ಪುತ್ತೂರು: ಸಿವಿಲ್ ವಿಷಯಗಳಲ್ಲಿ ಪೋಲಿಸರು

                                                                         


    ಅವರು ಊರಮಾಲ್ ಕಿಟ್ಟಣ್ಣ ರೈ. ಪುತ್ತೂರು ಕಂಡ ಪ್ರತಿಷ್ಠಿತ ಬಂಟ ಮನೆತನಗಳಲ್ಲಿ ಒಂದಾದ ಊರಮಾಲ್ ಫ್ಯಾಮಿಲಿಯ ಯಜಮಾನ. ಆ ಕಾಲದ ದೊಡ್ಡ ಲ್ಯಾಂಡ್ ಲಾರ್ಡ್ ಗಳು. ಸುತ್ತು ಪೌಳಿಯ ಮಹಡಿ ಮನೆ, ಮನೆಗೆ ಚಂದನದ ಬಾಗಿಲು,ಮನೆತುಂಬಾ ಭೂತಗಳು, ನೇಮ ನಡಾವಳಿಗಳನ್ನು ನಡೆಸಿದ ಪ್ರತಿಷ್ಠಿತ ಮನೆತನ. ಸಾಲದು ಎಂಬಂತೆ ಬ್ರಹ್ಮ ಬೈದರ್ಕಳ ನೇಮಗಳನ್ನೂ ನಡೆಸಿದ ಮನೆತನ. ಭಯಂಕರ ಖದರಿನ, ವಿಪರೀತ ಗಟ್ಸಿನ, ಕಂಚಿನ ಕಂಠದ ಊರಮಾಲ್ ಕಿಟ್ಟಣ್ಣ ರೈ ಅಂದರೆ ಆಗ ಇಡೀ ಪುತ್ತೂರು ಗಡಗಡ. ಕಿಟ್ಟಣ್ಣ ರೈ ಈಗ ಬದುಕಿಲ್ಲ. ಅವರಿಗೆ ನಾಲ್ಕು ಜನ ಮಕ್ಕಳು. ಮೂರು ಹೆಣ್ಣು, ಒಂದು ಗಂಡು. ಹೆಣ್ಣು ಮಕ್ಕಳನ್ನು ಪ್ರತಿಷ್ಠಿತ ಬಂಟ ಮನೆತನಗಳ ಕುಬೇರರಿಗೆ ಮದುವೆ ಮಾಡಿ ಕೊಡಲಾಗಿದೆ. ಕಿಟ್ಟಣ್ಣ ರೈಯವರ ಗಂಡು ಮಗ ಅಮರ್ ನಾಥ್ ರೈ. ಆರಡಿ ಎತ್ತರದ, ಮಮ್ಮುಟ್ಟಿ ಫೇಸಿನ, ಸದ್ದಾಂ ಹುಸೇನ್ ಗೆಟಪ್ಪಿನ ಸ್ಪುರದ್ರೂಪಿ ಅಜಾನುಬಾಹು ಗಂಡು ಮಗ. ಅಮರ್ ನಾಥ್ ರೈ ಕರ್ನಾಟಕ ಅರಣ್ಯ ಇಲಾಖೆಯಲ್ಲಿ DFO ಆಗಿದ್ದವರು. ಅಮರ್ ನಾಥ್ ರೈ ನಾನ್ ಕರಫ್ಟ್, ಜನಸ್ನೇಹಿ ಅಧಿಕಾರಿ.ಕೆಲವು ವರ್ಷಗಳ ಹಿಂದೆ ಟೆನಿಸ್ ಆಡುವಾಗ ಹಾರ್ಟ್ ಫೇಲಾಗಿ ತೀರಿ ಹೋಗಿದ್ದಾರೆ. ಕಿಟ್ಟಣ್ಣ ರೈ ಫ್ಯಾಮಿಲಿಗೆ ಸಿರಿತನದಲ್ಲಿ ಏನೂ ತೊಂದರೆ ಇಲ್ಲ. ಮೂರು ತಲೆಮಾರುಗಳ ತನಕ ರಾಶಿ ಹಾಕಿ ಆಗಿದೆ. ಇಂಥ ಫ್ಯಾಮಿಲಿಯ ಒಬ್ಬ ಹೆಣ್ಣು ಮಗಳ ಮೇಲೆ ಕಳ್ಳತನದ ಕೇಸ್ ದಾಖಲಾಗಿದೆ. ಅಡಿಕೆ ಕಳ್ಳತನ. ತನ್ನ ತೋಟದಿಂದ ತಾನೇ ಅಡಿಕೆ ತೆಗೆದದ್ದಕ್ಕೆ ಕಳ್ಳತನದ ಕೇಸ್. FIR ಆಗಿದೆ. ಮಾಡಿದ್ದು ಪುತ್ತೂರು ಟೌನ್ ಪೋಲಿಸರು. ನನಗೆ ನಾಚಿಕೆಯಾಗುತ್ತಿದೆ.


ಹೌದು ಕಿಟ್ಟಣ್ಣ ರೈ ಮಗಳು ಅನಿತಾಕ್ಕೆ ಮೇಲೆ ಪುತ್ತೂರು ಟೌನ್ ಪೋಲಿಸರು ಕಳ್ಳತನದ ಆರೋಪ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅನಿತಾಕ್ಕೆಗೆ ಅಡಿಕೆ ಕದಿಯುವ ಅರ್ಜೆಂಟ್ ಏನೂ ಇಲ್ಲ. ಅವರಿರುವುದು ಮುಂಬೈಯಲ್ಲಿ. ಅಲ್ಲಿ ಅವರಿಗೆ ಬಿಸಿನೆಸ್ ಇದೆ, ಹಣಕಾಸು ವ್ಯವಹಾರಗಳಿವೆ. ಪುತ್ತೂರು ಊರಮಾಲ್ ನಲ್ಲಿ ಅವರಿಗೆ ಅವರ ಅಪ್ಪ ಕಿಟ್ಟಣ್ಣ ರೈಗಳಿಂದ ಪಾಲಿನಲ್ಲಿ ಬಂದ ಪಿತ್ರಾರ್ಜಿತ ಆಸ್ತಿ ಇದೆ. ತಿಂಗಳಿಗೊಮ್ಮೆ ಅವರು ಮುಂಬೈನಿಂದ ಊರಮಾಲ್ ಗೆ ತೋಟ ನೋಡಲು ಬರುತ್ತಾರೆ. ಹಾಗೆ ಬಂದವರ ಮೇಲೆ ಪುತ್ತೂರು ಪೋಲಿಸರು ಅಡಿಕೆ ಕಳ್ಳತನದ ಕೇಸ್ ಹಾಕಿದ್ದಾರೆ. ಅನಿತಾಕ್ಕೆ ಮುಂಬೈನಲ್ಲಿ ಇರುವಾಗ ಅವರ ತೋಟದಿಂದ ಇಡೀ ಊರಿನಲ್ಲಿ ಯಾರಿಗೆಲ್ಲ ಕದಿಯುವ ಹ್ಯಾಬಿಟ್ ಉಂಟೋ ಅವರೆಲ್ಲ ಚಿಲ್ಲರೆ ಚಿಲ್ಲರೆ ಮಾಡಿಕೊಳ್ಳುತ್ತಾರೆ. ಅನಿತಾಕ್ಕೆ ಅಲ್ಲಿ ಮುಂಬೈ ಫ್ಲೈಟ್ ಹತ್ತಿದ ಕೂಡಲೇ ಅವರ ತೋಟ ಖಾಲಿ. ಆದರೂ ಪುತ್ತೂರು ಟೌನ್ ಪೋಲಿಸರು ಅನಿತಾಕ್ಕೆಯ ಮೇಲೆಯೇ ಕಳ್ಳತನದ ಕೇಸ್ ಹಾಕಿದ್ದಾರೆ. ಹೇಗೆ ಮಾರಾಯ್ರೆ ಈ ದೇಶದಲ್ಲಿ ಬದುಕೋದು?


 ಹಾಗೆಂದು ಅನಿತಾಕ್ಕೆಗೂ ಲೋಕಲ್ ಕೆಲವರಿಗೂ ಕೆಲವು ಗಡಿವಿವಾದಗಳಿವೆ. ಅದು ಅಪ್ಪಟ ಸಿವಿಲ್ ಕೇಸುಗಳು, ಅವು ಕೋರ್ಟಿನಲ್ಲಿ ನಡೆಯುತ್ತಾ ಇದೆ. ಈ ಮಧ್ಯೆ ಅನಿತಾಕ್ಕೆಯ ಧೈರ್ಯವನ್ನು ಕುಗ್ಗಿಸುವ ಸಲುವಾಗಿ ಕ್ರಿಮಿನಲ್ ಚಟುವಟಿಕೆಗಳಿಗೆ ಅವರನ್ನು ಎಳೆದು ತರಲಾಗುತ್ತಿದೆ. ಅವರ ಮೇಲೆ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ. ಇದೀಗ ಕಳ್ಳತನದ ಕೇಸ್. ಪೋಲಿಸರು ಹೇಗೆಲ್ಲ ಮಾಡುತ್ತಾರೆ, ಮಾಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಶೇಮ್ ಶೇಮ್.


ಹಾಗೆಂದು ಪುತ್ತೂರು ಟೌನ್ ಠಾಣೆಗೆ ದೊಡ್ಡ ಆದಾಯದ ಮೂಲಗಳಿಲ್ಲ, ದುಡ್ಡಿನ ಒರತ್ತೆಗಳಿಲ್ಲ. ಚಿಕ್ಕ ಚಿಕ್ಕ ಪಿಟ್ಟಿ ಕೇಸ್ ಗಳು ಬಿಟ್ಟರೆ ಬೇರೆ ಕೇಸ್ ಗಳಿಲ್ಲ. ಮಹಿಳೆಯರಿಗೆ ಮಹಿಳಾ ಠಾಣೆ ಇದೆ, ಟ್ರಾಫಿಕ್ ಗೆ ಟ್ರಾಫಿಕ್ ಠಾಣೆ ಇರುವ ಕಾರಣ ಪುತ್ತೂರು ಟೌನ್ ಪೋಲಿಸರಿಗೆ ಕಳ್ಳರು ಸಿಗುವುದೇ ಅಪರೂಪ. ಇನ್ನು ಕ್ರಿಮಿನಲ್ ಚಟುವಟಿಕೆಗಳು ಕೂಡ ಟೌನ್ ಏರಿಯಾದಲ್ಲಿ ಕಡಿಮೆ ಇರುವ ಕಾರಣ ಪುತ್ತೂರು ಟೌನ್ ಪೋಲಿಸರಿಗೆ ಒಮ್ಮೊಮ್ಮೆ ಬೋಣಿ ಕೂಡ ಆಗದ ದಿನಗಳಿವೆ. ಹಾಗಾಗಿ ಪುತ್ತೂರು ಟೌನ್ ಗೆ ಯಾವ ಪೋಲಿಸರೂ, ಎಸ್ಸೈಗಳೂ, ಇನ್ಸ್ ಪೆಕ್ಟರ್ ಗಳೂ ಬರಲು ನಾಚಿಕೆ ಮಾಡಿಕೊಳ್ಳುತ್ತಾರೆ ಮತ್ತು ಅಲ್ಲಿಗೆ ಕಳಿಸದಂತೆ ಕಂಡ ಕಂಡವರಿಗೆ ದುಂಬಾಲು ಬೀಳುತ್ತಾರೆ. ಹಾಗೆ ಪುತ್ತೂರು ಟೌನಿಗೆ ಪನಿಶ್ಮೆಂಟ್ ಟ್ರಾನ್ಸ್ಫರ್ ಆದವರು ಹೀಗೆಲ್ಲ ಕಳ್ಳರಲ್ಲದವರಿಗೆ ಕಳ್ಳತನದ ಕೇಸ್ ಹಾಕೋದು, ಸಿವಿಲ್ ಕೇಸ್ ಗಳನ್ನ ಕ್ರಿಮಿನಲೈಜ್ ಮಾಡೋದು, ಕ್ರಿಮಿನಲ್ ಕೇಸ್ ಗಳಿಗೆ ಆಕಳಿಸಿ ಬಿಡೋದು ಇತ್ಯಾದಿ ಮಾಡುತ್ತಾರೆ.

               
   ತುಂಬಾ ದಿನಗಳಿಂದ ಪುತ್ತೂರು ಟೌನ್ ಪೋಲಿಸರ ಮೇಲೆ ಸಾರ್ವಜನಿಕ ಅಸಮಾಧಾನಗಳಿವೆ. ಅದರಲ್ಲಿ ಸಿವಿಲ್ ಕೇಸ್ ಗಳಿಗೆ ಕ್ರಿಮಿನಲ್ ಟಚ್ ಕೊಡುವುದು ಮೊದಲನೇ ಅಸಮಾಧಾನ. ಲ್ಯಾಂಡ್ ಡಿಸ್ಪ್ಯೂಟ್ ಗಳಲ್ಲಿ ಎಂಟ್ರಿ ಆಗುವ ಪೋಲಿಸರು ಒಂದು ಕಡೆಗೆ ಪೆವರಿಸಂ ತೋರಿಸಿ ಎದುರು ಪಾರ್ಟಿಯನ್ನು ಲಗಾಡಿ ತೆಗೆದು ಬಿಡುತ್ತಾರೆ. ಇಂಥ ಪ್ರಕರಣಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ಊರಮಾಲ್ ಕೇಸ್. DFO ಒಬ್ಬರ ಅಕ್ಕನ ಮೇಲೆ, ಊರಿನವರ ಪಂಚಾಯ್ತಿ ನಡೆಸುತ್ತಿದ್ದ ಯಜಮಾನನ ಮಗಳ ಮೇಲೆ ಅಡಿಕೆ ಕದ್ದ ಕೇಸ್. ಪುತ್ತೂರು ಪೋಲಿಸರಿಗೆ ಏನಾಗಿದೆ?



    ಹಾಗೆಂದು ಪುತ್ತೂರು ಪೋಲಿಸರು ಕೆಟ್ಟವರಲ್ಲ.ಒಳ್ಳೆ ಜನ ಅವರು. ಆದರೆ ಅವರಿಗೆ ಬೇರೆ ಆದಾಯ ಇಲ್ಲ. ಅವರೂ ಪಾಪ ಏನಾದರೂ ಮಾಡಬೇಕಲ್ಲ. ಅದಕ್ಕೆ ರಿಯಲ್ ಎಸ್ಟೇಟ್ ಕುಳಗಳೊಂದಿಗೆ, ಫೈನಾನ್ಸಿಯರ್ ಗಳೊಂದಿಗೆ, ಭೂಗಳ್ಳರೊಂದಿಗೆ ಸೇರಿಕ್ಕೊಂಡು ಏನಾದರೂ ಚಿಲ್ಲರೆ ಮಾಡಿ ಕೊಳ್ಳುತ್ತಾರೆ. ಹಾಗೆಂದು ಮಾಡಿಕೊಳ್ಳಲಿ  ಅವರೂವೆ. ಎಲ್ಲರೂ ಮಾಡುವಾಗ ಪುತ್ತೂರು ಟೌನ್ ಪೋಲಿಸರು ಮಾತ್ರ ಏನೂ ಮಾಡಬಾರದೆಂದು ಹೇಳುತ್ತಿಲ್ಲ. ಆದರೆ ಕಳ್ಳರಲ್ಲದವರ ಮೇಲೆ ಕಳ್ಳತನದ  ಕೇಸ್ ಹಾಕೋದು ಯಾವ ಸೀಮೆ ಪೋಲಿಸ್ ಗಿರಿ? ಕಳ್ಳರು ಹೇಗಿರುತ್ತಾರೆ, ಅವರ ಚರ್ಯೆ ಹೇಗಿರುತ್ತದೆ, ಅವರ ಗೆಟಪ್, ನಡೆನುಡಿ, ಹಾವಭಾವ, ಮುಖ ಲಕ್ಷಣ ಹೇಗಿರುತ್ತದೆ ಎಂಬ ಸಾಮಾನ್ಯ ಕನಿಷ್ಠ ಜ್ಞಾನವೂ ಪುತ್ತೂರು ಪೋಲಿಸರಿಗೆ ಇರದ್ದು ವಿಪರ್ಯಾಸವೇ ಸರಿ.  ಅನಿತಕ್ಕೆ ಅಡಿಕೆ ಕಳ್ಳಿಯ ಹಾಗೆ ಕಾಣುತ್ತಾರಾ? ಹಾಗೇನಾದರೂ ಊರಮಾಲ್ ಕಿಟ್ಟಣ್ಣ ರೈ ಮಗಳು, DFO ಅಮರ್ ನಾಥ್ ರೈ ಅಕ್ಕ ಪುತ್ತೂರು ಪೋಲಿಸರಿಗೆ ಅಡಿಕೆ ಕಳ್ಳಿಯ ಹಾಗೆ ಕಂಡರೆ ಪೋಲಿಸರ ಐ ಟೆಸ್ಟ್ ಮಾಡುವ ಕೆಲಸ ಆಗಬೇಕಿದೆ. ಯಾಕೆಂದರೆ ಅವರಿಗೆ ಎಸ್ಪಿ ಸರ್ಕಾರಿ ಬಸ್ ಡ್ರೈವರ್ ಥರ ಕಂಡರೆ ಅವರಿಗೇ ಅಪಾಯ. ಪುತ್ತೂರು ಪೋಲಿಸರ ಈ ಒಂದು ಸಿವಿಲ್ ಕೇಸ್ ಗಳ ಕ್ರಿಮಿನಲೈಸೇಷನ್ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರಾಗಿದ್ದು ಅವರು ಒಂದು ಸುತ್ತು ವಾರ್ನಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಿವಿಲ್ ಕೇಸ್ ಗಳು ಬಂದರೆ "ಕೋರ್ಟಲ್ಲಿ ನೋಡಿಕೊಳ್ಳಪ್ಪ" ಎಂದು ಹಿಂಬರಹ ಕೊಡುವುದು ಬಿಟ್ಟು ಸಿವಿಲನ್ನು ಕ್ರಿಮಿನಲ್ ಮಾಡುವುದು ತಪ್ಪು. ಇಷ್ಟು ಬರೆದು ಇನ್ನು ಪುತ್ತೂರು ಪೋಲಿಸರು ನನಗೆ ಯಾವ ಕಳ್ಳನ ಪಟ್ಟ ಕಟ್ಟುತ್ತಾರೋ ದೇವುಡು..ದೇವುಡು..!





....................................................................
ಪುತ್ತೂರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.









 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget