ಈಗ ಯಾರಿಗಾದರೂ ಹೊಸ ಕಾರು ಬಂದರೆ ಹಳೇ ಕಾರನ್ನು ಹಾಗೇ ಮುದ್ದೆ ಮಾಡಿ ಗುಜಿರಿಯವನಿಗೆ ಕೊಡಲು ಆಗಲ್ಲ. ಹಾಗೆ ಮಾಡಲು ಕೆಲವು ಪ್ರೊಸೀಜರ್ಸ್ ಇದೆ. ಹಾಗೆಯೇ ದೇವರು ಹೊಸ ಬ್ರಹ್ಮ ರಥ ಪರ್ಚೆಸ್ ಮಾಡಿದರೆ ಹಳೆಯ ರಥವನ್ನು ಸೀದಾ ಕೊಂಡೋಗಿ ಕಟ್ಟಿಗೆ ಮಾಡಲು, ಸೂಂಟನ್ ಇಡಲು ಆಗಲ್ಲ. ಅದಕ್ಕೂ ಕೆಲವೊಂದು ಕ್ರಮ ಕಟ್ಲೆಗಳಿವೆ. ಇದೀಗ ಬಂಟ್ವಾಳ ತಾಲೂಕಿನ ಕಾರೀಂಜೇಶ್ವರ ದೇವಸ್ಥಾನದ ಎರಡು ರಥಗಳು ಎಲ್ಲಿಗೆ ಹೋಗಿದೆ ಅಂತಲೆ ಗೊತ್ತಿಲ್ಲ ಮಾರಾಯ್ರೆ. ಗೂಗಲ್ ಮಾಡಬೇಕಷ್ಟೆ.
ಇದು ಬಂಟ್ವಾಳ ತಾಲೂಕಿನ ಫೇಮಸ್ ದೇವಸ್ಥಾನದ ಕತೆ. ಬೆಟ್ಟದ ದೇವರ ಕತೆ. ಕಾರಿಂಜೇಶ್ವರನ ಸನ್ನಿಧಿಯ ಕತೆ. ಇಲ್ಲಿನ ಆಡಳಿತ ಮಂಡಳಿ ಮತ್ತು ಪುರೋಹಿತ ವೃಂದದ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಅವರು ರೆಚ್ಚೆಯಿಂದ ಬಿಡರು ಇವರು ಕೂಂಜಿಯಿಂದ ಬಿಡರು ಎಂಬ ಪರಿಸ್ಥಿತಿ ಇಲ್ಲಿದೆ.
ಇಲ್ಲಿನ ತಂತ್ರಿಗಳು,ಪಾರಂಪರಿಕ ಪೂಜೆಯವರು ಒಂದು ಬಣದವರಾದರೆ ಆಡಳಿತ ಮಂಡಳಿ ಇನ್ನೊಂದು ಬಣ. ಪೂಜೆಯವರೊಂದಿಗೆ ತಾಂಟಲೆಂದೇ ಆಡಳಿತ ಮಂಡಳಿ ಅಷ್ಟಮಂಗಲ ಇಟ್ಟು ತಮಗೆ ಬೇಕಾದ ಹಾಗೆ ನಿಯಮಗಳನ್ನು ಮಾಡಿ ಪೂಜೆಯವರ ಮೇಲೆ ಸವಾರಿ ಮಾಡುವುದು ಇಲ್ಲಿ ಮಾಮೂಲು. ಆಡಳಿತ ಮಂಡಳಿಯ ಈ ಅಧಿಕಪ್ರಸಂಗಿ ಅಷ್ಟಮಂಗಲ, ನಷ್ಟಮಂಗಲ, ಕಷ್ಟಮಂಗಲಗಳ ವಿರುದ್ಧ ಪೂಜೆತಕುಲು ಕೋರ್ಟಿಗೆ ಹೋದರೆ ಮೂವರು ಪೂಜೆಯವರನ್ನು ಆಡಳಿತ ಮಂಡಳಿ ಸೀದಾ ಮನೆಗೆ ಕಳಿಸಿದೆ. ಇನ್ನು ಕ್ಷೇತ್ರದ ತಂತ್ರಿಗಳನ್ನೂ ಡೊಂಟ್ ಕೇರ್ ಮಾಡುತ್ತಿರುವ ಆಡಳಿತ ಮಂಡಳಿ ಕಡೇ ಪಕ್ಷ ದೀಪೊತ್ಸವಕ್ಕೆ ತಂತ್ರಿಗಳಿಗೆ ಒಂದು ಆಹ್ವಾನ ಕೂಡ ಕೊಡದೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದೆ. ಈ ಬಗ್ಗೆ ಮುಜರಾಯಿಗೆ ದೂರಾದರೂ ಆಡಳಿತ ಮಂಡಳಿಯದ್ದು ಮಾತ್ರ ಅದೇ ರಾಗ ಅದೇ ಹಾಡು. ಇದೀಗ ಪರತ್ ಆಡಳಿತ ಮಂಡಳಿಯ ಇಂಜಿನ್ ತೆಗೆದಿದ್ದು ತುಂಬಾ ದಿನಗಳ ಕಾಲ ಇಂಜಿನ್ ಇಲ್ಲದೆಯೇ ಬಾಡಿ ಅಧಿಕಾರದ ದುರುಪಯೋಗ ಮಾಡಿತ್ತು ಎಂದು ತಿಳಿದುಬಂದಿದೆ.
ಇನ್ನು ಕಾರಿಂಜೇಶ್ವರನ ರಥದ ಬಗ್ಗೆ ಹೇಳುವುದಾದರೆ ಶತಮಾನಗಳಿಂದ ಇದ್ದ, ವಿಶೇಷ ಕೆತ್ತನೆಗಳಿದ್ದ, ಶತಮಾನಗಳಿಂದ ಕಾರಿಂಜೇಶ್ವರ ಉಪಯೋಗಿಸಿದ್ದ ಎರಡು ರಥಗಳು ಈಗ ಕಾಣಿಸುತ್ತಿಲ್ಲ.
ಇನ್ನು ದೇವರಿಗೆ ಪೊಸ ರಥ ಮಾಡಿಸಿದ್ದರೂ, ಪರತ್ ರಥದ ಉಪಯೋಗ ಇನ್ನು ಇಲ್ಲವಾದರೂ ಕ್ಷೇತ್ರದ ತಂತ್ರಿಗಳೊಂದಿಗೆ ವಿಚಾರ ಸಚಾರ ಮಾಡದೆ, ಯಾವುದೇ ಪ್ರಶ್ನೆ ಚಿಂತನೆ ನಡೆಸದೆ ಏಕಾಏಕಿ ಆಡಳಿತ ಮಂಡಳಿ ರಥಗಳ ಕತೆ ಮುಗಿಸಿದ್ದು ಅಕ್ಷಮ್ಯ. ರಥವನ್ನು ಆಡಳಿತ ಮಂಡಳಿ ಏನು ಮಾಡಿರಬಹುದು? ಯಾರಿಗೆ ಕೊಟ್ಟಿರಬಹುದು? ಮನೆಗೆ ಫರ್ನಿಚರ್ ಮಾಡಿಸಿರಬಹದಾ? ಶೋಕೇಸ್? ಕಾಟ್? ಬಾಗಿಲು, ದಾರಂದ ಮಾಡಿಸಿರ ಬಹುದಾ? ಗೊತ್ತಿಲ್ಲ.
ಆದರೆ ಕಾರಿಂಜೇಶ್ವರನ ಹಳೇಯ ಮತ್ತು ಹೊಸ ರಥದಲ್ಲಿ ಆಡಳಿತ ಮಂಡಳಿ ಸಿಹಿ ತಿಂದಿದೆ ಎಂಬ ಗುಪ್ತಚರ ಮಾಹಿತಿ ಇದೆ. ಇಲ್ಲದಿದ್ದರೆ ಕಾರಿಂಜೇಶ್ವರನ ಹೊಸ ರಥಕ್ಕೆಂದು ವಿವಿಧ ಕಾಡುಗಳಲ್ಲಿ ವಿವಿಧ ಸೈಜಿನ ಮರಗಳ್ಳರು ಕಡಿದ ಮರದಲ್ಲಿ ಒಂದು ನೂರು ರಥ ಮಾಡಿಸಬಹುದಿತ್ತು ಎಂದು ತಿಳಿದುಬಂದಿದೆ. ಆ ಟೈಮಲ್ಲಿ ಯಾರೂ ಮರ ಕಡಿದು ಸಿಕ್ಕಿ ಬಿದ್ದರೂ ಕಾರಿಂಜೇಶ್ವರನಿಗೆ ದೂರು ಹಾಕಲಾಗುತ್ತಿತ್ತು. ಇನ್ನು ಕಳೆದ ಆಡಳಿತ ಮಂಡಳಿಯ ಕೆಲಸಗಳ ಬಗ್ಗೆ ಬರೆದರೆ ಖುದ್ದು ಕಾರಿಂಜ ಕಾಡಿನ ಅಷ್ಟೂ ಮಂಗೀಸ್ ಗಳೂ ಕಿಲಕಿಲ ನಕ್ಕು ಬಿಟ್ಟಾರು. ದಾಸೋಹದ ಲೆಕ್ಕದಲ್ಲಿ ಮಾಡಿದ ಕಲೆಕ್ಷನ್, ಕಾರಿಂಜೇಶ್ವರನ ಬೆಳ್ಳಿ ಕವಚದ ಕಲೆಕ್ಷನ್ ಬಗ್ಗೆ ಬರೆದಿಡಲು ಆಡಳಿತ ಮಂಡಳಿಗೆ ಇನ್ನೂ ಪೆನ್ನು ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಎಲ್ಲಿಯಾದರೂ ಬೆಳ್ಳಿಯ ಕವಚ ಅಂತ ಕಂಚಿನ ಕವಚಕ್ಕೆ ಬೆಳ್ಳಿಯ ನೀರಿನಲ್ಲಿ ಹೊಡೆದು ಬಿಳಿ ಮಾಡಿ ಇಟ್ಟಿದ್ದಾರೆ ದೇವರಿಗೆ ದೇವರೇ ಗತಿ.
.............................................
ಪಂಜ ಸೀಮೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಭೇಟಿ ನೀಡಿ, ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಸೀಮೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಬಿಳಿಮಲೆಯವರನ್ನು ಸ್ವಾಗತಿಸಿ, ಸನ್ಮಾನಿಸಿದರು.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment