ಮಂಗಳೂರು: ಗಣಿ ಮೇಡಂ ಇನ್ನೂ ಡ್ಯೂಟಿ ಮೇಲೆ!

                                                                           


    ಅಲ್ಲ ಮಾರಾಯ್ರೆ ಒಂದು ರೂಪಾಯಿ ಕಾಯಿನ್ ಅಂಚಿಂಚಿ ಮಾಡಿದ್ದೇವೆ ಎಂದು ಪಬ್ಲಿಕ್ ಗೆ ಗೊತ್ತಾದರೂ ಸಾಕು ನಮಗೆ ಮುಖ ಎತ್ತಲಾಗದೆ ಘಟ್ಟ ಹತ್ತಿ ಬಿಡುತ್ತೇವೆ ಇಲ್ಲದಿದ್ದರೆ ಉಳ್ಳಾಲ ಸಂಕ ಹತ್ತಿ ಬಿಡುತ್ತೇವೆ. ಆದರೆ ಕೋಟಿ ಕೋಟಿ ದುಡ್ಡು, ಚಿನ್ನ,ಬೊಳ್ಳಿ, ಆಸ್ತಿ ಪಾಸ್ತಿ ಸಮೇತ ಸಿಕ್ಕಿ ಬಿದ್ದರೂ ಕೆಲವರಿಗೆ ಏನೂ ಆಗಲ್ಲ. ಅದನ್ನೆಲ್ಲ ಅವರು ಕ್ಯಾರೇ ಮಾಡಲ್ಲ. ಹಾಗಾದರೆ ಈ ದೇಶದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದು ನೀವೇ ಯೋಚಿಸಿ. ಇದು ಮಂಗಳೂರಿನ ಗಣಿ ಇಲಾಖೆಯ ಧಣಿಯೊಬ್ಬಳ ಕತೆ. ಲೋಕಾಯುಕ್ತ ರೈಡ್ ಆದರೂ, ಕರೆನ್ಸಿ, ಗೋಲ್ಡ್, ಸಿಲ್ವರ್, ಲ್ಯಾಂಡ್ ಇವಳ ಖಜಾನೆಯಲ್ಲಿ ಸಿಕ್ಕಿದರೂ ಈಯಮ್ಮ ಇನ್ನೂ ಮಂಗಳೂರಲ್ಲಿ ಡ್ಯೂಟಿ ಮೇಲೆ. ಕೇಳುವವರೇ ಇಲ್ಲ.



 ಇವರು ಕೃಷ್ಣವೇಣಿ ಮೇಡಂ. ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು. ಮಲ್ಲಿಕಟ್ಟೆಯ ಜುಗುಲ್ ಟವರ್ಸಿನಲ್ಲಿ ಇವರ ಕಛೇರಿ ಇದೆ. ಜಲ್ಲಿ ಕ್ರಷರ್ ಗಳು, ಕೆಂಪು ಕಲ್ಲು ವಹಿವಾಟು, ಪೊಯ್ಯೆಯವರು ಮತ್ತು ಈ ಭೂಮಿಯಲ್ಲಿ ಸಿಗುವ ಯಾವುದೇ ಇತರೇ ಸಾಮಾನುಗಳಿಗೆ ಸಂಬಂಧಿಸಿದ ಫೈಲು ಇವರ ಟೇಬಲ್ಲಿಗೆ ಕಡ್ಡಾಯವಾಗಿ ಹೋಗಲೇ ಬೇಕು ಮತ್ತು ಅಂತಹ ಫೈಲುಗಳಿಗೆ ಒಂದು ಗತಿ ಕಾಣಿಸುವುದು ಇದೇ ಕೃಷ್ಣವೇಣಿ ಮೇಡಂ. ಅದರಲ್ಲೂ ಈ ಮ್ಯಾಮ್ ಗೆ ಸೈನ್ ಹಾಕಲು ಬಹಳ ಇಷ್ಟವಾದ ಫೈಲ್ ಯಾವುದೆಂದರೆ ಜಲ್ಲಿ ಕ್ರಷರ್ ಫೈಲುಗಳು. ಯಾಕೆಂದರೆ ಮ್ಯಾಮ್ ಗೆ ಇಂಥ ಫೈಲುಗಳು ದುಡ್ಡಿನ ಸೋನೆ ಮಳೆಯನ್ನೇ ಸುರಿಸಿ ಬಿಡುತ್ತದೆ.  


               
   ಹಾಗೆಂದು ಕೃಷ್ಣವೇಣಿ ಮೇಡಂ ದಕ್ಷಿಣ ಕನ್ನಡಕ್ಕೆ ಬಂದ ಮೇಲೆ ಜಲ್ಲಿ ಕ್ರಷರ್ ಮಾಲೀಕರು ಎಕ್ಕಲೆ ತಿಂದ ಪುಚ್ಚೆಯಂತೆ ಆಗಿ ಹೋಗಿದ್ದಾರೆ. ಮ್ಯಾಮ್ ಅವರನ್ನು  ದುಡ್ಡಿಗಾಗಿ ನಕ್ಷತ್ರಿಕನಂತೆ ಸತಾಯಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ವರ್ಕಿಂಗ್ ಇರುವ, ಸರ್ಕಾರಕ್ಕೆ ತನು ಮನ ಧನ ಪಾವತಿಸಿರುವ ಕ್ರಷರ್ ಗಳ ಪರ್ಮಿಟ್ ಬ್ಲಾಕ್ ಮಾಡಿ, ಕ್ರಷರ್ ನ ಮೊಸರಲ್ಲಿ ಕಲ್ಲು ಹುಡುಕಿ ಆ ಮೂಲಕ ಕ್ರಷರ್ ಮಾಲೀಕರಿಗೆ ಲೈಸೆನ್ಸ್  ಕ್ಯಾನ್ಸಲ್ ಮಾಡುತ್ತೇನೆ, ಮಾಡ್ತೇನೆ ಎಂದು ಬೆದರಿಸಿ ದೊಡ್ಡ ದೊಡ್ಡ ಕಟ್ಟುಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಎಲ್ಲಿಯಾದರೂ ಕಟ್ಟು ಸಿಗದಿದ್ದರೆ ಯಾವುದೇ ಮುಲಾಜಿಲ್ಲದೆ ಲೈಸೆನ್ಸ್ ಕ್ಯಾನ್ಸಲ್ ಮಾಡುವ ತನಕವೂ ಮ್ಯಾಮ್ ಮಿಯಾಂವ್ ಮಿಯಾಂವ್ ಮಾಡುತ್ತಾರೆ ಎಂಬ ದೂರಿದೆ.


  ಹಾಗೆಂದು ಇದೇ ಮ್ಯಾಡಂ ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆದಾಯಕ್ಕಿಂತ ಜಾಸ್ತಿ ಆಸ್ತಿ ಇರುವ ಬಗ್ಗೆ ಲೋಕಾಯುಕ್ತಕ್ಕೆ ದೂರಾಗಿತ್ತು. ಆಮೇಲೆ ಮ್ಯಾಡಂ ಮಂಗಳೂರಿಗೆ ಬಂದರು. ಮಂಗಳೂರಿಗೆ ಬಂದ ಕೂಡಲೇ ಚಿಕ್ಕ ಬಳ್ಳಾಪುರ ಕೇಸಿನಲ್ಲಿ ಮ್ಯಾಡಮ್ ಮೇಲೆ ಲೋಕಾಯುಕ್ತ ರೈಡ್ ಆಗಿದೆ. ಬೆಂಗಳೂರಿನ ಮ್ಯಾಮ್ ಮನೆ ಮೇಲೆ, ವೆಲೆನ್ಸಿಯಾದಲ್ಲಿ ಇರುವ ಫೆಡ್ರೋಸ್ ಎನ್ ಕ್ಲೇವ್ ಮನೆ ಮೇಲೆ, ಮಲ್ಲಿಕಟ್ಟೆ ಜಂಕ್ಷನ್ನಲ್ಲಿ ಅವರ ಆಫೀಸ್ ಇರುವ ಜುಗುಲ್ ಟವರ್ಸಿನ ಮೇಲೆ ಲೋಕಾಯುಕ್ತರು ಗೋಣಿ ಹಿಡ್ಕೊಂಡು ರೈಡು ಬಿದ್ದಿದ್ದರು. ಮ್ಯಾಡಮ್ ಖಜಾನೆಯಲ್ಲಿ ಸಿಕ್ಕಿದ್ದು ಕೋಟಿ ಕಟ್ಟುಗಳು, ಕೆ.ಜಿ ಕೆ.ಜಿ ಚಿನ್ನು, ಬೊಳ್ಳಿ ಮತ್ತು ಆಸ್ತಿ ಪಾಸ್ತಿ ಕಾಕಜಿ ಪತ್ರಗಳು. ಎಂತ ಕೂಡ ಆಗಲಿಲ್ಲ. ಮ್ಯಾಡಮ್ ಇನ್ನೂ ಡ್ಯೂಟಿ ಮೇಲೆಯೇ ಇದ್ದಾರೆ ಮತ್ತು ಕಡೇ ಪಕ್ಷ ಸಸ್ಪೆಂಡ್ ಕೂಡ ಆಗಿಲ್ಲ, ಪನಿಶ್ಮೆಂಟ್ ಟ್ರಾನ್ಸ್ಫರ್ ಕೂಡ ಇಲ್ಲ. ಈಗ ಕಟ್ಟಿಗಾಗಿ ಬೇಡಿಕೆ ಜಾಸ್ತಿ ಆಯಿತೇ ವಿನಃ ಧಾಳಿಯಿಂದ ಮಣ್ಣಂಗಟ್ಟಿಯೂ ಆಗಿಲ್ಲ.



 


" ನನ್ನನ್ನು ಯಾರೂ ಏನೂ ಮಾಡಕ್ಕಾಗಲ್ಲ, ಇಲ್ಲಿಗೆ ಬರ ಬೇಕಾದರೆ ದುಡ್ಡು ಕೊಟ್ಟೇ ಬಂದಿದ್ದೇನೆ. ಲೋಕಾಯುಕ್ತ ರೈಡ್ ಆದರೆ ಅದು ಕೇಸ್ ನಡಿಯುತ್ತಾ ಇರುತ್ತದೆ, ನನಗೆ ಹೈ ಇನ್ ಫ್ಲೂಯೆನ್ಸ್ ಇದೆ" ಎಂದು ಮ್ಯಾಡಮ್ ಘೋಷಣೆ ಮಾಡಿದ್ದು ಇಡೀ ದಕ್ಷಿಣ ಕನ್ನಡವೇ ಬೆಚ್ಚಿ ಬಿದ್ದಿದೆ. ಅದರಲ್ಲೂ ಲೋಕಾಯುಕ್ತ ರೈಡ್ ಆದ ಮೇಲಂತೂ ಮೇಡಂ ಡಿಮ್ಯಾಂಡ್ ತಾರಕಕ್ಕೇರಿದ್ದು, ಕೇಸ್ ನಡೆಸಲು ದುಡ್ಡು ಬೇಕೆಂದು ಕ್ರಷರ್ ಮಾಲೀಕರ ಒಂದೊಂದು ಮಿಲಿ ರಕ್ತವನ್ನೂ ಹೀರಿರುವ ಕಾರಣ ಅವರೆಲ್ಲ ಐಸಿಯೂ, ವೆಂಟಿಲೇಟರಿಗೆ ಶಿಫ್ಟ್ ಆಗಿದ್ದಾರೆ. ಅಕ್ರಮ ಆಸ್ತಿ ಅಕ್ರಮಿಗಳಿಗೆ ಸರಕಾರಿ ಸೇವೆ ಮಾಡಲು ಮತ್ತೆ ಮತ್ತೆ ಅನುವು ಯಾಕೆ ಮಾಡಿಕೊಡಲಾಗುತ್ತಿದೆ? ಉಸ್ತುವಾರಿ ಸಚಿವರು, ನಮ್ಮ ಶಾಸಕರು ಇವರೆಲ್ಲ ಇದ್ದರೂ ಈಯಮ್ಮ ಇನ್ನೂ ರಾಜಾರೋಷವಾಗಿ ಗಣಿ ಕಲೆಕ್ಷನ್ ಮಾಡುತ್ತಿದ್ದಾರೆಂದರೆ ಕಾರ್ಯಾಂಗದ ಮೇಲೆ ಶಾಸಕಾಂಗ ಹಿಡಿತ ಕಳಕೊಂಡಿದೆಯಾ? ಇಷ್ಟಾದರೂ ಕಟ್ಟ ಕಡೇಗೆ ಉಳಿಯುವ ಒಂದು ಪ್ರಶ್ನೆ ಏನೆಂದರೆ ಈ ಲೋಕಾಯುಕ್ತ ರೈಡ್ ಆದರೆ ರೈಡ್ ಆದ  ಅಧಿಕಾರಿಗಳು ಡ್ಯೂಟಿ ಮೇಲೆ ಇರಬಹುದಾ? ಹಾಗಾದರೆ ಉರ್ಚುವುದಕ್ಕಿಂತ ಜಾಸ್ತಿ ತಿನ್ನುವ ಸರ್ಕಾರಿ ಅಧಿಕಾರಿಗಳ ಆರೋಗ್ಯ ತಪಾಸಣೆ ನಡೆಸುವ ಲೋಕಾಯುಕ್ತಕ್ಕೆ ಬೆಲೆ ಇಲ್ವಾ?


....................................................................
ಪುತ್ತೂರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.









 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget