2025

   ಕಾಡ ಪಂಜಿ ಮಾಚ ಬೋಡ, ಜಿಂಕೆ ಮಾಚ ಬೋಡ, ಕನಕ್ಕ್ ಬೋಡ, ಉಪ್ಪಡ್ಡ ಕುಕ್ಕು ಬೋಡ, ಮರ ಚೇವು ಬೋಡ, ಕಣಿಲೆ ಬೋಡ ಎಂದು ಕಂಡ ಕಂಡವರಿಂದ ದುಡ್ಡು ತಗೊಂಡು ಪತಾಯಿಸ್ ಮಾಡುತ್ತಿದ್ದ ಮಹಾನ್ ಸಾಮಾನ್ ಒಂದನ್ನು ಸುಬ್ರಹ್ಮಣ್ಯ ಪೋಲಿಸರು ಕ್ಯಾಚ್ ಮಾಡಿ, ಬೆಂಡ್ ತೆಗೆದು, ಸನ್ಮಾನ ಮಾಡಿ ಕಳಿಸಿದ ಮಾಹಿತಿ ಸುಬ್ರಹ್ಮಣ್ಯದಿಂದ ಬಂದಿದೆ.


   ಇವನು ಮಹೇಚ ಯಾನೆ ಪಂಜಿ ಮಹೇಚ. ಮರ್ಧಾಳ ಸಮೀಪದ ಗ್ರಾಮೀಣ ಪ್ರತಿಭೆ ಇವನು. ಮಂಗಳೂರು, ಬೆಂಗಳೂರು ಎಂದೆಲ್ಲ ಹೋದರೆ ಇವನಿಗೆ ಬ್ರೈಟ್ ಫ್ಯೂಚರ್ ಇರುವ ಹಾಗೆ ಕಾಣುತ್ತದೆ. ಯಾಕೆಂದರೆ ಇವನು ಎಡಮಂಗಲ, ಕುಲ್ಕುಂದ, ಮರ್ಧಾಳ, ಕೋಡಿಂಬಾಳ ಮುಂತಾದ ಗ್ರಾಮೀಣ ಭಾಗಗಳಲ್ಲಿಯೇ ಅಮಾಯಕ ಜನರನ್ನು ಮಂಗ ಮಾಡಿ ದಿನಕ್ಕೆ ಐದತ್ತು ಸಾವ್ರ ದುಡಿಯುತ್ತಾನೆಂದರೆ ಇವನು ಮೆಟ್ರೋಪಾಲಿಟನ್ ಸಿಟಿಗಳ ಬದಿಯಲ್ಲಿ ಹೋದರೂ ಸಾಕು ಓವರಿಗೆ ಮೂವತ್ತಾರೂ ಹೊಡೆಯಬಹುದು.


  ಕಳೆದ ಕೆಡ್ಡಸ‌ ಟೈಮಲ್ಲಿ ಎಡಮಂಗಲದಲ್ಲ ಅಮಾಯಕರೊಬ್ಬರನ್ನು ಕಾಡು ಹಂದಿ ಮಾಂಸ ಕೊಡುತ್ತೇನೆ ಎಂದು ಮಂಗೀಸ್ ಮಾಡಿ ಮೂರೂವರೇ ಸಾವಿರ ತನಕ ವಂಚಿಸಿದ ಪ್ರಕರಣ ಜಾಲತಾಣಗಳಲ್ಲಿ ಶತದಿನೋತ್ಸವ ಕಂಡಿತ್ತು. ಕೆಡ್ಡಸದ ದಿನ ನೈಂಟಿ ಹಾಕಿ ತೆಂಗಿನ ಕಾಯಿ ಕುಟ್ಲಿಕ್ಕೆ ಯಾವ ದಿಕ್ಕಿಗೆ ಹೋಗೋದು ಎಂದು ಎಡಮಂಗಲ ಬಸ್ ನಿಲ್ದಾಣದಲ್ಲಿ ಭಕ ಧ್ಯಾನ ಮಾಡುತ್ತಿದ್ದ ಹಿರಿಯರೊಬ್ಬರ ಹತ್ತಿರ ಬಂದಿದ್ದ ಅಪರಿಚಿತ ವ್ಯಕ್ತಿ " ನಿಮ್ಗೆ ಕಾಡುಹಂದಿ ಮಾಂಸ ಬೇಕಾ, ನಿನ್ನೆ ನೈಟ್ ಉರ್ಲಿಗೆ ಬಿದ್ದಿದೆ, ಕೆ.ಜೀಗೆ ರಿಡಕ್ಷನ್ ಸೇಲಲ್ಲಿ ಕೊಡುವ, ಮುನ್ನೂರಕ್ಕೆ ಕೊಡುವ, ಬೇರೆ ಜನ ಇದ್ದರೂ ಮಾಡಿಕೊಡಿ" ಎಂದು ಗಾಳಿ ಹಾಕಿದ್ದಾನೆ. ಹಿರಿಯರಿಗೆ ಖುಷೀ ಆಗಿದೆ.‌ ಮುನ್ನೂರಕ್ಕೆ ಕಾಡ ಪಂಜಿ ಮಾಸ ಯಾರಾದರೂ ತಂದು ಕೊಡುವವರು ಈ ಜಗತ್ತಿನಲ್ಲಿ ಇದ್ದಾರಾ ಎಂದು ಹಿರಿಯರು ಮುನ್ನೂರಕ್ಕೆ ಒಂದು ಹದಿನೈದು ಮೆಂಬರ್ ಮಾಡಿ, ದುಡ್ಡೂ ತೆಗೆದು ಕೊಟ್ಟಿದ್ದಾರೆ. ಹಾಗೆ ಹಿರಿಯರನ್ನು ಪಂಜಿದ ಮಾಸಕ್ಕಾಗಿ ಬೈಕಲ್ಲಿ ಕೂರಿಸಿಕ್ಕೊಂಡು ಒಂದು ಅರ್ಧದಷ್ಟು ಹೋಗಿ ಒಂದು ಕಡೆ ಮೋರಿಯ ಹತ್ತಿರ ಬೈಕ್ ನಿಲ್ಲಿಸಿ ಇವರನ್ನು ಇಳಿಸಿ, "ನೀವು ಸ್ಪಾಟಿಗೆ ಬಂದರೆ ರೇಟ್ ಜಾಸ್ತಿ ಹೇಳ್ತಾರೆ, ನಾನು ಹೋಗಿ ತರುತ್ತೇನೆ" ಎಂದು ಹೇಳಿ ಹೋದವನು ಮತ್ತೆ ಸಿಕ್ಕಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರಿಗೇ. ಮತ್ತೆ ಅಲ್ಲಿ ಮರ್ಕಂಜ ಹತ್ತಿರ ಅದ್ಯಾವುದೋ ಗೂಡಂಗಡಿ ಧಣಿ ಹತ್ತಿರ ಹೋಗಿ ಅಲ್ಲೇ ಎಲ್ಲೋ ಆಸುಪಾಸಿನಲ್ಲಿ ಎರಡು ತೆಂಗಿನ ಮರ ಬಿದ್ದಿದೆ, ಇಪ್ಪತ್ತೈದಕ್ಕೆ ಬೊಂಡ ಕೊಡಿಸುತ್ತೇನೆ ಎಂದು ಐದು ಸಾವಿರ ಹಿಡ್ಕೊಂಡು ಹೋದವನು ಮತ್ತೆ ಕಾಣಿಸಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರ ಜೀಪಿನಲ್ಲೇ.


ಹಾಗೆ ಮೊನ್ನೆ ಸುಬ್ರಹ್ಮಣ್ಯ ಸಮೀಪದ ಹಳ್ಳಿಗಾಡಿನ ಮನೆಯೊಂದರಲ್ಲಿ ವಯರಿಂಗ್ ಮಾಡಿಸುತ್ತೇನೆ ಎಂದು ಎಷ್ಟೋ ಕಿಸಿಗೆ ಇಳಿಸಿ ಮಾಯಕ ಆಗಿದ್ದ.‌ ಜನ ಇವನನ್ನು ಮಾಸ ಮಾಡಲು ಹುಡುಕುತ್ತಾ ಇದ್ದರು. ಅದಕ್ಕೆ ಸರಿಯಾಗಿ ಮೊನ್ನೆ ಕುಲ್ಕುಂದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಹೆಂಗಸೊಬ್ಬಳ ಹತ್ತಿರ ಹೋಗಿ "ಕಾಡ ಪಂಜಿದ ಮಾಸ ಬೋಡ" ಎಂದು ಕೇಳಿದ್ದಾನೆ ಮತ್ತು ಆ ಹೆಂಗಸು ಬೇಡ ಅಂದು ಹತ್ತಿರದ ಅಂಗಡಿಯೊಂದಕ್ಕೆ ಮೆಸೇಜ್ ಕೊಟ್ಟಿದ್ದಾರೆ. ಅಷ್ಟೇ! ಜನ ಮೆರವಣಿಗೆಯಲ್ಲಿ ಬಂದಿದ್ದಾರೆ. ಕೈಗೆ ಸಿಕ್ಕಿದ ಕಾಡು ಹಂದಿಗೆ ಸೂಸು ಲೀಕ್ ಆಗುವಷ್ಟು ಹೊಡೆದು ಸುಬ್ರಹ್ಮಣ್ಯ ಪೋಲಿಸರ ಕೈಗೆ ಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಪೋಲಿಸರು ಕಂಪ್ಲೈಂಟ್ ಕೊಡಲು ಯಾರೂ ಮುಂದೆ ಬಾರದ ಕಾರಣ ಮಹೇಚನನ್ನು ಬೆಂಡ್ ತೆಗೆದು ಕಳಿಸಿ ಕೊಟ್ಟಿದ್ದಾರೆ. ಹಾಗೆಂದು ಈ ವಂಚಕನ ವಿರುದ್ಧ ಯಾರೂ ಕಂಪ್ಲೈಂಟ್ ಕೊಡಲು ಮುಂದೆ ಬಂದಿಲ್ಲ  ಯಾಕೆ ಅಂದರೆ ಕಾಡು ಹಂದಿ ಬೇಟೆ ಕಾನೂನು ವಿರುದ್ಧ ಆಗಿದ್ದು, ಎಲ್ಲಿಯಾದರೂ ಕಂಪ್ಲೈಂಟ್ ಕೊಡಲು ಹೋದರೆ ತಾವೂ ಸಿಕ್ಕಿ ಹಾಕಿ ಕೊಳ್ಳುವ ಅಪಾಯಗಳು ಇದ್ದ ಕಾರಣ ಜನ ಜಾರಿ ಬಿಟ್ಟರು, ಇವನು ಸೇಫಾಗಿ ಬಿಟ್ಟ.


   ಹಾಗೆಂದು ಈ ಮಹಾನ್ ವಂಚಕನ ಜಾತಕ ಇಡೀ ಮರ್ಧಾಳ, ಕಡಬದಲ್ಲಿ ವೈರಲ್ ಆಗಿದ್ದು 420 ಸೆಕ್ಷನ್ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳಲ್ಲಿ ಇವನು ಕೈಯಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಹಕ್ಕಿಗಳು ಎದ್ದು ಇಂಗ್ಲೀಷ್ ಮಾತಾಡುವ ಮುಂಚೆಯೇ ಇವನು ಮನೆಯಿಂದ ಹೊರಟು ಹೋಗುತ್ತಿದ್ದು ಎಲ್ಲಿಗೆ ಹೋಗುತ್ತಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ಏನಾದರೂ ಇಂಥದ್ದೇ ವಹಿವಾಟು ಇರಬಹುದು.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 






  ಬೆಳ್ತಂಗಡಿಯ ಸೌಜನ್ಯ ಒರಟು ಹೋರಾಟ ದಿನೇ ದಿನೇ ದೌರ್ಜನ್ಯದ ಹೋರಾಟವಾಗಿ ನಿಜ ಬಣ್ಣ ಬಯಲು ಮಾಡುತ್ತಿದೆ. ಅನಾವಶ್ಯಕವಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಿರುವ ಹೋರಾಟಗಾರರು ಮತ್ತು ಈ ಹೋರಾಟದ ನೇತೃತ್ವವನ್ನು ವಹಿಸಿರುವ ಉಜಿರೆಯ ಮೃಗರಾಜನಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಇದೀಗ ಈ ಹೋರಾಟಗಾರರ ಬಾಯಲ್ಲಿ ಅಜಿಲ ಸೀಮೆಯ ಬಗ್ಗೆ ಉಲ್ಲೇಖವಾಗಿದ್ದು, ಜೈನರನ್ನು ಶತಾಯಗತಾಯ ಲಗಾಡಿ ತೆಗೆಯಲೇ ಬೇಕೆಂಬ ಶಪಥ ಮಾಡಿದಂತಿದೆ."ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು" ಎಂಬ ಮೆಂಟಾಲಿಟಿಯ ಜನರೂ ಈ ಸಮಾಜದಲ್ಲಿ ಇದ್ದಾರೆ ಎಂದರೆ ಸಮಾಜ  ಯಾವ ಕಡೆ ಚಿತ್ತೈಸುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಒಂದು ಧರ್ಮದ ಬಗ್ಗೆ ಅವಹೇಳನ ಮಾಡಿರುವ ಒಬ್ಬ ಸೌಜನ್ಯ ಹೋರಾಟಗಾರ ಮತ್ತು ಅವರ ತುಂಡು ಲೀಡರ್ ಉಜಿರೆಯ ಮೃಗರಾಜನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕಂಪ್ಲೈಂಟ್ ಆಗಿದ್ದು ಪೋಲಿಸರು ನೋಡುವ, ಮಾಡುವ ಎಂದು ಹೇಳಿದ್ದಾರೆ. ಅವರಿಗೂ ಮೃಗರಾಜನ ಭಯ.


  ಅದೊಂದು ಮೊಬೈಲ್ ಫೋನ್ ಸಂಭಾಷಣೆ. ಒಬ್ಬ ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು ಎಂಬ ಮೆಂಟಾಲಿಟಿಯ ಹೋರಾಟಗಾರ ಮತ್ತು ಉಜಿರೆಯ ಮೃಗರಾಜನ ನಡುವೆ ನಡೆದ ಮಾತುಕತೆಯ ರೆಕಾರ್ಡೆಡ್ ಆಡಿಯೋ. ಅದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಉಜಿರೆಯ ಮೃಗರಾಜ ತನ್ನನ್ನು ತಾನು ಆನೆಗೆ ಹೋಲಿಸಿಕ್ಕೊಂಡು ಆನೆ ನಡೆದದ್ದೇ ದಾರಿ ಎಂದು ಹೇಳಿದೆ. ಆನೆ ನಡೆದದ್ದೇ ದಾರಿ ಎಂದು ಆನೆ ಹಂಪನ ಕಟ್ಟೆಯಲ್ಲಿ ನಡೆದರೆ ಜನ ಆನೆಗೆ ಇಂಜೆಕ್ಷನ್ ಶೂಟ್ ಮಾಡಿ ದುಬಾರೆ ಆನೆ ಶಿಬಿರಕ್ಕೆ ಸೆಂಡ್ ಮಾಡಿ ಬಿಡುತ್ತಾರೆ. ಮುಂದುವರಿದ ಮೃಗರಾಜ ಧರ್ಮ ಸ್ಥಾಪನೆ ಆಗಲೇ ಬೇಕು ಒತ್ತಿ ಒತ್ತಿ ಹೇಳಿದೆ. ಮೃಗರಾಜನ ಲೀಡರ್ ಶಿಪ್ ನಲ್ಲಿ ಯಾವ ರೀತಿಯ ಧರ್ಮ ಸ್ಥಾಪನೆ ಆಗಬಹುದು ಎಂದು ಸಮಾಜ ಅವಲೋಕಿಸ ಬೇಕಾಗಿದೆ.ಈಗ  ಬಂದು ಮೃಗರಾಜ ಧರ್ಮ ಸ್ಥಾಪನೆ ಮಾಡುವುದಿದ್ದರೆ ಜೈನರು ಇಲ್ಲಿ ತನಕ ಮಾಡಿದ್ದೇನು? ದೇವಸ್ಥಾನಗಳನ್ನು ಕಟ್ಟಿಸಿದ್ದು, ದೈವ ಸ್ಥಾನಗಳನ್ನು ಕಟ್ಟಿಸಿದ್ದು ಯಾರು? ಭೂದಾನ, ವಸ್ತ್ರದಾನ, ಅನ್ನದಾನ ಮಾಡಿದ್ದು ಯಾರು? ಇವತ್ತು ಅದೇ ಮೃಗರಾಜನ ಸಪೋರ್ಟಿಗೆ ನಿಂತಿರುವ ಪುಂಡುಪೊಕ್ರಿಗಳು ಜನ್ಮತಾಳಿದ್ದು, ಬೆಳೆದು ಬಂದದ್ದು ಯಾರ ಭೂಮಿಯಲ್ಲಿ? ಎಲ್ಲವೂ ಜೈನರದ್ದು. ಧರ್ಮ ಸ್ಥಾಪನೆಯನ್ನು ಜೈನ ಅರಸರು, ಗುತ್ತು ಬೀಡುಗಳ ಜೈನರು ಮಾಡಿಯಾಗಿದೆ. ಅಧರ್ಮದ ಅಮಲಿನಲ್ಲಿರುವ ಅಧರ್ಮಿಗಳಿಂದ ಧರ್ಮ ಸ್ಥಾಪನೆಯ ಮಾತು ಬಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಲು ನಾಚಿಕೆ ಆಗಬೇಕು. ಇದೇ ಟಾರ್ಗೆಟ್ ಬೇರೆ ಅಲ್ಪಸಂಖ್ಯಾತರಿಗೆ ಮಾಡಿದರೆ ಅವರು ಟಿಕೆಟ್ ಕೊಟ್ಟು ಬಿಡುತ್ತಾರೆ ಅಷ್ಟೇ.


ಮುಂದೆ ಈ ಫೋನ್ ಸಂಭಾಷಣೆಯಲ್ಲಿ  ಸೌಜನ್ಯ ಹೋರಾಟಗಾರ ಮೃಗರಾಜನಲ್ಲಿ ಧರ್ಮಸ್ಥಳದ ಡಬ್ಬಿಯಲ್ಲಿ ದುಡ್ಡು ಉಂಟು, ಅದು ಹಿಂದೂಗಳ ದುಡ್ಡು, ಜೈನರು ಅದನ್ನು ದುರುಪಯೋಗ ಪಡಿಸುತ್ತಾರೆ ಎಂದು ಹೇಳಿದ್ದಾನೆ. ದುಡ್ಡು ಹಿಂದೂಗಳದ್ದು ಅದರೂ ಅದು ಜೈನರ ದೇವಸ್ಥಾನ. ಎಂಟು ನೂರು ವರ್ಷಗಳಿಂದ ಇದೆ ಆ ದೇವಸ್ಥಾನ. ಅದು ಅವರ ಖಾಸಗೀ ದೇವಸ್ಥಾನ. ಯಾರಿಗೂ ಅದನ್ನು ಎಳೆದು ಕೊಳ್ಳಲು ಬಿಡಲಿಲ್ಲ ಅವರು. ಹಾಗೆಂದು ಧರ್ಮಸ್ಥಳದ ದೇವಸ್ಥಾನ ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಷ್ಟೂ ದೇವಸ್ಥಾನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟರೂ ಅಲ್ಲಿ ಜೈನರ ಹೆಸರು ಬರುತ್ತದೆಯೇ ವಿನಃ ಮೃಗರಾಜನ ಹೆಸರು, ಅವನ ಟೀಮಿನ ಹೆಸರು ಬರಲ್ಲ. ಆದರೆ ಜೈನರಿಂದ ಅಷ್ಟೂ ದೇವಸ್ಥಾನಗಳನ್ನು ಎಳೆದು ಕೊಂಡಾಗಿದೆ. ಈಗ ಉಳಿದಿರುವುದು ಧರ್ಮಸ್ಥಳ ಮಾತ್ರ. ಅದನ್ನೂ ಎಳೆದು ಕೊಂಡು ಜೈನರನ್ನು ಓಡಿಸಿದರೆ ಮಾಳಿಗೆ ಹಾಕಬಹುದು ಎಂಬ ಲೆಕ್ಕಾಚಾರ. ಇನ್ನು  ದೇವಸ್ಥಾನದ ಡಬ್ಬಿಯಲ್ಲಿ ಇರುವ ದುಡ್ಡು ಗಡಂಗಿನಲ್ಲಿ ಕುಂತು ಟೈಟಾಗಲು,  ಕೋಳಿ ಕಟ್ಟಕ್ಕೆ ಸೇಲಂ ಕೋಳಿ ಪರ್ಚೇಸ್ ಮಾಡಲು, ಜುಗಾರಿ ಆಡಲು,   ಮಟ್ಕಾ ದಂಧೆಗೆ, ಕಂಬಳದಲ್ಲಿ ಜೂಜಾಡಲು, ಮರಳು ತೆಗೆದು ನದಿಗಳನ್ನು ಬರಿದು ಮಾಡಲು, ಅಲ್ಲಲ್ಲಿ ಬಾರ್ ರೆಸ್ಟೋರೆಂಟ್ ಓಪನ್ ಮಾಡಲು  ಸದುಪಯೋಗ ಆಗುತ್ತಿಲ್ಲ. ಬದಲಾಗಿ ದೇವಸ್ಥಾನಕ್ಕೆ ಮಂಜುನಾಥನ ದರ್ಶನಕ್ಕೆ ಬಂದ ಭಕ್ತರಿಗೆ ಅನ್ನದಾನ ಮಾಡಲು, ಸಾಮೂಹಿಕ ವಿವಾಹದ ಮೂಲಕ ಕನ್ಯಾದಾನ ಮಾಡಲು, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾ ದಾನ ಮಾಡಲು, ಆಸ್ಪತ್ರೆಗಳ ಮೂಲಕ ಆರೋಗ್ಯ ದಾನ ಮಾಡಲು, ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಧರ್ಮ ಸ್ಥಾಪನೆ ಮಾಡಲು ದುರುಪಯೋಗ ಆಗುತ್ತಿದೆ. ಅರ್ಥ ಮಾಡಿಕೊಂಡರೆ ಸಾಕು. ಧರ್ಮಸ್ಥಳ ದೇವಸ್ಥಾನ ಜೈನ ಹೆಗ್ಗಡೆ ಮನೆತನದ್ದು. ವೀರೇಂದ್ರ ಹೆಗ್ಗಡೆ ಅವರ ಅಪ್ಪಂದು, ಅಜ್ಜಂದು. ಆ ದೇವಸ್ಥಾನದ ಬಗ್ಗೆ ಮಾತಾಡಲು ನಮಗೆ ಹಕ್ಕಿಲ್ಲ. ಯಾಕೆಂದರೆ ನಮ್ಮ ಕುಟುಂಬವೇ  ಬೇರೆ, ಜಾತಿಯೇ ಬೇರೆ, ಧರ್ಮವೇ ಬೇರೆ. ಜೈನರು ಹಿಂದೂ ದೇವಸ್ಥಾನ ಕಟ್ಟಬಾರದು, ಆಡಳಿತ ನಡೆಸಬಾರದು ಎಂದು ಪ್ರಪಂಚದ ಯಾವುದಾದರೂ ಕಾನೂನು ಪುಸ್ತಕದಲ್ಲಿ ಬರೆದಿದ್ದರೆ ಅದನ್ನು ಎತ್ತಿ ತೋರಿಸಬಹುದಿತ್ತು. ಕೇವಲ ಮೃಗರಾಜ ಉಜಿರೆಯ ಸಂವಿಧಾನದಲ್ಲಿ ಇಂತಹ ಅಂಡಿಗುಂಡಿ ಕಾನೂನು ಬರಕ್ಕೊಂಡಿದ್ದರೆ ಅದಕ್ಕೆ ಜೈನರು ಜವಾಬ್ದಾರರಲ್ಲ. ದೇವಸ್ಥಾನದ ಡಬ್ಬಿಯ ದುಡ್ಡು ದುರುಪಯೋಗ ಆಗುತ್ತಿದೆ ಎಂದು ಮನವರಿಕೆ ಆದರೆ ಡಬ್ಬಿಗೆ ದುಡ್ಡು ಹಾಕಬೇಡಿ, ಗಡಂಗ್, ಕೋಳಿಕಟ್ಟ, ಜುಗಾರಿ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಸದುಪಯೋಗ ಪಡಿಸಿಕೊಳ್ಳಿ.
  ಈ ಒಂದು ಫೋನ್ ಸಂಭಾಷಣೆಯಲ್ಲಿ ಅಜಿಲ ಸೀಮೆಯ ಅರಸರ ಬಗ್ಗೆ ಉಲ್ಲೇಖವಿದೆ. ಅಜಿಲ ಸೀಮೆಯ ಅರಸು ಅಂದರೆ ನಾವು ನೀವು ಪೂಜಿಸುವ ಕಲ್ಕುಡ ದೈವಕ್ಕೆ ಆಶ್ರಯ ಕೊಟ್ಟವರು, ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದವರು, ಎಷ್ಟೋ ದೇವಸ್ಥಾನಗಳನ್ನು ಕಟ್ಟಿಸಿದವರು. ಅಜಿಲ ಸೀಮೆಯ ಅರಸರ ಹೆಸರು ಅಷ್ಟಮಂಗಲದಲ್ಲಿ ಬರುವ ಹೆಸರು. ಅಂತಹ ಅರಸರ ಹೆಸರನ್ನು ಕೂಡ ಬಾಯಿ ಹರಿದ ಹೋರಾಟಗಾರರು ಟಾರ್ಗೆಟ್ ಮಾಡುತ್ತಾರೆ ಮತ್ತು ಅವರನ್ನು ಬೆಳೆಯಲು ಬಿಡಬಾರದು ಎಂದು ಮೃಗರಾಜ ಹೇಳುತ್ತದೆ. ಹಾಗಾದರೆ ಅಜಿಲ ಅರಸರಿಗೆ ಪರ್ಯಾಯ ಯಾರು? ಕಲ್ಕುಡನ ಸಂಧಿಯಲ್ಲಿ ಕಲ್ಕುಡ ಯಾರನ್ನು ಉಲ್ಲೇಖ ಮಾಡಲಿ? ಕಲ್ಲುರ್ಟಿ ಯಾರ ಬಗ್ಗೆ ಹೇಳಲಿ? ಮೃಗರಾಜನ ಹೆಸರು ಸಂಧಿಯಲ್ಲಿ ಸೇರಿಸಲು ಆಗುತ್ತಾ? ಅಷ್ಟಕ್ಕೂ ಕೇವಲ ಜೈನ ಧರ್ಮೀಯರು ಎಂಬ ಏಕೈಕ ಕಾರಣಕ್ಕೆ ಅಜಿಲ ಅರಸರ  ಹೆಸರೂ ಇವರ ಹರಿದ ಬಾಯಲ್ಲಿ ಬರುತ್ತಿದೆ ಎಂದರೆ ಇವರ ಬಂಜಿಬೇನೆ ಎಷ್ಟು ಸೀರಿಯಸ್ಸಲ್ಲಿ ಇರಬಹುದು ಎಂದು ಊಹಿಸಲೂ ಕಷ್ಟ.


   ಇನ್ನು ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯಿರಿ ಎಂದು ಮೃಗರಾಜ ಆ ಆಡೀಯೋದಲ್ಲಿ ಕರೆ ಕೊಟ್ಟಿದೆ. ಇನ್ನೂ ಹಿಂದೂಗಳನ್ನು ಜೈನರು ಜೀತದಾಳು ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಮೃಗರಾಜ ಹೇಳಿದೆ. ಹಿಂದೂ ಧರ್ಮವನ್ನು ಸ್ವಂತ ಧರ್ಮದಂತೆಯೇ ಲಾಲನೆ ಪಾಲನೆ ಮಾಡಿ,ಪೋಷಿಸಿ ರಾಜಾಶ್ರಯ ನೀಡಿದ ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯುವ ಇದೇ ಮಂದಿ ತುಂಡು ಬಂಗುಡೆಗಾಗಿ ಮೀನು ವ್ಯಾಪಾರಿಯನ್ನು ಸಾಹುಕಾರ್ರೆ ಎಂದು ಕರೆಯುತ್ತಾರೆ, ದಕ್ಷಿಣೆಗೆ ಬರುವ ಹತ್ತು ವರ್ಷಗಳ ಹುಡುಗನ ಕಾಲಿಗೆ ಸಾಷ್ಟಾಂಗ ಬೀಳುತ್ತಾರೆ, ಗಡಂಗ್ ಮಾಲೀಕನನ್ನು ಧಣಿಗಳೇ ಎಂದು ಕರೆಯಲಾಗುತ್ತದೆ ಮತ್ತು ಭೂಗತ ಧಣಿಗಳ ಮುಂದೆ ನಿಂತು ಬಸ್ಕಿ ಹೊಡೆದು ಅಣ್ಣಾ ಅಂತ ಜೊಲ್ಲು ಸುರಿಸುತ್ತಾರೆ. ಜೀತ ಪದ್ಧತಿ ಸಮಾಜದಲ್ಲೇ ಇದೆ. ಜೀತ ನಮ್ಮ ದೇಶದ ಪೂರ್ವ ಕಟ್ ಸಂಪ್ರದಾಯ. ಅದರ ಆಚರಣೆ ಬೇರೆ ಬೇರೆ ಧರ್ಮಗಳಲ್ಲಿ, ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಇದರಲ್ಲಿ ಜೈನರದ್ದೇ ಮಾತ್ರ ಯಾಕೆ ಟಾರ್ಗೆಟ್ ಆಗುತ್ತಿದೆ ಅಂದರೆ ಜೈನರ ಸಂಖ್ಯೆ ಕಡಿಮೆ ಇದೆ, ಅವರಿಂದ ಏನೂ ಮಾಡಕ್ಕಾಗಲ್ಲ ಎಂಬ ವಿಕೃತ ಮನೋಭಾವ. ಮೃಗರಾಜನನ್ನು "ಅಣ್ಣಾ" ಎಂದು ಕರೆಯುವುದೂ ಜೀತ ಪದ್ಧತಿಯ ಒಂದು ಲಕ್ಷಣವೇ. ಅಣ್ಣಾನ ಮುಂದೆ ಸಮನಾಗಿ ಕೂರುವ ಹಾಗಿಲ್ಲ, ಕೈಕಟ್ಟಿ ನಿಂತು ಮಾತಾಡಬೇಕು, ಅಣ್ಣಾ ನಿಮ್ಮನ್ನು ವಾಪಾಸ್ ಅಣ್ಣಾ ಎಂದು ಕರೆಯಲ್ಲ, ಅಣ್ಣಾ ಅಂದಿದ್ದಕ್ಕೆಲ್ಲ ಅಹುದು ಅಹುದು ಅನ್ನಬೇಕು. ಇದು ಕೂಡ ಜೀತದ ಹೊರಮೈ ಲಕ್ಷಣಗಳೇ.ಭೂ ಸುಧಾರಣೆ ಕಾನೂನಿನ ಮೂಲಕ ಜೈನರ ಭೂಮಿ ತಿಂದು, ಅವರನ್ನು ಹೊಡೆದೊಡಿಸಿ, ಅವರ ಗುತ್ತು ಬೀಡುಗಳನ್ನು ವಶಪಡಿಸಿಕೊಂಡು, ಅವರು ಕಟ್ಟಿಸಿದ ದೇವಸ್ಥಾನಗಳ ಮೊಕ್ತೇಸರನ ಕುರ್ಚಿಯಲ್ಲಿ ಕುಂತು ದೇವಸ್ಥಾನದ ದುಡ್ಡಿನಲ್ಲಿ ಕಮಿಷನ್ ಹೊಡೆದು ಮಾಳಿಗೆ ಹಾಕಿದ ಮಂದಿ ಇವತ್ತು ಜೈನರು ದೇವಸ್ಥಾನಗಳ ಮೇಲೆ ಧಾಳಿ ಮಾಡಿದರು ಎಂದು ಸಮಾಜದ ಮಂಡೆ ತಿರುಗಿಸುತ್ತಿದ್ದಾರೆ ಮತ್ತು ಸಮಾಜ ಅದನ್ನು ನಂಬುತ್ತಿದೆ ಅಂದರೆ ಕಾಲ ಎಲ್ಲಿಗೆ ಬ್ರೇಕ್ ಫೈಲಾಗಿ ಹೋಗುತ್ತಿದೆ ಎಂದೇ ಅರ್ಥ ಆಗುತ್ತಿಲ್ಲ.



  ಆಯ್ತು ಜೈನರನ್ನು ಓಡಿಸಿ ಧರ್ಮ ಸ್ಥಾಪನೆ ಮಾಡಬೇಕು ಎಂಬುದು ಮೃಗರಾಜ ಮತ್ತು ಅದರ ಟೀಮಿನ ಆಶಯ. ಆಯ್ತು ಧರ್ಮ ಸ್ಥಾಪನೆ ಆಗಲಿ, ಆದರೆ ರೌಡಿ ಶೀಟರ್ ಗಳು ಸ್ಥಾಪಿಸುವ ಧರ್ಮ ಸ್ಥಾಪನೆ ಹೇಗಿರಬಹುದು? ಭೂಗತ ದೊರೆಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು, ಜುಗಾರಿ ಪ್ಲೇಯರ್ಸ್ ಧರ್ಮ ಸ್ಥಾಪನೆ ಮಾಡಿದರೆ ಧರ್ಮದ ಕತೆ ಏನಾಗಬಹುದು? ಅಜಿಲ ಸೀಮೆಯ ಅಜಿಲ ಅರಸರು, ಮೂಡುಬಿದಿರೆಯ ಚೌಟ ಅರಸರು, ಉಳ್ಳಾಲದ ರಾಣಿ ಅಬ್ಬಕ್ಕ, ಪುತ್ತೂರಿನ ಭಂಗ ಅರಸ, ಕಾರ್ಕಳದ ಭೈರವ ಅರಸ, ಸೂರಲಿನ ರಾಜ ಮನೆತನ, ಕೊಕ್ಕರ್ಣೆಯ ಅರಸು ಮನೆತನ, ಮೂಲ್ಕಿಯ ಸಾವಂತರು ಇವರೆಲ್ಲರು ಮಾಡಿದ ಧರ್ಮ ಸ್ಥಾಪನೆಗೆ ಇತೀಶ್ರೀ ಹೇಳಿ ಇವತ್ತು ರೌಡಿ ಶೀಟರ್ ಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು ಸ್ಥಾಪಿಸಲು ಹೊರಟಿರುವ ಧರ್ಮ ಸ್ಥಾಪನೆ ಹೇಗಿರಬಹುದು ಎಂಬ ಕುತೂಹಲ ಜೈನರಲ್ಲಿದೆ. ಇವರು ಮಾಡಲಿರುವ ಧರ್ಮ ಸ್ಥಾಪನೆಯಲ್ಲಿ ಎಲ್ಲರಿಗೂ ಚಿರಶಾಂತಿ ಸಿಗುವುದಿದ್ದರೆ ಅದಕ್ಕೆ ಜೈನರ ಅಭ್ಯಂತರವಿಲ್ಲ. ಆದರೆ ಜೈನರ ದೇವಸ್ಥಾನಗಳು, ಬಸದಿಗಳು, ಭೂಮಿ, ಅವರ ಗುತ್ತು ಬೀಡುಗಳನ್ನು ಧರ್ಮ ಸ್ಥಾಪನೆಗೆ ಹೊರಟಿರುವ ಠಪೋರಿಗಳಿಂದ ರಕ್ಷಿಸಿ ಕೊಳ್ಳಲು ಬದ್ಧರಾಗಿದ್ದಾರೆ. ಇನ್ನು ಜೈನರನ್ನು ಮುಂಡೆ ಮುಚ್ಚಿಸುತ್ತೇನೆ ಎಂದು ಮೃಗರಾಜ ಘರ್ಜಿಸಿದೆ. ಸೌಜನ್ಯ ಸಾವಿಗಿಂತ ಮುಂಚೆ ಮುಂಡೆ ಮುಚ್ಚಿ ಹೋಗಿದ್ದ ಮೃಗರಾಜ ಸೌಜನ್ಯ ಸಾವಿನ ನಂತರ ಕೇವಲ ಜೈನರ ಹೆಸರೇಳಿ ಹಾಕಿದ ಮಾಳಿಗೆ ಜಗತ್ತಿಗೇ ಕಾಣುತ್ತಿದೆ. ಮುಂಡೆ ಮುಚ್ಚಿಸಲು ಬಂದವರ ಮಂಡೆ ಬಿಚ್ಚಿಸುವುದು ಹೇಗೆ ಅಂತ ಜೈನರಿಗೂ ಗೊತ್ತಿದೆ. ಗುಡ್ ಬಾಲಿಗಾಗಿ ಕಾಯುತ್ತಿದ್ದಾರೆ ಅಷ್ಟೇ.
  ಸೌಜನ್ಯ ಹೋರಾಟ ದಾರಿ ತಪ್ಪಿದೆ. ಬ್ರೇಕ್ ಫೇಲಾಗಿ ಹೋಗಿ ಜೈನರಿಗೆ ಢಿಕ್ಕಿ ಹೊಡೆದಾಗಿದೆ. ಹೋರಾಟ ಸಮಿತಿ ಅನೇಕ ಬಣಗಳಾಗಿ ಜೈನರ ವಿರುದ್ಧ ಯುದ್ಧ ಸಾರಿದೆ. ಸೌಜನ್ಯ ಹೋರಾಟ ಸಮಿತಿ ಈಗ ಜೈನ ವಿರೋಧಿ ಹೋರಾಟ ಸಮಿತಿ ಆಗಿದೆ. ಧರ್ಮಸ್ಥಳ ದೇವಸ್ಥಾನ ವಿಮೋಚನಾ ಸಮಿತಿ, ಧರ್ಮಸ್ಥಳ ಸಂಘದ ದುಡ್ಡು ಹಿಡಿಸುವವರ ಸಮಿತಿ, ಧರ್ಮಸ್ಥಳ ದೇವಸ್ಥಾನ ಡಬ್ಬಿ ಸಮಿತಿ, ಧರ್ಮಸ್ಥಳ ಅಪಪ್ರಚಾರ ಸಮಿತಿ, ಜೈನರನ್ನು ಮುಂಡೆ ಮುಚ್ಚಿಸುವ ಸಮಿತಿ, ಧರ್ಮಸ್ಥಳಕ್ಕೆ ನುಗ್ಗುವ ಸಮಿತಿ ಹೀಗೆ ಇನ್ನೂ ಅನೇಕ ಬಣಗಳಾಗಿ ನಿರಂತರವಾಗಿ ಹೋರಾಟದಲ್ಲಿ ಸಕ್ರೀಯರಾಗಿದ್ದಾರೆ. ಏನು ಹೋರಾಟ, ಏನು ಹಾರಾಟ, ಏನು ಅರಚಾಟ, ಅಪಗಪಗ ಘರ್ಜನೆ ಎಲ್ಲವೂ ಅಲ್ಪಸಂಖ್ಯಾತ ಜೈನರ ವಿರುದ್ಧ. ಇವರ ಹೋರಾಟ ಬಂಗುಡೆ ತರುವ ಸಾಹುಕಾರ್ರ ವಿರುದ್ಧ ಇಲ್ಲ. ಯಾಕೆಂದರೆ ನಡಿಯಲ್ಲ. ಮತಾಂತರ ಮಾಡುವ ಅಲ್ಪಸಂಖ್ಯಾತರ ವಿರುದ್ಧ ಇಲ್ಲ. ಯಾಕೆಂದರೆ ಅದೂ ನಡಿಯಲ್ಲ. ಹೋರಾಟ ಏನಿದ್ದರೂ ಜೈನರ ವಿರುದ್ಧ. ಈಗಾಗಲೇ ಅವರನ್ನು ಓಡಿಸಿ ಅವರ ಗುತ್ತು ಬೀಡುಗಳಲ್ಲಿ ಸ್ಥಾಪನೆ ಆಗಿ ಆಗಿದೆ, ಭೂಸುಧಾರಣೆ ಮೂಲಕ ಅವರ ಭೂಮಿಯನ್ನೂ ತಿಂದಾಯಿತು, ಅವರು ಕಟ್ಟಿಸಿದ ದೇವಸ್ಥಾನಗಳಿಂದಲೂ ಅವರನ್ನು ಹೊರಗಿಟ್ಟಾಯಿತು, ಇನ್ನು ಧರ್ಮಸ್ಥಳ ಒಂದು ಸಿಕ್ಕರೆ ಏಳೇಳು ಜನ್ಮ ಕುಂತು ತಿನ್ನ ಬಹುದು ಎಂಬ ಹಗಲುಗನಸು. ಪರಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ, ಹಿಂದೂ ಧರ್ಮ ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಬಲವಾಗಿ ಕೈಜೋಡಿಸಿದ, ಅಲ್ಪಸಂಖ್ಯಾತರಾಗಿರುವ ನಮ್ಮ ಮೇಲೆ ಈ ರೀತಿಯ ಧಾಳಿ ಭಾರತ ದೇಶದಲ್ಲಿ ಆಗಬಹುದು ಎಂದು ಜೈನರಿಗೆ ಗೊತ್ತೇ ಇರಲಿಲ್ಲ. ಈಗ ಗೊತ್ತಾಗಿದೆ. ಆದರೆ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರುಗೆ ಈ ವಿಷಯ 1947 ರಲ್ಲಿಯೇ ಗೊತ್ತಿತ್ತು. ಅದಕ್ಕೆ ಅವರು ಈ ದೇಶ ಜಾತ್ಯಾತೀತ ಆಗಿರಲಿ ಎಂದು ನಿರ್ಧಾರ ಮಾಡಿದ್ದು. ಆಯ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನು ಮುಂದೆ ಜೈನರು ನಿಮಗೆ ಸಿಗಲ್ಲ. ಈ ಒಂದು ತಲೆಮಾರು, ತಪ್ಪಿದರೆ ಇನ್ನೊಂದು ತಲೆಮಾರು ಅಷ್ಟೇ. ಅವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಅವರ ಮಕ್ಕಳೆಲ್ಲ ಸೇಫಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಮತ್ತು ಅಲ್ಲೇ ಸೆಟಲ್ ಆಗುತ್ತಿದ್ದಾರೆ. ಇಲ್ಲಿ ಜೈನರೇ ಇಲ್ಲದಿದ್ದರೆ ಮೃಗರಾಜನ ಟೀಮಿಗೆ ಖುಷಿ ಅಲ್ವಾ. ಸಾಹುಕಾರ್ರ ಜೊತೆ ಹಾಯಾಗಿರಬಹುದು.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





                      


  ಹಾಗೆಂದು ಅಲ್ಲಿ ಮೂಡುಬಿದಿರೆ ಸಮೀಪದ ದರೆಗುಡ್ಡೆಯಲ್ಲಿ ಮೊನ್ನೆ ತಲ್ವಾರ್ ಧಾಳಿಗೆ ಒಳಗಾದ ಹಿಂದೂ ಸಂಘಟನೆಗಳ ಲೀಡರ್ ಶಮಿತ್ರಾಜ್ ಸಹೋದರ ಸಂತು ಯಾನೆ ಸಂತೋಷ್ ಜಾತಕದಲ್ಲಿ ಬಹಳ ಹಿಂದಿನಿಂದಲೇ ಸ್ತ್ರೀ ದೋಷ ಇದ್ದು ಮೊನ್ನೆ ದೋಷ ಪರಿಹಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹುಟ್ಟು ಗುಣ ಬಿಡಲು ಇನ್ನು ಘಟ್ಟ ಹತ್ತಬೇಕೆಂದಿಲ್ಲ.


  ಇವರು ಸನ್ಮಾನ್ಯ ಸಂತು ಯಾನೆ ಸಂತೋಷ್. ಹಿಂದೂ ಸಂಘಟನೆಗಳ ಲೀಡರ್ ಶಮಿತ್ರಾಜ್ ಸಹೋದರ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಂತು ಹೆಸರು ನಂಬರ್ ವನ್. ಈ ಹಿಂದೆ ದರೆಗುಡ್ಡೆಯಲ್ಲಿ ಬೆಚ್ಚ ಬೆಚ್ಚ ಗಂಡಸರ ಗಂಗಸರ ಕಾಯಿಸಿ ಪೋಲಿಸರು ಇವನ ಅಡ್ಡೆ ಮೇಲೆ ರೈಡ್ ಬಿದ್ದಿದ್ದರು. ಕೂದಲೆಳೆ ಅಂತರದಲ್ಲಿ ಬಚಾವಾಗಿ ನಂತರ ಪೋಲಿಸರಿಗೆ ಅಗೆಲು ಕೊಟ್ಟು ಸಮಾಧಾನ ಮಾಡಿದ್ದ. ನಂತರ ಒಂದು ಅಟ್ರಾಸಿಟಿ ಕೇಸಲ್ಲಿ ಸಿಕ್ಕಿ ಬಿದ್ದು ಥರ ಥರ ಒದ್ದೆಯಾಗಿದ್ದ. ಅದೆಲ್ಲಕ್ಕಿಂತ ಮುಖ್ಯವಾದುದು ಸನ್ಮಾನ್ಯರ ಜಾತಕದಲ್ಲಿನ ಸ್ತ್ರೀ ದೋಷ. ಇವನ ಈ ಒಂದು ದೋಷದ ಬಗ್ಗೆ ಇಡೀ ದರೆಗುಡ್ಡೆ ತಗಡ್ ಬೆಚ್ಚ ಮಾಡಿಕೊಂಡಿತ್ತು. ಕಂಡ ಕಂಡ ಚೂಡಿಗಳ ಹಿಂದುಮುಂದಿನಲಿ ಇವನ ಕಿರಿಕ್ ಇದ್ದೇ ಇರುತ್ತಿತ್ತು. ಓ ಮೊನ್ನೆ ಕೂಡ ಗಣೇಶ್ ಎಂಬವರ ಸಂಬಂಧಿ ಒಬ್ಬರಿಗೆ ಯಾವುದೋ ಒಂದು ಹುಡುಗಿ ನಿಶ್ಚಿತಾರ್ಥ ಆಗಿದ್ದು ಅದರಲ್ಲಿ ಈ ಸಂತು ಅಧಿಕ ಪ್ರಸಂಗಿ ಎಂಟ್ರಿ ಕೊಟ್ಟು ಪೊದು ತಪ್ಪಿಸಲು ಟ್ರೈ ಮಾಡಿದ್ದ ಎಂದು ತಿಳಿದುಬಂದಿದೆ. 



ಸಂತುನ ಈ ಒಂದು ಉಪಟಳದಿಂದ ರೋಸಿ ಹೋದ ಗಣೇಶ್ ಸಂತುಗೆ ಒಂದು ಡೇಟ್ ಫಿಕ್ಸ್ ಮಾಡಿ ಬಿಟ್ಟಿದ್ದ. ಅದರಂತೆ ಮೊನ್ನೆ ಎಪ್ರಿಲ್ ಐದು ಭಾನುವಾರ ಸಂಜೆ ಸಂತು ತನ್ನ ಆ್ಯಕ್ಟೀವಾದಲ್ಲಿ ದರೆಗುಡ್ಡೆ ರಬ್ಬರ್ ತೋಟದ ಕಡೆ ಬರುತ್ತಿದ್ದಂತೆ ಗಣೇಶ್ ಆಟೋದಲ್ಲಿ ಬಂದು ಸಂತುಗೆ ಅಡ್ಡ ಹಾಕಿದ್ದಾನೆ. ಸಂತು ಜೊತೆ ಅಕ್ಷಿತ್ ಕೂಡ. ಇಬ್ಬರೂ ಸೇರಿ ಸಂತುವನ್ನು ಆ್ಯಕ್ಟೀವಾದಿಂದ ಎಳೆದು ಹಾಕಿ ಪೊಣ್ಣು ಬೋಡ ಬ್ಯಾವರ್ಸಿ ನಿಕ್ಕ್ ಎಂದು ಕಣಿಲೆ ಕೊಚ್ಚಿದ ಹಾಗೆ ಕಾಲನ್ನು ಕಡಿದಿದ್ದಾರೆ. ಸಂತು ಕಾಲಲ್ಲಿ ಧಾರಾಕಾರವಾಗಿ ರೆಡ್ ಇಂಕ್ ಇಳಿಯುತ್ತಿದ್ದಂತೆ ಇಬ್ಬರೂ ಬಂದ ರಿಕ್ಷಾದಲ್ಲಿಯೇ ಪರಾರಿಯಾಗಿದ್ದಾರೆ. ಇದೀಗ ಸಂತು ಮೊರಂಪಿಗೆ ಬ್ಯಾಂಡೇಜ್ ಹಾಕಿಕ್ಕೊಂಡು ಬದುಕಿದೆಯಾ ಬೇಡ ಜೀವವೇ ಎಂದು ಆಸ್ಪತ್ರೆಯಲ್ಲಿ ಚಾಚಿ ಮಾಡಿದ್ದಾನೆ. 



  ಪುಣ್ಯಕ್ಕೆ ಗಣೇಶ ಸಂತುಗೆ ಟಿಕೆಟ್ ಇಶ್ಯೂ ಮಾಡದ್ದು ಸಂತುನ ಏಳೇಳು ಜನ್ಮದ ಪುಣ್ಯ. ಒಬ್ಬ ಚೂಡಿ ಮರ್ಲ ಇರಬಹುದು, ಆದರೆ ಅವನು ತೀರಾ ಖಾಸಗಿಯಾಗಿ ಯಾರ ಲೈಫ್ ನಲ್ಲಿ ಬಂದರೂ ಯಾರೂ ಬಳೆ ತೊಟ್ಟು ಕುಂತಿರುವುದಿಲ್ಲ ಎಂಬುದಕ್ಕೆ ಈ ಘಟನೆ ಒಂದು ಬೆಸ್ಟ್ ಉದಾಹರಣೆ.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                     

 
 ಹುಡುಗಿ ಜಾತಿಯನ್ನು ಪಬ್ಲಿಕ್ ಪ್ರಾಪರ್ಟಿ ಎಂದು ಅಪಾರ್ಥ ಮಾಡಿಕೊಂಡವರಿಗೆ ಹೆಚ್ಚಾಗಿ ಸನ್ಮಾನ ಸಮಾರಂಭಗಳು ನಡೆಯುವುದು ರೂಢಿ. ಪಂಚಾಕಜ್ಜಾಯ, ಶಾಲು ಹೊಡೆಸಿ ಸನ್ಮಾನ, ಅಂಗಿ ತೆಗೆದು, ಹರಿದು ಸನ್ಮಾನ, ಚಡ್ಡಿ ಸನ್ಮಾನ, ಜೋಡಿನ ಮಾಲೆಯ ಸನ್ಮಾನ, ಮರಕ್ಕೆ ಕಟ್ಟಿಹಾಕಿ ಸನ್ಮಾನ, ಎಂಜಲಿನ ಸಿಂಚನದ ಸನ್ಮಾನ ಮುಂತಾದ ಅನೇಕ ರೀತಿಯಲ್ಲಿ, ಶೈಲಿಯಲ್ಲಿ ಇಂಥ ಮಹಾನುಭಾವರನ್ನು ಸನ್ಮಾನಿಸಿ ಪೋಲಿಸ್ ಕೈಗೆ ಜಾಗ್ರತೆಯಿಂದ ಕೊಟ್ಟು ಕೈತೊಳೆದುಕೊಳ್ಳಲಾಗುತ್ತದೆ. ನಂತರ ಪೋಲಿಸರದ್ದು ಮಾಮಿ ಸೆಕೆ ಬೇರೆಯೇ.
ಇದೀಗ ಬೆಳ್ತಂಗಡಿ ತಾಲೂಕಿನ ಬಂದಾರು ಪಂಚಾಯ್ತಿ ಸದಸ್ಯನೊಬ್ಬನಿಗೆ ಇಂಥ ಒಂದು ಮಹಾನ್ ಸನ್ಮಾನ ನಡೆದಿದೆ ಎಂದು ತಿಳಿದುಬಂದಿದೆ. ಇಲ್ಲಿ ಸದಸ್ಯನಿಗೆ ಚಡ್ಡಿ ಸನ್ಮಾನ ನಡೆದಿದ್ದು, ಸನ್ಮಾನ ಸ್ವೀಕರಿಸಿದ ಸದಸ್ಯ ಸನ್ಮಾನಿಸಿದವರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ ವಿಡಿಯೋ ವೈರಲ್ ಆಗಿದೆ. ಬೇಕಾ ಇನ್ನೊಬ್ಬನ ಮನೆಯ ಗಿಳಿ?






ಇವರು ಸನ್ಮಾನ್ಯ ಮೋನ ಯಾನೆ ಕೋರಿ ಮೋನ.    ಬಂದಾರು ಪಂಚಾಯ್ತಿ ಮೆಂಬರ್. ದೇಶಭಕ್ತರ ಟೀಮಿನ ಪೋಕ್ರಿ ಸಹ. ಸನ್ಮಾನ್ಯರ ಘಟ್ಟ ಹತ್ತಿದರೂ ಬಿಡದ ಹುಟ್ಟುಗುಣ ಏನೆಂದರೆ ಹುಡುಗಿ ಜಾತಿಯನ್ನು ಪಬ್ಲಿಕ್ ಪ್ರಾಪರ್ಟಿ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವುದು. ಕಂಡ ಕಂಡಲ್ಲಿ ಹುಡುಗಿ ಕೇಸ್ ಈ ಜನದ್ದು. ಈ ಒಂದು ವಿಷಯದಲ್ಲೇ ಮೋನನ ಬೆನ್ನು ತುಂಬಾ ಸಲ ಸಮತಟ್ಟಾಗಿದೆ, ನಟ್ಟುಬೋಲ್ಟ್ ಟೈಟ್ ಮಾಡಲಾಗಿದೆ, ಬೆಂಡ್ ತೆಗೆಯಲಾಗಿದೆ, ಭೂತ ಬಿಡಿಸಲಾಗಿದೆ. ಆದರೂ ಮೋನನ ಬಾಲ ಡೊಂಕೇ. ಒಂಥರಾ ಸೈಕೋನ ಹಾಗೆ, ವಿಕೃತನ ಹಾಗೆ ವರ್ತಿಸುವ ಮೋನ ಪಂಚಾಯ್ತಿಗೆ ಬರುವ ಹೆಣ್ಣು ಮಕ್ಕಳ ಮೇಲೆ, ಹೆಂಗಸರ ಮೇಲೆ ಕಕ್ಕೆ ಕಣ್ಣು, ಮಾರಿ ಕಣ್ಣು ಹಾಕಿ ಟಾರ್ಚರ್ ಕೊಡುತ್ತಿದ್ದ ಎಂದು ತಿಳಿದುಬಂದಿದೆ. ಚೂಡಿ ಕಂಡರೆ ಸಾಕು ಚೂಡನಾಗುತ್ತಿದ್ದ ಮೋನನ ಮೇಲೆ ಇಡೀ ಊರಿಗೇ ಊರೇ ತಗಡ್ ಬೆಚ್ಚ ಮಾಡಿಕೊಂಡಿತ್ತು.  ಆದರೆ ಮೋನನ ಕೊಡ ತುಂಬಿರಲಿಲ್ಲ. ಕೆಲವು ದಿನಗಳ ಹಿಂದೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದು ಇದೀಗ ದೇಶಭಕ್ತರಿಂದಲೂ ಕುಂಡೆಗೆ ಲಿಂಬಿಕಾಯಿ ಇಡಿಸಿ ತುಳಿಸಿಕೊಂಡಿದ್ದಾನೆಂದು ಸುದ್ದಿ.


ಹಾಗೆಂದು ಈ ಕೋರಿ ಮೋನ ಒಬ್ಬ ಜನ ಪ್ರತಿನಿಧಿ ಆಗಿ ಇಲ್ಲಿ ತನಕ ಮಾಡಿದ್ದು ಇದೇ ಕಚ್ಚೆಹರುಕತನದ ಕೆಲಸ. ಬಲೆಗೆ ಬಿದ್ದವರೊಂದಿಗೆಲ್ಲ ಆಯಿಲ್ ಚೇಂಜ್ ಮಾಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿ ಮಾಡಿಕೊಂಡ. ಕಣ್ಣಿಗೆ ಕಂಡ ಚೂಡಿಗೆಲ್ಲ  ಪ್ರಪೋಸ್ ಮಾಡುವುದು, ಮೈ ಮುಟ್ಟಿ ಮಾತಾಡುವುದು, ಬೆದರಿಕೆ ಹಾಕೋದು,   ಒಲಿಯದ ಹುಡುಗಿಯರ ಬಗ್ಗೆ ಅಪಪ್ರಚಾರ ಮಾಡೋದು, ಅವರ ಮದುವೆಗೆ ಅಡ್ಡ ಕಾಲು ಹಾಕೋದು, ವಿವಾಹಿತ ಮಹಿಳೆಯರ ಗಂಡಂದಿರಲ್ಲಿ ಚಾಡಿ ಹೇಳೋದು ಮುಂತಾದ ಘನ ಕಾರ್ಯಗಳನ್ನು ಮಾಡುತ್ತಿದ್ದ ಈ ಜನಪ್ರಿಯ ಜನಪ್ರತಿನಿಧಿಗೆ ಸಾರ್ವಜನಿಕ ಸನ್ಮಾನ ಮಾಡಿದ್ದು ಸರಿಯಾಗಿಯೇ ಇದೆ.

ಚಡ್ಡಿ ಸನ್ಮಾನ

ಇನ್ನು ಬಂದಾರಿನ ಈ ಮಹಾನ್ ನಾಯಕ ಬಹಳ ಹಿಂದೆ ತನ್ನ ತಂದೆಗೇ ಸಜ್ಜಿಗೆಯಲ್ಲಿ ಇಲಿ ಫುಡ್ ಹಾಕಿ ಪರಮಾತ್ಮನ ಪಾದ ಸೇರಿಸಲು ಪ್ರಯತ್ನ ಪಟ್ಟ ಹಿನ್ನೆಲೆಯವನು. ಬೇಟೆಗೆ ಸಿಕ್ಕ ಹುಡುಗಿಯರನ್ನೆಲ್ಲ ಉಜಿರೆಗೆ ಸುಗಮವಾಗಿ ಕೋಂಡೋಗಿ ಸುಗಮದಲ್ಲಿ ಕೆಲಸ ಮುಗಿಸಿ ಸುಗಮವಾಗಿ ಮನೆ ಮುಟ್ಟಿಸುತ್ತಿದ್ದ ಮಾಹಿತಿ ಧರ್ಮಸ್ಥಳ ಪೋಲಿಸರಿಗೂ ಇತ್ತು. ಹಿಂದೆ ಒಬ್ಬ ವಿವಾಹಿತ ಮಹಿಳೆ ಮತ್ತು ಇವನ ಮಧ್ಯೆ ಇದ್ದ ಅನೈತಿಕ ಸಂಬಂಧದ ಮ್ಯಾಟರು ಧರ್ಮಸ್ಥಳ ಠಾಣೆಗೆ ಕೂಡ ದೂರಾಗಿತ್ತು. ಇವನನ್ನು ಒಪ್ಪದ ಹುಡುಗಿಯ ಬಾಳನ್ನು ಶತಾಯಗತಾಯ ಮುಗಿಸಲು ನೋಡುವ ಇವನು ಅವಳಿಗೆ ಮದುವೆ ಫಿಕ್ಸ್ ಆದರೆ ಅವಳ ಹುಡುಗನ ಅಡ್ರೆಸ್ ತೆಗೆದು, ಫೋನ್ ನಂಬರ್ ಹುಡುಕಿ ಅವಳ ಬಗ್ಗೆ ಸಾವಿರ ಕತೆ ಕಟ್ಟಿ ಪೊದು ತಪ್ಪಿಸುತ್ತಿದ್ದ ಎಂದು ತಿಳಿದುಬಂದಿದೆ. ಓ ಮೊನ್ನೆ ಕೂಡ ಇವನು  ಸ್ಥಳೀಯ ಲೇಡಿ ಲೀಡರ್ ಆಂಟಿ ಒಬ್ಬಳ ಹಿಂದೆ ಬಿದ್ದಿದ್ದಾನೆ. ಮೂಲಗಳ ಪ್ರಕಾರ ಅವಳೂ ಇವನಿಗೆ ಅಡ್ಜೆಸ್ಟ್ ಆಗಿದ್ದಳು ಎಂದು ಮಾಹಿತಿ ಇದೆ. ಆದರೆ ಇನ್ನೊಂದು ಮಾಹಿತಿ ಏನೇಂದರೆ ಭಯಂಕರ ಕಿರಿಕಿರಿ ಮಾಡುತ್ತಿದ್ದ ಇವನಿಗೆ ಬುದ್ಧಿ ಕಲಿಸಲು ಅವಳೇ ಅವಳ ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಹೇಳಿ ಇವನನ್ನು ತನ್ನ ಮನೆಗೆ ಬರ ಹೇಳಿದ್ದಳು. ಖುಷಿಯಿಂದ ಕುಪ್ಪಳಿಸಿ, ಹಿರಿ ಹಿರಿ ಹಿಗ್ಗುತ್ತಾ ಸ್ನಾನ ಮಾಡಿ, ಸುಗಂಧ ದ್ರವ್ಯಗಳನ್ನು  ಲೇಪಿಸಿ ಘಮ್ಮೆಂದು ಆಂಟಿ ಮನೆಗೆ ಬಂದಿದ್ದ. ಆಂಟಿ ಮನೆಗೆ ಬಂದವನೇ ತೋರ್ಸು..ತೋರ್ಸು.. ಎಂದು ಕುಣಿದಾಡಿದ್ದಾನೆ, ಆಂಟಿಯನ್ನು ಎಳೆದಾಡಿದ್ದಾನೆ. ಅಷ್ಟೇ! "ದಾನೆಂಬೆ ಬೇವರ್ಸಿ, ಪೊಣ್ಣು ಬೋಡ"ಎಂದು ಜನ ಸ್ಪಾಟಿಗೆ ಎಂಟ್ರಿ ಕೊಟ್ಟಿದ್ದಾರೆ.
ಹಾಗೆ ಆಂಟಿ ಮನೆಗೆ ಮಾಮಿ ಸೆಕೆಗೆ ಬಂದಿದ್ದ ಕೋರಿ ಮೋನನನ್ನು ಸಾರ್ವಜನಿಕರು ಮಂಡಲದಲ್ಲಿ ಕೂರಿಸಿ ಭೂತ ಬಿಡಿಸಿ ಕಳೆದಿದ್ದಾರೆ. ಬೆಂಡ್ ತೆಗೆದಿದ್ದಾರೆ, ಸಂಧಿ ಸಂಧಿ ಹೊಡೆದಿದ್ದಾರೆ. ಅಂಗಿ ತೆಗೆಸಿ ಬೆನ್ನಿನಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ್ದಾರೆ. ಅಷ್ಟರಲ್ಲಿ ಪಂಚಾಯ್ತಿಯ ಪದಾಧಿಕಾರಿ ಓರ್ವರಿಗೆ ಸುದ್ದಿ ಮುಟ್ಟಿ ಅವರು ಸ್ಪಾಟಿಗೆ ಓಡೋಡಿ ಬಂದು ಮೋನನಿಗೆ ಮಂಗಳಾರತಿ ಮಾಡಿ ಸಾರ್ವಜನಿಕದ ಕೈಯಿಂದ ಮೋನನ್ನು ಬಿಡಿಸಿದ್ದಾರೆ. ಎಲ್ಲಿಯಾದರೂ ಅವರು ಸ್ಪಾಟಿಗೆ ಬಾರದೆ ಇರುತ್ತಿದ್ದರೆ ಮೋನನ ಲೆಗ್ ಪೀಸ್, ಕೈ ಪೀಸ್ ಬೇತೆ ಬೇತೆ ಆಗುವ ಅಪಾಯಗಳಿತ್ತು ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೋನ ಬಚಾವ್ ಆಗಿದ್ದು ಗಾಯ ನೆಕ್ಕುತ್ತಾ ಗುಡಿ  ಎಳೆದು ಮಲಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನಾದರೂ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ನೋಡಿಕೊಂಡು, ಅಭ್ಯರ್ಥಿಯ ಜಾತಕ ನೋಡಿಯೇ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ. ಮೋನನಂತಹ ಚೂಡಿ ಮರ್ಲರನ್ನು ಆಯ್ಕೆ ಮಾಡಿದರೆ ಕತೆ ಕೈಲಾಸ ಆಗಬಹುದು. ಅಂಥವರಿಗೆ ಸೀದಾ ಮನೆ ದಾರಿ ತೋರಿಸಿ ಬಿಡಬೇಕು.
(ಮುಂದುವರಿಯುವುದು)


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                    

 
 ಲೋಕಲ್ ಲೋಕಾಯುಕ್ತರು ಧಾಳಿ ಮಾಡುತ್ತಾರೆ, DC ಒಂದು ರೌಂಡು ಬರುವ ಅಪಾಯಗಳಿವೆ, AC ಕೂಡ ಬರುವ ಚಾನ್ಸಸ್ ಇದೆ ಎಂದು ಓ ಮೊನ್ನೆಯಿಂದ ವಳಾಲು, ಮುಗೇರಡ್ಕ ನೇತ್ರಾವತಿ ನದಿ ತೀರದ ಮರಳುಗಳ್ಳರು ಅಜ್ಞಾತವಾಸದಲ್ಲಿದ್ದರು. ಯಾರೂ ಬರಲಿಲ್ಲ,ರೈಡೂ ಮಾಡಲಿಲ್ಲ. ಕಳ್ಳಕಾಕರಿಗೆ ಖುಷಿಯಾಗಿ ಹೋದರು. ಕಳ್ಳಕಾಕರಿಗೆ ವ್ಯವಸ್ಥೆ ಇಷ್ಟೊಂದು ಸೆಟ್ ಆಗಿದೆಯಾ ಎಂದು ಅವರೆಲ್ಲ ಕುಣಿದು ಕುಪ್ಪಳಿಸಿ ಇವತ್ತು ಬೆಳಿಗ್ಗೆ ನೇತ್ರಾವತಿ ದಂಡೆಯಲ್ಲಿ ತಂದು ಹಿಟಾಚಿ, ಟಿಪ್ಪರ್ ಇಳಿಸಿದ್ದರು. ಅಷ್ಟೇ! ಆಫ್ಟರ್ನೂನ್ ರೈಡಾಗಿದೆ. ರೈಡ್ ಮಾಡಿದ್ದು ಯಾರು? ಬಿಸ್ಕತ್ ತಿನ್ನುತ್ತಾ ಕುಂತಿರುವ ಗಣಿ ಇಲಾಖೆಯವರು ಅಲ್ಲ, ಕಂದಾಯ ಇಲಾಖೆಯವರೂ ಅಲ್ಲ, ಪುತ್ತೂರು ಡಿವೈಎಸ್ಪಿ, ಉಪ್ಪಿನಂಗಡಿ ಸರ್ಕಲ್, ಉಪ್ಪಿನಂಗಡಿ ಎಸ್ಸೈ ಅಲ್ಲವೇ ಅಲ್ಲ. ಅಲ್ಲಿ ನೇತ್ರಾವತಿ ನದಿ ತೀರದ ವಳಾಲು-ಮುಗೇರಡ್ಕ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ನಿನ್ನೆ ಆಫ್ಟರ್ನೂನ್ ರೈಡು ಬಿದ್ದಿದ್ದು ಉಪ್ಪಿನಂಗಡಿ ಠಾಣೆಯ ಪ್ರೊಬೇಷನರಿ ಪೋಲಿಸ್ ಎಸ್ ಹೆಚ್ ಒ ಮನೀಷಾ IPS. ಮರಳುಗಳ್ಳರಿಗೆ ಇಂಥಹ ಒಂದು ಪೋಲಿಸ್ ಉಂಟು ಅಂತ ಗೊತ್ತೇ ಇರ್ಲಿಲ್ಲ. ಪೊಣ್ಣು ಪೋಲಿಸ್ ವಿದ್ IPS   ಪವರ್. ಹಿಟಾಚಿ, ಟಿಪ್ಪರ್ ಮತ್ತೇ ಗುಡ್ಡೆ ಹತ್ತಿವೆ. ಕಳ್ಳಕಾಕರು ಈಜಿ ಈಜಿ ಓಡಿ ಹೋಗಿದ್ದಾರೆ.











ಹಾಗೆಂದು ಈ ಒಂದು ಅಕ್ರಮ ಮರಳುಗಾರಿಕೆ ಬಗ್ಗೆ ನಾವು ತುಂಬಾ ಸಲ ವೈರಲ್ ಮಾಡಿದ್ದೇವೆ. ಮೊನ್ನೆ ಕೂಡ ಲೋಕಲ್ ಲೋಕಾಯುಕ್ತ ಪೊಲೀಸರು ಧಾಳಿ ಮಾಡಬಹುದೆಂದು ಬರೆದಿದ್ದೆವು. ಈ ಬಗ್ಗೆ ಡಿಸ್ಟ್ರಿಕ್ಟ್ ಕಲೆಕ್ಟರ್ ಗೆ ಕೂಡ ದೂರಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮರಳುಗಳ್ಳರು ಲೈಟಾಗಿ ಹೆದರಿ ಹತ್ತು ದಿನ ಸ್ಪಾಟ್ ಖಾಲಿ ಮಾಡಿದ್ದರು. ಉಪ್ಪಿನಂಗಡಿ-ಬೆಳ್ತಂಗಡಿ ಪೋಲಿಸರು ಯಾವುದೇ ಕಾರಣಕ್ಕೂ ಹಂಡ್ರೆಡ್ ಪರ್ಸೆಂಟ್ ರೈಡ್ ಮಾಡಲ್ಲ ಎಂಬ ನಂಬಿಕೆ ಕಳ್ಳಕಾಕರಿಗೆ ಇತ್ತು. ಹಾಗಾಗಿ ನಿನ್ನೆ ಪುನಃ ಮೆಲ್ಲ ನದಿ ದಂಡೆಗೆ ಟಿಪ್ಪರ್ ಇಳಿಸಿ ಮರಳು ಲೋಡ್ ಚಾಲೂ ಮಾಡಿದ್ದರು. ಹಾಗೆ ಮಧ್ಯಾಹ್ನ ಊಟ ಮಾಡಿ ಮಲಗಿ ಕಣ್ಣಡ್ಡ ಹೋಗಿದೆ ಅಷ್ಟೇ. ಪೋಲಿಸ್... ಪೋಲಿಸ್.. ಎಂದು ಕೂಗಲಾಗಿದೆ. ಯಾರಪ್ಪ... ಇದು ಪೋಲಿಸ್, ಎಲ್ಲಿಯ ಪೋಲಿಸ್ ಎಂದು ಪರಾಂಬರಿಸಿ ನೋಡಿದರೆ ಒಂದು ಪೊಣ್ಣು ಪೋಲಿಸ್. ಉಪ್ಪಿನಂಗಡಿ, ಬೆಳ್ತಂಗಡಿಯ ಎಲ್ಲಾ ದೊಡ್ಡ ಟೊಪ್ಪಿ, ಚಿಕ್ಟೊಪ್ಪಿ ಪೋಲಿಸರೊಂದಿಗೆ ಎಡ್ಡೆಯಲ್ಲಿರುವ ಕಳ್ಳಕಾಕರಿಗೆ ಪೊಣ್ಣು ಪೋಲಿಸ್ ನೋಡಿದ ಕೂಡಲೇ ತಲೆ ಗಿರ್ರ್ ಅಂದಿದೆ.  ಸ್ಪಾಟಿಗೆ ಬಂದಿದ್ದ ಮನಿಷಾ IPS ಗೆ ಅದೇ ಓಬಿರಾಯನ ಕಾಲದ ಪಿಡಬ್ಲ್ಯೂಡಿ ಅಂಡಿಗುಂಡಿ ಲೈಸೆನ್ಸ್ ತೋರಿಸಿ ಐಪಿಎಸ್ಸನ್ನು ಮಂಗ ಮಾಡಲು ನೋಡಿದ್ದಾರೆ. ನಡೆಯಲಿಲ್ಲ. ಮ್ಯಾಡಂ ಗುರ್ರ್ ಮಾಡಿದ್ದಾರೆ. ಬೇರೆ ದಾರಿ ಕಾಣದೆ ಕಳ್ಳಕಾಕರು ಮತ್ತೇ ಅಜ್ಞಾತವಾಸಕ್ಕೆ ತೆರಳಿದ್ದಾರೆ. ಹಾಗೆಂದು ಯಾರೂ ಬಂದರೂ ವಳಾಲಿನ ಕಳ್ಳಕಾಕರು ಪಿಡಬ್ಲ್ಯೂಡಿಯ ಒಂದು ಅಂಡಿಗುಂಡಿ ಕಾಗದ ತೋರಿಸಿ ಯಾಮಾರಿಸಲು ನೋಡುತ್ತಾರೆ. ಆದರೆ ಪಿಡಬ್ಲ್ಯೂಡಿ ಕಾಗದದಲ್ಲಿ ಪಿಡಬ್ಲ್ಯೂಡಿ ಕೆಲಸಗಳಿಗೆ ಮಾತ್ರ ಮರಳು ತೆಗೆಯ ಬೇಕೆನ್ನುವ ಕಂಡೀಷನ್ ಇದೆ ಮತ್ತು ಆ ಸ್ಪಾಟಿಗೆ ಗಣಿ ಇಲಾಖೆ ಬಂದು ಸರ್ವೇ ಮಾಡಿ ಓಕೆ ಅಂದ ಮೇಲೆಯೇ ಮರಳು ಟಿಪ್ಪರ್ ಹತ್ತಬೇಕು. ಆದರೆ ಇಲ್ಲಿ ಪಿಡಬ್ಲ್ಯೂಡಿ ಹೆಸರಲ್ಲಿ ಊರಿಡೀ ಮರಳು ಸಾಗಾಟ ಮಾಡಲಾಗುತ್ತಿದೆ. ಕೇಳುವವರೇ ಇಲ್ಲ.



ಇನ್ನು ವಳಾಲು- ಮುಗೇರಡ್ಕ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಧಾಳಿ ಮಾಡಿದ್ದು ಲೇಡಿ ಲಯನ್ ಮನೀಷಾ IPS ಎಂಬ ಹೆಣ್ಣು ಮಗಳು. ಹರಿಯಾಣ ಮೂಲದ ಈ ಲೇಡಿ ಲಯನ್ ಸದ್ಯಕ್ಕೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರೊಬೇಷನರಿ ಪೋಲಿಸ್ ಅಧಿಕಾರಿಯಾಗಿದ್ದಾರೆ. ವಳಾಲು ಮುಗೇರಡ್ಕ ಭಾಗದ ಖತರ್ನಾಕ್ ಮರಳುಗಳ್ಳರನ್ನು ಅಜ್ಞಾತ ವಾಸಕ್ಕೆ ಸೆಂಡ್ ಮಾಡಿರುವ ಈ ಲೇಡಿ ಲಯನ್ ಉಪ್ಪಿನಂಗಡಿ ಠಾಣಾ ಸರಹದ್ದಿನಲ್ಲಿ ಪೋಲಿಸರ ದೋಸ್ತಗಳ ಮೇಲೆ ಸ್ವಲ್ಪ ನಿಗಾ ಇರಿಸಿದರೆ ಕಳ್ಳಕಾಕರ ಅಂಟ್ ಬಂದ್ ಆಗುವುದರಲ್ಲಿ ಸಂಶಯವಿಲ್ಲ. ಅಷ್ಟು ಮಾಡಲಿ ಮ್ಯಾಡಂ. ಇನ್ನು ಲೋಕಾಯುಕ್ತರು ಯಾವಾಗ ಬರುತ್ತಾರೆಂದು ಗೊತ್ತಿಲ್ಲ. ಕಾಗದ ಅವರಿಗೆ ಸಿಕ್ಕಿರಬಹುದು. ಸಿಕ್ಕಿದರೆ ಮರಳುಗಳ್ಳರ ಚಾಪ್ಟರ್ ಕ್ಲೋಸ್ ಆಗುವ ಅಪಾಯಗಳಿವೆ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                     


  ಅಲ್ಲಿ ಪುತ್ತೂರು ತಾಲೂಕು ಆಡಳಿತಕ್ಕೆ ಒಳಪಟ್ಟ, ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ, ವಳಾಲು, ಮುಗೇರಡ್ಕ, ಮಠದ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ, ನಿರಂತರವಾಗಿ, ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ, ಈ ಬಗ್ಗೆ ಪತ್ರಿಕೆಗಳು, ಜಾಲತಾಣಗಳು ಸುದ್ದಿ ವೈರಲ್ ಮಾಡಿದರೂ  ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಶಿಖಂಡಿ ವರ್ತನೆ ತೋರಿದ ಕಾರಣ ಇದೀಗ ಈ ಒಂದು ಅಕ್ರಮ ವಹಿವಾಟಿನ ಬಗ್ಗೆ ಲೋಕಾಯುಕ್ತರ ಟೇಬಲ್ ಗೆ ದೂರು ಹೋಗಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನ ಟೇಬಲಿಗೂ ಒಂದು ಪ್ರತಿ ದೂರು ಸಲ್ಲಿಸಲಾಗಿದೆ.






ಅಲ್ಲಿ ನೇತ್ರಾವತಿ ತೀರದ ವಳಾಲು ಮತ್ತು ಮುಗೇರಡ್ಕಗಳಲ್ಲಿ ಯಾವುದೇ ಪರ್ಮಿಶನ್ ಇಲ್ಲದೆ, ಗಣಿ ಇಲಾಖೆಯ ಅಧಿಕಾರಿಗಳಿಗೆ ಪಾರ್ಲೆ ಜಿ ಬಿಸಾಡಿ ನಿರಂತರವಾಗಿ ದೊಡ್ಡ ಮಟ್ಟದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ಅಡ್ಡೆಯಲ್ಲಿ ಮರಳು ಕ್ಲೀನಿಂಗ್ ಕೂಡ ನಡೆಸಲಾಗುತ್ತಿದ್ದು ಇದು ಕೂಡ ಡಬ್ಬಲ್ ಕಾನೂನು ಬಾಹಿರವೇ. ದಿನ ನಿತ್ಯ ನೂರಾರು ಟಿಪ್ಪರ್ ಗಳು, ಲಾರಿಗಳನ್ನು ಬಳಸಿ ಇಲ್ಲಿಂದ ಮರಳು ಸಾಗಿಸಲಾಗುತ್ತಿದೆ. ಹಿಟಾಚಿಗಳು, ಜೆಸಿಬಿಗಳನ್ನು ಬಳಸಿ ಮರಳು ತೆಗೆದು, ಬಗೆದು ನೇತ್ರಾವತಿಯನ್ನು ಬರಿದು ಮಾಡಲಾಗುತ್ತಿದೆ. ತಾಲೂಕು ಆಡಳಿತವನ್ನು ಕ್ಯಾರೇ ಅನ್ನದೆ ಈ ವಹಿವಾಟು ನಡೆಯುತ್ತಿದೆ. ಯಾವುದೇ ಕಾಗದ ಪತ್ರಗಳು ಇಲ್ಲದೆ, ನೇತ್ರಾವತಿಯನ್ನು ಡ್ಯಾಡೀಸ್ ಪ್ರಾಪರ್ಟಿ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಒಂದು ಕಳ್ಳಕಾಕರ ಗ್ಯಾಂಗ್ ಇದರ ಹಿಂದೆ ಕೆಲಸ ಮಾಡುತ್ತಿದ್ದು ರೌಡಿಸಂ, ಪೊಲಿಟಿಕಲ್ ಪವರ್ ಮತ್ತು ದೊಡ್ಡ ದುಡ್ಡು ಬಳಸಿ ಈ  ವಹಿವಾಟು ನಡೆಸಲಾಗುತ್ತಿದೆ. ಇದೀಗ ಈ ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಡಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನಿಗೂ ದೂರಾಗಿದ್ದು ಅವರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡ ಬೇಕಾಗಿದೆ.


ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಊರಿಡೀ ಡಂಗುರ ಸಾರಿದರೂ ಅದಕ್ಕೆ ಸಂಬಂಧಪಟ್ಟ ಗಣಿ ಇಲಾಖೆಗೆ ಬಾರಿ ಬಾರಿ ದೂರು ಕೊಟ್ಟರೂ, ಕಾಲ್ ಮಾಡಿ ಹೇಳಿದರೂ, ತಳ್ಳಿ ಅರ್ಜಿಗಳ ಸುರಿಮಳೆ ಸುರಿಸಿದರೂ ಗಣಿ ಇಲಾಖೆ ಪೊಟ್ಟರಂತೆ,ಕೆಪ್ಪರಂತೆ ವರ್ತಿಸಿದ್ದು ಮಾತ್ರ ದುರದೃಷ್ಟಕರ. ಲಕ್ಷಗಟ್ಟಲೆ ಇಲಾಖೆಗೆ ಕಟ್ಟಿ ಪರ್ಮಿಟ್ ತೆಗೆದು ಮರಳು ತೆಗೆಯುವ ಮಂದಿಗೆ ದಿನಕ್ಕೊಂದು, ಗಂಟೆಗೊಂದು ಅಂಡಿಗುಂಡಿ ಕಾನೂನು ಮಾಡುವ ಗಣಿ  ಇಲಾಖೆ, ಅಂಥಹ ಅಧಿಕೃತ ಮರಳುಗಾರಿಕೆಯ ಅಡ್ಡೆಗಳ ಮೇಲೆ ಹದ್ದಿನ ಕಣ್ಣಿಡುವ ಇಲಾಖೆ ಅದೇ ಯಾವುದೇ ಪರ್ಮಿಶನ್ ಇಲ್ಲದೆ ನಡೆಯುವ ಕಳ್ಳಕಾಕರ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಗಣಿ ಕಾನೂನು ಜಾರಿ ಮಾಡುವುದೇ ಇಲ್ಲ. ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಗಣಿ ಅಧಿಕಾರಿಗಳೂ ಪಾಲುದಾರರು ಎಂಬ ಮಾಹಿತಿ ಇದೆ. ಇಂತಹ ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಲೆಕ್ಕದಲ್ಲಿ ಲಾಸ್ ಆಗುತ್ತಿದ್ದರೂ ಗಣಿ ಅಧಿಕಾರಿಗಳು ಮಾತ್ರ ತಮ್ಮ ಶೇರ್ ತಗೊಂಡು ಹಾಯಾಗಿದ್ದಾರೆ. ಗಣಿ ಇಲಾಖೆ ಮುಂದೆ ಮರಳು ತೆಗೆಯುವ ಪರ್ಮಿಶನ್ ಗೆ ಬರುವ ಅಮಾಯಕರನ್ನು ಆ ರೂಲ್ಸ್ ಈ ರೂಲ್ಸ್ ಎಂದು ನಟ್ಟ ತಿರ್ಗಿಸಿ ಬಿಡುವ ಅಧಿಕಾರಿಗಳು ಕಳ್ಳಕಾಕರಿಗೆ ಮಾತ್ರ ಯಾವುದೇ ರೂಲ್ಸ್ ಹೇಳುವುದೇ ಇಲ್ಲ. ಗಣಿ ಅಧಿಕಾರಿಗಳು ಮತ್ತು ಕಳ್ಳಕಾಕರು ಒಂದು ರೀತಿಯಲ್ಲಿ ಕಸಿನ್ ಬ್ರದರ್ಸ್ ಇದ್ದ ಹಾಗೆ.


ಆಯಿತು, ಗಣಿ ಇಲಾಖೆಯವರು ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಪಾಲುದಾರರು ಎಂದೇ ಇಟ್ಟುಕೊಳ್ಳೋಣ ಸಾರ್ವಜನಿಕರು ಉಪ್ಪಿನಂಗಡಿ ಪೋಲಿಸರಿಗೆ ಕೂಡ ಬೇಸಿಗೆ ಶುರುವಿನಿಂದಲೇ ಮಾಹಿತಿ ಕೊಟ್ಟಿದ್ದರು. ಆದರೆ ಉಪ್ಪಿನಂಗಡಿ ಪೊಲೀಸರು ಮಾತಿನಲ್ಲಿ ಮಂಜುನಾಥ ದುಡ್ಡಿನಲ್ಲಿ ತಿಮ್ಮಪ್ಪ. ಅಕ್ರಮ ಮರಳುಗಾರಿಕೆ ಬಗ್ಗೆ ದೂರು ಬಂದಾಗ ಪೋಲಿಸರು ಓ... ಎಂದು ಗುಳಿಗ್ಗ ಬೊಬ್ಬೆ ಹೊಡೆದರು. ಅರ್ಥ ಮಾಡಿಕ್ಕೊಂಡ ಅಕ್ರಮ ಮರಳುಗಾರಿಕೆಯ ಕಳ್ಳಕಾಕರು ಉಪ್ಪಿನಂಗಡಿ ಪೋಲಿಸರಿಗೆ ಡಾರ್ಕ್ ಫೇಂಟಸಿ ಕೊಟ್ಟು ಸಮಾಧಾನ ಮಾಡಿದರು. ಇನ್ನು ಸ್ಥಳೀಯ ವಿ.ಎ, ಪಿ.ಡಿ.ಒ ಮುಂತಾದ ಸಹಭೂತಗಳಿಗೆ ಕೋಳಿ ಮಂಡೆ ಕೊಡಲಾಯಿತು. ಪುತ್ತೂರು ತಾಲೂಕು ಆಡಳಿತ ಸ್ಪಾಟಿಗೆ ಬರಲೇ ಇಲ್ಲ. ಇದೀಗ ಸ್ಥಳೀಯ ಪಂಚಾಯತ್ ಅಧ್ಯಕ್ಷರೊಬ್ಬರು ಲೋಕಾಯುಕ್ತ ಮತ್ತು ಜಿಲ್ಲಾ ಕಲೆಕ್ಟರನಿಗೆ ದೂರು ಕೊಟ್ಟಿದ್ದು action ಆಗುತ್ತಾ ಎಂಬುದು ದೇವರಿಗೇ ಗೊತ್ತು. ಆದರೆ ಲೋಕಾಯುಕ್ತರಿಗೆ ಕಂಪ್ಲೈಂಟ್ ಆಗಿದೆ ಎಂದು ಗೊತ್ತಾಗುತ್ತಲೇ ನೇತ್ರಾವತಿಯ ಎರಡೂ ದಡಗಳಿಂದ ಎಲ್ಲಾ ಜೆಸಿಬಿ, ಹಿಟಾಚಿ, ಟಿಪ್ಪರ್ ಗಳನ್ನ ಸ್ಥಳಾಂತರ ಮಾಡಲಾಗಿ ಸೈಟ್ ಕ್ಲೀನ್ ಮಾಡಲಾಗಿದೆ.
ಈ ಅಕ್ರಮ ಮರಳುಗಾರಿಕೆ ಬಗ್ಗೆ ಇನ್ನೊಂದು ದೂರು ಏನೆಂದರೆ ಪುತ್ತೂರಿನ ಆನೆಮಜಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಈ ಮರಳು ತೆಗೆಯಲಾಗುತ್ತಿದೆ ಎಂದು ಸುಳ್ಳು ನೆಪ ಹೇಳಿ ಇಲಾಖೆಗಳನ್ನು ಹೆದರಿಸಲಾಗಿತ್ತು ಎಂದು ತಿಳಿದುಬಂದಿದೆ. ನ್ಯಾಯಾಲಯ ನಿರ್ಮಾಣದ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಈ ಬಗ್ಗೆ ಸಾ....ಸೂ....ಅನ್ನದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪಿಡಬ್ಲ್ಯೂಡಿ ಅಧಿಕಾರಿಗಳಿಗೂ ಪಾರ್ಲೆ ಜಿ ಬಿಸಾಡಿರುವ ಸಂಶಯಗಳಿವೆ. ಇಲ್ಲಿ ಇಂತಹ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ನಡೆದರೂ ಯಾವುದೇ ಇಲಾಖೆ ಅಕ್ರಮದ ಬಗ್ಗೆ ಕಾನೂನು ಕ್ರಮ ಜರುಗಿಸಿಲ್ಲ ಅಂದರೆ ಇನ್ನು ಮರಳುಗಾರಿಕೆಗೆ ಅಧಿಕೃತ ಪರ್ಮಿಶನ್ ತೆಗೆಯುವುದಾದರೂ ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅಧಿಕೃತವಾಗಿ ಕೆಲಸ ಮಾಡಲು ಸರಕಾರದ ಅಂಡಿಗುಂಡಿ ರೂಲ್ಸ್ ಅಡ್ಡ ಬರುವುದಾದರೆ, ಅಕ್ರಮಗಳು ಸಲೀಸಾಗಿ, ರಾಜಾರೋಷವಾಗಿ ನಡೆಯುವುದಾದರೆ  ಇಲಾಖೆಗಳೇ ಕಳ್ಳರ ಗುರುಕುಲ ಆಗುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದ ನಾನ್ ಕರಫ್ಟ್ ಅಧಿಕಾರಿ ಗಾನ ಮ್ಯಾಡಂ ಒಂದು ಭಾರಿ ವಳಾಲಿಗೆ ಬಂದರೂ ಸಾಕು ಬೇಟೆ ಸಿಕ್ಕಿ ಬಿಡುತ್ತದೆ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget