ಕುಕ್ಕೆ: ಷಷ್ಠಿ ಸಂಪನ್ನ ! ಕಜವು ದುಬಾರಿ?

                                                                       


    ಈಗಾಗಲೇ ಪಾರ್ವತಿ ಮಗನ ರಥೋತ್ಸವ ನಡೆಸಿ, ಅವಭೃತ ಸ್ನಾನ ಮುಗಿಸಿ, ಷಷ್ಠಿ ಸಂಪನ್ನಗೊಳಿಸಿ ಪರಮ ಭಕ್ತರು ಮಾಮೂಲು ಸ್ಥಿತಿಗೆ ಬರುತ್ತಿದ್ದಾರೆ ಸುಬ್ರಹ್ಮಣ್ಯದಲ್ಲಿ. ಪಶ್ಚಿಮ ಘಟ್ಟಗಳ ತಪ್ಪಲಿನ ಕುಕ್ಕೆಯಲ್ಲಿ ಪಾರ್ವತಿ ಮಗನಿಗೆ ದೊಡ್ಡ ಜಾತ್ರೆ ನಡೆಯುತ್ತದೆ. ಪಾರ್ವತಿ ಮಗ ಕನ್ನಡ ನೆಲದ ಸಿರಿವಂತ ದೇವರು. ಇಲ್ಲಿ ದಿನಾ ದುಡ್ಡಿನ ಬರ್ಸ, ಭಕ್ತಿಯ ಬಿರುಗಾಳಿ.


ಹಾಗೆಂದು ಪಾರ್ವತಿ ಮಗನ ಹೆಸರಿನಲ್ಲಿ ಇಲ್ಲಿ ದಿನಾ ಅಮಾಯಕ ಭಕ್ತರ ಸುಲಿಗೆ ನಡೆಯುತ್ತಿದೆ. ಅದು ಇಲ್ಲಿ ಮಾಮೂಲಿ. ಅದೇ ಸುಲಿಗೆ ಜಾತ್ರೆ ಸಮಯದಲ್ಲಿ ಜಾಸ್ತಿಯಾಗಿ ಬಿಡುತ್ತದೆ. ಜಾತ್ರೆ ಸಮಯದಲ್ಲಿ ಇಲ್ಲಿ ಅಂಗಡಿಗಳ ಸಂಖ್ಯೆಯೂ ವಿಪರೀತವಾಗಿ ಜಾಸ್ತಿಯಾಗುತ್ತದೆ.


 ಈ ಸಲ ಲೋಕಲ್ ಪಂಚಾಯ್ತಿ ಪ್ರತೀ ಅಂಗಡಿಗಳಿಂದ ಕೇವಲ ಕಜವು ತೆಗೆಯಲೆಂದೇ 700 ರುಪಾಯಿಗಳಿಂದ 1000 ತನಕ ವಸೂಲು ಮಾಡಿದೆ ಎಂದು ತಿಳಿದುಬಂದಿದೆ. ಚಿತ್ತ್ ಪುಳಿ ಮಾರುವವನಿಗೂ 700 ರುಪಾಯಿ ಚಾರ್ಜ್ ಹಾಕಲಾಗಿದೆ. ಅಲ್ಲ ಮಾರಾಯ್ರೆ ಚಿತ್ತ್ ಪುಳಿ ಮಾರುವವ ಏನು ಕಜವು ಮಾಡುತ್ತಾನೆ? ಎಷ್ಟು ಕಜವು ಮಾಡುತ್ತಾನೆ? ಅದರಲ್ಲೂ ಪಂಚಾಯ್ತಿ ಕೊಟ್ಟ ಈ ಬಿಲ್ ಬಗ್ಗೆಯೂ ಅನುಮಾನಗಳಿದ್ದು ಕಂಡಕ್ಟರ್ ಹರಿದು ಕೊಡುವ ಟಿಕೆಟ್ ನಂತೆ ಇದ್ದ ಈ ಬಿಲ್ ಯಾರ ಅಕೌಂಟಿಗೆ ಜಮೆ ಆಗಿರಬಹುದು ಎಂಬುದೇ ಸಂಶಯ.


ಇನ್ನು ಮೊನ್ನೆಯ ಜಾತ್ರೆ ಸಮಯದಲ್ಲಿ ಆ ಜಾಯಿಂಟ್ ವೀಲ್, ತೊಟ್ಟಿಲು ಅದು ಇದು ಎಂದೆಲ್ಲ ಕೇವಲ ಒಂದು ಲಕ್ಷದ ತೊಂಭತ್ತು ಸಾವ್ರಕ್ಕೆ ಏಲಂ ಆಗಿದೆ ಎಂದು ತಿಳಿದುಬಂದಿದೆ. ಅದು ಕೂಡ ಯಾರೋ ಹೋಗಿ ಕಿರಿಕಿರಿ ಮಾಡಿದಕ್ಕೆ ಅಷ್ಟಕ್ಕೆ ಏಲಂ. ಇಲ್ಲದಿದ್ದರೆ ಕೇವಲ ಒಂದು ಲಕ್ಷದ ಒಳಗೆ ಏಲಂ ಆಗಿ ಹೋಗುತ್ತಿತ್ತಂತೆ. ಸುಳ್ಯ ಚೆನ್ನಕೇಶವನ ಜಾತ್ರೆಯ ಜಾಯಿಂಟ್ ವೀಲ್ ಏಳು ಲಕ್ಷಕ್ಕೆ ಏಲಂ ಆಗುವುದಂತೆ. ಆದರೆ ರಾಜ್ಯದ ನಂಬರ್ ವನ್ ಸಿರಿವಂತ ದೇವರ ಜಾತ್ರೆಯದ್ದು ಕೇವಲ ಇಷ್ಟಕ್ಕೇ ಏಲಂ ಆಗೋದಾ ಎಂಬ ಸಂಶಯ ಎದ್ದಿದೆ.



    ಹಾಗೆಂದು ಮೊನ್ನೆಯ ಚಂಪಾ ಷಷ್ಠಿಯಲ್ಲಿ ಸುದ್ದಿಲ್ಲದೆ, ಸದ್ದಿಲ್ಲದೆ ಕೆಲಸ ಮಾಡಿದ್ದು ಸುಬ್ರಹ್ಮಣ್ಯದ ಪೋಲಿಸರು. ಎಸ್ಸೈ ಕಾರ್ತಿಕ್ ಟೀಂ ಎಷ್ಟು ಅಚ್ಚುಕಟ್ಟಾಗಿ ಲಾ & ಆರ್ಡರ್ ಕಾಪಾಡಿದ್ದಾರೆಂದರೆ ಒಬ್ಬೇ ಒಬ್ಬ ಸಿಂಗಲ್ ಕಳ್ಳನಿಗೆ ಕೈಚಳಕ ತೋರಿಸಲು ಚಾನ್ಸೇ ಕೊಡಲಿಲ್ಲ. ಇನ್ನು ಚೈನ್ ಎಳೆಯುವವರು,ಕಾರು ಕಳ್ಳರು, ಚಿಲ್ಲರೆ ಕಳ್ಳರು, ವಿಕೃತರು ಹಾಗೂ ಯಾವ ಸೈಜಿನ ಕಳ್ಳನಿಗೂ ಕಾರ್ತಿಕ್ ಟೀಂ ಚಾನ್ಸೇ ಕೊಟ್ಟಿಲ್ಲ.


ಅಷ್ಟು ದೊಡ್ಡ ಜನ ಸಾಗರವೇ ಇದ್ದರೂ ಎಲ್ಲೂ ಟ್ರಾಫಿಕ್ ಜಾಮ್ ಆಗದಂತೆ ಎಚ್ಚರಿಕೆ ವಹಿಸಿ ಅದನ್ನು ಸುಬ್ರಹ್ಮಣ್ಯ ಪೋಲಿಸರು ಸಮರ್ಥವಾಗಿ ನಿಭಾಯಿಸಿದ್ದರು. ಇನ್ನು ಬ್ರಹ್ಮ ರಥೋತ್ಸವ ಸಂದರ್ಭದಲ್ಲೂ ಪೋಲಿಸರು ಮೈಯೆಲ್ಲಾ ಕಿವಿಯಾಗಿ, ಕಣ್ಣಾಗಿ ತಮ್ಮ ಕೆಲಸವನ್ನು A1 ಗ್ರೆಡ್ ನಲ್ಲಿ ಮುಗಿಸಿದ್ದಾರೆ. ಇನ್ನು ಬಾಕಿ ಇಲಾಖೆಗಳ ಕತೆಯೇ ಒಂದು ದಂತಕಥೆ.
...............................


...............................
ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಸುಳ್ಯ ಆಶ್ರಯದಲ್ಲಿ , ರಾಷ್ಟ್ರೀಯ ಕ್ರೀಡಾಪಟು ಆಗಿರುವ ಶ್ರೀ ಮಾಯಿಲಪ್ಪ ಗೌಡ ಕೊಂಬೆಟ್ಟು ಇವರ ಸಾರಥ್ಯದಲ್ಲಿ, 3 ದಿನಗಳ ಸೂರ್ಯ ಹೊನಲು ಬೆಳಕಿನ ಪ್ರಾಥಮಿಕ ಶಾಲಾ ಬಾಲಕಿಯರ, ಪ್ರೌಢಶಾಲಾ ಬಾಲಕ ಬಾಲಕಿಯರ, 8 ನೇ ತರಗತಿ ಬಾಲಕರ, 19 ವರ್ಷದ ಒಳಗಿನ ಬಾಲಕಿಯರ ಹಾಗೂ ಪುರುಷರ 55 KG ವಿಭಾಗದ ಮುಕ್ತ ಹಾಗೂ ಪುರುಷರ 65 KG ವಿಭಾಗದ ಮುಕ್ತ ಹಾಗೂ ಗೌಡ ಕುಟುಂಬಗಳ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಕೂಟ ಡಿಸೆಂಬರ್ 20,21,22 ರಂದು 3 ದಿನ ಗುತ್ತಿಗಾರಿನ ದೇವಿಸಿಟಿ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ.





ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ, 8 ನೇ ತರಗತಿ ಬಾಲಕರ , ಪ್ರೌಢಶಾಲಾ ಬಾಲಕ ಬಾಲಕಿಯರ, 19 ವರ್ಷದ ಒಳಗಿನ ಬಾಲಕಿಯರ ಹಾಗೂ ಪುರುಷರ 55KG ವಿಭಾಗದ ಪಂದ್ಯಾಕೂಟದ ಬಹುಮಾನವಾಗಿ ಪ್ರಥಮ 5000 ಹಾಗೂ ಟ್ರೋಫಿ ದ್ವಿತೀಯ 3000 ಹಾಗೂ ಟ್ರೋಫಿ ಹಾಗೂ ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 1000 ನಗದು ಹಾಗೂ ಟ್ರೋಫಿ ನೀಡಲಾಗುವುದು ಮತ್ತು ಪುರುಷರ 65 KG ವಿಭಾಗದ ಕಬಡ್ಡಿ ಹಾಗೂ ಗೌಡ ಕುಟುಂಬಗಳ ಮುಕ್ತ ಕಬಡ್ಡಿ ಪಂದ್ಯಾಕೂಟದ ಬಹುಮಾನವಾಗಿ ಪ್ರಥಮ 10000 ನಗದು ಹಾಗೂ ಟ್ರೋಫಿ ,ದ್ವೀತಿಯ 7000 ನಗದು ಹಾಗೂ ಟ್ರೋಫಿ ಮತ್ತು ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 4000 ನಗದು ಹಾಗೂ ಟ್ರೋಫಿ ನೀಡಲಾಗುವುದು ಮತ್ತು ವೈಯುಕ್ತಿಕ ಪ್ರಶಸ್ತಿಗಳಿಗೆ ನಗದು ಹಾಗೂ ಟ್ರೋಫಿಯನ್ನು  ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ


ಓದುಗರ ಗಮನಕ್ಕೆ: ಪಟ್ಲೆರ್ ನ್ಯೂಸ್ ಪತ್ರಿಕೆಯು ಜಾಲತಾಣದಲ್ಲಿ ವೆಬ್ ಸೈಟ್ ಮೂಲಕ ಬರುತ್ತಿರುವುದು ಎಲ್ಲಾ ಓದುಗರಿಗೂ ತಿಳಿದಿರುವ ವಿಷಯ. ಪಟ್ಲೆರ್ ನ್ಯೂಸ್ RNI ರಿಜಿಸ್ಟ್ರೇಷನ್ ಹೊಂದಿದ್ದು ಈಗ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತಿದೆ. ಸೂರಜ್ ಪಟೇಲ್ ಎರಡೂ ವಿಭಾಗಗಳಲ್ಲಿ ಸಂಪಾದಕರಾಗಿದ್ದು ಅವರಿನ್ನೂ ಜೀವಂತ ಇರುವ ಕಾರಣ 7996688709 ನಂಬರಿನ ಮೂಲಕ ಅವರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸಬಹುದಾಗಿದೆ. ಆದರೂ ಕೆಲವು ಪೋಕ್ರಿಗಳು, ಹೆಬ್ಬೆಟ್ಟುಗಳು ವೆಬ್ ಸೈಟಿನ ಕಾಲಂ ರೈಟರ್ ಗಳು ವೆಬ್ ಸೈಟ್ ಗೆ ನ್ಯೂಸ್ ಕೊಡುವವರು, ವರದಿಗಾರರು ಎಂದು ಅವರಿಗೆ ಬೆದರಿಕೆ ಹಾಕುವುದು, ಕಿರಿಕಿರಿ ಮಾಡುವುದು ಕಂಡು ಬಂದಿದೆ. ಕೆಲವು ಅಧಿಕ ಪ್ರಸಂಗಿಗಳು ಜಾಹೀರಾತುದಾರರಿಗೂ ಕಾಲ್ ಮಾಡಿ ಬೆದರಿಕೆ ಹಾಕಿದ ಘಟನೆಗಳು ನಡೆದಿವೆ. ಇದೆಲ್ಲ ಯಾವ ಪ್ರಯೋಗಗಳು ಪ್ರಯೋಜನಕ್ಕೆ ಬರಲ್ಲ. ನಿಮ್ಮ ಯಾವುದೇ ಗಲಾಟೆ, ಡಿಶುಂ ಡಿಶುಂ, ಕುಸ್ತಿಗಿಸ್ತಿ ಇದ್ದರೂ ಅದು ನನ್ನೊಟ್ಟಿಗೆ ಮಾತ್ರ ಇರಲಿ. ಅವರೊಟ್ಟಿಗೆ ಬೇಡ. ಅವರು ಪೋಲಿಸ್ ಗೆ ಹೇಳ್ತಾರೆ. ನಾನು ಯಾರಿಗೂ ಹೇಳಲ್ಲ. ನಾವಿಬ್ಬರೂ ಇಡೀ ನೈಟ್ ನೈಂಟಿ ನೈಂಟಿ ಮಾತಾಡುವ. ನಾನು ಯಾರಿಗೂ ಹೇಳಲ್ಲ. ನನಗೂ ಬಯ್ದು ಬಿಡಿ,ನನ್ನ ಹೆಂಡ್ತಿಗೂ ಬಯ್ದು ಬಿಡಿ. ಸಹಿಸಿಕೊಳ್ಳುತ್ತೇವೆ
Call: 7996688709 SOORAJ PATEL
..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.







 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget