ನಾಡಿದ್ದು ಪಂಜ ಜಾತ್ರೆ. ಪಂಚಲಿಂಗೇಶ್ವರನ ರಥೋತ್ಸವ. ಇಡೀ ಪಂಜ ತುಂಬಾ ಹಬ್ಬದ ಸಡಗರ. ಆದರೆ ಪಂಜ ಪೇಂಟೆಯಿಂದ ಅತ್ಲಕಡೆ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕತೆ ಕತ್ತೆಯಾಗಿದೆ.ನರಮಾನಿ ವಾಹನದಲ್ಲಿ ಹೋಗಲು ಸಾಧ್ಯವೇ ಇಲ್ಲ ಮಾರಾಯ್ರೆ. ಆರು ಚಕ್ರ ಮತ್ತು ಎರಡು ಚಕ್ರವೇ ಸರಿ ಪಾಸಾಗಲ್ಲ. ಇನ್ನು ಆರು ಚಕ್ರ ಮತ್ತು ನಾಲಕ್ಕು ಚಕ್ರ ಎದುರೆದುರಾದರೆ ನಾಲಕ್ಕು ಚಕ್ರದ ಕ್ರೆಂಕೆಸಿ ಒಟ್ಟೆ ಗ್ಯಾರಂಟಿ. ರಸ್ತೆಯ ಎರಡೂ ಕಡೆ ಸೈಡಿಗೆ ಮಣ್ಣು ಹಾಕಲೇ ಬೇಕಾಗಿದೆ. ಎರಡೂ ಕಡೆ ಮಣ್ಣು ಸವೆದೂ ಸವೆದೂ ಡಾಂಬರ್ ರಸ್ತೆಯ ಸೈಡ್ ಕತ್ತಿಯ ಅಲಗಿನಂತಾಗಿದೆ. ರಸ್ತೆಯ ಡ್ಯಾಡಿ ಲೋಕೋಪಯೋಗಿ ಇಲಾಖೆ ಆದರೂ ಈಗ ಈ ರಸ್ತೆ ಅರ್ಜೆಂಟ್ ಬೇಕಾಗಿರುವುದು ದೇವಸ್ಥಾನದವರಿಗೆ. ಅವರು ಬಿಟ್ಟರೆ ಪಂಜ ಪಂಚಾಯ್ತಿಯವರಿಗೂ ಒಂದೊಂದು ಕೊಟ್ಟು ಮಣ್ಣು ಹಾಕಿಸಬಹುದು. ಮಣ್ಣು ಹಾಕಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಬಿಲ್ ತಿಂದರೂ ಪರವಾಗಿಲ್ಲ ಆದರೆ ರಸ್ತೆ ಸರಿ ಆಗಬೇಕು.
ಇದೀಗ ಜಾತ್ರೆ ಸಮಯದಲ್ಲಿ ದೇವಸ್ಥಾನದವರು ಅಲ್ಲಿ ತನಕವಾದರೂ ಮಣ್ಣು ಹಾಕಿಸುವ ದೊಡ್ಡ ಪ್ರಯತ್ನ ಮಾಡಬಹುದು. ಕಾನತ್ತೂರಿನ ಕೆಲಸಗಾರ ದೇವಸ್ಥಾನಕ್ಕಾಗಿ ಇಷ್ಟೆಲ್ಲಾ ಮಾಡಿಸುವಾಗ ಮತ್ತು ಖುದ್ದು ಲೋಕೋಪಯೋಗಿ ಇಲಾಖೆಗೇ ದೂಜೀ ಕೊಡುವ ತಾಕತ್ ಇರುವಾಗ ಈ ಒಂದು ಕೆಲಸ ಮಾಡಿಸಿದರೆ ಒಳ್ಳೆಯದಿತ್ತು ಎಂಬುದು ಪಬ್ಲಿಕ್ ವಾದ. ಅಲ್ಲಿ ಜಾತ್ರೆ ಸಮಯದಲ್ಲಿ ಪ್ರತೀ ಅಂಗಡಿಗಳಿಂದ ಕ್ಲೀನಿಂಗಿಗೆ ಇಂತಿಷ್ಟು ಎಂದು ವಸೂಲಿ ಮಾಡುವ ಪಂಚಾಯ್ತಿಗೆ ತನ್ನ ಸರಹದ್ದಿನಲ್ಲಿ ಬರುವ ಈ ರಸ್ತೆ ಬದಿಗೆ ಮಣ್ಣು ಹಾಕಿಸಲು ಅದೇನು ದಾಡಿ?
ಹಾಗೆಂದು ಈ ಪಂಚಾಯ್ತಿಯವರು ಜಾತ್ರೆ ಗದ್ದೆಯ ಅಂಗಡಿಗಳಿಂದ ಇಂತಿಷ್ಟು ಎಂದು ಕಲೆಕ್ಷನ್ ಮಾಡಿ ಗುಳುಂ ಮಾಡುವುದು ಬಿಟ್ಟರೆ ಅಲ್ಲಿ ಕ್ಲೀನ್ ಮಾಡುವುದು ಯಾವುದಾದರೂ ಸಂಘ ಸಂಸ್ಥೆಗಳು. ಇನ್ನು ದೇವಸ್ಥಾನದವರೂ ಸ್ಥಳ ಬಾಡಿಗೆ ಎಂದು ವಸೂಲಿ ಮಾಡಿದರೂ ಆ ಅಂಗಡಿಗಳಿಗೆ ಕಡೇ ಪಕ್ಷ ಒಂದು ಪೊಟ್ಟು ಬಲ್ಬಿನ ವ್ಯವಸ್ಥೆ ಕೂಡ ಮಾಡಲ್ಲ. ಅಲ್ಲ ಮಾರಾಯ್ರೆ ಬಯಲಾಟ ಆಡಿಸಲಾಗುವುದು, ಚೆಂಡೆ ಹೊಡೆಸಲಾಗವುದು, ನಾಟಕ ಮಾಡಿಸಲಾಗುವುದು ಎಂದು ಕಲೆಕ್ಷನ್ ಮಾಡುವವರು ಮುಂದಿನ ದಿನಗಳಲ್ಲಿ ರಸ್ತೆಗೆ ಮದ್ದು ಮಾಡಲಾಗುವುದು ಎಂದು ಕಲೆಕ್ಷನ್ ಮಾಡಿದರೆ ಒಳ್ಳೆಯದು.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment