ಹಾಗೆಂದು ಹೊಸ ತಾಲೂಕು ಹೆಡ್ ಕ್ವಾರ್ಟರ್ಸ್ ಕಳಸದ ಪೋಲಿಸ್ ಸರಹದ್ದಿನ ಪೋಲಿಸರು ಬಜೀ ಪಾಪ ಮಾರಾಯ್ರೆ. ಮುಂದೆ ಬಂದರೆ ಹಾಯ ಬೇಡ, ಹಿಂದೆ ಬಂದರೆ ಒದೆಯ ಬ್ಯಾಡ ಕೆಟಗರಿಯ ಪುಣ್ಯ ಕೋಟಿ ಪೋಲಿಸರು ಇವರು. ಅದೇ ಘೊಸ್ಟ್ ಸಿಟಿ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರನ ಸರ್ಕಲ್ ನಲ್ಲಿ ಕಳಸ ಪೋಲಿಸರು ಬರುತ್ತಾರೆ. ನೀವೇನಾದರೂ ಠಾಣೆಗೆ ಹೋದರೆ ಪೋಲಿಸರಿಗೆ ಖುಷಿಯೋ ಖುಷಿ. ಕೇಟಿ ತರಿಸಿ ಕೊಡುತ್ತಾರೆ.
ಹಾಗೆಂದು ಕಳಸ ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳು ಅಪರೂಪ. ಇಲ್ಲಿ ಯಾವಾಗಲಾದರೂ ದಶಕಗಳಲ್ಲಿ ಒಮ್ಮೆ ಮರ್ಡರ್ ನಡೆದರೆ, ಕೊರೆಯುವ ಚಳಿಯಲ್ಲಿ ಕಳ್ಳರು ಕದಿಯಲು ಅಂಗಳ ಇಳಿಯುವುದೇ ಅಪರೂಪ. ಇನ್ನು ರೇಪ್, ಆಫ್ ಮರ್ಡರ್, ಡಕಾಯಿತಿ ಇಲ್ಲವೇ ಇಲ್ಲ. ಚಿಕ್ಕ ಸೈಜಿನ ಪೊಯ್ಯೆ ಕಳ್ಳರು, ಮರಗಳ್ಳರು ಬಿಟ್ಟರೆ ಕಳಸದ ಜನರ ಮೇಲೆ ಇರುವುದು ಜಾಸ್ತಿ ಸಿವಿಲ್ ಕೇಸ್ ಗಳೇ. ಹಾಗಾಗಿ ಕಳಸ ಠಾಣೆಗೆ ದೊಡ್ಡ ಆದಾಯದ ಮೂಲಗಳಿಲ್ಲ. ಪೊಯ್ಯೆ ಕಳ್ಳರು ಏನಾದರೂ ಕೊಟ್ಟರೆ ಅದೇ ಪರಮ ಪ್ರಸಾದ. ಇನ್ನು ಕಳಸ ಠಾಣಾ ವ್ಯಾಪ್ತಿಯಲ್ಲಿ ಬರುವ ಇನ್ನೂರಕ್ಕೂ ಹೆಚ್ಚು ಹೋಂಸ್ಟೇಗಳು ಮತ್ತು ಪೋಲಿಸರು "ಒಳ್ಳೆದ್ರಲ್ಲಿ" ಇದ್ದಾರೆ ಎಂದು ತಿಳಿದುಬಂದಿದೆ.
ಹಾಗೆ ಕಳಸ ಪೋಲಿಸ್ ಠಾಣೆಗೆ ಹೊರಗಿನಿಂದ ದೊಡ್ಡ ಆದಾಯದ ಮೂಲ ಇಲ್ಲದಿದ್ದರೂ ಕೆಲವು ಪೋಲಿಸರು ಮಾತ್ರ ಕಳಸ ಠಾಣೆಯಲ್ಲಿ ಬೆಳ್ಳಿ ಹಬ್ಬ, ಸ್ವರ್ಣ ಮಹೋತ್ಸವ, ಪ್ಲಾಟಿನಂ ಜ್ಯುಬಿಲಿ ಆಚರಿಸುವ ಹಂತದಲ್ಲಿದ್ದಾರೆ.
ಯಾಕೆಂತ ಗೊತ್ತಿಲ್ಲ. ಕಳಸ ಠಾಣೆ ಒಂದು ಮೂಲೆಯಲ್ಲಿ ಇರುವ ಕಾರಣ ಚಿಕ್ಕಮಗಳೂರು ಎಸ್.ಪಿ ಗಮನ ಈ ಕಡೆ ಜಾಸ್ತಿ ಬೀಳದಿರುವುದೇ ಕಳಸ ಪೋಲಿಸರ ಸಿಲ್ವರ್ ಜ್ಯುಬಿಲಿಗಳಿಗೆ ಕಾರಣ ಆಗಿರ ಬಹುದು. ಅದರಲ್ಲೂ ಒಬ್ಬ ಪೋಲಿಸ್ ಅಂತೂ ಕಳಸ ಠಾಣೆಯಲ್ಲೇ ತನ್ನ ಉದ್ಯೋಗ ಶುರು ಮಾಡಿದ್ದು ಈಗ ಇಪ್ಪತ್ತೈದು ವರ್ಷಗಳ ನಂತರವೂ ಸನ್ಮಾನ್ಯರ ಸೇವೆ ಕಳಸ ಠಾಣೆಗೇ ಮೀಸಲಾಗಿರುವುದು ಪೋಲಿಸ್ ಇಲಾಖೆಯಲ್ಲಿ ಸರ್ವಕಾಲಿಕ ದಾಖಲೆಯಾಗಿದೆ.
ಇನ್ನಾದರೂ ಸನ್ಮಾನ್ಯ ಪೋಲಿಸರ ಅಪರಿಮಿತ ಸೇವೆಯನ್ನು ಪರಿಗಣಿಸಿ ಅವರನ್ನು ಇನ್ನೂ ಹೆಚ್ಚಿನ ಸೇವೆ ಮಾಡಲು ಕೈತಲಿನ ಬಾಳೂರು ಠಾಣೆಗೋ, ಬಣಕಲ್ ಠಾಣೆಗೋ ಕಳಿಸಿದರೆ ಒಳ್ಳೆದು. ಈ ವಿಷಯ ಎಲ್ಲಿಯಾದರೂ ಐಜಿಗೆ ಮಿನಿ ಗೊತ್ತಾದರೆ ಅವರು ಕ್ಲಾಸ್ ತಗೋಳ್ತಾರೆ ಗ್ಯಾರಂಟಿ. ಅವಧಿ ಮೀರಿದ ಪೋಲಿಸರನ್ನು ಕಳಸದಿಂದ ಕಳಿಸಿ!
...............................
ಸಣ್ಣ ಗೆಲುವನ್ನೂ ಅನುಭವಿಸಿ
ಸಣ್ಣ ಗೆಲುವನ್ನೂ ಸಂಭ್ರಮಿಸುವ ಗುಣ ಕೆಲವರದ್ದಾದರೆ, ದೊಡ್ಡ ಗೆಲುವು ಸಿಕ್ಕರೂ ಅದಕ್ಕೆ ಬೆಲೆ ಕೊಡದೆ ಅದನ್ನು ಸಂಭ್ರಮಿಸಿ ಗೌರವಿಸದೆ, ಅದರಲ್ಲಿ ತೃಪ್ತಿಯನ್ನೂ ಕಾಣದೆ ಧಿಕ್ಕರಿಸುವ ಗುಣ ಇನ್ನು ಕೆಲವರದ್ದು. ನಾವು ಅತೀ ತಿಳುವಳಿಕೆಯುಳ್ಳವರು, ತುಂಬ ಓದಿದವರು ನಮಗಿದಾವುದೂ ಒಂದು ಲೆಖ್ಖವೇ ಅಲ್ಲ ಅನ್ನುವವರು ಯಾವುದನ್ನೂ ಸಂಭ್ರಮಿಸುವುದಿಲ್ಲ.ಇತರರ ಗೆಲುವನ್ನು ಹಾರೈಸುವುದೂ ಇಲ್ಲ.ಇಲ್ಲಿ ಜಾತಿ ಪ್ರಶ್ನೆ ಬರುವುದಿಲ್ಲ.ನಾನು ಅನ್ನುವ ಅಹಂ ಕೆಳಗಿಳಿಸಿ ನೋಡಿದಾಗ ಚಿಕ್ಕ ಚಿಕ್ಕ ಗೆಲುವನ್ನು ಕೂಡಾ ಸಂಭ್ರಮಿಸಬಹುದು.. ಸಣ್ಣ ಗೆಲುವನ್ನು ತಾತ್ಸಾರ ಮಾಡುವ ಪಂಡಿತರ ಬಳಿ ಯಾವ ದೇವಿಯೂ ಯಾವ ದೇವರೂ ನಿಲ್ಲಲಾರ.. ಯಾಕೆಂದರೆ ದೇವನು ಅವನೊಳಗೇ ಇದ್ದಾನೆ ಎಂದು ಅವ ತಿಳಿಯಲಾರದಷ್ಟು ಅಹಂ ಹೊಂದಿದಾಗ ಸಣ್ಣ ಗೆಲುವು ಕಣ್ಣಿಗೆ ಕಾಣುವುದು ಬಿಡಿ ಇತರರನ್ನು ಲೇವಡಿ ಮಾಡಲು ತೊಡಗುತ್ತಾರೆ.. ಇದೇ ಸಂದರ್ಭಕ್ಕೆ ಕಾಯುತ್ತಿರುತ್ತಾನೆ ಆ ಶನೀಶ್ವರ ಕೂಡಾ ಅತೀ ಉತ್ತುಂಗದಲ್ಲಿದ್ದೇವೆ ಅನ್ನುವವರ ಕೆಳಗಿಸಲು... ನಂತರ ನಿಧಾನಕ್ಕೆ ತಲೆ ತಗ್ಗಲು ಶುರುವಾಗುತ್ತದೆ... ತಲೆಯನ್ನು ತಗ್ಗಿಸಲು ಹೆಣ್ಣಿಗೆ ಹೆಣ್ಣಿಗೆ ಅಂತ ಮಾತ್ರ ಹೇಳುತ್ತಾ ಬಂದರು.. ಕೆಲವೊಮ್ಮೆ ಪರಿಸ್ಥಿತಿ ಅನಿವಾರ್ಯ ಆದರೆ ಎರಡೂ ಬದಿಯೂ ತಲೆ ತಗ್ಗಿಸಿ ಬೇಕಾಗುತ್ತದೆ...ಇದೇ ಸತ್ಯ.. ಆಗಿರುತ್ತದೆ ಎನ್ನುತ್ತಾ ನನ್ನ ಈ ಕಿರು ಲೇಖನ ನಿಮಗಾಗಿ ಹಾಗೂ ನನಗಾಗಿ ಹಾಗೂ ಎಲ್ಲರಿಗಾಗಿ...
-ಶ್ರೀಮತಿ ಶಾಂತಾ ಕುಂಟಿನಿ
ಓದುಗರ ಗಮನಕ್ಕೆ: ಪಟ್ಲೆರ್ ನ್ಯೂಸ್ ಪತ್ರಿಕೆಯು ಜಾಲತಾಣದಲ್ಲಿ ವೆಬ್ ಸೈಟ್ ಮೂಲಕ ಬರುತ್ತಿರುವುದು ಎಲ್ಲಾ ಓದುಗರಿಗೂ ತಿಳಿದಿರುವ ವಿಷಯ. ಪಟ್ಲೆರ್ ನ್ಯೂಸ್ RNI ರಿಜಿಸ್ಟ್ರೇಷನ್ ಹೊಂದಿದ್ದು ಈಗ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತಿದೆ. ಸೂರಜ್ ಪಟೇಲ್ ಎರಡೂ ವಿಭಾಗಗಳಲ್ಲಿ ಸಂಪಾದಕರಾಗಿದ್ದು ಅವರಿನ್ನೂ ಜೀವಂತ ಇರುವ ಕಾರಣ 7996688709 ನಂಬರಿನ ಮೂಲಕ ಅವರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸಬಹುದಾಗಿದೆ. ಆದರೂ ಕೆಲವು ಪೋಕ್ರಿಗಳು, ಹೆಬ್ಬೆಟ್ಟುಗಳು ವೆಬ್ ಸೈಟಿನ ಕಾಲಂ ರೈಟರ್ ಗಳು ವೆಬ್ ಸೈಟ್ ಗೆ ನ್ಯೂಸ್ ಕೊಡುವವರು, ವರದಿಗಾರರು ಎಂದು ಅವರಿಗೆ ಬೆದರಿಕೆ ಹಾಕುವುದು, ಕಿರಿಕಿರಿ ಮಾಡುವುದು ಕಂಡು ಬಂದಿದೆ. ಕೆಲವು ಅಧಿಕ ಪ್ರಸಂಗಿಗಳು ಜಾಹೀರಾತುದಾರರಿಗೂ ಕಾಲ್ ಮಾಡಿ ಬೆದರಿಕೆ ಹಾಕಿದ ಘಟನೆಗಳು ನಡೆದಿವೆ. ಇದೆಲ್ಲ ಯಾವ ಪ್ರಯೋಗಗಳು ಪ್ರಯೋಜನಕ್ಕೆ ಬರಲ್ಲ. ನಿಮ್ಮ ಯಾವುದೇ ಗಲಾಟೆ, ಡಿಶುಂ ಡಿಶುಂ, ಕುಸ್ತಿಗಿಸ್ತಿ ಇದ್ದರೂ ಅದು ನನ್ನೊಟ್ಟಿಗೆ ಮಾತ್ರ ಇರಲಿ. ಅವರೊಟ್ಟಿಗೆ ಬೇಡ. ಅವರು ಪೋಲಿಸ್ ಗೆ ಹೇಳ್ತಾರೆ. ನಾನು ಯಾರಿಗೂ ಹೇಳಲ್ಲ. ನಾವಿಬ್ಬರೂ ಇಡೀ ನೈಟ್ ನೈಂಟಿ ನೈಂಟಿ ಮಾತಾಡುವ. ನಾನು ಯಾರಿಗೂ ಹೇಳಲ್ಲ. ನನಗೂ ಬಯ್ದು ಬಿಡಿ,ನನ್ನ ಹೆಂಡ್ತಿಗೂ ಬಯ್ದು ಬಿಡಿ. ಸಹಿಸಿಕೊಳ್ಳುತ್ತೇವೆ
Call: 7996688709 SOORAJ PATEL
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment