭಾರತ್ ಶೋರೂಂ ಪುತ್ತೂರಿನ ಹೆಮ್ಮೆ. ಅಲ್ಲಿ ದಿನಾ ಕಾರು ಜಾತ್ರೆ. ಈ ಶೋರೂಂ ಕೂಡ ಹಾರಾಡಿ - ರೇಲ್ವೆ ಸ್ಟೇಷನ್ ಮಧ್ಯೆ ಇದೆ. ಮೊದಲೇ ಅದು ಸಿಂಗಲ್ ರೋಡ್ ಮತ್ತು ಆ ರೋಡಿನಲ್ಲೇ ಶೋರೂಂನವರ ಕಾರು ಜಾತ್ರೆ. ರಸ್ತೆಯ ಇಕ್ಕೆಲಗಳಲ್ಲಿ ಇವರ ಕಾರುಗಳು, ಸರ್ವೀಸ್ ಗೆ ಬಂದ ಕಾರುಗಳು, ಅಡ್ಮಿಟ್ ಆಗಲು ಬಂದ ಕಾರುಗಳು, ಡಿಸ್ಚಾರ್ಜ್ ಆದ ಕಾರುಗಳು, ಪೊಸ ಕಾರುಗಳು,ಪರತ್ತ್ ಕಾರುಗಳು ,ಗುಜಿರಿ ಕಾರುಗಳು, ಕಾರಿನ ಪುಣಗಳು ದಿನಗಟ್ಟಲೆ, ವಾರಗಟ್ಟಲೆ ರಸ್ತೆ ಬದಿಯಲ್ಲಿಯೇ ಬಂದು ಜಮಾವಣೆಯಾಗುವ ಕಾರಣ ನಿತ್ಯ ಈ ರೋಡಲ್ಲಿ ಜಾಮ್ ಆಗುತ್ತಾ ಇರುತ್ತದೆ. ಸದ್ಯಕ್ಕೆ ಈ ಒಂದು ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಇವರ ಕಾರು ಜಾತ್ರೆ ಯಿಂದಾಗಿ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಭಾರೀ ತೊಂದರೆಗಳಾಗುತ್ತಿದೆ. ಎಲ್ಲಿಯಾದರೂ ಜೀವ ಎಳೆಯುವವನು ಈ ರಸ್ತೆಯಲ್ಲಿ ಬಂದರೆ ಶೋರೂಂ ಎದುರೇ ಪಡ್ಚ ಆಗುವ ಅಪಾಯಗಳಿವೆ. ಆದ್ದರಿಂದ ಇನ್ನಾದರೂ ಶೋರೂಂ ಮ್ಯಾನೇಜರ್ ಆನಂದಣ್ಣ ಅವರಿಂದಾಗುವ ಈ ಸಮಸ್ಯೆಯ ಬಗ್ಗೆ ಗಮನ ಹರಿಸಲೇ ಬೇಕಾಗಿದೆ. ಇಲ್ಲದಿದ್ದರೆ ಓವರ್ ಟೂ ಉದಯ ರವಿ TRAFFIC SUB INSPECTOR.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಜೀವನ ಚಕ್ರ
ತಾಯಿಯ ಗರ್ಭದಿಂದ ಹೊರಗೆ ಬಂದಿದ್ದೇವೆ ಎಂದು ಅಂದುಕೊಂಡರೂ ಪುನಃ ಬಂದುದೆಲ್ಲಿಗೆ ಜಗತ್ತಿನ ಭೂಗರ್ಭದೊಳಗೆ.ನಮ್ಮನ್ನು ಹೆತ್ತ ತಾಯಿ 9 ತಿಂಗಳಷ್ಟೇ ಹಿಡಿದಿಟ್ಟು ಕೊಂಡಿರುತ್ತಾಳೆ.ಆದರೆ ನಂತರ ನಮ್ಮನ್ನು ಜಗತ್ತೇ ಹಿಡಿದಿಟ್ಟು ಕೊಂಡಿರುತ್ತದೆ..ಇದರ ಬಾಹು ಬಂಧನದಿಂದ ಹೊರಗೆ ಬಂದಾಗ ಬರುವುದೇ ಸಾವು.. ಆದರೆ ಪ್ರಪಂಚದ ಗರ್ಭದೊಳಗೆ ಮಾನವ ಎಷ್ಟೇ ದೊಡ್ಡವನಾಗಿ ಹೋದರೂ, ಪುನಃ ತಾಯಿ ಗರ್ಭದೊಳಗೆ ಸೇರಬೇಕಾದರೆ ಸಣ್ಣವರಾಗಿಯೇ ಬರಬೇಕು.. ಇಲ್ಲ ನಾನು ದೊಡ್ಡವನೇ ಆಗಿ ಹೀಗೇ ಇರುತ್ತೇನೆ ಸಣ್ಣ ಆಗಲಾರೆ ಎಂದರೆ ತಾಯಿ ಗರ್ಭದೊಳಗೆ ಜನ್ನಿಸದೆ ಹಾಗೆಯೇ ಇರಬೇಕಷ್ಟೆ.. ನಾವೆಷ್ಟು ಬಾರಿ ನಮ್ಮನ್ನು ನಾವು ಈ ಪ್ರಪಂಚದ ಬಂಧನದಿಂದ ಬಿಡಿಸಿಕೊಂಡಿದ್ದೇವೆ ಅಂದು ಕೊಂಡರೂ, ಪುನಃ ನಮಗೇ ಗೊತ್ತಿಲ್ಲದಂತೆ ಸಿಲುಕಿಕೊಂಡಿರುತ್ತೇವೆ..ಅದಕ್ಕೇ ಆಯಸ್ಸು ಎನ್ನುವುದು..ಕರ್ಮ ಬೇಡ ಎಂದರೆ ಹೋಗುವರು.. ಆಯಸ್ಸು ದಾನ ಮಾಡಿದಾಗ ದಾನದ ಜೊತೆಗೆ ಕರ್ಮವನ್ನೂ ಪಡೆದುಕೊಳ್ಳಬೇಕಾಗುತ್ತದೆ.. ಕರ್ಮ ಖಾಲಿಯಾದಾಗ ಮಾನವ ಇಲ್ಲಿಂದ ಖಾಲಿ ಆಗಬೇಕಾಗುತ್ತದೆ..ಅದಕ್ಕೇ ಯಾರದ್ದಾದರೂ, ವಯಸ್ಸಾದವರ ಕೂರಿಸಿ ಆಯಸ್ಸು ಅದರ ಜೊತೆಗೆ ಕರ್ಮವನ್ನೂ ಕೂಡಾ ದಾನ ಮಾಡುವಂತೆ ಕ್ರಿಯೆಯನ್ನು ಮಾಡಲಾಗುತ್ತದೆ... ಆಯಸ್ಸು ದಾನ, ದತ್ತು ಪಡೆವ ಕರ್ಮ ಇದಾವುದನ್ನೂ ನಂಬದವರು ಕರ್ಮ ಖಾಲಿ ಆಗಿದ್ದರೆ, ಹೋಗಿ ಬಿಡುತ್ತಾರೆ...ನಾವು ಇಲ್ಲಿ ಉಳಿದು ಕೆಲಸ ಮಾಡಬೇಕಿದ್ದರೆ, ಇನ್ನಾರದ್ದೋ ಕರ್ಮವ ಪಡೆದಾದರೂ ಉಳಿದುಕೊಳ್ಳಬೇಕಾಗುತ್ತದೆ... ನನಗೆ ಕರ್ಮ ಬೇಡ.. ಆಯಸ್ಸು ಮಾತ್ರ ಬೇಕು ಅನ್ನುವಂತಿದ್ದರೆ, ದಾನವಾಗಿ ಕರ್ಮ ಕೆಲಸ ಮಾಡದು.. ಅದಕ್ಕೆ ಪಡೆಯುವ, ಅಥವಾ ಕೊಡುವ ದಾನದ ಬಗೆಗೂ ನಂಬಿಕೆ ಬೇಕಾಗುತ್ತದೆ.. ಕರ್ಮವನ್ನೂ ಕೂಡಾ ಕೊಂಡಕೊಳ್ಳಲು ಆಗುತ್ತದೆ..ಈ ಪ್ರಕ್ರಿಯೆಗಳು ಇರುವ ಕಾರಣವೇ ಮನುಷ್ಯ ಸಂಬಂಧಗಳು ಕರ್ಮದ ಮುಖಾಂತರ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ..
ಮಾನವನ ಆಯಸ್ಸು ಕಡಿಮೆ ಇದ್ದರೆ ಕರ್ಮಗಳು ಬಲವಾಗಿ ಮಾಡಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ... ಹಾಗಾಗಿ ನಾವು ಕೆಲವೊಂದು ಕರ್ಮವನ್ನು ಮಾಡಲೇ ಬೇಕಾಗುತ್ತದೆ.. ಯಾಕೆಂದರೆ ಪ್ರತಿಫಲದ ಕೊಡವೇ ನಮ್ಮ ಕರ್ಮ..
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment