ಇದೀಗ ಮರಳುಗಳ್ಳರಿಗೆ ನಾಮಕರಣ ಮಾಡಲಾಗುತ್ತಿದೆ. ಫಾರ್ ಎಕ್ಸಾಂಪಲ್ ಕುಮಾರಧಾರ ಕಳ್ಳರು, ನೇತ್ರಾ ಕಳ್ಳರು, ಫಲ್ಗುಣಿ ಕಳ್ಳರು, ಸೌಪರ್ಣಿಕಾ, ಶರಾವತಿ, ಹೇಮಾವತಿ ಇತ್ಯಾದಿ ಇತ್ಯಾದಿ. ಸುಳ್ಯದಲ್ಲಿ ಇದೇ ಮರಳುಗಳ್ಳರನ್ನು ಪಯಸ್ವಿನಿ ದಡದ ಚಾಪ್ಟರ್ ಗಳು ಎಂದು ಕರೆಯಲಾಗುತ್ತದೆ. ಹರಿಯುವ ನೀರು ಕಂಡರೆ ಸಾಕು ಟಿಪ್ಪರ್ ಇಳಿಸುವಲ್ಲಿ ತನಕ ಮುಟ್ಟಿದ್ದಾರೆ ಪಯಸ್ವಿನಿ ತೀರದ ಚಾಪ್ಟರ್ ಗಳು.
ಅಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಸರಹದ್ದಿನಲ್ಲಿ ಬರುವ ಅರಂಬೂರಿನ ಪಯಸ್ವಿನಿ ನದಿಯಿಂದ ವ್ಯಾಪಕವಾಗಿ ಮರಳು ತೆಗೆಯಲಾಗುತ್ತಿದೆ. ಅರಂಬೂರು ಕೂಟೇಲು ಬಾಬಣ್ಣನ ಮನೆಗೆ ಹೋಗುವ ಸಿಂಗಲ್ ರೋಡಿನಲ್ಲಿ ಟಿಪ್ಪರ್ ಗಳ ಮೆರವಣಿಗೆಯೇ ಸಾಗಿ ಅವರ ಮನೆಯ ಮುಂದುಗಡೆಯೇ ನದಿಗೆ ಇಳಿಯುತ್ತದೆ. ದಿನ ಒಂದಕ್ಕೆ ಹತ್ತು ಹಲವು ಟಿಪ್ಪರ್ ಗಳು ಈ ಸಿಂಗಲ್ ರೋಡಿನಲ್ಲಿ ಯಮ ಸ್ವರೂಪಿಯಾಗಿ ಬರುತ್ತಿದ್ದು ಈ ಸಿಂಗಲ್ ರೋಡಿನ ಪ್ರಯಾಣಿಕರು ಭಯಭೀತರಾಗಿ ಟಿಪ್ಪರ್ ಅಡಿಗೆ ತಮ್ಮ ಸರದಿ ಯಾವಾಗ ಎಂದೇ ದಿಗಿಲಾಗಿದ್ದಾರೆ. ಈ ಟಿಪ್ಪರ್ ಪೈಲೆಟ್ ಗಳಲ್ಲಿ ಮಾತಾಡಿದರೆ ಅವರು ಇಂಗ್ಲಿಷಿನಲ್ಲಿ ಟಸ್ಕ್ ಪುಸ್ಕ್ ಎಂದು ಆವಾಜ್ ಹಾಕುತ್ತಾರೆ. ಇದೇ ಸಿಂಗಲ್ ರೋಡಿನಲ್ಲಿ ಆಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆಯೂ ಇದ್ದು ಅವರು ಕೆಟ್ಟದ್ದನ್ನು ನೋಡಲ್ಲ,ಕೇಳಲ್ಲ,ಮಾತಾಡಲ್ಲ.
ಹಾಗೆಂದು ಅರಂಬೂರಿನ ಕೂಟೇಲು ಬಳಿ ಪಯಸ್ವಿನಿ ತೀರದಿಂದ ಮರಳು ತೆಗೆಯುವ ರೆಡ್ಡಿ ಯಾರೆಂದು ಇಣುಕಿ ನೋಡಿದರೆ ಅದು "ಪರಿವಾರ ಕಾನ ಪೊಯ್ಯೆಸ್" ಕಂಪೆನಿಯ ಎಂ ಡಿ ಎಂದು ಗುರುತಿಸಲಾಗಿದೆ. ಸುಳ್ಯ ತಹಶೀಲ್ದಾರಿಗೆ ಮಾಮೂಲು ಕೊಡುತ್ತಾರಂತೆ, ಸುಳ್ಯ ಪೋಲಿಸರ ವಿಷಯ ಬಿಡಿ ಅವರಿಗೆ ಒಂದು ಟಿಪ್ಪರಿಗೆ ಇಂತಿಷ್ಟು ಅಂತ ಅಂತೆ, ಆಲೆಟ್ಟಿ ಗ್ರಾಮ ಪಂಚಾಯಿತಿ ಪಿಡಿಒಗೆ ಒಂದು ಎಲೆ, ಮುಂದುವರೆದು ಪುತ್ತೂರು ಡಿವೈಎಸ್ಪಿ ಟೇಬಲ್ಲಿಗೂ ಮಾಮೂಲು ಇದೆಯಂತೆ. ಹಾಗಾದರೆ ಪರಿವಾರ ಕಾನ ಪೊಯ್ಯೆಸ್ ಕಂಪೆನಿ ಎಷ್ಟು ಪವರ್ ಫುಲ್ ಎಂದು ನೀವೇ ಯೋಚಿಸಿ. ಇಡೀ ಸುಳ್ಯ ತಾಲೂಕು ಆಡಳಿತಕ್ಕೆ ಮಾಮೂಲು ಕೊಟ್ಟು, ಪುತ್ತೂರು ಉಪವಿಭಾಗದ ಪೋಲಿಸ್ ಉಪ ವರಿಷ್ಠಾಧಿಕಾರಿಗೂ ಮಾಮೂಲು ಕೊಡುತ್ತೇವೆ ಎಂದು ರಾಜಾರೋಷವಾಗಿ ಪಯಸ್ವಿನಿಯ ಒಡಲನ್ನು ಬರಿದು ಮಾಡಲಾಗುತ್ತಿದೆ. ಕಾನೂನುಬಾಹಿರವಾಗಿ ತಾಲೂಕು ಆಡಳಿತವನ್ನು ಮರಳು ಮಾಡಿ ಮರಳು ತೆಗೆಯುವ ಪರಿವಾರಕಾನದ ರೆಡ್ಡಿ ಕಂಪನಿಗೆ ದೂಜಿ ಕೊಡುವ ಒಬ್ಬನೇ ಒಬ್ಬ ಗಂಡು ಅಧಿಕಾರಿ ಇಡೀ ಪುತ್ತೂರು ಉಪವಿಭಾಗದ ಸರಹದ್ದಿನಲ್ಲಿಯೇ ಇಲ್ವಾ? ಅದರಲ್ಲೂ ಸುಳ್ಯ ತಹಶೀಲ್ದಾರ್ ಒಬ್ಬ ಹೆಣ್ಣು ಮಗಳಾಗಿ ತನ್ನ ಎದುರೇ ಇಂತಹ ಕಾನೂನುಬಾಹಿರ ಚಟುವಟಿಕೆ ನಡೆದರೆ ಸುಮ್ಮನೆ ಕುಂತಿರುವುದು ವಿಪರ್ಯಾಸವೇ ಸರಿ. ಈ ಕೂಡಲೇ ಪುತ್ತೂರು ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಿಂಗಲ್ ರೋಡ್ ಪ್ರಯಾಣಿಕರ ಬೇಡಿಕೆ.
..............................................
ಮಾನದಂಡ
ಕವನ ವಾಚನವಿತ್ತು ಒಂದು ಕಡೆ. ಹೋದರು ಹಲವರು ವೇಷಭೂಷಣದ ಜೊತೆ.ವೇದಿಕೆಗೆ ಮಾನದಂಡ ಅಲ್ಲ ವ್ಯಕ್ತಿಯ ವೇಷಭೂಷಣಗಳೆಂದರು ಹಿರಿಯರಲ್ಲಿ ಕಿರಿಯರಿಗೆ.
ಮಾತಿತ್ತು ಇನ್ನೊಂದೆಡೆ.ಸಾಮಾನ್ಯರಂತೆ ಬಂದರು
ವೇದಿಕೆಗೆ.ಅಧ್ಯಕ್ಷರಂದರು ವೇಷ ಭೂಷಣವೇ ಪ್ರಾಮುಖ್ಯ ಎಮಗೆ ಯೋಗ್ಯತೆ ನೋಡುವುದೆ ಅದರಲ್ಲೆ ಅಂದರು ಕಿರಿಯರು ಹಿರಿಯರಿಗೆ.
-ಶಾಂತಾ ಕುಂಟಿನಿ
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment