ಈಗಾಗಲೇ ಗಾಂಜಾ ಒಂದು ವಿಕೆಟ್ ತೆಗೆದಾಗಿದೆ. ಯಾವಾಗ ಗಾಂಜಾ ಎಂಬ ಪಿಡುಗು ಯಾವಾಗ ನಗರ ಬಿಟ್ಟು ಹಳ್ಳಿ ಕಡೆ ಇಳಿಯಿತೋ ಯುವ ಜನತೆ ಗಾಂಜಾವನ್ನು ಅಪ್ಪಿ ಮುದ್ದಾಡಿದೆ. ಪರಿಣಾಮ ಗಂಭೀರವಾಗಿದೆ. ಹಿಂದೆಲ್ಲ ಕುಡಿದು ಗಲಾಟೆ ಮಾಡಿದ, ಕುಡಿದು ಕಡಿದ, ಕುಡಿದು ಕೊಂದ ಎಂದು ಕಿವಿಗಳು ಕೇಳಿದ್ದುಂಟು. ಈಗ ಕುಡಿತ ಸಾಕಾಗಲ್ಲ ಯುವ ಜನತೆಗೆ. ಅದಕ್ಕೆ ಒಂದು ಧಮ್ ಗಾಂಜಾ. ಕಡಿಯಲು,ಕೊಲ್ಲಲು ಸಾಕು.
ಓ ಮೊನ್ನೆ ತಾನೇ ಬಿಳಿನೆಲೆಯಲ್ಲಿ ಗಾಂಜಾ ಘಾಟಿಗೆ ಒಂದು ಬಲಿಯಾಗಿದೆ. ಬಿಳಿನೆಲೆ, ಚೇರು, ಕೈಕಂಬ, ಏನೆಕಲ್ ಪರಿಸರದಲ್ಲಿ ಗಾಂಜಾ ಪುಗೆ ಜಾಸ್ತಿಯಾಗುತ್ತಿದ್ದು ಗಾಂಜಾ ಮೆಂಬರ್ಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಿಂದೆ ಚೇರು ಎಂಬಲ್ಲಿ ಗಾಂಜಾ ಬೆಳೆದು ಸಿಕ್ಕಿ ಬಿದ್ದವನನ್ನು ಪೋಲಿಸರು 'ಪ್ರಗತಿ ಪರ ಕೃಷಿಕ' ಕೋಟಾದಡಿ ಸನ್ಮಾನ ಮಾಡಿ ಜೈಲಿಗೆ ಕಳಿಸಿದ್ದರು. ಇದೀಗ ಗಾಂಜಾ ಅಮಲಿನಲ್ಲಿ ಮರ್ಡರ್ ಕೂಡ ಆಗಿ ಹೋಗಿದೆ.
ಹಾಗೆಂದು ಬಿಳಿನೆಲೆ, ಏನೆಕಲ್ ಪರಿಸರದಲ್ಲಿ ಗಾಂಜಾ ಕ್ಲಬ್ಬುಗಳು ಹುಟ್ಟಿಕೊಂಡಿದೆ. ನೈಟ್ ಭೂತ ವಾಕಿಂಗ್ ಹೋಗುವ ಟೈಮಲ್ಲೂ ಇವರು ಪುಗೆ ಬಿಡುತ್ತಾ ಇರುತ್ತಾರೆ. ಬಿಳಿನೆಲೆಯ ಒಂದು ಗೂಡಂಗಡಿ ನೈಟ್ ಒಂದು ಗಂಟೆ ತನಕ ತೆರೆದು ಗ್ರಾಹಕರಿಗೆ ಸರ್ವೀಸ್ ಕೊಡುತ್ತಿದೆ ಎಂದು ತಿಳಿದುಬಂದಿದೆ. ಆದರೆ ಒಂದು ಗಂಟೆ ರಾತ್ರಿ ತನಕ ಗೂಡಂಗಡಿಯಲ್ಲಿ ಅದೇನು ಬೇಯಿಸಿ ಕೊಡಬಹುದು, ಅದೆಷ್ಟು ಬೀಡಿ ಸಿಗರೇಟು ಸೇದಬಹುದು. ಬಿಳಿನೆಲೆಯ ಈ ಗೂಡಂಗಡಿ ಗೂಂಡಾಂಗಡಿ ಆಗುವ ಮೊದಲು ನೈಟ್ ರೌಂಡ್ಸ್ ಪೋಲಿಸರು ಒಮ್ಮೆ ಜೀಪು ನಿಲ್ಲಿಸಿ "ಕತ್ತಲೆ ಆತೀಜ" ಎಂದು ಕೇಳುವುದು ಒಳ್ಳೆಯದು. ಹಾಗೆಂದು ಬಿಳಿನೆಲೆ, ಚೇರು, ಕೈಕಂಬ ಭಾಗಕ್ಕೆ ಗಾಂಜಾ ಎಲ್ಲಿಂದ ಬರುತ್ತವೆ ಎಂದು ಗುಟ್ಟಾಗಿ ಕೇಳಿದರೆ ಮಹಾರಾಷ್ಟ್ರ ಕಡೆಯಿಂದ ಎಂಬ ಉತ್ತರ ಬರುತ್ತದೆ. ಗಾಂಜಾ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕಕ್ಕೆ ಬಂದು ಅಲ್ಲಿಂದ ಕೆಲವು ಸರಕಾರಿ ನೌಕರರ ಬ್ಯಾಗುಗಳ ಮೂಲಕ ಬಿಳಿನೆಲೆ ಮುಟ್ಟುತ್ತದೆ ಎಂದು ತಿಳಿದುಬಂದಿದೆ. ಬಿಳಿನೆಲೆ, ಚೇರು, ಕೈಕಂಬಗಳಲ್ಲಿ ಗಾಂಜಾ ಚಿಲ್ಲರೆ ವ್ಯಾಪಾರಸ್ಥರು ಇದ್ದು ಅವರ ಮೂಲಕ ಗಾಂಜಾ ವ್ಯಸನಿಗಳಿಗೆ ಮುಟ್ಟುತ್ತಿದೆ.
ಇನ್ನು ಏನೆಕಲ್ ನಲ್ಲಿ ಏನೇನೋ ನಡೆಯುತ್ತಿದೆ. ಬುದ್ಧಿಜೀವಿಗಳ ಗ್ರಾಮ ಏನೆಕಲ್ ಬರಬರುತ್ತಾ ರಾಯರ ಕುದುರೆ ಆಗಿದೆ. ನದಿ ತಟದ ಪಾರ್ಟಿಗಳು, ಲೇಟ್ ನೈಟ್ ಪಾರ್ಟಿಗಳು, ತೋಟದ ಮನೆಯ ಪಾರ್ಟಿಗಳು ಗಾಂಜಾ ವ್ಯಸನಿಗಳನ್ನು ಸ್ವರ್ಗದ ಬಾಗಿಲಿನ ತನಕ ಕೊಂಡೋಗಿ ಬಿಡುತ್ತದೆ. ಎನೆಕಲ್ ಇತ್ತೀಚಿನ ದಿನಗಳಲ್ಲಿ ಗಾಂಜಾ ಲಿಸ್ಟಿನಲ್ಲಿ ವಕ್ಕರಿಸಿದ್ದು ವಿಪರ್ಯಾಸವೇ ಸರಿ. ಇಲ್ಲಿಯೂ ಕೆಲವು ಘಟ್ಟದ ಸರ್ಕಾರಿ ನೌಕರರೇ ಗಾಂಜಾ ಸರಬರಾಜುದಾರರಾಗಿದ್ದು ಕೆಲವು ಇಲಾಖೆಗಳ ನೌಕರರು ಏನೆಕಲ್ ನಲ್ಲಿ ಆಡುತ್ತಿದ್ದಾರೆ. ಅತ್ತ ಅವರು ನದಿ ದಂಡೆಗಳಲ್ಲಿ ಲೇಟ್ ನೈಟ್ ಪಾರ್ಟಿ ಮಾಡುತ್ತಾ ಸ್ವರ್ಗದತ್ತ ನಡೆಯುತ್ತಿದ್ದರೆ ಇತ್ತ ಮನೆಯಲ್ಲಿ ಬೇರೆ ಯಾರೋ ಸ್ವರ್ಗ ಕಾಣುತ್ತಿರುವ ವಿಷಯವೂ ವೈರಲ್ ಆಗಿದೆ. ಇಲ್ಲಿಗೂ ಉತ್ತರ ಕರ್ನಾಟಕದ ಕೆಲವು ಸರಕಾರಿ ನೌಕರರು ಗಾಂಜಾ ಸಪ್ಲೈ ಮಾಡುತ್ತಿರುವ ಗುಮಾನಿಗಳಿವೆ. ಸುಬ್ರಹ್ಮಣ್ಯ ಮತ್ತು ಕಡಬ ಪೋಲಿಸರು ಒಂದು ರೌಂಡು ಅಂತಹ ಸಂಶಯಾಸ್ಪದ ವ್ಯಕ್ತಿಗಳ ಬೆಂಡ್ ತೆಗೆದರೂ ಸಾಕು ಗಾಂಜಾ ಕಕ್ಕಿ ಬಿಡುತ್ತಾರೆ.
ಬಹುಮುಖ ಪ್ರತಿಭೆ "ಏಕ" ಮುಖದಲ್ಲಿ ಕಾಣಿಸುವ ಕಲಾವಿದ
......ರಂಗಕರ್ಮಿ : ಶ್ರೀ ಮಿಥುನ್ ಕುಮಾರ್ ಸೋನ..........
ಸೋಣಂಗೇರಿ ಎಂದರೆ ಚಿಕ್ಕದಾಗಿ " ಸೋನ ". ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಹೆಸರು ಚಿಕ್ಕದಾದರೂ ಕೀರ್ತಿದೊಡ್ಡದೇ. ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ ನಾಡಿನ ಸೋಣಂಗೇರಿ ಯ ಚಿಕ್ಕ ಹೆಸರಿನಲ್ಲಿ ಸರಳ-ಸಜ್ಜನ-ಸ್ನೇಹ ಜೀವಿ ಮಹಾನ್ ಚಿತ್ರಕಲಾವಿದ ದಿ| ಶ್ರೀಮೋಹನ್ ಸೋನರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅತ್ಯವಶ್ಯಕ. ಇಲ್ಲಿನ ಇನ್ನೊಬ್ಬ ಕೀರ್ತಿಗೆ ಹೆಸರಾದ ಬಹುಮುಖ ಪ್ರತಿಭೆ ರಂಗಭೂಮಿ ಕಲಾವಿದ ನಾಡಿಗೇ ಚಿರಪರಿಚಿತ ರಾಗಿರುವ ಶ್ರೀ ಮಿಥುನ್ ಕುಮಾರ್ ಸೋನ. ನಮ್ಮ ಸ್ನೇಹ ಬಾಂಧವ್ಯ ದಿಂದಾಗಿ ಇವರ ಬಗ್ಗೆ ಉಲ್ಲೇಖಿಸುವ ಚಿಕ್ಕ ಪ್ರಯತ್ನ ಅಷ್ಟೆ. ಇವರನ್ನು ನೋಡಿದ ತಕ್ಷಣ ಇವರೊಬ್ಬ ರಂಗಕರ್ಮಿ ಎಂದು ತಿಳಿಯಲ್ಪಡುತ್ತದೆ. ಯಾಕೆಂದರೆ ಮುಖದಲ್ಲಿ ಗಡ್ಡ, ತಲೆಯಲ್ಲೊಂದು ಜುಟ್ಟು. ಹೀಗೆಯೇ ಇರಬೇಕೆಂಬ ನಿಯಮವೇನೂ ಇಲ್ಲ. ನಮ್ಮ ರಂಗ ಕರ್ಮಿಗಳನ್ನ ನೋಡಿ. ಮುಖದಲ್ಲಿ ಗಡ್ಡ ಇದೆ. ತಲೆಯಲ್ಲಿ ಜುಟ್ಟು ಇಲ್ಲ. ಅಕಸ್ಮಾತ್ ಕೇಳಿದ್ರೆ ಜುಟ್ಟು ಅವಳ ಕೈಯಲ್ಲಿ ಎಂಬ ಉತ್ತರ ಬಂದರೂ ತಲೆ ಇರುವುದು ಇವರಲ್ಲೇ.
ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸೋಣಂಗೇರಿ ನಡುಮನೆ ಶ್ರೀ ಎಸ್.ಎನ್. ಮಹಾಬಲೇಶ್ವರ ಗೌಡ - ಶ್ರೀಮತಿ ರತ್ನಾವತಿ ದಂಪತಿಗಳ ಸುಪುತ್ರ ಶ್ರೀ ಮಿಥುನ್ ಕುಮಾರ್ ಸೋನ. ಬಾಲ್ಯದ ಮೊದಲಿನ ವ್ಯವಸ್ಥೆಯ ವಿದ್ಯಾಭ್ಯಾಸ ದ ಜೊತೆಗೆ ಕಾಗದಗಳಲ್ಲಿ ಗೀಚುವ ಅಭ್ಯಾಸ. ಆ ಗೆರೆಗಳೇ ಮುಂದೆಗೆ ಚಿತ್ರ ಕಲೆಯತ್ತ ಸಾಗಿದವು.ನಂತರ ಕಲೆಯಿಂದ ಕಲಾವಿದರಾಗಿ 2017ನೇ ಇಸವಿ ಯಲ್ಲಿ ತುಳು ಸಿನಿಮಾ ಒಂದರಲ್ಲಿ ಚಿಕ್ಕ ಪಾತ್ರಧಾರಿಯಾಗಿದ್ದು, ನಟನೆಯು ಮೈಯೆಲ್ಲಾವರಿಸಿ ಕೊಂಡು ನಟನಾಕಾರ ರಾದರು. ಬಳಿಕ ಶ್ರೀ ರವಿ ಎಂ.ಎಸ್. ವರ್ಕಾಡಿಯವರ ಮುಖೇನ ರಂಗ ಭೂಮಿ ಗೆ ಪಾದಾರ್ಪಣೆ ಮಾಡಿದರು. ಶ್ರೀ ಎ.ಕೆ. ಹಿಮಕರು ರಚಿಸಿದ ಅಮರ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ದಲ್ಲಿ " ಬ್ರಿಟಿಷ್ ಅಧಿಕಾರಿ " ಪಾತ್ರ ದಲ್ಲಿ ನಟಿಸಿದ್ದರು. ರಂಗಾಯಣ ಪದವೀಧರ ನಾಡಿನ ಯುವ ನಿರ್ದೇಶಕವಿದ್ದು, ಉಚ್ಚಿಲ್ ನಿರ್ದೇಶನ ದ ತುಳು ನಾಟಕ ಮಾದು ಮನಿ ಪೂಜೆ ಯಲ್ಲಿ " ಖಳನಾಯಕ ". ಪುತ್ತೂರಿನ ಮಕ್ಕರ್ ನಾಟಕ ತಂಡ ಮೂಲಕ ಮಂಗಳೂರಿನ ನಮ್ಮ ಟಿವಿ ಯಲ್ಲಿ ಪ್ರಸಾರ ವಾಗುತ್ತಿದ್ದ ರಿಯಾಲಿಟಿ ಶೋ " ಬಲೆ ತೆಲಿಪಾಲೆ " ಯಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದರು.
ಭಾರತದಾದ್ಯಂತ ಪ್ರದರ್ಶನ ಕಂಡ ಡಾ.ಸರಜೂ ಕಾಟ್ಕರ್ ರಚನೆ ಕರ್ನಾಟಕ ಪ್ರಸಿದ್ಧ ನಿರ್ದೇಶಕರಲ್ಲೊಬ್ಬರು ಶ್ರೀ ಸಾಲಿಯಾನ್ ಉಮೇಶ ನಾರಾಯಣ್ ನಿರ್ದೇಶನದಲ್ಲಿ ರಂಗ ವೇದಿಕೆಯನ್ನು ಕಂಡ " ಅಂಬೆ " ನಾಟಕ ದಲ್ಲಿ " ಕಾಶಿ ರಾಜ " ಪಾತ್ರಧಾರಿ ಯಾಗಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವರು. ಇತ್ತೀಚೆಗೆ ಸುಳ್ಯದ ಬೊಳುಬೈಲು ನವಚೇತನ ಯುವಕ ಮಂಡಲ ದ ಆಶ್ರಯದಲ್ಲಿ 28 ನೇ ಪ್ರಯೋಗ ವಾಗಿ ಈ ನಾಟಕ ಪ್ರದರ್ಶನ ಗೊಂಡು ನನ್ನ ಸೇರಿಸಿ ಜನರ ಮನಗೆದ್ದು ಮನಸೂರೆಗೊಂಡಿತ್ತು. (ಅದೇ ಈ ಚಿತ್ರಗಳು)
ಶ್ರೀ ಮಿಥುನ್ ರು ಇಸವಿ 2023-24 ನೇ ಅಂತರಾಷ್ಟ್ರೀಯ ಸಿದ್ದ ಶ್ರೀ ಫಿಲ್ಮ್ ಫೆಸ್ಟಿವಲ್ - ಸಿದ್ದನ ಕೊಳ್ಳ ಬಾದಾಮಿಯಲ್ಲಿ ಸಿದ್ದನ ಕೊಳ್ಳ ಕ್ಷೇತ್ರ ಮಹಾತ್ಮೆ ಪುನರ್ವ ಚೇತನ ನಮ್ಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿಯ ತಂಡದಿಂದ ಉತ್ತಮ ಅಭಿನಯನಕ್ಕೆ ಸಾವಿರಾರು ಚಪ್ಪಾಳೆ - ಶಿಳ್ಳೆ , ಪ್ರಶಂಸೆಗಳು, ಮಾತ್ರವಲ್ಲದೆ ಶ್ರೀ ಕ್ಷೇತ್ರ ಸಿದ್ದನ ಕೊಳ್ಳ ಶ್ರೀ ಗಳು ಡಾ.ಶಿವ ಕುಮಾರ ಸ್ವಾಮೀಜಿ ಗಳಿಂದ ಸನ್ಮಾನ. ದಿನಾಂಕ: 21-7-2024 ರಂದು ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾದ "ಶಾಂತಂ ಪಾಪಂ" ಧಾರವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ದೂರದರ್ಶನ ದ ಮೂಲಕ ಹತ್ತಿರದಿಂದ ಮನೆ - ಮನೆ ಗಳಲ್ಲಿ ಕಾಣಿಸಿಕೊಂಡಿದ್ದರು.
ಶ್ರೀ ಮಿಥುನ್ ಕುಮಾರ್ ಪುತ್ತೂರು-ವಿಟ್ಲ ದ ಸಂಸಾರ ಕಲಾವಿದ ರು, ಜರ್ನಿ ಥಿಯೇಟರ್ ಮಂಗಳೂರು, ಪ್ರಸ್ತುತ ನಮ್ಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿ, ಹೆಬ್ರಿ ಯ ತಂಡದಲ್ಲಿದ್ದು, ಉಡುಪಿ - ದ.ಕನ್ನಡ ಜಿಲ್ಲೆ ಉದ್ದಗಲಕ್ಕೂ ತಿರುಗಾಟ ನಡೆಸಿ ಸು. 400 ಕ್ಕೂ ಹೆಚ್ಚು ಜನಜಾಗೃತಿ ಬೀದಿ ನಾಟಕ ಪ್ರದರ್ಶನ ನೀಡಿದ್ದು ನಮ್ಮೂರಿಗೊಂದು ಹೆಮ್ಮೆಯ ವಿಷಯ. ಅಲ್ಲದೆ ರಂಗಭೂಮಿ, ಜಾಹಿರಾತು, ಕಿರುಚಿತ್ರ , ಟೆಲಿಫಿಲ್ಮ್ ಆಲ್ಬಂ ಸಾಂಗಿನಲ್ಲಿ ನಟಿಸಿ, ಭಾರತದ ರಂಗಭೂಮಿ ಸಿನಿಮಾ, ಧಾರಾವಾಹಿಗಳಲ್ಲಿ, ರಂಗಭೂಮಿಗೆ, " ಜೈ " ಎಂದು ಅತ್ಯುತ್ತಮ ಕಲಾವಿದನಾಗಿ ಕೊಡುಗೆ ನೀಡ ಬೇಕೆಂಬ ಇವರು ಛಲದಂಕಮಲ್ಲರಾಗಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ - ಗೋವಿಂದ ನಗರ ಎಂಬ ಪ್ರಕೃತಿ ಮಡಿಲಿನ ಸುಂದರ ಪರಿಸರ ದ ಚಿಕ್ಕ ಹಳ್ಳಿಯಲ್ಲಿ ವಾಸವಾಗಿದ್ದು ಕಲಾರಾಧನೆ ಯಲ್ಲಿ ತೊಡಗಿದ್ದಾರೆ. ಅವರು ಮ್ಯಾಸೇಜ್ ಮೂಲಕ ನನಿಗೆ ತಿಳಿಸಿದಂತೆ "ತುಂಬಾ ಖುಷಿ ಆಗುತ್ತೆ ಜೀವನ" .. ಮುಂದುವರಿಯಲಿ.. ಶುಭವಾಗಲಿ..
ಫೋಟೋ & ಬರಹ : ಬಾಲು ದೇರಾಜೆ, ಸುಳ್ಯ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment