ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಅಮ್ಮೆಂಬಳ ಬಾಳಪ್ಪ,ಕುಲಾಲ ಸಮಾಜದ ಹಿರಿಯರಾದ ಹೂವಯ್ಯ ಮೂಲ್ಯ ಅವರು ಸಮಾಜದ ಏಳಿಗೆಯ ದೂರದೃಷ್ಠಿಯನ್ನಿರಿಸಿ ಸ್ಥಾಪಿಸಿದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಮತ್ತು ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಸುಳ್ಳು ಆರೋಪ ಹೊರಿಸಿ ಮಸಿ ಬಳಿಯುವ ಪ್ರಯತ್ನವನ್ನು ಕಾಂಗ್ರೆಸ್ ಬೆಂಬಲಿತ ಮಾಜಿ ನಿರ್ದೇಶಕ ಮತ್ತವರ ತಂಡ ನಡೆಸುತ್ತಾ ಬರುತ್ತಿರುವ ಆರೋಪ ಸಂಘದ ಸದಸ್ಯರಿಂದಲೇ ಕೇಳಿಬಂದಿದ್ದು, ಇದೀಗ ಈ ತಂಡ ಬ್ಯಾಂಕ್‌ನ ಹಾಲಿ ಅಧ್ಯಕ್ಷ, ನಿರ್ದೇಶಕರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ನಡೆಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಬಂಟ್ವಾಳ ಬೈಪಾಸ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಜಿಲ್ಲೆಯಾದ್ಯಂತ 16 ಶಾಖೆಯನ್ನು ಹೊಂದಿದ್ದು,5 ಕೋ.ಗೂ ಅಧಿಕ ಲಾಭಾಂಶದಲ್ಲಿದ್ದು, ಸಾಕಷ್ಟು ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಬ್ಯಾಂಕ್ ನ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಫೆ.9 ರಂದು (ಭಾನುವಾರ) ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಬೆಂಬಲಿತ ಮಾಜಿ ನಿರ್ದೇಶಕ ಲೋಕನಾಥ್ ಮತ್ತವರ ತಂಡ ಬ್ಯಾಂಕ್ನ ಆಡಳಿತ ಮಂಡಳಿಗೆ ನಡೆಯುವ ಚುನಾವಣಾ ಸಂಧರ್ಭದಲ್ಲೆಲ್ಲಾ ಹಾಲಿ ಆಡಳಿತಮಂಡಳಿಯ ವಿರುದ್ಧ ವೃಥಾ ಆರೋಪ ಹೊರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕುತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪ ಸದಸ್ಯರಿಂದ ಕೇಳಿಬರುತ್ತಿತ್ತು.ಈ ಬಾರಿಯ ಚುನಾವಣೆಯಲ್ಲು ಈ ತನ್ನ ಚಾಳಿಯನ್ನು ಮುಂದುವರಿಸಿದೆಯನ್ನಲಾಗಿದ್ದು, ಅದರ ಭಾಗವಾಗಿ ಬ್ಯಾಂಕ್ ನ ಪಡೀಲ್ ಶಾಖೆಯಲ್ಲಿ ನಡೆದಿದೆಯೆನ್ನಲಾದ ನಕಲಿಚಿನ್ನ ಅಡವಿಟ್ಟಿದ್ದರೆನ್ನಲಾದ ಪ್ರಕರಣವನ್ನು ಮುಂದಿಟ್ಟುಕೊಂಡು ಹಾಲಿ ಅಧ್ಯಕ್ಷ, ನಿರ್ದೇಶಕರನ್ನೇ ಅಪರಾಧಿಗಳನ್ನಾಗಿಸುವ ನಿಟ್ಟಿನಲ್ಲಿ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ.
ಸದ್ಯ ಪ್ರಕರಣದಲ್ಲಿ ಬ್ಯಾಂಕ್ ನ ವ್ಯವಹಾರಕ್ಕೆ ಧಕ್ಕೆಯಾಗದಂತೆ ಮತ್ತು ಹಿತವನ್ನು ಕಾಯ್ದಕೊಂಡು ಗ್ರಾಹಕ,ಸದಸ್ಯರಿಗೂ ತೊಂದರೆಯಾಗದಂತೆ ವ್ಯವಹರಿಸಿ ಅದನ್ನು ಬಗೆಹರಿಸಿದೆ. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿ ಪಡೀಲ್ ಶಾಖೆಯ ವ್ಯವಸ್ಥಾಪಕ, ಸರಫರ್ ಹೊಣೆಯಾಗಿದ್ದು, ಶಾಖಾ ವ್ಯವಸ್ಥಾಪಕನನ್ನು ತನಿಖೆಯ ದೃಷ್ಠಿಯಿಂದ ಈಗಾಗಲೇ ಅಮಾನತು ಕೂಡ ಮಾಡಲಾಗಿದೆ.
ಉಳಿದಂತೆ ಅಡವಿಟ್ಟ ಚಿನ್ನವನ್ನು ಏಲಂ ಮೂಲಕ ಸರಫರ್ ನೇ ಪಡೆದಿದ್ದು, ಅದರ ಹಣವನ್ನು ಬ್ಯಾಂಕ್ ಗೆ ಪಾವತಿಸಲಾಗಿದೆ
ಎಂದು ಆಡಳಿತ ಮಂಡಳಿಯೇ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟಪಡಿಸಿತ್ತು.
ಆದರೆ ಕಾಂಗ್ರೆಸ್ ಬೆಂಬಲಿತ ಮಾಜಿ ನಿರ್ದೇಶಕ ಲೋಕನಾಥ್ ಮತ್ತವರ ತಂಡ ರಾಜಕೀಯ ಪ್ರಭಾವ ಬಳಸಿ ಬಿಜೆಪಿ ಬೆಂಬಲಿತ ನಿರ್ದೇಶಕರ ಸಹಿತ 28 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಇದರ ವಿರುದ್ಧ ಬ್ಯಾಂಕ್ ನ ಹಾಲಿ ಆಡಳಿತಮಂಡಳಿ ಹೈ ಕೋರ್ಟ್ ತಢಯಾಜ್ಞೆಯನ್ನು ಪಡೆದುಕೊಳ್ಳಬೇಕಾಯಿತು.
ಬ್ಯಾಂಕ್ ನ ಆಡಳಿತ ಮಂಡಳಿಗೆ ಫೆ. 9ರಂದು ನಡೆಯಲಿರುವ ಮತ್ತೆ ಅಧಿಕಾರದ ಗದ್ದುಗೆಗೇರುವ ಹಪಾಹಪಿಯಿಂದ ಮತ್ತೆ ಬ್ಯಾಂಕ್ ನ ಹೆಸರಿಗೆ ಕಳಂಕ ತರಲು ಮತ್ತು ಹಾಲಿ ಆಡಳಿತ ಮಂಡಳಿಯನ್ನು ಶತಾಯ-ಗತಾಯ ಕೆಳಗಿಳಿಸಲು ಲೋಕನಾಥ ಮತ್ತವರ ತಂಡ ಮುಂದಾಗಿರುವುದು ಬ್ಯಾಂಕ್ ನ ನೈಜ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.ಈಗಾಗಲೇ ಎರಡು ಚುನಾವಣೆಯಲ್ಲಿ ಸೋತು 'ಕೈ'ಸುಟ್ಟುಕೊಂಡರೂ ಈ ಚುನಾವಣೆಯಲ್ಲಿಮತ್ತೆ ಅದೇ ಚಾಳಿ ಮುಂದುವರಿಸಿರುವ ಬಗ್ಗೆಯು ಸದಸ್ಯರು ಮತ್ತು ಗ್ರಾಹಕರಲ್ಲಿ ಆಕ್ರೋಶ ವ್ಯಕ್ತವಾಗಿದೆ
ಬ್ಯಾಂಕ್ ಮತ್ತು ಆಡಳಿತ ಮಂಡಳಿಯ ವಿರುದ್ದು, ಸುಳ್ಳು ಆರೋಪ, ಅಪಪ್ರಚಾರ ನಡೆಸುತ್ತಿರುವ ವಿರುದ್ದ ಮಾನನಷ್ಟ ಮೊಕದ್ದೆಮೆ ದಾಖಲಿಸಿ ಕಾನೂನು ಸಮರಕ್ಕೆ ಆಡಳಿತ ಮಂಡಳಿ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಮಾಜಿ ನಿರ್ದೇಶಕ ಲೋಕನಾಥ್ ಈ ಹಿಂದೆ ಕೆಲಸಕ್ಕಿದ್ದ ಸಂಸ್ಥೆಯಲ್ಲಿ ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದು,ಸಂಸ್ಥೆ
ಈತನ ಮೇಲೆ ಕಾನೂನು ಕ್ರಮವನ್ನು ಕೈಗೊಂಡಿರುವ ಬಗ್ಗೆಯು ದಾಖಲೆಗಳಿವೆ.
ಅಲ್ಲಿಂದ ಕೆಲಸ ಬಿಟ್ಟು ಬಂದ ಮೇಲೆ ತಾನೊಬ್ಬ ಮುಖಂಡನೆಂದು ಗುರುತಿಸಿಕೊಂಡು ತನ್ನದೇ ತಂಡವನ್ನು ಕಟ್ಟಿಕೊಂಡು ಸಮಾಜ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷನಾಗಬೇಕೆಂದು ಶತ ಪ್ರಯತ್ನದಲ್ಲಿದ್ದಾನೆ. ಆದರೆ, ಬ್ಯಾಂಕ್ ನ ಸದಸ್ಯರು,ಗ್ರಾಹಕರು ಮಾತ್ರ ಬೆಂಬಲಿಸಲೇ ಇಲ್ಲ ಹಾಗಾಗಿ ಅಧ್ಯಕ್ಷನಾಗುವ ಕನಸು ಹಾಗೆಯೇ ಉಳಿದಿದೆ.ಈ ಚುನಾವಣೆಯಲ್ಲು ಸದಸ್ಯರು ಕೈಹಿಡಿಯುತ್ತಾರೆಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿಲ್ಲ.
ಇಷ್ಟು ಸಾಲದೆಂಬಂತೆ ಅವಿಭಜಿತ ದ.ಕ.ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ವಿರುದ್ದ
ವಾಹಿನಿಯೊಂದರಲ್ಲಿ ಬಂದಿದ್ದ ಆರೋಪ ಸಂಬಂಧ ಲೋಕನಾಥನ ಕೈವಾಡ ಕೂಡಾ ಇರಬಹುದೇ ಅನ್ನೋ ಸಂಶಯ ಇದೀಗ ಸಹಕಾರಿಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇದೀಗ ಬ್ಯಾಂಕ್ ನ ಆಡಳಿತ ಮಂಡಳಿಗೆ ಫೆ. 9ರಂದು ನಡೆಯಲಿರುವ ಚುನಾವಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಅಪಪ್ರಚಾರಕ್ಕೆ ಗೆಲುವಾಗುತ್ತಾ,ಬ್ಯಾಂಕ್ ನ, ಸದಸ್ಯರ ಹಿತಕಾಯುವ ಹಾಲಿ ಆಡಳಿತ ಮಂಡಳಿಗೆ ಜಯ ಸಿಗುತ್ತಾ ಕಾದು ನೋಡಬೇಕು..
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment