ಬಂಟ್ವಾಳ: ಕಾರಿಂಜೇಶ್ವರನ ಹಳೇ ರಥಗಳು ಮೂಡುಬಿದಿರೆಯಲ್ಲಿ ಪತ್ತೆ!

                                                                           


    ಬಂಟವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಎರಡು ಹಳೇಯ ರಥಗಳು ಕಾಣೆಯಾಗಿದ್ದು ಆ ರಥಗಳು ಇದೀಗ ಮೂಡುಬಿದಿರೆಯ ಜಾತ್ರೆಯೊಂದರಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕೆಲವು ಸಮಯಗಳ ಹಿಂದೆ ಕಾರಿಂಜೇಶ್ವರನಿಗೆ ಹೊಸ ರಥ ಬಂದ ಮೇಲೆ ಹಳೇಯ ಎರಡು ರಥಗಳು ಇದ್ದಕ್ಕಿದ್ದಂತೆ ಕಾರೀಂಜ ಕ್ಷೇತ್ರದಿಂದ ಕಾಣೆಯಾಗಿತ್ತು. ಈಗ ನೋಡಿದರೆ ಮೂಡುಬಿದಿರೆಯ ಜಾತ್ರೆಯೊಂದರಲ್ಲಿ ಕಾರಿಂಜದ ರಥಗಳನ್ನು ಕಂಡು ಬಂದಿದೆ. ನೋಡಿದವರು ಇದ್ದಾರೆ.


ಹಾಗೆಂದು ಯಾವುದೇ ದೇವರಿಗೆ ಹೊಸ ರಥಗಳ ನಿರ್ಮಾಣ ಮಾಡಿದಾಗ ಹಳೇಯ ರಥವನ್ನು ಹಾಗೆ ಗುಜುರಿಗೆ ಹಾಕಲು ಆಗಲ್ಲ. ಹಾಗೆ ಬದಿಗೆ ಇಡಲು ಅದೇನು ಮಾರುತಿ ಓಮ್ನಿ ಅಲ್ಲ, ಅಂಬಾಸಿಡರ್ ಕಾರಲ್ಲ. ಅದಕ್ಕೂ ಕೆಲವು ಕ್ರಮಕಟ್ಲೆಗಳಿವೆ.


 ಹಿಂದೂ ಧಾರ್ಮಿಕ ಪದ್ಧತಿಗಳ ಪ್ರಕಾರ ಹಳೇಯ ರಥಕ್ಕೆ ಅನುಜ್ಞ ಕಲಶ ಆಗಬೇಕು ಮತ್ತು ಹಳೆಯ ರಥದ ಶಕ್ತಿಯನ್ನು ಹೊಸ ರಥಕ್ಕೆ ಆವಾಹನೆ ಮಾಡಬೇಕು. ಅನುಜ್ಞ  ಕಲಶ ಆದ ಮೇಲೆ ಅದನ್ನು ವಿಸರ್ಜನೆ ಮಾಡಬೇಕು ಮತ್ತು ತಿಲ ತರ್ಪಣದ ಕ್ರಮ ಆದ ಮೇಲೆ ಅದೊಂದು ತ್ಯಾಜ್ಯವಾಗಿ ಬಿಡುತ್ತದೆ. ಹಾಗೆ ಅನುಜ್ಞ ಕಲಶದ ಪ್ರಕಾರ ವಿಸರ್ಜನೆ ಆಗಿ ತಿಲ ತರ್ಪಣದ ಮೂಲಕ ತ್ಯಾಜ್ಯವಾದ ಯಾವುದೇ ವಸ್ತುವನ್ನು ಒಂದೋ ನೀರಿನಲ್ಲಿ ಬಿಡಬೇಕು ಇಲ್ಲದಿದ್ದರೆ ಅಗ್ನಿಗೆ  ಅರ್ಪಿಸಬೇಕು. ಯಾಕೆಂದರೆ ವಿಸರ್ಜನೆ ಮಾಡಿದ ವಸ್ತುವಿನ ಕುರುಹು ಕೂಡ ಇಡಬಾರದು ಎಂಬ ನಿಯಮವಿದೆ. ಒಂದು ಪ್ರಕಾರದ ಪ್ರಕಾರ ಅನುಜ್ಞ ಕಲಶದ ಮೂಲಕ ವಿಸರ್ಜನೆ ಆದ ಯಾವುದೇ ದೇವರ ಸೊತ್ತು ಯಾರ ನಿರ್ದೇಶನದಂತೆ ಅನುಜ್ಞ ಕಲಶ ಆಗಿ ವಿಸರ್ಜನೆ ಆಗಿದೆಯೋ ಆ ಕ್ರಮ  ಮಾಡಿದವರಿಗೆ ಸೇರಬೇಕು. ಆದರೆ ಕಾರಿಂಜೇಶ್ವರನ ಕ್ಷೇತ್ರದಲ್ಲಿ ಈ ಯಾವುದೇ ಕಲಶಗಳೂ, ಕೆಲಸಗಳೂ ನಡೆದಿಲ್ಲ.


ಕಾರಿಂಜೇಶ್ವರನಿಗೆ ಹೊಸ ರಥ ಬಂದ ಮೇಲೆ ಹಳೇಯ ರಥಗಳು ಇದ್ದಕ್ಕಿದ್ದಂತೆ ದೇವಸ್ಥಾನದಿಂದ ಕಾಣೆಯಾಗಿ ಇದೀಗ ಮೂಡುಬಿದಿರೆಯ ಜಾತ್ರೆಯೊಂದರಲ್ಲಿ ಪತ್ತೆಯಾಗಿದೆ. ಕಾರಿಂಜೇಶ್ವರನ ರಥಗಳು ಮೂಡುಬಿದಿರೆಗೆ ಹೇಗೆ ಹೋದವು, ಯಾರಾದರೂ ರಥಗಳನ್ನು ಕದ್ದುಕೊಂಡು ಹೋಗಿದ್ದಾರೆಯಾ, ರಥಗಳು ಮೂಡುಬಿದಿರೆಗೆ ಸೇಲ್ ಆಗಿರಬಹುದೇ, ಯಾರಾದರೂ ದೂಡಿಕ್ಕೊಂಡು, ಎಳಕ್ಕೊಂಡು ಹೋದರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

               
   ಕೆಲವು ದಿನಗಳ ಹಿಂದೆ ಕಾರಿಂಜೇಶ್ವರನ ರಥಗಳು ಕಾಣೆಯಾಗಿದೆ ಎಂದು ನಮ್ಮ ಸೈಟಲ್ಲಿ ಪ್ರಕಟಿಸಿದ್ದಕ್ಕೆ ದೇವಸ್ಥಾನದ ಟ್ರಸ್ಟಿಯೊಬ್ಬರು ಫೋನ್ ಮಾಡಿ ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ನಮಗೆ ಮಂಗಳಾರತಿ ಮಾಡಿದ್ದರು. ನಾನ್ ವೆಜ್ಜ್ ಭಾಷೆಯಲ್ಲಿ ನನ್ನ ಗುಣಗಾನ ಮಾಡಿ "ಕಾರಿಂಜಕ್ಕೆ ಬಾ" ಎಂದು ಆಹ್ವಾನ ಕೂಡ ಕೊಟ್ಟಿದ್ದರು. ರಥ ಎಲ್ಲಿ ಮಾರಾಯ್ರೆ ಎಂದು ಕೇಳಿದರೆ ಅವರಲ್ಲಿ ಉತ್ತರ ಇಲ್ಲ. "ನಿನ್ನದೆಂತ ಟಾಯ್ಲೆಟ್ ಪೇಪರ್ " ಎಂದು ಹೀಯಾಳಿಸಿದ್ದರು.



    ಸನ್ಮಾನ್ಯರಿಗೆ ನನ್ನದ್ದೊಂದು ಸಲಹೆ ಏನೆಂದರೆ ನನ್ನ ಟಾಯ್ಲೆಟ್ ಪೇಪರನ್ನು ಅವರೇನಾದರೂ ಟಾಯ್ಲೆಟಿನಲ್ಲಿ ಯೂಸ್ ಮಾಡೋದು ಬೇಡ. ಯಾಕೆಂದರೆ ನನ್ನ ಪತ್ರಿಕೆ ಕಪ್ಪು ಬಿಳುಪು ಬಣ್ಣದ್ದಾಗಿದ್ದು ಅದರ ಕಪ್ಪು ಇಂಕ್ ರಾಸಾಯನಿಕಗಳಿಂದ ಕೂಡಿದೆ. ಇವರೇನಾದರೂ ಟಾಯ್ಲೆಟ್ ಪೇಪರ್ ಎಂದು ಉಪಯೋಗಿಸಿದರೆ ಇವರ ಪೀಂಕಾನ್ ಸೆಪ್ಟಿಕ್ ಆಗುವ ಅಪಾಯಗಳಿವೆ. ಪಾಪ ಇವರಿಗೆ ವಿಸರ್ಜನೆಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ಸಲಹೆ.







....................................................................
ಪುತ್ತೂರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.









 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget