ಹಾಗೆ ನೋಡಿದರೆ ಈ ಲವ್ ಅನ್ನೋದು ಯಾವಾಗ, ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆ ಎಂದೇ ಹೇಳಕ್ಕಾಗಲ್ಲ. ಲವ್ ಹುಟ್ಟಿಕೊಳ್ಳಲಿ, ಬೆಳೆಯಲಿ,ಸಾಯಲಿ ಯಾರ ಅಭ್ಯಂತರವೂ ಇಲ್ಲ. ಆದರೆ ಒಂದು ಕುಟುಂಬ ಲಗಾಡಿ ತೆಗೆಯುವ ವಿಷಕಾರಿ ಲವ್ ಮಾತ್ರ ಸಹಿಸಲಸಾಧ್ಯ. ಮತ್ತೆ ಕೆಲವು ಲವ್ ಗಳಿಗೆ ಪ್ರೇತಭಾಧೆ, ಕುಲೆಭಾಧೆ, ಪೀಡೆ ಪೀಡೆ ಮುಂತಾದ ಉಪದ್ರಗಳೂ ಇರುತ್ತದೆ. ಅವುಗಳನ್ನೆಲ್ಲ ಉಚ್ಚಾಟನೆ ಮಾಡಿದ್ರೆ ಮುಗೀತು.
ಇದೀಗ ಕಲ್ಲುಗುಂಡಿಯಲ್ಲಿ ಬೇಕರಿ ಮತ್ತು ಮೆಡಿಕಲ್ ಶಾಪ್ ನಡುವೆ ಇದ್ದ ಡೀಪ್ ಲವ್ ಲೈವಾಗಿ ಸಿಕ್ಕಿ ಬಿದ್ದು ಲವ್ ನ ನಡುವೆ ವಿಲನ್ ಎಂಟ್ರಿ ಆಗಿದೆ. ಹಾಗೆ ನೋಡಿದರೆ ಈ ಬೇಕರಿ ಮತ್ತು ಮೆಡಿಕಲ್ ಶಾಪ್ ಲವ್ ಸ್ಟೋರಿ ಕಲ್ಲುಗುಂಡಿಗೆ ಹಳತು. ಬಹಳ ಹಿಂದೆ ಈ ಮೆಡಿಕಲ್ ಶಾಪ್ ಹುಡುಗಿ ಒಂದು ಬಟ್ಟೆ ಶಾಪ್ ನಲ್ಲಿ ಇರುವಾಗ ಅದೇ ಕಾಂಪ್ಲೆಕ್ಸ್ ನಲ್ಲಿ ಇದ್ದ ಬೇಕರಿಯೊಂದಿಗೆ ತುಂಬಾ ಡೀಪಿಗೆ ಹೋಗಿತ್ತು. ನಂತರ ಬಟ್ಟೆ ಬದಲಿಸಿದ ಹುಡುಗಿ ಮೆಡಿಕಲ್ ಆಯ್ತು. ಆದರೆ ಬೇಕರಿ ಲವ್ ಹಾಗೆ ಉಳಿದಿತ್ತು.
ಹಾಗೆಂದು ಇಲ್ಲಿ ಮೆಡಿಕಲ್ ಗೆ ಮದುವೆ ಆಗಿದೆ. ಮಗೂ ಇದೆ. ಆದರೆ ಇಡೆಪುಡೆ ಖರ್ಚಿಗೆ ಈ ಬೇಕರಿ ಲವ್. ಹಾಗೆ ಕೆಲವು ದಿನಗಳ ಹಿಂದೆ ಚರ್ಚ್ ರೋಡಲ್ಲಿ ಇದ್ದ ಮೆಡಿಕಲ್ ಹುಡುಗಿನ ಬಾಡಿಗೆ ಮನೆಗೆ ಬೇಕರಿ ಬಂದಿದೆ. ಯಾರೂ ಇಲ್ಲೆ. ಮೆಡಿಕಲ್ ಮತ್ತು ಬೇಕರಿ ಪರಿಸರ ಮಾಲಿನ್ಯಕ್ಕೆ ಶುರು ಮಾಡಿಕೊಂಡರು. ಆಗ ರಂಗಸ್ಥಳಕ್ಕೆ ಬಾಡಿಗೆ ಮನೆ ವಾನರನ ಎಂಟ್ರಿ ಆಗಿದೆ. ಬಂದವನು ಬೇಕರಿಗೆ ಜೋರು ಮಾಡಿದ್ದಾನೆ, ಇನ್ನು ಮುಂದೆ ಈ ಕಡೆ ತಲೆ ಹಾಕಿ ಮಲಗಬೇಡ ಎಂದೂ ವಾರ್ನಿಂಗ್ ಕೊಟ್ಟು ಓಡಿಸಿದ್ದಾನೆ. ಇಲ್ಲಿ ತನಕ ಹೀರೋ, ಹೀರೋಯಿನ್ ಕತೆ. ಇನ್ನು ವಿಲನ್ ಕತೆ.
ಹಾಗೆ ರೂಂನಿಂದ ಬೇಕರಿಯನ್ನು ಓಡಿಸಿದ ನಂತರ ಮನೆ ವಾನರ ತನ್ನ ಬಾಲ ಲೀಲೆ ತೋರಿಸಲು ಪ್ರಾರಂಭಿಸಿದ್ದಾನೆ. ಬೇಕರಿ ಮತ್ತು ಮೆಡಿಕಲ್ ಶಾಪ್ ನಡುವಿನ ರಕ್ತ ಸಂಬಂಧದ ವಿಡಿಯೋ ಇದೆ, ಅದನ್ನು ವೈರಲ್ ಮಾಡುತ್ತೇನೆ, ಗಂಡನಿಗೆ ಕಳಿಸುತ್ತೇನೆ, ಪೋಲಿಸ್ಗೆ ಹೇಳುತ್ತೇನೆ ಎಂದು ಮೆಡಿಕಲ್ ಹುಡುಗಿಯನ್ನು ಮೇಲೆ ಕೆಳಗೆ ಮಾಡಲು ಶುರು ಮಾಡಿದ್ದಾನೆ. ಇದಕ್ಕೆಲ್ಲ ಪರಿಹಾರ ಏನೆಂದರೆ ನಿನ್ನ ಸದಸ್ಯತ್ವ ನನಗೂ ಕೊಡಬೇಕು ಎಂಬ ಬೇಡಿಕೆ. ಬಾಡಿಗೆ ಮನೆ ವಾನರನ ಈ ಚೇಷ್ಟೆಯಿಂದ ಹುಡುಗಿ ಹೈರಾಣಾಗಿ ಹೋಗಿದೆ. ದಿನಾ "ಯಾನೋರಿ ಬರೋಲಿಯಾ, ಯಾನೋರ ಬರೋಲಿಯಾ" ಕಿರಿಕ್. ಹುಡುಗಿ ಬೇಸತ್ತು ಈಗ ಮನೆ ಚೇಂಜ್ ಮಾಡಿದೆ ಎಂಬ ಮಾಹಿತಿ ಇದೆ. ಆದರೆ ಯಾನೋರಿ ಬರೋಲಿಯಾ ಇನ್ನೂ ನಿಂತಿಲ್ಲ ಎಂದು ತಿಳಿದುಬಂದಿದೆ.
..............................................
ಅತೀಂದ್ರಿಯ ಜ್ಞಾನ
ಸಿಗಬೇಕಾದ್ದು ಎಲ್ಲವೂ ಸಿಕ್ಕರೆ ಮಾನವ ಪರಿಪೂರ್ಣ ಎನಿಸಿಕೊಳ್ಳುತ್ತಾನೆಂದೇ ದೇವರು ಎಲ್ಲವನ್ನೂ ಸಿಕ್ಕಲು ಬಿಡುವುದಿಲ್ಲ.ಹಾಗೊಂದು ವೇಳೆ ಪರಿಪೂರ್ಣನಾಗಲು ಹೊರಟರೆ ಪರೀಕ್ಷೆಗೊಳಪಟ್ಟು ಒಂದು ಬದಿ ಆದರೂ ತೆರೆಸಿ ಬಿಡುತ್ತಾನೆ.ಇದು ಭಗವಂತನ ಲೀಲೆ... ಎಷ್ಟು ದಿನ ಪರಿಪೂರ್ಣರಾಗಲು ಹೊರಡಬಹುದು ? ನಮ್ಮ ನಿಮ್ಮ ಸುತ್ತ ಸಮಾಧಿ ಏರ್ಪಡುತ್ತದೆ... ಹಾಗೊಂದು ವೇಳೆ ಪರಿಪೂರ್ಣನಾಗಲು ಹೊರಡುವುದಾದರೆ, ನಮ್ಮೊಳಗೆ ನಾವೇ ಬಂಧಿಯಾಗಬೇಕಾಗಬಹುದು... ಆಗ ನಮ್ಮದೇನೂ ಇರುವುದಿಲ್ಲ... ದಿವ್ಯ ದೃಷ್ಟಿ ಒಂದೇ ಕೆಲಸ ಮಾಡುತ್ತದೆ.. ನಮ್ಮನ್ನು ನಾವೇ ನೋಡಿಕೊಳ್ಳುತ್ತಾ ಇರುತ್ತೇವೆ... ನಮ್ಮ ಶಕ್ತಿ ಮಾತ್ರ ಪರಕಾಯ ಪ್ರವೇಶ ಮಾಡಿ ಕೆಲಸ ಕಾರ್ಯ ನಿರ್ವಹಿಸುತ್ತಿರುತ್ತದೆ.. ನಮ್ಮ ಶರೀರ ಸ್ಥಬ್ದವಾಗುತ್ತದೆ...ಕಲ್ಲೂ ಆಗಿಬಿಡಬಹುದು...ಕರಗಿ ಬಿಡಬಹುದು... ನಾವು ನಮ್ಮನ್ನು ಇತರರಿಗಾಗಿಯೂ ಮುಡುಪಾಗಿಡಬಹುದು...ಇಲ್ಲವೋ ಸಮಾಧಿ ಧ್ಯಾನದಲ್ಲೇ ಇರಬಹುದು...ಇಲ್ಲವೋ ನಮ್ಮ ಕೆಲಸಗಳಿಗೆ ನಾವು ನಮ್ಮನ್ನೇ ನಾವೇ ಬಳಕೆ ಮಾಡಿ ಕೊಳ್ಳಬಹುದು...ಇತರರಿಗಾಗಿ ಬಳಕೆ ಮಾಡಿದ್ದೇವೆಯೆಂದರೆ, ನಮಗೆ ಅಷ್ಟು ಶರೀರಗಳು ದೊರಕಬಹುದು...ಇದು ಇಂದ್ರಿಯ ಹಾಗೂ ಅತೀಂದ್ರಿಯದ ವಿಷಯವಾಗಿರುತ್ತದೆ..
ನಮ್ಮ ಸ್ವಾರ್ಥಕ್ಕೆ ಇದರ ಬಳಕೆಯಾಗಿದ್ದಲ್ಲಿ ಎಲ್ಲರ ಅನಾರೋಗ್ಯವು ನಮಗೇ ಬಂದು ಕಾಡಲೂ ಬಹುದು.. ಕಣ್ಣಿಗೆ ಇದು ಕಾಣದಿದ್ದರೂ ಅರಿವಿಗೆ ಬಂದರಿದು ಸತ್ಯ... ಕೆಲವರು ಇಂದ್ರಿಯ ಹಾಗೂ ಅತೀಂದ್ರಿಯದ ವಿಷಯ ಕಳ್ಳರೂ ಇರುತ್ತಾರೆ... ಅದಕ್ಕಾಗಿ ಭಗವಂತ ಏನು ಮಾಡುತ್ತಾನೆಂದರೆ, ಈ ವಿಷಯವನ್ನು ಸಾಮಾನ್ಯರಿಗೆ ನಿಲುಕದಂತೆ ಮಾಡಿಬಿಡುತ್ತಾನೆ... ನಮ್ಮ ಬಳಿಯೇ ಇದ್ದು ನಮ್ಮ ಬಗೆಗೇ ತಿಳಿಯಲು ಈ ಅತೀಂದ್ರಿಯದ ಬಳಕೆಯನ್ನು ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಎರಡಕ್ಕೂ ಉಪಯೋಗಿಸುವವರೂ ಇದ್ದಾರೆ... ಹೀಗಿದ್ದಲ್ಲಿ ನಮ್ಮ ಅತೀಂದ್ರಿಯ ಶಕ್ತಿಯ ಮರು ಬಳಕೆ ಮಾಡದಿರುವುದು ಉತ್ತಮ... ಯಾಕೆಂದರೆ ಯಾರ್ಯಾರನ್ನೋ ಉಪಯೋಗಿಸಿ
ನಮ್ಮನ್ನು ಬಳಸಿಕೊಳ್ಳುತ್ತಾರೆ... ಈ ಜಾಗದಲ್ಲಿ ದುಷ್ಟರು ದೇವಿಯ ಶಕ್ತಿಯನ್ನು ಕಳೆಗುಂದಿಸುತ್ತಾರೆ... ದೇವಿಯನ್ನು ಸರಿಯಾದ ರೀತಿಯಲ್ಲಿ ನಂಬಿದಲ್ಲಿ ದುಷ್ಟ ಶಕ್ತಿಗಳು ನಮ್ಮಿಂದ
ಈ ನಿಧಿಯನ್ನು ಮರು ಬಳಕೆ ಮಾಡದಂತೆ ತಡೆಹಿಡಿಯಬಹುದು... ಎಲ್ಲವೂ ಸಿಕ್ಕಿದ ರಾವಣ ಮೆರೆದಂತೆ
ದುಷ್ಟರು ಒಳ್ಳೆಯವರ ಪೀಡಿಸುತ್ತಾರೆ... ಇದೇ ಕಾರಣಕ್ಕೆ ರಾಕ್ಷಸರಿಗೆ ಏನನ್ನೂ ನೀಡಬಾರದು ಎನ್ನುವುದು... ಆ ತಾಯಿಯ ಬಳಿ ಅತೀಂದ್ರಿಯ ಶಕ್ತಿಯ ಒಬ್ಬ ವ್ಯಕ್ತಿಯ ನಿಜ ರೂಪ ತಿಳಿಯಲೆಂದು ಬಳಕೆ ಮಾಡಲೆಂದು ಕೇಳಿದಲ್ಲಿ ಅವಳು ನೀಡದಿರಲಾರಳು... ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಆಗುವುದಿದ್ದರೆ ಪರಿಪೂರ್ಣಳಾದ ಆ ಜಗದಂಬಿಕೆಯಿಂದ ಎನ್ನುತ್ತಾ ನನ್ನ ಈ ಕಿರು ಲೇಖನ ನನಗಾಗಿ ಹಾಗೂ ನಿಮಗಾಗಿ ಹಾಗೂ ಎಲ್ಲರಿಗಾಗಿ....
-ಶ್ರೀಮತಿ ಶಾಂತಾ ಕುಂಟಿನಿ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment