ಸುಳ್ಯ: ಅಬ್ಕಾರಿ ಇಲಾಖೆಯಲ್ಲಿ ನಕ್ಷತ್ರಿಕನ ತಂಗಿ!

                                                                             


    ವರ್ಷಕ್ಕೊಮ್ಮೆ ಕೋಲ,  ಸಿಂಗೊಡೆ ಸಂಕ್ರಾಂತಿಗಳಲ್ಲಿ ತಂಬಿಲ,ವಾರ ವಾರ ಅಗೆಲು ಸೇವೆ, ಬಿಸು ಕಣಿ ಇಷ್ಟು ಕೊಟ್ಟರೂ ಸುಳ್ಯ ಅಬ್ಕಾರಿ ಇಲಾಖೆಯ ಭೂತಗಳಿಗೆ ಸಾಕಾಗದೆ ಅಜನೆ ಮಾಡೋದು, ಬಾಧೆ ಕೊಡೋದು, ಉಪದ್ರ ಮಾಡೋದು ಯಾಕೆಂದು ಕೇಳಿದರೆ ತಿಂಗಳು ತಿಂಗಳು ಹರಿಕೆ ಕೋಲ ಕೊಡಬೇಕೆಂಬ ಬೇಡಿಕೆ. ಸುಳ್ಯದ ಗಡಂಗ್ ಧಣಿಗಳು ಸುಸ್ತೋ ಸುಸ್ತು. " ಎನಡ ಒಂಜಿ ಭೂತ ಉಂಡು ಲೆಕ್ಕೆಸಿರಿ, ಯಾನ್ ಮಲ್ತಿನ ಪೂರಾ ಐಕೇ ಸರಿ" ಎಂಬಂತೆ ಸುಳ್ಯದ ಅಷ್ಟೂ ಬಾರ್ ಮಾಲೀಕರು ಮತ್ತು ವೈನ್ ಶಾಪ್ ಮಾಲೀಕರು ಅಬ್ಕಾರಿ ಇಲಾಖೆಯ ಒಂಜಿ ಪೊಣ್ಣು ಭೂತಕ್ಕೆ ಅಗೆಲು ಕೊಟ್ಟು ಕೊಟ್ಟೂ ಭೂತಕ್ಕೇ ಪೆದಂಬು ಮಾತಾಡುವ ತನಕದ ಪರಿಸ್ಥಿತಿ ಇದೆ.



 ತಿಂಗಳಿಗೆ ಪ್ರತೀ ಬಾರಿನಿಂದ ಹದಿನೈದು ಸಾವ್ರ ಮಾಮೂಲು, ತಿನ್ನುವಷ್ಟು, ಕುಡಿಯುವಷ್ಟು, ಪಾರ್ಸೆಲ್ ಬೇತೆನೆ. ಪ್ರತೀ ವೈನ್ ಸ್ಟೋರ್ ಗಳಿಂದ ತಿಂಗಳಿಗೆ ಹತ್ತಕ್ಕಿಂತ ಮೇಲೆ ಮಾಮೂಲು, ಇಲ್ಲೂ ಕುಡಿಯುವಷ್ಟು, ಪಾರ್ಸೆಲ್ ಫ್ರೀ. ಇನ್ನು ಸ್ವಾತಂತ್ರ್ಯ ಸ್ಪೆಷಲ್, ಗಣರಾಜ್ಯೋತ್ಸವ, ರಾಜ್ಯೋತ್ಸವ, ಚೌತಿ, ಅಷ್ಟಮಿ, ದೀಪಾವಳಿ, ನವರಾತ್ರಿ, ಸ್ಟೇಂಪು ಸೇಲ್ ಮುಂತಾದ ವ್ಯವಸ್ಥೆಗಳು ಇದ್ದರೂ ಸುಳ್ಯದ ಅಬ್ಕಾರಿ ಮ್ಯಾಡಂಗೆ ಸಾಕಾಗಲ್ಲ. ದಿನಾ ಬಂದು ಕಿರಿಕಿರಿಕಿರಿಕಿರಿ. ಹರಿಕೆ ಕೋಲಕ್ಕಾಗಿ ಅಷ್ಟೂ ಗಡಂಗ್ ಧಣಿಗಳು ಬೆಚ್ಚಿ ಬೀಳುವಂತೆ ಅಜನೆ ಮಾಡಿಬಿಡುತ್ತದೆ ಅಬ್ಕಾರಿ ಮ್ಯಾಡಮ್. ಮ್ಯಾಮ್ ಮಿಯಾಂವ್ ಮಿಯಾಂವ್ ಎಂದು ದಿನಾ ಬಂದು ಬಾರ್ ಸ್ಟಾಫ್ ನವರಿಗೆ, ವೈನ್ ಶಾಪ್ ಕೆಲಸಗಾರರಿಗೆ ಜೋರು ಮಾಡುತ್ತಿದ್ದು ಓ ಮೊನ್ನೆ ನಡೆದ ಬಾರ್ ಮಾಲೀಕರ ಸಭೆಯಲ್ಲಿ ಮ್ಯಾಡಮನ್ನು ತರಾಟೆಗೆತ್ತಿಕೊಳ್ಳಲಾಗಿದೆ.


               
   ಇದು ಸುಳ್ಯದ ಅಬ್ಕಾರಿ ಇಲಾಖೆಯ ಅಬ್ಕಾರಿ ಮ್ಯಾಡಮ್ ಕತೆ. ಕ್ವಾಟ್ರನ್ನು ಕೂಲ್ ಡ್ರಿಂಕ್ಸ್ ನಂತೆ ಮಾರಿದರೂ ಮ್ಯಾಡಮ್ ಅದನ್ನೆಲ್ಲ ಕೇಳೋದೇ ಇಲ್ಲ.  ಇದರದ್ದು ಒಂದೇ ಒಂದು ಬೇಡಿಕೆ ಏನೆಂದರೆ ಮಾಮೂಲು ಮಾಮೂಲಿಯಾಗಿ ಬರಲಿ, ಅದನ್ನು ಮೇಲೆ ಅಬ್ಕಾರಿ ಡಿ.ಸಿ ತನಕ ಬೇರೆ ಬೇರೆ ಭೂತಗಳಿಗೆ, ಉಪ ಭೂತಗಳಿಗೆ, ಕುಲೆಗಳಿಗೆಲ್ಲ ಬಡಿಸಲಿಕ್ಕೆ ಇದೆ, ಸುಳ್ಯ ತಾಲೂಕಿನ ಬಾಬ್ತು ಬೇರೆಯೇ ತನಗೆ ಬಡಿಸಬೇಕೆಂಬುದು. ಇದು ಜಾಸ್ತಿ ಆದೀತು ಎಂಬುದು ಗಡಂಗ್ ಧಣಿಗಳ ಬೊಬ್ಬೆ. ಅದಕ್ಕೆ ಮ್ಯಾಡಮ್ ಬಂದು ಬಂದು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಹೆದರಿಸುತ್ತದೆ ಎಂದು ಸುದ್ದಿ. ಕೆಲವು ಧಣಿಗಳು ಈ ಪೊಣ್ಣು ಭೂತಕ್ಕೆ ಹೆದರಿ, ಇಲ್ಲದಿದ್ದರೆ ಸಾಯಲಿ ಎಂದು ಎಲ್ಲಾ ಹರಿಕೆ ತೀರಿಸಿ ಬಿಡುತ್ತಾರೆ. ಆದರೆ ಹರಿಕೆ ತೀರಿಸದ ಧಣಿಗಳಿಗೆ ಈ ಅಬ್ಕಾರಿ ಪೊಣ್ಣು ಭೂತದ ಉಪದ್ರ ಹೇಳಿ ಹೇಳಿ ಮುಗಿಯದು. ಹಾಗೆಂದು ಪ್ರತೀ ಬಾರ್ ಗಳಿಗೆ ವರ್ಷಕ್ಕೆ ಎರಡು ಕೇಸ್ ಹಾಕಲೇ ಬೇಕೆಂದು ಅಬ್ಕಾರಿ ಇಲಾಖೆಯಲ್ಲಿ ಅಲಿಖಿತ ನಿಯಮವಿದೆ. ಪ್ರತೀ ಬಾರಿಗೂ ಇಲಾಖೆ ಎರಡು ಕೇಸ್ ಹಾಕಿಯೇ ಹಾಕುತ್ತಾರೆ. ಅದು ಕುಪ್ಪಿ ಸರಿ ಇಟ್ಟಿಲ್ಲ ಎಂದೋ, ವೈಟರ್ ಕೋಮಣ ಸರಿ ಕಟ್ಟಿಲ್ಲ ಎಂದೋ ಪೊಕ್ಕಡೆ ಪೊಕ್ಕಡೆ ಕೇಸ್ ಹಾಕಿಯೇ ಬಿಡುತ್ತಾರೆ. ಆದರೆ ಮೂರನೇ ಕೇಸ್ ಬೀಳಬಾರದು. ಎಲ್ಲಿಯಾದರೂ ಮೂರನೇ ಕೇಸ್ ಬಿದ್ದರಂತೂ ಒಂದು ವಾರ ಪನಿಶ್ಮೆಂಟ್ ಬಂದ್ ಮಾಡಲೇ ಬೇಕಾದ ಅನಿವಾರ್ಯತೆ ಧಣಿಗಳಿಗಿದೆ. ಸುಳ್ಯದ ಅಬ್ಕಾರಿ ಮ್ಯಾಡಂ ಈ ಮೂರನೆಯದ್ದನ್ನು ಹಿಡ್ಕೊಂಡು ಬಾರ್ ಧಣಿಗಳನ್ನು ಹೆದರಿಸುತ್ತಿದೆ ಎಂದು ತಿಳಿದುಬಂದಿದೆ. ಮಾಮೂಲಿಗಿಂತ ಜಾಸ್ತಿ ಮಾಮೂಲು ಕೊಡದ ಬಾರ್ ಗಳಿಗೆ ರಪರಪನೆ ವಾರ್ಷಿಕ ಲೆಕ್ಕದ ಎರಡು ಪೊಕ್ಕಡೆ ಕೇಸ್ ಜಡಿದು ಮೂರನೇ ಕೇಸ್ ಹಾಕ್ತೇನೆ, ಹಾಕ್ತೇನೆ ಎಂದು ಪನಿಶ್ಮೆಂಟ್ ಬಂದಿನ ಗುಮ್ಮಾ ತೋರಿಸಿ ಮಾಮೂಲಿಗಿಂತ ಜಾಸ್ತಿ ಮಾಮೂಲು ವಸೂಲಿ ಮಾಡುತ್ತಿದೆ ಮ್ಯಾಡಮ್ ಎಂದು ತಿಳಿದುಬಂದಿದೆ. ಈಗಾಗಲೇ ಸದ್ರಿ ಅಬ್ಕಾರಿ ಇಲಾಖೆಯ ಪೊಣ್ಣು ಭೂತಕ್ಕೆ ಟ್ರಾನ್ಸ್ ಫರ್ ಆಗಿದ್ದು ಅದನ್ನು ಹೋಲ್ಡ್ ನಲ್ಲಿ ಇಟ್ಟು "ನಾನು ಹೋಗುತ್ತೇನೆ, ಈಗಲೇ ಮಾಮೂಲು ಕೊಟ್ಟು ಬಿಡಿ" ಎಂದು ಗಡಂಗ್ ಧಣಿಗಳಿಗೆ ದುಂಬಾಲು ಬಿದ್ದಿದ್ದು ಆದಷ್ಟು ಪೂಜಿಕ್ಕೊಂಡು ಹೋಗುವ ಎಂದು ಸ್ಕೆಚ್ ಹಾಕಿದಂತಿದೆ.




 ಅಲ್ಲ ಮಾರಾಯ್ರೆ ಸುಳ್ಯ ತಾಲೂಕಿನ ತುಂಬಾ ಕಂಡ ಕಂಡಲ್ಲಿ ಕ್ವಾಟ್ರು ಮಾರುತ್ತಿದ್ದರೂ, ದಿನಸಿ ಅಂಗಡಿಗಳು, ಹೋಟೆಲುಗಳು ಗಡಂಗ್ ಶೈಲಿಯಲ್ಲಿ ಮದ್ಯ ಮಾರುತ್ತಿದ್ದರೂ, ಬಾಡಿಗೆ ವಾಹನಗಳಲ್ಲಿ ಲೋಡ್ ಲೋಡ್ ಮದ್ಯ ಸರಬರಾಜು ಆಗುತ್ತಿದ್ದರೂ, ಕೋಳಿ ಕಟ್ಟಗಳಲ್ಲಿ, ಜುಗಾರಿ ಅಡ್ಡೆಗಳಲ್ಲಿ ಓಪನ್ ಬಾರ್ ಗಳು ಕಾರ್ಯಚರಿಸಿದರೂ, ಸೆಕೆಂಡ್ಸ್, ಥರ್ಡ್ಸ್ ಇನ್ನೂ ಜೀವಂತ ಇದ್ದರೂ ಅಬ್ಕಾರಿ ಇಲಾಖೆಗೆ ಕಾಣದು, ಕೇಳದು ಮತ್ತು ಅದರ ಬಗ್ಗೆ ಮಾತಾಡದು. ಎಲ್ಲಿಯೂ ರೈಡೇ ಮಾಡದ, ಇಲಾಖೆಯ ರೂಲ್ಸ್ ಗಳಿಗೆ ವಿರುದ್ಧವಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸದಾ ಬೆಂಗಾವಲಾಗಿ ನಿಲ್ಲುವ, ಮಾಮೂಲು ಕಲೆಕ್ಷನ್ ಒಂದೇ ಕೆಲಸ ಎಂದು ಅಪಾರ್ಥ ಮಾಡಿಕೊಂಡಿರುವ, ಸಾರ್ವಜನಿಕರ ಕಣ್ಣಿಗೆ ಕಾಣದ, ಕೇಳದ ಇಲಾಖೆ ಯಾಕೆ ಎಂಬುದೇ ಸಾರ್ವಜನಿಕರ ಪ್ರಶ್ನೆ. ಪಾಪ ಪೋಲಿಸರಾದರೂ ಅನಧಿಕೃತ ಕ್ವಾಟ್ರು ಅಡ್ಡೆಗಳಿಗೆ ಅಪಗಪಗ ರೈಡು ಬೀಳುವುದುಂಟು, ಅಂಗಡಿ ಸೀಜ್ ಮಾಡುವುದುಂಟು. ಆದರೆ ಅಬ್ಕಾರಿ ಇಲಾಖೆಯವರು ಹಾಗೇನಾದರೂ ಮಾಡಿದ್ದು ನಿಮಗೆ ಗೊತ್ತಾ? ಅವರ ಆಫೀಸ್ ಎಲ್ಲಿದೆ ಎಂದೇ ಗೊತ್ತಾಗಲ್ಲ. ಮತ್ತೆ ಅಬ್ಕಾರಿ ಪೋಲಿಸ್, ಎಸ್ಸೈ, ಇನ್ಸ್ ಪೆಕ್ಟರನ್ನೆಲ್ಲ ನಾನು ಕನಸಿನಲ್ಲಿಯೂ ನೋಡಿಲ್ಲ, ಕಂಡಿಲ್ಲ, ಅವರೂ ಆಂಜಿಯೂ ಇಲ್ಲ.



....................................................................
..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.









 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget