ಕೆಲವು ಸಮಯಗಳ ಹಿಂದೆ ಕಡಬ ಸಮೀಪ ಗಾಂಜಾ ವ್ಯಸನಿಯೊಬ್ಬನಿಂದ ಕೊಲೆಯಾಗಿ ಹೋದ ಸಂದೀಪ್ ಕೊಲೆಗಾರನ ಕ್ರಿಮಿನಲ್ ಇತಿಹಾಸದ ಬಗ್ಗೆ ಒಂದೊಂದೇ ದಂತಕತೆಗಳು ಬಿಲ ಬಿಡುತ್ತಿವೆ. ರಖಂ ಮತ್ತು ಚಿಲ್ಲರೆ ಗಾಂಜಾ ವ್ಯವಹಾರ ಮಾಡುತ್ತಿದ್ದ ಪ್ರತೀಕ್ ಎಂಬ ಕೊಲೆಗಾರ ಖುದ್ದು ಗಾಂಜಾ ಅಡಿಕ್ಟ್. ಗಾಂಜಾ ಎಳೆದೂ ಎಳೆದೂ ಈತ ಮಾಡಿದ ಕ್ರಿಮಿನಲ್ ಚಟುವಟಿಕೆಗಳು ಕೊನೆಗೆ ದೋಸ್ತನನ್ನೇ ಕೊಲೆ ಮಾಡುವಲ್ಲಿ ತನಕ ಬೆಳೆದು ಇದೀಗ ಜೈಲು ಪಾಲಾಗಿದ್ದಾನೆ. ಅಮಲು ಇಳಿದರೆ ಈ ಸರ್ತಿ.
ಹಾಗೆಂದು ಬಹಳ ಹಿಂದೆಯೇ ಈ ಪ್ರತೀಕ್ ನೈಂಟಿ ಫೋರ್ ಕ್ಯಾರೆಟ್ ಕ್ರಿಮಿನಲ್. ಬಹಳ ಹಿಂದೆ ತನ್ನದೇ ಹತ್ತಿರದ ಮನೆಯ ಹುಡುಗಿಯ ಕೈಗೆ ಕೈ ಹಾಕಿ ಹಿಡಿದೆಳೆದು "ಬರ್ಪನ" ಎಂದು ಕೇಳಿ ಗಲಾಟೆ ಆಗಿತ್ತು. ಊರಿನವರು ಆಗಲೇ ಪ್ರತೀಕನ ಭೂತ ಬಿಡಿಸುತ್ತಿದ್ದರೆ ಇವತ್ತು ಸಂದೀಪ್ ಬದುಕಿ ಉಳಿಯುತ್ತಿದ್ದ. ಸೈಯ್ಯಡ್ ಎಂದು ಊರಿನವರು ಆವತ್ತು ಬಿಟ್ಟಿದ್ದರು. ಈ ಬಗ್ಗೆ ಕಡೇ ಪಕ್ಷ ಪೋಲಿಸ್ ಕಂಪ್ಲೈಂಟ್ ಕೂಡ ಆಗಲಿಲ್ಲ. "ದಾಲ ಆಪುಜಿ" ಎಂದು ಹುಡುಗನಿಗೆ ಧೈರ್ಯ ಬಂದು ಬಿಟ್ಟಿತು. ಆಮೇಲೆ ಕೂಡ ಇವನು ಇವನ ಪಿಕಪ್ ವಾಹನದಲ್ಲಿ ನೆಟ್ಟಣ ರೈಲ್ವೇ ಸ್ಟೇಶನ್ ಬಳಿ ಮತ್ತೊಬ್ಬಳು ಹುಡುಗಿಯ ಕೈಗೆ ಕೈ ಹಾಕಿ "ಬರ್ಪನ" ಎಂದು ಕೇಳಿ ಗಲಾಟೆ ಆಗಿತ್ತು. ಆಗ ಕೂಡ ಊರವರು ಮತ್ತು ಹುಡುಗಿ ಕಡೆಯವರು ಸೈಯ್ಯಡ್ ಎಂದು ಬಿಟ್ಟಿದ್ದರು. ದಾಲ ಆಪುಜಿ ಎಂದು ಪ್ರತೀಕ್ ಮತ್ತೇ ಮತ್ತೇ ರೀಚಾರ್ಜ್ ಆಗಿ ಬಿಟ್ಟ. ಆಮೇಲೆ ಇದೇ ಪ್ರತೀಕ್ ಗಾಂಜಾ ನಶೆಯಲ್ಲಿ ಪುತ್ತೂರಿನಿಂದ ಯಾರದೋ TATA ಏಸ್ ಪಾರ್ಸೆಲ್ ಗಾಡಿಯೊಂದನ್ನು ಎಂಕಿಪ್ಪಡ್ ಎಂದು ಕಡಬ ತನಕ ತಂದಿದ್ದು ಪುಣ್ಯಕ್ಕೆ ಗಾಡಿಯಲ್ಲಿ GPS ಇದ್ದ ಕಾರಣ ಕಡಬದಲ್ಲಿ ಪೋಲಿಸರು ಗಾಡಿ ಮತ್ತು ಪ್ರತೀಕ್ ನನ್ನು ಹಿಡಿದು ಬೆಂಡ್ ತೆಗೆದಿದ್ದರು. ಆದರೂ ಪ್ರತೀಕನಿಗೆ ದೇವರು ಒಳ್ಳೆ ಬುದ್ದಿ ಕೊಡಲೇ ಇಲ್ಲ.
ಹಾಗೆಂದು ಈ ಗಾಂಜಾ ಪ್ರತೀಕ್ ಗೆ ಹತ್ತು ಹಲವು ವೈವಾಟ್ ಇದೆ. ಹಿಂದೆ ಇವನೊಮ್ಮೆ ನೆಟ್ಟಣ ರೈಲ್ವೇ ಸ್ಟೇಶನಲ್ಲಿ ರೈಲಿನ ಸಾಮಾನು ಕದ್ದು ಸಿಕ್ಕಿ ಬಿದ್ದಿದ್ದ. ರೈಲಿನ ಕಬ್ಬಿಣ ಸಾಗಿಸಿ ದುಡ್ಡು ಮಾಡುವ ವೈವಾಟಲ್ಲಿ ಇವನಿದ್ದ. ಆದರೆ ಸಿಕ್ಕಿ ಬಿದ್ದು ರೈಲಿನವರಿಗೆ ದುಡ್ಡು ಕೊಟ್ಟು, ಮೆಂಟಲ್ ಸರ್ಟಿಫಿಕೇಟ್ ಮಾಡಿಸಿ ಕೇಸ್ ಮುಚ್ಚಿ ಹಾಕಲಾಗಿತ್ತು. ಅವತ್ತಿನಿಂದ ಇವನು ಫುಲ್ ಟೈಂ ಕ್ರಿಮಿನಲ್ ಮೆಂಟಲ್ ಆಗಿದ್ದು ಕದ್ದು ಮರ ಸಾಗಾಟ, ಮರಳು ಸಾಗಾಟಕ್ಕೂ ಕೈ ಹಾಕಿದ್ದ. ಆವತ್ತೊಮ್ಮೆ ನೈಟ್ ಒಂದು ಕೊರಗ ಕಾಲೋನಿಯ ಮೈನ್ ಲೈನ್ ಫ್ಯೂಸ್ ತೆಗೆದು ಕಾಲೋನಿಯೊಳಗೆ ಏನು ಮಾಡಿದ್ದ ಎಂಬುದು ಇಡೀ ಊರಿಗೇ ಗೊತ್ತಿರುವ ವಿಷಯ. ಯಾವುದೇ ಕೇಸಿಗೂ ಪೋಲಿಸ್ ಎಂಟ್ರಿ ಆದರೆ ಮೆಂಟಲ್ ಸರ್ಟಿಫಿಕೇಟ್ ರೆಡಿ. ಇನ್ನು ಪ್ರತೀಕ್ ಅಣ್ಣನ ಸಾವಿನ ಸುತ್ತವೂ ಸಾರ್ವಜನಿಕರು ಸಂಶಯದ ಹುತ್ತ ಕಟ್ಟಿದ್ದು ಅಣ್ಣ ಸಾಯುವ ದಿನ ಸಹೋದರರೊಳಗೆ ಬಿಯರ್ ಬಾಟ್ಲಿ ಫೈಟಿಂಗ್ ನಡೆದಿತ್ತು ಎಂದು ತಿಳಿದುಬಂದಿದೆ. ಅಣ್ಣನಿಗೆ ಗಾಡಿಯಲ್ಲಿ ಡಿಶುಂ ಮಾಡಲು ನೋಡಿ ನಂತರ ಅವನ ಎದೆಗೆ ಗುದ್ದಲಾಗಿತ್ತು. ಆ ದಿನವೇ ಅಣ್ಣ ಪಡ್ಚ ಆಗಿದ್ದು ಆವತ್ತೇ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದರು.
ಇನ್ನು ಪ್ರತೀಕನ ಪ್ರತಿಯೊಂದು ಕ್ರಿಮಿನಲ್ ಚಟುವಟಿಕೆಗಳ ಹಿಂದೆ ಕೆಲವು ಗಾಡ್ ಫಾದರ್ ಗಳಿದ್ದಾರೆ. ಸಂದೀಪನ ಕೊಲೆಯಾದ ಮರುದಿನವೇ ನೆಟ್ಟಣ ವಿಜಯಾ ಬ್ಯಾಂಕಿನಿಂದ ಮೂರು ಲಕ್ಷ ರೂಪಾಯಿ ಡ್ರಾ ಆಗಿದ್ದು ಇದು ಯಾರಿಗೆ ಅಗೆಲು ಕೊಡಲಿಕ್ಕೆ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಇನ್ನು ಈತ ಎಷ್ಟು ಗಾಂಜಾ ವ್ಯಸನಿ ಅಂದರೆ ಸಂದೀಪನ ಡೆಡ್ ಬಾಡಿ ಕಾರಲ್ಲಿ ಇಟ್ಟುಕ್ಕೊಂಡೇ ಸೂಡ್ಲು ಸಮೀಪ ಕೈಯಲ್ಲಿ ರಾಡ್ ಹಿಡಕ್ಕೊಂಡು ಕಾರಿಂದ ಇಳಿದು ಸಾರ್ವಜನಿಕರಲ್ಲಿ "ನಾನು ಜೈಲಲ್ಲೇ ಟಿಕೆಟ್ ತೆಗೆದರೆ ಮುಗೀತು, ಸೇಫಾಗಿ ಹೊರಗೆ ಬಂದರೆ ಮಾತ್ರ ಮೂರು ವಿಕೆಟ್ ಇನ್ನೂ ತೆಗೆಯಲಿದೆ" ಎಂದು ಘೋಷಿಸಿ ಭಯ ಹುಟ್ಟಿಸಿದ್ದನಂತೆ. ಅಲ್ಲ ಮಾರಾಯ್ರೆ ಒಂದು ವಿಕೆಟ್ ತೆಗೆದೇ ಬಾಡಿ ಕಾರಲ್ಲಿದ್ದು ಅದರ ಕಡೆ ಕೊಡಿಯೇ ಆಗಿರಲಿಲ್ಲ, ಅಂಥ ಪರಿಸ್ಥಿತಿಯಲ್ಲೇ ಮತ್ತೇ ಮೂರು ಮರ್ಡರ್ ಗಳ ಮುನ್ಸೂಚನೆ. ಇವನಿಗೆ ಜೈಲಿನಿಂದಲೇ ಟಿಕೆಟ್ ಕೊಟ್ಟರೆ ಇವನು ಘೋಷಿಸಿದ ಮೂರು ಜೀವಗಳಾದರೂ ಉಳಿಯ ಬಹುದು. ಹಾಗೆಂದು ಈ ಹುಡುಗನನ್ನು ಕರೆದು ಬುದ್ಧಿವಾದ ಹೇಳ ಬೇಕಾಗಿದ್ದ ಇವನ ತಂದೆ ಮತ್ತು ಮಾಮೂ ಇವನ ಕ್ರಿಮಿನಲ್ ಚಟುವಟಿಕೆಗಳಿಗೆ ನೀರು, ಇಫ್ಕೋ, ಸುಫಲಾ, ಕೋಳಿ ಗೊಬ್ಬರ ಹಾಕಿ ಬೆಳೆಸಿದ್ದು ಬಿಟ್ಟರೆ ಬೇರೆನೂ ಮಾಡಿಲ್ಲ. ಇವನು ಮಾಡಿದ್ದೆಲ್ಲ ಮಕ್ಕಳಾಟ ಎಂದು ಹೇಳುವ ತಂದೆ, ಪೋಲಿಸ್ ಕೈಯಿಂದ ಬಿಡಿಸಿಕೊಂಡು ಬರುವ ಮಾಮು ಇರುವ ತನಕ ಈ ಗಾಂಜಾ ಗಿರಾಕಿ ಉದ್ದಾರ ಆಗುವ ಲಕ್ಷಣಗಳಿಲ್ಲ. ಅದರಲ್ಲೂ ಕಾಮಿಡಿ ಫೀಸ್ ಏನೆಂದರೆ ಪುತ್ತೂರು RTO ಇವನಿಗೆ ಡ್ರೈವಿಂಗ್ ಲೈಸೆನ್ಸ್ ಕೊಟ್ಟಿದೆ. ಆರೋಗ್ಯ ಇಲಾಖೆ ಮೆಂಟಲ್ ಮಂಜ ಎಂದು ಆಲ್ರೆಡಿ ಸರ್ಟಿಫಿಕೇಟ್ ಕೊಟ್ಟಿದೆ, ಅದರ ಮೇಲೆ ಸಾರಿಗೆ ಇಲಾಖೆಯವರ ಡ್ರೈವಿಂಗ್ ಲೈಸೆನ್ಸ್. ಇನ್ನು ಕಾನೂನು ಇಲಾಖೆ ನಿರ್ದೋಷಿ ಎಂದು ಕೇಸ್ ಮುಗಿಸಿದರೆ ಹೊರಗೆ ಬಂದು ಮತ್ತೇ ಮೂರು ವಿಕೆಟ್ ತೆಗೆದು ಬಿಡುತ್ತಾನೆ. ಅಷ್ಟೇ!
..............................................
ಸ್ವಾಮಿಗೇನಾಗಿದೆ?
ರಾಜ್ಯದ ಪ್ರಬಲ ಸಮುದಾಯದ ದಕ್ಷಿಣ ಕನ್ನಡ ಪೀಠದ ಸಾಮಿ ಖಾವಿ ಹಿಂದೆ ಏಕಾಂತ ಪೂಜೆ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಸಾಮಿ ತನ್ನದೇ ಸಂಸ್ಥೆಯ ಟೀಚರ್ ಗಳನ್ನು ಕೂರಲು, ನಿಲ್ಲಲು ಬಿಡುತ್ತಿಲ್ಲ. ಈಗಾಗಲೇ ಕೆಲವರು ಕೆಲಸ ಬಿಟ್ಟು ಬಜಂಟ್ ಹೆಕ್ಕಿಯಾದರೂ ಬದುಕಿಕೊಳ್ಳಲು ಮನೆ ದಾರಿ ಹಿಡಿದಿದ್ದಾರೆ. ಸಾಮಿ ಏಕಾಂತ ಪೂಜೆ ನಿಲ್ಲಿಸದಿದ್ದರೆ ಒಂದು ದಿನ ಮುರುಘ ಗತಿ ಗ್ಯಾರಂಟಿ.
..............................................
ದರೋಡೆ
ಇ.ಡಿ ಹೆಸರಿನಲ್ಲಿ ಬೀಡಿ ಮಾಲೀಕನ ಮನೆ ದರೋಡೆ. ಕೊಲ್ಲಂ ಪೊರ್ಬುಲು ಬಂಧನ. ಇನ್ನುಳಿದ ಇ.ಡಿ ಅಧಿಕಾರಿಗಳಿಗಾಗಿ ವಿಟ್ಲ ಪೋಲಿಸರ ಹುಡುಕಾಟ. ಅಲ್ಲಿ ತನಕ ಪೊರ್ಬುಲು ಲಗಾಡಿ!
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment