ಮೂಡುಬಿದಿರೆ! ಬೆಟ್ರಿ ಕಂಡುಲು ಮಾವನ ಮನೆಗೆ!

               


    "ನಾಳೆ ಬೆಳಿಗ್ಗೆ ಕೆಲಸ ಇದೆ ಎಂದು ಮೂಡುಬಿದಿರೆ ಮಚಲಿ ಹೋಟೆಲ್ ಬಳಿ ನಿಲ್ಲಿಸಿದ್ದ ಎರಡು ಹಿಟಾಚಿಗಳ ಆಪರೇಟರ್ಸ್ ಬೆಳಿಗ್ಗೆ ಬಂದು ಹಿಟಾಚಿ ಸ್ಟಾರ್ಟ್ ಮಾಡಿದರೆ ಅದು ಎಲ್ಲಿ ಸ್ಟಾರ್ಟ್ ಆಗುತ್ತೆ. ರಾತ್ರಿಯೇ ಕಳ್ಳ ಮತ್ತು ಕಾಕ ಬಂದು ಎರಡೂ ಹಿಟಾಚಿಗಳ ನಾಲ್ಕು ಬೆಟ್ರಿಗಳಿಗೆ ಕೈ ಕೊಟ್ಟಿದ್ದರು. ಓ... ಎಂದು ಬೊಬ್ಬೆ ಹೊಡೆದ ಹಿಟಾಚಿ ಮಾಲೀಕರ ಸಂಘ ಮೂಡುಬಿದಿರೆ ಸರ್ಕಲ್ ಸಂದೇಶ್ Inspector ಗೆ ದೂರು ಕೊಟ್ಟು ಬೆಟ್ರಿ ಕಂಡುಗಳನ್ನು ಹುಡುಕಿ ಬೆಂಡ್ ತೆಗೆಯುವಂತೆ ಕೇಳಿ ಕೊಂಡಿತ್ತು. ಅದರಂತೆ ಕಾರ್ಯಾಚರಣೆಗೆ ಇಳಿದ ಸಂದೇಶ್ Inspector ಇಬ್ಬರು ಬೆಟ್ರಿ ಕಂಡುಗಳನ್ನು ಹುಡುಕಿ ಹಿಡಿದು ತಂದು ಬೆಂಡ್ ತೆಗೆದು ಮಾವನ ಮನೆಗೆ ಕಳಿಸಿದ್ದಾರೆ.


ಅಳಪೆ ಗ್ರಾಮದ ಮಂಜಳಿಕೆ ಶೇಖರಣ್ಣನ ಮಗ ಧನುಷ್ ಸನಿಲ್ ಮತ್ತು ವ, ಫೈಝಲ್ ನಗರ ಅಬ್ಬಾಸಿಚ್ಚನ ಮಗ ಅಜ್ಮಲ್ ಎಂಬ ಇಬ್ಬರು ಬೆಟ್ರಿ ಕಂಡುಲು ಆಟಿ ಕೂರಲು ಇದೀಗ ಜೈಲಿಗೆ ಹೋದವರು. ಇವರು ಒಂಥರಾ ಹೈಟೆಕ್ ಕಳ್ಳರು.ಇವರು ಕದಿಯಲು ಕಾರಲ್ಲಿ ಬರುವವರು ಮಾರಾಯ್ರೆ. ಡಸ್ಟನ್ ಕಾರಲ್ಲಿ ಇಡೀ ನೈಟ್ ತಿರುಗಾಡಿ ಕೈಗೆ ಸಿಕ್ಕಿದ್ದನ್ನು ಕದಿಯುವುದೇ ಇವರ ಕಾಯಕ. ಇದೀಗ ಒಳಗೆ ಹೋಗಿದ್ದಾರೆ. ಇವರ ಗ್ಯಾಂಗಿನಲ್ಲಿ  ಇನ್ನೂ ಅನೇಕ ಅಜೀವ ಸದಸ್ಯರು, ವಾರ್ಷಿಕ ಚಂದಾದಾರರು ಇದ್ದು ಪೋಲಿಸರು ಅವರನ್ನೂ ಹಿಡಿಯಲು ಉರ್ಲು ಇಟ್ಟಿದ್ದಾರೆ. ಮಂಗಳೂರು ಸಿಟಿ ಪೋಲಿಸ್ ಕಮೀಷನರ್ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೋಯಲ್ IPS (ಕಾ.ಸು) ರವಿಶಂಕರ್ ಡಿಸಿಪಿ, ಶ್ರೀಕಾಂತ್ ಎಸಿಪಿ ಇವರ ನಿರ್ದೇಶನದಲ್ಲಿ ಬೆಟ್ರಿ ಕಂಡುಗಳನ್ನು ಒಳಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ವಿಷಯ ಎಲ್ಲಾ ಕಮೀಷನರ್ ತನಕ ಹೋಗುವ ಚಾನ್ಸೇ ಇಲ್ಲ. Inspector ಸಂದೇಶ್ ಗೆ ಇವರ ಮೇಲೆ ಅದೇನೋ ಸಂದೇಹ ಬಂದು ಇವರ ಬಾಯಿಗೆ ಕೋಲು ಹಾಕಿದಾಗ ಬೆಟ್ರಿ ವಿಷಯ ಹೊರಗೆ ಬಂದಿದೆ. ಅಷ್ಟೇ.



 ..............................................
ಐನೆಕಿದು ಕೋಳಿ ಫಾರಂ ಮಾಲೀಕನ ಮೇಲೆ FIR:
ಐನೆಕಿದು ಕೋಳಿ ಫಾರಂ ಮಾಲೀಕನೊಬ್ಬನ ಮೇಲೆ ಪೆತ್ತದ ಕೇಸಿನಲ್ಲಿ FIR ಹಾಕಲಾಗಿದೆ. ಲೋಕಲ್ಸ್  ಹೇಳುವ ಪ್ರಕಾರ ಕೋಳಿ ಫಾರಂನಲ್ಲಿ ಪೆತ್ತಕ್ಕೆ ಸಂಬಂಧ ಪಟ್ಟ ಕೆಲವು ಕ್ರಿಯೆಗಳನ್ನು ನಡೆಸಲಾಗುತ್ತಿತ್ತು. ಈ ಬಗ್ಗೆ ಊರವರಿಗೆ ಅಸಮಾಧಾನ ಇದ್ದು ಕೋಳಿ ಫಾರಂ ಮಾಲೀಕನ ರಾಹು ಕಾಲಕ್ಕೆ ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ಓ ಮೊನ್ನೆ ಕರ್ಣಣ್ಣನ ಒಂದು ಪೆತ್ತ ಗುಡ್ಡೆಗೆ ಹೋದದ್ದು ಬರಲೇ ಇಲ್ಲ. ಪಿಲಿ ,ಸಿಂಹ,ಚಿರ್ತೆ ಐನೆಕಿದುನಲ್ಲಿ ಇಲ್ಲ. ಹಾಗಾದರೆ ಈಗ ಬರ್ತೆನೆ ಎಂದು ಗುಡ್ಡೆಗೆ ಹೋದ ಪೆತ್ತ ಎಲ್ಲಿ ಹೋಯ್ತು ಎಂದು ವಿಚಾರಿಸಲಾಗಿ ಇದರ ಹಿಂದೆ ಕೋಳಿ ಫಾರಂ ಮಾಲೀಕನ ಕೈಚಳಕ ಇದೆ ಎಂದು ಗೊತ್ತಾಗಿದೆ. ನಂತರದ ಬೆಳವಣಿಗೆಯಲ್ಲಿ ಕೋಳಿ ಫಾರಂ ಮಾಲೀಕನ ಮೇಲೆ ಪೋಲಿಸ್ ಕಂಪ್ಲೈಂಟ್ ಆಗಿದ್ದು ಪೋಲಿಸರು ರಗಳೆ ಬೇಡ ಎಂದು FIR ಹಾಕಿ ಕೈತೊಳೆದು ಕೊಂಡಿದ್ದಾರೆ. ಪೆತ್ತ ತಂದು ಮೂರು ದಿನಗಳ ಒಳಗೆ ಸರೆಂಡರ್ ಮಾಡಿಸ ಬೇಕು ಇಲ್ಲದಿದ್ದರೆ ಟಿಕೆಟ್ ಟೂ ಮಾವನ ಮನೆ ಎಂದು ಪೋಲಿಸರು ವಾರ್ನಿಂಗ್ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ನಡೆದ ನಂತರ ಪೆತ್ತ ಅಂಬಾ ಎಂದು ಸರೆಂಡರ್ ಆಗಿದ್ದು ನಾಟಕ ಶುಭಾಂತ್ಯ ಕಂಡಿದೆ ಎಂದು ತಿಳಿದುಬಂದಿದೆ. ಇಲ್ಲದಿದ್ದರೆ ಈ‌ ಕೋಳಿ ಫಾರಂ ಜನಕ್ಕೆ ಕಾಕ ಕಾಂಟೇಕ್ಟ್ಸ್  ಯಾಕೆ ಎಂಬುದು ಊರಿನವರ ಪ್ರಶ್ನೆ.
 ..............................................
ಹಿರಿಯ ಪತ್ರಕರ್ತ ಸುಂದರ ಕಬಕರವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ನಿಂದ 2024ರ ವಾರ್ಷಿಕ ಪ್ರಶಸ್ತಿ ಗೌರವ

ಹಿರಿಯ ಪತ್ರಕರ್ತರಾದ ಸನ್ಮಾನ್ಯ ಸುಂದರ.ಕೆ( ಕಬಕ ) ಇವರು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ 28 ವರ್ಷಗಳಿಂದ ನಿರಂತರವಾಗಿ  ಸೇವೆ ಸಲ್ಲಿಸುತ್ತಾ ಬಂದಿದ್ದು. ಸುಂದರ. ‌ಕೆ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದವರು. ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿ ಬದುಕು ಆರಂಭಿಸಿದ ಇವರು ಮೊದಲಿಗೆ ಉತ್ತರ ಕರ್ನಾಟಕ ದಿನಪತ್ರಿಕೆಯಲ್ಲಿ ರಾಜಕೀಯ ವರದಿಗಾರರಾಗಿ ಕಾರ್ಯನಿರ್ವಹಿಸಿ ನಂತರ ಸುಪ್ರಭಾತ ಟಿವಿ, ಜನವಾಹಿನಿ ದಿನಪತ್ರಿಕೆ, ಉದಯ ಟಿವಿ ಯಲ್ಲಿ  ರಾಜಕೀಯ ವರದಿಗಾರರಾಗಿ, ಹೈದರಾಬಾದ್ ಈ ಟಿವಿಯಲ್ಲಿ ಹಿರಿಯ ಬುಲೆಟಿನ್  ಪ್ರೊಡ್ಯೂಸರ್ , ಝಿ ಟಿವಿ ಕನ್ನಡದಲ್ಲಿ  ಚೀಫ್ ಬುಲೆಟಿನ್ ಪ್ರೊಡ್ಸೂಸರ್ , ಸುವರ್ಣ ಸುದ್ದಿ ವಾಹಿನಿಯಲ್ಲಿ ನ್ಯೂಸ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದಾರೆ ನಂತರ ಜನಶ್ರೀ ಕನ್ನಡ ವಾಹಿನಿಯಲ್ಲಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ  ಕಾರ್ಯ ನಿರ್ವಹಿಸಿ, ಹಲವು ವರ್ಷಗಳಿಂದ ಹವ್ಯಾಸಿ ಪತ್ರಕರ್ತರಾಗಿ ರಾಜಕೀಯ, ಸಾಮಾಜಿಕ ,ಸಾಂಸ್ಕೃತಿಕ ಮತ್ತು ಸಮಾಜಮುಖಿ ಬರಹಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ಪತ್ರಿಕೋದ್ಯಮದ ಅನುಭವವನ್ನ  ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.






..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.













 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget