ಮೊನ್ನೆ ತಾನೇ ಕಡಬ-ಪಂಜ ರೋಡಿನ ಪುಳಿಕುಕ್ಕು ಎಂಬಲ್ಲಿ ಪರ್ಬದ ಪ್ರಯುಕ್ತ ಭೂತಗಳ ಅಗೆಲಿಗೆ ಸ್ಕೂಟರ್ ನಲ್ಲಿ ಕೋಳಿ ತರುತ್ತಿದ್ದ ಎಡಮಂಗಲ C.A Bank ಪಿಗ್ಮಿ ಕಲೆಕ್ಟರ್ ಶ್ರೀ ಸೀತಾರಾಮ ಗೌಡ ಎಂಬವರ ಮೇಲೆ ರೋಡ್ ಸೈಡಿನ ದೂಪದ ಮರ ಬಿದ್ದು ಅವರು ಸ್ಪಾಟ್ ಡೆತ್ ಆಗಿದ್ದರು. ಈ ಅಮಾಯಕನ ಸಾವಿಗೆ ಯಾರನ್ನು ಹೊಣೆ ಮಾಡಲಿ ಮಾರಾಯ್ರೆ? ಗೌಡರು ಕೋಳಿ ತರಲು ಹೋದದ್ದೇ ತಪ್ಪಾ? ಆ ರೋಡಲ್ಲಿ ಹೋದದ್ದು ತಪ್ಪಾ? ಸ್ಕೂಟರಲ್ಲಿ ಹೋದದ್ದು ತಪ್ಪಾ? ಭೂತಗಳು ಅಗೆಲು ಕೇಳಿದ್ದು ತಪ್ಪಾ? ಸ್ಕೂಟರಲ್ಲಿ ಕೋಳಿ ತಂದಿದ್ದು ತಪ್ಪಾ? ಮರ ಬೀಳುವ ಟೈಮಿಗೆ ಗೌಡರು ಅದರ ಅಡಿಯಲ್ಲಿ ಪಾಸಾದದ್ದು ತಪ್ಪಾ? ಈ ಒಂದು ಘಟನೆಗೆ ನಮ್ಮನ್ನು ನಾವೇ ಹೊಣೆಗಾರರನ್ನಾಗಿ ಮಾಡಬೇಕಷ್ಟೆ. ಬೇರೆ ಯಾರೂ ಒಪ್ಪಿಕೊಳ್ಳುವುದಿಲ್ಲ, ಒಪ್ಪಿಕೊಂಡು ತಿದ್ದಿಕೊಳ್ಳುವುದೂ ಇಲ್ಲ.
ಹಾಗೆಂದು ಆ ಅರಣ್ಯ ಇಲಾಖೆ ಮತ್ತು ಕರೆಂಟ್ ಇಲಾಖೆಗಳಿಗೆ ರೋಡ್ ಸೈಡಲ್ಲೇ ಕೆಲಸ ಮಾರಾಯ್ರೆ. ಅವರು ಕಿಲ್ಲರ್ ಮರ ನೆಡುವುದು, ಇವರು ಶಾಕಿಂಗ್ ಕಂಬ ಹಾಕೋದು. ಎರಡೂ ನರಮಾನಿಗೆ ಟಿಕೆಟ್ ಕೊಡುವಂತದ್ದೆ. ಸಾಮ್ರಾಟ ಅಸೋಕ ರೋಡ್ ಸೈಡಲ್ಲಿ ಮರ ನೆಟ್ಟ ಅಂತ ನಾವೂ ಅವನ ಕಾಪಿಕ್ಯಾಟ್ ಆದರೆ ಇದೇ ಕತೆ ಆಗೋದು. ಇಲ್ಲದಿದ್ದರೆ ಆ ದೂಪದ ಮರಗಳನ್ನು ತಂದು ಯಾಕೆ ಮಾರಾಯ್ರೆ ರೋಡ್ ಸೈಡಲ್ಲಿ ತಂದು ನೆಟ್ಟಿದ್ದು? ಅಲ್ಲಿ ಬಂಟ ಮಲೆಯಲ್ಲೋ, ಕಳೆಂಜಿ ಮಲೆಯಲ್ಲೋ ಕೊಂಡೋಗಿ ನೆಟ್ಟು ಬರಲಿ. ಹಾಲು ಮಡ್ಡಿ ಕಳ್ಳರು ಎಲ್ಲಿಗೆ ಬೇಕಾದರೂ ಹೋಗುತ್ತಾರೆ.
ಹಾಗೆ ರೋಡ್ ಸೈಡಿನ ಮರಗಳು ಬೀಳಲು ಪ್ರಮುಖ ಕಾರಣ ಹಾಲು ಮಡ್ಡಿ ಕಳ್ಳರು ಮತ್ತು ಅರಣ್ಯ ಇಲಾಖೆ. ಅರಣ್ಯ ಇಲಾಖೆಯ ದಾಕ್ಷಿಣ್ಯವನ್ನು ದುರುಪಯೋಗ ಪಡಿಸಿಕೊಂಡು ಹಾಲು ಮಡ್ಡಿ ಕಳ್ಳರು ವರ್ಷವಿಡೀ ಮಡ್ಡಿ ತೆಗೆಯುವ ಕಾರಣ ಮರಗಳು ವೀಕ್ ಆಗಿ, ನಿಲ್ಲಲು ತ್ರಾಣವಿಲ್ಲದೆ ಯಾವನೋ ನತದೃಷ್ಟನ ಮೇಲೆ ಬಿದ್ದು ಬಿಡುತ್ತದೆ. ಮಾಮೂಲಿಯಾಗಿ ಅರಣ್ಯ ಇಲಾಖೆ ಡಿಸೆಂಬರ್ ತಿಂಗಳಲ್ಲಿ ಮಡ್ಡಿ ತೆಗೆಯಲು ಏಲಂ ಕೂಗುತ್ತದೆ. ಆರು ತಿಂಗಳು ಟೈಮ್. ಜೂನ್ ಒಳಗೆ ಏಲಂ ನಿಂತವನು ಮಡ್ಡಿ ತೆಗೆದು ಕಾಡು ಖಾಲಿ ಮಾಡಬೇಕು ಮತ್ತು ಕಾಡಿನಿಂದ ಜಾಗ ಖಾಲಿ ಮಾಡಬೇಕು. ಇದು ಅರಣ್ಯ ಇಲಾಖೆ ಕಂಡೀಷನ್. ಆದರೆ ಏಲಂ ನಿಂತವನು ಏನು ಮಾಡುತ್ತಾನೆಂದರೆ ಜೂನ್ ತನಕ ಭಾರೀ ಸೊಬಗನಂತೆ ಮಡ್ಡಿ ತೆಗೆದರೆ ಮರ್ಯಲ ಶುರುವಾಗಿ ಏಲಂ ಅವಧಿ ಮುಗಿದ ನಂತರ ಮೆಲ್ಲಗೆ ಮೆಲ್ಲಗೆ, ಮಸ್ಕ್ ಮಸ್ಕ್ ಆಗಿ ಮರ ಕೆತ್ತನೆ ಶುರು ಮಾಡುತ್ತಾನೆ. ಇದು ಇಡೀ ವರ್ಷ ನಡೆಯುತ್ತದೆ. ಹಾಗೆಂದು ದೂಪದ ಮರ ಕೆತ್ತಲು ಕೂಡ ಹೀಗೆ ಅಂತ ಒಂದು ಕಂಡೀಷನ್ ಇದೆ. ಆದರೆ ಈ ಕಳ್ಳಕಾಕರು ಒಟ್ಟಾರೆ ಕೆತ್ತಿ ಮರಗಳ ಸಾವಿಗೆ ಕಾರಣಕರ್ತರಾಗುತ್ತಿದ್ದಾರೆ. ಆ ರಕ್ಷಿತಾರಣ್ಯಗಳಲ್ಲಿ ಮಡ್ಡಿ ಕೆತ್ತಿ ಕೆತ್ತಿ ದೂಪದ ಮರಗಳು ಖಾಲಿಯಾಗುತ್ತಿದೆ. ಯಾಕೆ ಆ ಕಳ್ಳಕಾಕರ ಜೊತೆ ಕೈಜೋಡಿಸುತ್ತೀರಿ ಎಂದು ಬರೆದರೆ ಅರಣ್ಯ ಇಲಾಖೆಯ "ದೊಡ್ಡವರಿಗೆ" ನನ್ನ ಮೇಲೆ ಕೆಂಡದಂತಹ ಕೋಪ ಬಂದು ಬಿಡುತ್ತದೆ. ಅವರದ್ದೊಂದು ಕ್ಷಮೆ ನನ್ನ ಮೇಲಿರಲಿ.
ವಿಶೇಷ ಆಕರ್ಷಣೆ: ಅಲ್ಲಿ ಪಂಜದ ಮಾಜೀ ರೇಂಜೆರ್ ಗಿರೀಶೆರ್ ಪಂಜರದಿಂದ ವರ್ಗಾವಣೆ ಆಗಿ ನಾಲಕ್ಕು ತಿಂಗಳಾದರೂ ಇನ್ನೂ ಈಗೀನ ರೇಂಜೆರ್ ಸಂಧ್ಯಾ ಮ್ಯಾಮ್ ಗೆ ಕ್ವಾರ್ಟರ್ಸ್ ಬಿಟ್ಟು ಕೊಟ್ಟಿಲ್ಲವಂತೆ. ಅವರು ಪಾಪ ಡೈಲಿ ಉಪ್ಪಿನಂಗಡಿಯಿಂದ ಪಂಜಕ್ಕೆ ಅಪ್ಪ್ & ಡೌನ್. ಪಂಜ ಕ್ವಾರ್ಟರ್ಸ್ ಎಂತ ಗಿರೀಶ್ ರೇಂಜೆರ್ ಆದಿ ಮನೆಯಾ?
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಸವಿಜೇನು ಬಾಳು ನೀನು
ನಾ ಎಲ್ಲೇ ಹೊರಹೋದರೂ ಬಂದು ಸೇರುವುದು ಮಾತ್ರ ನಿನ್ನ ಪ್ರೀತಿಯ ಗೂಡನ್ನು.
ಇದನ್ನರಿತರೂ ನೀ ಹಾರಲು ಬಿಡದಿದ್ದರೆನ್ನ ಏನಾಗುವುದು
ಒಳಿತು ಕೆಡುಕುಗಳ ಅರಿಯುವುದು ಹೇಗಿನ್ನು ?
ಹಕ್ಕಿ ಹಾರಿದರೂ ಅದು ಕಾಳಿಗಷ್ಟೇ ಅನ್ನುವ ತಾತ್ಪರ್ಯ ಕಾಣು ನೀ ತೊರೆಯಬೇಡ ನನ್ನನ್ನು.
ಸವಿಯಲೇ ಇಹುದು ಈ ಸೃಷ್ಟಿ ಸೌಂದರ್ಯ,ಕುರುಡಾಗದಿರು
ಅಂತ್ಯ ಹಾಡದೆಂದೆಂದು ಒಳಿತಲ್ಲವಿದು ನಮಗಿನ್ನು.
ಇದ್ದಾಗಲಷ್ಟೇ ಮೋಹ ಬಾಂಧವ್ಯವಲ್ಲವದು ತಿರಸ್ಕಾರವೇಕೆ
ನನ್ನ ನಿನ್ನೊಳು,ಒಲಿದು ಬಂದರೆ ಜಗವು ಸುಂದರವು ಇನ್ನು
ಕಾಣುವ ಕಣ್ಣಿದ್ದರೆ ಸಾಕು, ಬೇರು ಬಿಡು ಎಲ್ಲರೊಳು ನಗೆ ತೋರಿ ಹಬ್ಬವಾಗು ನೀ ಮಂದಹಾಸವೆ ಬರಲಿಯಿನ್ನು.
ಸಂಶಯದ ಪಿಶಾಚಿಯನ್ನು ಮರೆ ಮಾಚು ನೀನಿನ್ನು ಕಂಡರೂ ಕಾಣದಂತಿರುವೆಲ್ಲ ಮೌನ ಏಕಿನ್ನೂ..
ಸೌರಭವ ಸೂಸುವುದು ಮನಕೆ ಹರುಷವ ತರಲು
ಸುಮ ಬೀರಿ ಕಂಪ ಹರಡಲು ಎಂಬುವುದ ತಿಳಿ ನೀನು.
ಪರಾಗಸ್ಪರ್ಶಕ್ಕೆ ಅರಳೀತು ಹೂವು ಅರಳದೆಯೆ ನಿಂತೀತೇ
ಭೂ ಸ್ಪರ್ಶವಾದ ನಿನ್ನ ಮನದ ಬಯಕೆಗಳ ಜೇನು.
ಸಾಕು ಸಾಕು ನೀನು ಹಾರುವುದರ ಬಿಡು ಇನ್ನು ಎಂದರದು
ಹಾರದಿದ್ದರೆ, ಸುಮ್ಮನುಳಿಯುವುದೇ ಸಂಸಾರದ ಕಣ್ಣು.
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
................................................
ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಚಿಂತನೆಯ ಹಿನ್ನಲೆಯಲ್ಲಿ
ದೈವಜ್ಞರಾದ ಶ್ರೀ ನಾರಾಯಣ ರಂಗಾ ಭಟ್ಮಧೂರು ಇವರಿಂದ ನ.13ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆ ನಡೆಯಲಿದೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರ ನೇತೃತ್ವದಲ್ಲಿ ದೈವಜ್ಞರಿಗೆ ತಾಂಬೂಲ ಪ್ರಶ್ನೆಯ ಹೇಳಿಕೆ ನೀಡಲಾಯಿತು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಸಂತೋಷ್ಕು ಮಾರ್ ರೈ ಬಳ್ಳಮಾಯಿಲಪ್ಪ ಗೌಡ ಎಣ್ಣೂರು ಹಾಗೂ ಕೇಶವ ಗೌಡ ಕುದ್ವ ಅವರು ಉಪಸ್ಥಿತರಿದ್ದರು.
................................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment