ಉಪ್ಪಿನಂಗಡಿ: ನೇತ್ರಾವತಿ ದಡದಲ್ಲಿ ಮರಳುಗಳ್ಳರ ಜಾತ್ರೆ

             


   ನದಿಗಳನ್ನು ಬರಿದು ಮಾಡಿ ಕಿಸೆ ತುಂಬಿಸಿಕೊಳ್ಳುವುದು ಈಗ ಮಾಮೂಲಾಗಿ ಬಿಟ್ಟಿದೆ. ಈ ಬಗ್ಗೆ ಸರ್ಕಾರ ಅದೇನು ಅಂಡಿಗುಂಡಿ ಕಾನೂನು ತಂದರೂ ಕಾರ್ಯಾಂಗ ಮಾತ್ರ ಕಪ್ಪಕಾಣಿಕೆ ಸ್ವೀಕರಿಸಿ ತುಂಡು ರಾಜರ ಉದಯಕ್ಕೆ ಕಾರಣವಾಗುತ್ತಿದೆ. ಲೋಕಲ್ ಪೋಲಿಸ್ ಮತ್ತು ಗಣಿ ಇಲಾಖೆ ಮರಳು ಮಾಫಿಯಾದ ಅಪ್ಪ ಮತ್ತು ಅಮ್ಮ. ಈ ಎರಡು ಇಲಾಖೆಗಳು ಸಮಾಜಕ್ಕೆ ಎಂಥೆಂಥ ಫಿಗರ್ ಗಳನ್ನು ಕೊಡುತ್ತಿದೆ ಅಂದರೆ ಕೇಟ್ ಕೇಳಿಯೇ ಇಲ್ಲದ ಲೋಕಲ್ ತುಂಡರಸರನ್ನು. ಇದೀಗ ಉಪ್ಪಿನಂಗಡಿ ಬಳಿ ನೇತ್ರಾವತಿಯನ್ನು ಲೂಟುವ ಒಂದು ಟೀಮ್ ಸಕ್ರೀಯವಾಗಿದ್ದು ಕಾರ್ಯಾಂಗ ಕೈ ಕಟ್ಟಿ ಕುಳಿತಿದೆ.




ಅಲ್ಲಿ ಈಚೆ ಪುಡೆಯಲ್ಲಿ ವಳಾಲು ಮತ್ತು ಆಚೆ ಪುಡೆಯಲ್ಲಿ ಮುಗೆರಡ್ಕದ ನೇತ್ರಾವತಿ ದಂಡೆಯಲ್ಲಿ ಅವ್ಯಾಹತವಾಗಿ ಮರಳು ತೆಗೆಯಲಾಗುತ್ತಿದೆ. ಲೋಕಲ್ ಆಡಳಿತದ ಪರ್ಮಿಶನಿನ ಒಂದು ತುಂಡು ಕಾಕಜಿ ಇಲ್ಲ, ಗಣಿ ಇಲಾಖೆಯ ಪರ್ಮಿಟ್ ಇಲ್ಲ, ಲೋಕಲ್ ಪೋಲಿಸರು ರಿಡಕ್ಷನ್ ಸೇಲ್. ದಿನ ನಿತ್ಯ ನೂರಾರು ಟಿಪ್ಪರ್, ಹಿಟಾಚಿಗಳು, ಜೆಸಿಬಿಗಳು, ಬೇರೆ ಮೆಷಿನ್ ಗಳು ಇಲ್ಲಿ ರಾಜಾರೋಷವಾಗಿ ಕೆಲಸ ಮಾಡುತ್ತಿದ್ದರೂ ಉಪ್ಪಿನಂಗಡಿ ಪೋಲಿಸರು ಮಾತ್ರ ಅತ್ಲಕಡೆ ಇಣುಕಿ ಕೂಡ ನೋಡುತ್ತಿಲ್ಲ. ಪುತ್ತೂರು ತಹಶೀಲ್ದಾರ್ ಗೆ ವಳಾಲು ದೂರದ ದಾರಿ, ಅಸಿಸ್ಟೆಂಟ್ ಕಮಿಷನರ್ ಹೊಸಬರು, ಡಿವೈಎಸ್ಪಿ ಬರಲ್ಲ, ಉಪ್ಪಿನಂಗಡಿ ಪೋಲಿಸರು ಸೆಟ್ಟಿಂಗ್, ಗಣಿ ಇಲಾಖೆಗೆ ಪ್ರತೀ ಸಂಕ್ರಾಂತಿ, ಸಿಂಗೊಡೆಗೆ ಅಗೆಲು.‌ ಇಷ್ಟು ಸಾಕಲ್ಲ ನೇತ್ರಾವತಿಯನ್ನು ಬರಿದು ಮಾಡಲು.


ಅಲ್ಲಿ ಮುಗೆರಡ್ಕ-ವಳಾಲು-ಮಠ ಮೂರೂ ಕಡೆಗಳಲ್ಲಿ ದಿನಕ್ಕೆ ನೂರಾರು ಲೋಡ್ ಮರಳು ತೆಗೆಯಲಾಗುತ್ತಿದೆ. ಅಲ್ಲಿಯೇ ನದಿಯಲ್ಲಿಯೇ ಮರಳು ಕ್ಲೀನಿಂಗ್ ಕೆಲಸ ಕೂಡ ನಡೆಯುತ್ತಿದೆ. ಮರಳು ತೆಗೆಯುವುದೇ ಕಾನೂನು ಬಾಹಿರವಾಗಿ ಇನ್ನು ಮರಳು ಕ್ಲೀನಿಂಗ್ ಡಬಲ್ ಕಾನೂನು ಬಾಹಿರ. ಇವರ ಈ ಅಕ್ರಮ ಮರಳು ಕ್ಲೀನಿಂಗ್ ಕೆಲಸದಿಂದಾಗಿ ಇಡೀ ನದಿಯೇ ಕೆಂಪಾಗಿದ್ದು ಉಬಾರ್ ಮಕೆಯ ದಿನ ಇಡೀ ನೇತ್ರಾವತಿಯ ನೀರು ಕಲ್ಲಡ್ಕ ಕೇಟಿ ಕಲರ್ರಿಗೆ ತಿರುಗಿತ್ತು. ಮಕೆಯಂದು ಸಾವಿರಾರು ಭಕ್ತರು ನೇತ್ರಾವತಿಯಲ್ಲಿ ಪುಣ್ಯ ಸ್ನಾನ ಮಾಡಬೇಕಾಗಿದ್ದು ಕಲ್ಲಡ್ಕ ಕೇಟಿ ಕಲರ್ರಿನ ನೀರಿನಲ್ಲಿ ಸ್ನಾನ ಮಾಡಲು ಭಕ್ತರು ಹಿಂಜರಿದಿದ್ದಾರೆ ಎಂದು ತಿಳಿದುಬಂದಿದೆ. ಈ ಒಂದು ಅಕ್ರಮದ ಬಗ್ಗೆ ಹಿಂದೆ ವಿಜಯ ಲಕ್ಷ್ಮಿ ಶಿಬರೂರು ವಿಸ್ತ್ರತ ವರದಿ ಮಾಡಿದಾಗ ಇಲ್ಲಿ ಮರಳು ತೆಗೆಯುವ ಕಳ್ಳರು ಮತ್ತು ಕಾಕರು ಸ್ವಲ್ಪ ದಿನ ಅಜ್ಞಾತವಾಸಕ್ಕೆ ಹೋಗಿದ್ದರು. ಶಿಬರೂರು ವರದಿಗೆ ದಿನ ಸಂದಿದಾಗ ಮೆಲ್ಲನೆ ಹೊರ ಬಂದು ಇದೀಗ ನೇತ್ರಾವತಿ ದಂಡೆಯಲ್ಲಿ ಮರಳು ಜಾತ್ರೆಯನ್ನೇ ಮಾಡುತ್ತಿದ್ದಾರೆ. ಕೇಳುವವರೇ ಇಲ್ಲ. ಅದೇನು ಅಬ್ಬರ, ಬೊಬ್ಬೆ, ಹಿಟಾಚಿ ಸೌಂಡು, ಟಿಪ್ಪರ್ ಹಾರಾಟ, ಮುಳುಗು ತಜ್ಞರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳ ಅವತಾರದಲ್ಲಿರುವ ಮರಳುಗಳ್ಳರು. ದೂರದಿಂದ ನೋಡುವಾಗ L&T ಕಂಪೆನಿ ಏನಾದರೂ ನೇತ್ರಾವತಿಗೆ ಬ್ರಿಡ್ಜ್ ಅಥವಾ ಅಣೆಕಟ್ಟು ಕಟ್ಟುವ ಕಾಮಗಾರಿ ನಡೆಸುತ್ತಿದೆಯಾ ಅನ್ನುವಷ್ಟು ಗೌಜಿಯಲ್ಲಿ ಮರಳು ತೆಗೆಯುವ ಕೆಲಸ ನಡೆಯುತ್ತಿದೆ. ಕಾಕಗಳಲ್ಲಿ ಕಾಕಜಿ ಇಲ್ಲ. ಭಂಡ ಧೈರ್ಯ ಮಾರಾಯ್ರೆ. ನೋಡುವಾಗಲೇ ಹೆದರಿಕೆ ಆಗುತ್ತಿದೆ.

Copy to: District commissioner,
Copy to: superintendent of police D.K,
Copy to: Deputy Director mins & Geological department,
Copy to: Asistent commissioner Puttur.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget