ಸುಳ್ಯ: ಶೂಲಿನಿ ದುರ್ಗಾ ದೇವಿಗೆ ಬ್ರಹ್ಮ ಕಲಶೋತ್ಸವ

             



    ಅದು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮುತ್ಲಾಜೆ ಚಣಿಲ. ಇಲ್ಲಿ ಹಲವು ದಶಕಗಳಿಂದ ಭಗವಧ್ಭಕ್ತರು ಶ್ರೀ ಶೂಲಿನಿ ದುರ್ಗಾ ದೇವಿ ಮತ್ತು ವನ ಶಾಸ್ತಾವು ದೇವರನ್ನು ಪೂಜಿಸಿಕೊಂಡು ಬಂದಿದ್ದು ಇಲ್ಲಿ ಕಾರಣಿಕದ ಸಾನಿಧ್ಯ ಇದೆ. ಇಲ್ಲಿನ ಮುತ್ಲಾಜೆ ಫ್ಯಾಮಿಲಿಯ ಶ್ರೀ ದಯಾನಂದ ಮುತ್ಲಾಜೆ ಅವರ ಸಾರಥ್ಯದಲ್ಲಿ ಇದೀಗ ಶೂಲಿನಿ ಮತ್ತು ವನಶಾಸ್ತಾವು ದೇವರುಗಳ ಕಟ್ಟೆಗಳು ನವೀಕರಣಗೊಂಡಿದ್ದು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ. ಇದೇ ಬರುವ 2-1-2025ನೇ ಗುರುವಾರ ಕುಂಟಾರು ಶ್ರೀರವೀಶ್ ತಂತ್ರಿಗಳ ನೇತೃತ್ವದಲ್ಲಿ ಇಲ್ಲಿ ದೇವರುಗಳ ಕಟ್ಟೆಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಹಾ ಕುಂಭಾಭಿಷೇಕ ನಡೆಯಲಿದೆ. ಜೊತೆಗೆ ಅಶ್ವಥ ಕಟ್ಟೆ ಪೂಜೆ ಕೂಡ ನಡೆಯಲಿದ್ದು ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.





 ಸದ್ರಿ ಶೂಲಿನಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿರುವ ಗುತ್ತಿಗಾರಿನ ಪ್ರತಿಷ್ಠಿತ ಮುತ್ಲಾಜೆ ಮನೆತನದ ಶ್ರೀ ದಯಾನಂದ ಮುತ್ಲಾಜೆಯದ್ದು ಧಾರ್ಮಿಕ ಸೇವೆಯಲ್ಲಿ, ಸಾಮಾಜಿಕ ಸೇವೆಯಲ್ಲಿ ಬಹಳ ಹಳೇಯ ಹೆಸರು. ಇಪ್ಪತ್ತು ವರ್ಷಗಳ ಕಾಲ ಗುತ್ತಿಗಾರು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಶಿಕ್ಷಣ ಸೇವೆ ಸಲ್ಲಿಸಿದ್ದ  ಮುತ್ಲಾಜೆ ನಂತರ ಅದೇ  ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಸಮಯದಲ್ಲಿ ಶಾಲೆಯಲ್ಲೇ ಅಡಿಕೆ ತೋಟ ಮಾಡಿದ ಅಗ್ರಿಕಲ್ಚರ್ ಟೀಚರ್. ಶಾಲೆಯ ಖಾಲಿ ಸ್ಥಳವನ್ನು ಹಾಗೆ ಒಣಗಲು ಬಿಡದೆ ಅದರಲ್ಲಿ ಐನೂರು ಮಂಗಳ ಅಡಿಗೆ ಗಿಡ ನೆಟ್ಟು ತನ್ನ ಮನೆಯ ತೋಟದಂತೆ, ಮಕ್ಕಳಂತೆ ಸಾಕಿ ಇದೀಗ ಫಸಲಿಗೆ ರೆಡಿಯಾಗಿದ್ದು ಎಲ್ಲದರಲ್ಲೂ ಪೊಟ್ಟು ಪಿಂಗಾರ ಬಂದಿದೆ. ಈ ಫಸಲು ಶಾಲೆಗೆ ಆನೆ ಬಲ ಕೊಡಲಿದೆ. ಇನ್ನು ಮುತ್ಲಾಜೆಯವರು ಹದಿನೈದು ವರ್ಷಗಳ ಕಾಲ ಗುತ್ತಿಗಾರಿನ ಆರಾಧ್ಯ ದೈವಗಳಾದ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಧಾರ್ಮಿಕ ಸೇವೆ ಸಲ್ಲಿಸಿದ್ದಾರೆ. ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಮುತ್ಲಾಜೆಯವರು ಇದೀಗ ಶೂಲಿನಿ ಸಾನಿಧ್ಯದ ಬ್ರಹ್ಮಕಲಶೋತ್ಸವದ ಅವಸರದಲ್ಲಿದ್ದಾರೆ. ರೈತ ಮಾಸ್ತರರ ಸಮಾಜ ಸೇವೆ ಇನ್ನೂ ಮುಂದುವರೆಯಲಿ.



  ಪುತ್ತೂರು: ಕಬಕ ಕಲ್ಲಂದಡ್ಕದಲ್ಲಿ ಹೋಲ್ ಸೇಲ್ ಗಾಂಜಾ ಮಾರಾಟ!
ಇಡೀ ಪುತ್ತೂರಿಗೆ ಗಾಂಜಾ ಸರಬರಾಜು ಇತ್ತ ಕಬಕ ಸೈಡಿನ ಕಲ್ಲಂದಡ್ಕದಿಂದ ಆಗುತ್ತಿದೆ ಎಂದು ಪೋಲಿಸರಿಗೂ ಕರೆಕ್ಟಾಗಿ ಗೊತ್ತಿರುವ ವಿಷಯ. ಆದರೆ ಪೋಲಿಸರಿಗೆ ಹಿಡಿಯಲಿಕ್ಕೆ ಆಗುತ್ತಿಲ್ಲ, ಯಾಕೆಂತ ಗೊತ್ತಿಲ್ಲ.
ಹಾಗಂತ ಕಬಕ ಕಲ್ಲಂದಡ್ಕಕ್ಕೆ ಮೂರು ಮಾರ್ಗಗಳಿವೆ ಮಾರಾಯ್ರೆ. ಪೋಲಿಸರು ಒಂದು ಮಾರ್ಗದಲ್ಲಿ ಬಂದರೆ ಕಳ್ಳರು ಉಳಿದ ಎರಡು ರೋಡಲ್ಲಿ ಓಡಿ ಓಡಿ ಹೋಗುತ್ತಾರೆ. ಇಂಥ ಕಲ್ಲಂದಡ್ಕದಲ್ಲಿ ಪುತ್ತೂರು ಪೋಲಿಸರಿಗೆ ಬೇಕಾಗಿರುವ ಗಾಂಜಾ ರಾಜರಿದ್ದಾರೆ. ಇಡೀ ಪುತ್ತೂರು ಪೇಟೆಗೆ ಇಲ್ಲಿಂದಲೇ ಗಾಂಜಾ ಹೋಗುತ್ತಿದೆ ಎಂಬ ಗುಮಾನಿಗಳಿವೆ. ಬೇರೆ ರಾಜ್ಯಗಳ  ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಗಾಡಿಗಳು ಕಲ್ಲಂದಡ್ಕದಲ್ಲಿ ಮಾಮೂಲಿಯಾಗಿದ್ದು ಪಾಂಡಿಚೇರಿ ಗಾಡಿಯೊಂದು ಇಲ್ಲಿ ಚಿರಪರಿಚಿತ. ಒಮ್ಮೆ ಪೋಲಿಸರು ಮೂರು ಮಾರ್ಗಗಳಲ್ಲೂ ಏಕಕಾಲಕ್ಕೆ ರೈಡ್ ಬಿದ್ದರೂ ಚಿಲ್ಲರೆ ಗಾಂಜಾ ಏನೋ ಸಿಕ್ಕಿದ್ದು ಬಿಟ್ಟರೆ ಬೇರೆನೂ ಸಿಕ್ಕಿರಲಿಲ್ಲ. ಹಾಗೆಂದು ಗಾಂಜಾ ರಾಜ ಯಾರೆಂದು ಗೊತ್ತಿದ್ದರೂ ಪೋಲಿಸರು ಆ ಮಹಾನ್ ಪುರುಷನನ್ನು ಯಾಕೆ ಹಿಡಿಯುತ್ತಿಲ್ಲ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಹೇಗೂ ಕಲ್ಲಂದಡ್ಕಕ್ಕೆ ಮೂರು ಮಾರ್ಗಗಳಿವೆ, ಒಮ್ಮೆ ಗಾಂಜಾ ರಾಜನನ್ನು ಹಿಡಿದು ಕುಪ್ಪಿಯಲ್ಲಿ ತುಂಬಿಸಿ ಬೂಚಿ ಬಂದ್ ಮಾಡಿ ಮೂರು ಮಾರ್ಗ ಸೇರುವಲ್ಲಿ ಹೂತು ಬಿಟ್ಟರೆ ಒಂದು ಸಿನಿಮಾ ಮುಗಿಯುತ್ತದೆ. ಆದರೆ ಪೋಲಿಸರು ಯಾಕೋ ಕಲ್ಲಂದಡ್ಕ ಸೈಡ್ ಹೋಗುತ್ತಿಲ್ಲ.




  ಲಾಸ್ಟ್ ಬಾಲ್: ಅಲ್ಲಿ ಪುತ್ತೂರು RTO ಕಚೇರಿ ಹತ್ತಿರದ ಆಟೋ ಸ್ಟೇಂಡಿಗೆ ಐದು ಲಕ್ಷ ಖರ್ಚಾಗಿದೆ ಅಂತ ಬೋರ್ಡ್ ಹಾಕಿದ್ದಾರೆ. ಮೂರು ಲಕ್ಷ ಕಷ್ಟದಲ್ಲಿ ಮುಗಿದಿರ ಬಹುದು. ಉಳಿದದ್ದು?


Extra ಬಾಲ್: ಕಾಣಿಯೂರು ಬ್ಯಾಂಕ್ ಆಫ್ ಬರೋಡಾದಿಂದ ಮತ್ತೇ 77 ಸಾವಿರ ಢಮಾರ್: ಕಾಣಿಯೂರು ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ SB ಅಕೌಂಟ್ ಹೊಂದಿದ್ದ ಉಸ್ತಾದ್ ಒಬ್ಬರ ಅಕೌಂಟಿನಲ್ಲಿದ್ದ 77 ಸಾವಿರ ಇಂಡಿಯನ್ ಕರೆನ್ಸಿಯನ್ನು ಯಾರೋ ಸ್ಟ್ರಾ ಉಪಯೋಗಿಸಿ ಎಳೆದಿದ್ದಾರೆ. ಉಸ್ತಾದರಿಗೆ ಧನಿ ಫೈನಾನ್ಸಿಂದ ಸಾಲ ಬೇಕಾ ಎಂದು ಕರೆ ಬಂದಿದ್ದು ಉಸ್ತಾದರು ದಮ್ಮಯ್ಯ ಬೇಡ ಅಂದು ಕರೆ ಕಟ್ ಮಾಡಿದ್ದರು.ಅಷ್ಟೇ. ಮರುದಿನ ಉಸ್ತಾದರು ಬಂಗಾರ ಪರ್ಚೇಸ್ ಮಾಡುವ ಎಂದು ಬಂಗಾರದ ಅಂಗಡಿಗೆ ಹೋಗಿ ಫೋನ್ ಫೇಗೆ ಕೈ ಹಾಕಿದರೆ ಅದರಲ್ಲಿ ಎಲ್ಲಾ ಖಾಲಿಯಾಗಿತ್ತು. ಈ ಬಗ್ಗೆ ಸೈಬರ್ ಕ್ರೈಂ ಪೋಲಿಸರಿಗೆ ದೂರು ಕೊಡಲಾಗಿದೆ. ಇನ್ನು ಬ್ಯಾಂಕಿನವರಲ್ಲಿ ಕೇಳಿದರೆ ಅದೇ ಮಾಮೂಲಿ ಉತ್ತರ. ಸೈಬರ್ ಕ್ರೈಂ ಪೋಲಿಸರಿಗೆ ದೂರು ಕೊಡಿ ಎಂದು. ಈಗ ಬ್ಯಾಂಕಲ್ಲಿ ಇಟ್ಟ ನಮ್ಮ ದುಡ್ಡಿಗೆ ಭದ್ರತೆ ಇಲ್ಲದೆ ಸೈಬರ್ ಪೋಲಿಸರಿಗೆ ದೂರು ಕೊಡುವುದಿದ್ಜರೆ ಇವನು ಬ್ಯಾಂಕ್ ಯಾಕೆ ಇಟ್ಟಿದ್ದು ಮಾರಾಯ್ರೆ. ಎಲ್ಲಿಯಾದರೂ ಗೂಡಂಗಡಿ ಓಪನ್ ಮಾಡಬಹುದಲ್ವಾ?



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.











 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget