ಮೊನ್ನೆ ಸೊಸೈಟಿ ಎಲೆಕ್ಷನ್ ದಿನ ದಾನೆಂಬೆ..ದಾನೆಂಬೆ.. , ಹೊಯ್ ಕೈ ಎಲ್ಲಾ ಆಗಿದೆ. ಬಿಜೆಪಿ ಮತ್ತು ಕಾಂಗ್ರೆಸಿಗರು ತಗಡ್ ಬೆಚ್ಚ ಮಾಡಿಕ್ಕೊಂಡು ಡಿಶುಂ ಡಿಶುಂ ಶುರುವಿಟ್ಟುಕೊಂಡಿದ್ದರು. ಎಲ್ಲಾ ಮುಗಿದು ನೋಡುವಾಗ ದೇಶಭಕ್ತರು ಹನ್ನೊಂದು ಸೀಟಲ್ಲಿ ಜೈ ಅಂದರೆ ಕಾಂಗ್ರೆಸಿಗರಿಗೆ ರುಚಿಗೆ ತಕ್ಕ ಒಂದು ಸೀಟು. ಇದು ಬೆಳ್ಳಾರೆ ಸೊಸೈಟಿ ಕತೆ.
ಹಾಗೆಂದು ಕಾಂಗ್ರೆಸ್ ಬೆಳ್ಳಾರೆ ಸೊಸೈಟಿಯನ್ನು ಕಳೆದುಕೊಳ್ಳಲು ಕಾರಣಗಳಿವೆ. ಮಿತಿಮೀರಿದ ಅಣ್ಣಾ ಸಂಸ್ಕೃತಿ, ಸರ್ವಾಧಿಕಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕೀಯ, ಅಹಂಕಾರ ಇವುಗಳಿಂದ ಜನ ರೋಸಿ ಹೋಗಿದ್ದರು. ಕಾಂಗ್ರೇಸಿಗರಿಗೆ ಬೆಚ್ಚ ನೀರು ಕಾಯಿಸಲು ಜನ ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ಆರ್.ಕೆ ಭಟ್, ಪದ್ಮನಾಭ ಶೆಟ್ಟಿ ಮುಂತಾದ ದೇಶಭಕ್ತರು ಸೊಸೈಟಿ ಗೆಲ್ಲಲು ಕಂಕಣ ಕಟ್ಟಿ ನಿಂತರು.ಈಗ ಟೈಮ್ ಆಗಿದೆ.
ಆವತ್ತು ಸೊಸೈಟಿ ಎಲೆಕ್ಷನ್ ಗೆ ಪ್ರಚಾರ ಹೊರಟಾಗಲೂ ದೇಶಭಕ್ತರು ಕಾಂಗ್ರೆಸ್ ಆಡಳಿತ ಮಂಡಳಿಯ ಲೋಪದೋಷಗಳನ್ನೇ ಜನರ ಮುಂದಿಟ್ಟರು. ಕೋಟಿ ತನಕ ಸಾಲ ಪಡೆದ ಟೈಟಾನಿಕ್ ಕಂಪೆನಿಗಳ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿ ಕೊಡಲಾಯಿತು. ಕಾಂಗ್ರೇಸಿಗರ ತಪ್ಪುಗಳನ್ನು ಎತ್ತಿ ಎತ್ತಿ ಸದಸ್ಯರಿಗೆ ತೋರಿಸಿದ ಕಾರಣ ಕಾಂಗ್ರೇಸಿಗರು ಮನೆಗೆ ಹೋಗುವುದು ಅನಿವಾರ್ಯವಾಯಿತು. ಇನ್ನು ಕಾಂಗ್ರೆಸಿಗರು ಮಾಡಿದ ಇನ್ನೊಂದು ದೊಡ್ಡ ತಪ್ಪು ಏನೆಂದರೆ ಸೊಸೈಟಿಯಲ್ಲಿ ಹನ್ನೆರಡು ಸೀಟು ಇರುವಾಗ ಮತ್ತು ಸದಸ್ಯರ ಪಟ್ಟಿಯಲ್ಲಿ ಸಿಂಹ ಪಾಲು ಇರುವ ಗೌಡ ಸಮುದಾಯದ ಒಬ್ಬೇ ಒಬ್ಬ ಗೌಡ್ರಿಗೆ ಕಾಂಗ್ರೆಸ್ ಸೀಟೇ ಕೊಡಲಿಲ್ಲ. 187ರ ಹತ್ರ ಹತ್ರ ಗೌಡ ಸದಸ್ಯರು ಸೊಸೈಟಿಯಲ್ಲಿ ಇದ್ದರೂ ಕಾಂಗ್ರೇಸಿಗರು ಅವರನ್ನು ಬಿಟ್ಟೇ ಬಿಟ್ಟರು. ಆದರೆ ದೇಶಭಕ್ತರು ನಾಲ್ಕು ಸ್ಥಾನಗಳಿಗೆ ಗೌಡ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ನಾಲ್ವರೂ ಗೆದ್ದು ಬೀಗಿದ್ದಾರೆ. ಸೊಸೈಟಿಯಲ್ಲಿ 1019ಸದಸ್ಯರಿಗೆ ವೊಟಿಂಗ್ ರೈಟ್ ಇದ್ದು ಅದರಲ್ಲಿ ಅಂದಾಜು 900 ಸದಸ್ಯರು ವೊಟಿಂಗ್ ಮಾಡಿದ್ದಾರೆ. 800 ರ ಮೇಲೆ ಹೋದರೆ ತಮ್ಮ ಡಿಕ್ಕಿಗೆ ನೀರು ಬರುತ್ತದೆ ಎಂದು ಕಾಂಗ್ರೆಸಿಗರಿಗೆ ಗೊತ್ತೇ ಇತ್ತು. ಅದಕ್ಕೆ ಎಲೆಕ್ಷನ್ ದಿನ ಅಷ್ಟು ತಗಡ್ ಬೆಚ್ಚ ಆಗಿ ದೇಶಭಕ್ತರ ಜೊತೆ ಡಿಶುಂ ಡಿಶುಂ ಮಾಡಿದ್ದು.
ಹಾಗೆಂದು ಎಲೆಕ್ಷನ್ ಪ್ರಚಾರ ಸಮಯದಲ್ಲಿ ದೇಶಭಕ್ತರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಕ್ಕೆ ಕಾಂಗ್ರೇಸಿಗರು ಗರಂ ಆಗಿದ್ದರು. ಇನ್ನು ಚುನಾವಣೆ ದಿನ ಕೂಡ ವೊಟಿಂಗ್ ರನ್ ರೇಟ್ 800ರ ಗಡಿ ದಾಟಿದ ಮೇಲೆ ಕಾಂಗ್ರೆಸಿಗರ ತಾಳ್ಮೆ ತಪ್ಪಿತು. ಅದಕ್ಕೆ ಆರ್.ಕೆ ಮೇಲೆ ಏರಿ ಹೋದದ್ದು. ಹಾಗೆಂದು ಸೊಸೈಟಿಯಲ್ಲಿ ಕೋಟಿ ತನಕ ಸಾಲ ತೆಗೆಯುವುದು ದೊಡ್ಡ ಅಪರಾಧವಲ್ಲ ಮತ್ತು ಅದು ಎಲೆಕ್ಷನ್ ಸೋಲುವ ಕಾರಣವೂ ಅಲ್ಲ. ಸೊಸೈಟಿಯ ಕಾನೂನು ಚೌಕಟ್ಟಿನ ಒಳಗೆ ಅವರು ಸಾಲ ತೆಗೆದಿದ್ದರೆ ಅದನ್ನು ಉಲ್ಟಾ ಮಾಡಿ ದೇಶಭಕ್ತರು ಅಪಪ್ರಚಾರ ಮಾಡಿದ್ದಕ್ಕೆ ಕಾಂಗ್ರೇಸಿಗರಿಗೆ ಬೆಚ್ಚ . ಹಾಗೆಂದು ಏಕ ವ್ಯಕ್ತಿಗೆ ಒಂದು ಕೋಟಿ ಸಾಲ ಕೊಡಲು ಸೊಸೈಟಿ ಯಾರ ಅಪ್ಪನ ಆಸ್ತಿಯೂ ಅಲ್ಲ. ಪ್ರಾಪರ್ಟಿ ಇದ್ರೆ, ಎಲಿಜಿಬಲ್ ಆಗಿದ್ದರೆ ಮೂವತ್ತು ಲಕ್ಷ, ಮೂವತ್ತು ಲಕ್ಷ ಮೂರು ಜನ ತೆಗೆದರೆ ದೊಡ್ಡ ಆನೆ ಕುದುರೆ ಆಗಲ್ಲ. ರಿಕವರಿ ಟೈಟ್ ಮಾಡಿದರೆ ರಿಕವರಿ ಆಗಲೇ ಬೇಕು. ದೇಶಭಕ್ತರು ಅದನ್ನೇ ದೊಡ್ಡ ರಾಮಾಯಣ, ಮಹಾಭಾರತ ಮಾಡಿದ್ದು ತಪ್ಪು ಎಂಬುದು ಮನೆಗೆ ವಾಪಾಸಾದ ಕಾಂಗ್ರೆಸಿಗರ ಅಳಲು. ಬಾಕಿ ವಿಷಯಗಳೇನೇ ಇರಲಿ ಈಗ ಆರ್.ಕೆ ಭಟ್ ಸೊಸೈಟಿಗೆ ಹೊಸ ಆಡಳಿತ ತಂದಿದ್ದಾರೆ. ತೂತು ಬಿದ್ದಿರುವ ಬೆಳ್ಳಾರೆ ಸೊಸೈಟಿ ಎಂಬ ಟೈಟಾನಿಕನ್ನು ದಢ ದಢ ಅಂತ ದಡ ಸೇರಿಸುವ ಜವಾಬ್ದಾರಿ ದೇಶಭಕ್ತರ ಮೇಲಿದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment