ಇವಳಿಗೆ ಬುದ್ಧಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಓ ಮೊನ್ನೆ ತಾನೇ ನವರಾತ್ರಿಯಲ್ಲಿ ಇವಳು ತನ್ನ ಶೋರೂಂನಲ್ಲಿ ಶೂರ್ಪನಖಿ ಅವತಾರ ಎತ್ತಿ ಗ್ರಾಹಕರೊಬ್ಬರೊಂದಿಗೆ ಡಿಶುಂ ಡಿಶುಂಗೆ ನಿಂತು ಇಡೀ ಸುಳ್ಯವೇ ಅದುರಿ ಹೋಗುವಂತೆ ಬೊಬ್ಬೆ ಹೊಡೆದಿದ್ದಳು, ಕುಲೆಗಳು ಕೇಕೆ ಹಾಕುವಂತೆ ಕೇಕೆ ಹಾಕಿದ್ದಳು, ಬ್ರಹ್ಮರಕ್ಕಸ ಅರಚುವಂತೆ ಅರಚಾಡಿದ್ದಳು, ಪೀಡೆ ಪಿಚಾಚಿ ಹಿಡಿದಿರುವಂತೆ ಎಗರಾಡಿದ್ದಳು, ಆನೆಯಂತೆ ಘೀಳಿಟ್ಟಿದ್ದಳು, ನರಿಯಂತೆ ಊಳಿಟ್ಟಿದ್ದಳು, ಕಂತ್ರಿ ಕಾಟ್ ನಾಯಿಯಂತೆ ಬೊಗಳಿದ್ದಳು ಮತ್ತು ಎಲ್ಲಾ ಮುಗಿಸಿ ಬೆಟ್ರಿ ಖಾಲಿಯಾದಾಗ ಹೋಗಿ ಅಯ್ಯೋ ರಾಮ ಎಂದು ಪೋಲಿಸ್ ಕಂಪ್ಲೈಂಟ್ ಕೊಟ್ಟಿದ್ದಳು. ಇವಳ ಶೋರೂಂಗೆ ಹೋದದ್ದು ಗ್ರಾಹಕರು ಮಾರಾಯ್ರೆ, ಹೊರತು ಕಳ್ಳರಲ್ಲ, ದರೋಡೆಕೋರರಲ್ಲ. ಕಸ್ಟಮರ್ ಈಸ್ ಗಾಡ್ ಎಂಬ ವಾಕ್ಯವನ್ನು ಇವಳು ಕಸ್ಟಮರ್ ಈಸ್ ಡಾಗ್ ಎಂಬಲ್ಲಿ ತನಕ ಮುಟ್ಟಿಸಿದ್ದಾಳೆ. ಸುಳ್ಯದಲ್ಲಿ ಯಾರೂ ಇಲ್ವಾ ಇವಳ ಸೀಕಿಗೆ ಒಂದು ಮದ್ದು ಮಾಡುವಂತವರು.
ಸುಳ್ಯದಲ್ಲಿ ಇವಳು ಶೋರೂಂ ಒಂದರಲ್ಲಿ ಕೆಲಸಕ್ಕೆ. ಶೋರೂಂಗೆ ಬರುವ ಗ್ರಾಹಕ ಬಿಸಾಡುವ ಚಿಲ್ಲರೆ ಹೆಕ್ಕಿ, ಕಂಪೆನಿಯ ದುಡ್ಡು, ಗ್ರೀಸ್, ಆಯಿಲ್, ಸ್ಪೇರ್ ಪಾರ್ಟ್ ಕದ್ದು ಜೀವನ ನಡೆಸುವ ಇವಳ ಅಹಂಕಾರ ಮಾತ್ರ ಉಂಟಲ್ಲ ಇಡೀ ಸುಳ್ಯಕ್ಕೆ ಸಾಕು. ಶೋರೂಂಗೆ ಬರುವ ಅಷ್ಟೂ ಗ್ರಾಹಕರೊಂದಿಗೆ ವಿನಾಕಾರಣ ಹಾರಾಡುವ, ಚೀರಾಡುವ, ಅರಚಾಡುವ ಈಕೆಯನ್ನೂ ಇನ್ನೂ ಶೋರೂಂನಲ್ಲಿ ಇಟ್ಟು ಅದ್ಯಾವ ಕರ್ಮಕ್ಕೆ ಸಾಕಿ ಸಲಹುತ್ತಿದ್ದರೋ ಅದರ ಮಾಲೀಕರಿಗೇ ಗೊತ್ತು. ಮೊನ್ನೆ ಮೊನ್ನೆ ತಾನೇ ಈಕೆ ಗ್ರಾಹಕರೊಬ್ಬರೊಂದಿಗೆ ಜಗಳವಾಡಿ ತಾನೇ ಹೋಗಿ ಪೋಲಿಸ್ ಕಂಪ್ಲೈಂಟ್ ಕೊಟ್ಟಿದ್ದಳು. ಅಲ್ಲಿ ಪೋಲಿಸರೂ ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸಿ ಎಂದು ಇವಳಿಗೆ ಉಗಿದಿದ್ದರು. ಕಂಪೆನಿಯ ಸ್ಪೇರ್ ಪಾರ್ಟ್ ಗಳನ್ನು ಕೊಡದಿರುವುದು, ಅಂಡಿಗುಂಡಿ ಸರ್ವೀಸ್ ಮಾಡುವುದು, ಹಾಕದ ಸ್ಪೇರ್ ಪಾರ್ಟ್ ಗಳಿಗೆ ಬಿಲ್ ಮಾಡೋದು, ಆಯಿಲ್ ಕುಡಿಯುವುದು, ಗ್ರೀಸ್ ತಿನ್ನೋದು, ಸರ್ವೀಸ್ ಗೆ ನಿಂತ ಬೈಕ್ ಗಳಿಗೆ ಸ್ಥಳ ಬಾಡಿಗೆ ಹಾಕೋದು, ಲೋಕದ ಬಿಲ್ ಜಡಿಯೋದು, ಕೇಳಿದರೆ ಪೆದಂಬು ಮಾತಾಡೋದು, ಪೋಲಿಸ್ ಕಂಪ್ಲೈಂಟ್ ಕೊಡುತ್ತೇನೆ ಎಂದು ಬೆದರಿಕೆ ಹಾಕೋದು, ಕಂಪೆನಿಯಿಂದ ಬರುವ ಫ್ರೀ ಗಿಫ್ಟ್ ಗಳನ್ನು ಕೊಡದಿರುವುದು ಮತ್ತು ಅದನ್ನು ಮಾರೋದು, ಗ್ರಾಹಕರೊಂದಿಗೆ ಏಕವಚನದಲ್ಲಿ ಮಾತಾಡೋದು, ಅನಾಗರೀಕರಂತೆ, ಶಿಲಾಯುಗದವಳಂತೆ, ಮೊಹೆಂಜೋದಾರೋನ ತಂಗಿಯಂತೆ ವರ್ತಿಸುವುದು ಮುಂತಾದ ಧರ್ಮ ಕಾರ್ಯಗಳನ್ನು, ಸ್ವಕಾರ್ಯಗಳನ್ನು ಈಕೆ ಸುಳ್ಯದ ಶೋರೂಂನಲ್ಲಿ ನಡೆಸುತ್ತಿದ್ದು ಗ್ರಾಹಕರು ಇವಳಿಂದಾಗಿ ಹೈರಾಣಾಗಿ ಹೋಗಿದ್ದಾರೆ. ಶೋರೂಂಗೆ ಹೋಗುವುದೆಂದರೆ ಚಳಿ ಹಿಡಿದು ಗಡಗಡ ಆಗುವ ಗ್ರಾಹಕನ ಪರದಾಟ ಹೇಳಿದರೆ ಸಾಲದು. ಇದೀಗ ಇವಳ ಸಹವಾಸವೇ ಬೇಡ ಎಂದು ಗ್ರಾಹಕರು ನಿಧಾನವಾಗಿ ಕಡಬ, ಪುತ್ತೂರು ಕಡೆ ಹೋಗುತ್ತಿದ್ದು ಇವಳು ಬೇಗದಲ್ಲೇ ನೊಣ ಓಡಿಸಲು ರೆಡಿ ಆಗೋದು ಒಳ್ಳೆದು ಎಂದು ಸಂತ್ರಸ್ತ ಗ್ರಾಹಕರು ಮಾತಾಡಿಕೊಳ್ಳುತ್ತಿದ್ದಾರೆ. ಇವಳ ಆರಚಾಟದಿಂದ ಈ ಶೋರೂಂನ ಇತರೇ ಸಿಬ್ಬಂದಿಗಳು ENT ಪೇಶೇಂಟ್ ಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಂದು ಶೋರೂಂ ಶೂರ್ಪನಖಿಗೆ ಯಾರೇ ಆಗಲಿ ಶೋರೂಂ ಒಳಗೆ ಎದುರು ಮಾತಾಡುವ ಹಾಗಿಲ್ಲ. ಮಾತಾಡಿದ್ರೆ ಮುಗೀತು. ಅವನಿಗೆ ಮಂಗಳಾರತಿ ಗ್ಯಾರಂಟಿ. ನಿನ್ನ ವಾಹನ ರಿಪೇರಿ ನಾವು ಮಾಡಲ್ಲ, ಹೊರಗೆ ನಡಿ, ಏನು ಬೇಕಾದರೂ ಮಾಡ್ಕೋ, ನಾನು ಹೇಳಿದ ಹಾಗೆ ಕೇಳು, ನೀನು ಹೇಳಿದ ಹಾಗೆ ಆಗಲ್ಲ ಮುಂತಾದ ನುಡಿನಮನ ಈ ಶೋರೂಂನಲ್ಲಿ ಗ್ರಾಹಕರಿಗೆ ಮಾಮೂಲು. ಅವಳು ಮೂಡಲ್ಲಿದ್ದರೆ ಮಾತ್ರ ರಿಪೇರಿ, ಸರ್ವೀಸ್, ಸ್ಪೇರ್ ಪಾರ್ಟ್ ಇತ್ಯಾದಿ ಇತ್ಯಾದಿ. ಎಲ್ಲಿಯಾದರೂ ಅವಳಿಗೆ ಆವತ್ತು ಮಂಡೆ ಸೀಕ್ ಜೋರಿದ್ದರೆ ಗ್ರಾಹಕನ ವಾಹನ ರೋಡಿನಲ್ಲಿ ಇಲ್ಲದಿದ್ದರೆ ತೋಡಿನಲ್ಲಿ. ಇವಳು ಎಷ್ಟು ಮೆಂಟಲ್ ಅಂದರೆ ರಿಪೇರಿಗೆ ನಿಲ್ಲಿಸಿದ್ದ ಸುಳ್ಯ ಪೋಲಿಸರ ಬೈಕಿಗೇ ಸ್ಥಳ ಬಾಡಿಗೆ ವಸೂಲಿ ಮಾಡಿದ ಸೈಕೋ ಶೂರ್ಪನಖಿ. ಭೂತ ಹಿಡಿದೇ ಶೋರೂಂನಲ್ಲಿ ಕೂರುವ ಈಕೆ ಗ್ರಾಹಕರನ್ನು ಕಂಡ ಕ್ಷಣ ನಾಗವಲ್ಲಿ ಆಗಿ ಬಿಡುತ್ತಾಳೆ. ಗ್ರಾಹಕರನ್ನು ದೇವರಂತೆ ಕಾಣಬೇಕಾದ ಈ ಪರಿಸ್ಥಿತಿಯಲ್ಲಿ ಈಕೆಯ ವರ್ತನೆ ಖಂಡನೀಯವಾದುದು. ಗ್ರಾಹಕರಿಗೆ ಪುಕ್ಕಟೆ ಸರ್ವೀಸ್ ಕೊಡುವಂತೆ ವರ್ತಿಸುವ ಈಕೆಗೆ ಒಂದು ವ್ಯವಸ್ಥೆ ಮಾಡಲು ಸುಳ್ಯದಲ್ಲಿ ಯಾರೂ ಇಲ್ವಾ? ಇವಳ ತೊಘಲಕ್ ದರ್ಬಾರ್ ಇನ್ನೂ ಎಷ್ಟು ದಿನ? ಕಂಕನಾಡಿ ಆಸ್ಪತ್ರೆಗೆ ಆದಷ್ಟು ಬೇಗ ಇವಳನ್ನು ಶಿಫ್ಟ್ ಮಾಡಿದ್ರೆ ಬಚಾವ್ ಇಲ್ಲದಿದ್ದರೆ ಇವಳಿಗೆ ಸಾರ್ವಜನಿಕರೇ ಚಳಿ ಬಿಡಿಸುವ ದಿನ ದೂರದಲ್ಲಿಲ್ಲ.
.....................................
ಬೇಕಾಗಿದ್ದಾರೆ.
ಅನುಭವಿ ಮಾರುತಿ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. ಉತ್ತಮ ವೇತನ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೆಕ್ಯಾನಿಕ್ ಕಲಿಯುವವರಿಗೂ ಅವಕಾಶ ಕೊಡಲಾಗುವುದು.
Contact: 6363037422 .
MARUTI MOTORS PANJA
.....................................
....................................................
ಯಾರ್ಯಾರದ್ದೋ? ಯಾರ್ಯಾರೋ ಮಾಡುವ ಕೆಲಸಗಳನ್ನು ಎಲ್ಲವನ್ನೂ ನಾವು ನಮ್ಮ ಕೈಗೆತ್ತಿಕೊಂಡು ಮಾಡಲು ಹೊರಟರೆ,ಅದರ ಯಶಸ್ಸು ಕೀರ್ತಿ ಕಾರಣೀಕರ್ತ ಯಾರಾಗಿದ್ದಾರೋ ಅವರಿಗೇ ಸಲ್ಲಬಹುದು. ನಾವು ಎಲ್ಲ ಇತರರ ಕೆಲಸಗಳನ್ನೇ ಕೈಗೆತ್ತಿಕೊಂಡ ಫಲ ಅದವರಿಗೇ.. ನಮ್ಮ ನಮ್ಮದೇ ಆದ ಕೆಲಸಗಳು ಹಾಗೂ ಕರ್ತವ್ಯಗಳು ಯಾವುವೆಂದು ನಾವು ನಮ್ಮನ್ನು ನೋಡಿಕೊಂಡಾಗ ಇದರ ಬೆಲೆ ನಮಗೆ ತಿಳಿಯುವುದು.ಆದರೆ ಇದರಲ್ಲಿ ಯಶಸ್ಸು ಶ್ರಮದ ಫಲ ನಿಧಾನವಾಗಿದ್ದರೂ, ಶಾಶ್ವತ..
-ಶ್ರೀಮತಿ ಶಾಂತಾ ಕುಂಟಿನಿ
................................
ಅಡಿಕೆ ಗುಂಡಿ, ಪಿಲ್ಲರ್ ಹೊಂಡ,
ಪೈಪ್ ಲೈನ್, ಇಂಗು ಗುಂಡಿ,
ಮನೆಯ ಪಾಯ,
ಜಾಗ ಸಮ ತಟ್ಟು ಮಾಡಲು..
ಇತ್ಯಾದಿ ಕೆಲಸಗಳಿಗೆ
ದೊಡ್ಡ ಹಿಟಾಚಿ, ಜೆಸಿಬಿ, ಸಣ್ಣ ಹಿಟಾಚಿ
ಹಾಗು ಟಿಪ್ಪರ್ ಗಾಗಿ ಸಂಪರ್ಕಿಸಿ :
ಅರಮನೆ ಅರ್ಥ್ ಮೂವರ್ಸ್
ಗುರುವಾಯನಕೆರೆ
Mob : 7259824599.
.....................................
ಸುಧೀರ್ಘ 26 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಜೂನಿಯರ್ ಕಮಾಂಡಿಂಗ್ ಅಧಿಕಾರಿ ಗಿರೀಶ್ ಎ.ಕೆ. ಆರ್ನೋಜಿ ಯವರು ಇಂದು ಹುಟ್ಟೂರು ಪಂಜಕ್ಕೆ ಆಗಮಿಸಿದಾಗ ಶಿವಾಜಿ ಯುವಕ ಮಂಡಲ ಕೂತ್ಕುಂಜ ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್ ರವರು ಶ್ರೀ ದೇವರ ಪ್ರಸಾದ ಹಾಗೂ ಶಾಲು ಹೊದಿಸಿ ಗೌರವಿಸಿದರು.
................................................
ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಪ್ರಯುಕ್ತ ಕಾರ್ತಿಕ ಪೂಜೆ, ತುಳಸಿ ಪೂಜೆ, ಬಲಿಯೇಂದ್ರ ಪೂಜೆ ಹಾಗೂ ಗೋಪೂಜೆ ನಡೆಯಿತು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
................................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment