ಹಾಗೆಂದು ಪ್ರತೀ ಪಂಚಾಯ್ತಿಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಪೊಣ್ಣು ಡ್ರೈವರೇ ಆಗಬೇಕೆಂದು ಸರ್ಕಾರದ ಮಹಿಳಾ ಮೀಸಲಾತಿ ಇದೆ ಮತ್ತು ಅದು ಕರ್ನಾಟಕ ಸ್ಟೇಟಿನ ಪ್ರತೀ ಪಂಚಾಯ್ತಿಯಲ್ಲೂ ಜಾರಿಯಲ್ಲಿದೆ. ಪೊಣ್ಣೇ ಡ್ರೈವರ್, ಅದರಲ್ಲಿ ಎರಡು ಮಾತಿಲ್ಲ. ಆದರೆ ಅಜ್ಜಾವರ ಪಂಜಾಯ್ತಿ ಮಾತ್ರ ದೊಡ್ಡ ಆಂಧ್ರದಲ್ಲಿ ಇದ್ದ ಹಾಗೆ ವರ್ತಿಸುತ್ತಿದೆ. ಕರ್ನಾಟಕದ ಕಾನೂನನ್ನು ಅಜ್ಜಾವರ ಪಂಜಾಯ್ತಿ ಕ್ಯಾರೇ ಮಾಡಲ್ಲ ಯಾಕೆಂದರೆ ಇಲ್ಲಿನ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಪೊಣ್ಣು ಡ್ರೈವರ್ ಇಲ್ಲ. ಆಣ್ ಡ್ರೈವರ್. ಆಣ್ ಡ್ರೈವರ್ ನಲ್ಲಿ ಈ ಬಗ್ಗೆ ಕೇಳಿದರೆ "ಕೂಡಿದ್ರೆ, ತಾಕತ್ ಇದ್ದರೆ, ಅಂಥ ಗಟ್ಸ್ ಇದ್ದರೆ ನನ್ನನ್ನು ಕೆಲಸದಿಂದ ತೆಗೆಯಿರಿ ನೋಡೋಣ" ಎಂದು ಸವಾಲು ಹಾಕುತ್ತಾನೆ. ಲೇಡಿಸ್ ಸೀಟಿನಲ್ಲಿ ಕುಂತಿರುವವನ ಸವಾಲನ್ನು ಹೇಗೆ ತಾನೇ ಸ್ವೀಕರಿಸಲಿ? ಇಷ್ಟಕ್ಕೂ ಲೇಡಿಸ್ ಸೀಟಿನಲ್ಲಿ ಕೂರುವ ಗಂಡಸಿನ ಹಾಗೆ ಕಾಣುವವರು ಯಾರು?ಭೀಷ್ಮ ಅದಕ್ಕೆ ಕುರುಕ್ಷೇತ್ರದಲ್ಲಿ ಬಿಲ್ಲು ಬಾಣ ಸರೆಂಡರ್ ಮಾಡಿದ್ದು.
ಇದು ಅಜ್ಜಾವರ. ಸುಳ್ಯ ಸಿಟಿಯ ನೀಯರೆಸ್ಟ್ ಮತ್ತು ಡಿಯರೆಸ್ಟ್ ಗ್ರಾಮ. ಇಲ್ಲಿನ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಪೊಣ್ಣು ಡ್ರೈವರ್ ಇಲ್ಲ.ಈ ವಾಹನದ ಡ್ರೈವರ್ ಕೆಲಸಕ್ಕೆ ಮಹಿಳಾ ಮೀಸಲಾತಿ ಇದೆ. ಅದು ರೂಲ್ಸ್. ಆದರೆ ಅದ್ಯಾರೋ ಪಂಚಾಯ್ತಿಯ ಮಾಜೀ ಅಧ್ಯಕ್ಷರೊಬ್ಬರ ಇನ್ ಫ್ಲೂಯೆನ್ಸ್ ಮೇರೆಗೆ ಒಬ್ಬ ಗೋಣ ತಂಕರ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಡ್ರೈವರ್ ಆಗಿ ಸಂಬ್ಳ ಕಿಸೆಗೆ ಹಾಕುತ್ತಿದ್ದಾನೆ. ಈ ಬಗ್ಗೆ ಅವನಲ್ಲಿ ಕೇಳಿದರೆ ಒಂಜಿ ಧಂ ಪೆದಂಬೇ ಮಾತಾಡುತ್ತಾನೆ. ತಾಕತ್ ಇದ್ದರೆ ಅಂತೆಲ್ಲ ಬಗುಲುತ್ತಾನೆ. ಇದು ಅಕ್ಷಮ್ಯ. ಹೋಗಲಿ ಪಂಚಾಯಿತಿಗೆ ಒಬ್ಬ ಪಿಡಿಒ ಅಂತ ಇರುತ್ತಾನಲ್ಲ ಅವರಲ್ಲಿ ಕೇಳಿದರೆ ಅವರಿಗೆ ಕೇಳಲ್ಲ,ಕಾಣಲ್ಲ, ಮಾತಾಡಲ್ಲ. ಇನ್ನು ಪಂಚಾಯತ್ ಬಾಡಿ ಈ ಬಗ್ಗೆ ಮಂಡೆ ಬೆಚ್ಚ, ತಗಡ್ ಬೆಚ್ಚ ಮಾಡಲ್ಲ. ಈ ಒಂದು ಅನ್ಯಾಯದ ವಿರುದ್ಧ ಇಡೀ ಅಜ್ಜಾವರ ಪಂಜಾಯ್ತಿ ವ್ಯಾಪ್ತಿಯ ಮಹಿಳಾ ಮಣಿಗಳು ಬಿಪಿ ಏರಿಸಿಕೊಂಡಿದ್ದು ಬೇಗದಲ್ಲೇ ತ್ಯಾಜ್ಯ ವಿಲೇವಾರಿ ವಾಹನದ ಡ್ರೈವರನನ್ನು ಕುತ್ತ ಕೂರಿಸಿ ಸೀರೆ, ಕುಪ್ಪಸ,ಲಂಗ, ಕಾಜಿ,ಕೆಬಿತ್ತ,ಮೂಂಕುದ, ಕಾರ್ದ,ಬೆರೆಲ್ದ ಕೊಡುವ ಬಗ್ಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆಣ್ ಡ್ರೈವರ್ ಇನ್ನು ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹತ್ತುವುದು ಡೇಂಜರ್ ಮಾರಾಯ್ರೆ. ಸಿಕ್ಕಿ ಬಿದ್ದರೆ ಸೀರೆ ಕುಪ್ಪಸ ಗ್ಯಾರಂಟಿ.
ಇನ್ನು ಅಜ್ಜಾವರದ ಉಗ್ರಾಣಿ ದೇವೆರ್ ಹಾಗೆಲ್ಲ ಬ್ರಿಟಿಷರ ಕಂಡೀಷನ್ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಜನರು ಪಾಪ ಏನೋ ಕಷ್ಟಕ್ಕೆ ಇರಲಿ ಎಂದು ಸರಕಾರದ ಸವಲತ್ತು ಪಡೆಯಲು ಪಡೆಯಲು ಬಂದರೆ ಅದಕ್ಕೆ ಕೋಲು ಹಾಕುವುದು, ಫಿಟ್ಟಿಂಗ್ ಇಡೋದು ಸರಿ ಅಲ್ಲ ಅಂತ ಸಾರ್ವಜನಿಕರ ಅಭಿಪ್ರಾಯ. ಕಾನೂನು ಪ್ರಕಾರ......ಅಂತ ಈಗ ಯಾವುದೂ ಇರಲ್ಲ. ಸ್ವಲ್ಪ ಅಡ್ಜಸ್ಟ್ ಮೆಂಟ್ ಮಾಡಿಯೇ ಮಾಡಬೇಕು. ಪಾಪದವರ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಉಗ್ರಾಣಿ ದೇವರು ಮಾಡಬಾರದು. ಉಗ್ರಾಣಿ ಉಗ್ರಾಣಿಯೇ. ಉಗ್ರಾಣಿ ತಹಶೀಲ್ದಾರನಂತೆ, ಅಸಿಸ್ಟೆಂಟ್ ಕಮಿಷನರನಂತೆ, ಡಿಸ್ಟ್ರಿಕ್ಟ್ ಕಲೆಕ್ಟರನಂತೆ ವರ್ತಿಸಬಾರದು. ಹಾಗೇನಾದರೂ ವರ್ತಿಸಿದರೆ ಜನರೇ ಉಗ್ರಗಾಮಿ ಉಗ್ರಾಣಿ ಅಂತ ಕರೆಯುತ್ತಾರೆ. ಹಾಗೆಂದು ಅಜ್ಜಾವರದ ಉಗ್ರಾಣಿ ಏನು ಸತ್ಯ ಹರಿಶ್ಚಂದ್ರ ಫ್ಯಾಮಿಲಿಯಿಂದ ಬಂದವನಲ್ಲ. 94c, ಅಕ್ರಮ ಸಕ್ರಮದಡಿಯಲ್ಲಿ ಉಗ್ರಾಣಿ ದೇವರು ತನ್ನ ಉಗ್ರಾಣ ತುಂಬಿಸಿಕೊಂಡಿರುವ ಬಗ್ಗೆ ಕತೆಗಳಿವೆ. ಬಾಕಿ ವಿಷಯಗಳಲ್ಲಿ ಉಗ್ರಾಣಿ ದೇವೆರ್ ಎಷ್ಟೆಷ್ಟು ನೈವೇದ್ಯ ಸ್ವೀಕರಿಸುತ್ತಾರೆ ಎಂಬ ಬಗ್ಗೆಯೂ ಲಿಸ್ಟ್ ಇದೆ. ಆದೆಲ್ಲ ವಿಷಯ ಈಗ ಬೇಡ. ಈಗ ಪೈನ್ ಕಿಲ್ಲರ್ ಮಾತ್ರ ಸಾಕು. ಅವಶ್ಯಕತೆ ಬಿದ್ದರೆ, ಬ್ಲಾಕ್ ಇದ್ದರೆ ಮತ್ತೆ ಇಕೋ ಟೆಸ್ಟ್ ಮಾಡಿ ಸ್ಟಂಟ್ ಹಾಕುವ ಕೆಲಸ ಮಾಡುವ.

..............................................
ಶಾಂತಾ ಕುಂಟಿನಿ ಇವರಿಗೆ ಸುವರ್ಣ ಪಥ ಸಂಭ್ರಮದಲ್ಲಿ ಪುರಸ್ಕಾರ
15/12/24 ರಂದು ಎಸ್ ಡಿ ಎಂ ಲಾ ಕಾಲೇಜು ಮಂಗಳೂರು ಇದರ ಸುವರ್ಣ ಪಥ ಸಂಭ್ರಮದ ಕಾರ್ಯಕ್ರಮಕ್ಕಾಗಿ ಶ್ರೀಮತಿ ಶಾಂತಾ ಕುಂಟಿನಿ ಇವರು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ.ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದ ಉಪಸ್ಥಿತಿಯೊಂದಿಗೆ ಎಸ್ ಡಿ ಎಂ ಲಾ ಕಾಲೇಜು ಇದರ ಪ್ರಿನ್ಸಿಪಾಲ್ ಹಾಗೂ ಶಿಕ್ಷಕ ವೃಂದದವರ ಕೋರಿಕೆಯ ಮೇರೆಗೆ 50ರ ಸುವರ್ಣ ಪಥ ಸಂಭ್ರಮದ ಹಾಡಿನ ಸಾಹಿತ್ಯವನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.. ಅಂತೆಯೇ ಸುವರ್ಣ ಮಹೋತ್ಸವ ಸಮಾರಂಭದ ದಿನದಂದು ಶ್ರೀಮತಿ ಶಾಂತಾ ಕುಂಟಿನಿ ಇವರಿಗೆ ವೇದಿಕೆಯಲ್ಲಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸುವರ್ಣ ಪಥ ಸಂಭ್ರಮದ ಫಲಕವನ್ನು ನೀಡಿ ಸನ್ಮಾನಿಸಿದರು..ಈ ಸಂದರ್ಭದಲ್ಲಿ
ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಡಾ ತಾರಾನಾಥ್, ಹೆಸರಾಂತ ವಕೀಲರಾದ ಡಾ.ಶ್ರೀ ಮಹೇಶ್ ಕಜೆ, ಎಸ್ ಡಿ ಎಂ ಲಾ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಸತೀಶ್ಚಂದ್ರ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಉದಯ್ ಮುಳಿಯ, ಪೋಷಕರ ಶಿಕ್ಷಕರ ಸಂಘದ ಪುರುಷೋತ್ತಮ್ ಭಟ್, ವಕೀಲರಾದ ರಾಘವೇಂದ್ರ ರಾವ್, ಸಾಂಸ್ಕೃತಿಕ ಸಂಘದ ಸೌಜನ್ಯ ಹೆಗ್ಡೆ, ವಕೀಲರಾದ ದಿನಕರ್ ಶೆಟ್ಟಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ.ಡಾ.ಟಿ.ಶಾಮ ಭಟ್, ಬೆಳ್ತಂಗಡಿಯ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ಇನ್ನಿತರರು ಉಪಸ್ಥಿತರಿದ್ದರು..
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment