January 2025



    "ಹಾಗೆಂದು ಮಂಗಳೂರಿನಲ್ಲಿ ರಖಂ ಮತ್ತು ಚಿಲ್ಲರೆ ಹುಡುಗಿ ಸರಬರಾಜಿನ ಕತೆ ಇಂದು ನಿನ್ನೆಯದಲ್ಲ. ಕಳೆದ ಅರ್ಧ ಶತಕದಿಂದ ಇದು ಮಂಗಳೂರು ತುಂಬಾ ಸಾಂಕ್ರಾಮಿಕವಾಗಿಯೇ ಹೋಗಿದೆ. ಪೋಲಿಸರು ನಿತ್ಯ ಸುಮಂಗಲಿಯರನ್ನು  ಹಿಡಿದಷ್ಟು ಈ ವ್ಯವಹಾರ ಚಿಗುರಿಕ್ಕೊಂಡೇ ಹೋದದ್ದು ಬಿಟ್ಟರೆ ಇದನ್ನು ಬೇರು ಸಮೇತ ಕಿತ್ತು ಹಾಕಲು ಮಂಗಳೂರಿಗೆ ಬಂದ ಯಾವುದೇ IPS ಗಳಿಗೆ ಇಲ್ಲಿ ತನಕ ಆಗಿಲ್ಲ. ಬಹಳ ಹಿಂದೆ ಅವನು ಪಂಕಜ್ ಕುಮಾರ್ ಠಾಕೂರ್ IPS  ಆರಡಿ ಕಟೌಟ್ ಖುದ್ದು ಹುಡುಗಿ ಅಂಗಡಿಗಳಿಗೆ ನುಗ್ಗಿ ಹುಡುಗಿಯರನ್ನು ದರದರ ಎಳೆದು ತಂದು ಬೆಂಡ್ ತೆಗೆದರೂ ಏನೂ ಪ್ರಯೋಜನವಾಗಿರಲಿಲ್ಲ. ಬಿಡಿ ಆ ವಿಷಯ ಈಗ ಅದನ್ನೆಲ್ಲ ಬರೆಯುತ್ತಾ ಕುಂತರೆ ಕತೆ ಮುಗಿಯಲ್ಲ. ಇದೀಗ ಲೇಟೆಸ್ಟ್ ಸ್ಟೋರಿ ಒಂದು ಬಂದಿದೆ.


ನಿಮಗೇನಾದರೂ ಮಂಗಳೂರಿನಲ್ಲಿ ಹುಡುಗಿ ಬೇಕೀದ್ದರೆ ಮೇಲೆ ಕೊಟ್ಟಿರುವ ನಂಬರ್ ಗೆ ರಿಂಗ್ ಮಾಡಿ. ಹುಡುಗಿ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಅವನು ಹೇಳಿ ಕೊಳ್ಳುತ್ತಾನೆ. ರೂ 500 ಅವನಿಗೆ ಫೋನ್ ಪೇ ಮಾಡಿದರೆ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಫೋಟೋಸ್ ನಿಮ್ಮ ಮೊಬೈಲಿಗೆ ಬಂದು ಬೀಳುತ್ತದೆ. ಅದ್ರಲ್ಲಿ ನೀವು ರಂಭೆಯನ್ನೋ, ಊರ್ವಶಿಯನ್ನೋ ಸೆಲೆಕ್ಟ್ ಮಾಡಿದರೆ ಮುಂದಿನ ಪೇಮೆಂಟ್ ಗಾಡಿ ಹತ್ತುವ ಮುನ್ನ ನೀವು ಕೊಡಬೇಕು. ಟಿಪ್ಸ್ ಬೇತೆನೆ. ಆದರೆ ಈ ಕೇಸಲ್ಲಿ ಅವನೊಬ್ಬ ಡೋಂಗಿ ತಲೆಹಿಡುಕ ಎಂದು ಗೊತ್ತಾಗಿದೆ. ಹುಡುಗಿ ಫೋಟೋ ಕಸ್ಟಮರ್ ಗೆ ಕಳಿಸಿ, ಅಡ್ವಾನ್ಸ್ ಎಂದು ಎರಡ್ಸಾವಿರ ಹಾಕಿಸಿಕೊಂಡು ಆಮೇಲೆ ದುಡ್ಡೂ ಇಲ್ಲ, ಹುಡುಗಿಯೂ ಇಲ್ಲ. ಕಾಲ್ ಮಾಡಿದರೆ ಕಾಲ್ ಎತ್ತಲ್ಲ.

ರೆಕಾರ್ಡ್ ಮಾಡಲಾದ ಕಾಲ್ ಆಡಿಯೋ

ಇವನು ಹಸೈನಾರ್ ಎಂದು ಇವನ ಕ್ಯೂಆರ್ ಕೋಡು ಸ್ಕೇನರ್ ಹೇಳುತ್ತದೆ. ಇವನೇ ಮೊನ್ನೆ ಒಬ್ಬ ಹುಡುಗನಿಗೆ ಹುಡುಗಿ ಹೆಸರಲ್ಲಿ ಎರಡ್ಸಾವಿರ ಮಂಗೀಸ್ ಮಾಡಿದ್ದಾನೆ.ಹುಡುಗಿ ಸೆಂಡ್ ಮಾಡದೆ ಕೇವಲ ಫೋಟೋ ಮಾತ್ರ ಸೆಂಡ್ ಮಾಡಿ ಎರಡ್ಸಾವಿರ ಧರ್ಮಕ್ಕೆ ಕಿಸಿಗೆ ಇಳಿಸಿಕೊಂಡಿದ್ದಾನೆ. ಹಾಗೆಂದು ಟಚ್ ಮೊಬೈಲ್ ಬರುವ ಮೊದಲು ಹುಡುಗಿಯರನ್ನು ಕಾರಲ್ಲಿ ತಂದು ತೋರಿಸಲಾಗುತ್ತಿತ್ತು. ನೀವು ಎಲ್ಲಿದ್ದೀರಿ ಎಂದು ಹೇಳಿದರೆ ಸಾಕು ಹುಡುಗಿಯರನ್ನು ತುಂಬಿಕ್ಕೊಂಡು ಕಾರು ನಿಮ್ಮ ಎದುರೇ ಬಂದು ನಿಲ್ಲುತ್ತದೆ. ನಿಮ್ಮನ್ನು ಕಾರಿನೊಳಗೆ ಕೂರಿಸಿ ಹುಡುಗಿ ತೋರಿಸಲಾಗುತ್ತದೆ. ನಿಮಗೆ ಓಕೆ ಆದರೆ ನಂತರ ವ್ಯವಹಾರದ ಮಾತು. ಅರ್ಧ ಗಂಟೆಗೆ ಇಷ್ಟು, ಗಂಟೆಗೆ,ದಿನಕ್ಕೆ, ಫುಲ್ ನೈಟ್ ಹೀಗೆಲ್ಲ ರೇಟ್ ಲಿಸ್ಟ್ ಇರುತ್ತದೆ. ಟೋಟಲಿ ಎಲ್ಲಾ ಮುಗಿದು ವಂದನಾರ್ಪಣೆ ಮುಗಿಯುವಾಗ ನಮ್ಮಲ್ಲಿ ಬಸ್ ಚಾರ್ಜ್ ಮಾತ್ರ.
ಹಾಗೆಂದು ಮಂಗಳೂರಿನಲ್ಲಿ ಹುಡುಗಿಯರ ಹೋಲ್ ಸೇಲ್ ವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಎ.ಜೆ ಆಸ್ಪತ್ರೆ ಹತ್ತಿರ ಇರುವ ರಾಯಲ್ ಸನ್ನು ಲಾಡ್ಜಿನಲ್ಲಿ ಐವತ್ತು A/c ರೂಂಗಳನ್ನು ಈ ವೈವಾಟಿಗೆಂದೇ ಮೀಸಲಿಡಲಾಗಿದೆ. ಇನ್ನು ಕೊಟ್ಟಾರದ ಪ್ರಿತ್ವಿ ಲಾಡ್ಜಿನ ಕತೆ ದೊಡ್ಡದಿದೆ. ಈ ಲಾಡ್ಜಿನಲ್ಲಿ ನಡೆದಷ್ಟು ವೈವಾಟ್ ಮಂಗಳೂರಿನ ಬೇರೆ ಯಾವುದೇ ಲಾಡ್ಜಿನಲ್ಲಿ ನಡೆದಿರಲಿಕ್ಕಿಲ್ಲ. ಇನ್ನು ಸ್ಟೇಟ್ ಬ್ಯಾಂಕ್ ಹತ್ತಿರ ಇರುವ ರೋಡ್ ಲೈನ್ಸ್ ಲಾಡ್ಜಿನಲ್ಲಿ ಬಹಳ ವಿಜೃಂಭಣೆಯಿಂದ ವೈವಾಟ್ ನಡೆಯುತ್ತಿದೆ. ಪೋಲಿಸ್ ಕಮಿಷನರ್ ಆಫೀಸ್ ಕೂಗಳತೆ ದೂರದಲ್ಲಿರುವ ಈ ಲಾಡ್ಜು ಬಂದರು ಪೋಲಿಸರಿಗೂ ನೆರೆಕರೆ. ಬಂದರು ಪೋಲಿಸರು ಒಂದು ಪೂಂಕಿ ಬಿಟ್ಟರೂ ಸಾಕು ಈ ಲಾಡ್ಜು ಗಡಗಡ ಆಗಬಹುದು. ಆದರೆ ಇಲ್ಲಿ 24*7 ನಿತ್ಯೋತ್ಸವ. ಇನ್ನು ಅಲ್ಲಿ ಹಂಪನ ಕಟ್ಟೆಯಲ್ಲಿ ಪಿರೇರಾ ಹೋಟೆಲ್ ಬಳಿ ಇರುವ ಬಡ್ಡಿ ಮಗನೊಬ್ಬನ ಮೈಥಿಲಿ ಲಾಡ್ಜು ಕೂಡ ಕಲರ್ ಕಲರ್ ಹುಡುಗಿಯರ ಶೋರೂಂ ಆಗಿದೆ. ಈ ಎಲ್ಲಾ ಲಾಡ್ಜುಗಳಲ್ಲೂ ಅದೇ ರೇಟ್ ಲಿಸ್ಟ್ ಇರುತ್ತದೆ. ಅರ್ಧ ಗಂಟೆಗೆ ಇಷ್ಟು, ಗಂಟೆಗೆ ಬೇರೆ, ದಿನಕ್ಕೆ, ಇಡೀ ನೈಟ್ ಟೈಟ್ ಮಾಡಲು ಇಂತಿಷ್ಟು ಅಂತ ಫಿಕ್ಸ್ ಆಗಿರುತ್ತದೆ. ಹಾಗೆಂದು ಮಂಗಳೂರಿನ ಸೈಕಲ್ ಮಾರುಕಟ್ಟೆಯ ನಂಬರ್ ವನ್ ರಖಂ ಮತ್ತು ಚಿಲ್ಲರೆ ವ್ಯಾಪಾರಿ ಯಾರೆಂದು ಇಡೀ ಲೋಕಕ್ಕೆ ಗೊತ್ತಿರುವ  ವಿಷಯ. ಹೆಬ್ರಿ ಕಿಷ್ಣ ಎಂಬ ಸೈಕಲ್ ವ್ಯಾಪಾರಿ ಇಡೀ ದಕ್ಷಿಣ ಕನ್ನಡಕ್ಕೆ ಸೈಕಲ್ ಹಂಚಿ ಬಿಟ್ಟ. ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಿಷ್ಣ ಅಲ್ಲಿ ಹೆಬ್ರಿಯಿಂದಲೇ ತನ್ನ ಸೈಕಲ್ ಸಾಮ್ರಾಜ್ಯವನ್ನು ಕಂಟ್ರೋಲ್ ಮಾಡುತ್ತಿದ್ದಾನೆ. ಇನ್ನು ರಾಯಲ್ ರಘು, ಹಾಸನ ದಿನೇಶ್, ಫೈನಾನ್ಸ್ ನಾಣು ಮುಂತಾದ ಮಹನೀಯರು ಸೈಕಲ್ ಸಪ್ಲೈಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಒಬ್ಬ ರಿಕ್ಷಾ ಚಾಲಕ ಲಾಡ್ಜಿಗೆ ಒಂದು ಕುರಿಯನ್ನು ಜೋಡಿಗೆ ಕರೆ ತಂದರೆ ಅವನಿಗೆ ಐನೂರು ಕಮಿಷನ್ ಇದೆ ಎಂದು ತಿಳಿದುಬಂದಿದೆ.
ಹಾಗೆಂದು ಮಂಗಳೂರಿನ ಈ ಸೈಕಲ್ ಮಾರ್ಕೆಟನ್ನು ದಕ್ಷಿಣ ಕನ್ನಡಕ್ಕೆ ಬಂದ IPS ಗಳೂ ಹಾಗೆ ಸುಮ್ಮನೆ ಬಿಟ್ಟಿಲ್ಲ. ಪಂಕಜ್ ಕುಮಾರ್ ಠಾಕೂರ್ IPS ಎಂಬ ಆರಡಿ ಕಟೌಟ್ ಮಂಗಳೂರಿನಲ್ಲಿ ಇದ್ದಷ್ಟು ದಿನ ಸೈಕಲ್ ಗಳಿಗೆ ರಜೆ ಘೋಷಿಸಲಾಗಿತ್ತು. ನಂತರದ ಪ್ರಶಾಂತ್ ಕುಮಾರ್ ಠಾಕೂರ್ IPS, ಸಂದೀಪ್ ಪಾಟೀಲ್, ಚಂದ್ರಶೇಖರ್, ಮುರುಗನ್ IPS, ಕುಲ್ ದೀಪ್ ಜೈನ್ ಮುಂತಾದ ಐಪಿಎಸ್ ಅಧಿಕಾರಿಗಳು ಮಂಗಳೂರಿನ ಸೈಕಲ್ ಮಾರುಕಟ್ಟೆಯನ್ನು ಲಗಾಡಿ ತೆಗೆದು ಬಿಟ್ಟಿದ್ದರು. ಆದರೂ ನಾಯಿ ಬಾಲ ಡೊಂಕೇ. ಪೆಟ್ಟು ಬಿದ್ದಷ್ಟು ದಪ್ಪ ಆಗೋದು ಜಾಸ್ತಿ.
 ..............................................

 ..............................................
ಆತ್ಮ ಪದ
ಕೆಲವರು ತಮ್ಮ ಆತ್ಮದರಮನೆಗೆ ತಾವೇ ಚಾಲಕರಾಗಿರುತ್ತಾರೆ.ಅದರ ನಿಯಂತ್ರಣದ ಕಾರ್ಯವ ಅವರೇ ನಿರ್ವಹಿಸುತ್ತಾರೆ.ಆದು ಹೇಗೆಂದರೆ  ಗಾಡಿಯ ಡ್ರೈವರ್ ನಾವೇ ಆಗಿ ಯಾರನ್ನೂ ಅವಲಂಬಿಸದೆ ನಮ್ಮ ಗಾಡಿಯ ನಾವೇ ಓಡಿಸಿದಂತೆ.. ಮತ್ತೆ ಇನ್ನು ಕೆಲವರು ತಮ್ಮ ಆತ್ಮದರಮನೆಯ ನಿಯಂತ್ರಣವ ಇತರರಿಗೆ ಒಪ್ಪಿಸಿ ತಾವು ನಿಮಿತ್ತ ಎಂಬಂತೆಯೋ ಅಥವಾ ಉದಾಸೀನ ಹೊಂದಿದವರಂತೆಯೋ ಇದ್ದು ಯಾರ್ಯಾರ ಮಾತು ಕೇಳುತ್ತಾ ತನ್ನ ತಾನು ಕಳಕೊಳ್ಳುತ್ತಾ ಪರಾವಲಂಬಿಯಂತೆ ಇರುತ್ತಾರೆ..ಅದು ಹೇಗೆಂದರೆ ತನ್ನದೇ ಗಾಡಿಗೆ ಬೇರೆ ಡ್ರೈವರ್ ಇಟ್ಟು ಗಾಡಿ ಓಡಿಸಿದಂತೆ.. ತಾನು ಆರಾಮದಲ್ಲಿ ಇರುತ್ತೇನೆ ಎಂದು ಅವರ ನಂಬಿಕೆ...ಈ ಎರಡು ಅವಸ್ಥೆಗಳಲ್ಲಿ ತಾನು ಪರಾವಲಂಬಿಯಾಗಿ ಇತರರ ಸುತ್ತ ತಾನು ಸುತ್ತುವುದು ಒಂದು ರೀತಿ ಆದರೆ, ತನ್ನ ಕೆಲಸಕ್ಕೆ ಯಾರನ್ನೂ ಬಳಸಿಕೊಳ್ಳದೆ ಸ್ವಾವಲಂಬಿಯಾಗಿ ಇತರರನ್ನು ಎಷ್ಟು ಬೇಕೋ ಅಷ್ಟೇ ಬಳಸಿಕೊಳ್ಳುವುದು..ಇವೆರಡೂ ರೀತಿ ನೀತಿಗಳು ಅವರವರಿಗೆ ಬಿಟ್ಟದ್ದಾಗಿರುತ್ತದೆ..ಪರಾವಲಂಬಿಯಾದಾಗಲೂ ಕೆಲಸ ಕಡಿಮೆಯಾಗಿ ಅನಾರೋಗ್ಯ ಕಾಡಬಹುದು.. ಅತೀ ಸ್ವಾವಲಂಬಿಯಾದರೂ ಅನಾರೋಗ್ಯ ಕಾಡಬಹುದು.. ನಾವು ಇವೆರಡರ ಸಮತೂಕ ಹೊಂದಿ ಜೀವನ ನಡೆಸಬೇಕಾಗುತ್ತದೆ.
-ಶಾಂತಾ ಕುಂಟಿನಿ



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.







 

                 


   ಕೆಲವು ಸಮಯಗಳ ಹಿಂದೆ ಕಡಬ ಸಮೀಪ ಗಾಂಜಾ ವ್ಯಸನಿಯೊಬ್ಬನಿಂದ ಕೊಲೆಯಾಗಿ ಹೋದ ಸಂದೀಪ್ ಕೊಲೆಗಾರನ ಕ್ರಿಮಿನಲ್ ಇತಿಹಾಸದ ಬಗ್ಗೆ ಒಂದೊಂದೇ ದಂತಕತೆಗಳು ಬಿಲ ಬಿಡುತ್ತಿವೆ. ರಖಂ ಮತ್ತು ಚಿಲ್ಲರೆ ಗಾಂಜಾ ವ್ಯವಹಾರ ಮಾಡುತ್ತಿದ್ದ ಪ್ರತೀಕ್ ಎಂಬ ಕೊಲೆಗಾರ ಖುದ್ದು ಗಾಂಜಾ ಅಡಿಕ್ಟ್. ಗಾಂಜಾ ಎಳೆದೂ ಎಳೆದೂ ಈತ ಮಾಡಿದ ಕ್ರಿಮಿನಲ್ ಚಟುವಟಿಕೆಗಳು ಕೊನೆಗೆ ದೋಸ್ತನನ್ನೇ ಕೊಲೆ ಮಾಡುವಲ್ಲಿ ತನಕ ಬೆಳೆದು  ಇದೀಗ ಜೈಲು ಪಾಲಾಗಿದ್ದಾನೆ. ಅಮಲು ಇಳಿದರೆ ಈ ಸರ್ತಿ.
ಹಾಗೆಂದು ಬಹಳ ಹಿಂದೆಯೇ ಈ ಪ್ರತೀಕ್ ನೈಂಟಿ ಫೋರ್ ಕ್ಯಾರೆಟ್ ಕ್ರಿಮಿನಲ್. ಬಹಳ ಹಿಂದೆ ತನ್ನದೇ ಹತ್ತಿರದ ಮನೆಯ ಹುಡುಗಿಯ ಕೈಗೆ ಕೈ ಹಾಕಿ ಹಿಡಿದೆಳೆದು "ಬರ್ಪನ" ಎಂದು ಕೇಳಿ ಗಲಾಟೆ ಆಗಿತ್ತು. ಊರಿನವರು ಆಗಲೇ ಪ್ರತೀಕನ ಭೂತ ಬಿಡಿಸುತ್ತಿದ್ದರೆ ಇವತ್ತು ಸಂದೀಪ್ ಬದುಕಿ ಉಳಿಯುತ್ತಿದ್ದ. ಸೈಯ್ಯಡ್ ಎಂದು ಊರಿನವರು ಆವತ್ತು ಬಿಟ್ಟಿದ್ದರು. ಈ ಬಗ್ಗೆ ಕಡೇ ಪಕ್ಷ ಪೋಲಿಸ್ ಕಂಪ್ಲೈಂಟ್ ಕೂಡ ಆಗಲಿಲ್ಲ. "ದಾಲ ಆಪುಜಿ" ಎಂದು ಹುಡುಗನಿಗೆ ಧೈರ್ಯ ಬಂದು ಬಿಟ್ಟಿತು. ಆಮೇಲೆ ಕೂಡ ಇವನು ಇವನ ಪಿಕಪ್ ವಾಹನದಲ್ಲಿ ನೆಟ್ಟಣ ರೈಲ್ವೇ ಸ್ಟೇಶನ್ ಬಳಿ ಮತ್ತೊಬ್ಬಳು ಹುಡುಗಿಯ ಕೈಗೆ ಕೈ ಹಾಕಿ "ಬರ್ಪನ" ಎಂದು ಕೇಳಿ ಗಲಾಟೆ ಆಗಿತ್ತು. ಆಗ ಕೂಡ ಊರವರು ಮತ್ತು ಹುಡುಗಿ ಕಡೆಯವರು ಸೈಯ್ಯಡ್ ಎಂದು ಬಿಟ್ಟಿದ್ದರು. ದಾಲ ಆಪುಜಿ ಎಂದು ಪ್ರತೀಕ್ ಮತ್ತೇ ಮತ್ತೇ ರೀಚಾರ್ಜ್ ಆಗಿ‌ ಬಿಟ್ಟ. ಆಮೇಲೆ ಇದೇ ಪ್ರತೀಕ್ ಗಾಂಜಾ ನಶೆಯಲ್ಲಿ ಪುತ್ತೂರಿನಿಂದ ಯಾರದೋ TATA ಏಸ್ ಪಾರ್ಸೆಲ್ ಗಾಡಿಯೊಂದನ್ನು ಎಂಕಿಪ್ಪಡ್ ಎಂದು ಕಡಬ ತನಕ ತಂದಿದ್ದು ಪುಣ್ಯಕ್ಕೆ ಗಾಡಿಯಲ್ಲಿ GPS ಇದ್ದ ಕಾರಣ ಕಡಬದಲ್ಲಿ ಪೋಲಿಸರು ಗಾಡಿ ಮತ್ತು ಪ್ರತೀಕ್ ನನ್ನು ಹಿಡಿದು ಬೆಂಡ್ ತೆಗೆದಿದ್ದರು. ಆದರೂ ಪ್ರತೀಕನಿಗೆ ದೇವರು ಒಳ್ಳೆ ಬುದ್ದಿ ಕೊಡಲೇ ಇಲ್ಲ.


ಹಾಗೆಂದು ಈ ಗಾಂಜಾ ಪ್ರತೀಕ್ ಗೆ ಹತ್ತು ಹಲವು ವೈವಾಟ್ ಇದೆ. ಹಿಂದೆ ಇವನೊಮ್ಮೆ ನೆಟ್ಟಣ ರೈಲ್ವೇ ಸ್ಟೇಶನಲ್ಲಿ ರೈಲಿನ ಸಾಮಾನು ಕದ್ದು ಸಿಕ್ಕಿ ಬಿದ್ದಿದ್ದ. ರೈಲಿನ ಕಬ್ಬಿಣ ಸಾಗಿಸಿ ದುಡ್ಡು ಮಾಡುವ ವೈವಾಟಲ್ಲಿ ಇವನಿದ್ದ. ಆದರೆ ಸಿಕ್ಕಿ ಬಿದ್ದು ರೈಲಿನವರಿಗೆ ದುಡ್ಡು ಕೊಟ್ಟು, ಮೆಂಟಲ್ ಸರ್ಟಿಫಿಕೇಟ್ ಮಾಡಿಸಿ ಕೇಸ್ ಮುಚ್ಚಿ ಹಾಕಲಾಗಿತ್ತು. ಅವತ್ತಿನಿಂದ ಇವನು ಫುಲ್ ಟೈಂ ಕ್ರಿಮಿನಲ್ ಮೆಂಟಲ್ ಆಗಿದ್ದು ಕದ್ದು ಮರ ಸಾಗಾಟ, ಮರಳು ಸಾಗಾಟಕ್ಕೂ ಕೈ ಹಾಕಿದ್ದ. ಆವತ್ತೊಮ್ಮೆ ನೈಟ್ ಒಂದು ಕೊರಗ ಕಾಲೋನಿಯ ಮೈನ್ ಲೈನ್ ಫ್ಯೂಸ್ ತೆಗೆದು ಕಾಲೋನಿಯೊಳಗೆ ಏನು ಮಾಡಿದ್ದ ಎಂಬುದು ಇಡೀ ಊರಿಗೇ ಗೊತ್ತಿರುವ ವಿಷಯ. ಯಾವುದೇ ಕೇಸಿಗೂ ಪೋಲಿಸ್ ಎಂಟ್ರಿ ಆದರೆ ಮೆಂಟಲ್ ಸರ್ಟಿಫಿಕೇಟ್ ರೆಡಿ. ಇನ್ನು ಪ್ರತೀಕ್ ಅಣ್ಣನ ಸಾವಿನ ಸುತ್ತವೂ ಸಾರ್ವಜನಿಕರು ಸಂಶಯದ ಹುತ್ತ ಕಟ್ಟಿದ್ದು ಅಣ್ಣ ಸಾಯುವ ದಿನ ಸಹೋದರರೊಳಗೆ ಬಿಯರ್ ಬಾಟ್ಲಿ ಫೈಟಿಂಗ್ ನಡೆದಿತ್ತು ಎಂದು ತಿಳಿದುಬಂದಿದೆ. ಅಣ್ಣನಿಗೆ ಗಾಡಿಯಲ್ಲಿ ಡಿಶುಂ ಮಾಡಲು ನೋಡಿ ನಂತರ ಅವನ ಎದೆಗೆ ಗುದ್ದಲಾಗಿತ್ತು. ಆ ದಿನವೇ ಅಣ್ಣ ಪಡ್ಚ ಆಗಿದ್ದು ಆವತ್ತೇ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದರು.
ಇನ್ನು ಪ್ರತೀಕನ ಪ್ರತಿಯೊಂದು ಕ್ರಿಮಿನಲ್ ಚಟುವಟಿಕೆಗಳ ಹಿಂದೆ ಕೆಲವು ಗಾಡ್ ಫಾದರ್ ಗಳಿದ್ದಾರೆ. ಸಂದೀಪನ ಕೊಲೆಯಾದ ಮರುದಿನವೇ  ನೆಟ್ಟಣ ವಿಜಯಾ ಬ್ಯಾಂಕಿನಿಂದ ಮೂರು ಲಕ್ಷ ರೂಪಾಯಿ ಡ್ರಾ ಆಗಿದ್ದು ಇದು ಯಾರಿಗೆ ಅಗೆಲು ಕೊಡಲಿಕ್ಕೆ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಇನ್ನು ಈತ ಎಷ್ಟು ಗಾಂಜಾ ವ್ಯಸನಿ ಅಂದರೆ ಸಂದೀಪನ ಡೆಡ್ ಬಾಡಿ ಕಾರಲ್ಲಿ ಇಟ್ಟುಕ್ಕೊಂಡೇ ಸೂಡ್ಲು ಸಮೀಪ ಕೈಯಲ್ಲಿ ರಾಡ್ ಹಿಡಕ್ಕೊಂಡು ಕಾರಿಂದ ಇಳಿದು ಸಾರ್ವಜನಿಕರಲ್ಲಿ "ನಾನು ಜೈಲಲ್ಲೇ ಟಿಕೆಟ್ ತೆಗೆದರೆ ಮುಗೀತು, ಸೇಫಾಗಿ ಹೊರಗೆ ಬಂದರೆ ಮಾತ್ರ ಮೂರು ವಿಕೆಟ್ ಇನ್ನೂ ತೆಗೆಯಲಿದೆ" ಎಂದು ಘೋಷಿಸಿ ಭಯ ಹುಟ್ಟಿಸಿದ್ದನಂತೆ. ಅಲ್ಲ ಮಾರಾಯ್ರೆ ಒಂದು ವಿಕೆಟ್ ತೆಗೆದೇ ಬಾಡಿ ಕಾರಲ್ಲಿದ್ದು ಅದರ ಕಡೆ ಕೊಡಿಯೇ ಆಗಿರಲಿಲ್ಲ, ಅಂಥ ಪರಿಸ್ಥಿತಿಯಲ್ಲೇ ಮತ್ತೇ ಮೂರು ಮರ್ಡರ್ ಗಳ ಮುನ್ಸೂಚನೆ. ಇವನಿಗೆ ಜೈಲಿನಿಂದಲೇ ಟಿಕೆಟ್ ಕೊಟ್ಟರೆ ಇವನು ಘೋಷಿಸಿದ ಮೂರು ಜೀವಗಳಾದರೂ ಉಳಿಯ ಬಹುದು. ಹಾಗೆಂದು ಈ ಹುಡುಗನನ್ನು ಕರೆದು ಬುದ್ಧಿವಾದ ಹೇಳ ಬೇಕಾಗಿದ್ದ ಇವನ ತಂದೆ ಮತ್ತು ಮಾಮೂ ಇವನ ಕ್ರಿಮಿನಲ್ ಚಟುವಟಿಕೆಗಳಿಗೆ ನೀರು, ಇಫ್ಕೋ, ಸುಫಲಾ, ಕೋಳಿ ಗೊಬ್ಬರ ಹಾಕಿ ಬೆಳೆಸಿದ್ದು ಬಿಟ್ಟರೆ ಬೇರೆನೂ ಮಾಡಿಲ್ಲ. ಇವನು ಮಾಡಿದ್ದೆಲ್ಲ ಮಕ್ಕಳಾಟ ಎಂದು ಹೇಳುವ ತಂದೆ, ಪೋಲಿಸ್ ಕೈಯಿಂದ ಬಿಡಿಸಿಕೊಂಡು ಬರುವ ಮಾಮು ಇರುವ ತನಕ ಈ ಗಾಂಜಾ ಗಿರಾಕಿ ಉದ್ದಾರ ಆಗುವ ಲಕ್ಷಣಗಳಿಲ್ಲ. ಅದರಲ್ಲೂ ಕಾಮಿಡಿ ಫೀಸ್ ಏನೆಂದರೆ ಪುತ್ತೂರು RTO ಇವನಿಗೆ ಡ್ರೈವಿಂಗ್ ಲೈಸೆನ್ಸ್ ಕೊಟ್ಟಿದೆ. ಆರೋಗ್ಯ ಇಲಾಖೆ ಮೆಂಟಲ್ ಮಂಜ ಎಂದು ಆಲ್ರೆಡಿ ಸರ್ಟಿಫಿಕೇಟ್ ಕೊಟ್ಟಿದೆ,   ಅದರ ಮೇಲೆ ಸಾರಿಗೆ ಇಲಾಖೆಯವರ ಡ್ರೈವಿಂಗ್ ಲೈಸೆನ್ಸ್. ಇನ್ನು ಕಾನೂನು ಇಲಾಖೆ ನಿರ್ದೋಷಿ ಎಂದು ಕೇಸ್ ಮುಗಿಸಿದರೆ ಹೊರಗೆ ಬಂದು ಮತ್ತೇ ಮೂರು ವಿಕೆಟ್ ತೆಗೆದು ಬಿಡುತ್ತಾನೆ. ಅಷ್ಟೇ!
..............................................
ಸ್ವಾಮಿಗೇನಾಗಿದೆ?
 ರಾಜ್ಯದ ಪ್ರಬಲ ಸಮುದಾಯದ ದಕ್ಷಿಣ ಕನ್ನಡ ಪೀಠದ ಸಾಮಿ ಖಾವಿ ಹಿಂದೆ ಏಕಾಂತ ಪೂಜೆ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಸಾಮಿ ತನ್ನದೇ ಸಂಸ್ಥೆಯ ಟೀಚರ್ ಗಳನ್ನು ಕೂರಲು, ನಿಲ್ಲಲು ಬಿಡುತ್ತಿಲ್ಲ. ಈಗಾಗಲೇ ಕೆಲವರು ಕೆಲಸ ಬಿಟ್ಟು ಬಜಂಟ್ ಹೆಕ್ಕಿಯಾದರೂ ಬದುಕಿಕೊಳ್ಳಲು ಮನೆ ದಾರಿ ಹಿಡಿದಿದ್ದಾರೆ. ಸಾಮಿ ಏಕಾಂತ ಪೂಜೆ ನಿಲ್ಲಿಸದಿದ್ದರೆ ಒಂದು ದಿನ ಮುರುಘ ಗತಿ ಗ್ಯಾರಂಟಿ.
 ..............................................
ದರೋಡೆ

ಇ.ಡಿ ಹೆಸರಿನಲ್ಲಿ ಬೀಡಿ ಮಾಲೀಕನ ಮನೆ ದರೋಡೆ. ಕೊಲ್ಲಂ ಪೊರ್ಬುಲು ಬಂಧನ. ಇನ್ನುಳಿದ ಇ.ಡಿ ಅಧಿಕಾರಿಗಳಿಗಾಗಿ ವಿಟ್ಲ ಪೋಲಿಸರ ಹುಡುಕಾಟ. ಅಲ್ಲಿ ತನಕ ಪೊರ್ಬುಲು ಲಗಾಡಿ!





..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.








 

                


    ಇದೀಗ ಮರಳುಗಳ್ಳರಿಗೆ ನಾಮಕರಣ ಮಾಡಲಾಗುತ್ತಿದೆ. ಫಾರ್ ಎಕ್ಸಾಂಪಲ್ ಕುಮಾರಧಾರ ಕಳ್ಳರು, ನೇತ್ರಾ ಕಳ್ಳರು, ಫಲ್ಗುಣಿ ಕಳ್ಳರು, ಸೌಪರ್ಣಿಕಾ, ಶರಾವತಿ, ಹೇಮಾವತಿ ಇತ್ಯಾದಿ ಇತ್ಯಾದಿ. ಸುಳ್ಯದಲ್ಲಿ ಇದೇ ಮರಳುಗಳ್ಳರನ್ನು ಪಯಸ್ವಿನಿ ದಡದ ಚಾಪ್ಟರ್ ಗಳು ಎಂದು ಕರೆಯಲಾಗುತ್ತದೆ. ಹರಿಯುವ ನೀರು ಕಂಡರೆ ಸಾಕು ಟಿಪ್ಪರ್ ಇಳಿಸುವಲ್ಲಿ ತನಕ ಮುಟ್ಟಿದ್ದಾರೆ ಪಯಸ್ವಿನಿ ತೀರದ ಚಾಪ್ಟರ್ ಗಳು.


ಅಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಸರಹದ್ದಿನಲ್ಲಿ ಬರುವ ಅರಂಬೂರಿನ ಪಯಸ್ವಿನಿ ನದಿಯಿಂದ ವ್ಯಾಪಕವಾಗಿ ಮರಳು ತೆಗೆಯಲಾಗುತ್ತಿದೆ. ಅರಂಬೂರು ಕೂಟೇಲು ಬಾಬಣ್ಣನ ಮನೆಗೆ ಹೋಗುವ ಸಿಂಗಲ್ ರೋಡಿನಲ್ಲಿ ಟಿಪ್ಪರ್ ಗಳ ಮೆರವಣಿಗೆಯೇ ಸಾಗಿ ಅವರ ಮನೆಯ ಮುಂದುಗಡೆಯೇ ನದಿಗೆ ಇಳಿಯುತ್ತದೆ. ದಿನ ಒಂದಕ್ಕೆ ಹತ್ತು ಹಲವು ಟಿಪ್ಪರ್ ಗಳು ಈ ಸಿಂಗಲ್ ರೋಡಿನಲ್ಲಿ ಯಮ ಸ್ವರೂಪಿಯಾಗಿ ಬರುತ್ತಿದ್ದು ಈ ಸಿಂಗಲ್ ರೋಡಿನ ಪ್ರಯಾಣಿಕರು ಭಯಭೀತರಾಗಿ ಟಿಪ್ಪರ್ ಅಡಿಗೆ ತಮ್ಮ ಸರದಿ ಯಾವಾಗ ಎಂದೇ ದಿಗಿಲಾಗಿದ್ದಾರೆ. ಈ ಟಿಪ್ಪರ್ ಪೈಲೆಟ್ ಗಳಲ್ಲಿ ಮಾತಾಡಿದರೆ ಅವರು ಇಂಗ್ಲಿಷಿನಲ್ಲಿ ಟಸ್ಕ್ ಪುಸ್ಕ್ ಎಂದು ಆವಾಜ್ ಹಾಕುತ್ತಾರೆ. ಇದೇ ಸಿಂಗಲ್ ರೋಡಿನಲ್ಲಿ ಆಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆಯೂ ಇದ್ದು ಅವರು ಕೆಟ್ಟದ್ದನ್ನು ನೋಡಲ್ಲ,ಕೇಳಲ್ಲ,ಮಾತಾಡಲ್ಲ.



ಹಾಗೆಂದು ಅರಂಬೂರಿನ ಕೂಟೇಲು ಬಳಿ ಪಯಸ್ವಿನಿ ತೀರದಿಂದ ಮರಳು ತೆಗೆಯುವ ರೆಡ್ಡಿ ಯಾರೆಂದು ಇಣುಕಿ ನೋಡಿದರೆ ಅದು "ಪರಿವಾರ ಕಾನ ಪೊಯ್ಯೆಸ್" ಕಂಪೆನಿಯ ಎಂ ಡಿ ಎಂದು ಗುರುತಿಸಲಾಗಿದೆ. ಸುಳ್ಯ ತಹಶೀಲ್ದಾರಿಗೆ  ಮಾಮೂಲು ಕೊಡುತ್ತಾರಂತೆ, ಸುಳ್ಯ ಪೋಲಿಸರ ವಿಷಯ ಬಿಡಿ ಅವರಿಗೆ ಒಂದು ಟಿಪ್ಪರಿಗೆ ಇಂತಿಷ್ಟು ಅಂತ ಅಂತೆ,  ಆಲೆಟ್ಟಿ ಗ್ರಾಮ ಪಂಚಾಯಿತಿ ಪಿಡಿಒಗೆ ಒಂದು ಎಲೆ, ಮುಂದುವರೆದು ಪುತ್ತೂರು ಡಿವೈಎಸ್ಪಿ ಟೇಬಲ್ಲಿಗೂ ಮಾಮೂಲು ಇದೆಯಂತೆ. ಹಾಗಾದರೆ ಪರಿವಾರ ಕಾನ ಪೊಯ್ಯೆಸ್ ಕಂಪೆನಿ ಎಷ್ಟು ಪವರ್ ಫುಲ್ ಎಂದು ನೀವೇ ಯೋಚಿಸಿ. ಇಡೀ ಸುಳ್ಯ ತಾಲೂಕು ಆಡಳಿತಕ್ಕೆ ಮಾಮೂಲು ಕೊಟ್ಟು, ಪುತ್ತೂರು ಉಪವಿಭಾಗದ ಪೋಲಿಸ್ ಉಪ ವರಿಷ್ಠಾಧಿಕಾರಿಗೂ ಮಾಮೂಲು ಕೊಡುತ್ತೇವೆ ಎಂದು ರಾಜಾರೋಷವಾಗಿ ಪಯಸ್ವಿನಿಯ ಒಡಲನ್ನು ಬರಿದು ಮಾಡಲಾಗುತ್ತಿದೆ. ಕಾನೂನುಬಾಹಿರವಾಗಿ ತಾಲೂಕು ಆಡಳಿತವನ್ನು ಮರಳು ಮಾಡಿ ಮರಳು ತೆಗೆಯುವ ಪರಿವಾರಕಾನದ ರೆಡ್ಡಿ ಕಂಪನಿಗೆ ದೂಜಿ ಕೊಡುವ ಒಬ್ಬನೇ ಒಬ್ಬ ಗಂಡು ಅಧಿಕಾರಿ ಇಡೀ ಪುತ್ತೂರು ಉಪವಿಭಾಗದ ಸರಹದ್ದಿನಲ್ಲಿಯೇ ಇಲ್ವಾ? ಅದರಲ್ಲೂ ಸುಳ್ಯ ತಹಶೀಲ್ದಾರ್ ಒಬ್ಬ ಹೆಣ್ಣು ಮಗಳಾಗಿ ತನ್ನ ಎದುರೇ ಇಂತಹ ಕಾನೂನುಬಾಹಿರ ಚಟುವಟಿಕೆ ನಡೆದರೆ ಸುಮ್ಮನೆ ಕುಂತಿರುವುದು ವಿಪರ್ಯಾಸವೇ ಸರಿ. ಈ ಕೂಡಲೇ ಪುತ್ತೂರು ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಿಂಗಲ್ ರೋಡ್ ಪ್ರಯಾಣಿಕರ ಬೇಡಿಕೆ.
 ..............................................
ಮಾನದಂಡ
ಕವನ ವಾಚನವಿತ್ತು ಒಂದು ಕಡೆ. ಹೋದರು ಹಲವರು ವೇಷಭೂಷಣದ ಜೊತೆ.ವೇದಿಕೆಗೆ ಮಾನದಂಡ ಅಲ್ಲ ವ್ಯಕ್ತಿಯ ವೇಷಭೂಷಣಗಳೆಂದರು ಹಿರಿಯರಲ್ಲಿ ಕಿರಿಯರಿಗೆ.
ಮಾತಿತ್ತು ಇನ್ನೊಂದೆಡೆ.ಸಾಮಾನ್ಯರಂತೆ  ಬಂದರು 
ವೇದಿಕೆಗೆ.ಅಧ್ಯಕ್ಷರಂದರು ವೇಷ ಭೂಷಣವೇ ಪ್ರಾಮುಖ್ಯ ಎಮಗೆ ಯೋಗ್ಯತೆ ನೋಡುವುದೆ ಅದರಲ್ಲೆ ಅಂದರು ಕಿರಿಯರು ಹಿರಿಯರಿಗೆ.
-ಶಾಂತಾ ಕುಂಟಿನಿ






..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.













 

               


    "ನಾಳೆ ಬೆಳಿಗ್ಗೆ ಕೆಲಸ ಇದೆ ಎಂದು ಮೂಡುಬಿದಿರೆ ಮಚಲಿ ಹೋಟೆಲ್ ಬಳಿ ನಿಲ್ಲಿಸಿದ್ದ ಎರಡು ಹಿಟಾಚಿಗಳ ಆಪರೇಟರ್ಸ್ ಬೆಳಿಗ್ಗೆ ಬಂದು ಹಿಟಾಚಿ ಸ್ಟಾರ್ಟ್ ಮಾಡಿದರೆ ಅದು ಎಲ್ಲಿ ಸ್ಟಾರ್ಟ್ ಆಗುತ್ತೆ. ರಾತ್ರಿಯೇ ಕಳ್ಳ ಮತ್ತು ಕಾಕ ಬಂದು ಎರಡೂ ಹಿಟಾಚಿಗಳ ನಾಲ್ಕು ಬೆಟ್ರಿಗಳಿಗೆ ಕೈ ಕೊಟ್ಟಿದ್ದರು. ಓ... ಎಂದು ಬೊಬ್ಬೆ ಹೊಡೆದ ಹಿಟಾಚಿ ಮಾಲೀಕರ ಸಂಘ ಮೂಡುಬಿದಿರೆ ಸರ್ಕಲ್ ಸಂದೇಶ್ Inspector ಗೆ ದೂರು ಕೊಟ್ಟು ಬೆಟ್ರಿ ಕಂಡುಗಳನ್ನು ಹುಡುಕಿ ಬೆಂಡ್ ತೆಗೆಯುವಂತೆ ಕೇಳಿ ಕೊಂಡಿತ್ತು. ಅದರಂತೆ ಕಾರ್ಯಾಚರಣೆಗೆ ಇಳಿದ ಸಂದೇಶ್ Inspector ಇಬ್ಬರು ಬೆಟ್ರಿ ಕಂಡುಗಳನ್ನು ಹುಡುಕಿ ಹಿಡಿದು ತಂದು ಬೆಂಡ್ ತೆಗೆದು ಮಾವನ ಮನೆಗೆ ಕಳಿಸಿದ್ದಾರೆ.


ಅಳಪೆ ಗ್ರಾಮದ ಮಂಜಳಿಕೆ ಶೇಖರಣ್ಣನ ಮಗ ಧನುಷ್ ಸನಿಲ್ ಮತ್ತು ವ, ಫೈಝಲ್ ನಗರ ಅಬ್ಬಾಸಿಚ್ಚನ ಮಗ ಅಜ್ಮಲ್ ಎಂಬ ಇಬ್ಬರು ಬೆಟ್ರಿ ಕಂಡುಲು ಆಟಿ ಕೂರಲು ಇದೀಗ ಜೈಲಿಗೆ ಹೋದವರು. ಇವರು ಒಂಥರಾ ಹೈಟೆಕ್ ಕಳ್ಳರು.ಇವರು ಕದಿಯಲು ಕಾರಲ್ಲಿ ಬರುವವರು ಮಾರಾಯ್ರೆ. ಡಸ್ಟನ್ ಕಾರಲ್ಲಿ ಇಡೀ ನೈಟ್ ತಿರುಗಾಡಿ ಕೈಗೆ ಸಿಕ್ಕಿದ್ದನ್ನು ಕದಿಯುವುದೇ ಇವರ ಕಾಯಕ. ಇದೀಗ ಒಳಗೆ ಹೋಗಿದ್ದಾರೆ. ಇವರ ಗ್ಯಾಂಗಿನಲ್ಲಿ  ಇನ್ನೂ ಅನೇಕ ಅಜೀವ ಸದಸ್ಯರು, ವಾರ್ಷಿಕ ಚಂದಾದಾರರು ಇದ್ದು ಪೋಲಿಸರು ಅವರನ್ನೂ ಹಿಡಿಯಲು ಉರ್ಲು ಇಟ್ಟಿದ್ದಾರೆ. ಮಂಗಳೂರು ಸಿಟಿ ಪೋಲಿಸ್ ಕಮೀಷನರ್ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೋಯಲ್ IPS (ಕಾ.ಸು) ರವಿಶಂಕರ್ ಡಿಸಿಪಿ, ಶ್ರೀಕಾಂತ್ ಎಸಿಪಿ ಇವರ ನಿರ್ದೇಶನದಲ್ಲಿ ಬೆಟ್ರಿ ಕಂಡುಗಳನ್ನು ಒಳಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ವಿಷಯ ಎಲ್ಲಾ ಕಮೀಷನರ್ ತನಕ ಹೋಗುವ ಚಾನ್ಸೇ ಇಲ್ಲ. Inspector ಸಂದೇಶ್ ಗೆ ಇವರ ಮೇಲೆ ಅದೇನೋ ಸಂದೇಹ ಬಂದು ಇವರ ಬಾಯಿಗೆ ಕೋಲು ಹಾಕಿದಾಗ ಬೆಟ್ರಿ ವಿಷಯ ಹೊರಗೆ ಬಂದಿದೆ. ಅಷ್ಟೇ.



 ..............................................
ಐನೆಕಿದು ಕೋಳಿ ಫಾರಂ ಮಾಲೀಕನ ಮೇಲೆ FIR:
ಐನೆಕಿದು ಕೋಳಿ ಫಾರಂ ಮಾಲೀಕನೊಬ್ಬನ ಮೇಲೆ ಪೆತ್ತದ ಕೇಸಿನಲ್ಲಿ FIR ಹಾಕಲಾಗಿದೆ. ಲೋಕಲ್ಸ್  ಹೇಳುವ ಪ್ರಕಾರ ಕೋಳಿ ಫಾರಂನಲ್ಲಿ ಪೆತ್ತಕ್ಕೆ ಸಂಬಂಧ ಪಟ್ಟ ಕೆಲವು ಕ್ರಿಯೆಗಳನ್ನು ನಡೆಸಲಾಗುತ್ತಿತ್ತು. ಈ ಬಗ್ಗೆ ಊರವರಿಗೆ ಅಸಮಾಧಾನ ಇದ್ದು ಕೋಳಿ ಫಾರಂ ಮಾಲೀಕನ ರಾಹು ಕಾಲಕ್ಕೆ ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ಓ ಮೊನ್ನೆ ಕರ್ಣಣ್ಣನ ಒಂದು ಪೆತ್ತ ಗುಡ್ಡೆಗೆ ಹೋದದ್ದು ಬರಲೇ ಇಲ್ಲ. ಪಿಲಿ ,ಸಿಂಹ,ಚಿರ್ತೆ ಐನೆಕಿದುನಲ್ಲಿ ಇಲ್ಲ. ಹಾಗಾದರೆ ಈಗ ಬರ್ತೆನೆ ಎಂದು ಗುಡ್ಡೆಗೆ ಹೋದ ಪೆತ್ತ ಎಲ್ಲಿ ಹೋಯ್ತು ಎಂದು ವಿಚಾರಿಸಲಾಗಿ ಇದರ ಹಿಂದೆ ಕೋಳಿ ಫಾರಂ ಮಾಲೀಕನ ಕೈಚಳಕ ಇದೆ ಎಂದು ಗೊತ್ತಾಗಿದೆ. ನಂತರದ ಬೆಳವಣಿಗೆಯಲ್ಲಿ ಕೋಳಿ ಫಾರಂ ಮಾಲೀಕನ ಮೇಲೆ ಪೋಲಿಸ್ ಕಂಪ್ಲೈಂಟ್ ಆಗಿದ್ದು ಪೋಲಿಸರು ರಗಳೆ ಬೇಡ ಎಂದು FIR ಹಾಕಿ ಕೈತೊಳೆದು ಕೊಂಡಿದ್ದಾರೆ. ಪೆತ್ತ ತಂದು ಮೂರು ದಿನಗಳ ಒಳಗೆ ಸರೆಂಡರ್ ಮಾಡಿಸ ಬೇಕು ಇಲ್ಲದಿದ್ದರೆ ಟಿಕೆಟ್ ಟೂ ಮಾವನ ಮನೆ ಎಂದು ಪೋಲಿಸರು ವಾರ್ನಿಂಗ್ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ನಡೆದ ನಂತರ ಪೆತ್ತ ಅಂಬಾ ಎಂದು ಸರೆಂಡರ್ ಆಗಿದ್ದು ನಾಟಕ ಶುಭಾಂತ್ಯ ಕಂಡಿದೆ ಎಂದು ತಿಳಿದುಬಂದಿದೆ. ಇಲ್ಲದಿದ್ದರೆ ಈ‌ ಕೋಳಿ ಫಾರಂ ಜನಕ್ಕೆ ಕಾಕ ಕಾಂಟೇಕ್ಟ್ಸ್  ಯಾಕೆ ಎಂಬುದು ಊರಿನವರ ಪ್ರಶ್ನೆ.
 ..............................................
ಹಿರಿಯ ಪತ್ರಕರ್ತ ಸುಂದರ ಕಬಕರವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ನಿಂದ 2024ರ ವಾರ್ಷಿಕ ಪ್ರಶಸ್ತಿ ಗೌರವ

ಹಿರಿಯ ಪತ್ರಕರ್ತರಾದ ಸನ್ಮಾನ್ಯ ಸುಂದರ.ಕೆ( ಕಬಕ ) ಇವರು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ 28 ವರ್ಷಗಳಿಂದ ನಿರಂತರವಾಗಿ  ಸೇವೆ ಸಲ್ಲಿಸುತ್ತಾ ಬಂದಿದ್ದು. ಸುಂದರ. ‌ಕೆ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದವರು. ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿ ಬದುಕು ಆರಂಭಿಸಿದ ಇವರು ಮೊದಲಿಗೆ ಉತ್ತರ ಕರ್ನಾಟಕ ದಿನಪತ್ರಿಕೆಯಲ್ಲಿ ರಾಜಕೀಯ ವರದಿಗಾರರಾಗಿ ಕಾರ್ಯನಿರ್ವಹಿಸಿ ನಂತರ ಸುಪ್ರಭಾತ ಟಿವಿ, ಜನವಾಹಿನಿ ದಿನಪತ್ರಿಕೆ, ಉದಯ ಟಿವಿ ಯಲ್ಲಿ  ರಾಜಕೀಯ ವರದಿಗಾರರಾಗಿ, ಹೈದರಾಬಾದ್ ಈ ಟಿವಿಯಲ್ಲಿ ಹಿರಿಯ ಬುಲೆಟಿನ್  ಪ್ರೊಡ್ಯೂಸರ್ , ಝಿ ಟಿವಿ ಕನ್ನಡದಲ್ಲಿ  ಚೀಫ್ ಬುಲೆಟಿನ್ ಪ್ರೊಡ್ಸೂಸರ್ , ಸುವರ್ಣ ಸುದ್ದಿ ವಾಹಿನಿಯಲ್ಲಿ ನ್ಯೂಸ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದಾರೆ ನಂತರ ಜನಶ್ರೀ ಕನ್ನಡ ವಾಹಿನಿಯಲ್ಲಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ  ಕಾರ್ಯ ನಿರ್ವಹಿಸಿ, ಹಲವು ವರ್ಷಗಳಿಂದ ಹವ್ಯಾಸಿ ಪತ್ರಕರ್ತರಾಗಿ ರಾಜಕೀಯ, ಸಾಮಾಜಿಕ ,ಸಾಂಸ್ಕೃತಿಕ ಮತ್ತು ಸಮಾಜಮುಖಿ ಬರಹಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ಪತ್ರಿಕೋದ್ಯಮದ ಅನುಭವವನ್ನ  ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.






..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.













 

              



    "ಮೀನಾ ಮೇಲೆ ನಮ್ಮ ಮೈನಾ, ಮೈನಾ ಮೇಲೆ ನಮ್ಮ ಮೀನಾ" ಅಂತ ಬೆಳ್ಳಾರೆ ಜನ ರಾಗವಾಗಿ ಮೊನ್ನೆಯಿಂದ ಗುಣು ಗುಣು ಗುಣುಗುತ್ತಿದ್ದಾರೆ. ಯಾಕೆ ಬೆಳ್ಳಾರೆ ಜನ ಭಕ್ತಿಗೀತೆ ಬಿಟ್ಟು ವಿಚಿತ್ರ ಗೀತೆ ಹಾಡುತ್ತಿದ್ದಾರೆ ಎಂದು ವಿಚಾರಿಸಲಾಗಿ ಬೆಳ್ಳಾರೆ ಆಸುಪಾಸಿನ ಪಂಪಿನಿಂದ ಆಯಿಲ್ ಕರೆಂಚಿದ ವಾಸನೆ ಬಂದಿದೆ ಮಾರಾಯ್ರೆ. ಪರಬ್ಬನಿಗೆ ಪೊಪಿಕಾಲ ಅಂತ ಬೆಳ್ಳಾರೆ ತುಂಬಾ ದಂತಕಥೆ ಆಗಿರುವ ಕತೆಯೊಂದನ್ನು ಜನರೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಬೆಳ್ಳಾರೆಯ ಕೆಲವು ದೊಡ್ಡವರಿಗೆ ಕುದುರೆ ಸೀಕ್ ಎಂತ ಮಾರಾಯ್ರೆ. ಹಾವಿಗೆ ವಯಸ್ಸಾದರೂ ವಿಷ ಮಾತ್ರ ಬೆಚ್ಚ ಬೆಚ್ಚ.


ಇದು ಬೆಳ್ಳಾರೆ ಸಮೀಪದ ಪಂಪಿನಲ್ಲಿ ನಡೆದ ಒಂದು ರಿಯಲ್ ದಂತಕಥೆ. ಅವಳು ಒಬ್ಬ ಜನಪ್ರತಿನಿಧಿ. TN ಆಂಟಿ. ಪಡ್ಡೆಗಳು ಬಾಯಿ ಚಪ್ಪರಿಸುವಷ್ಟು ಪುಡ್ಕೆನ ಪುಡ್ಕೆನ ಇದ್ದಾಳೆ ಅಂತ ಅವರ ವಾದ. ಈ TN ಆಂಟಿ ಪಂಪೊಂದರ ಮ್ಯಾನೇಜರ್. ಪಂಪಿನ ಧಣಿ ದೊಡ್ಡವನು ಮತ್ತು ಅರುವತ್ತೈದರ ಪ್ಲೇಬಾಯ್. ಹೀಗಿರುತ್ತ ಲಾಗಿ ಮಾರಿ ಕಣ್ಣು ಹೋರಿ ಮೇಲೆ ಬಿದ್ದಿದೆ. ಅಷ್ಟೇ! ಮುಂದಿನ ಕತೆ ನಿಮಗೆ ಗೊತ್ತೇ ಇದೆ. ಹೊರಿ ಮೊನ್ನೆ ನಾಲ್ಕು ಗಂಟೆ ಹದಿನೈದು ನಿಮಿಷಕ್ಕೆ ಪಂಪಿಗೆ ಬಂದಿದೆ. ನೀವೆಲ್ಲ ಚಾ ಕುಡಿಯಲು ಹೋಗಿ ಎಂದು ಪಂಪಿನಲ್ಲಿದ್ದ ನಾಲ್ಕೂ ಹುಡುಗರನ್ನು ಧಣಿ ಚಾ ಕುಡಿಯಲು ಕಳಿಸಿದ್ದಾರೆ. ಮತ್ತೆ ಪಂಪಿನಲ್ಲಿ ಉಳಿದದ್ದು ಮೀನಾ ಮತ್ತೆ ಮೈನಾ. ಅಷ್ಟೇ! ಮುಂದಿನ ಕತೆಗೆ ಎ ಸರ್ಟಿಫಿಕೇಟ್ ಇದೆ.


 ಹಾಗೆ ಹುಡುಗರು ಅಂಚಿ ಹೋದ ಕೂಡಲೇ ಇಂಚಿ ಕಟ್ಟ ಬಿಚ್ಚಿಸುವ ಕೆಲಸ ಮೊದಲ್ಗೊಂಡು, ಸರಿಸುವ ಕೆಲಸ ಮುಗಿದು, ಹುಡುಕಿ, ಟಿಶುಂ ಟಿಶುಂ ಆಗುತ್ತಿರುವಾಗಲೇ ಚಾ ಕುಡಿಯಲು ಹೋದವರಲ್ಲಿ ಹುಡುಗನೊಬ್ಬ ಪಂಪಿಗೆ ಯಾಕೋ ವಾಪಾಸ್ ಬಂದಿದ್ದಾನೆ.ಬಂದು ನೋಡಿದರೆ ಬಿಡ್ ಜಾಮ್ ಆಗಿದೆ. ಹಾಗೆ ಹೆದರಿಕೊಂಡು ಓಡಿ ಹೋದವನು ಅದು ಯಾರಲ್ಲಿ ಎಲ್ಲಾ ಕತೆ ಹೇಳಿದನೋ ಗೊತ್ತಿಲ್ಲ. ಆದರೆ ಬೆಳ್ಳಾರೆ ತುಂಬಾ ಕತೆ ಬಾಯಿ ವೈರಲ್ ಆಗಿದೆ. ಕತೆ ನಡೆದಿರಬಹುದು ಯಾಕೆಂದರೆ ಬೆಳ್ಳಾರೆಯಲ್ಲಿ ಅವರಿಬ್ಬರ ಜಾತಕ ಸರಿ ಇಲ್ಲ.





..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.













 

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget