"ಹಾಗೆಂದು ಮಂಗಳೂರಿನಲ್ಲಿ ರಖಂ ಮತ್ತು ಚಿಲ್ಲರೆ ಹುಡುಗಿ ಸರಬರಾಜಿನ ಕತೆ ಇಂದು ನಿನ್ನೆಯದಲ್ಲ. ಕಳೆದ ಅರ್ಧ ಶತಕದಿಂದ ಇದು ಮಂಗಳೂರು ತುಂಬಾ ಸಾಂಕ್ರಾಮಿಕವಾಗಿಯೇ ಹೋಗಿದೆ. ಪೋಲಿಸರು ನಿತ್ಯ ಸುಮಂಗಲಿಯರನ್ನು ಹಿಡಿದಷ್ಟು ಈ ವ್ಯವಹಾರ ಚಿಗುರಿಕ್ಕೊಂಡೇ ಹೋದದ್ದು ಬಿಟ್ಟರೆ ಇದನ್ನು ಬೇರು ಸಮೇತ ಕಿತ್ತು ಹಾಕಲು ಮಂಗಳೂರಿಗೆ ಬಂದ ಯಾವುದೇ IPS ಗಳಿಗೆ ಇಲ್ಲಿ ತನಕ ಆಗಿಲ್ಲ. ಬಹಳ ಹಿಂದೆ ಅವನು ಪಂಕಜ್ ಕುಮಾರ್ ಠಾಕೂರ್ IPS ಆರಡಿ ಕಟೌಟ್ ಖುದ್ದು ಹುಡುಗಿ ಅಂಗಡಿಗಳಿಗೆ ನುಗ್ಗಿ ಹುಡುಗಿಯರನ್ನು ದರದರ ಎಳೆದು ತಂದು ಬೆಂಡ್ ತೆಗೆದರೂ ಏನೂ ಪ್ರಯೋಜನವಾಗಿರಲಿಲ್ಲ. ಬಿಡಿ ಆ ವಿಷಯ ಈಗ ಅದನ್ನೆಲ್ಲ ಬರೆಯುತ್ತಾ ಕುಂತರೆ ಕತೆ ಮುಗಿಯಲ್ಲ. ಇದೀಗ ಲೇಟೆಸ್ಟ್ ಸ್ಟೋರಿ ಒಂದು ಬಂದಿದೆ.
ನಿಮಗೇನಾದರೂ ಮಂಗಳೂರಿನಲ್ಲಿ ಹುಡುಗಿ ಬೇಕೀದ್ದರೆ ಮೇಲೆ ಕೊಟ್ಟಿರುವ ನಂಬರ್ ಗೆ ರಿಂಗ್ ಮಾಡಿ. ಹುಡುಗಿ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಅವನು ಹೇಳಿ ಕೊಳ್ಳುತ್ತಾನೆ. ರೂ 500 ಅವನಿಗೆ ಫೋನ್ ಪೇ ಮಾಡಿದರೆ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಫೋಟೋಸ್ ನಿಮ್ಮ ಮೊಬೈಲಿಗೆ ಬಂದು ಬೀಳುತ್ತದೆ. ಅದ್ರಲ್ಲಿ ನೀವು ರಂಭೆಯನ್ನೋ, ಊರ್ವಶಿಯನ್ನೋ ಸೆಲೆಕ್ಟ್ ಮಾಡಿದರೆ ಮುಂದಿನ ಪೇಮೆಂಟ್ ಗಾಡಿ ಹತ್ತುವ ಮುನ್ನ ನೀವು ಕೊಡಬೇಕು. ಟಿಪ್ಸ್ ಬೇತೆನೆ. ಆದರೆ ಈ ಕೇಸಲ್ಲಿ ಅವನೊಬ್ಬ ಡೋಂಗಿ ತಲೆಹಿಡುಕ ಎಂದು ಗೊತ್ತಾಗಿದೆ. ಹುಡುಗಿ ಫೋಟೋ ಕಸ್ಟಮರ್ ಗೆ ಕಳಿಸಿ, ಅಡ್ವಾನ್ಸ್ ಎಂದು ಎರಡ್ಸಾವಿರ ಹಾಕಿಸಿಕೊಂಡು ಆಮೇಲೆ ದುಡ್ಡೂ ಇಲ್ಲ, ಹುಡುಗಿಯೂ ಇಲ್ಲ. ಕಾಲ್ ಮಾಡಿದರೆ ಕಾಲ್ ಎತ್ತಲ್ಲ.
ಇವನು ಹಸೈನಾರ್ ಎಂದು ಇವನ ಕ್ಯೂಆರ್ ಕೋಡು ಸ್ಕೇನರ್ ಹೇಳುತ್ತದೆ. ಇವನೇ ಮೊನ್ನೆ ಒಬ್ಬ ಹುಡುಗನಿಗೆ ಹುಡುಗಿ ಹೆಸರಲ್ಲಿ ಎರಡ್ಸಾವಿರ ಮಂಗೀಸ್ ಮಾಡಿದ್ದಾನೆ.ಹುಡುಗಿ ಸೆಂಡ್ ಮಾಡದೆ ಕೇವಲ ಫೋಟೋ ಮಾತ್ರ ಸೆಂಡ್ ಮಾಡಿ ಎರಡ್ಸಾವಿರ ಧರ್ಮಕ್ಕೆ ಕಿಸಿಗೆ ಇಳಿಸಿಕೊಂಡಿದ್ದಾನೆ. ಹಾಗೆಂದು ಟಚ್ ಮೊಬೈಲ್ ಬರುವ ಮೊದಲು ಹುಡುಗಿಯರನ್ನು ಕಾರಲ್ಲಿ ತಂದು ತೋರಿಸಲಾಗುತ್ತಿತ್ತು. ನೀವು ಎಲ್ಲಿದ್ದೀರಿ ಎಂದು ಹೇಳಿದರೆ ಸಾಕು ಹುಡುಗಿಯರನ್ನು ತುಂಬಿಕ್ಕೊಂಡು ಕಾರು ನಿಮ್ಮ ಎದುರೇ ಬಂದು ನಿಲ್ಲುತ್ತದೆ. ನಿಮ್ಮನ್ನು ಕಾರಿನೊಳಗೆ ಕೂರಿಸಿ ಹುಡುಗಿ ತೋರಿಸಲಾಗುತ್ತದೆ. ನಿಮಗೆ ಓಕೆ ಆದರೆ ನಂತರ ವ್ಯವಹಾರದ ಮಾತು. ಅರ್ಧ ಗಂಟೆಗೆ ಇಷ್ಟು, ಗಂಟೆಗೆ,ದಿನಕ್ಕೆ, ಫುಲ್ ನೈಟ್ ಹೀಗೆಲ್ಲ ರೇಟ್ ಲಿಸ್ಟ್ ಇರುತ್ತದೆ. ಟೋಟಲಿ ಎಲ್ಲಾ ಮುಗಿದು ವಂದನಾರ್ಪಣೆ ಮುಗಿಯುವಾಗ ನಮ್ಮಲ್ಲಿ ಬಸ್ ಚಾರ್ಜ್ ಮಾತ್ರ.
ಹಾಗೆಂದು ಮಂಗಳೂರಿನಲ್ಲಿ ಹುಡುಗಿಯರ ಹೋಲ್ ಸೇಲ್ ವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಎ.ಜೆ ಆಸ್ಪತ್ರೆ ಹತ್ತಿರ ಇರುವ ರಾಯಲ್ ಸನ್ನು ಲಾಡ್ಜಿನಲ್ಲಿ ಐವತ್ತು A/c ರೂಂಗಳನ್ನು ಈ ವೈವಾಟಿಗೆಂದೇ ಮೀಸಲಿಡಲಾಗಿದೆ. ಇನ್ನು ಕೊಟ್ಟಾರದ ಪ್ರಿತ್ವಿ ಲಾಡ್ಜಿನ ಕತೆ ದೊಡ್ಡದಿದೆ. ಈ ಲಾಡ್ಜಿನಲ್ಲಿ ನಡೆದಷ್ಟು ವೈವಾಟ್ ಮಂಗಳೂರಿನ ಬೇರೆ ಯಾವುದೇ ಲಾಡ್ಜಿನಲ್ಲಿ ನಡೆದಿರಲಿಕ್ಕಿಲ್ಲ. ಇನ್ನು ಸ್ಟೇಟ್ ಬ್ಯಾಂಕ್ ಹತ್ತಿರ ಇರುವ ರೋಡ್ ಲೈನ್ಸ್ ಲಾಡ್ಜಿನಲ್ಲಿ ಬಹಳ ವಿಜೃಂಭಣೆಯಿಂದ ವೈವಾಟ್ ನಡೆಯುತ್ತಿದೆ. ಪೋಲಿಸ್ ಕಮಿಷನರ್ ಆಫೀಸ್ ಕೂಗಳತೆ ದೂರದಲ್ಲಿರುವ ಈ ಲಾಡ್ಜು ಬಂದರು ಪೋಲಿಸರಿಗೂ ನೆರೆಕರೆ. ಬಂದರು ಪೋಲಿಸರು ಒಂದು ಪೂಂಕಿ ಬಿಟ್ಟರೂ ಸಾಕು ಈ ಲಾಡ್ಜು ಗಡಗಡ ಆಗಬಹುದು. ಆದರೆ ಇಲ್ಲಿ 24*7 ನಿತ್ಯೋತ್ಸವ. ಇನ್ನು ಅಲ್ಲಿ ಹಂಪನ ಕಟ್ಟೆಯಲ್ಲಿ ಪಿರೇರಾ ಹೋಟೆಲ್ ಬಳಿ ಇರುವ ಬಡ್ಡಿ ಮಗನೊಬ್ಬನ ಮೈಥಿಲಿ ಲಾಡ್ಜು ಕೂಡ ಕಲರ್ ಕಲರ್ ಹುಡುಗಿಯರ ಶೋರೂಂ ಆಗಿದೆ. ಈ ಎಲ್ಲಾ ಲಾಡ್ಜುಗಳಲ್ಲೂ ಅದೇ ರೇಟ್ ಲಿಸ್ಟ್ ಇರುತ್ತದೆ. ಅರ್ಧ ಗಂಟೆಗೆ ಇಷ್ಟು, ಗಂಟೆಗೆ ಬೇರೆ, ದಿನಕ್ಕೆ, ಇಡೀ ನೈಟ್ ಟೈಟ್ ಮಾಡಲು ಇಂತಿಷ್ಟು ಅಂತ ಫಿಕ್ಸ್ ಆಗಿರುತ್ತದೆ. ಹಾಗೆಂದು ಮಂಗಳೂರಿನ ಸೈಕಲ್ ಮಾರುಕಟ್ಟೆಯ ನಂಬರ್ ವನ್ ರಖಂ ಮತ್ತು ಚಿಲ್ಲರೆ ವ್ಯಾಪಾರಿ ಯಾರೆಂದು ಇಡೀ ಲೋಕಕ್ಕೆ ಗೊತ್ತಿರುವ ವಿಷಯ. ಹೆಬ್ರಿ ಕಿಷ್ಣ ಎಂಬ ಸೈಕಲ್ ವ್ಯಾಪಾರಿ ಇಡೀ ದಕ್ಷಿಣ ಕನ್ನಡಕ್ಕೆ ಸೈಕಲ್ ಹಂಚಿ ಬಿಟ್ಟ. ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಿಷ್ಣ ಅಲ್ಲಿ ಹೆಬ್ರಿಯಿಂದಲೇ ತನ್ನ ಸೈಕಲ್ ಸಾಮ್ರಾಜ್ಯವನ್ನು ಕಂಟ್ರೋಲ್ ಮಾಡುತ್ತಿದ್ದಾನೆ. ಇನ್ನು ರಾಯಲ್ ರಘು, ಹಾಸನ ದಿನೇಶ್, ಫೈನಾನ್ಸ್ ನಾಣು ಮುಂತಾದ ಮಹನೀಯರು ಸೈಕಲ್ ಸಪ್ಲೈಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಒಬ್ಬ ರಿಕ್ಷಾ ಚಾಲಕ ಲಾಡ್ಜಿಗೆ ಒಂದು ಕುರಿಯನ್ನು ಜೋಡಿಗೆ ಕರೆ ತಂದರೆ ಅವನಿಗೆ ಐನೂರು ಕಮಿಷನ್ ಇದೆ ಎಂದು ತಿಳಿದುಬಂದಿದೆ.
ಹಾಗೆಂದು ಮಂಗಳೂರಿನ ಈ ಸೈಕಲ್ ಮಾರ್ಕೆಟನ್ನು ದಕ್ಷಿಣ ಕನ್ನಡಕ್ಕೆ ಬಂದ IPS ಗಳೂ ಹಾಗೆ ಸುಮ್ಮನೆ ಬಿಟ್ಟಿಲ್ಲ. ಪಂಕಜ್ ಕುಮಾರ್ ಠಾಕೂರ್ IPS ಎಂಬ ಆರಡಿ ಕಟೌಟ್ ಮಂಗಳೂರಿನಲ್ಲಿ ಇದ್ದಷ್ಟು ದಿನ ಸೈಕಲ್ ಗಳಿಗೆ ರಜೆ ಘೋಷಿಸಲಾಗಿತ್ತು. ನಂತರದ ಪ್ರಶಾಂತ್ ಕುಮಾರ್ ಠಾಕೂರ್ IPS, ಸಂದೀಪ್ ಪಾಟೀಲ್, ಚಂದ್ರಶೇಖರ್, ಮುರುಗನ್ IPS, ಕುಲ್ ದೀಪ್ ಜೈನ್ ಮುಂತಾದ ಐಪಿಎಸ್ ಅಧಿಕಾರಿಗಳು ಮಂಗಳೂರಿನ ಸೈಕಲ್ ಮಾರುಕಟ್ಟೆಯನ್ನು ಲಗಾಡಿ ತೆಗೆದು ಬಿಟ್ಟಿದ್ದರು. ಆದರೂ ನಾಯಿ ಬಾಲ ಡೊಂಕೇ. ಪೆಟ್ಟು ಬಿದ್ದಷ್ಟು ದಪ್ಪ ಆಗೋದು ಜಾಸ್ತಿ.
..............................................
..............................................
ಆತ್ಮ ಪದ
ಕೆಲವರು ತಮ್ಮ ಆತ್ಮದರಮನೆಗೆ ತಾವೇ ಚಾಲಕರಾಗಿರುತ್ತಾರೆ.ಅದರ ನಿಯಂತ್ರಣದ ಕಾರ್ಯವ ಅವರೇ ನಿರ್ವಹಿಸುತ್ತಾರೆ.ಆದು ಹೇಗೆಂದರೆ ಗಾಡಿಯ ಡ್ರೈವರ್ ನಾವೇ ಆಗಿ ಯಾರನ್ನೂ ಅವಲಂಬಿಸದೆ ನಮ್ಮ ಗಾಡಿಯ ನಾವೇ ಓಡಿಸಿದಂತೆ.. ಮತ್ತೆ ಇನ್ನು ಕೆಲವರು ತಮ್ಮ ಆತ್ಮದರಮನೆಯ ನಿಯಂತ್ರಣವ ಇತರರಿಗೆ ಒಪ್ಪಿಸಿ ತಾವು ನಿಮಿತ್ತ ಎಂಬಂತೆಯೋ ಅಥವಾ ಉದಾಸೀನ ಹೊಂದಿದವರಂತೆಯೋ ಇದ್ದು ಯಾರ್ಯಾರ ಮಾತು ಕೇಳುತ್ತಾ ತನ್ನ ತಾನು ಕಳಕೊಳ್ಳುತ್ತಾ ಪರಾವಲಂಬಿಯಂತೆ ಇರುತ್ತಾರೆ..ಅದು ಹೇಗೆಂದರೆ ತನ್ನದೇ ಗಾಡಿಗೆ ಬೇರೆ ಡ್ರೈವರ್ ಇಟ್ಟು ಗಾಡಿ ಓಡಿಸಿದಂತೆ.. ತಾನು ಆರಾಮದಲ್ಲಿ ಇರುತ್ತೇನೆ ಎಂದು ಅವರ ನಂಬಿಕೆ...ಈ ಎರಡು ಅವಸ್ಥೆಗಳಲ್ಲಿ ತಾನು ಪರಾವಲಂಬಿಯಾಗಿ ಇತರರ ಸುತ್ತ ತಾನು ಸುತ್ತುವುದು ಒಂದು ರೀತಿ ಆದರೆ, ತನ್ನ ಕೆಲಸಕ್ಕೆ ಯಾರನ್ನೂ ಬಳಸಿಕೊಳ್ಳದೆ ಸ್ವಾವಲಂಬಿಯಾಗಿ ಇತರರನ್ನು ಎಷ್ಟು ಬೇಕೋ ಅಷ್ಟೇ ಬಳಸಿಕೊಳ್ಳುವುದು..ಇವೆರಡೂ ರೀತಿ ನೀತಿಗಳು ಅವರವರಿಗೆ ಬಿಟ್ಟದ್ದಾಗಿರುತ್ತದೆ..ಪರಾವಲಂಬಿಯಾದಾಗಲೂ ಕೆಲಸ ಕಡಿಮೆಯಾಗಿ ಅನಾರೋಗ್ಯ ಕಾಡಬಹುದು.. ಅತೀ ಸ್ವಾವಲಂಬಿಯಾದರೂ ಅನಾರೋಗ್ಯ ಕಾಡಬಹುದು.. ನಾವು ಇವೆರಡರ ಸಮತೂಕ ಹೊಂದಿ ಜೀವನ ನಡೆಸಬೇಕಾಗುತ್ತದೆ.
-ಶಾಂತಾ ಕುಂಟಿನಿ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment